Author: roovari

ಬೆಂಗಳೂರು: ಭಾರತ ನೃತ್ಯೋತ್ಸವದ ಪ್ರತೀಕವಾದ ‘ನಾಟ್ಯ ಪರಂಪರ ಉತ್ಸವ’ವು ಭಾರತ ಮಾತ್ರವಲ್ಲದೆ, ಯು.ಎಸ್, ರಷ್ಯಾ, ತೈವಾನ್, ಕೆನಡಾ ಮುಂತಾದೆಡೆಗಳ ಕುಚಿಪುಡಿ ಮತ್ತು ಇನ್ನಿತರ ನೃತ್ಯಶೈಲಿಗಳ ಖ್ಯಾತ ಕಲಾವಿದರ ನೃತ್ಯ ಪ್ರದರ್ಶನಗಳನ್ನು ಅರ್ಪಿಸುತ್ತ ಬಂದಿರುವುದು ಹೆಗ್ಗಳಿಕೆಯ ಸಂಗತಿ. ಕೋವಿಡ್ ನಂಥ ದುಸ್ತರ ಪರಿಸ್ಥಿತಿಯಲ್ಲೂ ಅಂತರ್ಜಾಲದ ಮೂಲಕ ಕಲೆಯನ್ನು ಜೀವಂತವಾಗಿಡಲು ಸಂಸ್ಥೆ ಪರಿಶ್ರಮಿಸಿದೆ ಎಂದರೆ ಅತಿಶಯೋಕ್ತಿಯಲ್ಲ. ಈ ನೃತ್ಯೋತ್ಸವವು, ಕಲಾರಸಿಕರ ಬೆಂಬಲ-ಸಹಾಯದ ಜೊತೆಗೆ, ನವದೆಹಲಿಯ ಸಂಗೀತ ನಾಟಕ ಅಕಾಡೆಮಿ ಮತ್ತು ಕರ್ನಾಟಕದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಂತಾದ ಸರ್ಕಾರಿ ಸಂಸ್ಥೆಗಳ ಆಶ್ರಯ-ಪ್ರೋತ್ಸಾಹಗಳನ್ನು ಪಡೆದುಕೊಂಡಿರುವುದು ನಿಜಕ್ಕೂ ಹೆಮ್ಮೆಯ ವಿಷಯ. ನಾಲ್ಕುದಶಕಗಳಿಂದ ಅಚ್ಚ ಶಾಸ್ತ್ರೀಯ ಕೂಚಿಪುಡಿಯ ನೃತ್ಯಶೈಲಿಯಲ್ಲಿ ಪರಿಶ್ರಮಿಸುತ್ತಿರುವ ಆಚಾರ್ಯ ದೀಪಾ ನಾರಾಯಣನ್ ಶಶೀಂದ್ರನ್ ಸುಮಾರು ಐದುನೂರು ವರ್ಷಗಳ ಇತಿಹಾಸವುಳ್ಳ ಕೂಚಿಪುಡಿ ನೃತ್ಯಶೈಲಿಯ ಖ್ಯಾತ ಗುರು ಪದ್ಮಭೂಷಣ ಡಾ. ವೆಂಪಟಿ ಚಿನ್ನಸತ್ಯಂ ಅವರ ಎರಡನೆಯ ಪರಂಪರೆಗೆ ಸೇರಿದವರು. ಇವರು ತಮ್ಮ ಅಸಂಖ್ಯ ನೃತ್ಯಪ್ರದರ್ಶನಗಳಿಂದ ಖ್ಯಾತರಾದವರು. ತಮ್ಮ `ಕೂಚಿಪುಡಿ ಪರಂಪರಾ ಫೌಂಡೆಶನ್ ‘ ಮೂಲಕ ನೃತ್ಯಾಭಿವೃದ್ಧಿಯ ಸಾಧನೆಯಲ್ಲಿ…

Read More

ಕಾಸರಗೋಡು : ಕಾಸರಗೋಡು ಇಲ್ಲಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ರಂಗಚಿನ್ನಾರಿ ಕಾಸರಗೋಡು (ರಿ.) ಇವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಯೋಗದೊಂದಿಗೆ ರಂಗಚಿನ್ನಾರಿ ಇದರ ಮಹಿಳಾ ಘಟಕ ನಾರಿ ಚಿನ್ನಾರಿಯ 10ನೇ ಸರಣಿ ಕಾರ್ಯಕ್ರಮ ‘ಶರದ್ವಿಲಾಸ’ ದಿನಾಂಕ 29-10- 2023 ಆದಿತ್ಯವಾರ ಅಪರಾಹ್ನ ಗಂಟೆ 2.30 ರಿಂದ ಕಾಸರಗೋಡು ಕರಂದಕ್ಕಾಡು ಇಲ್ಲಿನ ಪದ್ಮಗಿರಿ ಕಲಾಕುಟೀರದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಹೆಸರಾಂತ ಲೇಖಕಿ ವಿಜಯಾ ಸುಬ್ರಹ್ಮಣ್ಯ ಕುಂಬಳೆ ಉದ್ಘಾಟಿಸಲಿದ್ದು, ನಾರಿ ಚಿನ್ನಾರಿಯ ಕಾರ್ಯಾಧ್ಯಕ್ಷರಾದ ಸವಿತಾ ಟೀಚರ್ ಅಧ್ಯಕ್ಷತೆ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಕೊರಗ ಸಮುದಾಯದ ಮೊದಲ ಮಹಿಳಾ ಸಾಧಕಿ ಮೀನಾಕ್ಷಿ ಬೊಡ್ಡೋಡಿ ಹಾಗೂ ಮಹಿಳಾ ಉದ್ಯಮಿ ಬಿಂದು ದಾಸ್ ಇವರಿಗೆ ಗೌರವಾರ್ಪಣೆ ನಡೆಯಲಿದೆ. ಕವಯತ್ರಿ ವನಜಾಕ್ಷಿ ಚೆಂಬ್ರಕಾನ ಮೀನಾಕ್ಷಿ ಬೊಡ್ಡೋಡಿ ಇವರನ್ನು ಹಾಗೂ ನಾರಿ ಚಿನ್ನಾರಿಯ ಜತೆ ಕಾರ್ಯದರ್ಶಿ ಸರ್ವಮಂಗಳ ಜಯ್ ಪುಣಿಚಿತ್ತಾಯ ಬಿಂದು ದಾಸ್ ಇವರನ್ನು ಪರಿಚಯಿಸಲಿದ್ದಾರೆ. ಸಭಾಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಅಪರ್ಣಾ ಶೆಟ್ಟಿ ಮತ್ತು…

Read More

ಮುಂಬೈ : ಕಡಬ ಸಂಸ್ಮರಣಾ ಸಮಿತಿ ರಥಬೀದಿ ಮಂಗಳೂರು ಇದರ ಚತುರ್ಥ ವಾರ್ಷಿಕ ‘ಕಡಬದ್ವಯ ಸಂಸ್ಮರಣಾ ಯಕ್ಷಗಾನ ಪ್ರಶಸ್ತಿ – 2023’ ಇದಕ್ಕೆ ಹಿರಿಯ ಭಾಗವತ ಶ್ರೀ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ ಆಯ್ಕೆಯಾಗಿದ್ದಾರೆ. ಈ ಕಾರ್ಯಕ್ರಮವು ದಿನಾಂಕ 29-10-2023ನೇ ಆದಿತ್ಯವಾರ ಅಪರಾಹ್ನ ಗಂಟೆ 2-00 ರಿಂದ ಮುಂಬೈನ ಗೋರೆಗಾಂವ್ (ಪಶ್ಚಿಮ)ದ ಆರೇ ರೋಡ್ ನಲ್ಲಿರುವ ಅಂಬಾಬಾಯಿ ದೇವಸ್ಥಾನದ ಹತ್ತಿರದ ಕೇಶವಗೋರೆ ಸಭಾಗೃಹದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಶ್ರೀನಿವಾಸ ಒರ್ನಮೆಂಟ್ ಮುಂಬೈ ಇದರ ಶ್ರೀ ಶ್ರೀಧರ ವಿ. ಆಚಾರ್ಯ ಉದ್ಘಾಟಿಸಲಿದ್ದು, ಮಂಗಳೂರಿನ ರಥಬೀದಿಯ ಕಡಬ ಸಂಸ್ಕರಣಾ ಸಮಿತಿಯ ಅಧ್ಯಕ್ಷರಾದ ಶ್ರೀ ಸುಂದರ ಆಚಾರ್ಯ ಬೆಳುವಾಯಿ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ, ಮುಖ್ಯ ಅತಿಥಿಯಾಗಿ ಕರ್ನಾಟಕ ವಿಶ್ವಕರ್ಮ ಎಸೋಸಿಯೇಶನ್ ಮುಂಬೈ ಇದರ ಅಧ್ಯಕ್ಷರಾದ ಶ್ರೀ ಸದಾನಂದ ಎನ್. ಆಚಾರ್ಯ ಭಾಗವಹಿಸಲಿದ್ದು, ಗೌರವ ಅತಿಥಿಗಳಾಗಿ ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಇದರ ಅಧ್ಯಕ್ಷರಾದ ಡಾ. ಸುರೇಂದ್ರ ಕುಮಾರ್ ಹೆಗ್ಡೆ, ಖ್ಯಾತ ಕನ್ನಡ ಕೊಂಕಣಿ ರಂಗನಟರಾದ ಶ್ರೀ ಕಮಲಾಕ್ಷ ಸರಾಫ್ ಹಾಗೂ…

Read More

ಕಾಸರಗೋಡು : ರಂಗಚಿನ್ನಾರಿ, ಕಾಸರಗೋಡು (ರಿ.) ಇದರ ಸಂಗೀತ ಘಟಕ ಸ್ವರ ಚಿನ್ನಾರಿಯ 1ನೇ ಸರಣಿ ಕಾರ್ಯಕ್ರಮ ‘ಸ್ವರ ಸಂಚಾರ’ ಸಂಗೀತ ಸ್ವರಗಳ ಕಲಿಕೆಯ ಒಂದು ದಿನದ ಶಿಬಿರವು ದಿನಾಂಕ 28.10.2023 ನೇ ಶನಿವಾರ ಬೆಳಿಗ್ಗೆ 9.30 ರಿಂದ  ಕಾಸರಗೋಡು ಕರಂದಕ್ಕಾಡು ಇಲ್ಲಿನ ಪದ್ಮಗಿರಿ ಕಲಾಕುಟೀರದಲ್ಲಿ ನಡೆಯಲಿದೆ. ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕರು ಹಾಗೂ ಸಂಗೀತ ಗುರುಗಳಾದ ಗಾನಪ್ರವೀಣ ವಿದ್ವಾನ್ ಶ್ರೀ ಯೋಗೀಶ್ ಶರ್ಮ ಬಳ್ಳಪದವು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಸ್ವರಚಿನ್ನಾರಿಯ ಗೌರವಾಧ್ಯಕ್ಷರು ಹಾಗೂ ಖ್ಯಾತ ಕವಿಗಳಾದ ಶ್ರೀಕೃಷ್ಣಯ್ಯ ಅನಂತಪುರ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಯಾಗಿ ಸರಿಗಮ ಭಾರತಿ ಸಂಗೀತ ವಿದ್ಯಾಲಯ ಮಣಿಪಾಲ ಇದರ ನಿರ್ದೇಶಕಿಯಾದ ವಿದುಷಿ ಶ್ರೀಮತಿ ಉಮಾ ಶಂಕರಿ ಪಾಲ್ಗೊಳ್ಳಲಿದ್ದಾರೆ. ಸಂಜೆ ಗಂಟೆ 4.00ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಶ್ರೀ ಎಡನೀರು ಮಠದ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಆಶೀರ್ವದಿಸಲಿದ್ದು, ಖ್ಯಾತ ನೇತ್ರ ತಜ್ಞ ಹಾಗೂ ಸಮಾಜ ಸೇವಕರಾದ ಡಾ. ಅನಂತ್…

Read More

ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮುಲ್ಕಿ ತಾಲೂಕು ಘಟಕವು ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಸಕ್ತಿ ಬೆಳೆಸುವ ಹಾಗೂ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವ ನಿಟ್ಟಿನಲ್ಲಿ ಮೂಲ್ಕಿ ತಾಲೂಕಿನ ಪ್ರೌಢಶಾಲೆ, ಪದವೀಪೂರ್ವ ಕಾಲೇಜು ಹಾಗೂ ಪದವಿ ಕಾಲೇಜಿನ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಕವನ ರಚನೆ ಹಾಗೂ ಕತೆ ರಚನೆಯ ಕಾರ್ಯಾಗಾರವನ್ನು ಹಮ್ಮಿಕೊಂಡಿದೆ. ಕವನ ರಚನೆ ಕಾರ್ಯಾಗಾರವು ದಿನಾಂಕ 28-10-2023ರ ಶನಿವಾರ ಬೆಳಿಗ್ಗೆ ಗಂಟೆ 9.30ರಿಂದ ಮಧ್ಯಾಹ್ನ 1.00 ಗಂಟೆಯ ವರೆಗೆ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪದವೀಪೂರ್ವ ಕಾಲೇಜಿನಲ್ಲಿ ನಡೆಯಲಿದ್ದು, ಶಿಕ್ಷಕಿ ಹಾಗೂ ಬರಹಗಾರ್ತಿಯಾದ  ವಿಜಯಲಕ್ಷ್ಮೀ ಕಟೀಲು ನಡೆಸಿಕೊಡಲಿರುವರು. ಕವಿಗಳಾದ ವಿಲ್ಸನ್ ಕಟೀಲು ಮತ್ತು ಹೇಮಂತಕೃಷ್ಣ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾದಲಿದ್ದಾರೆ. ಕಟೀಲಿನ ವಿದ್ವಾನ್ ಶ್ರೀಹರಿನಾರಾಯಣದಾಸ ಆಸ್ರಣ್ಣ ಪ್ರೇರಣೆಯ ನುಡಿಗಳನ್ನಾಡಲಿದ್ದಾರೆ. ಕತೆ ರಚನೆ ಕಾರ್ಯಾಗಾರ ಕತೆ ರಚನೆ ಕಾರ್ಯಾಗಾರವು ದಿನಾಂಕ 04-11-2023ರ ಶನಿವಾರ ಬೆಳಿಗ್ಗೆ ಗಂಟೆ 9.30ರಿಂದ ಮಧ್ಯಾಹ್ನ 1.00 ಗಂಟೆಯ ವರೆಗೆ ಮೂಲ್ಕಿ ಸರಕಾರಿ ಪದವೀಪೂರ್ವ ಕಾಲೇಜು, ಕಾರ್ನಾಡು ಇಲ್ಲಿ ನಡೆಯಲಿದ್ದು, ಬರಹಗಾರರು ಮತ್ತು ಮಂಗಳೂರು ಆಕಾಶವಾಣಿ…

Read More

ಮಂಗಳೂರು : ಶಾಂತಲಾ ಪ್ರಶಸ್ತಿ ಪುರಸ್ಕೃತೆ ದಿ. ಶ್ರೀಮತಿ ಜಯ ಲಕ್ಷ್ಮೀ ಆಳ್ವ ಅವರ 90ನೇ ವರ್ಷದ ಜನ್ಮ ವರ್ಷಾಚರಣೆಯ ಅಂಗವಾಗಿ ಮಂಗಳೂರಿನ ಶ್ರೀದೇವಿ ನೃತ್ಯಕಲಾ ಕೇಂದ್ರ ಆಯೋಜಿಸುವ ‘ನೃತ್ಯೋತ್ಸವ-2023’ ಪ್ರತಿಭಾ ಪ್ರದರ್ಶನ ಹಾಗೂ ರಾಷ್ಟ್ರ ಮಟ್ಟದ ನೃತ್ಯ ಸ್ಪರ್ಧೆ ದಿನಾಂಕ 27-10-2023 ಮತ್ತು 28-10-2023ರಂದು ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ. ದಿನಾಂಕ 27-10-2023ರಂದು ಪೂರ್ವಾಹ್ನ ಘಂಟೆ 10.00ಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಡಾ.ಹರಿಕೃಷ್ಣ ಪುನರೂರು ಅಧ್ಯಕ್ಷತೆಯಲ್ಲಿ ಜರಗುವ ಈ ಕಾರ್ಯಕ್ರಮವನ್ನು ಮಣಿಪುರಿ ನೃತ್ಯದ ಹಿರಿಯ ಪ್ರತಿವಾದಕರಾದ ಪದ್ಮಶ್ರೀ ದರ್ಶನ ಜ್ಹವೇರಿಯವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ನೃತ್ಯಸ್ಪರ್ಧೆಯಲ್ಲಿ ದೇಶದ ವಿವಿಧ ರಾಜ್ಯಗಳ ಆಯ್ದ 20 ಸ್ಪರ್ಧಾಳುಗಳು ಭಾಗವಹಿಸಲಿದ್ದು, ವಿಜೇತರಿಗೆ ‘ಯುವಕಲಾ ಪ್ರಶಸ್ತಿ’ ಪ್ರದಾನಿಸಲಾಗುವುದು.ದಿನಾಂಕ 28-10-2023 ರಂದು ಸಂಜೆ ಘಂಟೆ 5.30ಕ್ಕೆ ನೃತ್ಯ ಗುರು ಕೆ.ಎನ್.ದಂಡಾಯುಧಪಾಣಿ ಒಳ್ಳೈ ಸ್ಮರಣಾರ್ಥ ನೀಡಲಾಗುವ ‘ನಾಟ್ಯಕಲಾ ತಪಸ್ವಿ ಪ್ರಶಸ್ತಿಯನ್ನು ಕಲಾವಿದೆ ಪದ್ಮಶ್ರೀ ಡಾ.ನರ್ತಕಿ ನಟರಾಜ ಚೆನ್ನೈ ಅವರಿಗೆ ಹಾಗೂ ಶ್ರೀಮತಿ ಜಯಲಕ್ಷ್ಮೀ ಆಳ್ವ ಅವರ ಸ್ಮರಣಾರ್ಥ ‘ಜಯ…

Read More

ಮಂಗಳೂರು : ತುಳು ಪರಿಷತ್ ವತಿಯಿಂದ ಮಯೂರಿ ಫೌಂಡೇಶನ್ ಸಹಭಾಗಿತ್ವದಲ್ಲಿ ಮಂಗಳೂರು ಮ್ಯಾಪ್ಸ್ ಕಾಲೇಜಿನಲ್ಲಿ ದಿನಾಂಕ 16-10-2023ರಂದು ಆಯೋಜಿಸಲಾದ ಎರಡನೇ ವರ್ಷದ ದಸರಾ ಬಹುಭಾಷಾ ಕವಿಗೋಷ್ಠಿಯನ್ನು ಸುಳ್ಯ ಬಂಟಮಲೆ ಅಕಾಡೆಮಿ ಅಧ್ಯಕ್ಷ ಎ.ಕೆ.ಹಿಮಕರ ಉದ್ಘಾಟಿಸಿ ಮಾತನಾಡುತ್ತಾ “ಕುಂದಕನ್ನಡ, ಕೊರಗ ಭಾಷೆ ಸೇರಿದಂತೆ ಸಣ್ಣ ಭಾಷೆಗಳ ಬೆಳವಣಿಗೆಗೆ ಅಕಾಡೆಮಿಯ ಸ್ಥಾಪನೆ ಅಗತ್ಯವಿದೆ. ಆಯಾ ಪ್ರದೇಶದ ಜನರು ತಮ್ಮ ಮಿತಿಯಲ್ಲಿ ತಮ್ಮ ಭಾಷೆಯ ಸಂರಕ್ಷಣೆಗಾಗಿ ಕಾರ್ಯಪ್ರವೃತ್ತರಾಗಬೇಕು” ಎಂದು ಹೇಳಿದರು. ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಉಪನ್ಯಾಸಕಿ ಹಾಗೂ ಲೇಖಕಿ ಡಾ. ಮೀನಾಕ್ಷಿ ರಾಮಚಂದ್ರ ಇವರು ಮಾತನಾಡಿ “ತುಳುನಾಡಿನ ಭಾಷಾ ವೈವಿಧ್ಯತೆ ನಮ್ಮ ಪ್ರದೇಶದ ಅನನ್ಯತೆಯಾಗಿದ್ದು, ನಮ್ಮಲ್ಲಿ ಹಲವು ಭಾಷೆಗಳು, ಹಲವು ಧರ್ಮಗಳಿದ್ದರೂ ನಮ್ಮಲ್ಲಿ ಭಾಷಾ ಸಾಮರಸ್ಯದ ಮೂಲಕ ಧರ್ಮ ಸಾಮರಸ್ಯ ನೆಲೆಯಾಗಿದೆ” ಎಂದು ಅಭಿಪ್ರಾಯಪಟ್ಟರು. ದಸರಾ ಬಹುಭಾಷಾ ಕವಿಗೋಷ್ಠಿಯಲ್ಲಿ ತುಳುನಾಡಿನ ಹನ್ನೆರಡು ಭಾಷೆಗಳಾದ ತುಳು, ಕನ್ನಡ, ಬ್ಯಾರಿ, ಅರೆಭಾಷೆ, ಕುಂದ ಕನ್ನಡ, ಹವ್ಯಕ ಕನ್ನಡ, ಶಿವಳ್ಳಿ ತುಳು, ಸ್ಥಾನಿಕ ತುಳು, ಕೊರಗ ಭಾಷೆ, ಜಿ.ಎಸ್‌.ಬಿ.…

Read More

ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು, ಪುತ್ತೂರು ಇದರ ವತಿಯಿಂದ ತಿಂಗಳ ಸರಣಿ ಕಾರ್ಯಕ್ರಮದ ಅಂಗವಾಗಿ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ರಾಜಗೋಪುರದಲ್ಲಿ ದಿನಾಂಕ 09-10-2023ರಂದು ‘ಕರ್ಣ ಪರ್ವ’ ಎಂಬ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀ ನಿತೀಶ್ ಕುಮಾರ್, ಚೆಂಡೆ ಮದ್ದಳೆಗಳಲ್ಲಿ ಪ್ರೊ.ದಂಬೆ ಈಶ್ವರ ಶಾಸ್ತ್ರೀ, ಶ್ರೀ ಮುರಳೀಧರ ಕಲ್ಲೂರಾಯ ಮತ್ತು ಶ್ರೀ ಅಚ್ಯುತ ಪಾಂಗಣ್ಣಾಯ ಕೋಡಿಬೈಲು ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀ ಭಾಸ್ಕರ್ ಬಾರ್ಯ (ಶ್ರೀ ಕೃಷ್ಣ), ಶ್ರೀ ಗುಂಡ್ಯಡ್ಕ ಈಶ್ವರ ಭಟ್ (ಕರ್ಣ), ಶ್ರೀ ಕುಂಬ್ಳೆ ಶ್ರೀಧರ್ ರಾವ್ (ಅರ್ಜುನ), ಶ್ರೀ ಗುಡ್ಡಪ್ಪ ಬಲ್ಯ (ಶಲ್ಯ), ಶ್ರೀ ದುಗ್ಗಪ್ಪ ನಡುಗಲ್ಲು (ಅಶ್ವಸೇನ) ಸಹಕರಿಸಿದರು.

Read More

ಯುರೋಪ್ : ವಿದುಷಿ ರಾಧಿಕಾ ಶೆಟ್ಟಿಯವರು ಭರತನಾಟ್ಯದ ‘ಆರಂಭಿಕ ಅಭಿನಯ ಕಾರ್ಯಾಗಾರ’ವನ್ನು ದಿನಾಂಕ 08-11-2023ರಿಂದ 19-11-2023ರವರೆಗೆ ಯುರೋಪಿನ ವಿವಿಧೆಡೆಗಳಲ್ಲಿ ನಡೆಸಿಕೊಡಲಿದ್ದಾರೆ. ಸನಾತನ ನಾಟ್ಯಾಲಯದ ಹೆಸರಾಂತ ನೃತ್ಯಗುರು ವಿದುಷಿ ಶಾರದಾಮಣಿ ಶೇಖರ್ ಅವರ ಗರಡಿಯಲ್ಲಿ ಆರಂಭಿಕ ಹೆಜ್ಜೆಗಳನ್ನು ಹಾಕಲಾರಂಭಿಸಿದ ರಾಧಿಕಾ, ಇಂದು ದೇಶದ ಉದ್ದಗಲಕ್ಕೂ ತಮ್ಮ ಪ್ರೌಢ ಪ್ರದರ್ಶನದ ಮೂಲಕ ಗುರುತಿಸಿಕೊಂಡಿರುವ ಮಂಗಳೂರಿನ ಏಕವ್ಯಕ್ತಿ ಶಾಸ್ತ್ರೀಯ ಭರತನಾಟ್ಯ ಕಲಾವಿದೆ. ನೃತ್ಯದ ಆಳ ಮತ್ತು ವಿಸ್ತಾರವನ್ನು ಹುಡುಕುತ್ತ ಇವರು ಆಕರ್ಷಿತರಾದದ್ದು ಪ್ರಸಿದ್ಧ ನೃತ್ಯಗಾತಿ ಪದ್ಮಿನಿ ರಾಮಚಂದ್ರನ್ ಅವರ ಕಡೆಗೆ. ಪದ್ಮಿನಿ ಅವರ ಮಾರ್ಗದರ್ಶನದಲ್ಲಿಯೇ ಬೆಂಗಳೂರಿನಲ್ಲಿ ರಂಗಪ್ರವೇಶ ಮಾಡಿದ ರಾಧಿಕಾ, ಮತ್ತಷ್ಟು ಅಭಿನಯ ಪ್ರೌಢಿಮೆ ಸಾಧಿಸುವಂತಾಗಲು ಕಾರಣರಾದವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಛಾಪೊತ್ತಿದ ಕಲಾವಿದೆ ಭ್ರಗಾ ಬಸೆಲ್. ಅಭಿನಯ ಕಲಿಸುವಂಥದ್ದಲ್ಲ, ಅದು ಕಲಾವಿದರಿಗೆ ಆಂತರಂಗಿಕ ಎಂಬುದು ರಾಧಿಕಾ ಅವರ ವಿಷಯದಲ್ಲಿಯೂ ಸತ್ಯ. ನೃತ್ಯದಲ್ಲಿ ಹಾವಭಾವಾಭಿನಯವೇ ಇವರ ಸಾಮರ್ಥ್ಯ. ಅವರ ಮಾತನ್ನೇ ಉಲ್ಲೇಖಿಸಿ ಹೇಳುವುದಾದರೆ, ಅವರೊಬ್ಬ ಸಮರ್ಥ ನೃತ್ಯಪಟುವಲ್ಲ. ನಾಟ್ಯವೇನಿದ್ದರೂ ಅವರಿಗೆ ಅಂತರಂಗವನ್ನು ಪ್ರೇಕ್ಷಕರ ಮುಂದಿಡುವ ಮಾಧ್ಯಮವಷ್ಟೇ. ಇವರ…

Read More

ಕಣಿಯೂರು : ನವರಾತ್ರಿ ಪ್ರಯುಕ್ತ ಕಣಿಯೂರಿನ ಶ್ರೀ ಚಾಮುಂಡೇಶ್ವರೀ ಕ್ಷೇತ್ರದಲ್ಲಿ ದಿನಾಂಕ 21-10-2023ರಂದು ಸಂಜೆ ಶ್ರೀ ಚಾಮುಂಡೇಶ್ವರೀ ಯಕ್ಷ ಕೂಟ ಕಣಿಯೂರು ಇವರಿಂದ ಅಗರಿ ಶ್ರೀನಿವಾಸ ರಾವ್ ವಿರಚಿತ ‘ಶಾಂಭವೀ ವಿಜಯ’ ಯಕ್ಷಗಾನ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಶ್ರೀಗಳಾದ ಸೂರ್ಯ ನಾರಾಯಣ ಭಟ್ ಕಣಿಯೂರು, ಗಣಪತಿ ಭಟ್ ಆನೇಕಲ್ಲು, ರಾಮಮೂರ್ತಿ ಕುದ್ರೆಕೋಡ್ಳು, ಗಿರೀಶ ಭಟ್ ಕಿನಿಲಕೋಡಿ ಮತ್ತು ಟಿ.ಡಿ. ಗೋಪಾಲಕೃಷ್ಣ ಭಟ್ ಪುತ್ತೂರು ಹಾಗೂ ಅರ್ಥಧಾರಿಗಳಾಗಿ ಶ್ರೀ ಕ್ಷೇತ್ರ ಕಣಿಯೂರಿನ ಶ್ರೀ ಶ್ರೀ ಮಹಾಬಲೇಶ್ವರ ಸ್ವಾಮೀಜಿ, ಜಬ್ಬಾರ್ ಸಮೋ ಪುತ್ತೂರು, ಶ್ಯಾಮ ಭಟ್ ಪಕಳಕುಂಜ, ಜಯರಾಂ ಭಟ್ ದೇವಸ್ಯ, ಶಂಕರ್ ಸಾರಡ್ಕ ಮತ್ತಿತರರು ಸಹಕರಿಸಿದರು. ಇದೇ ಸಂದರ್ಭದಲ್ಲಿ ಭಾಗವತ ಶ್ರೀ ಸೂರ್ಯ ನಾರಾಯಣ ಭಟ್ ಕಣಿಯೂರು ಮತ್ತು ಮದ್ದಳೆಗಾರ ಶ್ರೀ ಟಿ.ಡಿ.ಗೋಪಾಲಕೃಷ್ಣ ಭಟ್ ತೆಂಕಬೈಲು ಇವರನ್ನು ಶ್ರೀ ಚಾಮುಂಡೇಶ್ವರೀ ಕ್ಷೇತ್ರದಲ್ಲಿ ಗೌರವಿಸಿ ಸನ್ಮಾನಿಸಿಲಾಯಿತು.

Read More