Subscribe to Updates
Get the latest creative news from FooBar about art, design and business.
Author: roovari
ಮೂರುಕಜೆ : ‘ಗಮಕ ಶ್ರಾವಣ’ದ ಸರಣಿ ಕಾರ್ಯಕ್ರಮಗಳ ದ್ವಿತೀಯ ಸಮಾರಂಭದ ಉದ್ಘಾಟನೆಯು ದಿನಾಂಕ 09 ಆಗಸ್ಟ್ 2024ರಂದು ಮೂರುಕಜೆಯ ಮೈತ್ರೇಯಿ ಗುರುಕುಲದ ಸಭಾಂಗಣದಲ್ಲಿ ನಡೆಯಿತು. ಈ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ವಿಟ್ಲ ಪಡ್ನೂರು ಗ್ರಾಮ ಪಂಚಾಯತಿನ ಮಾಜಿ ಅಧ್ಯಕ್ಷೆ ಶ್ರೀಮತಿ ರೇಶ್ಮ ಶಂಕರಿ ಬಲಿಪಗುಳಿ ಇವರು ಮಾತನಾಡಿ “ಗಮಕ ಕಲೆ ಕನ್ನಡ ಸಂಸ್ಕೃತಿಯ ದ್ಯೋತಕ. ಅದು ಅತ್ಯಂತ ಪ್ರಾಚೀನವಾದುದು. ಭಾರತೀಯ ಸಂಸ್ಕೃತಿಯನ್ನು ಜನರಿಗೆ ಯಥಾವತ್ತಾಗಿ ಪರಿಚಯಿಸುವುದಕ್ಕೆ ಇದು ಬಹಳ ಉತ್ತಮವಾದ ಮಾಧ್ಯಮ. ಗಮಕ ಕಲಾಪರಿಷತ್ತು ಮತ್ತು ಸಿರಿಗನ್ನಡ ವೇದಿಕೆಯ ಕೇರಳ ಗಡಿನಾಡ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಶ್ರಾವಣ ಮಾಸದ ಪರ್ವಕಾಲದಲ್ಲಿ ವಿಶೇಷವಾಗಿ ರಾಮಾಯಣದ ಪುಣ್ಯಕಥೆಯನ್ನು ಪ್ರಚಾರಗೊಳಿಸಿ ಜನರಲ್ಲಿ ಸಚ್ಚಾರಿತ್ರ್ಯವನ್ನು ಬೆಳೆಸುವ ಮಹತ್ಕಾರ್ಯವನ್ನು ಮಾಡುತ್ತಿರುವುದು ಸ್ತುತ್ಯರ್ಹವಾಗಿದೆ” ಎಂದು ಅಭಿಪ್ರಾಯಪಟ್ಟರು. ಸಮಾರಂಭದ ಅಧ್ಯಕ್ಷತೆಯನ್ನು ಗಮಕಕಲಾ ಪರಿಷತ್ತಿನ ಅಧ್ಯಕ್ಷರಾದ ಟಿ. ಶಂಕರನಾರಾಯಣ ಭಟ್ಟರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗುರುಕುಲದ ಅಧಿಕಾರಿಗಳಾದ ಶ್ರೀ ಜಗನ್ನಾಥ್ ಅವರು “ಭಾರತೀಯ ಸಂಸ್ಕೃತಿಯನ್ನು ಸಾರುವ ಮಹಾಕಾವ್ಯಗಳನ್ನು ಸಾಧ್ಯವಿದ್ದಷ್ಟೂ ಪ್ರಚಾರಗೊಳಿಸಬೇಕು” ಎಂದು…
ಬೆಂಗಳೂರು : ಶ್ರೀ ಗಣೇಶ ನೃತ್ಯಾಲಯ (ರಿ.) ನೃತ್ಯ ಮತ್ತು ಸಂಗೀತ ಶಾಲೆಯ ವತಿಯಿಂದ ಕರಾವಳಿಯ ಯುವ ನೃತ್ಯ ವಿದ್ವಾಂಸರಾದ ವಿದ್ವಾನ್ ಮಂಜುನಾಥ ಎನ್. ಪುತ್ತೂರು ಇವರಿಂದ ಎರಡು ದಿನಗಳ ಕಾರ್ಯಾಗಾರವನ್ನು ದಿನಾಂಕ 24-08-2024 ಮತ್ತು 25-08-2024ರಂದು ಬೆಂಗಳೂರಿನ ಎಸ್.ಜಿ.ಎನ್. ಅರಿಶಿನಕುಂಟೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಇದೇ ಸಂದರ್ಭದಲ್ಲಿ ದಿನಾಂಕ 25 ಆಗಸ್ಟ್ 2024ರಂದು ಸಂಜೆ 5-00 ಗಂಟೆಗೆ ನಡೆಯಲಿರುವ ‘ನೃತ್ಯೋಲ್ಲಾಸ’ ತಿಂಗಳ ಕಾರ್ಯಕ್ರಮದಲ್ಲಿ ವಿದ್ವಾನ್ ಮಂಜುನಾಥ ಎನ್. ಪುತ್ತೂರು ಹಾಗೂ ಶ್ರೀ ಗಣೇಶ ನೃತ್ಯಾಲಯದ ಶ್ರೀಮತಿ ಭಾವನಾ ಗಣೇಶ ಮತ್ತು ಎಂ.ಡಿ. ಗಣೇಶ್ ಇವರ ಶಿಷ್ಯ ವೃಂದದವರಿಂದ ಸಮೂಹ ನೃತ್ಯ ಪ್ರದರ್ಶನ ನಡೆಯಲಿದೆ. ಸಂಸ್ಕೃತ ವಿದ್ವಾನ್ ಶ್ರೀ ಶಂಕರ್ ಭಟ್ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು.
ಬಂಟ್ವಾಳ: ಸಿದ್ಧಕಟ್ಟೆಯ ‘ಶ್ರೀ ಕ್ಷೇತ್ರ ಪೂಂಜ ಯಕ್ಷಮಿತ್ರರು’ ಸಂಘಟನೆ ವತಿಯಿಂದ 7ನೇ ವರ್ಷದ ಯಕ್ಷಗಾನ ತಾಳಮದ್ದಳೆ ಕೂಟ ಹಾಗೂ ‘ಸಿದ್ಧಕಟ್ಟೆ ಪ್ರಶಸ್ತಿ’ ಪ್ರದಾನ ಸಮಾರಂಭವು 18 ಆಗಸ್ಟ್ 2024ರ ಭಾನುವಾರದಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಲೊರೆಟೊ ಹಿಲ್ಸ್ ರೋಟರಿ ಕ್ಲಬ್ ಅಧ್ಯಕ್ಷರಾದ ಸುರೇಶ ಶೆಟ್ಟಿ ಮಾತನಾಡಿ “ಸಿದ್ದಕಟ್ಟೆ ಎಂಬ ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದ ಹಲವು ಮಂದಿ ಯಕ್ಷಗಾನ ಕಲಾವಿದರು ಹುಟ್ಟೂರಿನ ಹೆಸರನ್ನು ಹತ್ತೂರಿನಲ್ಲಿ ಪಸರಿಸಿದ್ದಾರೆ.” ಎಂದರು. ಇದೇ ಸಂದರ್ಭದಲ್ಲಿ ಹಿರಿಯ ಹವ್ಯಾಸಿ ಯಕ್ಷಗಾನ ಕಲಾವಿದ ಎನ್. ಸೀತಾರಾಮ ರೈ ಪೆರಿಂಜೆ ಅವರಿಗೆ ‘ಸಿದ್ಧಕಟ್ಟೆ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಯಿತು. ಫಲ್ಗುಣಿ ರೋಟರಿ ಕ್ಲಬ್ ಅಧ್ಯಕ್ಷ ಶಿವಯ್ಯ ಎಸ್. ಎಲ್. ಹಾಗೂ ವ್ಯವಸಾಯಿಕ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಮಾತನಾಡಿದರು.ಸಂಯೋಜಕ ಹರಿಪ್ರಸಾದ್ ಶೆಟ್ಟಿ ಕುರುಡಾಡಿ, ಪ್ರಮುಖರಾದ ರಾಘವೇಂದ್ರ ಭಟ್, ರತ್ನಾಕರ ಶೆಟ್ಟಿ ಭಾಗವಹಿಸಿದ್ದರು. ಉಪನ್ಯಾಸಕ ಯೋಗೀಶ ಕೈರೋಡಿ ಸ್ವಾಗತಿಸಿ, ಉಮೇಶ್ ಶೆಟ್ಟಿ ಪಾಲ್ಯ ಕಾರ್ಯಕ್ರಮ ನಿರೂಪಿಸಿ, ಗಣೇಶ ಶೆಟ್ಟಿ…
ಕಿನ್ನಿಗೋಳಿ: ಹಿರಿಯ ಪತ್ರಕರ್ತ, ಜಾನಪದ ಸಂಶೋಧಕ ಕೆ. ಎಲ್. ಕುಂಡಂತಾಯ ಇವರು ‘ಅನಂತ ಪ್ರಕಾಶ ಪುರಸ್ಕಾರ’ಕ್ಕೆ ಆಯ್ಕೆಯಾಗಿದ್ದಾರೆ. ನಾಗಾರಾಧನೆ, ದೈವಾರಾಧನೆ, ಸಿರಿ ಆರಾಧನೆ ಅಲ್ಲದೆ ನೂರಾರು ದೇಗುಲಗಳ ಬಗ್ಗೆ ಸಂಶೋಧನ ವಿಶೇಷ ಬರಹಗಳನ್ನು ಪ್ರಕಟಿಸಿದ್ದಾರೆ. ವಿರಾಟ್ ದರ್ಶನ, ಶ್ರೀ ದುರ್ಗಾದರ್ಶನ, ಕಟೀಲು ಶ್ರೀ ದುರ್ಗಾ ದರ್ಶನ, ಅಣಿ ಅರದಲ, ಭಾರ್ಗವರಾಮ, ಮೊದಲಾದ ಕೃತಿಗಳನ್ನು ಸಂಪಾದಿಸಿದ್ದಾರೆ. ಯಕ್ಷಗಾನ ಹಾಗೂ ಜಾನಪದ ಕ್ಷೇತ್ರದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುವ ಇವರು ಸುಮಾರು 40ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಪುರಸ್ಕಾರವು ಕುಂಡಂತಾಯರ ಸಾಹಿತ್ಯ ಸಾಧನೆಗಳ ಕುರಿತಾದ ಪರಿಚಯ ಕೃತಿ ಹಾಗೂ ರೂಪಾಯಿ 10,000 ನಗದನ್ನು ಒಳಗೊಂಡಿದೆ. 1 ಸೆಪ್ಟೆಂಬರ್ 2024ರ ರವಿವಾರ ಕಿನ್ನಿಗೋಳಿಯ ನೇಕಾರ ಸೌಧದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅನಂತ ಪ್ರಕಾಶನ ಸಂಸ್ಥೆಯ ನಿರ್ದೇಶಕ ಕೊಡೆತ್ತೂರು ಸಚ್ಚಿದಾನಂದ ಉಡುಪ ತಿಳಿಸಿದ್ದಾರೆ.
ಸುಳ್ಯ: ರಂಗಮಯೂರಿ ಕಲಾಶಾಲೆ (ರಿ.) ಸುಳ್ಯ ಮತ್ತು ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ 78ನೇ ಸ್ವಾತಂತ್ರ್ಯ ಸಂಭ್ರಮ ಹಾಗೂ ಸಂಗೀತ ವೈಭವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಇನ್ನರ್ ವೀಲ್ ಕ್ಲಬ್ ಸುಳ್ಯ ಇದರ ಅಧ್ಯಕ್ಷರಾದ ಶ್ರೀಮತಿ ಚಿಂತನ ಸುಬ್ರಮಣ್ಯ ಇವರು ಸ್ವಾತಂತ್ರ್ಯದ ಮಹತ್ವದ ಬಗ್ಗೆ ಮಾತನಾಡಿ ಇವತ್ತಿನ ಕಾಲಮಾನಕ್ಕೆ ಮಕ್ಕಳಿಗೆ ಕಲೆ ಮತ್ತು ಸಾಹಿತ್ಯದ ಅಗತ್ಯತೆಯ ಬಗ್ಗೆ ಹೇಳಿದರು. ಕಾರ್ಯಕ್ರಮದಲ್ಲಿ ಪುತ್ತೂರಿನ ಸುಪ್ರಜಾ ರಾವ್ ಇವರಿಂದ ವಯೊಲಿನ್ ವಾದನ, ರಂಗಮಯೂರಿ ಕಲಾಶಾಲೆಯ ಸುಗಮ ಸಂಗೀತ ವಿದ್ಯಾರ್ಥಿಗಳಿಂದ ಸಂಗೀತ ವೈಭವ, ಪುತ್ತೂರಿನ ಶಿಕ್ಷಕಿ ಸುಮನಾ ರಾವ್ ಇವರ ತರಬೇತಿ ಹಾಗೂ ನಿರ್ದೇಶನದಲ್ಲಿ ಮೂಡಿ ಬಂತು. ಹಿಮ್ಮೇಳನದಲ್ಲಿ ಶುಭಕರ್ ಬೆಟ್ಟಂಪಾಡಿ ಹಾಗೂ ಬಾಲಕೃಷ್ಣ ಮೇನಾಲ ಸಹಕರಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಉತ್ತಮ ಕನ್ನಡ ಸಾಧಕ ಪ್ರಶಸ್ತಿ ಪುರಸ್ಕೃತರು, ಸುಳ್ಯದ ಕೆ.ವಿ.ಜಿ. ಇಂಟರ್ ನ್ಯಾಶನಲ್ ಪಬ್ಲಿಕ್ ಸ್ಕೂಲಿನ ಕನ್ನಡ ಶಿಕ್ಷಕಿ ಭವ್ಯ ಎ., ಸುಳ್ಯ ಸೈಂಟ್ ಜೋಸೆಫ್ ಪ್ರಾಥಮಿಕ ಮತ್ತು ಪ್ರೌಢಶಾಲೆಯ…
ಬೆಂಗಳೂರು : ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಶ್ರೀ ರಾಘವೇಂದ್ರ ತೀರ್ಥ ಗುರು ಸಾರ್ವಭೌಮರ ಆರಾಧನಾ ಮಹೋತ್ಸವದ ಅಂಗವಾಗಿ ಬೆಂಗಳೂರಿನ ಯಕ್ಷದೇಗುಲ ತಂಡ ಪ್ರಸ್ತುತಪಡಿಸಿದ ‘ಸುದರ್ಶನ ಗರ್ವಭಂಗ’ ಯಕ್ಷಗಾನ ಪ್ರದರ್ಶನವು 20 ಆಗಸ್ಟ್ 2024ರಂದು ನಡೆಯಿತು. ಕಲಾವಿದರಾಗಿ ಹಿಮ್ಮೇಳದಲ್ಲಿ ಯಕ್ಷ ಗುರುಗಳಾದ ಲಂಬೋದರ ಹೆಗಡೆ, ಚಂಡೆಯಲ್ಲಿ ಶ್ರೀನಿವಾಸ ಪ್ರಭು, ಮದ್ದಲೆಯಲ್ಲಿ ಸಂಪತ್ ಕುಮಾರ್ ಹಾಗೂ ಮುಮ್ಮೇಳದಲ್ಲಿ ಹಿರಿಯ ಕಲಾವಿದರಾದ ಬಾಲಕೃಷ್ಣ ಭಟ್, ಕಡಬಾಳ ಉದಯ ಹೆಗಡೆ, ತಮ್ಮಣ್ಣ ಗಾಂವ್ಕರ್, ಸ್ಪೂರ್ತಿ ಭಟ್, ರಾಮಕೃಷ್ಣ ಭಟ್, ಉದಯ ಭೋವಿ, ಶ್ರೀ ವಿದ್ಯಾ, ಶ್ರೀವತ್ಸ ಮತ್ತು ಪ್ರಕಾಶ್ ಉಳ್ಳೂರ ಇವರು ಭಾಗವಹಿಸಿದರು. ಕಾರ್ಯಕ್ರಮವು ಯಕ್ಷಗುರು ಕೋಟ ಸುದರ್ಶನ ಉರಾಳರ ಸಂಯೋಜನೆಯಲ್ಲಿ ನಡೆಯಿತು. ಬೆಂಗಳೂರಿನಲ್ಲಿ ಕಳೆದ 44 ವರ್ಷದಿಂದ ಕೆ. ಮೋಹನ್ ನಿರ್ದೇಶನ ಮತ್ತು ಪ್ರಿಯಾಂಕ ಕೆ. ಮೋಹನ್ ನೃತ್ಯ ಸಂಯೋಜನೆಯಲ್ಲಿ ಯಕ್ಷದೇಗುಲ ತಂಡವು ಸಾಂಪ್ರದಾಯಿಕ ಯಕ್ಷಗಾನ, ನಾಟಕಗಳು ಹಾಗೆಯೇ ನವೀನ ಮತ್ತು ಪ್ರಾಯೋಗಿಕ ನಿರ್ಮಾಣಗಳನ್ನು ಪ್ರದರ್ಶಿಸುವ ಏಕೈಕ ತಂಡವಾಗಿದೆ. ಈವರೆಗೆ 5000ಕ್ಕೂ ಹೆಚ್ಚು ಪ್ರದರ್ಶನವನ್ನು ದೇಶ,…
ಪುತ್ತೂರು : ನ್ಯಾಯವಾದಿ, ಬರಹಗಾರ ಭಾಸ್ಕರ ಕೋಡಿಂಬಾಳ ಇವರು ಬರೆದ ‘ಕಣ್ಣಿಗೆ ಕಾಣದ್ದು.. ಮನಸ್ಸನ್ನು ಕಾಡಿದ್ದು’ ಕೃತಿಯ ಲೋಕಾರ್ಪಣೆ ಕಾರ್ಯಕ್ರಮವು ದಿನಾಂಕ 19 ಆಗಸ್ಟ್ 2024ರಂದು ಪುತ್ತೂರು ನ್ಯಾಯಾಲಯದ ಸಂಕೀರ್ಣ, ಪರಾಶರ ಸಭಾಂಗಣದಲ್ಲಿ ನಡೆಯಿತು. ಕರ್ನಾಟಕ ಉಚ್ಚನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಜಸ್ಟಿಸ್ ಪಿ. ಕೃಷ್ಣ ಭಟ್ ಅವರು ಕೃತಿ ಲೋಕಾರ್ಪಣೆ ಮಾಡಿ, “ಈ ಕೃತಿಯಲ್ಲಿ ಹಿಂದಿನ ಕಾಲದ ದಕ್ಷಿಣ ಕನ್ನಡ ಜಿಲ್ಲೆಯ ವಾಸ್ತವ ಚಿತ್ರಣವನ್ನು ಕಾಣಬಹುದು. ನಮ್ಮ ನಮ್ಮ ಆಸ್ತಿಕತೆ, ಸಾಮಾಜಿಕ ಸಾಮರಸ್ಯ, ನೆಗೆಟಿವ್ ಇಲ್ಲದ ಭಾಂದವ್ಯಗಳನ್ನು ಅಚ್ಚೊತ್ತಿರುವ ಕೃತಿ ಇದಾಗಿದೆ. ಇಂದಿನ ದಿನಗಳಲ್ಲಿ ನಾವು ಮಾಡಿದ ಕೆಲವೊಂದು ಪಾಪಗಳನ್ನು ಕಳೆಯಲೆಂದೇ ದೇವಸ್ಥಾನಕ್ಕೆ ಹೋಗುವ ಚಿಂತನೆ, ಹಿಂದಿನ ಕಾಲದ ನಿಸ್ವಾರ್ಥತೆಯ ಆಸ್ತಿಕ ಭಾವದ ನಡುವೆ ಅಜಗಜಾಂತರ ವ್ಯತ್ಯಾಸ ಓದುಗರ ಮನಸ್ಸಿಗೆ ಕಾಡುತ್ತದೆ. ಇಂದು ವಕೀಲರು ಸಾಹಿತ್ಯ, ಸಂಗೀತದಿಂದ ‘ಹೊರತಾದ’ ಬದುಕು ಕಟ್ಟಿಕೊಳ್ಳುವುದು ಕಷ್ಟಸಾಧ್ಯ. ಅವರೊಳಗೊಂದು ಕವಿ ಹೃದಯ ಕಾಣಿಸಿಕೊಂಡಾಗ ಈ ವ್ಯವಸ್ಥೆಯ ರೂಪಕಗಳು ಹುಟ್ಟಿಕೊಳ್ಳುತ್ತವೆ. ಹಾಗಾಗಿ ಬದುಕಿನ ಅರ್ಥ ವಿಶಾಲತೆಯನ್ನು ಪಡೆದುಕೊಳ್ಳುತ್ತದೆ.…
ಮಂಗಳೂರು : ಸಂಗೀತ ಭಾರತಿ ಪ್ರತಿಷ್ಠಾನ (ರಿ) ಮಂಗಳೂರು ಇವರ ಆಶ್ರಯದಲ್ಲಿ ಪ್ರಸ್ತುತ ಪಡಿಸುವ ಉತ್ಕೃಷ್ಟ ಮಟ್ಟದ ‘ರಿಮ್ಜಿಮ್’ ಸಂತೂರ್ ವಾದನ ಮತ್ತು ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಕಾರ್ಯಕ್ರಮವನ್ನು ದಿನಾಂಕ 25 ಆಗಸ್ಟ್ 2024ರಂದು ಸಂಜೆ 5-30 ಗಂಟೆಗೆ ಮಂಗಳೂರು ನಗರದ ಫಾದರ್ ಎಲ್‌ಎಫ್. ರಸ್ಕಿನ್ಹಾ ಹಾಲ್, ಎಲ್.ಸಿ.ಆರ್.ಐ. ಬ್ಲಾಕ್, ಸೇಂಟ್ ಅಲೋಶಿಯಸ್ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಪೂರ್ವಾಧದಲ್ಲಿ ಯುವ ಗಾಯಕ ಧಾರವಾಡದ ಶ್ರೀ ಸುಜಯೇಂದ್ರ ಕುಲಕರ್ಣಿ ಇವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗಾಯನ ಕಾರ್ಯಕ್ರಮ ನಡೆಯಲಿದ್ದು, ಉತ್ತರಾರ್ಧದಲ್ಲಿ ರಾಷ್ಟ್ರ ಮಟ್ಟದ ಖ್ಯಾತಿಯ ಸಂತೂರ್ ಕಲಾವಿದ ಮುಂಬೈನ ಪಂಡಿತ್ ಸತ್ಯೇಂದ್ರ ಸಿಂಗ್ ಸೋಲಂಕಿ ಇವರಿಂದ ಸಂತೂರ್ ಕಾರ್ಯಕ್ರಮ ನಡೆಯಲಿದೆ. ತಬ್ಲಾದಲ್ಲಿ ಬೋಪಾಲ್‌ನ ಶ್ರೀ ರಾಮೇಂದ್ರ ಸಿಂಗ್ ಸೋಲಂಕಿ, ಹಾರ್ಮೋನಿಯಂನಲ್ಲಿ ಬೆಂಗಳೂರಿನ ಶ್ರೀ ತೇಜಸ್ ಕಾಟೋಟಿ ಇವರು ಸಾಥ್ ನೀಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸಂಗೀತಾಸಕ್ತರೆಲ್ಲರಿಗೂ ಮುಕ್ತ ಪ್ರವೇಶಾವಕಾಶವಿದ್ದು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಂಗೀತ ಭಾರತಿ ಪ್ರತಿಷ್ಠಾನದ ಉಪಾಧ್ಯಕ್ಷ ಶ್ರೀ ನರೇಂದ್ರ ಎಲ್.…
ಪುತ್ತೂರು : ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ನೇತೃತ್ವದಲ್ಲಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ಮತ್ತು ಗ್ರಾಮ ಪಂಚಾಯತ್ ನರಿಮೊಗರು ಇವರ ಸಹಕಾರದೊಂದಿಗೆ ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಸಂಯೋಜನೆಯಲ್ಲಿ ಹೊರನಾಡ ಕನ್ನಡಿಗ ಶ್ರೀ ಮಿತ್ರಂಪಾಡಿ ಜಯರಾಮ್ ರೈ ಅಬುದಾಬಿ ಪೋಷಕತ್ವದಲ್ಲಿ ಯುವ ಜನತೆಯನ್ನು ಸಾಹಿತ್ಯ ಲೋಕದತ್ತ ಬರಮಾಡಿಕೊಳ್ಳುವ ಹಾಗೂ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನರಿಮೊಗರು ಗ್ರಾಮದಲ್ಲಿ ಸಾಹಿತ್ಯ ಸಂಭ್ರಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ ಎಂಬ ಘೋಷ ವಾಕ್ಯದಲ್ಲಿ ನಡೆಸುವ ‘ಗ್ರಾಮ ಸಾಹಿತ್ಯ ಸಂಭ್ರಮ’ ಸರಣಿ-16 ಈ ಕಾರ್ಯಕ್ರಮವು ಶತಸಂಭ್ರಮ ಆಡಿಟೋರಿಯಂ ನರಿಮೊಗರು ಶಾಲೆಯಲ್ಲಿ ದಿನಾಂಕ 24 ಆಗಸ್ಟ್ 2024ರ ಶನಿವಾರ ಬೆಳಿಗ್ಗೆ 9-30 ಗಂಟೆಯಿಂದ ನಡೆಯಲಿದೆ. ಈ ಕಾರ್ಯಕ್ರಮದ ಸರ್ವಾಧ್ಯಕ್ಷತೆಯನ್ನು ಸರಕಾರಿ ಉ. ಹಿ. ಪ್ರಾ. ಶಾಲೆ ನರಿಮೊಗರು ಇಲ್ಲಿನ ವಿದ್ಯಾರ್ಥಿನಿ ಕುಮಾರಿ ಪೂಜಾಶ್ರೀರವರು ವಹಿಸಲಿದ್ದಾರೆ. ಮಧ್ಯಾಹ್ನ 3-00 ಗಂಟೆಗೆ ನಡೆಯುವ ಸಮಾರೋಪ ಭಾಷಣವನ್ನು ಸ. ಹಿ. ಪ್ರಾ. ಶಾಲೆ ಶಾಂತಿಗೋಡು…
ಅಸ್ಸಾಂ : ಕರಾವಳಿಯ ಯುವ ನೃತ್ಯ ವಿದ್ವಾಂಸರಾದ ವಿದ್ವಾನ್ ಮಂಜುನಾಥ ಎನ್. ಪುತ್ತೂರು ಮತ್ತು ಕೋಲ್ಕತ್ತಾದ ಯುವ ನೃತ್ಯ ಕಲಾವಿದ, ಮಂಜುನಾಥ್ ಅವರ ನಟುವಾಂಗ ವಿದ್ಯಾರ್ಥಿ ಎನ್. ದೆಬಾಶಿಷ್ ಅವರು ಅಸ್ಸಾಂನ ಲಬ್ಡಿಂಗ್ ಸಿಟಿಯಲ್ಲಿ ದಿನಾಂಕ 12 ಆಗಸ್ಟ್ 2024ರಿಂದ 14 ಆಗಸ್ಟ್ 2024ರವೆರೆಗೆ ನಡೆದ ಕಾರ್ಯಕ್ರಮದಲ್ಲಿ ಒಂದು ಗಂಟೆಗಳ ಕಾಲ ನೃತ್ಯ ಪ್ರದರ್ಶನ ಮತ್ತು ಮೂರು ದಿನಗಳ ಭರತನಾಟ್ಯ ಕಾರ್ಯಾಗಾರವನ್ನು ನಡೆಸಿಕೊಟ್ಟರು. ಮಾನಶಾ ಡ್ಯಾನ್ಸ್ ಅಕಾಡೆಮಿಯ ನೃತ್ಯಗುರು ಶ್ರೀಶಿವ ದಾಸ್ ರಿಯಾಂಶ್ ಅವರು ಈ ನೃತ್ಯ ಪ್ರದರ್ಶನವನ್ನು ಹಮ್ಮಿಕೊಂಡಿದ್ದು, ಗುರು ಶಿವ ಅವರ ನೃತ್ಯ ವಿದ್ಯಾರ್ಥಿಗಳ ಜೊತೆಗೆ ಗುವಾಹಟಿ ಹಾಗೂ ಅಸ್ಸಾಂನ ಬೇರೆ ಜಿಲ್ಲೆಗಳ ಸುಮಾರು 58 ನೃತ್ಯ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದರು. ಸುಮಾರು 4 ಗಂಟೆಗಳ ಕಾಲದ ನಟುವಾಂಗದ ಮೂಲ ಶಿಕ್ಷಣವನ್ನು ಕೆಲ ನೃತ್ಯಗುರುಗಳು ಮಂಜುನಾಥ್ ಅವರಿಂದ ಕಲಿತುಕೊಂಡರು.