Subscribe to Updates
Get the latest creative news from FooBar about art, design and business.
Author: roovari
ತುಮಕೂರು : ತುಮಕೂರಿನ ‘ವೀಚಿ ಸಾಹಿತ್ಯ ಪ್ರತಿಷ್ಠಾನ’ದ ವತಿಯಿಂದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ತುಮಕೂರು ಇದರ ಸಹಯೋಗದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 16-06-2024ರಂದು ತುಮಕೂರಿನ ಅಮಾನಿಕೆರೆ ರಸ್ತೆ, ಕನ್ನಡ ಭವನದಲ್ಲಿ ನಡೆಯಲಿದೆ. ಬೆಂಗಳೂರಿನ ಕೇಂದ್ರ ವಲಯದ ಮಾನ್ಯ ಪೋಲೀಸ್ ಮಹಾನಿರ್ದೇಶಕರಾದ ಡಾ. ಬಿ.ಆರ್. ರವಿಕಾಂತೇ ಗೌಡ ಇವರು ಈ ಕಾರ್ಯಕ್ರಮ ಉದ್ಘಾಟನೆ ಹಾಗೂ ಪ್ರಶಸ್ತಿ ಪ್ರದಾನ ಮಾಡಲಿದ್ದು, ವೀಚಿ ಸಾಹಿತ್ಯ ಪ್ರತಿಷ್ಠಾನದ ಕಾರ್ಯಾಧ್ಯಕ್ಷರಾದ ಶ್ರೀ ಎಸ್. ನಾಗಣ್ಣ ಇವರು ಅಧ್ಯಕ್ಷತೆ ವಹಿಸಲಿರುವರು. ಕನ್ನಡ ಪುಸ್ತಕ ಪ್ರಾಧಿಕಾರದ ಲೇಖಕರು ಮತ್ತು ಮಾಜಿ ಅಧ್ಯಕ್ಷರಾದ ಪ್ರೊ. ಎಸ್.ಜಿ. ಸಿದ್ಧರಾಮಯ್ಯ ಇವರು ಕವಿ ವೀಚಿಯವರ ಕುರಿತು ಮಾತನಾಡಲಿದ್ದಾರೆ. ಪ್ರಶಸ್ತಿ ಪುರಸ್ಕೃತ ‘ವಿನೂತನ ಕಥನ ಕಾರಣ’ (ಸಾಹಿತ್ಯ ವಿಮರ್ಶೆ) ಕೃತಿಯ ಲೇಖಕರಾದ ಡಾ. ಬಿ. ಜನಾರ್ದನ ಭಟ್, ಪ್ರಶಸ್ತಿ ಪುರಸ್ಕೃತ ‘ಅರಸು ಕುರನ್ಗರಾಯ’ (ಸಂಶೋಧನೆ) ಕೃತಿಯ ಲೇಖಕರಾದ ಡಾ. ರವಿಕುಮಾರ್ ನೀಹ ಇವರಿಗೆ ‘ವೀಚಿ ಸಾಹಿತ್ಯ ಪ್ರಶಸ್ತಿ 2023’, ಪ್ರಶಸ್ತಿ ಪುರಸ್ಕೃತ ‘ಬುದ್ಧನ ಕಿವಿ’…
ಮಡಿಕೇರಿ : ರೆಡ್ ಬ್ರಿಕ್ಸ್ ಇನ್‌ನ ಸತ್ಕಾರ್ ಸಭಾಂಗಣದಲ್ಲಿ ಆಯೋಜಿತ, ವಿರಾಜಪೇಟೆ ಸಂತ ಅನ್ನಮ್ಮ ಕಾಲೇಜಿನ ಉಪನ್ಯಾಸಕಿ ಪ್ರತಿಮಾ ಹರೀಶ್ ರೈ ವಿರಚಿತ ವೈವಿಧ್ಯಮಯವಾದ 82 ಲೇಖನ ಗಳುಳ್ಳ 320 ಪುಟಗಳ ‘ಅಂತರಗಂಗೆ’ ಕೃತಿ ಲೋಕಾರ್ಪಣೆ ಸಮಾರಂಭವು ದಿನಾಂಕ 09-06-2024ರಂದು ನಡೆಯಿತು. ವೈಚಾರಿಕ ಬರಹಗಳು, ಮಹಿಳಾ ಪರವಾದ ಲೇಖನಗಳು, ಸಾಧಕರು ಹಾಗೂ ವಿಶೇಷ ದಿನಗಳನ್ನು ಕುರಿತ ಲೇಖನಗಳಿರುವ ಈ ಪುಸ್ತಕದ ಕುರಿತು ಎಲ್ಲರೂ ಮೆಚ್ಚುಗೆಯ ನುಡಿಗಳನ್ನಾಡಿದರು. ಜಿಲ್ಲಾ ಕ.ಸಾ.ಪ. ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ “ಮಹಿಳಾ ಬರಹಗಾರರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ 2002ರಿಂದ ಕನ್ನಡ ಸಾಹಿತ್ಯ ಪರಿಷತ್ ಕೊಡಗಿನ ಗೌರಮ್ಮ ಹೆಸರಿನಲ್ಲಿ ಸ್ಥಾಪಿಸಿರುವ ದತ್ತಿನಿಧಿಗೆ ಈವರೆಗೂ 21 ಲೇಖಕಿಯರು ಅರ್ಹರಾಗಿದ್ದಾರೆ” ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಚಿಕ್ಕಅಳುವಾರದಲ್ಲಿನ ಕನ್ನಡ ವಿಶ್ವವಿದ್ಯಾನಿಲಯದ ಕನ್ನಡ ಉಪನ್ಯಾಸಕ ಡಾ.ಜಮೀರ್ ಅಹಮದ್ ಮಾತನಾಡಿ “ಸಾಮಾಜಿಕ ಹೊಣೆಗಾರಿಕೆ ಹೆಚ್ಚಿಸುವಲ್ಲಿ ಪುಸ್ತಕಗಳ ಪಾತ್ರ ಮಹತ್ವದ್ದಾಗಿದ್ದು, ಬಾಲ್ಯದಿಂದಲೇ ಮಕ್ಕಳಲ್ಲಿ ಉತ್ತಮ ಸಂಸ್ಕಾರ ರೂಪಿಸುವ ನಿಟ್ಟಿನಲ್ಲಿ ಒಳ್ಳೆಯ ಮಾಹಿತಿಯುಳ್ಳ…
‘ಅಮ್ಮ ಬರುತ್ತಾಳೆ’ ಎಂಬ ಕೃತಿಯು ಭಾರತೀ ಕಾಸರಗೋಡು ಅವರ ಹದಿನೈದು ಕತೆಗಳ ಸಂಕಲನವಾಗಿದೆ. ಆಯಾ ಕತೆಗಳಲ್ಲಿ ಕಾಣಿಸಿಕೊಳ್ಳುವ ಪಾತ್ರಗಳು ಜೀವಂತಿಕೆಯಿಂದ ಕಂಗೊಳಿಸುತ್ತವೆ. ಸಾಮಾನ್ಯ ಕುಟುಂಬದ ಆಗುಹೋಗುಗಳ ಹಿನ್ನೆಲೆಯಲ್ಲಿ ವ್ಯಕ್ತಿಯ ಅಂತರಂಗದ ಭಾವನೆಗಳನ್ನು ಚಿತ್ರಿಸುವ ಲೇಖಕಿಯು ಮಹಾಭಾರತದ ದ್ರೌಪದಿ-ಗಾಂಧಾರಿಯರ ಮನಸ್ಸಿನ ವಿಷಾದವನ್ನು ಅಭಿವ್ಯಕ್ತಿಸುವಲ್ಲಿ ಯಶಸ್ವಿಯಾಗಿದ್ದಾರೆ. ಓದಿಸಿಕೊಂಡು ಹೋಗುವ ಭಾಷೆ, ಬಿಗಿಯಾದ ಬಂಧ, ಸಮರ್ಥವಾದ ಹೆಣಿಗೆ, ಗಹನವಾದ ವಿಚಾರಗಳನ್ನು ಸಹಜ ನೆಲೆಯಲ್ಲಿ ವಿಶ್ಲೇಷಿಸುತ್ತಾ ಸಾಗುವ ಪರಿಯು ಓದುಗನ ಮನಸ್ಸು ಪಾತ್ರಗಳ ಬಗ್ಗೆ ಚಿಂತಿಸುವಂತೆ ಮಾಡುತ್ತದೆ. ಬಾಲಕ ಹರಿನಾಥನ ಹೃದಯಲ್ಲಿ ಹೊಯ್ದಾಡುವ ಅಪಕ್ವ ಭಾವನೆಗಳು, ಜೊತೆಯಲ್ಲಿರದ ತಂದೆಯ ಕುರಿತಾದ ಕಲ್ಪನೆಗಳು, ಕೊನೆಗೆ ಅಪ್ಪನು ಕಾಣಿಸಿಕೊಂಡಾಗ ಅವನ ಮನದಲ್ಲಿ ಉಂಟಾಗುವ ಭಾವದ ಏರಿಳಿತಗಳನ್ನು ವಸ್ತುವಾಗಿ ಹೊಂದಿದ ‘ಹಾರಗುದರಿ ಬೆನ್ನಏರಿ’ ಎಂಬ ಕತೆಯು ಓದುಗರ ಗಮನ ಸೆಳೆಯುತ್ತದೆ. ತಂದೆಯ ಪ್ರೀತಿಗಾಗಿ ಹಂಬಲಿಸುವ ಹರಿನಾಥನು ತನ್ನ ತಾಯಿಯ ಮಡಿಲಲ್ಲಿ ಮಲಗಿ, ಮಾಸಿದ ಸೀರೆಯ ಘಮಲನ್ನು ಹೀರುತ್ತಾ ಬಿಕ್ಕುವ ಬಗೆಯು ಮಾರ್ಮಿಕವಾಗಿ ಮೂಡಿ ಬಂದಿದೆ. ತಂದೆಯ ಕುರಿತ ವಿಚಾರಗಳು ಅತಿರೇಕಕ್ಕೆ ತಲುಪಿದಾಗ,ತಾಯಿಯ…
ಉಡುಪಿ : ಯಕ್ಷಶಿಕ್ಷಣ ಟ್ರಸ್ಟ್( ರಿ) ಉಡುಪಿ ಕಳೆದ 17 ವರ್ಷಗಳಿಂದ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಯಕ್ಷಗಾನ ತರಬೇತಿ ನೀಡುತ್ತಿದ್ದು, ಈ ವರ್ಷ ಶಾಸಕರಾದ ಗುರುರಾಜ ಗಂಟಿಹೊಳೆಯವರ ಅಪೇಕ್ಷೆಯಂತೆ ಬೈಂದೂರು ವಿಧಾನಸಭಾ ವ್ಯಾಪ್ತಿಯ 11 ಶಾಲೆಗಳು ಸೇರಿ ಒಟ್ಟೂ 91 ಶಾಲೆಗಳಲ್ಲಿ ಯಕ್ಷಶಿಕ್ಷಣ ನಡೆಸಲು ಯೋಜಿಸಿದೆ. ಈ ಪ್ರಯುಕ್ತ ಯಕ್ಷಗಾನ ಗುರುಗಳ ಸಮಾಲೋಚನಾ ಸಭೆಯು ದಿನಾಂಕ 12-06-2024ರಂದು ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದ ಹೊರಾಂಗಣದಲ್ಲಿ ಜರಗಿತು. ಉಡುಪಿ ಕ್ಷೇತ್ರದ ಶಾಸಕ, ಟ್ರಸ್ಟಿನ ಅಧ್ಯಕ್ಷ ಯಶ್ ಪಾಲ್ ಸುವರ್ಣ ಮಾತನಾಡಿ, “ಯಕ್ಷಶಿಕ್ಷಣ ಟ್ರಸ್ಟ್ ಕಾರ್ಯನಿರ್ವಹಣೆಯಲ್ಲಿ ಕಲಾರಂಗದ ಕಾರ್ಯಕರ್ತರ ದುಡಿಮೆ ದೊಡ್ಡದು, ನಾವೆಲ್ಲ ಒಟ್ಟಾಗಿ ಈ ಮಹಾಭಿಯನವನ್ನು ಯಶಸ್ವಿಯಾಗಿಸೋಣ” ಎಂದರು. ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ ಶೆಟ್ಟಿ ಮಾತನಾಡಿ “ಮಕ್ಕಳಿಗೆ ಸಂಸ್ಕಾರ ನೀಡುವ ಈ ಕಲಾಪ್ರಕಾರ ಉಳಿಸಿ ಬೆಳೆಸುವಲ್ಲಿ ಯಕ್ಷ ಗುರುಗಳ ಕೊಡುಗೆ ಮಹತ್ತ್ವದ್ದು” ಎಂದು ಅಭಿಪ್ರಾಯಪಟ್ಟರು. ಹಿರಿಯ ಟ್ರಸ್ಟಿ ಎಸ್.ವಿ. ಭಟ್ ಸ್ವಾಗತಿಸಿ, ಕಾರ್ಯದರ್ಶಿ ಮುರಲಿ ಕಡೆಕಾರ್ ಗುರುಗಳಿಗೆ ಉಪಯುಕ್ತ ಮಾಹಿತಿ…
ಮಂಗಳೂರು : ಸಾಧನಾ ರಾಷ್ಟ್ರೀಯ ಸಾಂಸ್ಕೃತಿಕ ಪ್ರತಿಷ್ಠಾನವು ಪ್ರತಿವರ್ಷ ಅತ್ಯುತ್ತಮ ಕವನ ಸಂಕಲನಕ್ಕೆ ನೀಡುವ 2023ನೇ ಸಾಲಿನ ‘ಹಂಸಕಾವ್ಯ ರಾಷ್ಟ್ರೀಯ ಕಾವ್ಯ ಪುರಸ್ಕಾರ’ಕ್ಕೆ ದಾವಣಗೆರೆಯ ಸದಾಶಿವ ಸೊರಟೂರು ಇವರ ‘ನಿನ್ನ ಬೆರಳು ತಾಕಿ’ ಕವನ ಸಂಕಲನವು ಆಯ್ಕೆಯಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಕೆ.ವಿ. ಕೃಷ್ಣ ಪ್ರಸಾದ್ ತಿಳಿಸಿದ್ದಾರೆ. ಪುರಸ್ಕಾರವು 25,000 ರೂಪಾಯಿ ನಗದು ಬಹುಮಾನವನ್ನು ಒಳಗೊಂಡಿದ್ದು ಮುಂಬರುವ ನವೆಂಬರ್ ತಿಂಗಳಿನಲ್ಲಿ ಪುರಸ್ಕಾರ ಕಾರ್ಯಕ್ರಮ ನಡೆಯಲಿದೆ. ಕವಿ ಸದಾಶಿವ ಸೊರಟೂರು ಅವರು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನವರು. ಸದ್ಯ ಹೊನ್ನಾಳಿಯಲ್ಲಿ ವಾಸ. ವೃತ್ತಿಯಲ್ಲಿ ಪ್ರೌಢಶಾಲಾ ಶಿಕ್ಷಕ. ಇದುವರೆಗೂ ಇವರ ನಾಲ್ಕು ಕವನಸಂಕಲನ ಮತ್ತು ಎರಡು ಕಥಾಸಂಕಲನಗಳು ಪ್ರಕಟವಾಗಿವೆ. ‘ಅಪ್ಪನ ವ್ಹೀಲ್ ಚೇರ್ ಮಾರಾಟಕ್ಕಿದೆ’ ಕವನ ಸಂಕಲನಕ್ಕೆ ‘ಹರಿಹರಶ್ರೀ ಕಾವ್ಯ ಪ್ರಶಸ್ತಿ’, ಕವನ ಸಂಕಲನದ ಹಸ್ತಪ್ರತಿಗೆ ಕೊಡಮಾಡುವ ‘ಬಳ್ಳಾರಿ ಎನ್. ಗವಿಸಿದ್ದ ಕಾವ್ಯ ಪುರಸ್ಕಾರ’ವು ಇವರ ‘ಗಾಯಗೊಂಡ ಸಾಲುಗಳು’ ಕವನ ಸಂಕಲನಕ್ಕೆ ಬಂದಿದೆ. ‘ಕೊಲ್ಲುವುದಕ್ಕೆ ಸದ್ದುಗಳಿವೆ’ ಎಂಬ ಕವನಸಂಕಲನದ ಹಸ್ತಪ್ರತಿಗೆ ‘ಕಾವ್ಯಸಂಜೆ’ಯ ‘ದಶಮಾನೋತ್ಸವ…
ವರ್ಷದ ಹಿಂದೆ ಮಂಗಳೂರಿನದೇ ಕಲಾಭೀ ರಂಗಸಂಸ್ಥೆ ವಿಶೇಷ ಮತ್ತು ಪುಟ್ಟ ರಂಗ ಮಂಚ ಹಾಗೂ ಮಂದಿರದಲ್ಲಿ ಪ್ರಯೋಗಿಸಿದ ಬುನ್ರಾಕು (ಜಪಾನೀ ಗೊಂಬೆಯಾಟ), ರಸಿಕ ವರ್ಗದಲ್ಲಿ ಆಶ್ಚರ್ಯದ ಬಹುದೊಡ್ಡ ಅಲೆಯನ್ನೇ ಎಬ್ಬಿಸಿತ್ತು. ಅದರ ನಿರ್ಮಾಣ ಮತ್ತು ನಿರ್ದೇಶಕ ಶ್ರವಣ್ ಹೆಗ್ಗೋಡು. ಇವರು ರಂಗಕಲೆಗಳಲ್ಲಿ ನೀನಾಸಂ ಪದವೀಧರ. ಅದರ ಮೇಲೆ, ದಿಲ್ಲಿಯಲ್ಲಿ ಕನಿಷ್ಠ ಆರು ವರ್ಷಗಳ ಕಾಲ ಅಕ್ಷರಶಃ ‘ಗುರುಸೇವೆ’ಯಂತೆ ಪರಿಶ್ರಮಿಸಿ, ಈ ಬುನ್ರಾಕನ್ನು ಗಳಿಸಿಕೊಂಡರು. ಮೊದಲ ಮಂಗಳೂರ ಪ್ರದರ್ಶನಕ್ಕೂ ಮುನ್ನ ಇವರು ಬುನ್ರಾಕಿನೊಡನೆ, ಮೈಸೂರು ರಂಗಾಯಣ ಸೇರಿದಂತೆ ಕೆಲವು ತಂಡಗಳಲ್ಲೂ ಕೆಲವು ಪೂರ್ಣ ಪ್ರಮಾಣದ ಪ್ರಯೋಗಗಳನ್ನು ನಡೆಸಿದ್ದರು. ಆ ಅನುಭವಗಳ ಮೊತ್ತವೆಂಬಂತೆ, ಈ ಬಾರಿ ಪೂರ್ಣ ರಂಗಮಂಚವನ್ನು ಬಳಸುವ ನಾಟಕದೊಡನೆ ಬುನ್ರಾಕು ಬೆಸೆದು ಬಂದ ಪ್ರಯೋಗ – ಬೇಲಿಯಾಚಿನ ಗೆಳೆಯ (ಎ ಫ್ರೆಂಡ್ ಬಿಯಾಂಡ್ ದ ಫೆನ್ಸ್). ಎರಡನೇ ಮಹಾಯುದ್ಧ ಕಾಲದ ಜರ್ಮನ್ ಕ್ರೌರ್ಯದ ಸತ್ಯಗಳಿಗೆ ಶ್ರವಣ್ ನಾಟಕದ ರೂಪ ಕೊಟ್ಟು, ನಿರ್ದೇಶನ ಮಾಡಿದ ಪ್ರಯೋಗ ಬೇಲಿಯಾಚಿನ ಗೆಳೆಯ. (ಇದಕ್ಕೆ ಪ್ರೇರಣೆ ಕೊಟ್ಟ…
ಮಂಗಳೂರು : ಸನಾತನ ಯಕ್ಷಾಲಯ (ರಿ.) ಮಂಗಳೂರು ಇದರ ವಾರ್ಷಿಕೋತ್ಸವವು ದಿನಾಂಕ 16-06-2024ರಂದು ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಯಾದ ಪದ್ಮವಿಭೂಷಣ ಡಾ. ಶ್ರೀ. ಡಿ. ವೀರೇಂದ್ರ ಹೆಗ್ಗಡೆ ಇವರು ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಕರ್ನಾಟಕ ಸರಕಾರದ ವಿಧಾನಸಭೆ ಮಾನ್ಯ ಸ್ಪೀಕರ್ ಶ್ರೀ ಯು. ಟಿ. ಖಾದರ್, ಮಂಗಳೂರಿನ ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷರಾದ ಶ್ರೀ ಅಜಿತ್ ಕುಮಾರ್ ರೈ ಮಾಲಾಡಿ, ಒಡಿಯೂರು ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ಸುರೇಶ್ ರೈ, ಭಾರತ್ ಕೋ-ಅಪರೇಟಿವ್ ಬ್ಯಾಂಕಿನ ಛೇರ್ ಮನ್ ಶ್ರೀ ಸೂರ್ಯಕಾಂತ್ ಜೆ. ಸುವರ್ಣ, ಬಂಟರ ಯಾನೆ ನಾಡವರ ಮಾತೃ ಸಂಘದ ಸಂಚಾಲಕರಾದ ಶ್ರೀ ವಸಂತ ಶೆಟ್ಟಿ, ಬಂಟರ ಸಂಘ ಥಾಣೆ, ಮುಂಬಯಿ ಅಧ್ಯಕ್ಷರಾದ ಶ್ರೀ ವೇಣುಗೋಪಾಲ ಶೆಟ್ಟಿ, ಪಟ್ಲ ಫೌಂಡೇಷನ್ ಎಕ್ಕಾರು ಘಟಕದ ಅಧ್ಯಕ್ಷರಾದ ಶ್ರೀ ಗಿರೀಶ್ ಎಂ. ಶೆಟ್ಟಿ, ಮುಂಬೈ ಉದ್ಯಮಿ ಶ್ರೀ ಆನಂದ ಬಂಗೇರ ಹಾಗೂ ಶ್ರೀ ಕೃಷ್ಣಪ್ರಕಾಶ ಉಳಿತ್ತಾಯ…
ಉಪ್ಪಿನಕುದ್ರು : ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ವತಿಯಿಂದ 2024ರ ವಿನೂತನ ಕಾರ್ಯಕ್ರಮ ಸರಣಿಯಲ್ಲಿ ಗಂಗೊಳ್ಳಿಯ ಉದಯೋನ್ಮುಖ ಕಲಾವಿದ ಮಾಸ್ಟರ್ ಶಾಮ್ ಜಿ.ಎನ್. ಪೂಜಾರಿ ಇವರಿಂದ ‘ಕೊಳಲು ವಾದನ’ವು ದಿನಾಂಕ 16-06-2024ರಂದು ಸಂಜೆ ಗಂಟೆ 4-00ರಿಂದ ಉಪ್ಪಿನಕುದ್ರು ಗೊಂಬೆ ಮನೆಯಲ್ಲಿ ನಡೆಯಲಿದೆ.
ಕಾಸರಗೋಡು : ಕಾರಡ್ಕ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ 10ನೇ ತರಗತಿಯ ವಿದ್ಯಾರ್ಥಿಗಳ ನೇತೃತ್ವದಲ್ಲಿ ಹಾಗೂ ಶಿಕ್ಷಕರ ಮಾರ್ಗದರ್ಶನದಲ್ಲಿ ಹಿರಿಯ ಕವಿ ಕಯ್ಯಾರ ಕಿಞ್ಞಣ್ಣ ರೈ ಇವರ ಜನ್ಮದಿನಾಚರಣೆಯು ದಿನಾಂಕ 10-06-2024ರಂದು ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಲೆಯ ಮುಖ್ಯ ಶಿಕ್ಷಕ ಶ್ರೀ ಸಂಜೀವ ಎಂ. ಮಾತನಾಡಿ “ಕಾಸರಗೋಡಿನವರ ಪಾಲಿಗೆ ಕಯ್ಯಾರ ಕಿಞ್ಞಣ್ಣ ರೈಗಳು ಅಭಿಮಾನ ಪಡಬಹುದಾದ ವ್ಯಕ್ತಿತ್ವವಾಗಿದ್ದಾರೆ. ಇಂಥವರ ಜನ್ಮದಿನಾಚರಣೆಯ ಮೂಲಕ ನಾವು ಪ್ರೇರಣೆ ಪಡೆದುಕೊಳ್ಳಬಹುದಾಗಿದೆ.” ಎಂದರು. ವೇದಿಕೆಯಲ್ಲಿ ಕನ್ನಡ ವಿಭಾಗದ ಹಿರಿಯ ಶಿಕ್ಷಕಿ ಶ್ರೀಮತಿ ಬೇಬಿ ರೇಖಾ, ಸ್ಟಾಫ್ ಸೆಕ್ರೆಟರಿ ಶಶಿ ಮಾಸ್ಟರ್, ಶೋಭನಾ ಟೀಚರ್ ಮೊದಲಾದವರು ಉಪಸ್ಥಿತರಿದ್ದರು. ಶಿಕ್ಷಕ ಡಾ.ಶ್ರೀಶ ಕುಮಾರ ಇವರು ಕವಿ ಪರಿಚಯದ ಬಿತ್ತಿ ಪತ್ರ ಬಿಡುಗಡೆಗೊಳಿಸಿದರು. ಹಾಗೂ ಕೀರ್ತನ ಕವಿ ಪರಿಚಯ ಮಾಡಿಕೊಟ್ಟರು. ಪೃಥ್ವಿರಾಜ್ ಅವರಿಂದ ಸ್ಲೈಡ್ ಶೋ ನಡೆಯಿತು. ಅನಘಾ ಸರಸ್ವತಿ ಅವರು ಪುಸ್ತಕ ಆಸ್ವಾದನ ಟಿಪ್ಪಣಿಯನ್ನು ಮಂಡಿಸಿದರು. ಕವಿ ಕೈಯಾರರ ಗುರು ಸಮಾನರಾದ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಇವರ ಪರಿಚಯವನ್ನು…
ಮೂಡಬಿದಿರೆ : ಮೂಡಬಿದಿರೆಯ ವಿದ್ಯಾಗಿರಿಯಲ್ಲಿರುವ ಮುಂಡ್ರೆದಗುತ್ತು ಕೆ. ಅಮರನಾಥ ಶೆಟ್ಟಿ (ಕೃಷಿ ಸಿರಿ) ವೇದಿಕೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ‘ಆಳ್ವಾಸ್ ಸಂಪ್ರದಾಯ ದಿನ- 2024′ ಕಾರ್ಯಕ್ರಮವು ದಿನಾಂಕ 11-06-2024 ರಂದು ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ನಟ ಹಾಗೂ ರಂಗಕರ್ಮಿ ಅರುಣ್ ಸಾಗರ್ ತಮ್ಮ ಕಂಚಿನ ಕಂಠದಲ್ಲಿ ‘ವಿದ್ಯಾ ಬುದ್ಧಿ ಕಲಿಸಿದ ಗುರುವೇ ಕೊಡು ನಮಗೆ ಮತಿಯ…’ ಸಾಲುಗಳನ್ನು ಹಾಡುತ್ತಲೇ ತಮ್ಮ ಮಾತಿಗೆ ಚಾಲನೆ ನೀಡಿ “ಆಳ್ವಾಸ್‌ನಲ್ಲೇ ಒಂದು ನಾಡು, ಒಂದು ದೇಶ ಇದೆ. ದೇಶದ ಬೇರೆಡೆ ಇಲ್ಲದ ಗುರುಕುಲ ಆಳ್ವಾಸ್. ಮನಸ್ಸಿನೊಳಗೆ ಮಗುತನ ಇದ್ದರೆ ಮಾತ್ರ ದೊಡ್ಡ ಮನುಷ್ಯನಾಗಲು ಸಾಧ್ಯ. ನಾವೆಲ್ಲ ಮನುಷ್ಯರಾಗೋಣ. ಮನುಷ್ಯತ್ವದ ಮಹಲು ಕಟ್ಟುತ್ತಿರುವ ಮೋಹನ ಆಳ್ವರ ಜೊತೆಯಾಗೋಣ. ಆಳ್ವಾಸ್ ವಿದ್ಯಾರ್ಥಿ ಶಿಲ್ಪಗಳನ್ನು ಕೆತ್ತುವ ತಾಣವಾಗಿದೆ. ಇಲ್ಲಿ ಆಳ್ವರು ಮನುಷ್ಯತ್ವ ತುಂಬುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಇದು ಊರು ಚಿಕ್ಕದಾದರು ದೊಡ್ಡ ಮನಸ್ಸಿನ ಪ್ರಪಂಚ. ಸಾಹಿತ್ಯ, ಕಲೆ, ಕ್ರೀಡೆ ಹಾಗೂ ಶಿಕ್ಷಣಗಳಿಗೆ ಪ್ರೋತ್ಸಾಹಿಸುವ ಆಳ್ವರು ಹಿರೋಗಿಂತ ದೊಡ್ಡ ಹೀರೋ.…