Subscribe to Updates
Get the latest creative news from FooBar about art, design and business.
Author: roovari
ಬಂಟ್ವಾಳ : ವಿಶ್ವಭಾರತಿ ಯಕ್ಷಸಂಜೀವಿನಿ ಟ್ರಸ್ಟ್ (ರಿ.) ಮುಡಿಪು ಇದರ ರಜತ ಸಂಭ್ರಮ ಪ್ರಯುಕ್ತ ತುಳು ಶಿವಳ್ಳಿ ಸೇವಾ ಟ್ರಸ್ಟ್ ಬಂಟ್ವಾಳ ತಾಲೂಕು ಇದರ ಸಹಭಾಗಿತ್ವದಲ್ಲಿ ‘ವಿಶ್ವಭಾರತಿ ರಜತ ವೈಭವ’ದ ಅಂಗವಾಗಿ ‘ರಾಮಾಯಣ ದಶಪರ್ವ’ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮವು 19 ಜುಲೈ 2024ರಂದು ಬಿ.ಸಿ.ರೋಡ್ ತುಳು ಶಿವಳ್ಳಿ ಸಭಾಭವನದಲ್ಲಿ ಚಾಲನೆಗೊಂಡಿತು. ಈ ಕಾರ್ಯಕ್ರಮವನ್ನು ಯಕ್ಷದಶಾವತಾರಿ ಶ್ರೀ ಕೆ. ಗೋವಿಂದ ಭಟ್ ಇವರು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿದರು. ತುಳು ಶಿವಳ್ಳಿ ಸಂಘ ಬಂಟ್ವಾಳ ಘಟಕ ಅಧ್ಯಕ್ಷರಾದ ಶ್ರೀ ರಾಜಾರಾಮ ಭಟ್ ಅಧ್ಯಕ್ಷತೆ ವಹಿಸಿದ್ದರು. ಸಜೀಪ ಮಾಗಣೆ ತಂತ್ರಿ ಶ್ರೀ ಎಂ. ಸುಬ್ರಮಣ್ಯ ಭಟ್, ಖ್ಯಾತ ಯಕ್ಷಗಾನ ಕಲಾವಿದ ವಿದ್ವಾಂಸ ಉಜಿರೆ ಅಶೋಕ ಭಟ್, ಶಂಕರ ಸೇವಾ ಪ್ರತಿಷ್ಠಾನ ಬಂಟ್ವಾಳ ಅಧ್ಯಕ್ಷರಾದ ಕೈಯೂರು ನಾರಾಯಣ ಭಟ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಪ್ರಶಾಂತ ಹೊಳ್ಳ ನೇತೃತ್ವದಲ್ಲಿ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ‘ಶ್ರೀರಾಮ ಪಟ್ಟಾಭಿಷೇಕ’ ಎಂಬ ಯಕ್ಷಗಾನ ತಾಳಮದ್ದಳೆ ಜರಗಿತು. ಕುಮಾರಿ ಶ್ರೀವಿದ್ಯಾ ಐತಾಳ್, ಪ್ರಶಾಂತ…
ಮಡಿಕೇರಿ : ಕರ್ನಾಟಕ ಸಾಹಿತ್ಯ ಅಕಾಡೆಮಿಯು 2023ನೇ ವರ್ಷದಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟಗೊಂಡಿರುವ ಸಾಹಿತ್ಯದ ವಿವಿಧ ಪ್ರಕಾರಗಳ ಕೃತಿಗಳನ್ನು ಬಹುಮಾನಕ್ಕಾಗಿ ಆಹ್ವಾನಿಸಲಾಗಿದೆ. ಲೇಖಕರು, ಪ್ರಕಾಶಕರು, ಸಾಹಿತ್ಯಾಸಕ್ತ ಸಾರ್ವಜನಿಕರು ನಾಲ್ಕು ಪ್ರತಿಗಳನ್ನು ರಿಜಿಸ್ಟ್ರಾರ್, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು-560002 ಈ ವಿಳಾಸಕ್ಕೆ ರಿಜಿಸ್ಟರ್ಡ್ ಅಂಚೆ, ಕೋರಿಯರ್ ಮೂಲಕ ಅಥವಾ ಖುದ್ದಾಗಿ ದಿನಾಂಕ 31 ಆಗಸ್ಟ್ 2024ರೊಳಗೆ ತಲುಪುವಂತೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗೆ www.sahithyaacademy.karnataka.gov.inನ್ನು ಸಂಪರ್ಕಿಸಬಹುದೆಂದು ಅಕಾಡೆಮಿಯ ರಿಜಿಸ್ಟ್ರಾರ್ ಎನ್. ಕರಿಯಪ್ಪ ಅವರು ತಿಳಿಸಿದ್ದಾರೆ.
ಉಡುಪಿ : ವನಸುಮ ಟ್ರಸ್ಟ್ (ರಿ.) ಕಟಪಾಡಿ – ಪ್ರವರ್ತಿತ ಮತ್ತು ಶಾಸ್ತ್ರೀಯ ಯಕ್ಷಮೇಳ ಉಡುಪಿ ಇದರ ವತಿಯಿಂದ ಗುರುರಾಜ ಮಾರ್ಪಳ್ಳಿ ಇವರ ನಿರ್ದೇಶನದಲ್ಲಿ ‘ಋತುಪರ್ಣ’ ಯಕ್ಷಗಾನ ಪ್ರದರ್ಶನವನ್ನು 28 ಜುಲೈ 2024ರಂದು ಸಂಜೆ ಗಂಟೆ 6-00ಕ್ಕೆ ಉಡುಪಿಯ ಶಾರದಾ ಮಂಟಪ ರಸ್ತೆಯಲ್ಲಿರುವ ಯಕ್ಷಗಾನ ಕಲಾರಂಗ ಐವೈಸಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಹಿಮ್ಮೇಳದಲ್ಲಿ ಭಾಗವತರಾಗಿ ಶಶಿಕಿರಣ್ ಮಣಿಪಾಲ್, ಮದ್ದಳೆಯಲ್ಲಿ ಕೆ.ಜೆ. ಸುಧೀಂದ್ರ ಮತ್ತು ಚೆಂಡೆಯಲ್ಲಿ ಕೆ.ಜೆ. ಕೃಷ್ಣ ಹಾಗೂ ಮುಮ್ಮೇಳದಲ್ಲಿ ಋತುಪರ್ಣನಾಗಿ ಗುರುರಾಜ ಮಾರ್ಪಳ್ಳಿ, ಬಾಹುಕನಾಗಿ ಪ್ರತೀಶ್ ಕುಮಾರ್ ಬ್ರಹ್ಮಾವರ ಮತ್ತು ಶನಿ/ಕಾರ್ಕೋಟಕನಾಗಿ ಶ್ರೀನಿವಾಸ ತಂತ್ರಿ ಪಾದೂರು ಇವರುಗಳು ಸಹಕರಿಸಲಿದ್ದಾರೆ.
ಬಿ.ಸಿ. ರೋಡ್ : ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು, ಪುತ್ತೂರು ಇದರ ‘ವಿಂಶತಿ ಸಂಭ್ರಮ’ದ ಸರಣಿ ತಾಳಮದ್ದಳೆಯ ಮೂರನೆಯ ಕೂಟವು 24 ಜುಲೈ 2024ರಂದು ವಿಶ್ವಭಾರತಿ ಯಕ್ಷ ಸಂಜೀವಿನಿ ಟ್ರಸ್ಟ್ (ರಿ.) ಮುಡಿಪು ಇದರ ರಜತ ಸಂಭ್ರಮ ಪ್ರಯುಕ್ತ ತುಳು ಶಿವಳ್ಳಿ ಸೇವಾ ಟ್ರಸ್ಟ್ ಬಂಟ್ವಾಳ ತಾಲೂಕು ಇದರ ಸಹಭಾಗಿತ್ವದಲ್ಲಿ ನಡೆದ ‘ರಾಮಾಯಣ ದಶಪರ್ವ’ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮದಡಿಯಲ್ಲಿ ಪಾರ್ತಿಸುಬ್ಬ ವಿರಚಿತ ‘ಚೂಡಾಮಣಿ’ ಎಂಬ ಆಖ್ಯಾನದೊಂದಿಗೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಗಿರೀಶ್ ಮುಳಿಯಾಲ ಹಾಗೂ ಚೆಂಡೆ ಮದ್ದಳೆಗಳಲ್ಲಿ ಮುರಳೀಧರ ಆಚಾರ್ಯ ನೇರಂಕಿ ಮತ್ತು ಶ್ರೀ ವತ್ಸ ಸೋಮಯಾಜಿ ಸಹಕರಿಸಿದರು. ಮುಮ್ಮೇಳದಲ್ಲಿ ಶುಭಾ ಜೆ.ಸಿ. ಅಡಿಗ (ಹನೂಮಂತ), ಗಾಯತ್ರಿ ಹೆಬ್ಬಾರ್ (ಸೀತೆ), ಕಿಶೋರಿ ದುಗ್ಗಪ್ಪ ನಡುಗಲ್ಲು (ಶೃಂಗಾರ ರಾವಣ), ಹರಿಣಾಕ್ಷಿ ಜೆ. ಶೆಟ್ಟಿ (ಲಂಕಿಣಿ), ಶಾರದಾ ಅರಸ್ (ಸರಮೆ) ಸಹಕರಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಆಂಜನೇಯ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಿರಿಯ…
ಮಂಗಳೂರು : ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯ ಮಂಗಳೂರು ಇದರ ಸ್ಕೂಲ್ ಆಫ್ ಲ್ವಾಂಗ್ವೇಜಸ್, ಕನ್ನಡ ವಿಭಾಗ, ಕನ್ನಡ ಸಂಘ ಮತ್ತು ಕಥಾ ಬಿಂದು ಪ್ರಕಾಶನ ಮಂಗಳೂರು ಇದರ ಸಹಯೋಗದಲ್ಲಿ ‘ಸಾಹಿತ್ಯ ಸುಗ್ಗಿ’ ಕಾರ್ಯಕ್ರಮವನ್ನು 27 ಜುಲೈ 2024ರಂದು ಅಪರಾಹ್ನ 2-00 ಗಂಟೆಗೆ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ರೇಡಿಯೋ ಸಾರಂಗ್ ಸಮೀಪವಿರುವ ‘ಸಾನಿಧ್ಯ ಸಭಾಂಗಣ’ದಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಎಂಬತ್ತರ ಹರೆಯದ ಹಿರಿಯ ಕವಯತ್ರಿ ಶ್ರೀಮತಿ ಬಿ. ಸತ್ಯವತಿ ಭಟ್ ಕೊಳಚಪ್ಪು ಇವರ ‘ಮತ್ತೆ ನಕ್ಕಳು ಪ್ರಕೃತಿ’ ಎಂಟನೇ ಕಾವ್ಯ ಕೃತಿಯು ಲೋಕಾರ್ಪಣೆಗೊಳ್ಳಲಿದೆ. ಸಂತ ಅಲೋಶಿಯಸ್ ಸ್ವಾಯತ್ತ ಕಾಲೇಜಿನ ರಿಜಿಸ್ಟ್ರಾರ್ ಮತ್ತು ಆಂಗ್ಲ ಭಾಷಾ ಪ್ರಾಧ್ಯಾಪಕರಾದ ಡಾ. ಆಲ್ವಿನ್ ಡೇಸಾ ಇವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಹಿರಿಯ ಸಾಹಿತಿ ಶ್ರೀಮತಿ ಬಿ. ಸತ್ಯವತಿ ಭಟ್ ಕೊಳಚಪ್ಪು ಇವರು ದೀಪ ಪ್ರಜ್ವಲನೆ ಮಾಡಲಿದ್ದಾರೆ. ಹಿರಿಯ ಸಾಹಿತಿ ಶ್ರೀಮತಿ ಲಕ್ಷ್ಮೀ ವಿ. ಭಟ್ ಮಂಜೇಶ್ವರ ಇವರಿಗೆ ಗೌರವ ಸನ್ಮಾನ ನಡೆಯಲಿದೆ. ಇದೇ ಸಂದರ್ಭದಲ್ಲಿ…
ಮಂಗಳೂರು : ಉರ್ವ ಯಕ್ಷಾರಾಧನಾ ಕಲಾಕೆಂದ್ರದ 15ನೇ ವರ್ಷಾಚರಣೆಯ ಸಂಭ್ರಮದ ಪ್ರಯುಕ್ತ ಪ್ರಶಸ್ತಿ ಪ್ರದಾನ ಮತ್ತು ಯಕ್ಷಗಾನ ಪ್ರದರ್ಶನ ಕಾರ್ಯಕ್ರಮವು ದಿನಾಂಕ 13-07-2024ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಸ್ಮಾರಕ ಸಭಾಭವನದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀ ಕ್ಷೇತ್ರ ಕಟೀಲಿನ ಅನುವಂಶಿಕ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ಇವರು “ಯಕ್ಷಗಾನವೂ ಒಂದು ಕಾವ್ಯವೇ. ‘ಯಕ್ಷಗಾನ’ ದೃಶ್ಯಕಾವ್ಯವಾದರೆ, ಶ್ರವ್ಯ ಕಾವ್ಯವನ್ನು ‘ತಾಳಮದ್ದಲೆ’ಯಲ್ಲಿ ಕಾಣಬಹುದು. ಹಾಸ್ಯ ಬಂದಾಗ ನಗುವ, ದುಃಖದ ಪ್ರಸಂಗ ಬಂದಾಗ ಅಳುವ, ರಾಮನಂತಹ ಪಾತ್ರದ ಉದಾತ್ತ ಗುಣಗಳನ್ನು ಕೇಳುವಾಗ ನಮ್ಮಲ್ಲೂ ಅದನ್ನು ಅಳವಡಿಸಬೇಕು ಎನ್ನುವ ಭಾವನೆ ಮೂಡುತ್ತದೆ. ಈ ಎಲ್ಲವೂ ಇರುವ ವಿಶಿಷ್ಟ ಪರಿಕಲ್ಪನೆಯನ್ನು ಯಕ್ಷಗಾನದ ಮೂಲಕ ಮಾಡಿಕೊಟ್ಟಿದ್ದಾರೆ. ಯಕ್ಷಗಾನ ಬುದ್ಧಿವಂತರ ಕಲೆ. ಪ್ರತಿಭಾ ಸಂಪನ್ನನಾಗಿದ್ದರೆ ಮಾತ್ರ ಅದರಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತದೆ. ರಂಗದಲ್ಲೇ ನೃತ್ಯ, ಅಭಿನಯ, ಮಾತುಗಾರಿಕೆ ಮಾಡಬೇಕಾದ ಬುದ್ಧಿ ಸಂಪನ್ನತೆ ಇರಬೇಕು. ಜತೆಗೆ ಯಕ್ಷಗಾನವನ್ನು ಆಸ್ವಾದಿಸಲು ಒಳ್ಳೆಯ ಪ್ರೇಕ್ಷಕರು ಬೇಕು. ಇದರಿಂದ ನೂರ್ಕಾಲ ಯಕ್ಷಗಾನ ಉಳಿಯಲು ಸಾಧ್ಯ. ಆಗ ಮಾತ್ರ…
ಉಡುಪಿ : ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯನಿಕೇತನ ಕೊಡವೂರು ಇವರ ಜಂಟಿ ಆಶ್ರಯದಲ್ಲಿ ‘ನೃತ್ಯ ಶಂಕರ’ ವಿಶೇಷ ಕಾರ್ಯಕ್ರಮವು 28 ಜುಲೈ 2024ರಂದು ಸಂಜೆ 5-00 ಗಂಟೆಗೆ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ತುಮಕೂರಿನ ಶ್ರೀ ರಾಜರಾಜೇಶ್ವರಿ ನೃತ್ಯ ಕಲಾ ಕೇಂದ್ರದ ಕಲಾವಿದರಿಂದ ನೃತ್ಯ ಪ್ರಸ್ತುತಿ ನಡೆಯಲಿದೆ.
ಮಂಗಳೂರು : ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ 2022 ಮತ್ತು 2023ನೇ ಸಾಲಿನ ಪುಸ್ತಕ ಬಹುಮಾನಕ್ಕೆ ಕವನ ಸಂಕಲನ, ಕಾದಂಬರಿ, ಕಥೆ ಹಾಗೂ ಎಲ್ಲ ಬ್ಯಾರಿ ಸಾಹಿತ್ಯ ಪ್ರಕಾರದ ಪುಸ್ತಕಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅದು ಬ್ಯಾರಿ ಭಾಷೆಯ ಸ್ವಂತ ಕೃತಿ ಅಥವಾ ಅನುವಾದಿತ ಕೃತಿಯೂ ಅಗಿರಬಹುದು. ಪುಸ್ತಕ ಬಹುಮಾನದ ಪ್ರಶಸ್ತಿ 25,000 ರೂ. ನಗದು, ‘ಪ್ರಮಾಣ ಪತ್ರ, ಸ್ಮರಣಿಕೆ ಒಳಗೊಂಡಿದೆ. ಅರ್ಜಿ ಸಲ್ಲಿಸಲು 3 ಆಗಸ್ಟ್2024 ಕೊನೆಯ ದಿನ. ಅರ್ಜಿಯನ್ನು ರಿಜಿಸ್ಟ್ರಾರ್, ಕರ್ನಾ ಟಕ ಬ್ಯಾರಿ ಸಾಹಿತ್ಯ ಅಕಾಡೆಮಿ, ಸಾಮರ್ಥ್ಯ ಸೌಧ, 2ನೇ ಮಹಡಿ, ಮಂಗಳೂರು ತಾ. ಪಂ. ಹಳೇ ಕಟ್ಟಡ, ಮಂಗಳೂರು ಈ ವಿಳಾಸಕ್ಕೆ ಕಳುಹಿಸಬಹುದು.
ಬೆಂಗಳೂರು : ಬೆಂಗಳೂರು ಪ್ಲೇಯರ್ಸ್ ಪ್ರಸ್ತುತ ಪಡಿಸುವ ಶ್ರೀಪಾದ ಎಸ್. ಇವರ ನಿರ್ದಶನದಲ್ಲಿ ‘ಗಾಂಪರ ಗುಂಪು’ ನಾಟಕ ಪ್ರದರ್ಶನವನ್ನು 27 ಜುಲೈ 2024ರಂದು ಸಂಜೆ 7-00 ಗಂಟೆಗೆ ಬೆಂಗಳೂರಿನ ಕಲಾಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ 9036751448. ಹುಟ್ಟಿದಾರಭ್ಯ ಪಾಶ್ಚಾತ್ಯ ಸಂಸ್ಕೃತಿ ಬಗ್ಗೆ ಹೆಚ್ಚುತ್ತಿರುವ ಅನಗತ್ಯ ಅಭಿಮಾನ, ಅನುಕರಣೆ ಮಕ್ಕಳ ತಲೆಯಲ್ಲಿ ಹೇರುತ್ತ, ಪರದೇಶಕ್ಕೆ ಹಾರುವುದೇ ಒಂದು ಘನೂದ್ದೇಶವಾಗಬೇಕ್ವೆಂದು, ಅದನ್ನು ಜಂಬದಿಂದ ಮನೆ ಮಂದಿ ಹತ್ರ ಹೇಳುಕೊಳ್ಳುವುದೇ ದೊಡ್ಡಸ್ತಿಕೆ ಎಂದು ಬೀಗುವ, ಅರೆ ಬರೆ ಬೆಂದ ಕಾಳಿನ ಜನಗಳ ಮದ್ಯ…. ನಮ್ಮ ನಾಡಿನ ಮೌಲ್ಯಾಧಾರಿತ ಸಂಸ್ಕೃತಿಯನ್ನು ಹೆಚ್ಚಿಸುವಂತೆ ಮಾಡಿ ಅವರಿಗೆ ತಿಳುವಳಿಕೆ ನೀಡಿ, ತಪ್ಪು ಕಲ್ಪನೆಗಳಿಂದ ಆಗುವ ಅಪಾಯಗಳನ್ನು ತಪ್ಪಿಸಿ, ಅವರನ್ನು ನಮ್ಮ ನಾಡಿನ ಸಂಸ್ಕೃತಿಯ ಕುರಿತು ಗೌರವವನ್ನು ಹೆಚ್ಚಿಸಿಕೊಳ್ಳುವಂತೆ ಮಾಡುವ ಸಂದೇಶಗಳನ್ನು ಸಾರುವ ಹಲವಾರು ಅಂಶಗಳನ್ನು ಹೊಂದಿರುವ, ಹಾಸ್ಯ ರೂಪಕದ ನಾಟಕ ‘ಗಾಂಪರ ಗುಂಪು’. ‘ಗಾಂಪ’ ಪದಕ್ಕೆ ಒಂದು ವಿಶಿಷ್ಟ ರೂಪವನ್ನು ಕೊಟ್ಟಿದ್ದಾರೆ ಲೇಖಕ ದಾಶರಥಿ ದೀಕ್ಷಿತ. ಗುರು-ಶಿಷ್ಯ, ಪ್ರೀತಿ-ಕಾಮ,…
ಮಂಗಳೂರು : ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ – ಮಂಥನ ಮತ್ತು ಪ್ರದರ್ಶನ ವೇದಿಕೆಯು 22 ಜುಲೈ 2024ರಂದು ‘ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ’ ಪುರಸ್ಕೃತರಾದ ಸಮಿತಿಯ ಮೂವರು ಸಾಧಕರಿಗೆ ಬಲ್ಮಠ ಕುಡ್ಲ ಪೆವಿಲಿಯನ್ ಸಭಾಂಗಣದಲ್ಲಿ ಅಭಿನಂದನಾ ಸಮಾರಂಭವನ್ನು ಏರ್ಪಡಿಸಿತು. ಈ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಹಿರಿಯ ವಿದ್ವಾಂಸ ಮತ್ತು ಸಂಸ್ಕೃತಿ ಚಿಂತಕ ಡಾ. ಎಂ. ಪ್ರಭಾಕರ ಜೋಶಿ ಇವರು “ಕಲೆ, ಸಂಸ್ಕೃತಿ, ಸಾಹಿತ್ಯ – ಶಿಕ್ಷಣ ಇತ್ಯಾದಿ ಕ್ಷೇತ್ರಗಳ ಬೆಳವಣಿಗೆಗೆ ಸಾಮಾಜಿಕ ಮತ್ತು ಧಾರ್ಮಿಕ ರಂಗದಲ್ಲಿ ದುಡಿಯುವವರ ಕೊಡುಗೆ ಅಪಾರ. ತಮ್ಮ ನೆಲದ ಸಂಸ್ಕೃತಿಯ ಮೇಲಿನ ಪ್ರೀತಿಯೇ ಅಂಥವರ ಸಾಧನೆಗೆ ಸೋಪಾನವಾಗಿದೆ” ಎಂದು ಹೇಳಿದರು. ಶ್ರೀದೇವಿ ಶಿಕ್ಷಣ ಸಂಸ್ಥೆಗಳ ಆಡಳಿತ ನಿರ್ದೇಶಕ ಮತ್ತು ಹಿರಿಯ ಉದ್ಯಮಿ ಡಾ. ಎ. ಸದಾನಂದ ಶೆಟ್ಟಿ ಇವರು ಜ್ಯೋತಿ ಬೆಳಗಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಬೆಂಗಳೂರಿನ ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯಿಂದ 2024ನೇ ಸಾಲಿನ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಪಡೆದ ಯಕ್ಷಾಂಗಣದ ಗೌರವ…