Author: roovari

18 ಎಪ್ರಿಲ್ 2023, ಮೂಡುಬಿದಿರೆ: ಮೂಡುಬಿದಿರೆಯು ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಪ್ರಸಿದ್ಧಿ ಹೊಂದುವಲ್ಲಿ ಡಾ. ಎಲ್.ಸಿ ಸೋನ್ಸ್ ಅವರ ಕೊಡುಗೆಯೂ ಮಹತ್ವದ್ದಾಗಿದೆ. ಕೃಷಿಕರು ಕೂಡಾ ಹೇಗೆ ಗೌರವಯುತವಾಗಿ ಬದುಕಬಹುದೆಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ. ಪರಿಸರದ ಕುರಿತಾಗಿ ವಿಶೇಷ ಕಾಳಜಿ ಹೊಂದಿದ್ದ ಸೋನ್ಸ್ ಅವರು ಜಾತಿ ಮತ ಪಂಥವನ್ನು ಮೀರಿ ಬೆಳೆದ ರೀತಿ ಎಲ್ಲರಿಗೂ ಆದರ್ಶಪ್ರಾಯವಾದುದು ಎಂಬುದಾಗಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ.ಮೋಹನ ಆಳ್ವ ಅವರು ಇಲ್ಲಿ ಮಾತನಾಡುತ್ತಾ ತಿಳಿಸಿದರು. ಮೂಡುಬಿದಿರೆಯ ಸ್ಕೌಟ್ಸ್ ಗೈಡ್ಸ್ ಕನ್ನಡ ಭವನದ ರತ್ನಾಕರವರ್ಣಿ ಸಭಾಂಗಣದಲ್ಲಿ ಡಾ. ಎಲ್.ಸಿ.ಸೋನ್ಸ್ ಅಭಿಮಾನಿ ಬಳಗ, ಮೂಡುಬಿದಿರೆ ಇದರ ಮತಿಯಿಂದ ನಡೆದ ಸಾರ್ವಜನಿಕ ಶ್ರದ್ಧಾಂಜಲಿ ಸಭೆ ಹಾಗೂ ಕೃತಿ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. ಡಾ. ನರೇಂದ್ರ ರೈ ದೇರ್ಲ ಅವರ “ ಎಲ್.ಸಿ.ಸೋನ್ಸ್ ಸೃಷ್ಟಿಸಿದ ಫಲ ಪ್ರಪಂಚ ಸೋನ್ಸ್ ಫಾರ್ಮ್” ಎಂಬ ಕೃತಿಯನ್ನು ಮೂಡುಬಿದಿರೆ ಜೈನಮಠದ ಜಗದ್ಗುರು ಸ್ವಸ್ತಿಶ್ರೀ ಡಾ. ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮಿಗಳು ಬಿಡುಗಡೆಗೊಳಿಸಿ…

Read More

18.04.1997 ರಂದು ಕೆ.ಗುಂಡು ನಾಯ್ಕ ಹಾಗೂ ಕಾವೇರಿ ಇವರ ಮಗನಾಗಿ ದಿನೇಶ್ ನಾಯ್ಕ ಕನ್ನಾರು ಅವರ ಜನನ. ಕರೆಸ್ಪಾಂಡೆನ್ಸ್ ನಲ್ಲಿ ಡಿಗ್ರಿಯ ಜೊತೆಗೆ ಮೇಳದ ತಿರುಗಾಟವನ್ನು ಮುಗಿಸಿ ಪ್ರಸ್ತುತ ಉಡುಪಿಯ ತೆಂಕನಿಡಿಯೂರಿನ Government First Grade collage ನಲ್ಲಿ M.S.W ವ್ಯಾಸಂಗ ಮಾಡುತ್ತಿದ್ದಾರೆ. ಗಣೇಶ್ ನಾಯ್ಕ ಚೇರ್ಕಾಡಿ ಹೆಜ್ಜೆಗಾರಿಕೆಯ ಗುರುಗಳು, ಡಾ.ರವಿ ಕುಮಾರ್ ಸೂರಾಲು ಕೈ ತಾಳದ ಗುರುಗಳು, ಉದಯ ಕುಮಾರ್ ಹೊಸಾಳ ಭಾಗವತಿಕೆಯ ಗುರುಗಳು. ತಂದೆಯವರ ವೇಷ ನೋಡಿ ಪ್ರೇರಣೆಗೊಂಡು ಯಕ್ಷಗಾನ ರಂಗಕ್ಕೆ ಬಂದರು. ೭ನೇ ತರಗತಿಯ ರಜೆಯಲ್ಲಿ ಕನ್ನಾರಿನಲ್ಲಿ ಹೆಜ್ಜೆ ಕಲಿತು, ಆ ಬಳಿಕ ಕೆಲವು ವೇಷಗಳನ್ನು ಮಾಡಿ ಪಿ.ಯು.ಸಿ ರಜೆಯಲ್ಲಿ ೨ ತಿಂಗಳು ಮಂದಾರ್ತಿ ಮೇಳಕ್ಕೆ ವೇಷ ಮಾಡುವುದನ್ನು ಕಲಿಯುವುದಕ್ಕೆ ದೊಡ್ಡಪ್ಪ ಬುಕ್ಕಿಗುಡ್ಡೆ ಮಹಾಬಲ ನಾಯ್ಕ ಜೊತೆಗೆ ಹೋದೆ. ಆಗ ಪುಂಡುವೇಷದ ಬಗ್ಗೆ ಆಸಕ್ತಿಯಾಯಿತು, ವಿಶ್ವನಾಥ್ ಆಚಾರ್ಯ ತೊಂಬಟ್ಟು ಅವರ ನಾಟ್ಯಕ್ಕೆ ಪ್ರೇರಣೆಗೊಂಡು ಅವರ ಹಾಗೆ ವೇಷಧಾರಿಯಾಗಿ, ಪ್ರಜ್ವಲ್ ಕುಮಾರ್ ಗುರುವಾಯನಕೆರೆ ಹಾಗೆ All Rounder ಕಲಾವಿದನಾಗಬೇಕು…

Read More

17-04-2023,ಮಂಗಳೂರು: ವಿಶ್ವಕಲಾ ದಿನಾಚರಣೆಯ ಅಂಗವಾಗಿ ನಗರದ ಬೊಕ್ಕಪಟ್ಟಣದ ಸಮೀಪ ನದಿ ಕಿನಾರೆಯಲ್ಲಿ ದಿನಾಂಕ 15-04-2023 ಶನಿವಾರ ಬೆಳಗ್ಗೆಯಿಂದ ಸಂಜೆ ವರೆಗೆ ಆಶು ಚಿತ್ರ ಕಲಾಶಿಬಿರ ಏರ್ಪಡಿಸಲಾಗಿತ್ತು. ಉದ್ಘಾಟಕರಾಗಿದ್ದ ಮಂಗಳೂರು ವಿಶ್ವವಿದ್ಯಾಲಯ ಮಾಜಿ ಕುಲಸಚಿವ (ಪರೀಕ್ಷಾಂಗ) ಪ್ರೊ|ಪಿ.ಎಲ್ ಧರ್ಮ ಅವರು ಮಾತನಾಡಿ, ಕರಾವಳಿ ಚಿತ್ರಕಲಾ ಚಾವಡಿ ಕಳೆದ 30 ವರ್ಷಗಳಿಂದ ನಿರಂತರ ಮಂಗಳೂರಿನ ಜನತೆಗೆ ನೂರಾರು ಚಿತ್ರಕಲಾ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾ ಬಂದಿರುವುದು ಶ್ಲಾಘನೀಯ ಮತ್ತು ಇತರ ಸಂಘ ಸಂಸ್ಥೆಗಳಿಗೆ ಆದರ್ಶವಾಗಿದ್ದಾರೆ ಎಂದರು. ವಿಶ್ವಕಲಾ ದಿನಾಚರಣೆಯನ್ನು ಇಡೀ ಜಗತ್ತಿನ ಕಲಾವಿದರು ಆಚರಿಸುತ್ತಿರುವಾಗ ಮಂಗಳೂರಿನ ಕಲಾವಿದರು ಸ್ಥಳದಲ್ಲೇ ಚಿತ್ರರಚನೆ ಮಾಡುವಂತದ್ದು ಕಲಾವಿದರು. ವೈಯಕ್ತಿಕವಾಗಿ ಬೆಳೆಯಲು ಮತ್ತು ಸಮಾಜಕ್ಕೆ ಸಮಾಜದ ಜನರಿಗೆ ಚಿತ್ರಕಲೆಯ ಪರಿಚಯ ನೀಡಿದಂತಾಗುತ್ತದೆ ಎಂದರು. ಮುಖ್ಯ ಅತಿಥಿಯಾಗಿ ಮಾಜಿ ಮೇಯರ್ ದಿವಾಕರ್ ಕದ್ರಿ ಮಾತನಾಡಿ, ಇಂತಹ ಕಲಾಮೇಳ ಶಿಬಿರ ಮನಸ್ಸಿಗೆ ಮುದ ಕೊಡುವಂತದ್ದು ಇಂತಹ ಸುಂದರ ಪ್ರೇಕ್ಷಣೀಯ ಸ್ಥಳದಲ್ಲಿ ಏರ್ಪಟಿಸಿದ್ದರಿಂದ ಜನತೆಗೆ ಪ್ರವಾಸಿಗಳಿಗೆ ನೀಡಿದಂತಾಗುತ್ತದೆ ಎಂದರು. ಭಾಗವಹಿಸಿದ ಕಲಾವಿದರಿಗೆ ಎಲ್ಲರಿಗೂ ಕ್ಯಾನ್ವಾಸ್ ನೀಡಿ ಪ್ರೋತ್ಸಾಹಿಸಿದರು. ಹಿರಿಯ…

Read More

18 ಎಪ್ರಿಲ್ 2023, ಮೂಡುಬಿದಿರೆ: ಶಿಕ್ಷಕಿ ಶ್ರೀಮತಿ ನಾಗಶ್ರೀ ನಾಗರಕಟ್ಟೆ ಅವರ ಚೊಚ್ಚಲ ಕವನ ಸಂಕಲನ ‘ಕೃಷ್ಣ ಸಿಗಲಿಲ್ಲ’ ಕೃತಿಯು ಮೂಡುಬಿದಿರೆ ಎಂ.ಸಿ.ಎಸ್.ಬ್ಯಾಂಕಿನ ಕಲ್ಪವೃಕ್ಷ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಲೋಕಾರ್ಪಣೆಗೊಂಡಿತು. ಎಂಸಿ.ಎಸ್ ಬ್ಯಾಂಕಿನ ಅಧ್ಯಕ್ಷರಾಗಿರುವ ಎಂ. ಬಾಹುಬಲಿ ಪ್ರಸಾದ್ ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರೆ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಅವರು ಕವನ ಸಂಕಲನ ಬಿಡುಗಡೆಗೊಳಿಸಿ ಕನ್ನಡವನ್ನು ಉಳಿಸಿ ಬೆಳೆಸುವಲ್ಲಿ ಸಾಹಿತಿಗಳ ಪಾತ್ರವೂ ಪ್ರಮುಖವಾಗಿದ್ದು ಅವರನ್ನು ಬೆಂಬಲಿಸುವುದು ಕೂಡಾ ಸಾಹಿತ್ಯದ ಆರಾಧನೆಯೇ ಆಗುತ್ತದೆ ಎಂಬುದಾಗಿ ತಿಳಿಸಿದರು. ಪತ್ರಕರ್ತ, ಸಂಘಟಕ ಶೇಖರ್ ಅಜೆಕಾರು ಅವರು ಸಭಾಧ್ಯಕ್ಷತೆಯನ್ನು ವಹಿಸಿದ್ದು ಮುನಿರಾಜ ರೆಂಜಾಳ, ಉಗ್ಗಪ್ಪ ಪೂಜಾರಿ, ಕೆ.ಎನ್.ಪ್ರಕಾಶ್ ಭಂಢಾರಿ, ಸತೀಶ್ ಭಂಡಾರಿ, ಕಿಶೋರ್ ಬೆಳ್ತಂಗಡಿ, ಸದಾನಂದ ನಾರಾವಿ ಮತ್ತು ಪದ್ಮಶ್ರೀ ಭಟ್ ನಿಡ್ಡೋಡಿ ಇವರು ಮುಖ್ಯ ಅತಿಥಿಗಳಾಗಿದ್ದರು ಹಿರಿಯ ಪತ್ರಕರ್ತರಾದ ಧನಂಜಯ ಮೂಡುಬಿದಿರೆಯವರು ಕೃತಿಯನ್ನು ಪರಿಚಯಿಸಿದರು. ಶ್ರೀ ಮುನಿರಾಜ ರೆಂಜಾಳ ಹಾಗೂ ಶೇಖರ್ ಅಜೆಕಾರು ಅವರಿಗೆ ವಿಶೇಷ ಗುರುವಂದನೆ ಗೌರವ ಸನ್ಮಾನವನ್ನು ನೀಡಲಾಯಿತು. ಜೊತೆಗೆ…

Read More

18-04-2023,ಉಡುಪಿ: ಹೆಣ್ಣು ಈ ಸಮಾಜದ ಕಣ್ಣು ಎನ್ನುವುದು ರೂಢಿಯ ಮಾತು. ಆದರೆ ಆಕೆ ತನ್ನೊಡಲಿನ ಅವಮಾನಗಳನ್ನು ಮರೆಯಲ್ಲಿ ಮುಚ್ಚಿ, ಮರೆಯಲಾಗದ ನೋವುಗಳನ್ನು ಸೆರಗಿನಲ್ಲಿ ಬಚ್ಚಿಟ್ಟು, ನಗುವ ಮುನ್ನ ಅಳುವ ನುಂಗಿ ಮೌನದ ಸೆರೆಮನೆಯಲ್ಲಿ ಮತ್ತೆ ಮತ್ತೆ ಬಂಧಿಯಾಗುತ್ತಿದ್ದಾಳೆ..! ಇಂತಹ ಬಂಧನಗಳ ಪೊರೆ ಕಳಚಿ ಆಕಾಶದೆತ್ತರಕ್ಕೆ ರೆಕ್ಕೆ ಬಿಚ್ಚಿ ಸ್ವಚ್ಛಂದದಿ ಹಾರುವಂತೆ ಮಾಡಬೇಕಾದವರಾರು? ಎನ್ನುವ ಪ್ರಶ್ನೆಗೆ ಆತ್ಮಶೋಧನೆಯನ್ನು ತಮ್ಮ ತಮ್ಮಲ್ಲಿ ಮಾಡಿಕೊಳ್ಳುವಂತೆ ಮಾಡಿದ್ದು ಇತ್ತೀಚಿಗೆ ಬ್ರಹ್ಮಾವರದ ಎಸ್. ಎಂ. ಎಸ್. ಕಾಲೇಜಿನಲ್ಲಿ ನಡೆದ ವಿಶಿಷ್ಟ ಏಕವ್ಯಕ್ತಿ ರಂಗಪ್ರಯೋಗ ಹಕ್ಕಿ ಮತ್ತು ಅವಳು. ಒಂದು ಹೆಣ್ಣಿನ ಸೂಕ್ಷ್ಮ ಸಂವೇದನೆಗಳನ್ನು ಕಾವ್ಯಾಭಿನಯದ ಮೂಲಕ ಅಭಿವ್ಯಕ್ತಿಸಿ, ಪ್ರೇಕ್ಷಕರನ್ನು ಸೆಳೆಯುವುದು ದೊಡ್ಡ ಸವಾಲು. ಈ ಸವಾಲನ್ನು ಸುಲಭವಾಗಿ ರಂಗಭಾಷೆಯ ಮೂಲಕ ಪ್ರಸ್ತುತ ಪಡಿಸಿದ ರೀತಿ ಇಲ್ಲಿ ಅಭೂತಪೂರ್ವವಾದುದ್ದು. ಈ ಏಕವ್ಯಕ್ತಿ ರಂಗಾಭಿನಯದಲ್ಲಿ ಕುಮಾರಿ ಕಾವ್ಯ ಹಂದೆ ಎಚ್ ತನ್ನ ಪ್ರಬುದ್ಧ ಅಭಿನಯದ ಮೂಲಕ ನಾಟಕದ ಆಶಯವನ್ನು ಸಮರ್ಥವಾಗಿ ಪ್ರೇಕ್ಷಕರಿಗೆ ದಾಟಿಸಿದ್ದಾಳೆ. ಕಾವ್ಯ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ತೃತೀಯ ವರ್ಷದ…

Read More

18 ಏಪ್ರಿಲ್ 2023, ಮಂಗಳೂರು: ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಅಂಗ ಸಂಸ್ಥೆ ಕೇರಳ ಗಡಿನಾಡ ಶಾಖೆ ಮತ್ತು ಸದ್ಬೋಧ ಗುರುಕುಲದ ಹಿಂದೂ ಸಂಸ್ಕಾರ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ “ಹಿಂದೂ ಸಂಸ್ಕಾರ ಬೇಸಿಗೆ ಶಿಬಿರ” ಏಪ್ರಿಲ್ 3 ರಿಂದ 19ರವರೆಗೆ “ಶ್ರೀ ಕೃಷ್ಣ ನಿಲಯ”, ಕೋಟೆಕಣಿ 1ನೇ ಕ್ರಾಸ್, ಉರ್ವಸ್ಟೋರ್, ಮಂಗಳೂರಿನಲ್ಲಿ ನಡೆಯುತ್ತಿದೆ. ಈ ಶಿಬಿರದ ವಿಶೇಷತೆಗಳು 1) ವೇದ ಮಂತ್ರಗಳ ಉಪದೇಶ 2) ಸಂಸ್ಕೃತ ಭಾಷಾ ಪರಿಚಯ 3) ಸುಭಾಷಿತ, ನೀತಿಯ ಕಥೆಗಳು 4) ವಿಷ್ಣುಸಹಸ್ರನಾಮ ಪಠಣಾ ತರಬೇತಿ 5) ಬೌದ್ಧಿಕ, ಒಳಾಂಗಣ ಆಟಗಳು 6) ಧಾರ್ಮಿಕ ಶೈಕ್ಷಣಿಕ ಪ್ರವಾಸ 7) ಭಜನಾ ಸಂಗೀತ ತರಬೇತಿ 8) ಪಂಚಾಂಗ, ರಂಗೋಲಿ ಕಲಿಕೆ 9) ಪುರಾಣದ ಕಥೆಗಳು 10) ರಾಮಾಯಣ, ಭಾಗವತ 11) ಪೂಜೆ ಹೋಮ – ಹಿಂದೂ ಸಂಸ್ಕಾರ 12) ಹಿಂದೂ ಧರ್ಮದ ಶ್ರೇಷ್ಠತೆ ಇತ್ಯಾದಿ ವಿಷಯಗಳಿಗೆ ಒತ್ತು ನೀಡಿ ತರಬೇತಿ ನಡೆಯುತ್ತಿದೆ. ಈ ಶಿಬಿರದಲ್ಲಿ ಸೈಂಟ್ ಆಲೋಶಿಯಶ್ ಕಾಲೇಜಿನ ನಿವೃತ್ತ ಉಪನ್ಯಾಸಕರಾದ…

Read More

17 ಏಪ್ರಿಲ್ 2023, ಉಡುಪಿ: ಉಡುಪಿಯ ರಾಗ ಧನ ಸಂಸ್ಥೆಯು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ “ರಾಗರತ್ನಮಾಲಿಕೆ” 11ನೆಯ ಗೃಹ ಸಂಗೀತ ಮಾಲಿಕೆ ಮಣಿಪಾಲದ ಶ್ರೀ ನಾರಾಯಣ ಭಟ್ ಕಿನಿಲ ಹಾಗೂ ಶ್ರೀಮತಿ ಲೀಲಾ ಭಟ್ ಇವರ ಆತಿಥ್ಯ ಹಾಗೂ ಸಹ ಪ್ರಯೋಜಕತ್ವದಲ್ಲಿ ದಿನಾಂಕ 09-04-2023ರಂದು ಅವರ ಸ್ವಗೃಹ ‘ದೇವೀ ಕೃಪಾ’ದಲ್ಲಿ ನಡೆಯಿತು. ಪ್ರಧಾನ ಕಚೇರಿಯ ಪೂರ್ವದಲ್ಲಿ ಕೆಲವು ಎಳೆಯರಿಂದ ಅವರಿಗೆ ವೇದಿಕೆಯ ಅನುಭವ ಆಗಲೆಂಬ ಸದಾಶಯದಿಂದ ಹಾಡುಗಾರಿಕೆ ಏರ್ಪಡಿಸಲಾಗಿತ್ತು. ಕು. ಸಿಯಾ ಎ. ಬಲ್ಲಾಳ್, ಕು. ಪ್ರಣತಿ ಎಸ್. ಭಟ್, ಕು. ಧೃತಿ ಎಸ್. ಭಟ್, ಕು. ಸ್ವಸ್ತಿ ಎಂ. ಭಟ್, ಕು. ಅಚಲ ಎ. ರಾವ್, ಮಾಸ್ಟರ್ ತೀಕ್ಷಣ್ ಮತ್ತು ಕು. ರೋಶ್ನಿ ಎಸ್. ಶೆಟ್ಟಿ, ಕ್ರಮ ಪ್ರಕಾರವಾಗಿ ಒಂದು ವರ್ಣ, ಒಂದು ಕೃತಿ, ಒಂದು ದೇವರನಾಮ ಪಕ್ಕ ವಾದ್ಯಗಳೊಂದಿಗೆ ಅಚ್ಚುಕಟ್ಟಾಗಿ ಹಾಡಿ ಶ್ರೋತೃಗಳ  ಮೆಚ್ಚುಗೆ ಪಡೆದರು. ಆರಂಭದಲ್ಲಿ ಪ್ರಾರ್ಥನೆಯನ್ನು ಡಾ. ರಶ್ಮಿ ನಾಯಕ್ ಇವರು ಗಜಾನನಯುತಂ…

Read More

17 ಎಪ್ರಿಲ್ 2023, ಕಾರ್ಕಳ: ಏಕಚಿತ್ತವಾದ ಮನಸ್ಸಿದಿಂದ ಉತ್ತಮ ಕಾವ್ಯದ ಹುಟ್ಟು “ಋಷಿಯಲ್ಲದವ ಕವಿಯಾಗಲಾರ ಅನ್ನುವ ಮಾತಿದೆ. ಹೊರ ಜಗತ್ತನ್ನು ನೋಡುತ್ತಾ, ಅನುಭವಿಸುತ್ತಾ ಯಾರೂ ಕಾಣದೇ ಇರುವುದನ್ನು ಕವಿ ಕಾಣಬಲ್ಲ. ಅಂದರೆ ಬಹಿರ್ಮುಖವಾಗಿ ಕಾಣುವ ಸಂಗತಿಗಳೆಲ್ಲವನ್ನೂ ಅಂತರ್ಮುಖಿಯಾಗಿಸಿಕೊಂಡಾಗ ಅದು ಆತನಿಗೆ ಭಿನ್ನವಾಗಿ ಗೋಚರಿಸುತ್ತದೆ. ಅದನ್ನು ಋಷಿಯಂತೆ ಏಕ ಚಿತ್ತದ ಮನಸ್ಸಿನಿಂದ ಕಲೆಗಾರಿಕೆಯೊಂದಿಗೆ ಮಂಥನಕ್ಕೊಳಪಡಿಸಿದಾಗ ಉತ್ತಮ ಕಾವ್ಯ ಹುಟ್ಟಿಕೊಳ್ಳುತ್ತದೆ” ಎಂಬುದಾಗಿ ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಕನ್ನಡ ಉಪನ್ಯಾಸಕರಾದ ಡಾ. ಯೋಗೀಶ್ ಕೈರೋಡಿಯವರು ಇಲ್ಲಿ ಮಾತನಾಡುತ್ತಾ ತಿಳಿಸಿದರು. ಕನ್ನಡ ಸಂಘ ಕಾಂತಾವರ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ಇವುಗಳ ಜಂಟಿ ಸಹಯೋಗ ಹಾಗೂ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಕಾರ್ಕಳದ ಹೋಟೆಲ್ ಪ್ರಕಾಶ್ ಇದರ ಸಂಭ್ರಮ ಸಭಾಂಗಣದಲ್ಲಿ ನಡೆದ ತಿಂಗಳ ಅರಿವು ತಿಳಿವು ಉಪನ್ಯಾಸ ಕಾರ‍್ಯಕ್ರಮದಲ್ಲಿ ಅವರು “ಹೊಸಗನ್ನಡ ಕಾವ್ಯ – ಶಕ್ತಿ ಮತ್ತು ಸೌಂದರ‍್ಯ” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ದಾರ್ಶನಿಕರು ಕಾವ್ಯದ ಬಗ್ಗೆ…

Read More

ಯಕ್ಷಗಾನ ಗಂಡು ಮೆಟ್ಟಿನ ಕಲೆ ಎಂದು ಲಾಗಾಯ್ತಿನಿಂದಲೂ ಕರೆಸಿಕೊಂಡು ಮೆರೆದ ಕಮನೀಯ ಕಲೆ. ಇದರಲ್ಲಿ ಹೆಂಗಳೆಯರು ಎಲ್ಲ ಅಡೆತಡೆಗಳನ್ನೂ ಮೆಟ್ಟಿನಿಂತು ಗಂಡಸರಿಗೆ ಸಮದಂಡಿಯಾಗಿ ಬೆಳೆದಿದ್ದಾರೆ ಮತ್ತು ಯಕ್ಷ ಪ್ರಮೀಳೆಯರ ವಂಶವೂ ಬೆಳೆಯುತ್ತಲೇ ಇದೆ. ತೆಂಕು-ಬಡಗು ತಿಟ್ಟುಗಳೆಂಬ ಭೇದವಿಲ್ಲದೆ, ಸರ್ವಾಂಗ ಸುಂದರವಾದ ಸಮಷ್ಟಿ ಕಲೆ ಯಕ್ಷಗಾನದ ಎಲ್ಲ ವಿಭಾಗಗಳಲ್ಲೂ ಮಹಿಳೆಯರು ಮಿಂಚುತ್ತಿದ್ದಾರೆ. ಅದು ಚೆಂಡೆ, ಮದ್ದಳೆಯಿರಲಿ, ನಾಟ್ಯ, ಗಾಯನವಿರಲಿ, ಅರ್ಥಗಾರಿಕೆಯೇ ಇರಲಿ; ಇಲ್ಲಿ ಮಹಿಳಾ ಸ್ವಾತಂತ್ರ್ಯವಿದೆ ಮತ್ತು ಪ್ರೋತ್ಸಾಹವೂ ಇದೆ. ಲಿಂಗ ಸಮಾನತೆಯನ್ನು ಯಾವುದೇ ಅಡೆತಡೆಗಳಿಲ್ಲದೆ ಸಾಧಿಸಿದ ಕಲಾಪ್ರಕಾರ ಯಕ್ಷಗಾನವೆಂದರೂ ತಪ್ಪಲ್ಲ ಇಂತಹ ಶ್ರೀಮಂತ ಕಲೆಯಲ್ಲಿ ತನ್ನದೇ ಆದ ಛಾಪು ಮೂಡಿಸಿದ ಕಲಾವಿದೆ ಶ್ರೀಮತಿ ವಸುಂಧರಾ ಹರೀಶ್ ಶೆಟ್ಟಿ. 29.02.1985ರಂದು ಅಪ್ಪಯ್ಯ ರೈ ಮುಚ್ಚಿರ್ಕವೆ ಹಾಗೂ ಸುಶೀಲಾ ಎ ರೈ (ನಿವೃತ್ತ ಮುಖ್ಯೋಪಾಧ್ಯಾಯಿನಿ) ದಂಪತಿಯರ ಮಗಳಾಗಿ ವಸುಂಧರಾ ಹರೀಶ್ ಶೆಟ್ಟಿ ಅವರ ಜನನ. MA, BED in English Literature ಇವರ ವಿದ್ಯಾಭ್ಯಾಸ. ಬಾಲ್ಯದಲ್ಲಿ ನೋಡಿದ ಯಕ್ಷಗಾನ ಬಯಲಾಟಗಳು ಇವರು ಯಕ್ಷಗಾನ ರಂಗಕ್ಕೆ…

Read More

ನನ್ನ ಮನಸ್ಸಿನ ಜೊತೆಗೆ ಸಂವಾದ ನಡೆಸಲು ನಾನು ಬಳಸಿಕೊಂಡ ಮಾಧ್ಯಮ ನೃತ್ಯ ಕ್ಷೇತ್ರ. ನೃತ್ಯದ ಕಲಿಕೆಯ ಜೊತೆಗೆ, ಅದರ ವಿಭಿನ್ನವಾದ ಆಯಾಮಗಳನ್ನು ತಿಳಿದುಕೊಳ್ಳುತ್ತಾ, ಅದರೊಂದಿಗೆ ನಡೆಸುವ ಸೂಕ್ಷ್ಮ ಸಂವೇದನೆಯನ್ನು ತಿಳಿಸುವ ಸಾಧನವೇ ಮನಸ್ಸು. ಮನಸ್ಸು ಮರ್ಕಟನಂತೆ, ಈಗೊಮ್ಮೆ ಆಗೊಮ್ಮೆ ಬದಲಾಗುತ್ತಾ ಹೋಗುತ್ತದೆ. ಕೆಲವೊಂದನ್ನು ಸ್ವೀಕರಿಸುತ್ತಾ, ಇನ್ನೂ ಕೆಲವನ್ನು ವಿರೋಧಿಸುತ್ತಾ, ವಿಭಿನ್ನ ಗತಿಯೊಳಗೆ ಚಲಿಸುತ್ತದೆ. ನೃತ್ಯ ಮಾಧ್ಯಮವಿಂದು ಸಮಾಜದ ಒಳಿತು ಕೆಡುಕುಗಳನ್ನು ವೇದಿಕೆಯಲ್ಲಿ ಪ್ರಸ್ತುತಪಡಿಸುತ್ತಾ, ಸಾಮಾಜಿಕ ಬದಲಾವಣೆಗಳನ್ನು ತರುವ ನಿಟ್ಟಿನಲ್ಲಿ ತನ್ನದೇ ಆದ ಪ್ರಯತ್ನವನ್ನು ಮಾಡುತ್ತಾ ಪ್ರೇಕ್ಷಕರನ್ನು ಹೆಚ್ಚಿಸಿಕೊಳ್ಳುತ್ತಿದೆ. ನೃತ್ಯವು ಮನೋವಿಕಾರಗಳನ್ನು ಶಮನ ಮಾಡಿ, ಮಾನಸಿಕ ಆಘಾತಗಳನ್ನು ನಿವಾರಿಸಿ, ವ್ಯಕ್ತಿಗಳ ಆತ್ಮಸಂವೇದನೆಯನ್ನು ಉತ್ತಮ ರೀತಿಯಲ್ಲಿ ಪ್ರಚುರಪಡಿಸುವ ಮತ್ತು ವ್ಯಕ್ತಿಯಿಂದ ವ್ಯಕ್ತಿಗೆ ವಿಭಿನ್ನವಾದ ಫಲಿತಾಂಶಗಳನ್ನು ನೀಡುತ್ತಾ ಬರುತ್ತಿರುವ ಶ್ರೇಷ್ಠ ಮಾಧ್ಯಮಗಳಲ್ಲೊಂದು. ‘ನನ್ನ ಮಗನನ್ನು ನೃತ್ಯಪಟುವಾಗಿ ರೂಪಿಸಿಯೇ ತೀರುತ್ತೇನೆ’ ಎಂಬ ಹಠ ಹೊತ್ತ ಕೆಚ್ಚೆದೆಯ ತಾಯಿಯ ಆಸೆಯಂತೆ ನೃತ್ಯವನ್ನು ನನ್ನ ಆರನೆಯ ವಯಸ್ಸಿನಲ್ಲಿಯೇ ಕಲಿಯಲು ಪ್ರಾರಂಭಿಸಿದೆ. ಗಾತ್ರದಲ್ಲಿ ಸಣ್ಣಕ್ಕಿದ್ದ ನನ್ನನ್ನು ನೋಡಿದ ನೃತ್ಯ ಗುರುಗಳು, “ಇನ್ನೊಂದು…

Read More