Author: roovari

ಹುಬ್ಬಳ್ಳಿ : ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ಕಾಸರಗೋಡು ಜಿಲ್ಲೆಯ ಅಧ್ಯಕ್ಷರಾಗಿ ಸಾಹಿತಿ ಹಾಗೂ ಪತ್ರಕರ್ತ ವಿರಾಜ್ ಅಡೂರು ಅವರನ್ನು ನೇಮಕ ಮಾಡಲಾಗಿದೆ ಎಂದು ಸಂಘಟನೆಯ ಕರ್ನಾಟಕ  ರಾಜ್ಯ ಸಂಚಾಲಕರಾದ ಕೃಷ್ಣಮೂರ್ತಿ ಕುಲಕರ್ಣಿ ತಿಳಿಸಿದ್ದಾರೆ. ವಿರಾಜ್ ಅಡೂರು ಅವರು ಕಾಸರಗೋಡು ಜಿಲ್ಲೆಯ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅನೇಕ ವರ್ಷಗಳಿಂದ ಕ್ರಿಯಾಶೀಲರಾಗಿದ್ದಾರೆ. ಇವರು ಬರೆದ ಚುಟುಕುಟುಕು, ಬಾನುಲಿಯಿತು, ನಗಿಸುವ ಚಿತ್ರಗಳು, ಗಾದೆ ಗಮ್ಮತ್ತು (ನಾಲ್ಕು ಭಾಗಗಳಲ್ಲಿ), ಉಪನಯನ ಮೊದಲಾದ ಕೃತಿಗಳು ಪ್ರಕಟಗೊಂಡಿವೆ. ಇವರಿಗೆ ಕೇರಳ ರಾಜ್ಯ ಮಟ್ಟದ ಮಾಧ್ವ ಬ್ರಾಹ್ಮಣ ‘ಅತ್ಯುತ್ತಮ ಚಿತ್ರ ಕಲಾವಿದ’ ಪ್ರಶಸ್ತಿ, ಕಾಸರಗೋಡಿನ ಕನ್ನಡ ಭವನದ ‘ಕನ್ನಡ ಪಯಸ್ವಿನಿ’ ಪ್ರಶಸ್ತಿ, ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘದಿಂದ ‘ಗಡಿನಾಡ ಚೈತನ್ಯ’ ಪ್ರಶಸ್ತಿ, ಕೋಟೆಗದ್ದೆ ಸೀತಾರಾಮ ಅಡಿಗ ಸ್ಮಾರಕ ‘ಪಾಶುಪತ ಸಾಹಿತ್ಯ ಪ್ರಶಸ್ತಿ’ ಸಹಿತ ಅನೇಕ ಪ್ರಶಸ್ತಿಗಳು ದೊರೆತಿವೆ. ಕೃಷಿ, ಶಿಕ್ಷಣ, ಸಾಹಿತ್ಯ, ವ್ಯಂಗ್ಯಚಿತ್ರ ರಚನೆ, ಮಕ್ಕಳ ಶಿಬಿರ ಸಂಯೋಜನೆ, ಮಕ್ಕಳ ಶಿಬಿರ ಸಂಪನ್ಮೂಲ ವ್ಯಕ್ತಿಯಾಗಿ ಕ್ರಿಯಾಶೀಲರಾಗಿದ್ದಾರೆ. ಇವರು ರಚಿಸಿದ…

Read More

ದಾವಣಗೆರೆ : ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಅಂಗ ಸಂಸ್ಥೆ ಯಕ್ಷರಂಗ ಯಕ್ಷಗಾನ ಸಂಸ್ಥೆ, ಕರಾವಳಿ ಮಿತ್ರ ಮಂಡಳಿ ಮತ್ತು ದೃಶ್ಯ ಕಲಾ ಮಹಾವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ದಿನಾಂಕ 25-07-2024ರ ಗುರುವಾರ ಸಂಜೆ ಗಂಟೆ 6-30ಕ್ಕೆ ವಿದ್ಯಾನಗರ ರಸ್ತೆಯ ದೃಶ್ಯ ಕಲಾ ಮಹಾವಿದ್ಯಾಲಯದ ಆವರಣದ ಒಳಾಂಗಣದಲ್ಲಿ ಉಡುಪಿ ಜಿಲ್ಲೆಯ ಹಾಲಾಡಿಯ ಶ್ರೀ ಮಹಾಗಣಪತಿ ಪ್ರವಾಸಿ ಯಕ್ಷಗಾನ ಮಂಡಳಿಯ ವೃತ್ತಿನಿರತ ಪ್ರಸಿದ್ಧ ಯಕ್ಷಗಾನ ಕಲಾವಿದರಿಂದ ಕೀರ್ತಿಶೇಷ ಹಲಸನಹಳ್ಳಿ ನರಸಿಂಹಶಾಸ್ತ್ರಿ ವಿರಚಿತ ‘ಚಂದ್ರಹಾಸ ಚರಿತ್ರೆ’ ಪೌರಾಣಿಕೆ ಕಥಾನಕದ ಯಕ್ಷಗಾನ ಉಚಿತ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಯಕ್ಷರಂಗ ಸಂಸ್ಥೆಗಳ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈಯವರು ತಿಳಿಸಿದ್ದಾರೆ. ಕರ್ನಾಟಕ ಕರಾವಳಿ ಜಿಲ್ಲೆಗಳ ವಿಶ್ವವಿಖ್ಯಾತ, ಐತಿಹಾಸಿಕ ಪರಂಪರೆಯ ಅಪ್ಪಟ ಜನಪದ ಕಲೆಯಾದ ಯಕ್ಷಗಾನವನ್ನು ವಾಣಿಜ್ಯ ನಗರಿ ದಾವಣಗೆರೆಯಲ್ಲಿ ವೈಭವೀಕರಿಸುವ ಸದುದ್ದೇಶದಿಂದ ಹಮ್ಮಿಕೊಳ್ಳಲಾದ ಈ ವೈಶಿಷ್ಟ ಪೂರ್ಣ ಯಕ್ಷಗಾನ ಪ್ರದರ್ಶನಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಬೇಕಾಗಿ ಯಕ್ಷರಂಗದ ಅಧ್ಯಕ್ಷರಾದ ಮಲ್ಯಾಡಿ ಪ್ರಭಾಕರ ಶೆಟ್ಟಿ ವಿನಂತಿಸಿದ್ದಾರೆ.

Read More

ಮೈಸೂರು : ಸಮತಾ ಅಧ್ಯಯನ ಕೇಂದ್ರದಿಂದ ವಿಜಯಾ ದಬ್ಬೆ ಸ್ಮರಣಾರ್ಥ ನಡೆಸಿದ ಕಾವ್ಯ ಹಾಗೂ ಪ್ರಬಂಧ ಸ್ಪರ್ಧೆಗಳ ಬಹುಮಾನ ವಿಜೇತರಿಗೆ ದಿನಾಂಕ 20-07-2024ರಂದು ಸರಸ್ವತಿಪುರಂನ ಮಾನಸ ಗಂಗೋತ್ರಿಯ ಯೂತ್ ಹಾಸ್ಟೆಲ್‌ನಲ್ಲಿ ಆಯೋಜಿಸಿದ್ದ ‘ಕಾವ್ಯ ಮತ್ತು ಪ್ರಬಂಧ ಕಮ್ಮಟ’ವು ಯುವ ಬರಹಗಾರರಿಗೆ ಮಾರ್ಗದರ್ಶನ ನೀಡುವಲ್ಲಿ ಯಶಸ್ವಿಯಾಯಿತು. ಅನಿಸಿದ್ದನ್ನು ಅನುಭವಿಸಿದ್ದನ್ನು ಸಾಹಿತ್ಯದ ಮೂಲಕ ಹೇಳುವ ಧೈರ್ಯವನ್ನು ಬೆಳೆಸಿಕೊಳ್ಳಲು ಬೇಕಾದ ಶಕ್ತಿಯನ್ನು ತುಂಬಿತು. ಕಾವ್ಯವೆಂದರೆ ಹೀಗೇ ಇರಬೇಕು ಎಂಬ ಚೌಕಟ್ಟಿಲ್ಲ. ಹೊಸದಾಗಿ ಕಟ್ಟುತ್ತಾ ಹೋಗಬೇಕು. ತವಕ-ತಲ್ಲಣ-ಭಾವನೆಗಳನ್ನು ಪರಿಣಾಮಕಾರಿಯಾಗಿ ಕಟ್ಟಿ ಕೊಡಬೇಕು. ಬರೆಯಬೇಕು, ವಿಮರ್ಶೆಯನ್ನು ಓದುಗರು ಹಾಗೂ ಸಮಾಜಕ್ಕೆ ಬಿಟ್ಟು ಬಿಡಬೇಕು ಎಂಬುದು ಯುವ ಕವಿಗಳು ಹಾಗೂ ಕವಯತ್ರಿಯರಿಗೆ ‘ಕಾವ್ಯ ಸಮಯ’ದಲ್ಲಿ ಕವಯತ್ರಿಯರಿಂದ ಬಂದ ಸಲಹೆಗಳಿವು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕವಯತ್ರಿ ಎಚ್.ಆರ್. ಸುಜಾತಾ ಮಾತನಾಡಿ, “ಸಾಹಿತ್ಯದ ಓದು ಎನ್ನುವುದು ನಮ್ಮ ಒಳಗು-ಹೊರಗಿನ ಮತ್ತು ಸಮಾಜದ ಒಳಗೂ ಇರುವ ಹೊಂದಾಣಿಕೆ. ನಮ್ಮ ಬರಹಕ್ಕೂ-ಓದುಗರ ತಿಳಿವಳಿಕೆಗೂ ಸಾಮ್ಯತೆ ಕಂಡುಬಂದಲ್ಲಿ ಒಂದು ಗುರುತು ಉಳಿಯುತ್ತದೆ. ಮರೆಯಲಾಗದ ಕೆಲವು ಚಿತ್ರಣಗಳು ನಮ್ಮ…

Read More

ಮೂಡುಬಿದಿರೆ: ಆಮ್ನಾಯ ಯಕ್ಷ ಸಂಸ್ಕೃತಿ ಬಳಗ ಗಾಳಿಮನೆ ಸಂಘಟನೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಕತ್ವದಲ್ಲಿ ಆಯೋಜಿಸಿದ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಅನುಸ್ಕೃತಿ ಮತ್ತು ಕುಂಬ್ಳೆ ಶ್ರೀಧರ ರಾವ್ ನುಡಿನಮನ ಕಾರ್ಯಕ್ರಮವು ದಿನಾಂಕ 20-07-2024ರ ಶನಿವಾರದಂದು ಮೂಡುಬಿದಿರೆಯ ಸಂಪಿಗೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಯಕ್ಷಗಾನ ವಿದ್ವಾಂಸ ಡಾ. ಪ್ರಭಾಕರ ಜೋಶಿ ಮಾತನಾಡಿ “ಯಕ್ಷಗಾನ ಕಲೆ ಹಾಗೂ ಕಲಾವಿದರನ್ನು ಕರಾವಳಿಗೆ ಸೀಮಿತಗೊಳಿಸುವುದು ಸಲ್ಲದು. ಯಕ್ಷಗಾನ ಪ್ರಸಂಗ ಸಾಹಿತ್ಯ, ಆಶು ಮಾತುಗಾರಿಕೆ, ಹಾಡುಗಾರಿಕೆ ಇವೆಲ್ಲವನ್ನೂ ಇಡಿಯ ಕನ್ನಡ ನಾಡಿನ ಸಾಹಿತ್ಯ, ಸಂಗೀತ ರಂಗಗಳ ಸಂದರ್ಭ ಸಮಾನವಾಗಿ ಪರಿಗಣಿಸಬೇಕಾಗಿದೆ.” ಎಂದು ಅಭಿಪ್ರಾಯಪಟ್ಟರು. ಆಮ್ನಾಯ ಯಕ್ಷ ಸಂಸ್ಕೃತಿ ಬಳಗದ ಸಂಸ್ಥಾಪಕ ಡಾ. ವಿದ್ವಾನ್ ವಿನಾಯಕ ಭಟ್ಟ ಗಾಳಿಮನೆ ಮಾತನಾಡಿ “ಕುಂಬ್ಳೆ ಶ್ರೀಧರ ರಾವ್ ಇವರು ಭಾವುಕ, ಸರಳ, ಹೃದ್ಯ ಮಾತುಗಾರಿಕೆಯ ಹಾಗೂ ನಾಟಕೀಯತೆ ಇಲ್ಲದ ಪ್ರಸ್ತುತಿಯ ಕಲಾವಿದ. ಎಲ್ಲರನ್ನೂ ತನ್ನವರೆಂದು ಬಗೆವ ಗುಣದವರಾಗಿದ್ದರು.” ಎಂದರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾದ ತಲ್ಲೂರು ಶಿವರಾಮ ಶೆಟ್ಟಿ ಅವರು…

Read More

ಮೈಸೂರು : ಹಂಪಿ ಕನ್ನಡ ವಿ.ವಿ.ಯ ಭಾಷಾಂತರ ಅಧ್ಯಯನ ವಿಭಾಗದ ನಿವೃತ್ತ ಪ್ರಾಧ್ಯಾಪಕಿ ಲೇಖಕಿ ಡಾ. ಎಂ. ಉಷಾರವರಿಗೆ ಪುಣೆಯ ಸಿಂಬಯಾಸಿಸ್ ಕಾನೂನು ಕಾಲೇಜಿನ ಡೀನ್ ಡಾ. ಶಶಿಕಲಾ ಗುರುಪುರ ಇವರು ದಿನಾಂಕ 21-07-2024ರಂದು 2024ನೇ ಸಾಲಿನ ‘ಡಾ. ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿ’ಯನ್ನು ಪ್ರದಾನ ಮಾಡಿದರು. ಶಿವಮೊಗ್ಗದ ‘ಅಹರ್ನಿಶಿ ಪ್ರಕಾಶನ’ ಪ್ರಕಟಿಸಿರುವ ಉಷಾ ಅವರ ‘ಬಾಳ ಬಟ್ಟೆ’ ಕಾದಂಬರಿಯನ್ನು ‘ಸಮತಾ ಅಧ್ಯಯನ ಕೇಂದ್ರ’ವು ಪ್ರಶಸ್ತಿಗೆ ಆಯ್ಕೆ ಮಾಡಿತ್ತು. ಸರಸ್ವತಿಪುರಂನ ರೋಟರಿ ಮೈಸೂರು ಪಶ್ಚಿಮ ಸಭಾಂಗಣದಲ್ಲಿ ರೂ.25,000/- ನಗದು ಬಹುಮಾನ ಹಾಗೂ ಫಲಕ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಪ್ರದಾನ ಮಾಡಿದ ಡಾ. ಶಶಿಕಲಾ ಗುರುಪುರ ಇವರು ಮಾತನಾಡಿ “ಸ್ತ್ರೀ ವಾದದ ಒಳನೋಟವನ್ನು ಸರಳವಾಗಿ, ಶಿಸ್ತುಬದ್ಧವಾಗಿ ಅಳವಡಿಸಿಕೊಂಡಿರುವವರ ಸಂಖ್ಯೆ ಕಡಿಮೆ. ಅಂತಹವರ ಸಾಲಿನಲ್ಲಿ ಡಾ. ವಿಜಯಾ ದಬ್ಬೆ ಪ್ರಮುಖರು. ದಬ್ಬೆಯವರು ಜಗತ್ತಿನ ಪ್ರಭಾವಶಾಲಿ ಸ್ತ್ರೀ ವಾದಿಗಳೊಂದಿಗೆ ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ” ಎಂದು ಹೇಳಿದರು. ಈ ಸಮಾರಂಭದಲ್ಲಿ ವಿಜಯಾ ದಬ್ಬೆ ಕುರಿತು ಒಡನಾಡಿಯೂ ಆದ ನಿವೃತ್ತ…

Read More

ಕೋಟ : ಡಾ. ಶಿವರಾಮ ಕಾರಂತ ಪ್ರತಿಷ್ಠಾನ (ರಿ.) ಕೋಟ, ಡಾ. ಶಿವರಾಮ ಕಾರಂತ ಟ್ರಸ್ಟ್ (ರಿ) ಉಡುಪಿ, ಕೋಟತಟ್ಟು ಗ್ರಾಮ ಪಂಚಾಯತ್ ಆಶ್ರಯದಲ್ಲಿ ಯಕ್ಷಸುಮನಸ ಹವ್ಯಾಸಿ ಕಲಾರಂಗ (ರಿ) ಕೋಟ ಇವರ ಸಹಯೋಗದಲ್ಲಿ ‘ಶ್ವೇತ ಕುಮಾರ ಚರಿತ್ರೆ’ ಯಕ್ಷಗಾನ ಪ್ರದರ್ಶನ ಕಾರ್ಯಕ್ರಮವು ದಿನಾಂಕ 21-07-2024 ರಂದು ಕೋಟದ ಶಿವರಾಮ ಕಾರಂತ ಥೀಮ್ ಪಾರ್ಕ್ ನಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಡಾ. ಶಿವರಾಮ ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಶ್ರೀ ಆನಂದ್ ಸಿ. ಕುಂದರ್  ಮಾತನಾಡಿ “ಯಕ್ಷಗಾನ ಹವ್ಯಾಸಿ ಕಲಾತಂಡದ ಮೂಲಕ ಹೊಸ ಕಲಾವಿದರ ಸೃಷ್ಟಿ ಸಾಧ್ಯ. ಯಕ್ಷಗಾನ ನಮಗೆ ಜ್ಞಾನ ವೃದ್ಧಿ ಜೊತೆಗೆ ಬದುಕಿಗೆ ಬೆಳಕು ಚೆಲ್ಲುವ ನೀತಿಗಳನ್ನು ಸಾರುತ್ತದೆ. ಮಕ್ಕಳಲ್ಲಿ ಯಕ್ಷಗಾನದ ಅಭಿರುಚಿ ಮೂಡಿಸುವ ಕೆಲಸವಾಗಬೇಕಿದೆ.” ಎಂದು ಹೇಳಿದರು. ಈ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ಯಕ್ಷಗಾನ ಪ್ರಸಾಧನ ಪ್ರಮುಖ ದಿ. ಬಾಲಕೃಷ್ಣ ನಾಯಕ್ ಹಂದಾಡಿ, ಯಕ್ಷಗಾನ ಭಾಗವತರಾದ ದಿ. ಸುಬ್ರಹ್ಮಣ್ಯ ಧಾರೇಶ್ವರ್, ವೈದ್ಯರು ಹಾಗೂ ಗಾಯಕರಾದ ದಿ. ಡಾ. ಸತೀಶ್…

Read More

ಬಂಟ್ವಾಳ : ಏರ್ಯ ಆಳ್ವ ಫೌಂಡೇಷನ್ ಮತ್ತು ಕನ್ನಡ ಸಾಹಿತ್ಯ ಪರಿಷತ್ ಬಂಟ್ವಾಳ ಇದರ ಸಹಯೋಗದಲ್ಲಿ ‘ವಿದ್ಯಾರ್ಥಿಗಳ ಸಾಹಿತ್ಯ ಕಮ್ಮಟ’ವನ್ನು ದಿನಾಂಕ 28-07-2024ರಂದು ಬೆಳಗ್ಗೆ ಗಂಟೆ 9-30ಕ್ಕೆ ಏರ್ಯಬೀಡಿನಲ್ಲಿ ಹಮ್ಮಿಕೊಳ್ಳಲಾಗಿದೆ. ಶ್ರೀ ಏರ್ಯ ಬಾಲಕೃಷ್ಣ ಹೆಗ್ಡೆ ಇವರ ಗೌರವ ಉಪಸ್ಥಿತಿಯಲ್ಲಿ ಶ್ರೀಮತಿ ಆನಂದಿ ಎಲ್. ಆಳ್ವ ಇವರು ದೀಪ ಪ್ರಜ್ವಲನೆ ಮಾಡಿ ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಬೆಳಗ್ಗೆ ಗಂಟೆ 10-30ರಿಂದ ‘ಏರ್ಯರ ನೆನಪು ಮತ್ತು ಓದುವ ಹವ್ಯಾಸ’ ಇದರ ಬಗ್ಗೆ ಶ್ರೀ ಮಹಾಬಲೇಶ್ವರ ಹೆಬ್ಬಾರ್ ಮೊಡಂಕಾಪು, ‘ಕಥಾ ರಚನೆ’ ಬಗ್ಗೆ ಶ್ರೀಮತಿ ತುಳಸಿ ಕೈರಂಗಳ ಮತ್ತು ‘ಕವಿತೆ ರಚನೆ’ ಬಗ್ಗೆ ಶ್ರೀ ಜಯರಾಮ ಪಡ್ರೆ ಮಾತನಾಡಲಿರುವರು. ಬಳಿಕ ಸಮಾರೋಪ ಸಮಾರಂಭ ನಡೆಯಲಿದೆ.

Read More

ಬೆಂಗಳೂರು: ಲೇಖಕಿ ಬಾನು ಮುಸ್ತಾಕ್ ಇವರ ‘ಹಸೀನಾ ಮತ್ತು ಇತರ ಕತೆಗಳು’ ಕಥಾ ಸಂಕಲನದ ಇಂಗ್ಲಿಷ್ ಅನುವಾದಿತ ಕೃತಿ ‘ಹಸೀನಾ ಆ್ಯಂಡ್ ಅದರ್ ಸ್ಟೋರೀಸ್’ ಕೃತಿಯು 2024ನೇ ಸಾಲಿನ ‘ಇಂಗ್ಲಿಷ್ ಪೆನ್’ ಪ್ರಶಸ್ತಿಗೆ ಆಯ್ಕೆಯಾಗಿದೆ. ಈ ಕೃತಿಯನ್ನು ಲೇಖಕಿ ದೀಪಾ ಬಸ್ತಿ ಅನುವಾದಿಸಿದ್ದಾರೆ. ಕನ್ನಡ ಸೇರಿ ಹತ್ತು ಭಾಷೆಗಳಿಂದ ಇಂಗ್ಲಿಷ್‌ಗೆ ಅನುವಾದಗೊಂಡ 16 ಕೃತಿಗಳು ಈ ಪ್ರಶಸ್ತಿಗೆ ಆಯ್ಕೆಯಾಗಿವೆ. ಇದೇ ಮೊದಲ ಬಾರಿಗೆ ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದಗೊಂಡ ಕೃತಿಗೆ ಈ ಪ್ರಶಸ್ತಿ ಲಭಿಸಿದೆ ಎಂದು ‘ಇಂಗ್ಲಿಷ್ ಪೆನ್’ ಸಂಘಟನೆ ತಿಳಿಸಿದೆ.

Read More

ಸಾಧಿಸಿದರೆ ಏನನ್ನು ಗಳಿಸಬಹುದು ಎಂಬುದಕ್ಕೆ ಸಾಕ್ಷಿ 75ರ ಹರೆಯದ ನೃತ್ಯ ಕಲಾವಿದೆ ಗುರು ಡಾ. ವಸುಂಧರಾ ದೊರೆಸ್ವಾಮಿ ಇವರು. ಯುವ ನೃತ್ಯ ಕಲಾವಿದೆಯರು ನಾಚಿಕೊಳ್ಳುವಂತೆ ತನ್ನ ಅಂಗಸೌಷ್ಟವ, ಅಭಿನಯ, ಅಡವುಗಳ ಪಕ್ವತೆ, ಅಂಗ ಶುದ್ಧತೆ ಇವುಗಳಿಗೆ ಪೂರಕವಾಗಿ ಹೊಸ ಹೊಸ ಆವಿಷ್ಕಾರವನ್ನು ಮಾಡಿ ‘ವಸುಂಧರಾ ಶೈಲಿ’ ಎಂಬುದನ್ನು ಕಲಾ ಪ್ರಪಂಚಕ್ಕೆ ನೀಡಿದ ಗುರು ಡಾ. ವಸುಂಧರಾ ದೊರೆಸ್ವಾಮಿ ನಿಜಕ್ಕೂ ಶ್ಲಾಘನೀಯರು. ಅವರು ಇತ್ತೀಚೆಗೆ ನಾದನೃತ್ಯ ಸ್ಕೂಲ್ ಆಫ್ ಡಾನ್ಸ್ ಮಂಗಳೂರು ಇದರ ನಿರ್ದೇಶಕಿ ಹಾಗೂ ಗುರುಗಳ ಶಿಷ್ಯೆ ವಿದುಷಿ ಭ್ರಮರಿ ಶಿವಪ್ರಕಾಶ ಇವರು ಏರ್ಪಡಿಸಿದ ಆರು ದಿನಗಳ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಫಲಾನುಭವಿಗಳಾದ ತನ್ನ ಪ್ರಶಿಷ್ಯರುಗಳಲ್ಲಿ ಹೊಸತನವನ್ನು ಮೂಡಿಸುವಲ್ಲಿ ಯಶಸ್ವಿಯಾದರು. ಡಾ. ವಸುಂಧರಾ ಅವರು  ಮಂಗಳೂರಿನ ಪ್ರಶಿಷ್ಯರೊಂದಿಗೆ ಉಡುಪಿ, ಬೆಂಗಳೂರು ಹಾಗೂ ಕೋಲ್ಕತ್ತಾದ ಶಿಷ್ಯ-ಪ್ರಶಿಷ್ಯರೂ ಈ ಕಾರ್ಯಾಗಾರದಲ್ಲಿ ಭಾಗಿಯಾದರು. ಪ್ರತೀದಿನವೂ ಆರಂಭದಲ್ಲಿ ನೃತ್ಯಕ್ಕೆ ಬೇಕಾದ ಉಪಯುಕ್ತ ಯೋಗಾಭ್ಯಾಸದಿಂದ ಆರಂಭಿಸಿ ನೃತ್ಯಬಂಧಗಳನ್ನು ಹೇಳಿಕೊಡುವಲ್ಲಿ ಡಾ. ವಸುಂಧರಾ ದೊರೆಸ್ವಾಮಿ ಯಶಸ್ವಿಯಾದರು. ಮೊದಲನೆಯ ದಿನ…

Read More

ಕಾಸರಗೋಡು: ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಕಾಸರಗೋಡು ಸಂಸ್ಥೆಯ ನೇತೃತ್ವದಲ್ಲಿ ‘ಕರ್ನಾಟಕ ಸಂಭ್ರಮ 50ರ ಸವಿನೆನಪು 2023-24’ನೇ ಕಲಾಪೋಷಕರ ಸಹಕಾರದೊಂದಿಗೆ 4ದಿನಗಳ ಕಾಲ ಹಮ್ಮಿಕೊಳ್ಳಲಾದ ‘ಸಿರಿಬಾಗಿಲು ಯಕ್ಷವೈಭವ’ದ ಉದ್ಘಾಟನಾ ಸಮಾರಂಭವು ದಿನಾಂಕ 17-07-2024 ರಂದು ನಡೆಯಿತು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮಾವನ್ನು ದೀಪಬೆಳಗಿಸಿ ಉದ್ಘಾಟಿಸಿದ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಮಾತನಾಡಿ “ಸಿರಿಬಾಗಿಲು ಪ್ರತಿಷ್ಠಾನವು ಕಾಸರಗೋಡಿನಲ್ಲಿ ಯಕ್ಷಗಾನ, ಕನ್ನಡ ಭಾಷೆ ಹಾಗೂ ಸಂಸ್ಕೃತಿಯ ಉಳಿವಿಗೆ ನೀಡುತ್ತಿರುವ ಕೊಡುಗೆ ಅಪಾರವಾದುದು. ಮೂವತ್ತಕ್ಕೂ ಹೆಚ್ಚು ಹವ್ಯಾಸಿ ತಂಡಗಳಿಗೆ ಯಕ್ಷಗಾನ ಪ್ರದರ್ಶನ ನೀಡಲು ವೇದಿಕೆ ಕಲ್ಪಿಸಿ ಪ್ರೋತ್ಸಾಹಿಸುತ್ತಿರುವುದು ಅತ್ಯುತ್ತಮ ಕೆಲಸ.” ಎಂದು ಶ್ಲಾಘಿಸಿದರು. ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಮಾತನಾಡಿ “ಕನ್ನಡದ ಶುದ್ದಭಾಷೆಯನ್ನು ಉಳಿಸುವಲ್ಲಿ ಯಕ್ಷಗಾನದ ಪಾತ್ರ ಮಹತ್ತರವಾದುದು. ನಮ್ಮ ಪುರಾಣ ಕಥೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕಾರ್ಯವನ್ನು ಯಕ್ಷಗಾನ ನಿರ್ವಹಿಸುತ್ತಿದೆ. ಗಡಿನಾಡು ಕಾಸರಗೋಡಿನಲ್ಲಿ ಮಲೆಯಾಳಿ ಸೆರಗಲ್ಲಿ ಕನ್ನಡವನ್ನು…

Read More