Author: roovari

ಎಡನೀರು : ಶ್ರೀ ಎಡನೀರು ಮಠದ ಚಾತುರ್ಮಾಸ್ಯ ಸಭಾಂಗಣದಲ್ಲಿ ‘ಗಮಕ ಶ್ರಾವಣ’ದ ಸರಣಿ ಕಾರ್ಯಕ್ರಮವು ದಿನಾಂಕ 09 ಆಗಸ್ಟ್ 2024ರಂದು ಉದ್ಘಾಟನೆಗೊಂಡಿತು. ಈ ಸರಣಿ ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿ ಆಶೀರ್ವಚನ ನೀಡಿದ ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರು “ಗಮಕ ಕಲೆ ಅತ್ಯಂತ ಪ್ರಾಚೀನವಾದುದು. ಹಿಂದೆ ರಾಜಾಶ್ರಯವಿದ್ದ ಕಾಲದಲ್ಲಿ ಇದು ಅತ್ಯಂತ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಭಾರತೀಯ ಸಂಸ್ಕೃತಿಯನ್ನು ಜನರಿಗೆ ಯಥಾವತ್ತಾಗಿ ಪರಿಚಯಿಸುವುದಕ್ಕೆ ಇದು ಬಹಳ ಉತ್ತಮವಾದ ಮಾಧ್ಯಮ. ಗಮಕ ಕಲಾಪರಿಷತ್ತು ಮತ್ತು ಸಿರಿಗನ್ನಡ ವೇದಿಕೆಯ ಕೇರಳ ಗಡಿನಾಡ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಶ್ರಾವಣ ಮಾಸದ ಪರ್ವಕಾಲದಲ್ಲಿ ವಿಶೇಷವಾಗಿ ರಾಮಾಯಣದ ಪುಣ್ಯಕಥೆಯನ್ನು ಪ್ರಚಾರಗೊಳಿಸಿ ಜನರಲ್ಲಿ ಸಚ್ಚಾರಿತ್ರ್ಯವನ್ನು ಬೆಳೆಸುವ ಮಹತ್ಕಾರ್ಯವನ್ನು ಮಾಡುತ್ತಿರುವುದು ಸ್ತುತ್ಯರ್ಹವಾಗಿದೆ. ಇದು ಭಾರತೀಯ ಸಂಸ್ಕೃತಿಯ ಜೀವಾಳವೂ ಹೌದು” ಎಂದು ಅಭಿಪ್ರಾಯಪಟ್ಟರು. ಸಮಾರಂಭದ ಅಧ್ಯಕ್ಷತೆಯನ್ನು ಗಮಕಕಲಾ ಪರಿಷತ್ತಿನ ಅಧ್ಯಕ್ಷರಾದ ಟಿ. ಶಂಕರನಾರಾಯಣ ಭಟ್ಟರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಂಶುಪಾಲರೂ ಶ್ರೀ ಮಠದ ಆಡಳಿತಾಧಿಕಾರಿಗಳೂ ಆಗಿರುವ ಶ್ರೀ…

Read More

ಬೆಂಗಳೂರು : ಬೆಂಗಳೂರಿನ ‘ಅಂತರಂಗ’ ಪ್ರಸ್ತುತಪಡಿಸುವ ‘ಕಾಯುವ ಕಾಯಕ’ ನಾಟಕವು ದಿನಾಂಕ 17 ಆಗಸ್ಟ್ 2024 ರಂದು ಬೆಂಗಳೂರಿನ ನರಸಿಂಹ ರಾಜ ಕಾಲೊನಿ, ಎನ್.ಆರ್. ಕಾಲೊನಿ ಬಸ್ ನಿಲ್ದಾಣದ ಎದುರು ಡಾ. ಸಿ. ಅಶ್ವತ್ಥ್ ಕಲಾಭವನದಲ್ಲಿ ಪ್ರದರ್ಶನಗೊಳ್ಳಲಿದೆ. ಖ್ಯಾತ ಹನಿಗವನ ಕವಿ ಹೆಚ್. ಡುಂಡಿರಾಜ್ ವಿರಚಿತ ಈ ನಾಟಕದ ವಿನ್ಯಾಸ ಮತ್ತು ನಿರ್ದೇಶನವನ್ನು ಖ್ಯಾತ ನಿರ್ದೇಶಕಿ ಅರ್ಚನಾ ಶ್ಯಾಮ್ ನಿರ್ವಹಿಸಿದ್ದಾರೆ. ನಾಟಕವು ಕಾಯುವಿಕೆಯೆಂಬ ಪರಿಕಲ್ಪನೆಯಲ್ಲಿ ನಿರೀಕ್ಷೆ, ಹುಡುಕಾಟ, ಸಂಬಂಧಗಳ ಸಂಕೀರ್ಣತೆ, ಮನಸಿನ ತೊಳಲಾಟ, ಅಸಹಾಯಕತೆ ಇವೆಲ್ಲವುಗಳನ್ನು ಒಳಗೊಂಡಿದೆ. ವೀಕ್ಷಕರು ‘ಬುಕ್ ಮೈ ಶೋ’ ನಲ್ಲಿ ಆನ್‌ಲೈನ್ ಬುಕಿಂಗ್ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಅಂಕಲ್ ಶ್ಯಾಮ್- 98809 14509 ಮತ್ತು ಮುರಳೀಧರ್ – 99869 11321 ಇವರನ್ನು ಸಂಪರ್ಕಿಸಬಹುದು.

Read More

ಮೈಸೂರು: ರಂಗ ಸಾಂಸ್ಕೃತಿಕ ಟ್ರಸ್ಟ್ ಹಾಗೂ ಸಂಸ್ಕೃತಿಕ ಪ್ರಕಾಶನ ಇದರ ಸಂಯುಕ್ತ ಆಶ್ರಯದಲ್ಲಿ ರಂಗ ನಟ ಹಾಗೂ ಲೇಖಕ  ಬಿ. ಎಂ. ಮಹಾದೇವ್ ಮೂರ್ತಿ ವಿರಚಿತ ‘ಸವೆದ ಪಯಣ’ ಆತ್ಮಕಥೆ ಮತ್ತು ‘ಬಾಳತೇರು’ ಕವನ ಸಂಕಲನದ ಲೋಕಾರ್ಪಣಾ ಸಮಾರಂಭವು 07 ಜುಲೈ2024ರಂದು ಮೈಸೂರು ರಂಗಾಯಣದ ಶ್ರೀರಂಗ ವೇದಿಕೆಯಲ್ಲಿ ನಡೆಯಿತು. ಸಮಾರಂಭದಲ್ಲಿ ಕೃತಿಗಳನ್ನು ಲೋಕಾರ್ಪಣೆಗೊಳಿಸಿದ ಸಾಹಿತಿ ಪ್ರೊ. ಕಾಳೇಗೌಡ ನಾಗವಾರ ಮಾತನಾಡಿ “ಮೌಡ್ಯತೆ ಇಂದಿಗೂ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿದೆ. ಮೌಡ್ಯತೆಯನ್ನು ಬಿಂಬಿಸುವ ಹಬ್ಬಗಳನ್ನು ಇಂದಿಗೂ ಗ್ರಾಮೀಣ ಪ್ರದೇಶಗಳಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ.” ಎಂದು ಬೇಸರ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಎರಡು ಕೃತಿಗಳ ವಿಶೇಷತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ‘ಸವೆದ ಪಯಣ’ ಆತ್ಮಕಥೆ ಕುರಿತು ಸಾಹಿತಿ ನಾ. ದಿವಾಕರ ಮಾತನಾಡಿದರೆ, ‘ಬಾಳತೇರು’ ಕವನ ಸಂಕಲನ ಕುರಿತು ಪತ್ರಕರ್ತ ಬಿ. ಆರ್. ರಂಗಸ್ವಾಮಿ ಮಾತನಾಡಿದರು. ಸಾಹಿತಿ ಹೊರೆಯಾಲ ದೊರೆಸ್ವಾಮಿ, ಸಹಕಾರ ಇಲಾಖೆ ನಿವೃತ್ತ ಅಧಿಕಾರಿ ಎಸ್. ಚಿಕ್ಕಸಾವಕ, ಕೃತಿ ಲೇಖಕ ಬಿ. ಎಂ. ಮಹಾದೇವ್ ಮೂರ್ತಿ, ದೇಸಿರಂಗ…

Read More

ಮಂಗಳೂರು : ಕುಡ್ಲದಗಿಪ್ಪ ಕುಂದಾಪ್ರದರ್ ವಾಟ್ಸಪ್ ಬಳಗದ ವತಿಯಿಂದ ದಿನಾಂಕ 11 ಆಗಸ್ಟ್ 2024ನೇ ಆದಿತ್ಯವಾರದಂದು ಮಂಗಳೂರಿನ ಬಂಟ್ಸ್ ಹಾಸ್ಟೆಲ್ ರಾಮಕೃಷ್ಣ ಕಾಲೇಜಿನ ವಠಾರದಲ್ಲಿ ವಿಶ್ವ ಕುಂದಾಪುರ ಕನ್ನಡ ದಿನಾಚರಣೆಯು ಅದ್ಧೂರಿಯಾಗಿ ನಡೆಯಿತು. ಕಾರ್ಯಕ್ರಮವು ಬೆಳಿಗ್ಗೆ ಗ್ರಾಮೀಣ ಕ್ರೀಡಾ ಚಟುವಟಿಕೆಗಳೊಂದಿಗೆ ಪ್ರಾರಂಭವಾದ ಈ ಕಾರ್ಯಕ್ರಮಕ್ಕೆ ರಾಮಕೃಷ್ಣ ಕಾಲೇಜಿನ ಸಂಚಾಲಕರಾದ ಡಾ. ಸಂಜೀವ ರೈ ಇವರು ಬಲೂನು ಹಾರಿಸುವ ಮೂಲಕ ಕ್ರೀಡೋತ್ಸವಕ್ಕೆ ಚಾಲನೆ ನೀಡಿದರು. ನಿಂಬೆ ಹಣ್ಣಿನ ಓಟ, ಮೂರು ಕಾಲಿನ ಓಟ, ಗೋಣಿಚೀಲದ ಓಟ, ಗೂಟ ಸುತ್ತಿ ಓಡುವುದು, ಹಗ್ಗಜಗ್ಗಾಟದ ಮುಂತಾದ ಕ್ರೀಡಾ ಚಟುವಟಿಕೆಗಳ ಜೊತೆಗೆ ಮಡಲು ನೇಯುವ ಸ್ಪರ್ಧೆಗಳು ನಡೆದವು. ಈ ಕಾರ್ಯಕ್ರಮದಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯ ನಾಗರಿಕರು ಸೇರಿ ಅಂದಾಜು 200 ಜನರು ಪಾಲ್ಗೊಂಡು ಸಂಭ್ರಮಿಸಿದರು. ಮಧ್ಯಾಹ್ನ ನಡೆದ ಸಭಾ ಕಾರ್ಯಕ್ರಮಕ್ಕೆ ವಿಜಯ ಬ್ಯಾಂಕಿನ ನಿವೃತ್ತ ಡಿ.ಜಿ.ಎಂ. ಶ್ರೀ ಹಾಲಾಡಿ ಶಾಂತರಾಮ ಶೆಟ್ಟಿ ಇವರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು ಹಾಗೂ ಕಳಸಿಗೆ ಭತ್ತ ಸುರಿದು…

Read More

ಬಂಟ್ವಾಳ : ಬಿ.ಸಿ. ರೋಡ್ ಸಂಚಯನ ಗಿರಿ ಇಲ್ಲಿರುವ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಮತ್ತು ತುಳು ಬದುಕು ವಸ್ತು ಸಂಗ್ರಹಾಲಯ (ರಿ.) ಇದರ ವತಿಯಿಂದ 77ನೇ ಸ್ವಾತಂತ್ರ್ಯೋತ್ಸವ ಪ್ರಯುಕ್ತ ‘ರಾಣಿ ಅಬ್ಬಕ್ಕ ಕಥಾ ಕೀರ್ತನಾ’ ಕಾರ್ಯಕ್ರಮವು ದಿನಾಂಕ 15 ಆಗಸ್ಟ್ 2024ರಂದು ಸಂಜೆ 3-30 ಗಂಟೆಗೆ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಸೆಮಿನಾರ್ ಹಾಲಿನಲ್ಲಿ ಆಯೋಜಿಸಲಾಗಿದೆ. ಈ ಕಥಾ ಕೀರ್ತನಾ ಕಾರ್ಯಕ್ರಮವನ್ನು ಕಲಾಸಾರಥಿ ಪುಷ್ಕಲ್ ಕುಮಾರ್ ತೋನ್ಸೆ ಇವರು ನಡೆಸಿಕೊಡಲಿದ್ದಾರೆ.

Read More

ಸುಳ್ಯ : ಮಂಗಳೂರು ವಿಶ್ವವಿದ್ಯಾಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ನಡೆಯುತ್ತಿರುವ ವಿವೇಕವಾಣಿ ಸರಣಿ ಉಪನ್ಯಾಸದ ಮೂವತ್ತೆಂಟನೇ ಕಾರ್ಯಕ್ರಮದಲ್ಲಿ ‘ಸ್ವಾಮಿ ವಿವೇಕಾನಂದರ ದೃಷ್ಟಿಕೋನದಲ್ಲಿ ಸಿಂಹ ಚಿಂತನೆ’ ಎಂಬ ವಿಷಯದ ಕುರಿತು ನಡೆದ ಉಪನ್ಯಾಸ ಕಾರ್ಯಕ್ರಮವು ದಿನಾಂಕ ಆಗಸ್ಟ್ 2024ರಂದು ಕುರುಂಜಿಭಾಗ್, ಸುಳ್ಯದ ಕೆ.ವಿ.ಜಿ. ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ಜರುಗಿತು. ಈ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಮೈಸೂರಿನ ರಾಮಕೃಷ್ಣ ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ಸ್ವಾಮಿ ಮಹಾಮೇಧಾನಂದಜಿ “ಸ್ವಾಮಿ ವಿವೇಕಾನಂದರು ಸಿಂಹ ಚಿಂತನೆಯನ್ನು ಮನುಷ್ಯನ ಜೀವನದಲ್ಲಿ ಅತ್ಯುತ್ತಮ ಧೈರ್ಯ, ಆತ್ಮವಿಶ್ವಾಸ, ಮತ್ತು ಶಕ್ತಿ ಅಭಿವೃದ್ಧಿಗೆ ಸಹಾಯಕವಾಗುವ ಮಾರ್ಗವಾಗಿ ನೋಡಿ, ಪ್ರಚಾರ ಮಾಡಿದರು. ಅವರ ದೃಷ್ಟಿಕೋನದಲ್ಲಿ, ಸಿಂಹವು ಶೌರ್ಯ ಮತ್ತು ಶಕ್ತಿಯ ಪ್ರತೀಕವಾಗಿತ್ತು. ವಿವೇಕಾನಂದರು ತಮ್ಮ ಶಿಷ್ಯರನ್ನು ಮತ್ತು ಯುವಜನರನ್ನು ‘ಸಿಂಹಗಳಂತೆ ಯೋಚಿಸಿ’ ಎಂದು ಪ್ರೇರೇಪಿಸಿದರು. ಇದರಿಂದ ಅವರು ಜನರಲ್ಲಿ ಭಯ, ಸಂಕೋಚ ಮತ್ತು ಅಸಹಾಯಕತೆಯನ್ನು ತೊಡೆದು ಹಾಕಿ, ಧೈರ್ಯ, ಧನಾತ್ಮಕ ಚಿಂತನೆಯನ್ನು ಬೆಳೆಸಲು ಪ್ರಯತ್ನಿಸಿದರು. ಸಿಂಹ ಚಿಂತನೆಯು ನಿರಂತರ…

Read More

ಮಂಗಳೂರು : ಕಲ್ಕೂರ ಪ್ರತಿಷ್ಠಾನದ ವತಿಯಿಂದ 26 ಆಗಸ್ಟ್ 2024ರಂದು ಶ್ರೀ ಕ್ಷೇತ್ರ ಕದ್ರಿಯಲ್ಲಿ ಜರಗಲಿರುವ ರಾಷ್ಟ್ರೀಯ ಮಕ್ಕಳ ಉತ್ಸವ ಶ್ರೀ ಕೃಷ್ಣ ವೇಷ ಸ್ಪರ್ಧೆಯ ಅಂಗವಾಗಿ ಬಹು ಭಾಷಾ ಭಜನೆ, ಭಕ್ತಿಗೀತೆ ಹಾಗೂ ಕವನ ರಚನಾ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ಶ್ರೀ ಕೃಷ್ಣನ ಕುರಿತಾದ ಸ್ವರಚಿತ ಭಜನೆ ಮತ್ತು ಭಕ್ತಿಗೀತೆ ಸ್ಪರ್ಧೆಯು 18 ವರ್ಷ ಕೆಳಗಿನ ಹಾಗೂ ಮೇಲ್ಪಟ್ಟ ಎರಡು ವಿಭಾಗಗಳಿವೆ. ಶ್ರೀ ಕೃಷ್ಣನ ಬಗ್ಗೆ ಸ್ವರಚಿತ ಬಹು ಭಾಷಾ ಕವನಗಳನ್ನು ಪ್ರೌಢ ಶಾಲೆ, ಕಾಲೇಜು ಹಾಗೂ ಮುಕ್ತ ಎಂಬ ಮೂರು ವಿಭಾಗಗಳಲ್ಲಿ ನಡೆಸಲಾಗುವುದು. ಈ ಹಿಂದೆ ಪ್ರಕಟವಾಗಿರುವ ಯಾವುದೇ ಕೃತಿಗಳನ್ನು ಪರಿಗಣಿಸಲಾಗುವುದಿಲ್ಲ. ದಿನಾಂಕ 26 ಆಗಸ್ಟ್ 2024ರ ಒಳಗಾಗಿ ಸ್ವರಚಿತ ರಚನೆಗಳನ್ನು 9535656805ಗೆ ವಾಟ್ಸಪ್ ಮಾಡಬೇಕೆಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷರಾದ ಎಸ್. ಪ್ರದೀಪ ಕುಮಾರ್ ಕಲ್ಕೂರ ತಿಳಿಸಿದ್ದಾರೆ.

Read More

ಉಜಿರೆ : ಶ್ರೀ ಕ್ಷೇತ್ರ ಧರ್ಮಸ್ಥಳ ಶಾಂತಿವನ ಟ್ರಸ್ಟ್‌ (ರಿ.) ಇದರ ಆಡಳಿತಕ್ಕೊಳಪಟ್ಟ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಹಯೋಗದಲ್ಲಿ ಪ್ರಕಟಿಸಿದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿಭಾಗದ ‘ಜ್ಞಾನ ದರ್ಶಿನಿ’ ಮತ್ತು ‘ಜ್ಞಾನ ವರ್ಷಿಣಿ’ ಎಂಬ ನೈತಿಕ ಮೌಲ್ಯಾಧರಿತ ಕೃತಿಗಳ ಲೋಕಾರ್ಪಣೆ ಹಾಗೂ 21ನೇ ವರ್ಷದ ರಾಜ್ಯಮಟ್ಟದ ಅಂಚೆ ಕುಂಚ ವಿಜೇತರಿಗೆ ಪುರಸ್ಕಾರ ಸಮಾರಂಭವು ದಿನಾಂಕ 10 ಆಗಸ್ಟ್ 2024ರಂದು ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿದ ಹಾವೇರಿಯ ಹುಕ್ಕೇರಿ ಮಠದ ಸದಾಶಿವ ಮಹಾಸ್ವಾಮೀಜಿ ಇವರು ಮಾತನಾಡಿ “ಆಟ-ಪಾಠಗಳು ಜೊತೆಯಾಗಿದ್ದಾಗ ಶಿಕ್ಷಣ ಅರ್ಥಪೂರ್ಣವಾಗಿದ್ದು, ವಿದ್ಯಾರ್ಥಿಗಳು ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ. ಪುಸ್ತಕದ ಜೊತೆ ಇದ್ದಾಗ ಮಸ್ತಕದ ವಿಕಾಸವೂ ಆಗುವುದರಿಂದ ವಿದ್ಯಾರ್ಥಿಗಳು ಓದುವ ಹವ್ಯಾಸ ಬೆಳೆಸಿಕೊಂಡು ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಬೇಕು” ಎಂದು ಹೇಳಿದರು. ಚಲನಚಿತ್ರ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಶುಭಾಶಂಸನೆ ಮಾಡಿ, “ಕಲೆಯನ್ನು…

Read More

ಮಂಗಳೂರು : ಯಕ್ಷಗಾನದ ಭೀಷ್ಮ ಎಂದೇ ಖ್ಯಾತರಾದ ಹರಿದಾಸ ಡಾ. ಶೇಣಿ ಗೋಪಾಲಕೃಷ್ಣ ಭಟ್ ಅವರ ಹೆಸರಿನಲ್ಲಿ ಎರಡು ದಶಕಗಳಿಂದ ಕಾರ್ಯ ನಿರ್ವಹಿಸುತ್ತಿರುವ ಟ್ರಸ್ಟ್ ವತಿಯಿಂದ ನೀಡಲಾಗುವ ‘ಶೇಣಿ ಪ್ರಶಸ್ತಿ’ಗೆ ಯಕ್ಷಗಾನ ಹಿರಿಯ ಕಲಾವಿದ ಹಾಗೂ ಸ್ತ್ರೀ ವೇಷಧಾರಿಯಾದ ಪಾತಾಳ ವೆಂಕಟರಮಣ ಭಟ್ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭವು 15 ಆಗಸ್ಟ್ 2024ರಂದು ಸಂಜೆ 4.20ಕ್ಕೆ ನಗರದ ಉರ್ವಸ್ಟೋರ್‌ ಇಲ್ಲಿರುವ ಮಹಾಗಣಪತಿ ದೇವಸ್ಥಾನದ ಆವರಣದಲ್ಲಿ ನಡೆಯಲಿದೆ. ಪ್ರಶಸ್ತಿಯು 30 ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಕ. ಸಾ. ಪ. ಮಾಜಿ ಅಧ್ಯಕ್ಷರಾದ ಹರಿಕೃಷ್ಣ ಪುನರೂರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಉರ್ವಸ್ಟೋರ್ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಸುರೇಂದ್ರ ರಾವ್ ದೀಪ ಪ್ರಜ್ವಲನ ಮಾಡಲಿರುವರು. ಕೊಲ್ಯ ಶ್ರೀ ಮೂಕಾಂಬಿಕಾ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷರಾದ ಮಧುಸೂಧನ ಅಯರ್, ಉರ್ವಸ್ಟೋರ್ ಮಹಾಗಣಪತಿ ದೇವಸ್ಥಾನದ ಆಡಳಿತ ಸಮಿತಿಯ  ಕಾರ್ಯದರ್ಶಿ ಶ್ರೀಧರ ಮಣಿಯಾಣಿ ಅತಿಥಿಗಳಾಗಿ ಭಾಗವಹಿಸುವರು. ಹಿರಿಯ ಅರ್ಥಧಾರಿ ಜಿ. ಕೆ. ಭಟ್ ಸೇರಾಜೆ ಅವರು…

Read More

ಉಜಿರೆ : ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಐಚ್ಛಿಕ ಕನ್ನಡ ವಿಭಾಗದ ವತಿಯಿಂದ ‘ಸಾಹಿತ್ಯ ಮತ್ತು ರಂಗಭೂಮಿ’ ಕುರಿತು ಅತಿಥಿ ಉಪನ್ಯಾಸ ಕಾರ್ಯಕ್ರಮ 2 ಆಗಸ್ಟ್ 2024ರಂದು ನಡೆಯಿತು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ರಂಗಭೂಮಿ ಕಲಾವಿದೆ ಹಾಗೂ ‘ನೀನಾಸಂ’ ಇದರ ಹಿರಿಯ ವಿದ್ಯಾರ್ಥಿನಿಯಾದ ಸಂಗೀತಾ ಭಿಡೆ ಮಾತನಾಡಿ “ಅಭಿನಯ, ರಂಗತಂತ್ರ, ನಾಟಕ ಸಂಗೀತ ಹಾಗೂ ತಂತ್ರಜ್ಞಾನ ಇಂತಹ ವಿವಿಧ ಅಂಶಗಳನ್ನು ಹೊಂದಿರುವುದೇ ರಂಗಭೂಮಿ. ರಂಗಭೂಮಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಮೊದಲು ಇದಕ್ಕೆ ರಂಗಭೂಮಿ ಎಂದು ಹೆಸರಿರಲಿಲ್ಲ, ಕಾಲಕ್ರಮೇಣ ಈ ಹೆಸರು ಬಂದಿದೆ. ಒಂದು ಲಕ್ಷ ವರ್ಷದ ಹಿಂದೆ ಮಾನವನ ಉಗಮವಾಗಿದೆ. ಭಾಷೆ ಇರದಿದ್ದ ಕಾಲದಲ್ಲಿ ಮಾನವ ತಾನು ಬೇಟೆಯಾಡಿದ ರೀತಿಯನ್ನು ಮನೋರಂಜನೆಗಾಗಿ ತನ್ನ ಕುಟುಂಬಸ್ಥರ ಜೊತೆ ಅಭಿನಯಿಸುತ್ತ ಹೇಳಿಕೊಳ್ಳಲು ಪ್ರಾರಂಭಿಸಿದ. ಈ ರೀತಿ, ನಟನೆಗೆ ಹಲವಾರು ವರ್ಷಗಳ ಇತಿಹಾಸ ಇದೆ. ಹಿಂದೆ ಗ್ರೀಕ್ ಹಾಗೂ ರೋಮನ್ ನಾಗರಿಕತೆಯ ಸಮಯದಲ್ಲಿ ಅಭಿನಯಕ್ಕೆ ಹೆಚ್ಚು ಪ್ರಾಮುಖ್ಯತೆ ಇತ್ತು. ಇವರ ಸಮಯದಲ್ಲಿ ರಾಜಭವನದಲ್ಲಿ…

Read More