Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ದ. ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕದ ಸಹಯೋಗದಲ್ಲಿ ಘಟಕದ ಗೌರವ ಕಾರ್ಯದರ್ಶಿ ಸಾಹಿತಿ ಎನ್. ಗಣೇಶ್ ಪ್ರಸಾದ್ ಜೀ ( ಜೀಜೀ ) ಅವರು ತಮ್ಮ ಹೆತ್ತವರ ಹೆಸರಿನಲ್ಲಿ ಸ್ಥಾಪಿಸಿದ ನೆಲ್ಲಿಕಾರು ಜಿನದತ್ತ ಶೆಟ್ಟಿ ವಸಂತಮ್ಮ ಪ್ರತಿಷ್ಠಾನದ ಉದ್ಘಾಟನಾ ಸಮಾರಂಭವು ದಿನಾಂಕ 14-07-2024ರಂದು ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕನ್ನಡ ಸಾಹಿತ್ಯ ಪರಿಷತ್ತು ಕೇಂದ್ರ ಮಾರ್ಗದರ್ಶಿ ಸಮಿತಿ ಸದಸ್ಯ ಡಾ. ಮುರಲೀಮೋಹನ್ ಚೂಂತಾರು ಮಾತನಾಡಿ “ಹಿರಿಯರ ಉನ್ನತ ವ್ಯಕ್ತಿತ್ವ ಮತ್ತು ಆದರ್ಶಗಳ ನೆನಪಿನಲ್ಲಿ ಪ್ರತಿಷ್ಠಾನವನ್ನು ಹುಟ್ಟುಹಾಕಿ ಉತ್ತಮವಾದ ಧ್ಯೇಯೋದ್ದೇಶಗಳನ್ನು ಹೊಂದಿರುತ್ತಾ ಆ ನಿಟ್ಟಿನಲ್ಲಿ ಸಾಗುವುದರಿಂದ ಅಳಿದ ಮೇಲೆಯೂ ಅಂತಹ ವ್ಯಕ್ತಿಗಳನ್ನು ಉಳಿಸುವ ಕಾರ್ಯವಾಗುತ್ತದೆ. ಎಷ್ಟು ವರ್ಷ ಬದುಕಿದ್ದೇವೆ ಎನ್ನುವುದಕ್ಕಿಂತ ಹೇಗೆ ಬದುಕಿದ್ದೇವೆ ಎನ್ನುವುದೇ ಮುಖ್ಯ, ಅದನ್ನು ಹಿರಿಯರು ತೋರಿಸಿಕೊಟ್ಟಿದ್ದು ಜೀಜೀಯವರು. ಅಂತಹ ಆದರ್ಶಗಳನ್ನು ಪ್ರತಿಷ್ಠಾನದ ಮೂಲಕ ಜೀವಂತವಿರಿಸಲು ಉದ್ದೇಶಿಸಿರುವುದು ನಿಜಕ್ಕೂ ಶ್ಲಾಘನೀಯ.” ಎಂದರು. ಜೀಜೀಯವರು ಪ್ರಸ್ತಾವನೆಗೈದು, ತಮ್ಮ ತಂದೆ ತಾಯಿ ಹೆಜ್ಜೆ ಹೆಜ್ಜೆಗೂ ತಮ್ಮ…
ಉಡುಪಿ : ರಾಗ ಧನ ಉಡುಪಿ (ರಿ) ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಪ್ರಸ್ತುತ ಪಡಿಸುವ ‘ರಾಗರತ್ನ ಮಾಲಿಕೆ- 26’ ನೆಯ ಕಾರ್ಯಕ್ರಮವು ದಿನಾಂಕ 28 -7- 2024ರ ಭಾನುವಾರದಂದು ಉಡುಪಿಯ ಎಂ. ಜಿ. ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ. ಸಂಜೆ 4:15ಕ್ಕೆ ದೀಪ ಪ್ರಜ್ವಲನೆ ಬಳಿಕ ಕುಮಾರಿ ಶಿವಶ್ರೀ ಸ್ಕಂದ ಪ್ರಸಾದ್ ಚೆನ್ನೈ ಇವರಿಂದ ಕರ್ನಾಟಕ ಸಂಗೀತ ಕಛೇರಿ ನಡೆಯಲಿದೆ. ಇವರಿಗೆ ವಯೊಲಿನ್ ನಲ್ಲಿ ಬೆಂಗಳೂರಿನ ಶ್ರೀ ಪ್ರಾದೇಶ್ ಆಚಾರ್ ಹಾಗೂ ಮೃದಂಗದಲ್ಲಿ ಬೆಂಗಳೂರಿನ ಶ್ರೀ ಅನಿರುದ್ಧ ಎಸ್. ಭಟ್ ಸಹಕರಿಸಲಿದ್ದಾರೆ ಎಂದು ರಾಗ ಧನ ಸಂಸ್ಥೆಯ ಕಾರ್ಯದರ್ಶಿ ಉಮಾಶಂಕರಿ ತಿಳಿಸಿದ್ದಾರೆ. ಕುಮಾರಿ ಶಿವಶ್ರೀ ಸ್ಕಂದ ಪ್ರಸಾದ್ ಶ್ರೀ ಪ್ರಾದೇಶ್ ಆಚಾರ್ ಶ್ರೀ ಅನಿರುದ್ಧ ಎಸ್. ಭಟ್
ಕುಂಬಳೆ : ಯಕ್ಷಗಾನದ ತವರೂರು ಕವಿ ಪಾರ್ತಿಸುಬ್ಬನ ನಾಡಾದ ಕುಂಬಳೆಯ ಸಿರಿಬಾಗಿಲು ವೆಂಕಪ್ಪಯ್ಯ ಪ್ರತಿಷ್ಠಾನ (ರಿ) ಇದರ ಮುಖ್ಯಸ್ಥರಾದ ಸಿರಿಬಾಗಿಲು ಶ್ರೀ ರಾಮಕೃಷ್ಣ ಮಯ್ಯರ ನೇತೃತ್ವದಲ್ಲಿ ಸಾಂಸ್ಕೃತಿಕ ಉತ್ಸವ ಹಾಗೂ ಸಿರಿಬಾಗಿಲು ಯಕ್ಷ ವೈಭವ ದಿನಾಂಕ 18-07-2024 ರಂದು ಉದ್ಘಾಟನೆಗೊಂಡಿತು. ಗಡಿನಾಡು ಅಭಿವೃದ್ಧಿ ಪ್ರಾಧಿಕಾರ ಹಾಗೂ ಸಂಘ- ಸಂಸ್ಥೆಗಳ ನೆರವಿನಿಂದ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ರಜತ ಮಹೋತ್ಸವದಲ್ಲಿರುವ ‘ಸರಯೂ ಯಕ್ಷ ಬಳಗ’ದ ಯಕ್ಷಗಾನ ಪ್ರದರ್ಶನವು ದಿನಾಂಕ 19-07-2024ರಂದು ನಡೆಯಿತು. ಕಾರ್ಯಕ್ರಮದಲ್ಲಿ ಕವಿ ಹಾಗೂ ಯಕ್ಷಗುರು ವರ್ಕಾಡಿ ರವಿ ಅಲೆವೂರಾಯ ವಿರಚಿತ ಹಾಗೂ ನಿರ್ದೇಶನದ ‘ವೀರ ಶತಕಂಠ’ ಎಂಬ ಪ್ರಸಂಗ ಪ್ರಸ್ತುತಗೊಂಡಿತು. ಪ್ರದರ್ಶನದ ಹಿಮ್ಮೇಳದಲ್ಲಿ ಲಕ್ಷ್ಮೀನಾರಾಯಣ ಹೊಳ್ಳ ಕೃಷ್ಣಾಪುರ, ಅಂಬಾತನಯ ಅರ್ನಾಡಿ, ಮಧುಸೂದನ ಅಲೆವೂರಾಯ, ಹಾಗೂ ಲಕ್ಷ್ಮಣ ಕುಮಾರ್ ಮರಕಡ ಸಹಕರಿಸಿದರೆ, ಮುಮ್ಮೇಳದಲ್ಲಿ ವಿಜಯಲಕ್ಷ್ಮೀ ಯಲ್. ಎಸ್., ನಾಗರಾಜ ಖಾರ್ವಿ, ಸಂತೋಷ್ ಪಿಂಟೋ, ಅಕ್ಷಯ್ ಸುವರ್ಣ, ರೇವಂತ್ ರಾಘವೇಂದ್ರ , ನಿತ್ಯಶ್ರೀ, ಕೃತಿ ದೇವಾಡಿಗ, ದೃಶಾಲ್, ವಿಶ್ವಾಸ್ ಆರ್. ಪಾತ್ರ ನಿರ್ವಹಿಸಿದರು.
ಮೈಸೂರು : ಧ್ವನಿ ಫೌಂಡೇಷನ್ ಇದರ ವತಿಯಿಂದ ‘ರಾಜೀವ ತಾರಾನಾಥ್ ಹಾಗೂ ನ. ರತ್ನ ಗೌರವ ಸ್ಮರಣೆ’ ಕಾರ್ಯಕ್ರಮವನ್ನು ದಿನಾಂಕ 24-07-2024ರಂದು ಸಂಜೆ 5-30 ಗಂಟೆಗೆ ಮೈಸೂರಿನ ಕುವೆಂಪು ನಗರ ಗಾನ ಭಾರತಿ ವೀಣೆ ಶೇಷಣ್ಣ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಲೇಖಕರಾದ ಶ್ರೀಮತಿ ಶೈಲಜಾ ವೇಣುಗೋಪಾಲ್ ಇವರು ‘ಪಂಡಿತ್ ರಾಜೀವ್ ತಾರಾನಾಥ್ ನೆನಪುಗಳು’ ಇದರ ಬಗ್ಗೆ ಮತ್ತು ಹಿರಿಯ ಸುಗಮ ಸಂಗೀತ ಕಲಾವಿದರಾದ ಶ್ರೀಮತಿ ಹೆಚ್.ಆರ್. ಲೀಲಾವತಿ ಇವರು ‘ಡಾ. ನ. ರತ್ನ ಕುರಿತು’ ಮಾತನಾಡಲಿದ್ದಾರೆ. ಸಾಮಾಜಿಕ ಮುಖಂಡರಾದ ಶ್ರೀ ಎಚ್. ವಿ. ರಾಜೀವ್ ಇವರ ಉಪಸ್ಥಿತಿಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಇವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಪಂಡಿತ್ ರಾಜೀವ್ ತಾರಾನಾಥ್ ಇವರ ಶಿಷ್ಯರಾದ ಶ್ರೀ ಸಚಿನ್ ಹಂಪಿ ಇವರು ಸರೋದ್ ವಾದನ ಮತ್ತು ಶ್ರೀ ದೇವಾನಂದ ವರಪ್ರಸಾದ್ ಮತ್ತು ತಂಡದವರಿಂದ ರಂಗ ನಮನ – ನ. ರತ್ನ ನಾಟಕದ…
ಹಾಸನ : ಹಾಸನದ ಮಾಣಿಕ್ಯ ಪ್ರಕಾಶನ (ರಿ.), ಸಂಸ್ಥೆಯು 2015ರಿಂದಲೂ ವೈವಿಧ್ಯಮಯ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದು, ಸಾಹಿತಿಗಳಿಗೆ ಪ್ರೋತ್ಸಾಹ ನೀಡುವ ಹಿನ್ನೆಲೆಯಲ್ಲಿ ಈಗಾಗಲೇ ರಾಜ್ಯದ ವಿವಿಧ ಲೇಖಕರ 70ಕ್ಕೂ ಹೆಚ್ಚು ಕೃತಿಗಳನ್ನು ಮುದ್ರಣ ಮಾಡಿ ಕನ್ನಡ ಸಾರಸ್ವತ ಲೋಕಕ್ಕೆ ನೀಡುವುದರ ಜೊತೆಗೆ ದಾನಿಗಳ ಸಹಕಾರದಲ್ಲಿ ವಿವಿಧ ಪ್ರಕಾರದ ಸಾಹಿತ್ಯ ಕೃತಿಗಳಿಗೆ ದತ್ತಿ ಪುರಸ್ಕಾರ ನೀಡಿ ಗೌರವಿಸುತ್ತಿದೆ ಎಂದು ಪ್ರಕಾಶಕಿ ದೀಪಾ ಉಪ್ಪಾರ್ ತಿಳಿಸಿದ್ದಾರೆ. ಪ್ರತಿ ವರ್ಷದಂತೆ ಪ್ರಸಕ್ತ ವರ್ಷವೂ ಕಾವ್ಯ, ಕಥೆ, ಲಲಿತ ಪ್ರಬಂಧ, ಹಾಸ್ಯ ಪ್ರಬಂಧ : ಸಾಹಿತ್ಯ ಪ್ರಕಾರದ ಕೃತಿಗಳಿಗಾಗಿ ಈ ಕೆಳಗಿನ ದತ್ತಿ ಪ್ರಶಸ್ತಿಗಳಿಗೆ ಕೃತಿಗಳನ್ನು ಆಹ್ವಾನಿಸಲಾಗಿದೆ. ದಿ. ಸಿ.ಪಿ. ನಾರಾಯಣಾಚಾರ್ಯ ಕಾವ್ಯ ಮಾಣಿಕ್ಯ ರಾಜ್ಯ ಪುರಸ್ಕಾರ 2024 (ಕಾವ್ಯ) ದಿ. ಸಿ.ಪಿ. ನಾರಾಯಣಾಚಾರ್ಯ ಕಾವ್ಯ ಮಾಣಿಕ್ಯ ರಾಜ್ಯ ಪುರಸ್ಕಾರಕ್ಕೆ 2023ರಲ್ಲಿ ಮೊದಲ ಮುದ್ರಣವಾಗಿ ಪ್ರಕಟಗೊಂಡ ಕನ್ನಡ ಸ್ವತಂತ್ರ ಕಾವ್ಯ ಕೃತಿಗಳನ್ನು ಆಹ್ವಾನಿಸಲಾಗಿದೆ. ಆಹ್ವಾನಿತ ಕೃತಿಗಳಲ್ಲಿ ಆಯ್ಕೆಯಾದ ಪ್ರಥಮ ರೂ.3,000/- ನಗದು ಮತ್ತು…
ಸದಾ ಪ್ರಯೋಗಶೀಲತೆಗೆ ಹಾತೊರೆಯುತ್ತಿದ್ದ, ಕ್ರಿಯಾಶೀಲತೆಯನ್ನೇ ಬದುಕಾಗಿಸಿಕೊಂಡಿದ್ದ ರಂಗಸಾಧಕ, ರಂಗ ನೇಪಥ್ಯದಲ್ಲೇ ಹೆಚ್ಚೆಚ್ಚು ತೊಡಗಿಕೊಂಡಿದ್ದ ಸದಾನಂದ ಸುವರ್ಣರು ಶಾಶ್ವತವಾಗಿ ನೇಪಥ್ಯಕ್ಕೆ ಸರಿದಿದ್ದಾರೆ. ಅವರಿಗೆ ರಂಗಕರ್ಮಿ ಶಶಿಕಾಂತ ಯಡಹಳ್ಳಿಯವರು ಬರೆದ ರಂಗನಮನ ಇಲ್ಲಿದೆ. ಕನ್ನಡ ಸಾಂಸ್ಕೃತಿಕ ಲೋಕದ ಕಲಾವಿದೆ ಅಪರ್ಣಾರವರ ಅಕಾಲಿಕ ಅಗಲಿಕೆಯನ್ನೇ ಇನ್ನೂ ಅರಗಿಸಿಕೊಳ್ಳಲು ಆಗಿರಲಿಲ್ಲ, ಅಷ್ಟರಲ್ಲಿ ಹಿರಿಯ ರಂಗಕರ್ಮಿ ಸುವರ್ಣರವರೂ ಅಪರ್ಣಾರವರ ಹಿಂದೆಯೇ ನಿರ್ಗಮಿಸಿದ್ದು (16-07-2024) ಕರಾವಳಿ ಕರ್ನಾಟಕದ ರಂಗಭೂಮಿಗೆ ಆದ ನಷ್ಟವಾಗಿದೆ. ಇಳಿವಯಸ್ಸಿನಲ್ಲಿಯೂ ಕ್ರಿಯಾಶೀಲವಾಗಿದ್ದ ಪ್ರತಿಭಾನ್ವಿತ ರಂಗನಿರ್ದೇಶಕರ ಸಾವನ್ನೂ ಸಹ ಅರಗಿಸಿಕೊಳ್ಳುವುದು ಕಷ್ಟವಾಗಿದೆ. ವಯೋಸಹಜ ಅನಾರೋಗ್ಯದಿಂದಾಗಿ 93ನೇ ವಯಸ್ಸಿನಲ್ಲಿ ಕಾಲವಶರಾದ ಅವರಿನ್ನೂ ಇರಬೇಕಾಗಿತ್ತು. ಹೊಸ ತಲೆಮಾರಿನ ರಂಗಾಸಕ್ತ ಯುವಕರಿಗೆ ಅವರ ಮಾರ್ಗದರ್ಶನ ಬೇಕಾಗಿತ್ತು. ನಟ, ನಿರ್ದೇಶಕ, ರಂಗತಜ್ಞ, ಲೇಖಕ, ಪ್ರಕಾಶಕ, ಸಂಘಟಕ, ನಾಟಕಕಾರ, ಕಥೆಗಾರ, ಕಾದಂಬರಿಕಾರ, ಸಿನೆಮಾ ನಿರ್ದೇಶಕ ಹಾಗೂ ನಿರ್ಮಾಪಕರಾದ ಸದಾನಂದ ಸುವರ್ಣರವರ ಹೆಸರು ಕರಾವಳಿ ಕರ್ನಾಟಕದ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸುವರ್ಣಾಕ್ಷರದಲ್ಲಿ ದಾಖಲಿಸುವಂತಹುದಾಗಿದೆ. ಸದಾನಂದ ಸುವರ್ಣರ ಹೆಸರು ಕರ್ನಾಟಕದಾದ್ಯಂತ ಗೊತ್ತಿರದೇ ಇದ್ದರೂ ಅವರ ರಂಗಕಾರ್ಯ ಕರ್ನಾಟಕವನ್ನು ದಾಟಿ ಬಾಂಬೆಗೆ…
ಸಾಣೇಹಳ್ಳಿ : ಶ್ರೀ ಗುರುಪಾದೇಶ್ವರ ಪ್ರೌಢಶಾಲೆ ಹಾಗೂ ಶ್ರೀ ಶಿವಕುಮಾರ ಸ್ವಾಮೀಜಿ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿನ ಉಭಯ ಶಾಲಾ ಮಕ್ಕಳಿಗೆ ಭರತನಾಟ್ಯ ತರಗತಿಯು ದಿನಾಂಕ 19-07-2024ರಂದು ಉದ್ಘಾಟನೆಗೊಂಡಿತು. ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ಪಂಡಿತಾರಾಧ್ಯ ಶ್ರೀಗಳು ಮಾತನಾಡಿ “ಭರತನಾಟ್ಯ ತರಬೇತಿಯನ್ನು ಪಡೆದ ಮಕ್ಕಳು ನಾಳೆ ತಮ್ಮ ಕಾಲ ಮೇಲೆ ತಾವೇ ನಿಂತುಕೊಂಡು ಜೀವನ ಮಾಡಬಹುದು. ನೃತ್ಯ, ಸಂಗೀತ ಚೆನ್ನಾಗಿ ಕಲಿತರೆ ಮುಂದೆ ಅದು ನಿಮ್ಮ ಜೀವನಕ್ಕೆ ಸಹಕಾರಿಯಾಗಿ ಸ್ವತಂತ್ರ್ಯವಾಗಿ ಉದ್ಯೋಗವನ್ನು ಪ್ರಾರಂಭ ಮಾಡಬಹುದು. ನಾವು ಸಹ ಸಿರಿಗೆರೆಯಲ್ಲಿದ್ದಾಗ ಅಲ್ಲಿಯ ವಿದ್ಯಾರ್ಥಿಗಳಿಗೆ ಭರತನಾಟ್ಯ ಹಾಗೂ ಸಂಗೀತ ಕಲಿಸಲು ತುಂಬ ಪ್ರಯತ್ನ ತುಂಬ ಮಾಡಿದ್ವಿ. ಭರತನಾಟ್ಯ ತರಗತಿಗಳನ್ನು ಪ್ರಾರಂಭ ಮಾಡಬೇಕೆಂದು ಉತ್ಸಾಹ ಬಹಳ ದಿನಗಳಿಂದಲೂ ಇತ್ತು. ಅದು ಇವತ್ತು ನೆರವೇರಿದೆ. ಎಲ್ಲಾ ಮಕ್ಕಳು ಆಸಕ್ತಿಯಿಂದ ಭರತನಾಟ್ಯವನ್ನು ಕಲಿಯಬೇಕು” ಎಂದು ಹೇಳಿದರು. ಭರತ್ಯನಾಟ್ಯ ಶಿಕ್ಷಕ ನಾಗರಾಜ್ ಭರತನಾಟ್ಯದ ಬಗ್ಗೆ ವಿವರಣೆ ಹಾಗೂ ಭರತನಾಟ್ಯದ ಪ್ರಕಾರಗಳನ್ನು ಪ್ರಾತ್ಯಕ್ಷಿಕೆಯ ಮೂಲಕ ತೋರಿಸಿದರು. ಶಿಕ್ಷಕ ಮಲ್ಲಿಕಾರ್ಜುನ ಸ್ವಾಗತಿಸಿ ನಿರೂಪಿಸಿದರು.…
ಬೆಂಗಳೂರು : ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಇದರ ವತಿಯಿಂದ ‘ತಿಂಗಳ ನಾಟಕ ಸಂಭ್ರಮ’ವು ದಿನಾಂಕ 25-07-2024ರಂದು ಸಂಜೆ 6.30ಕ್ಕೆ ಬೆಂಗಳೂರಿನ ಮಲ್ಲತ್ತಹಳ್ಳಿಯ ಕಲಾಗ್ರಾಮದ ಸಮುಚ್ಚಯ ಭವನದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಕೆ.ವಿ. ನಾಗರಾಜ ಮೂರ್ತಿ ಇವರು ವಹಿಸಲಿದ್ದು, ಪ್ರಸಿದ್ಧ ಕವಿಗಳು ಹಾಗೂ ಸಾಹಿತಿಯಾದ ಪ್ರೊ. ಎಸ್.ಜಿ. ಸಿದ್ಧರಾಮಯ್ಯ ಇವರು ಉದ್ಘಾಟನೆ ಮಾಡಲಿದ್ದಾರೆ. ಬೆಂಗಳೂರಿನ ಪ್ರವರ ಥಿಯೇಟರ್ ಪ್ರಸ್ತುತ ಪಡಿಸುವ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ‘ಅಣ್ಣನ ನೆನಪು’ ನಾಟಕ ಪ್ರದರ್ಶನಗೊಳ್ಳಲಿದೆ. ಈ ನಾಟಕದ ನಿರ್ವಹಣೆ ಅಜಯ್ ಕುಮಾರ್ ಮಾಡಿದ್ದು, ಸಂಗೀತ ಅಕ್ಷಯ್ ಭೊಂಸ್ಲೆ ಮತ್ತು ಬೆಳಕಿನ ವಿನ್ಯಾಸ ಮಂಜು ನಾರಾಯಣ್ ನೀಡಿದ್ದು, ಹನು ರಾಮಸಂಜೀವ ಇವರು ವಿನ್ಯಾಸ ಮತ್ತು ನಿರ್ದೇಶನ ಮಾಡಿರುತ್ತಾರೆ. ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ‘ಅಣ್ಣನ ನೆನಪು’ ಕೃತಿಯು ಮಹಾಕವಿ ಕುವೆಂಪು ಇವರ ಜೀವನದ ಹಲವು ಮಹತ್ವದ ಅಧ್ಯಾಯಗಳನ್ನು ಒಳಗೊಂಡಿದೆ. ಒಂದರ್ಥದಲ್ಲಿ ತೇಜಸ್ವಿಯವರು ಹುಟ್ಟಿದಲ್ಲಿಂದ ಇಲ್ಲಿಯವರೆಗಿನ ಕುವೆಂಪುರವರ ಕಥೆ, ಹಾಗೆಯೇ ಇದು…
ಮಂಗಳೂರು : ಮಂಗಳೂರಿನ ಕೊಡಿಯಾಲಬೈಲಿನ ಭಗವತಿ ನಗರದದಲ್ಲಿರುವ ಮಹಾಲಸಾ ದೃಶ್ಯಕಲಾ ಮಹಾವಿದ್ಯಾಲಯದ ವಾರ್ಷಿಕೋತ್ಸವದ ಪ್ರಯುಕ್ತ ‘ಪ್ರತಿಬಿಂಬಗಳು’ ಎಂಬ ಶೀರ್ಷಿಕೆಯಡಿ 2023-24ನೇ ಸಾಲಿನ ವಾರ್ಷಿಕ ಕಲಾಪ್ರದರ್ಶನವು ದಿನಾಂಕ 19-07-2024ರಂದು ಉದ್ಘಾಟನೆಗೊಂಡಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್ ಚಿತ್ರಕಲೆಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಮಂಗಳೂರಿನ ಕಾರಂಜಿ ಇನ್ಫೋಟೆಕ್ ಪೈ.ಲಿ. ಇದರ ನಿರ್ದೇಶಕರಾದ ವಿಕ್ರಮ್ ಕೆಮ್ಮೆ, ‘ಆರ್ಕಿಡ್ ಆರ್ಟ್ ಗ್ಯಾಲರಿ’ ಇದರ ನಿರ್ದೇಶಕರಾದ ವಿಲಿಯಂ ಪಾಯಸ್, ಶ್ರೀ ಮಹಾಲಸಾ ಶಿಕ್ಷಣ ಸಮಿತಿ ವ್ಯವಸ್ಥಾಪಕ ನಿರ್ದೇಶಕರಾದ ಜಗದೀಶ್ ಬಿ. ಕೆ., ನಿರ್ದೇಶಕರಾದ ಬಾಬುರಾವ್ ಅತಿಥಿಗಳಾಗಿ ಭಾಗವಹಿಸಿದರು. ಇದೇ ಸಂದರ್ಭದಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಲಾಯಿತು. ಸಭಾಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳು ರಚಿಸಿದ 400ಕ್ಕೂ ಹೆಚ್ಚು ವಿವಿಧ ಪ್ರಕಾರದ ಕಲಾಕೃತಿಗಳು ಪ್ರದರ್ಶನದಲ್ಲಿದ್ದು, ರೇಖಾಚಿತ್ರ, ಸ್ಥಿರಚಿತ್ರಣ, 2ಡಿ ವಿನ್ಯಾಸ, ನಿಸರ್ಗಚಿತ್ರ, ಸೃಜನಶೀಲ ವರ್ಣಚಿತ್ರಗಳು, ಮಂಡಲ ಚಿತ್ರಗಳು, ಜಾಹೀರಾತು ಕಲೆ, ಸಾಂದರ್ಭಿಕ ಚಿತ್ರಗಳು ಹಾಗೂ ಡಿಜಿಟಲ್ ಕಲಾಕೃತಿಗಳು ಪ್ರದರ್ಶನದಲ್ಲಿವೆ. ಈ…
ಕಾಂತಾವರ : ಶ್ರೀ ಯಕ್ಷದೇಗುಲ ಕಾಂತಾವರ ಇದರ ಇಪ್ಪತ್ತರಡನೇ ವರ್ಷದ ‘ಯಕ್ಷೋಲ್ಲಾಸ -2024’ ನಿರಂತರ ಹನ್ನೆರಡು ತಾಸಿನ ಆಟ, ಕೂಟ, ಬಯಲಾಟ ಕಾರ್ಯಕ್ರಮವು ದಿನಾಂಕ 21-07-2024ರಂದು ಬೆಳಿಗ್ಗೆ 10-00ರಿಂದ ಶ್ರೀ ಕ್ಷೇತ್ರ ಕಾಂತಾವರದಲ್ಲಿ ಜರಗಲಿದೆ. ಕಾಂತಾವರ ಗ್ರಾಮ ಪಂಚಾಯತ್ ಅದ್ಯಕ್ಷರಾದ ಶ್ರೀ ರಾಜೇಶ್ ಕೋಟ್ಯಾನ್ ಇವರ ಉಪಸ್ಥಿತಿಯಲ್ಲಿ ಬಾರಾಡಿಬೀಡು ಶ್ರೀಮತಿ ಸುಮತಿ ಆರ್. ಬಲ್ಲಾಳ್ ಇವರು ‘ಯಕ್ಷೋಲ್ಲಾಸ’ ಉದ್ಘಾಟನೆ ಮಾಡಿ ಶುಭಾಶಂಸನೆಗೈಯಲಿದ್ದಾರೆ. ನಂತರ ಪ್ರಸಿದ್ಧ ಕಲಾವಿದರಿಂದ ‘ವಿಶ್ವಾಮಿತ್ರ ಮೇನಕೆ’ ಪ್ರಸಂಗದ ಯಕ್ಷಗಾನ ಬಯಲಾಟ ನಡೆಯಲಿದೆ. ಮಧ್ಯಾಹ್ನ 2-00 ಗಂಟೆಗೆ ಕಾಂತಾವರ ಕ್ಷೇತ್ರದ ಧರ್ಮದರ್ಶಿ ಡಾ. ಜೀವಂಧರ ಬಲ್ಲಾಳ್ ಇವರ ಅಧ್ಯಕ್ಷತೆಯಲ್ಲಿ ಕಾರ್ಕಳ ವಿಧಾನ ಸಭಾ ಕ್ಷೇತ್ರದ ಶಾಸಕ ಶ್ರೀ ವಿ. ಸುನಿಲ್ ಕುಮಾರ್ ಇವರ ಗೌರವ ಉಪಸ್ಥಿತಿಯಲ್ಲಿ ಯಕ್ಷಗಾನ ಕ್ಷೇತ್ರದ ಬಹು ಸಾಧನೆಯ ಕಲಾವಿರಾದ ಧರ್ಮಸ್ಥಳ ಮೇಳದ ನಿವೃತ್ತ ಕಲಾವಿದ ನಿಡ್ಲೆ ಗೋವಿಂದ ಭಟ್ ಇವರಿಗೆ ಪುತ್ತೂರು ದಿ. ಡಾ. ಶ್ರೀಧರ ಭಂಡಾರಿ ಸಂಸ್ಮರಣಾ ಪ್ರಶಸ್ತಿ ಹಾಗೂ ಸುರತ್ಕಲ್ ಮೇಳದ ನಿವೃತ್ತ…