Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ಅಮೆರಿಕಾದ ಗ್ರೇಟರ್ ರಿಚ್ಮಂಡ್ ಕನ್ವೆನ್ಷನ್ ಸೆಂಟರ್ನಲ್ಲಿ ದಿನಾಂಕ 30 ಆಗಸ್ಟ್ 2024, 31 ಆಗಸ್ಟ್ 2024 ಮತ್ತು 1 ಸೆಪ್ಟೆಂಬರ್ 2024ರಂದು 12ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನ ನಡೆಯಲಿದೆ. ರಿಚ್ಮಂಡ್ ಕನ್ನಡ ಸಂಘ ಮತ್ತು ವಾಷಿಂಗ್ಟನ್ ಡಿಸಿ ಪ್ರದೇಶದ ಕಾವೇರಿ ಕನ್ನಡ ಸಂಘಗಳ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಸಮ್ಮೇಳನದಲ್ಲಿ ‘ಥಟ್ ಅಂತ ಹೇಳಿ!’ ರಸಪ್ರಶ್ನೆ ಕಾರ್ಯಕ್ರಮ ಪ್ರಮುಖ ಆಕರ್ಷಣೆಯಾಗಲಿದೆ. ದೂರದರ್ಶನ ಚಂದನ ವಾಹಿನಿಯಲ್ಲಿ ನಿರಂತರ ಪ್ರಸಾರವಾಗುತ್ತ ದಾಖಲೆ ನಿರ್ಮಿಸಿರುವ ಅತ್ಯಂತ ಜನಪ್ರಿಯ ಕಾರ್ಯಕ್ರಮದ ನಿರ್ವಾಹಕ ಡಾ. ನಾ. ಸೋಮೇಶ್ವರ ಅವರನ್ನು ಅಕ್ಕ ಸಮ್ಮೇಳನದ ವಿಶೇಷ ಅತಿಥಿಯಾಗಿ ಆಹ್ವಾನಿಸಲಾಗಿದೆ. ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಡಾ. ನಾ. ಸೋಮೇಶ್ವರ ಇವರಿಂದ ಆಶಯ ಭಾಷಣ ಇರಲಿದೆ. ಸಮ್ಮೇಳನಾರ್ಥಿಗಳಿಗಾಗಿ ‘ಥಟ್ ಅಂತ ಹೇಳಿ !’ ಕ್ವಿಜ್ನ ಪ್ರವೇಶದ ಸುತ್ತು ಸಮ್ಮೇಳನ ನಡೆಯುವ ಸ್ಥಳದಲ್ಲೇ ಲಿಖಿತ ಪರೀಕ್ಷೆಯ ಮೂಲಕ ನಡೆಯುತ್ತದೆ. ಅದರಲ್ಲಿ ಆಯ್ಕೆಯಾಗಿ ಬರುವ ಎಂಟು ಮಂದಿಯನ್ನು ತಲಾ ನಾಲ್ಕರ ಎರಡು ಗುಂಪುಗಳಾಗಿ, ಟಿವಿಯಲ್ಲಿ…
ಕೋಟೇಶ್ವರ : ಶ್ರೀ ರಾಮ ಸೇವಾ ಸಂಘ ಇವರ ಸಹಕಾರದೊಂದಿಗೆ ‘ರಾಮಾಂಜನೇಯ’ ಎಂಬ ಪ್ರಸಂಗದ ಯಕ್ಷಗಾನ ತಾಳಮದ್ದಳೆಯು ದಿನಾಂಕ 18 ಆಗಸ್ಟ್ 2024ರಂದು ಮಧ್ಯಾಹ್ನ ಗಂಟೆ 2-30ರಿಂದ ಕೋಟೇಶ್ವರದ ಶ್ರೀ ಪಟ್ಟಾಭಿ ರಾಮಚಂದ್ರ ಕಲ್ಯಾಣ ಮಂದಿರದಲ್ಲಿ ನಡೆಯಲಿದೆ. ದ್ವಂದ್ವ ಭಾಗವತಿಕೆಯಲ್ಲಿ ಶ್ರೀ ಪ್ರಸನ್ನ ಭಟ್ ಬಾಳ್ಕಲ್ ಮತ್ತು ಶ್ರೀ ಲಂಬೋದರ ಹೆಗಡೆ, ಮದ್ದಳೆಯಲ್ಲಿ ಶ್ರೀ ಶಶಾಂಕ ಆಚಾರ್ ಹಾಗೂ ಚೆಂಡೆಯಲ್ಲಿ ಶ್ರೀ ಸಚಿನ್ ಆಚಾರ್ ಕುಂಭಾಶಿ ಮತ್ತು ಮುಮ್ಮೇಳದಲ್ಲಿ ವಿದ್ಯಾವಾಚಸ್ಪತಿ ಉಮಾಕಾಂತ್ ಭಟ್ ಶಿರಸಿ, ವಿದ್ವಾನ್ ಗಣಪತಿ ಭಟ್ ಸಂಕದಗುಂಡಿ, ಪ್ರೊ. ಪವನ್ ಕಿರಣಕೆರೆ ಹಾಗೂ ಶ್ರೀ ಸುನೀಲ್ ಹೊಲಾಡು ಇವರುಗಳು ಸಹಕರಿಸಲಿರುವರು.
ಮಂಗಳೂರು : ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಆ್ಯಂಡ್ ಕಲ್ಚರಲ್ ಹೆರಿಟೇಜ್ (ಇಂಟಾಕ್)ನ ಮಂಗಳೂರು ಅಧ್ಯಾಯ ಮತ್ತು ಆರ್ಟ್ ಕೆನರಾ ಟ್ರಸ್ಟ್ ಸಹಯೋಗದೊಂದಿಗೆ ‘ಕರ್ನಾಟಕದ ಸಂಗೀತ ಪರಂಪರೆ’ ಸರಣಿಯಲ್ಲಿ 6ನೇ ‘ಬೈಠಕ್’, ದಿನಾಂಕ 10 ಆಗಸ್ಟ್ 2024ರಂದು ಸಂಜೆ 6-00 ಗಂಟೆಗೆ ನಗರದ ಬಲ್ಲಾಲ್ ಬಾಗ್ ಕೊಡಿಯಾಲ್ಗುತ್ತು ಕಲೆ ಮತ್ತು ಸಂಸ್ಕೃತಿ ಕೇಂದ್ರದಲ್ಲಿ ಆಯೋಜಿಸಲಾಯಿತು. ಈ ಪಾರಂಪರಿಕ ಮನೆಯ ನಿಕಟ ಸೆಟ್ಟಿಂಗ್ ಶಾಸ್ತ್ರೀಯ ಸಂಗೀತದ ಅನುಭವಕ್ಕಾಗಿ ಪರಿಪೂರ್ಣ ವಾತಾವರಣವನ್ನು ಒದಗಿಸಿತು. ‘ಸಂಗೀತ ಸಂಜೆ’ ಹಿಂದೂಸ್ತಾನಿ ಶಾಸ್ತ್ರೀಯ ಕೊಳಲು ಕಲಾವಿದ ಕಿರಣ್ ಚಂದ್ರಶೇಖರ ಹೆಗಡೆ ಅವರ ನೇತೃತ್ವದಲ್ಲಿ ನಡೆಯಿತು. ತಬಲಾದಲ್ಲಿ ಭರವಿ ದೇರಾಜೆ ಮತ್ತು ತಾನ್ಪುರಾದಲ್ಲಿ ನಿಹಾರಿಕಾ ದೇರಾಜೆ ಸಹಕಲಾವಿದರಾಗಿ ಸಹಕರಿಸಿದರು. ಬೈಠಕ್ ವಿಲಂಬಿತ್ ಏಕತಾಲ್ನಲ್ಲಿ ಸಂಯೋಜನೆಗಳನ್ನೊಳಗೊಂಡ ಮಧುರವಾದ ರಾಗ್ ಯಮನ್ ನೊಂದಿಗೆ ಪ್ರಾರಂಭವಾಯಿತು. ನಂತರ ಮಧ್ಯಾಲಯ ಏಕತಾಲ್ ಮತ್ತು ದ್ರುತ್ ತೀನ್ತಾಲ್ನಲ್ಲಿ ಅಂತ್ಯಗೊಂಡಿತು. ಇದರ ನಂತರ ರಾಗ್ ಸುರ್ ಮಲ್ಹಾರ್ ನ ನಿರೂಪಣೆ ನಡೆಯಿತು. ಪ್ರೇಕ್ಷಕರ ಕೋರಿಕೆಯ ಮೇರೆಗೆ, ಕಲಾವಿದರು…
ಉಡುಪಿ : ಉಡುಪಿಯ ಹೋಟೆಲ್ ಕಿದಿಯೂರು ಶೇಷಶಯನ ಸಭಾಂಗಣದಲ್ಲಿ ದಿನಾಂಕ 10 ಆಗಸ್ಟ್ 2024ರಂದು ನಡೆದ ಮಹಾಸಭೆಯಲ್ಲಿ ಉಡುಪಿಯ ಸಾಂಸ್ಕೃತಿಕ ಸಂಸ್ಥೆಗಳಲ್ಲಿ ಒಂದಾದ ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ.) ಉಡುಪಿ ಇದರ ಗೌರವಾಧ್ಯಕ್ಷರಾಗಿ ಉಡುಪಿ ವಿಶ್ವನಾಥ ಶೆಣೈ ಹಾಗೂ ಅಧ್ಯಕ್ಷರಾಗಿ ಪ್ರೊ. ಶಂಕರ್ ಪುನರ್ ಆಯ್ಕೆಯಾಗಿರುತ್ತಾರೆ. ಉಪಾಧ್ಯಕ್ಷರಾಗಿ ಮರವಂತೆ ನಾಗರಾಜ ಹೆಬ್ಬಾರ್, ಸಂಧ್ಯಾ ಶೆಣೈ, ಜೀವನ್ ರಾಂ ಸುಳ್ಯ, ವಿಘ್ನೇಶ್ವರ ಅಡಿಗ, ಮನೋಹರ್ ನಾಯಕ್, ಮಧುಸೂದನ್ ಹೇರೂರು, ಸುಗುಣ ಸುವರ್ಣ, ಗೌರವ ಸಲಹೆಗಾರರಾಗಿ ಜಯಕರ್ ಶೆಟ್ಟಿ ಇಂದ್ರಾಳಿ, ರವೀಂದ್ರ ಪೂಜಾರಿ ತೆಳ್ಳಾರು, ರಾಜಗೋಪಾಲ್ ಬಲ್ಲಾಳ, ಡಾ. ಸುರೇಶ್ ಶೆಣೈ, ಡಾ. ಹರೀಶ್ಚಂದ್ರ, ಡಾ. ವಿರೂಪಾಕ್ಷ ದೇವರಮನೆ, ಡಾ. ವಿಜಯೇಂದ್ರ ವಸಂತ್, ಜನಾರ್ದನ ಕೊಡವೂರು, ಮನೋಹರ್ ಶೆಟ್ಟಿ ತೊನ್ಸೆ, ಪ್ರಧಾನ ಕಾರ್ಯದರ್ಶಿಯಾಗಿ ಶಿಲ್ಪಾ ಜೋಶಿ, ಕಾರ್ಯದರ್ಶಿಯಾಗಿ ಪೂರ್ಣಿಮಾ ಜನಾರ್ದನ್, ಜನಾರ್ದನ ಹಾವಂಜೆ, ಕೋಶಾಧಿಕಾರಿಯಾಗಿ ರಾಜೇಶ್ ಭಟ್ ಪಣಿಯಾಡಿ, ಕಾನೂನು ಸಲಹೆಗಾರರಾಗಿ ಶಶಿರಾಜ್ ಕಾವೂರು, ಸಂಚಾಲಕರಾಗಿ ರವಿರಾಜ್ ಹೆಚ್.ಪಿ. ಆಯ್ಕೆಗೊಂಡರು. ಸಂಸ್ಥೆಯ ಮಹಾಪೋಷಕರಾಗಿ ಸಿ.ಎಸ್.…
ಬೆಂಗಳೂರು : ಆಕೃತಿ ಕನ್ನಡ ಪ್ರಕಾಶನ, ಬೆಂಗಳೂರು ಇದರ ವತಿಯಿಂದ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಹಾಗೂ ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಹೂಲಿ ಶೇಖರ್ 70 ಪ್ರಯುಕ್ತ ‘ಹೂಲಿ ರಂಗ ಶಿಖರ’ ಅಭಿನಂದನಾ ಗ್ರಂಥ ಬಿಡುಗಡೆ ಕಾರ್ಯಕ್ರಮವನ್ನು ದಿನಾಂಕ 18 ಆಗಸ್ಟ್ 2024ರಂದು ಬೆಳಗ್ಗೆ 10-00 ಗಂಟೆಗೆ ಬೆಂಗಳೂರಿನ ದೊಡ್ಡಕಲ್ಲ ಸಂದ್ರದ ಶಂಕರ ಫೌಂಡೇಷನ್ ಇಲ್ಲಿ ಹಮ್ಮಿಕೊಳ್ಳಲಾಗಿದೆ. ಖ್ಯಾತ ರಂಗ ನಿರ್ದೇಶಕರು ಮತ್ತು ಲೇಖಕರಾದ ಡಾ. ವಿಜಯಮ್ಮ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಖ್ಯಾತ ರಂಗ ಭೂಮಿ ಮತ್ತು ಚಲನಚಿತ್ರ ನಿರ್ದೇಶಕರಾದ ಶ್ರೀ. ಟಿ.ಎಸ್. ನಾಗಾಭರಣ ಇವರು ಅಭಿನಂದನಾ ಗ್ರಂಥ ಲೋಕಾರ್ಪಣೆ ಮಾಡಲಿರುವರು. ಖ್ಯಾತ ರಂಗ ಸಂಘಟಕರಾದ ಶ್ರೀ ಜಿ. ಶ್ರೀನಿವಾಸ (ಕಪ್ಪಣ್ಣ) ಇವರು ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದು, ಬೆಂಗಳೂರಿನ ಖ್ಯಾತ ಲೇಖಕರಾದ ಡಾ. ಗಿರಿಜಾ ಶಾಸ್ತ್ರಿ ಇವರು ಪುಸ್ತಕ ಪರಿಚಯ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಪ್ರದೀಪ್ ಆರ್. ಇವರಿಂದ ರಂಗಗೀತೆ ಗಾಯನ ನಡೆಯಲಿದೆ.
ಬೆಂಗಳೂರು : ಭಾರತೀಯ ಸಂಗೀತ ನೃತ್ಯ ಕಲಾವಿದರ ಒಕ್ಕೂಟ ಕರ್ನಾಟಕ ಇದರ ವತಿಯಿಂದ ಬೆಂಗಳೂರು ಕೇಂದ್ರ ವಲಯದ ಉದ್ಘಾಟನೆಯು ದಿನಾಂಕ 10 ಆಗಸ್ಟ್ 2024ರಂದು ರಾಜಾಜಿನಗರ ಶ್ರೀ ರಾಮ ಮಂದಿರದಲ್ಲಿ ನಡೆಯಿತು. ಶ್ರೀ ರಾಮ ಮಂದಿರದ ಅಧ್ಯಕ್ಷರಾದ ಶ್ರೀ ಕೆ.ಎಸ್. ಶ್ರೀಧರ, ಒಕ್ಕೂಟದ ಗೌರವಾಧ್ಯಕ್ಷರಾದ ಕರ್ನಾಟಕ ಕಲಾಶ್ರೀ ವಿದ್ವಾನ್ ಕೆ.ಎಸ್. ಮೋಹನ ಕುಮಾರ ಮತ್ತು ವಲಯದ ಸಂಚಾಲಕಿ ವಿದುಷಿ ಐಶ್ವರ್ಯ ರಮೇಶ್ ಇವರು ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಸಂಗೀತ ನೃತ್ಯ ಕ್ಷೇತ್ರದ ಬೆಳವಣಿಗೆಗೆ ಸಹಕಾರ ಕೋರಿದರು. ವಿದ್ವಾನ್ ಶ್ರೀ ಡಾ. ಎಂ.ವಿ. ಶ್ರೀನಿವಾಸ ಮೂರ್ತಿಯವರ ಗಾಯನ ಅತ್ಯಂತ ಸೊಗಸಾಗಿ ಮೂಡಿ ಬಂದಿತು. ಪಿಟೀಲಿನಲ್ಲಿ ಮಾಸ್ಟರ್ ಶ್ರೀ ಹರಿ ಸಂಜೀವ್, ಮೃದಂಗ ವಿದ್ವಾನ್ ಶ್ರೀ ಬೆಟ್ಟ ವೆಂಕಟೇಶ್ ಮತ್ತು ಖಂಜೀರದಲ್ಲಿ ವಿದ್ವಾನ್ ಸುಬ್ರಹ್ಮಣ್ಯ ಮೋಹಿತೆಯವರು ಅತ್ಯುತ್ತಮವಾಗಿ ಸಹಕರಿಸಿದರು.
ಅಸ್ಸಾಂ : ಕರಾವಳಿಯ ನೃತ್ಯ ಕಲಾವಿದ ವಿದ್ವಾನ್ ಮಂಜುನಾಥ ಎನ್. ಪುತ್ತೂರು ಇವರು ಅಸ್ಸಾಂನ ಲಬ್ಡಿಂಗ್ ಸಿಟಿಯ ಬಿಧಾಣಪಲ್ಲಿ ಸ್ವರಾಜ್ ಮಂಚ್ ಇಲ್ಲಿ ದಿನಾಂಕ 12 ಆಗಸ್ಟ್ 2024ರಿಂದ 14 ಆಗಸ್ಟ್ 2024ರವೆರೆಗೆ ನೃತ್ಯ ಪ್ರದರ್ಶನ ಮತ್ತು ಮೂರು ದಿನಗಳ ಭರತನಾಟ್ಯ ಕಾರ್ಯಾಗಾರವನ್ನು ನಡೆಸಿಕೊಡಲಿದ್ದಾರೆ. ಮಾನಶಾ ಡ್ಯಾನ್ಸ್ ಅಕಾಡೆಮಿಯ ನೃತ್ಯಗುರು ಶ್ರೀ ಶಿವದಾಸ್ ರಿಯಾಂಶ್ ಇವರು ಈ ಕಾರ್ಯಾಗಾರ ಮತ್ತು ನೃತ್ಯ ಪ್ರದರ್ಶನವನ್ನು ಹಮ್ಮಿಕೊಂಡಿದ್ದು, ಮಂಜುನಾಥ್ ಇವರ ಜೊತೆಗೆ ಕೋಲ್ಕತ್ತಾದ ನೃತ್ಯ ಕಲಾವಿದ ಶ್ರೀ ಎನ್. ದೇಬಾಶಿಷ್ ನಾಶ್ಕರ್ ಇವರು ನೃತ್ಯ ಪ್ರದರ್ಶನ ನೀಡಲಿದ್ದಾರೆ.
ಬೆಂಗಳೂರು : ಸಪ್ತಕ ಬೆಂಗಳೂರು ಅರ್ಪಿಸುವ ‘ಸ್ವರ ಸಂಧ್ಯಾ’ ಕಾರ್ಯಕ್ರಮವನ್ನು ದಿನಾಂಕ 15-08-2024ರಂದು ಸಂಜೆ 5-00 ಗಂಟೆಗೆ ಬೆಂಗಳೂರಿನ ಬಸವನಗುಡಿ ಶ್ರೀ ಬಿ.ಪಿ. ವಾಡಿಯಾ ರೋಡ್ ಇಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಇಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಪುಣೆಯ ಡಾ. ಶಾಂತನು ಗೋಖಲೆ ಸಂತೂರ್ ಹಾಗೂ ಯು.ಎಸ್.ಎ.ಯ ಶ್ರೀ ರಿತ್ವಿಕ್ ಇವರ ತಬಲಾ ವಾದನ ಮತ್ತು ಶ್ರೀ ಸಮೀರ ವಿ. ಕುಲಕರ್ಣಿ ಇವರ ಗಾಯನಕ್ಕೆ ಶ್ರೀ ಯೋಗೀಶ ಬಟ್ಟ ತಬಲಾದಲ್ಲಿ ಶ್ರೀ ಸಮೀರ ಹವಾಲ್ದಾರ್ ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ.
ಮಣಿಪಾಲ : ಮಣಿಪಾಲ್ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಮತ್ತು ಮಣಿಪಾಲ್ ಇನ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ ಸಹಯೋಗದಲ್ಲಿ ರೇಡಿಯೋ ಮಣಿಪಾಲ್ ಸಮುದಾಯ ಬಾನುಲಿ ಕೇಂದ್ರವು ಸ್ವಾತಂತ್ರೋತ್ಸವದ ಅಂಗವಾಗಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ಉಡುಪಿ ಜಿಲ್ಲಾ ಮಟ್ಟದ ದೇಶಭಕ್ತಿ ಗೀತೆ ಸಮೂಹ ಗಾಯನ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭವು ದಿನಾಂಕ 08 ಆಗಸ್ಟ್ 2024ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಇದರ ಸಹ ಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಇವರು ಮಾತನಾಡಿ “ದೇಶ ಪ್ರೇಮ ಎಲ್ಲರಲ್ಲಿ ಎಳವೆಯಿಂದಲೇ ಬೆಳೆಯಬೇಕು. ದೇಶದ ಬಗೆಗೆ ಪ್ರೇಮವನ್ನು ಹೊಂದಿದಾಗ ಮಾತ್ರ ಸಶಕ್ತ ಭಾರತದ ನಿರ್ಮಾಣ ಸಾಧ್ಯ. ಈ ಹಿನ್ನಲೆಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಲ್ಲಿ ದೇಶಪ್ರೇಮ ಮೂಡಿಸುವ ಉದ್ದೇಶದಿಂದ ರೇಡಿಯೋ ಮಣಿಪಾಲ್ ನಲ್ಲಿ ಆಯೋಜಿಸಲಾದ ದೇಶ ಭಕ್ತಿಗೀತೆ ಸಮೂಹ ಗಾಯನ ಸ್ಪರ್ಧಾ ಕಾರ್ಯಕ್ರಮ ಅಭಿನಂದನೀಯ” ಎಂದು ಹೇಳಿದರು. ಮಣಿಪಾಲ್ ಇನ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ (ಎಮ್.ಐ.ಸಿ.) ಸಂಸ್ಥೆಯ ನಿರ್ದೆಶಕರಾದ ಡಾ. ಪದ್ಮಾರಾಣಿಯವರು…
ಸುರತ್ಕಲ್ : ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ.) ಮತ್ತು ಸುರತ್ಕಲ್ ನಾಗರಿಕ ಸಲಹಾ ಸಮಿತಿ (ರಿ.) ಈ ಸಂಸ್ಥೆಗಳು ಜಂಟಿಯಾಗಿ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಪ್ರಸ್ತುತ ಪಡಿಸುವ ವಿಶೇಷ ಕಾರ್ಯಕ್ರಮ ‘ಉದಯರಾಗ – 54’ನೇ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿಯು ಸುರತ್ಕಲ್ಲಿನ ಅನುಪಲ್ಲವಿಯ ಶ್ರೀ ವಿಶ್ವೇಶತೀರ್ಥ ಸಭಾಂಗಣದಲ್ಲಿ ದಿನಾಂಕ 15-08-2024 ಭಾನುವಾರ ಪೂರ್ವಾಹ್ನ ಗಂಟೆ 6-00ಕ್ಕೆ ನಡೆಯಲಿದೆ. ಶೃಂಗೇರಿಯ ಸೀತಾಪ್ರಜ್ಞಾ ಡಿ.ಎಸ್. ಇವರ ಹಾಡುಗಾರಿಕೆಗೆ ಮಂಗಳೂರಿನ ಧನಶ್ರೀ ಶಬರಾಯ ವಯಲಿನ್, ಪುತ್ತೂರಿನ ಅಚಿಂತ್ಯಕೃಷ್ಣ ಮೃದಂಗ ಹಾಗೂ ಇನ್ನಂಜೆ ಕಾರ್ತಿಕ್ ಭಟ್ ಖಂಜೀರದಲ್ಲಿ ಸಾಥ್ ನೀಡಲಿದ್ದಾರೆ. ಭಾರತೀಯ ಭೂ ಸೇನೆಯ ನಿವೃತ್ತ ಯೋಧರಾದ ಶ್ರೀ ಸಚ್ಚಿದಾನಂದ ಕೆ. ಹೊಸಬೆಟ್ಟು ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವರು. ಮಣಿ ಕೃಷ್ಣಸ್ವಾಮಿ ಆಕಾಡಮಿಯ ಕಾರ್ಯದರ್ಶಿಯಾದ ಪಿ. ನಿತ್ಯಾನಂದ ರಾವ್ ಹಾಗೂ ಸುರತ್ಕಲ್ ನಾಗರಿಕ ಸಲಹಾ ಸಮಿತಿ ಅಧ್ಯಕ್ಷರಾದ ಡಾ. ಕೆ. ರಾಜಮೋಹನ್ ರಾವ್ ತಮಗೆಲ್ಲರಿಗೂ ಆದರದ ಸ್ವಾಗತ ಬಯಸಿದ್ದಾರೆ.