Author: roovari

ಬೆಳಗಾವಿ : ರಂಗಸಂಪದ ಬೆಳಗಾವಿಯು ಆಯೋಜಿಸಿದ ಮೂರು ದಿನಗಳ ಹೆರಿಟೇಜ್ ಕಿಚನ್ ನಾಟಕೋತ್ಸವವು ದಿನಾಂಕ 30-09-2023ರಂದು ಬೆಳಗಾವಿಯ ಟಿಳಕ ಚೌಕ್ ಹತ್ತಿರದ ಕೊನವಾಳ ಗಲ್ಲಿಯ ಲೋಕಮಾನ್ಯ ರಂಗಮಂದಿರದಲ್ಲಿ ಉದ್ಘಾಟನೆಗೊಂಡಿತು. ಶ್ರೀಮತಿ.ಸುಮನ ಮತ್ತು ಶ್ರೀ.ಸುಧೀರ ಸಾಲಿಯಾನ ದೀಪ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಶ್ರೀ.ಗುರುನಾಥ ಕುಲಕರ್ಣಿ ಅತಿಥಿಗಳಿಗೆ ಪುಷ್ಪ ನೀಡಿ ಸ್ವಾಗತಿಸಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶ್ರೀ.ಸುಧೀರ ಸಾಲಿಯಾನ “ನಾಟಕ ಮತ್ತು ಯಕ್ಷಗಾನ ಕಲಾವಿದರಿಗೆ ಬದುಕಾದರೆ ಪ್ರೇಕ್ಷಕರಿಗೆ ಮನೋರಂಜನೆ” ಎಂದು ರಂಗಸಂಪದ ಬೆಳಗಾವಿಯ ರಂಗಚಟುವಟಿಕೆಗಳನ್ನು ಪ್ರೋತ್ಸಾಹಿಸಿ ಮಾತನಾಡಿದರು. ನಿವೃತ್ತ ಪ್ರಾಚಾರ್ಯ ಡಾ.ಬಸವರಾಜ ಜಗಜಂಪಿ “ಮರಣ ಮೃದಂಗ ನಾಟಕ ಪ್ರಚಲಿತವಾದ ರಾಜಕೀಯವನ್ನು ಹೆಜ್ಜೆ ಹೆಜ್ಜೆಗೂ ನಮಗೆ ಮನವರಿಕೆ ಮಾಡಿಕೊಡುವಂಥ ಕಥಾವಸ್ತು. ಕಾಲ ಬದಲಾದರೂ ರಾಜಕೀಯ ಬದಲಾಗುವುದಿಲ್ಲ ಎಂಬುದಕ್ಕೆ ಈ ನಾಟಕ ಸಾಕ್ಷಿಯಾಗಿದೆ” ಎಂದರು. ನಟ ಹಾಗೂ ನಿರ್ದೇಶಕ ಯಶವಂತ ಸರದೇಶಪಾಂಡೆ ಮಾತನಾಡಿ “ರಂಗಭೂಮಿಗೆ ಹಾಗೂ ಹೊಸ ಹೊಸ ಕಲಾವಿದರಿಗೆ ಅವಕಾಶ ಕೊಡುವ ಜತೆಗೆ ಪ್ರೇಕ್ಷಕರಲ್ಲಿ ರಂಗಾಸಕ್ತಿ ಮೂಡಿಸುವಂತಹ ಪಾಮಾಣಿಕ ಪ್ರಯತ್ನವನ್ನು…

Read More

ಉಡುಪಿ : ರಂಗಭೂಮಿ (ರಿ.) ಉಡುಪಿ ಆಯೋಜಿಸುತ್ತಿರುವ 2 ದಿನಗಳ ವಿವಿಧ ರಂಗ ತರಬೇತಿಯ ಸರಣಿ ಕಾರ್ಯಾಗಾರದ 13ನೇ ಶಿಬಿರವು ದಿನಾಂಕ 14-10-2023ನೇ ಶನಿವಾರ ಹಾಗೂ 15-10-2023ನೇ ಭಾನುವಾರ ಬೆಳಿಗ್ಗೆ 9.00 ರಿಂದ ಸಂಜೆ 7.00ರ ವರೆಗೆ ಉಡುಪಿಯ ಎಂ.ಜಿ.ಎಂ ಕಾಲೇಜಿನ ಗೀತಾಂಜಲಿ ಸಭಾಭವನದಲ್ಲಿ ನಡೆಯಲಿದೆ. ರಂಗಭೂಮಿ (ರಿ.) ಉಡುಪಿ ಉಡುಪಿಯಲ್ಲಿ 2021ರ ಅಕ್ಟೋಬರ್‌ನಿಂದ ಪ್ರತೀ ತಿಂಗಳ 2ನೇ ಯಾ 3ನೇ ವಾರಾಂತ್ಯದಲ್ಲಿ ರಾಜ್ಯದ ಹಲವಾರು ಹೆಸರಾಂತ ರಂಗಕರ್ಮಿಗಳ ಸಹಕಾರದೊಂದಿಗೆ 2 ದಿನಗಳ ವಿವಿಧ ರಂಗ ತರಬೇತಿಯ ಸರಣಿ ಕಾರ್ಯಾಗಾರವನ್ನು ಆಯೋಜಿಸುತ್ತಿದೆ. ಈ ಬಾರಿ ಹೆಸರಾಂತ ನಿರ್ದೇಶಕ ಮತ್ತು ತಂತ್ರಜ್ಞ ನೀನಾಸಂ ಪದವೀಧರರಾದ ಶ್ರೀ ರಿಯಾಜ್ ಸಿಹಿಮೊಗೆ ಹಾಗೂ ಹೆಸರಾಂತ ನಿರ್ದೇಶಕಿ, ತಂತ್ರಜ್ಞೆ ಮತ್ತು ಎನ್.ಎಸ್.ಡಿ. ಪದವೀಧರೆಯಾದ ಡಾ. ಸಹನ ಪಿಂಜಾರ್ ಈ ಶಿಬಿರವನ್ನು ನಡೆಸಿಕೊಡಲಿದ್ದಾರೆ. ಶ್ರೀ ರಿಯಾಜ್ ಸಿಹಿಮೊಗೆ: ನೀನಾಸಂ ರಂಗ ಶಿಕ್ಷಣ ಕೇಂದ್ರ ಪದವೀಧರರಾದ ಇವರು ನಾಟಕ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡಿದ್ದಿದ್ದಾರೆ. ಕಳೆದ 15ವರ್ಷಗಳಿಂದ ರಂಗ ಭೂಮಿಯಲ್ಲಿ…

Read More

ಉಡುಪಿ : ತುಳು ರಂಗಭೂಮಿ ಅನ್ಯ ಭಾಷಾ ರಂಗಭೂಮಿಗಳಿಗೆ ಸರಿಸಮನಾಗಿ ಬೆಳೆಯಬೇಕು ಎಂಬ ಉದ್ದೇಶದಿಂದ ಪ್ರಾರಂಭಗೊಂಡ ಕೆಮ್ತೂರು ನಾಟಕ ಪ್ರಶಸ್ತಿಗಾಗಿ ಕೆಮ್ತೂರು ದೊಡ್ಡಣ್ಣ ಶೆಟ್ಟಿ ಸ್ಮಾರಕ ತುಳು ನಾಟಕ 22ನೇ ವರ್ಷದ ಸ್ಪರ್ಧೆಯನ್ನು 2024ರ ಜನವರಿ ಮೊದಲ ವಾರದಿಂದ ಉಡುಪಿಯಲ್ಲಿ ಆಯೋಜಿಸಲಾಗಿದೆ. ದೇಶದ ಯಾವುದೇ ಪ್ರದೇಶದ ಯೋಗ್ಯ ತುಳು ಹವ್ಯಾಸಿ ನಾಟಕ ತಂಡಗಳಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದೆ. ಗರಿಷ್ಠ 7 ನಾಟಕಗಳನ್ನು ಆಯ್ಕೆ ಮಾಡಲಾಗುವುದು. ವಿಜೇತ ತಂಡಗಳಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳೊಂದಿಗೆ ರೂ.20,000/-, ರೂ.15,000/- ಮತ್ತು ರೂ.10,000/- ನಗದು ಬಹುಮಾನ ಅಲ್ಲದೇ ನಿರ್ದೇಶನ, ಸಂಗೀತ, ರಂಗವಿನ್ಯಾಸ, ಬೆಳಕು, ನಟ, ನಟಿ ವಿಭಾಗಗಳಲ್ಲಿ ಪ್ರಥಮ ರೂ.1,000/- ಮತ್ತು ದ್ವಿತೀಯ, ತೃತೀಯ ಬಹುಮಾನ ಕೊಡಲಾಗುವುದು. ಸ್ಪರ್ಧೆಗೆ ಆಯ್ಕೆಯಾದ ರಾಜ್ಯದೊಳಗಿನ ತಂಡಗಳಿಗೆ ರೂ.5,000/- ಮತ್ತು ಹೊರರಾಜ್ಯದ ತಂಡಗಳಿಗೆ ರೂ.10,000/- ಭತ್ತೆಯೊಂದಿಗೆ ಊಟ ಉಪಚಾರ ಮತ್ತು ಉತ್ತಮ ಸೌಕರ್ಯ ಒದಗಿಸಲಾಗುವುದು. ಭಾಗವಹಿಸಲಿಚ್ಛಿಸುವ ಕ್ರಿಯಾಶೀಲ ತುಳು ಹವ್ಯಾಸಿ ರಂಗತಂಡಗಳು ಮುದ್ರಿತ ಪ್ರವೇಶ ಪತ್ರ ಮತ್ತು ನಿಯಮಾವಳಿಗಳ…

Read More

ಬೆಂಗಳೂರು : ಹದಿನೈದು ವಸಂತಗಳನ್ನು ಪೂರೈಸಿರುವ ಬೆಂಗಳೂರಿನ ಚಿತ್ಪಾವನ ಮಹಿಳಾ ಯಕ್ಷಗಾನ ಮೇಳ (ರಿ) ಹೆಚ್ಚು ಹೆಚ್ಚು, ವಿಭಿನ್ನ ಯಕ್ಷಗಾನ ಪ್ರದರ್ಶನಗಳನ್ನು ನೀಡುವ ಮೂಲಕ ಕಲಾರಸಿಕರ ಮನೆ, ಮನಸ್ಸಿನ ಮಾತಾಗುತ್ತಿದೆ. ಹವ್ಯಾಸಿ ತಂಡವಾಗಿದ್ದರೂ ವ್ಯವಸಾಯೀ ತಂಡಕ್ಕೆ ಸರಿಸಮನಾಗಿ ಪ್ರದರ್ಶನದ ಗುಣಮಟ್ಟದ ನಿರಂತರ ಪ್ರಗತಿ ಸಾಧಿಸುತ್ತಿದೆ. ನುರಿತ ಕಲಾವಿದೆಯರ ಜೊತೆಗೆ ಯುವ ರಕ್ತದ  ಸೇರ್ಪಡೆ ಮೇಳಕ್ಕೆ ವ್ಯಾಪಕ ಆಯಾಮವನ್ನು ನೀಡುತ್ತಿದೆ. ಮಂಗಳಾದೇವಿ ಮೇಳದ ಹೆಸರಾಂತ ಭಾಗವತರಾದ ಶ್ರೀಯುತ ಯೋಗೀಶ್ ಶರ್ಮರು ಆಸಕ್ತಿ ತೋರಿ ಹೊಸ ಪ್ರಸಂಗಗಳ ತರಬೇತಿ/ನಿರ್ದೇಶನ ನೀಡುತ್ತಿರುವುದು ಇದಕ್ಕೆ ಸಾಕ್ಷಿ. ದಿನಾಂಕ 02-10-2023ರಂದು ನಾಗರಬಾವಿ ಕೆನರಾ ಬ್ಯಾಂಕ್ ಕಾಲೋನಿಯ ಅಮ್ಮೆಂಬಳ ಸುಬ್ಬರಾವ್ ಕಲಾಮಂಟಪದಲ್ಲಿ ನಡೆದ ‘ಬಿಲ್ಲ ಹಬ್ಬ ಕಂಸವಧೆ’ ನೆರೆದಿದ್ದ ಅಪಾರ ಯಕ್ಷಾಭಿಮಾನಿಗಳ ಮನ ಸೂರೆಗೈದಿತು. ಕಂಸನಾಗಿ ಶ್ರೀಮತಿ ಪೂನಂ ಗೋಖಲೆ ಅಮೋಘ ಅಭಿನಯ ನೀಡಿದರು. ಕೆಟ್ಟ ಕನಸಿಂದ ಮಂಚದಿಂದ ಬಿದ್ದು ಭಯ, ರೋಷದಿಂದ ತಲ್ಲಣಗೊಳ್ಳುವ ದೃಶ್ಯವಂತೂ ಬಹುಕಾಲ ಮನದಲ್ಲಿ ನೆಲೆಗೊಳ್ಳುವಂತಹುದು. ಕೃಷ್ಣನಾಗಿ ಶ್ರೀಮತಿ ಅನುಪಮಾ ಮರಾಠೆಯವರ ಎಂದಿನ ಪ್ರೌಢ ಅಭಿನಯ…

Read More

ಮಂಗಳೂರು: ಸಂಗೀತ ಪರಿಷತ್ ಮಂಗಳೂರು ಮತ್ತು ಭಾರತೀಯ ವಿದ್ಯಾಭವನ ಸಂಸ್ಥೆಗಳ ಸಂಯುಕ್ತ ಆಶಯದಲ್ಲಿ ಮಂಗಳೂರು, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ ಸಂಗೀತಾಭ್ಯಾಸಿಗಳಿಗೆ ಕರ್ನಾಟಕ ಶಾಸ್ತ್ರೀಯ ಸಂಗೀತ ಸರ್ಧೆಗಳನ್ನು ಆಯೋಜಿಸಲಾಗಿದೆ. 15 ವರ್ಷಗಳಿಗಿಂತ ಕೆಳಗಿನವರು ಜೂನಿಯರ್ ಹಾಗೂ 20 ವರ್ಷಗಳಿಗಿಂತ ಕೆಳಗಿನವರು ಸೀನಿಯರ್ ವಿಭಾಗದಲ್ಲಿ ಸ್ಪರ್ಧಿಸಬಹುದು. ಸ್ಪರ್ಧೆಗಳು ದಿನಾಂಕ 15-10-2023ರಂದು ಭಾರತೀಯ ವಿದ್ಯಾಭವನದಲ್ಲಿ ನಡೆಯಲಿವೆ. ಜೂನಿಯರ್ ವಿಭಾಗದಲ್ಲಿ ಸ್ಪರ್ಧಿಯು ಎರಡು ವಿಳಂಬ ಕಾಲ ಮತ್ತು ಎರಡು ಮಧ್ಯಮ ಕಾಲದ ಕೃತಿಗಳನ್ನು ಹಾಡಲು ಸಮರ್ಥರಿರಬೇಕು. ಸೀನಿಯರ್ ವಿಭಾಗದಲ್ಲಿ ಸ್ಪರ್ಧಿಯು ಒಂದು ವರ್ಣ, ಮೂರು ಬೇರೆ ಬೇರೆ ವಾಗ್ಗೇಯಕಾರರ ಒಂದೊಂದು ಕೃತಿಗಳನ್ನು ಆಲಾಪನೆ, ನೆರವಲ್, ಸ್ವರ ಪ್ರಸ್ತಾರ ಸಹಿತ ಮತ್ತು ಒಂದು ದೇವರ ನಾಮ/ತಿಲ್ಲಾನ/ ಜಾವಳಿಗಳನ್ನು ಹಾಡಲು ತಯಾರಿ ನಡೆಸಬೇಕು. ಅರ್ಜಿ ಸಲ್ಲಿಸಲು ಕೊನೆ ದಿನಾಂಕ 10-10-2023. ವಿಜೇತರಾದವರನ್ನು ಮಂಗಳೂರು ಸಂಗೀತೋತ್ಸವದ ಸಂದರ್ಭ ಗೌರವಿಸಲಾಗುವುದು. ಅರ್ಜಿಗಳನ್ನು ಸಂಗೀತ ಪರಿಷತ್‌ ಮಂಗಳೂರು 12-1-33, ಸಿಂಧೂರ, ನ್ಯೂಫೀಲ್ಡ್‌ ರಸ್ತೆ, ಮಹಾ ಮಾಯ ದೇವಸ್ಥಾನದ ಹತ್ತಿರ, ರಥಬೀದಿ, ಮಂಗಳೂರು- 575001…

Read More

ಕಾಸರಗೋಡು : ಕಾಸರಗೋಡಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯಾದ ರಂಗಚಿನ್ನಾರಿ ಕಾಸರಗೋಡು (ರಿ.), ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ವಿದ್ಯಾರ್ಥಿಗಳ ‘ಸ್ನೇಹರಂಗ’ ಸಾದರ ಪಡಿಸುವ ‘ಕನ್ನಡ ವಿದ್ಯಾರ್ಥಿ ಕಲರವ’ ಕಾರ್ಯಕ್ರಮವು ದಿನಾಂಕ 07-10- 2023ರ ಶನಿವಾರದಂದು ಬೆಳಗ್ಗೆ ಘಂಟೆ 10.00 ರಿಂದ ನಡೆಯಲಿದೆ. ಕಾಸರಗೋಡು ಕರಂದಕ್ಕಾಡಿನ ಪದ್ಮಗಿರಿ ಕಲಾಕುಟೀರದಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಖ್ಯಾತ ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದರರಾದ ಶ್ರೀ ಭೋಜರಾಜ್ ವಾಮಂಜೂರು ಉದ್ಘಾಟಿಸಲಿರುವರು. ಮಾಜಿ ನಗರ ಸಭಾಧ್ಯಕ್ಷರಾದ ಶ್ರೀ ಎಸ್.ಜೆ ಪ್ರಸಾದ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವ ಈ ಸಮಾರಂಭದಲ್ಲಿ ಕಾಸರಗೋಡು ಸರಕಾರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಮತ್ತು ಸ್ನೇಹರಂಗದ ಮಾರ್ಗದರ್ಶಕಿಯಾದ ಡಾ.ಆಶಾಲತಾ ಚೇವಾರ್ ಹಾಗೂ ಸ್ನೇಹರಂಗದ ಅಧ್ಯಕ್ಷರಾದ ಶ್ರೀ ಲೋಹಿತ್ ಉಪಸ್ಥಿತರಿರುವರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರಕಾರಿ ಕಾಲೇಜು ಕಾಸರಗೋಡಿನ  ಕನ್ನಡ ವಿಭಾಗ ಮುಖ್ಯಸ್ಥರಾದ ಶ್ರೀಮತಿ ಸುಜಾತ ವಹಿಸಲಿದ್ದಾರೆ.

Read More

ಮಂಗಳೂರು : ಜಲ್ಲಿಗುಡ್ಡೆಯ ಸ್ವಸ್ತಿಕ್ ಕಲಾ ಕೇಂದ್ರ (ರಿ.) ಇದರ ವತಿಯಿಂದ ಯಕ್ಷರಂಗದ ಕಣ್ಮಣಿ ದಿ| ಬಾಬು ಕುಡ್ತಡ್ಕ ಅವರ ಹೆಸರಿನಲ್ಲಿ ಪ್ರತೀ ವರ್ಷ ನೀಡಲಾಗುವ ಪ್ರತಿಷ್ಠಿತ ‘ಬಾಬು ಕುಡ್ತಡ್ಕ ಪ್ರಶಸ್ತಿ’ಗೆ ತೆಂಕುತಿಟ್ಟಿನ ಹೆಸರಾಂತ ಹಿರಿಯ ಕಲಾವಿದ ವೇಣೂರು ಸದಾಶಿವ ಕುಲಾಲ್‌ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ರೂ.10,000 ನಗದು ಪುರಸ್ಕಾರದೊಂದಿಗೆ ಸ್ಮರಣಿಕೆ, ಪ್ರಶಸ್ತಿ ಪತ್ರ ಹಾಗೂ ಫಲಕಾಣಿಕೆಯನ್ನೊಳಗೊಂಡಿರುತ್ತದೆ. ಮಂಗಳೂರಿನ ಕುದ್ಮುಲ್ ರಂಗರಾವ್‌ ಪುರಭವನದಲ್ಲಿ ದಿನಾಂಕ 08-10-2023ರಂದು ಸಂಜೆ 3 ಗಂಟೆಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಈ ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಶ್ರೀ ಸುಧೀರ್ ಶೆಟ್ಟಿ ಕಣ್ಣೂರು ಇವರು ವಹಿಸಲಿದ್ದು, ಮಾಜಿ ಸರಕಾರಿ ಮುಖ್ಯ ಸಚೇತಕರಾದ ಐವನ್ ಡಿಸೋಜಾ, ಪಡೀಲಿನ ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನದ ಟ್ರಸ್ಟಿಯಾದ ಡಾ. ಅಣ್ಣಯ್ಯ ಕುಲಾಲ್, ಮಾಜಿ ಶಾಸಕರಾದ ಶ್ರೀ ಜೆ.ಆರ್. ಲೋಬೋ ಮತ್ತು ಶ್ರೀದೇವಿ ಶಿಕ್ಷಣ ಸಮೂಹ ಸಂಸ್ಥೆಗಳ ಟ್ರಸ್ಟಿಯಾದ ಶ್ರೀ ಎ.ಸದಾನಂದ ಶೆಟ್ಟಿ ಇವರುಗಳು ವಿಶೇಷ ಅಭ್ಯಾಗತರಾಗಿ ಆಗಮಿಸಲಿರುವರು.…

Read More

ಉಡುಪಿ : ನಮ ತುಳುವೆರ್ ಕಲಾ ಸಂಘಟನೆ (ರಿ.) ಮತ್ತು ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ಜಿಲ್ಲೆ, ಹೆಬ್ರಿ ತಾಲೂಕು ಘಟಕ ಇವರ ಸಹಕಾರದೊಂದಿಗೆ ‘ನವರಂಗೋತ್ಸವ’ ಶರನ್ನವರಾತ್ರಿಯ ಪ್ರಯುಕ್ತ ನೃತ್ಯ ಸ್ಪರ್ಧೆ (ಸಾಮೂಹಿಕ ವಿಭಾಗ)ಯು ದಿನಾಂಕ 15-10-2023ನೇ ರವಿವಾರ ಸಂಜೆ ಗಂಟೆ 5ಕ್ಕೆ ಮುದ್ರಾಡಿಯ ನಾಟ್ಕದೂರು ಬಿ.ವಿ.ಕಾರಂತ ಬಯಲು ರಂಗಸ್ಥಳದಲ್ಲಿ ನಡೆಯಲಿದೆ. ಸ್ಪರ್ಧೆಯ ನಿಯಮಗಳು : * ಭಕ್ತಿ ಪ್ರಧಾನ ನೃತ್ಯಕ್ಕೆ ಮಾತ್ರ ಅವಕಾಶ. * ಸಮಯ 5 ನಿಮಿಷ ಮಾತ್ರ. * ಸಾಮೂಹಿಕ ವಿಭಾಗದಲ್ಲಿ ಕನಿಷ್ಠ 6 ಮಂದಿ ಇರಲೇಬೇಕು. * ತೀರ್ಪುಗಾರರ ತೀರ್ಮಾನವೇ ಅಂತಿಮ. * ಹೆಬ್ರಿ ತಾಲೂಕು ವ್ಯಾಪ್ತಿಯವರಾಗಿರಬೇಕು. * 16 ವರ್ಷದೊಳಗಿನವರಿಗೆ ಮಾತ್ರ ಅವಕಾಶ. ಪ್ರಥಮ, ದ್ವಿತೀಯ, ತೃತೀಯ ವಿಜೇತರಿಗೆ ಬಹುಮಾನ ಹಾಗೂ ಭಾಗವಹಿಸಿದ ತಂಡಗಳಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಗುವುದು. ಭಾಗವಹಿಸುವವರು ದಿನಾಂಕ 12-10-2023 ಗುರುವಾರದೊಳಗೆ ಹೆಸರನ್ನು ನೊಂದಾಯಿಸಕೊಳ್ಳಬೇಕಾಗಿ ವಿನಂತಿ. ಹೆಸರನ್ನು ನೋಂದಾಯಿಸುವವರು 9449904727, 9743218708 ಈ ವಾಟ್ಸಪ್ ನಂಬರನ್ನು ಸಂಪರ್ಕಿಸಬಹುದು.

Read More

ಮಂಗಳೂರು : ಕೊಂಕಣಿಯ ಪ್ರಸಿದ್ಧ ಕಲಾ ತಂಡ ‘ಕೊಮಿಡಿ ಕಂಪೆನಿ’ಯು ತಮ್ಮ ತಂಡದ ಸದಸ್ಯ ದಿ. ಸುನಿಲ್ ಕ್ರಾಸ್ತಾ ಸ್ಮರಣಾರ್ಥ ಆಯೋಜಿಸಿದ ‘ಕರ್ ನಾಟಕ್’ ಆಹ್ವಾನಿತ ತಂಡಗಳ ನಾಟಕ ಸ್ಪರ್ಧೆಯ ಸಮಾರೋಪ ನಗರದ ಸಂತ ಅಲೋಶಿಯಸ್ ಕಾಲೇಜಿನಲ್ಲಿ ದಿನಾಂಕ 24-09-2023ರಂದು ನಡೆಯಿತು. ಲೋಗೋಸ್ ಥಿಯೇಟರ್ ತಂಡದ ‘ನಾನ್ ಲೈಂಗಿಕ ತೊಳಿಲಾಲಿ’ ನಾಟಕವು ರೂ.40,000/- ಬಹುಮಾನ ಮೊತ್ತದೊಡನೆ ಪ್ರಥಮ ಸ್ಥಾನ ಪಡೆಯಿತು. ರಂಗ್ ಥಿಕಾಂ ತಂಡದ ‘ಸೊರ್ ಯಾ ವ್ಯಾಪಾರಿಚೊ ದುಡು’ ನಾಟಕಕ್ಕೆ ರೂ.30,000/- ದ್ವಿತೀಯ ಸ್ಥಾನ, ಉತ್ಸಾಹಿ ಕಲಾಕಾರ್ ಗಂಟಾಲ್ಕಟ್ಟೆ ತಂಡದ ‘ಮ್ಹಜ್ಯಾ ಪುತಾಚೊ ಕಿಣ್ಕುಳೊ’ ನಾಟಕವು ತೃತೀಯ ಸ್ಥಾನಿಯಾಗಿ ರೂ.20,000/- ಬಹುಮಾನ ಪಡೆಯಿತು. ಉತ್ತಮ ನಟ-ಪ್ರಕಾಶ್ ಕೆ., ಉತ್ತಮ ನಟಿ- ಸ್ಪೀಡಲ್ ಡಿ’ಸೋಜಾ, ಪೋಷಕ ಪಾತ್ರ-ಡೊನ್ನಾ ಡಿ’ಸೋಜಾ, ಸಂಗೀತ- ಕ್ಲಾನ್ವಿನ್ ಫೆರ್ನಾಂಡಿಸ್, ನಿರ್ದೇಶಕ -ಕ್ರಿಸ್ಟೋಫರ್ ಡಿ’ಸೋಜಾ, ಕಥೆ – ಚಾಫ್ರಾ ಡಿ’ಕೋಸ್ತಾ, ತೀರ್ಪುದಾರರ ಮೆಚ್ಚುಗೆಯ ಪಾತ್ರ- ಕಿಯಾರಾ ಪಿರೇರಾ, ಸ್ತ್ರೀ ಲೇಖಕಿ ಪ್ರೀತಿ ಮಾರ್ತಾ ಡಿ’ಸೋಜಾ ಅವರನ್ನೂ ಗೌರವಿಸಲಾಯಿತು. ಲಿನೆಟ್…

Read More

ಕಾಸರಗೋಡು : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಯೋಗದಲ್ಲಿ ಸಾಮಾಜಿಕ, ಸಾಂಸ್ಕೃತಿಕ ಸಂಸ್ಥೆ ರಂಗಚಿನ್ನಾರಿ ಕಾಸರಗೋಡು ಇದರ ಮಹಿಳಾ ಘಟಕ ನಾರಿಚಿನ್ನಾರಿಯ 9ನೇ ಸರಣಿ ಕಾರ್ಯಕ್ರಮ ‘ವರ್ಷ ರಿಂಗಣ’ವು ದಿನಾಂಕ 30-09-2023ರಂದು ಕಾಸರಗೋಡು ಕೊ-ಓಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಸಾಹಿತಿ ಡಾ. ಮೀನಾಕ್ಷಿ ರಾಮಚಂದ್ರ ಇವರು ಮಾತನಾಡುತ್ತಾ “ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಮೂಲಕ ಕವಿತೆಗಳು ಸಮಾಜದ ಕನ್ನಡಿಯಾಗಬೇಕು. ಜಗತ್ತನ್ನು, ಸಮಾಜವನ್ನು ಎಚ್ಚರಿಸುವ ಮತ್ತು ತಿದ್ದುವ ದೊಡ್ಡ ಜವಾಬ್ದಾರಿ ಸಾಹಿತಿ, ಕವಿಯ ಮೇಲಿದೆ ಎಂದು ಹೇಳಿದರು. ಅವರು ‘ನೀನಿಲ್ಲ..ಇಲ್ಲಿ ನಾನು ಮಾತ್ರ’ ಲಕ್ಷ್ಮಿ ಕೆ. ಅವರ ಮೂರನೆಯ ಕವನ ಸಂಕಲನವನ್ನು ಬಿಡುಗಡೆಗೊಳಿಸಿ ಅವರ ಕಾವ್ಯೋತ್ಸಾಹವನ್ನು ಶ್ಲಾಘಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾರಿಚಿನ್ನಾರಿ ಕಾರ್ಯಾಧ್ಯಕ್ಷೆ ಸವಿತಾ ಟೀಚರ್ ವಹಿಸಿದರು. ಕತೆಗಾರ್ತಿ ಸ್ನೇಹಲತಾ ದಿವಾಕರ್ ಪುಸ್ತಕ ಪರಿಚಯ ಮಾಡಿದರು. ಸರೋಜಿನಿ ಕೆ. ಭಟ್ ಅವರು ಪ್ರಥಮ ಪ್ರತಿ ಸ್ವೀಕರಿಸಿ ಶುಭ ಹಾರೈಸಿದರು. ಕಾಸರಗೋಡು ಸರಕಾರಿ ಕಾಲೇಜಿನ ಸಹಾಯಕ…

Read More