Author: roovari

ತೆಕ್ಕಟ್ಟೆ : ತೆಕ್ಕಟ್ಟೆ ಹಯಗ್ರೀವದಲ್ಲಿ ಯಶಸ್ವೀ ಕಲಾವೃಂದ (ರಿ.) ಕೊಮೆ ತಕ್ಕಟ್ಟೆ ಆಯೋಜಿಸಿದ ಹೊಸ ತಲೆಮಾರಿನ ಅರ್ಥಧಾರಿಗಳ ವೇದಿಕೆಯಾದ ‘ಅರ್ಥಾಂಕುರ’ ಸರಣಿಯ ಮೂರನೇ ಕಾರ್ಯಕ್ರಮವು ದಿನಾಂಕ 01-10-2023ರಂದು ರೋಟರಿ ಕ್ಲಬ್ ತೆಕ್ಕಟ್ಟೆ ಇದರ ಸಹಕಾರದೊಂದಿಗೆ ನಡೆಯಿತು. ಜೇಸಿ ತರಬೇತುದಾರರಾಗಿ, ನಿರೂಪಕರಾಗಿ, ಸಂಘಟಕರಾಗಿ, ಬರಹಗಾರರಾಗಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಪರಿಚಾರಕರಾಗಿ ಗುರುತಿಸಿಕೊಂಡು ಆದರ್ಶ ಶಿಕ್ಷಕರಾಗಿ ವಿದ್ಯಾರ್ಥಿಗಳನ್ನು ರೂಪಿಸಿ ಇದೀಗ ಕರ್ನಾಟಕ ರಾಜ್ಯ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಶ್ರೀ ನರೇಂದ್ರ ಕುಮಾರ್ ಇವರನ್ನು ಈ ಸಂದರ್ಭದಲ್ಲಿ ಸಮ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಿ ಮಾತನಾಡಿದ ಯಕ್ಷಗುರುಗಳಾದ ಸೀತಾರಾಮ ಶೆಟ್ಟಿ ಕೊಯಿಕೂರು “ವ್ಯಕ್ತಿ ಸಮಾಜಮುಖಿಯಾಗಿ ಬೆಳೆಯಬೇಕು. ಪ್ರತಿಭೆ ನಿಂತ ನೀರಾಗಬಾರದು. ಅವಕಾಶ ಪಡೆದು ಇತರರಿಗೆ ಅವಕಾಶ ನೀಡುವ ಸಲುವಾಗಿ ಸದಾ ಚಿಂತಿಸುವ ನರೇಂದ್ರ ಕುಮಾರ್ ಹತ್ತು ಹಲವು ಕಾರ್ಯಕ್ರಮಗಳನ್ನು ಸಂಯೋಜಿಸಿ ಸೈ ಎನಿಸಿಕೊಂಡವರು. ಸಂಸ್ಥೆಯ ನಿಕಟವರ್ತಿಗಳಾದ ಇವರ ಸಾಧನೆ ಸಂಸ್ಥೆಗೆ ಹೆಮ್ಮೆ ತಂದ ವಿಶಯ. ಇವರನ್ನು ಸಮ್ಮಾನಿಸಿ ಸಂಸ್ಥೆ ಧನ್ಯತೆಯನ್ನು ಹೊಂದಿದೆ” ಎಂದು ಅಭಿನಂದನಾ ಮಾತುಗಳನ್ನಾಡಿದರು.…

Read More

ವಿಜಯಪುರ :  ವಿಜಯಪುರ ಜಿಲ್ಲೆ ನಿಡಗುಂದಿ ತಾಲ್ಲೂಕಿನ ಮುದ್ದಾಪುರದ ಏಕತಾರಿ ಕಲಾವಿದ ವೀರಭದ್ರಪ್ಪ ದಳವಾಯಿ ತನ್ನ 81ನೆಯ ವಯಸ್ಸಿನಲ್ಲಿ  ಸೋಮವಾರ ದಿನಾಂಕ 02-10-2023ರಂದು ನಿಧನರಾದರು. ಅವರ ಅಂತ್ಯಕ್ರಿಯೆಯು ಸ್ವಗ್ರಾಮದಲ್ಲಿ ನಡೆಯಿತು. ಅವರಿಗೆ ಪತ್ನಿ, ಗೊಂಬೆಯಾಟದ ಕಲಾವಿದ ಸಿದ್ದು ಬಿರಾದಾರ ಹಾಗೂ ಐವರು ಪುತ್ರಿಯರು ಇದ್ದಾರೆ. ಏಕತಾರಿ ನುಡಿಸುತ್ತ ತತ್ವ ಪದಗಳನ್ನು ಹಾಡುತ್ತಿದ್ದ ವೀರಭದ್ರಪ್ಪ ಆಕಾಶವಾಣಿ ಕಲಾವಿದರಾಗಿದ್ದರು. ಐದು ರಾಜ್ಯಗಳಲ್ಲಿ 600ಕ್ಕೂ ಹೆಚ್ಚು ಕಲಾ ಪ್ರದರ್ಶನವನ್ನು ನೀಡಿದ್ದರು. ಮಹರ್ಷಿ ವಾಲ್ಮೀಕಿ ಸಾಂಸ್ಕೃತಿಕ ಸಂರಕ್ಷಣಾ ಕಲಾ ಸಂಘ ಸ್ಥಾಪಿಸಿ, ಮುದ್ದಾಪುರದಲ್ಲಿ ಸ್ವಂತದ 4 ಗುಂಟೆ ಜಾಗವನ್ನು ನೀಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 25 ಲಕ್ಷ ವೆಚ್ಚದಲ್ಲಿ ಸಾಂಸ್ಕೃತಿಕ ಭವನ ನಿರ್ಮಿಸಿದ್ದರು. ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದರು.

Read More

ಕಾಸರಗೋಡು : ಕಾಸರಗೋಡಿನ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನದ ವಿಂಶತಿ ವರ್ಷಾಚರಣೆಯ ಅಂಗವಾಗಿ 2023ರ ಸಾಲಿನ ‘ಭರವಸೆಯ ಬೆಳಕು’ ಪುರಸ್ಕಾರವನ್ನು ಬದಿಯಡ್ಕದ ಚಿತ್ತರಂಜನ್ ಕಡಂದೇಲು ಅವರಿಗೆ ದಿನಾಂಕ 01-10-2023ರಂದು ಪ್ರದಾನ ಮಾಡಲಾಯಿತು. ಯಕ್ಷಗಾನ ಸಹಿತ ವಿವಿಧ ಕ್ಷೇತ್ರದಲ್ಲಿ ಅವರು ಮಾಡಿದ ಸಾಧನೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ. ಶ್ರೀ ಹರೀಶ್ ಕುಮಾರ್ ಮತ್ತು ಶಿಕ್ಷಕಿ ಶ್ರೀಮತಿ ಜ್ಯೋತ್ಸ್ನಾ ಕಡಂದೇಲು ಅವರ ಸುಪುತ್ರರಾಗಿರುವ ಚಿತ್ತರಂಜನ್ ಕಡಂದೇಲುರವರು ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರಿ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್ ವನ್ ವಿದ್ಯಾರ್ಥಿಯಾಗಿದ್ದಾರೆ. ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಕ್ಯಾಪ್ಟನ್ ಗಣೇಶ ಕಾರ್ಣಿಕ್, ಕನ್ನಡ ಭವನ ಸ್ಥಾಪಕ ವಾಮನ್ ರಾವ್ ಬೇಕಲ್, ಸಂಧ್ಯಾರಾಣಿ ಟೀಚರ್, ರಾಧಾಕೃಷ್ಣ ಕೆ. ಉಳಿಯತ್ತಡ್ಕ ಮತ್ತು ಪ್ರೋ. ಎಂ. ಶ್ರೀನಾಥ್ ಮೊದಲಾದವರು ಉಪಸ್ಥಿತರಿದ್ದರು.

Read More

ಮಂಗಳೂರು : ನಗರದ ಪುರಭವನದಲ್ಲಿ ತುಳುವೆರೆ ಆಯನೊ ಕೂಟ ಕುಡ್ಲ ಇದರ ಪದಗ್ರಹಣ ಸಮಾರಂಭವು ದಿನಾಂಕ 30-09-2023ರಂದು ನಡೆಯಿತು. ಇದೇ ಸಂದರ್ಭದಲ್ಲಿ ಶ್ರೀ ಸದಾಶಿವ ಶೆಟ್ಟಿ ಕನ್ಯಾನ ಇವರಿಗೆ ‘ತುಳುವೆರೆ ಕರ್ಣೆ’ ಬಿರುದು ನೀಡಿ ಗೌರವಿಸಲಾಯಿತು. ಅವರು ಮಾತನಾಡುತ್ತಾ “ತುಳು ಭಾಷೆಯಲ್ಲಿ ವಿವಿಧ ರೀತಿಯ ಪ್ರಾದೇಶಿಕ ಬದಲಾವಣೆ, ಜಾತಿಯಲ್ಲಿಯೂ ಭಾಷೆಯ ಬದಲಾವಣೆಗಳಿವೆ. ಇದೆಲ್ಲವೂ ತುಳುನಾಡಿನ ತುಳು ಭಾಷೆಯ ವೈಶಿಷ್ಟ್ಯತೆ ಸಾರುತ್ತದೆ” ಎಂದು ಹೇಳಿದರು. ಈ ಸಮಾರಂಭವನ್ನು ಕಟೀಲು ಕ್ಷೇತ್ರದ ಆನುವಂಶಿಕ ಅರ್ಚಕ ಶ್ರೀ ಹರಿನಾರಾಯಣ ಆಸ್ರಣ್ಣ ಉದ್ಘಾಟಿಸಿದರು. ಸಂಸದ ಶ್ರೀ ನಳಿನ್ ಕುಮಾರ್ ಕಟೀಲು, ಶಾಸಕರಾದ ಶ್ರೀ ವೇದವ್ಯಾಸ ಕಾಮತ್‌, ಶ್ರೀ ಸುರೇಶ್ ಶೆಟ್ಟಿ ಗುರ್ಮೆ, ಮಾಜಿ ಸಚಿವ ಶ್ರೀ ರಮನಾಥ ರೈ, ವಿಶ್ವ ಬಂಟರ ಕೂಟಗಳ ಒಕ್ಕೂಟದ ಅಧ್ಯಕ್ಷ ಶ್ರೀ ಐಕಳ ಹರೀಶ್ ಶೆಟ್ಟಿ, ಮಾಜಿ ಮೇಯ‌ರ್ ಶ್ರೀ ಪ್ರೇಮಾನಂದ ಶೆಟ್ಟಿ, ಪಾಲಿಕೆ ಹಣಕಾಸು ಸ್ಥಾಯೀ ಸಮಿತಿ ಅಧ್ಯಕ್ಷ ಶ್ರೀ ವರುಣ್ ಚೌಟ, ವಕೀಲ ಶ್ರೀ ಪದ್ಮರಾಜ್, ಅಖಿಲ ಭಾರತ…

Read More

ಹೆಬ್ರಿ : ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕು ಘಟಕವು ಚೈತನ್ಯ ಯುವ ವೃಂದ ಮತ್ತು ಚೈತನ್ಯ ಮಹಿಳಾ ವೃಂದದ ಸಹಯೋಗದಲ್ಲಿ ಗಾಂಧಿ ಜಯಂತಿಯ ಅಂಗವಾಗಿ ಆಯೋಜಿಸಿದ ಗಾಂಧಿ ಸ್ಮೃತಿ  ಕಾರ್ಯಕ್ರಮ  ದಿನಾಂಕ 02-10-2023ರಂದು ಅಪರಾಹ್ನ ಹೆಬ್ರಿ ಚೈತನ್ಯ ಸಭಾಭವನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಗಾಂಧಿ ಭಾವ ಚಿತ್ರಕ್ಕೆ ಪುಷ್ಪ ನಮನ ಹಾಗೂ ಮಹಾತ್ಮಗಾಂಧಿ ಕುರಿತ ಕವನಗೋಷ್ಠಿ – ಚಿಂತನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ನಿವೃತ್ತ ಅಧ್ಯಾಪಕರು ಮತ್ತು ರಾಜ್ಯ ಅತ್ತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ದಿನೇಶ ಶೆಟ್ಟಿಗಾರ್  ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಕ.ಸಾ.ಪ ಹೆಬ್ರಿ ಇದರ ಅಧ್ಯಕ್ಷರಾದ ಶ್ರೀನಿವಾಸ ಭಂಡಾರಿ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಚೈತನ್ಯ ಯುವ ವೃಂದದ ಗೌರವ ಅಧ್ಯಕ್ಷರಾದ ಜನಾರ್ದನ ಹೆಚ್, ಚೈತನ್ಯ ಮಹಿಳಾ ವೃಂದದ ಅಧ್ಯಕ್ಷರಾದ ವಿದ್ಯಾ ಜನಾರ್ದನ್, ಚೈತನ್ಯ ಮಹಿಳಾ ವೃಂದದ ಕಾರ್ಯದರ್ಶಿ ಸುಮನಾ ಜಿ. ನಾಯಕ್, ಕ. ಸಾ.ಪ ಗೌರವ ಕಾರ್ಯದರ್ಶಿ ಡಾ.ಪ್ರವೀಣ್ ಕುಮಾರ್  ಅವರು ಗಾಂಧಿ ಕುರಿತು ಚಿಂತನ ಪ್ರಸ್ತುತ…

Read More

ಬೆಂಗಳೂರು: ಕನ್ನಡ ಶಾಲೆಗಳನ್ನು ಉಳಿಸಿ ಬೆಳಸಬೇಕು. ಮಕ್ಕಳಲ್ಲಿ ಕನ್ನಡ ಪ್ರಜ್ಞೆಯನ್ನು ಬೆಳೆಸಬೇಕು, ಜೊತೆಗೆ ಕನ್ನಡ ಭಾಷೆಯ ಮಹತ್ವ ಅರಿವಾಗಬೇಕು. ಕನ್ನಡ ಸಾಹಿತ್ಯ ಓದುವ ಹವ್ಯಾಸ ಮಕ್ಕಳಲ್ಲಿ ಆರಂಭಿಸುವ ಹಿನ್ನೆಲೆಯಲ್ಲಿ, ಕನ್ನಡ ಶಾಲೆಗಳಿಗೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಪ್ರಕಟವಾಗಿರುವ ಮೌಲ್ಯಯುತ ಪುಸ್ತಕಗಳನ್ನು ಉಚಿತವಾಗಿ ವಿತರಿಸಲು ಕನ್ನಡ ಸಾಹಿತ್ಯ ಪರಿಷತ್ತು ವಿಶೇಷ ಯೋಜನೆಯೊಂದನ್ನು ಅಳವಡಿಸಿಕೊಂಡಿದೆ. ಯೋಜನೆಯ ಬಗ್ಗೆ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ “ಕನ್ನಡ ಸಾಹಿತ್ಯ ಪರಿಷತ್ತು ತನ್ನ ವ್ಯಾಪ್ತಿಯಲ್ಲಿ ಬಂದಿರುವ ವಿವಿಧ ಲೇಖಕರ ಬುಹುತೇಕ ಮೌಲ್ಯಯುತ ಪುಸ್ತಕಗಳನ್ನು ಪ್ರಕಟಿಸಿ ಕನ್ನಡ ಸಾರಸ್ವತ ಲೋಕಕ್ಕೆ ನೀಡುತ್ತಾ ಬಂದಿದೆ. ಪರಿಷತ್ತಿನ 108ವರ್ಷಗಳ ಇತಿಹಾಸದಲ್ಲಿ ಸಾವಿರಾರು ಪುಸ್ತಕಗಳನ್ನು ಪ್ರಕಟಿಸುವ ಮೂಲಕ  ಅಕ್ಷರಲೋಕಕ್ಕೆ ದೊಡ್ಡ ಕೊಡುಗೆಯನ್ನು ನೀಡುತ್ತಾ ಬಂದಿದೆ.  ಜೊತೆಗೆ ಹೊಸ ತಲೆಮಾರಿನ ಬರಹಗಾರರ ಪುಸ್ತಕಗಳನ್ನು ಸಹ ಪ್ರಕಟಿಸಿರುವ ಹೆಮ್ಮೆ ಕನ್ನಡ ಸಾಹಿತ್ಯ ಪರಿಷತ್ತಿಗೆ ಇದೆ. ಕನ್ನಡ ಸಾಹಿತ್ಯದ ಅಘಾದತೆ ಮತ್ತು ಮಹತ್ವವನ್ನು ಕಾಲ ಕಾಲಕ್ಕೆ ಜನರಿಗೆ ತಿಳಿಸುವ ಕೆಲಸವನ್ನು ಪರಿಷತ್ತು…

Read More

ಮಂಗಳೂರು : ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘ ಆಯೋಜಿಸುವ 2023- 24ರ ಸಾಲಿನ ದತ್ತಿ ಪ್ರಶಸ್ತಿ ಮತ್ತು ಬಹುಮಾನಗಳಿಗೆ ಲೇಖಕಿಯರ ಕೃತಿಗಳನ್ನು ಆಹ್ವಾನಿಸಲಾಗಿದೆ. ಡಾ. ಸಾರಾ ಅಬೂಬಕ್ಕರ್ ದತ್ತಿ ಪ್ರಶಸ್ತಿ: ಸಂಘದ ಸದಸ್ಯೆಯಾಗಿದ್ದ ವೈಚಾರಿಕ ಮನೋಧರ್ಮದ ಸಂವೇದನಾಶೀಲ ಲೇಖಕಿ ನಾಡೋಜ ಡಾ. ಸಾರಾ ಅಬೂಬಕ್ಕರ್ ಅವರ ಹೆಸರಿನಲ್ಲಿ ಪ್ರತಿ ವರ್ಷ ಕೊಡುವ ಸಾಹಿತ್ಯ ಪ್ರಶಸ್ತಿಗೆ ‘ಪ್ರವಾಸ ಕಥನ’ ಆರಿಸಲಾಗಿದೆ. 2021, 2022, 2023ನೇ ಸಾಲಿನಲ್ಲಿ ಪ್ರಕಟವಾದ ಲೇಖಕಿಯರ ಪ್ರವಾಸ ಕಥನದ ಮೂರು ಪ್ರತಿಗಳನ್ನು ದಿನಾಂಕ 15-11-2023ರೊಳಗೆ ತಲುಪುವಂತೆ ಸಂಘದ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸಬೇಕು. ಪುಸ್ತಕದ ಜತೆಗೆ ವೈಯಕ್ತಿಕ ಮಾಹಿತಿ ಹಾಗೂ ಸಂಪರ್ಕ ಸಂಖ್ಯೆಯಿರುವ ಪ್ರವೇಶ ಪತ್ರವನ್ನು ಲಗತ್ತಿಸಿರಬೇಕು. ಚಂದ್ರಭಾಗಿ ರೈ ದತ್ತಿ ಬಹುಮಾನ : ಕರಾವಳಿಯ ಮೊದಲ ತಲೆಮಾರಿನ ಹಿರಿಯ ಲೇಖಕಿ, ಸಂಘದ ಸದಸ್ಯೆಯಾಗಿದ್ದ ಚಂದ್ರಭಾಗಿ ರೈ ಅವರ ಹೆಸರಿನಲ್ಲಿ ಕೊಡುವ ಬಹುಮಾನಕ್ಕೆ 50 ವರ್ಷದ ಒಳಗಿನ ಲೇಖಕಿಯರ ಕನಿಷ್ಠ 40 ಸ್ವರಚಿತ ಕವನಗಳಿರುವ ಅಪ್ರಕಟಿತ ಸಂಕಲನದ ಡಿಟಿಪಿ…

Read More

ಉಳ್ಳಾಲ : ಉಳ್ಳಾಲದ ಶ್ರೀ ಶಾರದಾ ನಿಕೇತನದಲ್ಲಿ 76ನೇ ಶಾರದೋತ್ಸವದ ಅಂಗವಾಗಿ ‘ಸಾರ್ವಜನಿಕ ರಸಪ್ರಶ್ನೆ’ ಸ್ಪರ್ಧೆಯನ್ನು ದಿನಾಂಕ 24-10-2023ರಂದು ಬೆಳಿಗ್ಗೆ 10-30ಕ್ಕೆ ಹಮ್ಮಿಕೊಳ್ಳಲಾಗಿದೆ. ಪ್ರೊ. ಗಿಲ್ ರಾಜ್ ಉಳ್ಳಾಲ್ ಆಸ್ಟ್ರೇಲಿಯ ಮತ್ತು ಮನೆಯವರ ಪ್ರಾಯೋಜಕತ್ವದಲ್ಲಿ ಜರುಗಲಿರುವ ಈ ಸ್ಪರ್ಧೆಯಲ್ಲಿ ಸಾರ್ವಜನಿಕರೆಲ್ಲರಿಗೂ ಭಾಗವಹಿಸಲು ಮುಕ್ತ ಅವಕಾಶವಿದೆ. ತಲಾ ಇಬ್ಬರ ತಂಡಗಳಿಗೆ ಆರಂಭಿಕ ಸುತ್ತಿನಲ್ಲಿ ಪ್ರಶ್ನೆಪತ್ರಿಕೆ ನೀಡಲಾಗುತ್ತದೆ. ಸರಿ ಉತ್ತರ ನೀಡಿರುವ ಆಧಾರದಲ್ಲಿ ಆರು ತಂಡಗಳನ್ನು ಆಯ್ಕೆ ಮಾಡಿ, ಮುಂದಿನ ಸುತ್ತನ್ನು ವೇದಿಕೆಯಲ್ಲಿ ನಡೆಸಲಾಗುವುದು. ವಿಜೇತ ತಂಡಗಳಿಗೆ ಪ್ರಥಮ ರೂ.11,111/- , ದ್ವಿತೀಯ ರೂ.5,555/- ಹಾಗೂ ತೃತೀಯ ರೂ.2,222/- ನಗದು ಬಹುಮಾನ ಲಭಿಸುವುದು. ಸ್ಪರ್ಧಾ ತಂಡಗಳಿಗೆ ಉತ್ತರ ಗೊತ್ತಿಲ್ಲವಾದಲ್ಲಿ ಅದೇ ಪ್ರಶ್ನೆಯನ್ನು ಸಭಿಕರಿಗೆ ಕೇಳಲಾಗುವುದಲ್ಲದೆ, ಸರಿಯುತ್ತರ ನೀಡಿದವರಿಗೆ ಸ್ಥಳದಲ್ಲೇ ಬಹುಮಾನವನ್ನು ನೀಡಲಾಗುವುದು. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ವೆಂಕಟಗಿರಿ ಬೇಕಲ್ ( 9845083765 ) ಅಥವಾ ದಿನೇಶ್ ಉಳ್ಳಾಲ್ ( 9341109898 ) ಇವರನ್ನು ಸಂಪರ್ಕಿಸಬಹುದು.

Read More

ಕಾಸರಗೋಡು : ಯಕ್ಷಗಾನ ಕಲಾವಿದರಿಗೆ ಸಮಗ್ರ ಮಾಹಿತಿ ಇರುವ ತೆಂಕುತಿಟ್ಟು ಯಕ್ಷಮಾರ್ಗ ಸರಣಿಯ ಮೊದಲ ಪ್ರಾತ್ಯಕ್ಷಿಕೆಯನ್ನು ಹಿರಿಯ ಯಕ್ಷಗಾನ ಗುರುಗಳಾದ ಕರ್ಗಲ್ಲು ವಿಶ್ವೇಶ್ವರ ಭಟ್ ಅವರು ದಿನಾಂಕ 28-09-2023ರಂದು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ನಡೆಸಿಕೊಟ್ಟರು. ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ವತಿಯಿಂದ ನಡೆದ ಈ ಕಾರ್ಯಕ್ರಮದಲ್ಲಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಯಕ್ಷಗಾನ ಕಲಾಪೋಷಕ ಶ್ರೀಕರ ಭಟ್ ಮುಂಡಾಜೆ, “ಈಗಿನ ಯಕ್ಷಗಾನ ಹಾದಿ ತಪ್ಪುತ್ತಿದೆ. ಯಕ್ಷಗಾನ ಪ್ರದರ್ಶನಕ್ಕೂ ನಿಯಂತ್ರಕ ಶಕ್ತಿ ಬೇಕು. ಭಾಗವತರು ನಿರ್ದೇಶಕರು, ಆದರೆ ಅವರಿಗೆ ಹೇಳಲು ದಾಕ್ಷಿಣ್ಯ. ಈ ಕಾರಣದಿಂದಾಗಿ ಯಕ್ಷಗಾನದ ಸತ್ವ ಕ್ಷೀಣಿಸುತ್ತಿದೆ. ಜೊತೆಗೆ, ಯಕ್ಷಗಾನ ಆಡಿಸುವವರು ಕೂಡ ‘ಬಹುಜನರ ಅಪೇಕ್ಷೆ ಮೇರೆಗೆ’ ಎಂದು ಪ್ರೇಕ್ಷಕರ ಮೇಲೆಯೇ ಎಲ್ಲವನ್ನೂ ಹಾಕಿ ನುಣುಚಿಕೊಳ್ಳುತ್ತಾರೆ” ಎಂದು ವಿಷಾದಿಸಿದರು. ‘ಅಕಾಡೆಮಿಯೊಂದು ಮಾಡಬೇಕಿರುವ ಕಾರ್ಯಕ್ರಮವನ್ನು ಸಿರಿಬಾಗಿಲು ರಾಮಕೃಷ್ಣ ಮಯ್ಯರು ಮಾಡುತ್ತಿದ್ದಾರೆ. ಈಗ ಸಮಯವಿದ್ದರೂ ವ್ಯವಧಾನವಿಲ್ಲದ ಈ ಕಾಲದಲ್ಲಿ, ಸಿರಿಬಾಗಿಲು ಪ್ರತಿಷ್ಠಾನವು ಮಾಡುತ್ತಿರುವ ದಾಖಲೀಕರಣಗಳು ಕಲಾವಿದರಿಗೆ ಸದಾ ಕಾಲಕ್ಕೂ ಪ್ರಯೋಜನಕರ’ ಎಂದರು.…

Read More

ಮಂಗಳೂರು : ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸಾಹಿತಿಗಳ ಮನೆ ಭೇಟಿ ಕಾರ್ಯಕ್ರಮದ ಅಂಗವಾಗಿ ದಿನಾಂಕ 02-10-2023ರಂದು ಹಿರಿಯ ಸಾಹಿತಿ, ಸಂಶೋಧಕ ಡಾ.ಅಮೃತ ಸೋಮೇಶ್ವರ ಅವರನ್ನು ಸೋಮೇಶ್ವರದ ಅವರ ಮನೆ ‘ಒಲುಮೆ’ಯಲ್ಲಿ ಭೇಟಿಯಾಗಿ ಗೌರವಿಸಲಾಯಿತು. ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ.ಪಿ. ಶ್ರೀನಾಥ್ ಇವರು ಅಮೃತರ ಪರವಾಗಿ ಪತ್ನಿ ಶ್ರೀಮತಿ ನರ್ಮದಾ ಸೋಮೇಶ್ವರ ಇವರನ್ನು ಗೌರವಿಸಿ ಅಮೃತರ ವ್ಯಕ್ತಿತ್ವದ ಮಾನವೀಯತೆಯನ್ನು ಕುರಿತು ಮಾತನಾಡಿದರು. ಕಸಾಪ ಉಳ್ಳಾಲ ತಾಲೂಕು ಘಟಕದ ಅಧ್ಯಕ್ಷ ಡಾ. ಧನಂಜಯ ಕುಂಬ್ಳೆ, ದ.ಕ. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ರಾಜೇಶ್ವರಿ ಎಂ., ದೇರಳಕಟ್ಟೆ ವಿದ್ಯಾರತ್ನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಉಳ್ಳಾಲ ಕಸಾಪ ಗೌರವ ಕಾರ್ಯದರ್ಶಿ ರವೀಂದ್ರ ರೈ ಕಲ್ಲಿಮಾರು, ಸೋಮೇಶ್ವರ ಗ್ರಾಮ ಸಂಚಾಲಕ ಕಲಾವಿದ ತೋನ್ಸೆ ಪುಷ್ಕಳ ಕುಮಾರ್, ಅಮೃತರ ಮಗ ಸಾಹಿತಿ ಡಾ.ಚೇತನ ಸೋಮೇಶ್ವರ, ಜೀವನ್, ಸೊಸೆ ಸತ್ಯಜೀವನ್ ಮತ್ತಿತರರು ಉಪಸ್ಥಿತರಿದ್ದರು.

Read More