Author: roovari

ಬೆಂಗಳೂರು : ಐಸಿರಿ ಪ್ರಕಾಶನ ಮತ್ತು ಯಕ್ಷ ವಾಹಿನಿ ಇದರ ವತಿಯಿಂದ ಡಾ. ಆನಂದರಾಮ ಉಪಾಧ್ಯ ಇವರ ‘ಯಕ್ಷ ಸಂಕಾಶ’ ಕೃತಿ ಲೋಕಾರ್ಪಣೆ ಸಮಾರಂಭವು ದಿನಾಂಕ 20 ಅಕ್ಟೋಬರ್ 2024ರಂದು ಬೆಳಿಗ್ಗೆ 10-30 ಗಂಟೆಗೆ ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜಿನ ಡಾ. ಎಚ್.ಎನ್. ಮಲ್ಟಿಮೀಡಿಯ ಸಭಾಂಗಣದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿಯವರು ವಹಿಸಲಿದ್ದು, ಖ್ಯಾತ ವಿಮರ್ಶಕರಾದ ಡಾ. ನಾರಹಳ್ಳಿ ಬಾಲ ಸುಬ್ರಹ್ಮಣ್ಯ ಇವರು ಕೃತಿ ಬಿಡುಗಡೆ ಮಾಡಲಿರುವರು. ಸಭಾ ಕಾರ್ಯಕ್ರಮದ ಮೊದಲು ಪ್ರೇಮ ಉಪಾಧ್ಯರ ‘ಇಂಪಿನ ಗುಂಪಿ’ನ ಶಿಷ್ಯರಿಂದ ಗೀತ ಗಾಯನ ನಡೆಯಲಿದೆ.

Read More

ಬಿಜಾಪುರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ದಿನಾಂಕ 06 ಅಕ್ಟೋಬರ್ 2024ರಂದು ಪ್ರವೀಣ ರೆಡ್ಡಿ ಗುಂಜಹಳ್ಳಿ ಅವರ ನಿರ್ದೇಶನದಲ್ಲಿ ರಾಯಚೂರು ಸಮುದಾಯ ಅಭಿನಯಿಸಿದ ‘ರಕ್ತ ವಿಲಾಪ’ ನಾಟಕ ಇಡೀ ರಂಗಮಂದಿರದ ನೋಡುಗರು ಉಸಿರು ಬಿಗಿಹಿಡಿದು ನೋಡುವಂತೆ ಮಾಡಿತು. ಮೇ ಸಾಹಿತ್ಯ ಮೇಳ ಬಳಗ ವಿಜಯಪುರ, ಲಡಾಯಿ ಪ್ರಕಾಶನ ಹಾಗೂ ವಿವಿಧ ಸಂಘಟನೆಗಳ ಜೊತೆಗೆ ಆಯೋಜಿಸಿದ್ದ ‘ಜನಕಲಾ ಸಾಂಸ್ಕೃತಿಕ ಮೇಳ’ದ ಭಾಗವಾಗಿ ಈ ಪ್ರದರ್ಶನ ನಡೆಯಿತು‌. ಡಾ. ವಿಕ್ರಮ ವಿಸಾಜಿಯವರು ಬರೆದ ಈ ನಾಟಕ ಇಂದು ಸತ್ಯಶೋಧನೆ, ಬೌದ್ಧಿಕತೆಯನ್ನು ಹೇಗೆ ಫಾಸಿಸಂನ ಕರಾಳ ಹಸ್ತಗಳು ಬೇಟೆಯಾಡುತ್ತಿವೆ ಎಂಬುದನ್ನು ಮತಾಂಧರ ಗುಂಡಿಗೆ ಬಲಿಯಾದ ಕನ್ನಡದ ಮಹತ್ವದ ವಿದ್ವಾಂಸರಾದ ಡಾ. ಎಂ.ಎಂ. ಕಲ್ಬುರ್ಗಿಯವರ ಬದುಕಿನ ಮೂಲಕ ಅನಾವರಣಗೊಳಿಸುತ್ತದೆ. ಇಡೀ ನಾಟಕ ಸಂಶೋಧಕನ ಸತ್ಯದ ಹುಡುಕಾಟವನ್ನು ಫಾಸಿಸಂನ ಮೌಢ್ಯ, ಕುತರ್ಕದ ಜೊತೆಗೆ ಢಿಕ್ಕಿ ಹೊಡೆಸುವುದರ ಮೂಲಕ ನಿಜದ ದಾರಿ ಕಾಣಿಸುತ್ತಾ ಹೋಗುತ್ತದೆ. ಕೋಮುವಾದೀ ಕಾರ್ಯಾಚರಣೆಯಲ್ಲಿ ದಾಳವಾದ ಯುವಕ ತನ್ನ ತಲೆಯಲ್ಲಿ ತುಂಬಲಾದ ಮಾತುಗಳನ್ನು ಕಲ್ಬುರ್ಗಿಯವರ ಮುಂದಿಡುತ್ತಾ ಹೋಗುತ್ತಾನೆ. ಅವನ…

Read More

ಉಜಿರೆ : ಶಿಕ್ಷಕ ರಾಮಕುಂಜದ ಟಿ. ನಾರಾಯಣ ಭಟ್ ರಚಿಸಿದ ‘ನೆನಪುಗಳ ನೇವರಿಕೆ’ ಕೃತಿಯನ್ನು ದಿನಾಂಕ 12 ಅಕ್ಟೋಬರ್ 2024ರಂದು ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನಡೆದ ಸರಳ ಸಮಾರಂಭದಲ್ಲಿ ಲೋಕಾರ್ಪಣೆಗೊಳಿಸಲಾಯಿತು. ಕೃತಿ ಲೋಕಾರ್ಪಣೆಗೊಳಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮವಿಭೂಷಣ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ “ತಮ್ಮ ಬದುಕಿನ ಜೊತೆಗೆ ಸುತ್ತಲ ಬದುಕಿಗೂ ಒಂದಲ್ಲ ಒಂದು ರೀತಿ ಆಸರೆಯಾಗಿ ನಡೆದುಕೊಂಡವರನ್ನು ಗುರುತಿಸಿ, ನೆನವರಿಕೆ ಮಾಡಿರುವ ಕೃತಿ ನೆನಪುಗಳ ನೇವರಿಕೆ. ಇದು ಪ್ರಸ್ತುತ ಜನಾಂಗಕ್ಕೆ ಹಾಗೂ ಮುಂದಿನವರಿಗೆ ವಿಶೇಷ ಪ್ರೇರಣೆ ನೀಡುವಂತಹದು. ಇದು ಕೇವಲ ವ್ಯಕ್ತಿಚಿತ್ರಣವಲ್ಲ ಈ ಕಾಲದ ಜೀವನ ವಿಧಾನವನ್ನು ನೆನಪಿಸುವಂತಿರುವ ಕೃತಿ” ಎಂದು ನುಡಿದರು. ಈ ಕೃತಿಯಲ್ಲಿ ದಕ್ಷಿಣ ಭಾರತದ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ 55 ಸಾಧಕರ ಚಿತ್ರಣವಿದೆ. ಇದಕ್ಕಿಂತ ಮೊದಲು 46 ವ್ಯಕ್ತಿ ಚಿತ್ರಣ ಚಿತ್ರಿಸಿರುವ ಕೃತಿ ‘ಬೆಳಕು ಬೆಳದಿಂಗಳು’ ಈಗಾಗಲೇ ಜನಪ್ರಿಯವಾಗಿದೆ. ವಿಶ್ವೇಶ ತೀರ್ಥರ ಬದುಕಿನ ಚಿತ್ರಣದ ನಾಲ್ಕಾರು ಕೃತಿಗಳು, ಮಕ್ಕಳ ವ್ಯಕ್ತಿತ್ವ…

Read More

ಮಂಗಳೂರು : ಕದ್ರಿ ಶ್ರೀ ದುರ್ಗಾ ಪರಮೇಶ್ವರಿ ಅಮ್ಮನವರ ವಾರ್ಷಿಕ ನವರಾತ್ರಿ ಉತ್ಸವದ ಪ್ರಯುಕ್ತ ಕದ್ರಿ ಶ್ರೀ ಮಂಜುನಾಥ ದೇವಳದ ಸಹಯೋಗದೊಂದಿಗೆ ಕದಳಿ ಕಲಾ ಕೇಂದ್ರ ಸಂಯೋಜಿಸಿದ 12ನೇ ವರ್ಷದ ‘ಕದಳಿ ದಶಾಹ’ ಮಕ್ಕಳ ಹಾಗೂ ಯುವ ತಂಡಗಳಿಂದ ಯಕ್ಷಗಾನ ಕಾರ್ಯಕ್ರಮವು ದಿನಾಂಕ 12 ಅಕ್ಟೋಬರ್ 2024ರಂದು ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ರಾಜಾಂಗಣದಲ್ಲಿ ಸಂಪನ್ನಗೊಂಡಿತು. ಶ್ರೀ ಪಂಚಾಕ್ಷರಿ ಮಕ್ಕಳ ಮೇಳ ಎಲ್ಲೂರು ಉಡುಪಿ, ಶ್ರೀ ಆದಿಶಕ್ತಿ ಮಹಾಲಕ್ಷ್ಮೀ ಯಕ್ಷಗಾನ ಮಂಡಳಿ ಲಕ್ಷ್ಮೀಪುರ ಕರ್ಕಳ, ಶ್ರೀ ದೇವಿ ಮಹಿಳಾ ಯಕ್ಷ ತಂಡ ಬಾಲವನ ಪುತ್ತೂರು, ಯಕ್ಷಮಿತ್ರರು (ರಿ.) ಪೊರ್ಕೊಡಿ ಪೇಜಾವರ, ಯಕ್ಷರಾಧನಾ ಕಲಾಕೇಂದ್ರ (ರಿ) ಉರ್ವ ಮಂಗಳೂರು, ಶ್ರೀ ನಾಗಬ್ರಹ್ಮ ಯಕ್ಷ ಕಲಾ ಕೇಂದ್ರ ಕೋಡಿಕಲ್ ಮಂಗಳೂರು, ಶ್ರೀ ಯಕ್ಷನಿಧಿ (ರಿ) ಮೂಡಬಿದಿರೆ, ಶ್ರೀ ಮಹಿಷ ಮರ್ದಿನಿ ಯಕ್ಷ ಮಿತ್ರರು ಪೂಂಜ ಬಂಟ್ವಾಳ, ಶ್ರೀ ಸಿದ್ಧಿವಿನಾಯಕ ಯಕ್ಷ ನಾಟ್ಯ ಕಲಾ ಕೇಂದ್ರ ಕೃಷ್ಣಾಪುರ ಸುರತ್ಕಲ್, ಶ್ರೀ ಮಾರಿಯಮ್ಮ ಯಕ್ಷಗಾನ ಬಾಲ ಸಂಸ್ಕಾರ…

Read More

ಮಂಗಳೂರು : ಸಂಗೀತ ಭಾರತಿ ಪ್ರತಿಷ್ಠಾನ (ರಿ) ಮಂಗಳೂರು ಇದರ ವತಿಯಿಂದ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ದಿನಾಂಕ 27 ಅಕ್ಟೋಬರ್ 2024ರಂದು ಸಂಜೆ 5-30 ಗಂಟೆಗೆ ಮಂಗಳೂರಿನ ಪುರಭವನದಲ್ಲಿ ಆಯೋಜಿಸಲಾಗಿದೆ. ಅಂತಾರಾಷ್ಟ್ರೀಯ ಮಟ್ಟದ ಖ್ಯಾತಿಯ ಬಾನ್ಸುರಿ ವಾದಕ ರಾಕೇಶ್ ಚೌರಾಸಿಯ ಇವರ ಬಾನ್ಸುರಿ ವಾದನ ನಡೆಯಲಿದ್ದು, ಇವರಿಗೆ ಪ್ರಖ್ಯಾತ ತಬಲ ಪಟು ಮುಂಬಯಿಯ ಓಜಸ್ ಅದಿಯಾ ಸಹಕಾರ ನೀಡಲಿದ್ದಾರೆ. ಇದಾದ ಬಳಿಕ ಹೆಸರಾಂತ ಸಿತಾರ್ ವಾದಕ ಉಂದಿನ ಪಂಡಿತ್ ಪೂರ್ಬಯಾನ್ ಚಟರ್ಜಿ ಇವರ ಸಿತಾರ್ ವಾದನ ನಡೆಯಲಿದೆ. ಇವರಿಗೆ ತಬಲದಲ್ಲಿ ಮುಂಬಯಿಯ ಪ್ರಖ್ಯಾತ ತಬಲ ವಾದಕರಾದ ಸತ್ಯಜಿತ್ ತಲ್ವಾಕರ್ ಸಾಥ್ ನೀಡಲಿದ್ದಾರೆ. ಈ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮಕ್ಕೆ ಕೆನರಾ ಬ್ಯಾಂಕ್ ಮುಖ್ಯ ಪ್ರಯೋಜಕರಾಗಿದ್ದು, ಸಹಪ್ರಯೋಜಕರಾಗಿ ಐಡಿಯಲ್ ಐಸ್ ಕ್ರೀಮ್, ಎಂ.ಆರ್‌.ಪಿ.ಎಲ್. ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಹಕಾರ ನೀಡಲಿದ್ದಾರೆ. ಇದೊಂದು ಅಪರೂಪ ಹಾಗೂ ವಿಶೇಷ ಕಾರ್ಯಕ್ರಮವಾಗಿದ್ದು, ವಿಶ್ವದ ಶ್ರೇಷ್ಠ ಸಂಗೀತ ವೇದಿಕೆಯಲ್ಲಿ ಹಾಗೂ ಸಂಗೀತ ದಿಗ್ಗಜರೊಂದಿಗೆ ನುಡಿಸಿರುವ…

Read More

ಉಡುಪಿ : ಪಂಚಮಿ ಟ್ರಸ್ಟ್ (ರಿ.) ಉಡುಪಿ ಪ್ರಾಯೋಜಿತ ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ.) ಉಡುಪಿ ಕೊಡಮಾಡುವ ‘ಪಂಚಮಿ ಪುರಸ್ಕಾರ- 2025’ಕ್ಕೆ ಕನ್ನಡ ರಂಗಭೂಮಿಯ ಹಿರಿಯ ನಟ ಶ್ರೀ ಮಂಡ್ಯ ರಮೇಶ್ ಇವರನ್ನು ಆಯ್ಕೆ ಮಾಡಲಾಗಿದೆ. ಪುರಸ್ಕಾರವು ಗೌರವ ಧನ ಒಂದು ಲಕ್ಷ ರೂಪಾಯಿಯೊಂದಿಗೆ ಪ್ರಶಸ್ತಿ ಪತ್ರ, ಪದಕ ಒಳಗೊಂಡಿದ್ದು, ಜನವರಿ ತಿಂಗಳಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಮಂಡ್ಯ ರಮೇಶ್ ನಟ, ನಿರ್ದೇಶಕ, ರಂಗಶಿಕ್ಷಕ, ರಂಗ ಸಂಘಟಕ ಹಾಗೂ ಕಿರುತೆರೆ-ಚಲನಚಿತ್ರಗಳ ಹಿರಿಯ ಕಲಾವಿದ. ಮೈಸೂರಿನ ನಟನ ಸಂಸ್ಥೆ ಹಾಗೂ ರಂಗಶಾಲೆಯ ಸ್ಥಾಪಕ. ಹಿರಿಯ ರಂಗಕರ್ಮಿ ನೀನಾಸಂ ರಂಗ ಶಿಕ್ಷಣ ಕೇಂದ್ರದಲ್ಲಿ ಅಧ್ಯಯನ ಮತ್ತು ನೀನಾಸಂ ತಿರುಗಾಟದ ಮೊದಲ ಮೂರು ವರ್ಷಗಳ ಕಲಾವಿದ. ಮೈಸೂರಿನ ರಂಗಾಯಣದಲ್ಲಿ ಬಿ.ವಿ. ಕಾರಂತರ ಗರಡಿಯಲ್ಲಿ ರಂಗಕಾಯಕ. ಪ್ರಸನ್ನ, ಜಂಬೆ, ಕೆ.ವಿ.ಸುಬ್ಬಣ್ಣ, ಫಿಟ್ಸ್ ಬೆನೆವಿಟ್ಸ್ ಮುಂತಾದ ಗಣ್ಯ ನಿರ್ದೇಶಕರೊಂದಿಗೆ ದುಡಿದ ಅನುಭವ. ಕೇಂದ್ರ ಸಂಸ್ಕೃತಿ ಇಲಾಖೆಯ ರಂಗತಜ್ಞರ ಸಮಿತಿ ಸದಸ್ಯರಾಗಿ, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾಗಿ, ರಂಗಾಯಣದ ರಂಗಸಮಾಜದ…

Read More

ಬಂಟ್ವಾಳ: ಬೆಂಗಳೂರಿನ ಡಿ. ಜಿ ಯಕ್ಷ ಫೌಂಡೇಷನ್ ಆಯೋಜಿಸಿದ್ದ ಶ್ರೀ ಹರಿಲೀಲಾ ಯಕ್ಷ ನಾದೋತ್ಸವ ಕಾರ್ಯಕ್ರಮವು ದಿನಾಂಕ 13 ಅಕ್ಟೋಬರ್ 2024ನೇ ಭಾನುವಾರದಂದು ಪೊಳಲಿ ಶ್ರೀ ರಾಜ ರಾಜೇಶ್ವರಿ ದೇವಸ್ಥಾನದಲ್ಲಿ ನಡೆಯಿತು. ಇದೇ ಸಂದರ್ಭದಲ್ಲಿ ಯಕ್ಷಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್‌ ಅವರಿಗೆ ಯಕ್ಷಗಾನ ಕಲಾದಂಪತಿ ಲೀಲಾವತಿ ಮತ್ತು ಹರಿನಾರಾಯಣ ಬೈಪಾಡಿತ್ತಾಯ ಅವರ ಹೆಸರಿನಲ್ಲಿ ನೀಡುವ ‘ಶ್ರೀ ಹರಿಲೀಲಾ ಪ್ರಶಸ್ತಿ’ ಯನ್ನು ನೀಡಿ ಗೌರವಿಸಲಾಯಿತು. ಪ್ರಶಸ್ತಿ ಪ್ರದಾನ ಮಾಡಿದ ಯಕ್ಷ ಗಾನ ಕಲಾವಿದ ಹಾಗೂ ಸಂಶೋಧಕ ಪ್ರಭಾಕರ ಜೋಶಿ ಮಾತನಾಡಿ “ಯಕ್ಷಗಾನವು ಈಗ ಹಲವು ಕವಲುಗಳಾಗಿ ವಿಭಜನೆಗೊಂಡಿದೆ. ಇಂಥ ಸನ್ನಿವೇಶದಲ್ಲಿ ಪರಂಪರೆಯನ್ನು ಉಳಿಸುವ ಕರ್ತವ್ಯ ಗುರುಗಳು ಹಾಗೂ ಕಲಾವಿದರ ಮೇಲಿದೆ.” ಎಂದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಮಾಂಬಾಡಿ ಸುಬ್ರಹ್ಮಣ್ಯ ಭಟ್ “ಗುರು ಶಿಷ್ಯ ಸಂಬಂಧ ಆಪ್ತವಾದುದು. ಇಂದು ಶಿಷ್ಯರ ಪ್ರೀತಿಯಲ್ಲಿ ಮಿಂದಿದ್ದೇನೆ. ಯಕ್ಷಗಾನದಲ್ಲಿ ಗುರು ಪರಂಪರೆ ಮುಂದುವರಿಯಬೇಕು.” ಎಂದು ಹೇಳಿದರು. ಸಹ ಪ್ರಾಧ್ಯಾಪಕ ಪುರುಷೋತ್ತಮ ಭಟ್ ನಿಡುವಜೆ ಅಭಿನಂದನಾ ನುಡಿಗಳನ್ನಾಡಿದರು. ಯಕ್ಷಕಲಾ ಪೊಳಲಿ…

Read More

ಬಾಗಲಕೋಟೆ : ನಟರಾಜ್ ಸಂಗೀತ ನೃತ್ಯ ನಿಕೇತನ ಇದರ ವತಿಯಿಂದ ದಿನಾಂಕ 19 ಅಕ್ಟೋಬರ್ 2024ರಂದು ಬೆಳಗ್ಗೆ 10-00ರಿಂದ ಮತ್ತು 20 ಅಕ್ಟೋಬರ್ 2024ರಂದು ಬೆಳಗ್ಗೆ 9-00 ಗಂಟೆಗೆ ಬಾಗಲಕೋಟೆಯ ವಿದ್ಯಾಗಿರಿ ನಟರಾಜ ಸಂಗೀತ ನೃತ್ಯ ನಿಕೇತನದಲ್ಲಿ ಎರಡು ದಿನಗಳ ನೃತ್ಯ ಕಾರ್ಯಾಗಾರ ಮತ್ತು ಭರತನಾಟ್ಯ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ಕರಾವಳಿಯ ನೃತ್ಯ ಕಲಾವಿದ ವಿದ್ವಾನ್ ಮಂಜುನಾಥ ಎನ್. ಪುತ್ತೂರು ಇವರು ಈ ಕಾರ್ಯಾಗಾರವನ್ನು ನಡೆಸಿಕೊಡಲಿದ್ದಾರೆ ಎಂದು ಸಂಸ್ಥೆಯ ನಿರ್ದೇಶಕರಾದ ಗುರು ನೃತ್ಯ ವಿದುಷಿ ಶುಭದಾ ದೇಶಪಾಂಡೆಯವರು ತಿಳಿಸಿರುತ್ತಾರೆ. ದಿನಾಂಕ 20 ಅಕ್ಟೋಬರ್ 2024ರಂದು ಸಂಜೆ ವಿದ್ವಾನ್ ಮಂಜುನಾಥ ಎನ್. ಪುತ್ತೂರು ಮತ್ತು ಸಂಸ್ಥೆಯ ವಿದ್ಯಾರ್ಥಿಗಳು ಭರತನಾಟ್ಯ ಪ್ರದರ್ಶನ ನೀಡಲಿದ್ದಾರೆ.

Read More

ಕಾಸರಗೋಡು : ಮಹಿಳೆಯರ ಸಾಧನೆ ಗುರುತಿಸಲ್ಪಡಬೇಕು. ವಿವಿಧ ಕ್ಷೇತ್ರಗಳಲ್ಲಿ ಹೆಣ್ಣು ಮಕ್ಕಳು ಬಹಳಷ್ಟು ಸಾಧನೆಗಳನ್ನು ಮಾಡುತ್ತಿದ್ದು, ಯಾರಿಗೂ ಕಡಿಮೆಯಿಲ್ಲ ಎಂದು ಸಾಧಿಸಿ ತೋರಿಸಿದ್ದಾರೆ. ರಂಗಚಿನ್ನಾರಿಯ ಮಹಿಳಾ ಘಟಕ ನಾರಿ ಚಿನ್ನಾರಿಯ ಮೂಲಕ ಕಾಸರಗೋಡಿನ ಎಲೆಮರೆಯ ಪ್ರತಿಭೆಗಳನ್ನು ಗುರುತಿಸಿ ಮುಂಚೂಣಿಗೆ ತರುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ.” ಎಂದು ರಂಗನಟಿ ರೂಪಶ್ರೀ ವರ್ಕಾಡಿ ಹೇಳಿದರು. ಅವರು ಸಾಮಾಜಿಕ ಸಾಂಸ್ಕೃತಿಕ ಸಂಸ್ಥೆಯಾದ ರಂಗಚಿನ್ನಾರಿ ಕಾಸರಗೋಡು ಇದರ ಮಹಿಳಾ ಘಟಕ ನಾರಿ ಚಿನ್ನಾರಿ ನೇತೃತ್ವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಯೋಗದೊಂದಿಗೆ ದಸರಾ ಸಂಭ್ರಮದ ಪ್ರಯುಕ್ತ ಏರ್ಪಡಿಸಿದ ಸಾಂಸ್ಕೃತಿಕ ವೈಭವ ‘ನವ ವನಿತಾ’ ಕಾರ್ಯಕ್ರಮವನ್ನು ದಿನಾಂಕ 12 ಅಕ್ಟೋಬರ್ 2024ರಂದು ಕರಂದಕ್ಕಾಡಿನ ಪದ್ಮಗಿರಿ ಕಲಾ ಕುಟೀರದಲ್ಲಿ ಉದ್ಘಾಟಿಸಿ ಮಾತನಾಡಿದರು. ನಾರಿ ಚಿನ್ನಾರಿ ಕಾರ್ಯಾಧ್ಯಕ್ಷೆ ಸವಿತಾ ಟೀಚರ್ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಕಲಾವಿದೆ ಸುಶೀಲ ಮಾಧವ ಆಚಾರ್ಯ ಅವರನ್ನು ಸಮ್ಮಾನಿಸಲಾಯಿತು. ನಾರಿ ಚಿನ್ನಾರಿ ಗೌರವ ಅಧ್ಯಕ್ಷೆ ತಾರಾ ಪ್ರಸಾದ್ ಉಪಸ್ಥಿತರಿದ್ದರು. ಹಿರಿಯ ವೈದ್ಯ ಡಾ. ಬಿ.…

Read More

ವಿಜಯಪುರ : ಶರನ್ನವರಾತ್ರಿ ಪರ್ವದ ನಿಮಿತ್ತ ನಗರದ ಬಾಗಲಕೋಟೆ ರಸ್ತೆಯ ವಜ್ರಹನುಮಾನ್ ನಗರದಲ್ಲಿರುವ ಶ್ರೀ ಶಂಕರ ಮಠದಲ್ಲಿ ದಿನಾಂಕ 05 ಅಕ್ಟೋಬರ್ 2024ರಂದು ಪ್ರಥಮ ಬಾರಿಗೆ ‘ಗಮಕ ದುಂದುಭಿ’ ಮೊಳಗಿತು. ಕರ್ನಾಟಕ ಗಮಕ ಪರಿಷತ್ತು ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರು ಇವುಗಳ ಆಶ್ರಯದಲ್ಲಿ ಗಮಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ವಿಜಯಪುರ ಜಿಲ್ಲಾ ಗಮಕ ಪರಿಷತ್ ಅಧ್ಯಕ್ಷ ಶ್ರೀ ಬಿ. ಎಂ. ಪಾಟೀಲರು ಕಾರ್ಯಕ್ರಮ ಆಯೋಜಿಸಿದ್ದರು. ಹಿರಿಯ ಗಮಕಿ ಶ್ರೀಮತಿ ಶಾಂತಾ ಕೌತಾಳರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂತ ಕವಿ ಕನಕದಾಸರು ರಚಿಸಿರುವ ‘ನಳ ದಮಯಂತಿ’ ಷಟ್ಪದಿ ಕಾವ್ಯದ ‘ನಳ ದಮಯಂತಿ ವಿವಾಹ’ ಪ್ರಸಂಗವು ಮಠದ ಭಕ್ತರಲ್ಲಿ ಭಕ್ತಿಯ ಹೊಳೆ ಹರಿಸುವಲ್ಲಿ ಸಫಲವಾಯಿತು. ಗಮಕಿಗಳಾದ ಶ್ರೀಮತಿ ಪುಷ್ಪಾ ಕುಲಕರ್ಣಿ ಹಾಗೂ ಸರಸ್ವತಿ ಕುಲಕರ್ಣಿ ಇವರುಗಳು ಆರಂಭದಲ್ಲಿ ಪ್ರಾರ್ಥನಾ ಪದ್ಯವಾದ ‘ಶ್ರೀರಮಣ ಸರಸಿಜದಳಾಕ್ಷ, ಸಾಕಾರ ಚೆನ್ನಿಗರಾಯ ಪಾಲಿಸು ಜಗಕೆ ಮಂಗಳವ’ ಎಂಬ ನಾಂದೀ ಪದ್ಯವನ್ನು ಸುಶ್ರಾವ್ಯವಾಗಿ ಹಾಡಿದರು. ಕಾವ್ಯಕ್ಕೆ ವ್ಯಾಖ್ಯಾನ ನೀಡಿದ ಗಮಕಿ ಕಲ್ಯಾಣರಾವ್…

Read More