Author: roovari

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕು ಐವರ್ನಾಡು ಗ್ರಾಮದ ಚನಿಯಪ್ಪ ಹಾಗೂ ಲೀಲಾ ಇವರ ಮಗಳಾಗಿ 23.04.1988ರಂದು ಶ್ರದ್ಧಾ ಶಶಿಧರ್ ಅವರ ಜನನ. ಕನ್ನಡ ಎಂ.ಎ ಇವರ ವಿದ್ಯಾಭ್ಯಾಸ. ಶೇಖರ ಶೆಟ್ಟಿ ಬಾಯಾರು, ಸುಧಾಕರ ಕಾಂತಮಂಗಲ ಹಾಗೂ ಮಾಂಬಾಡಿ ಸುಬ್ರಮಣ್ಯ ಭಟ್ (ಹಿಮ್ಮೇಳ) ಇವರ ಯಕ್ಷಗಾನ ಗುರುಗಳು. ತಂದೆ ಮತ್ತು ಚಿಕ್ಕಪ್ಪ ಯಕ್ಷಗಾನ ಆಸಕ್ತರು. ಸಣ್ಣವಳಿದ್ದಾಗ ತಾಳಮದ್ದಲೆ, ಯಕ್ಷಗಾನ ಬಯಲಾಟಗಳಿಗೆ ಕರೆದುಕೊಂಡು ಹೋಗುತ್ತಿದ್ದರು. ಊರಿನಲ್ಲಿ ಯಕ್ಷಗಾನ ವಾತಾವರಣ ಹಾಗೂ ಅವಕಾಶವಿದ್ದ ಕಾರಣ ಯಕ್ಷಗಾನ ಕ್ಷೇತ್ರಕ್ಕೆ ಬರಲು ಪ್ರೇರಣೆಯಾಯಿತು ಎಂದು ಹೇಳುತ್ತಾರೆ ಶ್ರದ್ಧಾ ಶಶಿಧರ್. ರಂಗಕ್ಕೆ ಹೋಗುವ ಮೊದಲು ಹಿರಿಯ ಕಲಾವಿದರಲ್ಲಿ ಮತ್ತು ಗುರುಗಳಲ್ಲಿ ಪ್ರಸಂಗದ ಬಗ್ಗೆ ತಿಳಿದುಕೊಂಡು, ಪೂರಕ ಪುಸ್ತಕಗಳ ಅಧ್ಯಯನ ಮಾಡಿ,  ತಯಾರಿಯನ್ನು ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ ಶ್ರದ್ಧಾ ಶಶಿಧರ್. ಸುಧನ್ವಾರ್ಜುನ, ಕೃಷ್ಣಾರ್ಜುನ, ಗದಾಯುದ್ಧ, ಇಂದ್ರಜಿತು ಕಾಳಗ ಅಭಿಮನ್ಯು ಕಾಳಗ, ದಕ್ಷಯಜ್ಞ, ದೇವಿ ಮಹಾತ್ಮೆ, ಕೃಷ್ಣ ಲೀಲೆ ಇತ್ಯಾದಿ ಪೌರಾಣಿಕ ಪ್ರಸಂಗಗಳು ಇವರ ನೆಚ್ಚಿನ ಪ್ರಸಂಗಗಳು. ಯಕ್ಷಗಾನದ ಇಂದಿನ ಸ್ಥಿತಿ…

Read More

ಉಡುಪಿ : ಯಕ್ಷಗಾನ ಕಲಾರಂಗ ಆಯೋಜಿಸಿದ 25ನೇ ವರ್ಷದ ಯಕ್ಷಗಾನ ಕಲಾವಿದರ ಸಮಾವೇಶವು ದಿನಾಂಕ 31-05-2024 ರಂದು ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅನುಗ್ರಹ ಸಂದೇಶ ನೀಡಿದ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು “ಯಕ್ಷಗಾನ ಕಲೆಯು ಎಲ್ಲಾ ಅಂಗಗಳನ್ನು ಹೊಂದಿರುವ ಪರಿಪೂರ್ಣ ಕಲಾ ಪ್ರಕಾರ. ಅದನ್ನು ಪ್ರಸ್ತುತ ಪಡಿಸುವ ಕಲಾವಿದರು ಸಮಾಜಕ್ಕೆ ಪುರಾಣದ ಸಂದೇಶವನ್ನು ತಿಳಿಸುವ ಶ್ರೇಷ್ಠ ವಿದ್ವಾಂಸರು, ಯಕ್ಷಗಾನ ಕಲಾರಂಗ ಮಾಡುತ್ತಿರುವ ಸಮಾಜಮುಖಿ ಕೆಲಸ ಅನನ್ಯ ಮತ್ತು ಅಗಾಧ.” ಎಂದರು. ಶ್ರೀ ಮಠದ ದಿವಾನರಾದ ಶ್ರೀ ನಾಗರಾಜ ಅಚಾರ್ಯ ಸಮಾವೇಶವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಸಂಸ್ಥೆಯ ಮಾಜಿ ಅಧ್ಯಕ್ಷ ಹಾಗೂ ಪ್ರಸ್ತುತ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿ ನಿಯುಕ್ತಿಗೊಂಡ ಡಾ. ತಲ್ಲೂರು ಶಿವರಾಮ ಶೆಟ್ಟಿಯವರನ್ನು ಸ್ವಾಮೀಜಿಯವರು ಸ್ಮರಣಿಕೆ, ಶಾಲು, ಅಭಿನಂದನಾ ಪತ್ರ ನೀಡಿ ಹರಸಿದರು. ಸಮಾರಂಭದಲ್ಲಿ ಸುಬ್ರಹ್ಮಣ್ಯ ಬೈಪಡಿತ್ತಾಯ ಬರೆದ ‘ಆಗಸದ ಬೆಳಕು’ ಪುಸ್ತಕವನ್ನು ಶ್ರೀಪಾದರು ಲೋಕಾರ್ಪಣೆಗೊಳಿಸಿದರು. ಇತ್ತೀಚೆಗೆ ನಿಧನರಾದ ಪುತ್ತೂರು ಗಂಗಾಧರ ಜೋಗಿಯವರ…

Read More

ಮಡಿಕೇರಿ : ಕೊಡವ ಮಕ್ಕಡ ಕೂಟದ ವತಿಯಿಂದ ಹಿರಿಯ ಸಾಹಿತಿಗಳಾದ ಬಾಚರಣಿಯಂಡ ಪಿ. ಅಪ್ಪಣ್ಣ ಹಾಗೂ ರಾಣು ಅಪ್ಪಣ್ಣ ಅವರು ಬರೆದ ‘ಅಲಾಸ್ಕ’ ಪ್ರವಾಸ ಕಥನ ಕನ್ನಡ ಪುಸ್ತಕದ ಲೋಕರ್ಪಣಾ ಸಮಾರಂಭವು ದಿನಾಂಕ 28-05-2024 ರಂದು ಮಡಿಕೇರಿಯ ಪತ್ರಿಕಾ ಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆಗೊಳಿಸಿದ ಐ. ಎ. ಪಿ. ಪ್ರೈವೆಟ್ ಲಿಮಿಟೆಡ್‌ ಇದರ ಸಿ. ಇ. ಒ. ಮುಕ್ಕಾಟಿರ ಸೋಮಣ್ಣ ಮಾತನಾಡಿ “ಕೊಡವ ಮಕ್ಕಡ ಕೂಟದಿಂದ ಬರಹಗಾರರನ್ನು ಪ್ರೋತ್ಸಾಹಿಸವ ಕಾರ್ಯ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಪುಸ್ತಕಗಳು ಹೊರ ಬರಲಿ.” ಎಂದು ಶುಭ ಹಾರೈಸಿದರು. ಹಿರಿಯ ಸಾಹಿತಿ ಹಾಗೂ ‘ಅಲಾಸ್ಕ’ ಪುಸ್ತಕದ ಬರಹಗಾರ ಬಾಚರಣಿಯಂಡ ಪಿ. ಅಪ್ಪಣ್ಣ ಮಾತನಾಡಿ “ಹೃದಯವಂತ ಸಾಹಿತ್ಯ ಪೋಷಕರು ಇದ್ದಾಗ ಮಾತ್ರ ಸಾಹಿತ್ಯ ಕ್ಷೇತ್ರ ಅಗಾಧ ರೂಪದಲ್ಲಿ ಬೆಳೆಯಲು ಸಾಧ್ಯ.” ಎಂದರು. 2015ರಲ್ಲಿ ಯು.ಎಸ್.ಎ. ಗೆ ಸೇರಿದ ‘ಅಲಾಸ್ಕ’ ಪ್ರದೇಶಕ್ಕೆ ಪ್ರವಾಸ ತೆರಳಿದ್ದೆ. ಇದನ್ನು ಆಧರಿಸಿ ಪುಸ್ತಕ ಬರೆಯುತ್ತಿದ್ದ ವೇಳೆ ನಮ್ಮನ್ನು ಅಲಾಸ್ಕಕ್ಕೆ ಕರೆದೊಯ್ದ ಅಳಿಯ…

Read More

ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತು ತನ್ನ ಸಂಸ್ಥಾಪಕರಾದ ರಾಜರ್ಷಿ ನಾಲ್ವಡಿ ಶ್ರೀಕೃಷ್ಣರಾಜ ಒಡೆಯರ್ ಅವರ 140ನೆಯ ಜಯಂತ್ಯುತ್ಸವವನ್ನು ದಿನಾಂಕ 04-06-2024ರಂದು ಸಂಜೆ 5-00 ಗಂಟೆಗೆ ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಏರ್ಪಡಿಸಿದೆ. ‘ಮಾದರಿ ಮೈಸೂರು ರಾಜ್ಯ’ವನ್ನು ರೂಪಿಸಿದ ನಾಲ್ವಡಿಯವರ ಆಳ್ವಿಕೆಯಲ್ಲಿ ಕಲೆ, ಸಂಸ್ಕೃತಿಗೆ ವಿಶೇಷ ಮನ್ನಣೆಗಳು ದೊರಕಿದವು. ಪ್ರಜಾಪ್ರತಿನಿಧಿ ಸಭೆಯನ್ನು ಶಾಸನಬದ್ಧ ಸಂಸ್ಥೆಯನ್ನಾಗಿ ಮಾಡಿದ ಅವರು ಮಿಲ್ಲರ್ ಆಯೋಗದ ಮೂಲಕ ಮೀಸಲಾತಿಯನ್ನು ಜಾರಿಗೆ ತಂದು ‘ಸಾಮಾಜಿಕ ಕಾನೂನು’ಗಳ ಹರಿಕಾರ ಎನ್ನಿಸಿಕೊಂಡರು. ಕನ್ನಡ ಸಾಹಿತ್ಯ ಪರಿಷತ್ತು ಕೂಡ ಅವರ ಕಾಲದಲ್ಲಿಯೇ ಸ್ಥಾಪಿತವಾಯಿತು. ಮೈಸೂರು ವಿಶ್ವವಿದ್ಯಾಲಯ ಸೇರಿದಂತೆ ಅವರು ಸ್ಥಾಪಿಸಿರುವ ಸಂಸ್ಥೆಗಳ ಪಟ್ಟಿ ಬಹಳ ದೊಡ್ಡದಾಗಿದೆ. ಪರಿವರ್ತನೆಯ ಹರಿಕಾರರಾದ ನಾಲ್ವಡಿಯವರನ್ನು ಕನ್ನಡ ಸಾಹಿತ್ಯ ಪರಿಷತ್ತು ಕೃತಜ್ಞತೆಯಿಂದ ಸ್ಮರಿಸಿಕೊಳ್ಳಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು ವಹಿಸಲಿದ್ದು, ಸಾಮಾಜಿಕ ಇತಿಹಾಸಕಾರರಾದ ಶ್ರೀ ಧರ್ಮೇಂದ್ರ ಕುಮಾರ್ ಅವರು ನಾಲ್ವಡಿ ಶ್ರೀಕೃಷ್ಣರಾಜ ಒಡೆಯರ್ ಅವರ ಜೀವನ ಮತ್ತು ಸಾಧನೆಗಳ ಕುರಿತು ವಿಶೇಷ…

Read More

ಬೈಲಹೊಂಗಲ : ಬೈಲಹೊಂಗಲ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ‘ಕರ್ನಾಟಕ ಸಂಭ್ರಮ 50’ ಹಾಗೂ ‘ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣ’ ಘೋಷಣೆ ನಿಮಿತ್ತವಾಗಿ ಜುಲೈ ತಿಂಗಳಿನಲ್ಲಿ ರಾಜ್ಯಮಟ್ಟದ ಕವಿಗೋಷ್ಠಿ ಏರ್ಪಡಿಸಲು ನಿರ್ಧರಿಸಲಾಗಿದೆ. ಈ ನಿಮಿತ್ತ ಉದಯೋನ್ಮುಖ ಹಾಗೂ ಪ್ರತಿಭಾವಂತ ಕವಿಗಳಿಂದ ಕನ್ನಡ ನಾಡು, ನುಡಿ, ಇತಿಹಾಸ, ಸಂಸ್ಕೃತಿ, ಪರಂಪರೆ, ಬಸವಣ್ಣನವರು, ಶರಣ ಸಂಸ್ಕೃತಿ, ವಚನ ಸಾಹಿತ್ಯ, ಶರಣರ ಬದುಕು – ಬರಹ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದಂತೆ ಕವನಗಳನ್ನು ಆಹ್ವಾನಿಸಲಾಗಿದೆ. ಕವನ 30 ಸಾಲುಗಳಿಗೆ ಮಿಕ್ಕದಂತೆ ಡಿಟಿಪಿ ಮಾಡಿಸಿ ಸ್ವವಿಳಾಸ, ಕಿರುಪರಿಚಯ, ಭಾವಚಿತ್ರ, ವಾಟ್ಸಪ್ ಮೊಬೈಲ್ ಸಂಖ್ಯೆಯೊಂದಿಗೆ ದಿನಾಂಕ 30-06-2024ರ ಒಳಗಾಗಿ ಬೈಲಹೊಂಗಲ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎನ್.ಆರ್. ಠಕ್ಕಾಯಿ ಇವರ ಇಮೇಲ್ nrthakkai@gmail.com ವಿಳಾಸಕ್ಕೆ ಕಳಿಸುವುದು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ 9844491490/9945326808/8861325272/9535653166 ಸಂಪರ್ಕಿಸಬೇಕೆಂದು ಬೈಲಹೊಂಗಲ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಡಾ. ಪ್ರಕಾಶ ಮೆಳವಂಕಿ, ಶ್ರೀಮತಿ ಮಂಜುಳಾ ಶೆಟ್ಟರ, ಗೌರವ ಕೋಶಾಧ್ಯಕ್ಷರಾದ ಮಹೇಶ…

Read More

ಉಡುಪಿ : ಮುದ್ರಾಡಿ ಶಾಲಾ ವಠಾರದಲ್ಲಿ ಪ್ರಸಿದ್ಧ ಸಾಹಿತಿ, ಹರಿದಾಸ, ಅರ್ಥದಾರಿ, ಪ್ರವಚನಕಾರ, ಚಿಂತಕ ಅಂಬಾತನಯ ಮುದ್ರಾಡಿ ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 25-05-2024ರಂದು ನಡೆಯಿತು. ಈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಮಾತನಾಡುತ್ತಾ “ಅಂಬಾತನಯ ಮುದ್ರಾಡಿ ಅವರ ಜೀವನ ಸಾಧನೆ ಮಾದರಿಯಾಗಿದ್ದು, ಅವರೀಗ ನಮ್ಮ ನಡುವೆ ಇಲ್ಲದಿದ್ದರೂ ಅವರ ಕೃತಿ, ಮಾತು, ಭಾಷಾ ಸಾಹಿತ್ಯದಿಂದ ಜೀವಂತವಿದ್ದಾರೆ. ದೇವಿಯ ಆರಾಧಕರಾಗಿ ‘ಅಂಬಾತನಯ’ ಎಂಬ ಕಾವ್ಯನಾಮದಿಂದ ರಾಜ್ಯಾದ್ಯಂತ ಪ್ರಸಿದ್ದಿ ಪಡೆದು ಶಿಕ್ಷಣ ಸಂಘಟನೆ, ಪಠ್ಯಪುಸ್ತಕ ರಚನಾ ಸಮಿತಿ ಸದಸ್ಯರಾಗಿ, ಸಾಹಿತಿಗಳಾಗಿ ಅವರು ರಾಜ್ಯಕ್ಕೆ ಅಮೂಲ್ಯ ಸೇವೆ ಸಲ್ಲಿಸಿದ್ದಾರೆ. ಅಧ್ಯಾಪನದ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿ ಬಹಳಷ್ಟು ಸಾಧನೆ ಮಾಡಿದ್ದಾರೆ. ಭಾಷಾ ಸಂಪನ್ಮೂಲ ವ್ಯಕ್ತಿಯಾಗಿ ಅವಿಭಜಿತ ದ.ಕ. ಜಿಲ್ಲೆಯಲ್ಲಿ ಶಿಕ್ಷಕರಿಗೆ ಮಾರ್ಗದರ್ಶಕರಾಗಿದ್ದರು” ಎಂದು ಬಣ್ಣಿಸಿದರು. ಯಕ್ಷಗಾನ ಕಲಾರಂಗ ಕಾರ್ಯದರ್ಶಿ ಮುರಲಿ ಕಡೆಕಾರ್ ಮಾತನಾಡಿ, “ಅಂಬಾತನಯ ಅವರು ವೃತ್ತಿ ಕಲಾವಿದರಾಗಿ, ಯಕ್ಷಗಾನ ಪ್ರಸಂಗಕರ್ತರಾಗಿ ಕೊಡುಗೆ…

Read More

ಮಂಗಳೂರು : ಶ್ರೀರಾಮ್ ಕಲಾವೇದಿಕೆ ಕೈಕಂಬ ಇದರ ಆಶ್ರಯದಲ್ಲಿ ಆಯೋಜಿಸಿದ್ದ ‘ಮಕ್ಕಳ ಸಪ್ತದಿನ ಯಕ್ಷೋತ್ಸವ ವೈಭವ’ ಕಾರ್ಯಕ್ರಮದ ಸಮಾರೋಪ ಸಮಾರಂಭವು ದಿನಾಂಕ 25-05-2024ರಂದು ಕೈಕಂಬದ ಶ್ರೀರಾಮ್ ಸಭಾಂಗಣದಲ್ಲಿ ನಡೆಯಿತು. ಈ ಸಮಾರಂಭದಲ್ಲಿ ಆಶೀರ್ವಚನ ನೀಡಿ ಶುಭಹಾರೈಸಿದ ವೇ.ಮೂ. ಶ್ರೀ ಅನಂತ ಪದ್ಮನಾಭ ಉಪಾಧ್ಯಾಯರವರು “ಮಕ್ಕಳ ಅಭಿರುಚಿಯನ್ನು ಹೆಚ್ಚಿಸಿ ಪ್ರೋತ್ಸಾಹ ನೀಡುತಾ ಯಕ್ಷಕಲಾ ಸೇವೆಯನ್ನು ಅತ್ಯಂತ ವೈಭವವಾಗಿ ನಡೆಸಿಕೊಂಡು ಬರುತ್ತಿರುವ ಶ್ರೀರಾಮ್ ಕಲಾವೇದಿಕೆಯ ಕಾರ್ಯ ಅತ್ಯಂತ ಸ್ತುತ್ಯರ್ಹ, ಯಕ್ಷಗಾನದಲ್ಲಿ ಮಕ್ಕಳು ಅಭಿನಯಿಸುವುದು ಮಾತ್ರವಲ್ಲ ಎಲ್ಲಾ ಕಲಾವಿದರ ಪಾತ್ರಗಳನ್ನು ನೋಡಿ ಆನಂದಿಸಿ ತಮ್ಮ ಅನುಭವವನ್ನು ಹೆಚ್ಚಿಸಿಕೊಳ್ಳಬೇಕು. ಹೀಗೆ ಮಾಡಿದಲ್ಲಿ ಎಲ್ಲರಿಗೂ ಪೌರಾಣಿಕ ಕಥಾ ಅನುಭವ, ನಾಟ್ಯ ಮತ್ತು ಮಾತುಗಾರಿಕೆಯ ಸೊಗಸನ್ನು ಇನ್ನಷ್ಟು ಮನೋಜ್ಞವಾಗಿ ಪ್ರದರ್ಶಿಸಬಹುದು” ಎಂದು ಹೇಳಿದರು. ಉಳಾಯಿಬೆಟ್ಟು ಮೊರಾರ್ಜಿ ದೇಸಾಯಿ ವಸತಿ ಶಾಲಾ ಶಿಕ್ಷಕರಾದ ಶ್ರೀ ಜಯಕರ ಶೆಟ್ಟಿ “ನಮ್ಮ ದೇಶದ ಪುರಾಣ ಇತಿಹಾಸಗಳ ಜ್ಞಾನ ವಿಕಾಸವಾಗಬೇಕಾದರೆ ಯಕ್ಷಗಾನದಂತಹ ಸಮೃದ್ಧ ಕಲೆಯನ್ನು ಪರಿಪೂರ್ಣವಾಗಿ ರಸಾಸ್ವಾದ ಮಾಡಬೇಕು. ಮಕ್ಕಳ ವ್ಯಕ್ತಿತ್ವ ವಿಕಸನವಾಗಲು ಹಾಗೂ ಪೌರಾಣಿಕ…

Read More

ಮಡಿಕೇರಿ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಯು ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್ ಇವರ ಅಧ್ಯಕ್ಷತೆಯಲ್ಲಿ ದಿನಾಂಕ 27-05-2024ರಂದು ನಡೆಯಿತು. ಕನ್ನಡ ಭಾಷೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಎಲ್ಲಾ ಸಾರ್ವಜನಿಕ ಫಲಕಗಳಲ್ಲಿ ಕನ್ನಡ ಪ್ರಮುಖ ಸ್ಥಾನದಲ್ಲಿರಬೇಕು ಮತ್ತು ಶೇಕಡ 60ರಷ್ಟು ಭಾಗ ಕನ್ನಡದಲ್ಲಿ ಇರಬೇಕು ಎಂದು ಆದೇಶ ಹೊರಡಿಸಿರುವ ಕರ್ನಾಟಕ ಸರ್ಕಾರಕ್ಕೂ ಅದನ್ನು ಕೊಡಗು ಜಿಲ್ಲೆಯಲ್ಲಿ ಅಳವಡಿಸಲು ಆದೇಶಿಸಿರುವ ಜಿಲ್ಲಾಧಿಕಾರಿ ವೆಂಕಟರಾಜಾರವರನ್ನು ಅಭಿನಂದಿಸಿ ಪತ್ರ ಬರೆಯುವಂತೆ ಈ ಸಭೆಯಲ್ಲಿ ತೀರ್ಮಾನಿಸಲಾಯಿತು. ಪರಿಷತ್ತಿನ ಮುಂದಿನ ಕಾರ್ಯಕ್ರಮಗಳ ಬಗ್ಗೆ ಸುಧೀರ್ಘ ಚರ್ಚೆ ನಡೆಯಿತು. ಚುನಾವಣೆ ಮತ್ತು ಶಾಲೆಗಳಿಗೆ ರಜದ ಕಾರಣ ಉಳಿದು ಹೋಗಿರುವ ದತ್ತಿ ಕಾರ್ಯಕ್ರಮವನ್ನು ಮುಂದಿನ ತಿಂಗಳು 15ರ ಒಳಗಾಗಿ ಮಾಡಬೇಕು. ಅಲ್ಲದೇ 2024-25ರ ನೂತನ ದತ್ತಿ ಕಾರ್ಯಕ್ರಮಗಳನ್ನು ಏರ್ಪಡಿಸಬೇಕಿದೆ. ಎಲ್ಲಾ ಜಿಲ್ಲಾ ತಾಲೂಕು ಮತ್ತು ಹೋಬಳಿ ಸಮಿತಿಗಳು ಜವಾಬ್ದಾರಿ ತೆಗೆದುಕೊಂಡು ಕಾರ್ಯಕ್ರಮಗಳನ್ನು ನಡೆಸಿಕೊಂಡು ಹೋಗಬೇಕು ಎಂದು ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್ ಮನವಿ ಮಾಡಿದರು. ಕನ್ನಡ…

Read More

ಹಲವು ದಶಕಗಳ ಕಾಲ ಕನ್ನಡ ಸಾಹಿತ್ಯ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡ ನಾರಾಯಣ ಕಂಗಿಲರು ಓಯಸಿಸ್ (ಕಥಾಸಂಕಲನ), ಮತ್ತೇನೆಂದರೆ (ಕವನ ಸಂಕಲನ), ಶಬ್ದ ಮತ್ತು ನೂಪುರ (ಕಾದಂಬರಿ), ಅವರೋಹಣ, ಹೇ ರಕ್ಷಕ, ಗಾಂಧಿ ಪಥ (ನಾಟಕಗಳು), ಮರದ ಮರ್ಮರ (ಮಕ್ಕಳ ನಾಟಕ) ಎಂಬ ಕೃತಿಗಳನ್ನು ಪ್ರಕಟಿಸಿದ್ದಾರೆ. ಇವರು ಇದುವರೆಗೆ ಬರೆದ ಕತೆಗಳನ್ನು ಒಟ್ಟಿಗೆ ಸೇರಿಸಿ ಪ್ರಕಟಿಸಿದ ಮಹತ್ವದ ಕಥಾಸಂಕಲನವೇ ‘ಉತ್ತರಾಪಥ’. ಇಲ್ಲಿರುವ ಹದಿನೈದು ಕತೆಗಳ ಪೈಕಿ ಕೆಲವು ರಚನೆಗಳು ಕನ್ನಡ ಸಾಹಿತ್ಯದಲ್ಲೇ ವಿಶಿಷ್ಟವೆನಿಸುತ್ತವೆ. ನಾರಾಯಣ ಕಂಗಿಲರು ತಮ್ಮ ಬರವಣಿಗೆಯನ್ನು ಆರಂಭಿಸುವ ವೇಳೆಗೆ ಕನ್ನಡ ಸಾಹಿತ್ಯದಲ್ಲಿ ನವ್ಯಮಾರ್ಗವು ತನ್ನ ಪ್ರಭಾವವನ್ನು ಬೀರತೊಡಗಿತ್ತು. ಅಂತರಂಗದ ಬಗೆಯೊಳಗನು ತೆರೆದು ನೋಡುವ ಕ್ರಮ ಆರಂಭಗೊಂಡಿತ್ತು. ಅಂತರಂಗವನ್ನು ಹೊಕ್ಕು ನೋಡುವ ಪರಿಯನ್ನು ನವ್ಯಮಾರ್ಗದಿಂದ ಪಡೆದುಕೊಂಡ ಲೇಖಕರು ಕತೆಯ ಒಳಹೊರಗುಗಳ ಮುಖಾಮುಖಿಯನ್ನು ತಮ್ಮದೇ ರೀತಿಯಲ್ಲಿ ಆಭಿವ್ಯಕ್ತಿಸಿದ್ದಾರೆ. ಈ ಸಂಕಲನದ ಪ್ರಾತಿನಿಧಿಕ ಕತೆಯಾದ ‘ಉತ್ತರಾಪಥ’ವು ಸಂಕೀರ್ಣವಾಗಿದ್ದು, ಮನು ಎಂಬ ಯುವಕನು ಅನುಭವಿಸುವ ನೋವು, ಏಕಾಕಿತನ ಮತ್ತು ಯಾತನೆಗಳನ್ನು ಒಳಗೊಂಡಿದೆ. ಈ ವಸ್ತುವಿಗೆ ವೈಯಕ್ತಿಕ…

Read More

ಧಾರವಾಡ : ಧಾರವಾಡದ ಸಾಹಿತ್ಯ ಗಂಗಾ ಸಂಸ್ಥೆಯು ಈ ವರ್ಷದಿಂದ ಕೊಡಲಾರಂಭಿಸಿರುವ ‘ಸುನಂದಾ ಬೆಳಗಾಂವಕರ ಕಾದಂಬರಿ ಪ್ರಶಸ್ತಿ’ಗೆ ಡಾ. ನಾ. ಮೊಗಸಾಲೆಯವರ ‘ಭಾರತ ಕಥಾ’ ಕಾದಂಬರಿಯು ಆಯ್ಕೆಯಾಗಿದೆ. ಈ ಪ್ರಶಸ್ತಿಯು ಒಂದು ಸಾಂಕೇತಿಕ ಮೊತ್ತ, ಪ್ರಶಸ್ತಿ ಫಲಕ ಮತ್ತು ಸನ್ಮಾನವನ್ನು ಒಳಗೊಂಡಿರುತ್ತದೆ. ಡಾ. ಸುಭಾಷ್ ಪಟ್ಟಾಜೆ ಮತ್ತು ಕುಮಾರಿ ಭವ್ಯ ಭಟ್ ತೀರ್ಪುಗಾರರಾಗಿದ್ದ ಈ ಪ್ರಶಸ್ತಿಯ ಆಯ್ಕೆಗೆ ಮೂವತ್ತಕ್ಕೂ ಅಧಿಕ ಕಾದಂಬರಿಗಳು ಬಂದಿದ್ದವು. ಈ ಪ್ರಶಸ್ತಿಗೆ ಲೇಖಕರು, ಪ್ರಕಾಶಕರು ಮತ್ತು ಓದುಗರಿಂದ ಕಾದಂಬರಿಗಳನ್ನು ಆಹ್ವಾನಿಸಲಾಗಿತ್ತು. ಕನ್ನಡದಲ್ಲಿ ಮೊಟ್ಟ ಮೊದಲ ಬಾರಿಗೆ ಓದುಗರಿಂದ ಕಾದಂಬರಿಗಳನ್ನು ಆಹ್ವಾನಿಸುವ ಮೂಲಕ ಸಾಹಿತ್ಯ ಗಂಗಾ ಸಂಸ್ಥೆಯು ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದೆ. ಈ ಪ್ರಶಸ್ತಿಯ ಮತ್ತೊಂದು ವಿಶೇಷವೆಂದರೆ ‘ಭಾರತ ಕಥಾ’ ಕಾದಂಬರಿಯನ್ನು ಲೇಖಕರಾಗಲೀ, ಪ್ರಕಾಶಕರಾಗಲೀ ಕಳುಹಿಸಿರಲಿಲ್ಲ, ಓದುಗರೇ ಕಳುಹಿಸಿದ್ದರು. ಕನ್ನಡದ ಮುಖ್ಯ ಲೇಖಕಿಯರಲ್ಲೊಬ್ಬರಾದ ದಿ. ಸುನಂದಾ ಬೆಳಗಾಂವಕರ ಅವರ ಹೆಸರಿನಲ್ಲಿ ನೀಡಲಾಗುತ್ತಿರುವ ಚೊಚ್ಚಲ ಪ್ರಶಸ್ತಿಗೆ ಕನ್ನಡದ ಮಹತ್ವದ ಲೇಖಕರಾದ ಡಾ. ನಾ. ಮೊಗಸಾಲೆಯವರ ‘ಭಾರತ ಕಥಾ’ ಆಯ್ಕೆಯಾಗಿದೆ.…

Read More