Subscribe to Updates
Get the latest creative news from FooBar about art, design and business.
Author: roovari
ಬೆಂಗಳೂರು : ಬೆಂಗಳೂರಿನ ‘ತಿಂಮ ಸೇನೆ’ ತಂಡ ಆಯೋಜಿಸುವ ಸಂವಾದ ಕಾರ್ಯಕ್ರಮವು ದಿನಾಂಕ 28-09-2023ರಂದು ಬೆಂಗಳೂರಿನ ಜೆ.ಪಿ ನಗರದ 8ನೇ ಹಂತದ ಜಂಬೂ ಸವಾರಿ ದಿಣ್ಣೆಯ ಟಿ.ಕೆ ದೀಪಕ್ ಲೇಔಟಿನಲ್ಲಿ ನಡೆಯಿತು. ತಿಂಮಸೇನೆಯ ಈ ವಿಶೇಷ ಕಾರ್ಯಕ್ರಮಕ್ಕೆ ಕಳೆ ತಂದವರು ಸಾಹಿತಿ, ಕವಿ, ಗೀತರಚನಕಾರರಾದ ಶ್ರೀ ಜಯಂತ್ ಕಾಯ್ಕಿಣಿ. ಈ ಕಾರ್ಯಕ್ರಮದಲ್ಲಿ 40 ಪದಗಳಿಗೆ ಮೀರದ ಒಂದು ಸಣ್ಣಕತೆಯ ರಚನೆಯನ್ನು ಎಲ್ಲ ಸದಸ್ಯರು ಮಾಡಿ, ಅದನ್ನು ಅಲ್ಲಿ ಓದಿದರು. ಒಬ್ಬೊಬ್ಬರದೂ ಒಂದೊಂದು ರೀತಿಯ ವಿನ್ಯಾಸ, ವಿಷಯ ವೈವಿಧ್ಯ ಮತ್ತು ನಿರೂಪಣಾ ಚಾತುರ್ಯ. ಆ ಕತೆಗಳ ಬಗ್ಗೆ ಮಾತನಾಡುತ್ತಲೇ, ತಮ್ಮ ನೆನಪಿನ ಬುತ್ತಿಯಿಂದ ಅನೇಕ ಸಂಗತಿಗಳನ್ನು ಹೊರ ತೆಗೆದು ಕತೆಗಳ ಬಗ್ಗೆ ವಿಶೇಷ ವ್ಯಾಖ್ಯಾನವನ್ನು ಜಯಂತ ಕಾಯ್ಕಿಣಿಯವರು ಮಾಡಿದರು. ಬಳಿಕ ಮಾತನಾಡಿದ ಅವರು ‘ಕತೆ ಅನುಭವದಿಂದ ಉದ್ಭವಿಸಿದರೂ, ಅದು ಕತೆಗಾರರನ್ನು ಮೀರಿದ್ದು’ ಎಂದರು. ಸಂವೇದನಾ ಭರಿತ ಅವರ ಮಾತುಗಳು, ಕೇಳುಗರ ಮನಸ್ಸು ಸೆಳೆದುದಷ್ಟೇ ಅಲ್ಲದೆ ಕಥೆಯ ರಚನೆಗೆ ಬೇಕಾದ ಅನೇಕ ಸಲಹೆ, ಮಾರ್ಗದರ್ಶನವನ್ನು…
ಬೆಂಗಳೂರು : ಹಿಂದೂಸ್ತಾನಿ ಸಂಗೀತದ ಅಧ್ಯಯನ ಮತ್ತು ಅಧ್ಯಾಪನದಲ್ಲಿ 20 ವರ್ಷಗಳಿಂದ ಕಾರ್ಯನಿರತವಾಗಿರುವ ಸ್ವರ ಗಾಂಧಾರ ಸಂಗೀತ ವಿದ್ಯಾಲಯ ಅರ್ಪಿಸುವ ವಿಂಶತಿ ಗಾನ ಸಂಭ್ರಮ ಹಾಗೂ ಗುರುವಂದನಾ ಕಾರ್ಯಕ್ರಮವು ದಿನಾಂಕ 02-10-2023ರ ಸೋಮವಾರದಂದು ನಡೆಯಲಿದೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಅಖಿಲ ಹವ್ಯಕ ಮಹಾಸಭಾದಲ್ಲಿ ಸಂಜೆ ಘಂಟೆ 5.00 ರಿಂದ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಮಾನ್ಯ ಉಪಕುಲಪತಿಗಳಾದ ಡಾ.ಅಹಲ್ಯಾ ಶರ್ಮಾ ಭಾಗವಹಿಸಲಿದ್ದಾರೆ. ಕಾರ್ಯಕ್ರಮವು ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿಗಳಾದ ಡಾ.ಮಲ್ಲೇಪುರಂ ಜಿ.ವೆಂಕಟೇಶ ಇವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಬೆಳಗ್ಗೆ ಘಂಟೆ 9.00ರಿಂದ ನಡೆಯಲಿರುವ ಕಾರ್ಯಕ್ರಮದಲ್ಲಿ ದೀಪ ಪ್ರಜ್ವಲನೆಯ ನಂತರ ವಿದ್ಯಾಲಯದ ವಿದ್ಯಾರ್ಥಿಗಳಿಂದ ಗಾಯನ ಪ್ರಸ್ತುತಿ ನಡೆಯಲಿದ್ದು, ತಬಲಾದಲ್ಲಿ ಶ್ರೀ ಪ್ರಕಾಶ ದೇಶಪಾಂಡೆ, ಶ್ರೀ ನಾಗರಾಜ ಹೆಗಡೆ, ಶ್ರೀ ಮಂಜುನಾಥ ಭಟ್ ಹಾಗೂ ಹಾರ್ಮೋನಿಯಂನಲ್ಲಿ ಶ್ರೀಮತಿ ಪ್ರತಿಭಾ ಹೆಗಡೆ ಸಹಕರಿಸಲಿದ್ದಾರೆ. ಸಭಾಕಾರ್ಯಕ್ರಮದ ಬಳಿಕ ಸಂಜೆ ಘಂಟೆ 6.00ರಿಂದ ನಡೆಯಲಿರುವ ‘ಗಾನ ಸಂಭ್ರಮ’ದಲ್ಲಿ ಪ್ರಸಿದ್ಧ ಹಿಂದೂಸ್ತಾನಿ ಗಾಯಕರಾದ ವಿದುಷಿ…
ಮುಡಿಪು : ನೃತ್ಯಲಹರಿ ನಾಟ್ಯಾಲಯ ಉಳ್ಳಾಲ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಮಹಿಳಾ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಕೊಣಾಜೆಯ ಮಂಗಳೂರು ವಿವಿಯ ಮಂಗಳಾ ಸಭಾಂಗಣದಲ್ಲಿ ‘ದಶಾವರಣ -2023’ ಕಾರ್ಯಕ್ರಮವು ದಿನಾಂಕ 24-09-2023ರಂದು ನಡೆಯಿತು. ಈ ಕಾರ್ಯಕ್ರಮವನ್ನು ನಾಟ್ಯಾಚಾರ್ಯ ಉಳ್ಳಾಲ ಮೋಹನ್ ಕುಮಾರ್ ಅವರು ಉದ್ಘಾಟಿಸಿ ಮಾತನಾಡುತ್ತಾ “ಸನಾತನ ಶಾಸ್ತ್ರೀಯ ಕಲೆಗಳನ್ನು ಉಳಿಸಿ ಬೆಳೆಸಬೇಕಾದರೆ ಸಮರ್ಥ ಕಲಾಕಾರರ ಅಗತ್ಯವೂ ಇದೆ. ಶಾಸ್ತ್ರೀಯ ಕಲಾ ಪರಂಪರೆಯನ್ನು ಉಳಿಸಿ ಬೆಳೆಸಿ, ಮುಂದುವರಿಸುವಲ್ಲಿ ರೇಷ್ಮಾ ನಿರ್ಮಲ್ ಭಟ್ ಅವರು ನೃತ್ಯಲಹರಿ ನಾಟ್ಯಾಲಯದ ಮೂಲಕ ಮಾಡುತ್ತಿರುವ ಪ್ರಯತ್ನ ಶ್ಲಾಘನೀಯ” ಎಂದು ಹೇಳಿದರು. ಮಂಗಳೂರು ವಿವಿ ಕುಲಪತಿ ಪ್ರೊ.ಜಯರಾಜ್ ಅಮೀನ್ ಅಧ್ಯಕ್ಷತೆ ವಹಿಸಿದ್ದರು. ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಕೆ.ಟಿ.ಸುವರ್ಣ ಮಾತನಾಡಿದರು. ಶಾರದಾ ಗಣಪತಿ ವಿದ್ಯಾಲಯದ ಸಂಚಾಲಕ ಟಿ.ಜಿ.ರಾಜಾರಾಂ ಭಟ್, ಮಂಗಳೂರು ವಿವಿ ಮಹಿಳಾ ಅಧ್ಯಯನ ಕೇಂದ್ರದ ಪ್ರೊ.ಬಿ.ಕೆ. ಸರೋಜಿನಿ, ಪ್ರಾಧ್ಯಾಪಕ ಧನಂಜಯ ಕುಂಬ್ಳೆ, ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಮಾಜಿ ಅಧ್ಯಕ್ಷ ಸಂತೋಷ್ ಬೋಳಿಯಾರ್, ವಿದ್ಯಾರತ್ನ ವಿದ್ಯಾ ಸಂಸ್ಥೆಯ ಸಂಚಾಲಕ ರವೀಂದ್ರ…
ಕೋಟ : ಕೋಟತಟ್ಟು ಗ್ರಾಮ ಪಂಚಾಯತ್, ಕೋಟತಟ್ಟು, ಡಾ. ಶಿವರಾಮ ಕಾರಂತ ಟ್ರಸ್ಟ್ (ರಿ.) ಉಡುಪಿ ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ (ರಿ.) ಕೋಟ ಸಹಯೋಗದಲ್ಲಿ ಡಾ. ಶಿವರಾಮ ಕಾರಂತ ಜನ್ಮದಿನೋತ್ಸವ ಮತ್ತು ಹುಟ್ಟೂರ ಪ್ರಶಸ್ತಿಗೆ 19ನೇ ವರುಷದ ಸಂಭ್ರಮ ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರದಾನ ‘ಇಂಪನ’ ಸಂಗೀತ ಸಂಪುಟದ ಸಂಚಲನ ಕಾರ್ಯಕ್ರಮವು ದಿನಾಂಕ 03-10-2023ರಿಂದ 10-10-2023ರವರೆಗೆ ಕೋಟದ ಶಿವರಾಮ ಕಾರಂತ ಥೀಂ ಪಾರ್ಕಿನಲ್ಲಿ ನಡೆಯಲಿದೆ. ದಿನಾಂಕ 03-10-2023ರಂದು ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಇವರು ಡಾ. ಶಿವರಾಮ ಕಾರಂತ ಜನ್ಮದಿನೋತ್ಸವ ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದು, ಕುಂದಾಪುರ ವಿಧಾನ ಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ಎ. ಕಿರಣ ಕುಮಾರ್ ಕೊಡ್ಗಿಯವರು ಅಧ್ಯಕ್ಷತೆ ವಹಿಸಲಿರುವರು. ದಿನಾಂಕ 04-10-2023ರಿಂದ 08-10-2023ರವರೆಗೆ ಕಾರಂತ ದರ್ಶನ : ಚಲನಚಿತ್ರ ಪ್ರದರ್ಶನಗಳು ಪ್ರತಿದಿನ ಸಂಜೆ 6ರಿಂದ ಪ್ರದರ್ಶನಗೊಳ್ಳಲಿವೆ. ದಿನಾಂಕ 04-10-2023ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಟ ಇಲ್ಲಿ…
ಪುತ್ತೂರು : ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಡಾ.ಶಿವರಾಮ ಕಾರಂತ ಬಾಲವನ ಪುತ್ತೂರು ಮತ್ತು ಸಹಾಯಕ ಆಯುಕ್ತರ ಕಾರ್ಯಾಲಯ ಪುತ್ತೂರು ಉಪವಿಭಾಗ ಆಶ್ರಯದಲ್ಲಿ ದಿನಾಂಕ 10-10-2023ರಂದು ಪುತ್ತೂರು ಬಾಲವನದಲ್ಲಿ ಹಿರಿಯ ಸಾಹಿತಿ ಡಾ.ಕೆ.ಶಿವರಾಮ ಕಾರಂತರ ಜನ್ಮದಿನೋತ್ಸವ ನಡೆಯಲಿದೆ. ಈ ಸಂದರ್ಭ ನೀಡಲಾಗುವ ಕೋಟ ಶಿವರಾಮ ಕಾರಂತ ಬಾಲವನ ಪ್ರಶಸ್ತಿಗೆ ಖ್ಯಾತ ವರ್ಣ ಚಿತ್ರಕಲಾವಿದ ಬೆಂಗಳೂರಿನ ಕೆ.ಚಂದ್ರನಾಥ ಆಚಾರ್ಯ ಆಯ್ಕೆಯಾಗಿದ್ದಾರೆ. ಪುತ್ತೂರು ಶಾಸಕ ಅಶೋಕ್ ರೈ ಅಧ್ಯಕ್ಷತೆಯ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಪುತ್ತೂರು ಸಹಾಯಕ ಆಯುಕ್ತ ಗಿರೀಶ್ ನಂದನ್, ಸಾಹಿತಿ ಡಾ.ವರದರಾಜ ಚಂದ್ರಗಿರಿ, ನ್ಯಾಯವಾದಿ ಬೆಟ್ಟ ಈಶ್ವರ ಭಟ್ ಹಾಗೂ ಪುತ್ತೂರು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಉಮೇಶ್ ನಾಯಕ್ ಕಾರ್ಯನಿರ್ವಹಿಸಿದ್ದಾರೆ. ಸುಳ್ಯದ ಲಿಬರಲ್ ಅಕಾಡೆಮಿ ಆಫ್ ಎಜುಕೇಶನ್ ಸ್ಥಾಪಕಾಧ್ಯಕ್ಷರಾಗಿದ್ದ ದಿ.ಕುರುಂಜಿ ವೆಂಕಟರಮಣ ಗೌಡ ಅವರ ಹೆಸರಿನಲ್ಲಿ ಸ್ಥಾಪನೆಯಾದ ಶಾಶ್ವತ ನಿಧಿಯಲ್ಲಿ ಪ್ರತೀ ವರ್ಷ ಕಾರಂತ ಬಾಲವನ ಪ್ರಶಸ್ತಿ ನೀಡಲಾಗುತ್ತಿದೆ. ಕೆ.ಚಂದ್ರನಾಥ ಆಚಾರ್ಯ : ಶಿವರಾಮ ಕಾರಂತರಂತಹ ವ್ಯಕ್ತಿತ್ವಗಳಿಂದ ಅಪಾರವಾಗಿ ಪ್ರಭಾವಿತರಾದ ಚಂದ್ರನಾಥ…
ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇದರ ವತಿಯಿಂದ ಶ್ರೀ ಬಲಮುರಿ ವಿದ್ಯಾ ಗಣಪತಿ ದೇವಸ್ಥಾನ, ಭಾರತೀ ನಗರ, ಬನ್ನೂರು ಇಲ್ಲಿ ತಿಂಗಳ ಸರಣಿ ಕಾರ್ಯಕ್ರಮದ ಅಂಗವಾಗಿ ‘ಮಾಯಾಮೃಗ’ ಎಂಬ ತಾಳಮದ್ದಳೆ ಕಾರ್ಯಕ್ರಮವು ದಿನಾಂಕ 26-09-2023ರಂದು ನಡೆಯಿತು. ಮುಮ್ಮೇಳದಲ್ಲಿ ಶ್ರೀ ಪಕಳಕುಂಜ ಶ್ಯಾಮ್ ಭಟ್ (ರಾವಣ), ಶ್ರೀ ಗುಡ್ಡಪ್ಪ ಬಲ್ಯ (ಸನ್ಯಾಸಿ ರಾವಣ), ಶ್ರೀ ಭಾಸ್ಕರ ಬಾರ್ಯ (ಶ್ರೀ ರಾಮ), ಶ್ರೀ ದುಗ್ಗಪ್ಪ ನಡುಗಲ್ಲು (ಸೀತೆ), ಶ್ರೀ ಮಾಂಬಾಡಿ ವೇಣುಗೋಪಾಲ್ ಭಟ್ (ಲಕ್ಷ್ಮಣ) ಮತ್ತು ಶ್ರೀ ಬಡೆಕ್ಕಿಲ ಚಂದ್ರಶೇಖರ ಭಟ್ (ಮಾರೀಚ) ಪಾತ್ರಗಳಲ್ಲಿ ಭಾಗವಹಿಸಿದರು. ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀ ಲಕ್ಷ್ಮೀ ನಾರಾಯಣ ಭಟ್ ಬಟ್ಯಮೂಲೆ ಮತ್ತು ಶ್ರೀ ಆನಂದ್ ಸವಣೂರು ಹಾಗೂ ಚೆಂಡೆ ಮದ್ದಳೆಗಳಲ್ಲಿ ಪ್ರೊ.ಶ್ರೀ ದಂಬೆ ಈಶ್ವರ ಶಾಸ್ತ್ರೀ, ಶ್ರೀ ಅಚ್ಯುತ ಪಾಂಗಣ್ಣಾಯ ಮತ್ತು ಮಾಸ್ಟರ್ ಪರೀಕ್ಷಿತ್ ಸಹಕರಿಸಿದರು. ಶ್ರೀ ದೇವಳದ ಸಂಚಾಲಕರು ಹಾಗೂ ಸದಸ್ಯರು ಸಹಕಾರದೊಂದಿಗೆ ಇಂಜಿನಿಯರ್ ಶಂಕರ್ ಭಟ್ ಪ್ರಾಯೋಜಿಸಿದರು.
ಮುಂಬಯಿ : ಮಂಗಳೂರಿನ ಮಧುರತರಂಗ ಸಂಸ್ಥಾಪಕ ಸ್ವರ ತಪಸ್ವಿ ‘ಕರ್ನಾಟಕ ಸ್ವರ ಕಂಠೀರವ’ ಜೂ.ರಾಜ್ ಕುಮಾರ್ ಖ್ಯಾತಿಯ ಜಗದೀಶ್ ಶಿವಪುರ ಇವರ ಸ್ವರ ಗಾಯನ ಲೋಕದ 50ರ ಸುವರ್ಣ ಸಂಭ್ರಮ ಆಚರಣೆಯು ದಿನಾಂಕ 24-09-2023ರ ಭಾನುವಾರ ಮುಂಬಯಿಯ ಸಾಂತಾಕ್ರೂಸ್ (ಪೂ.)ನಲ್ಲಿರುವ ಬಿಲ್ಲವ ಭವನದಲ್ಲಿ ನಡೆಯಿತು. ‘ಸ್ವರ ಕಂಠೀರವ’ ಡಾ.ರಾಜ್ ಸವಿನೆನಪು, ಡಾ.ರಾಜ್ ಕುಮಾರ್ ಅವರ ನೆನಪಿನ ಮಧುರ ಗೀತೆಗಳು ಮತ್ತು ನೃತ್ಯ ವೈಭವಗಳ ವಿಭಿನ್ನ ಕಾರ್ಯಕ್ರಮ ಇದಾಗಿತ್ತು. ಕಾರ್ಯಕ್ರಮವನ್ನು ಸವಿತಾ ಅಶೋಕ್ ಪುರೋಹಿತ್ ದೀಪ ಬೆಳಗಿಸಿ ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ನವಿಮುಂಬಯಿಯ ಪನ್ವೇಲ್ ನಲ್ಲಿರುವ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಅಧ್ಯಕ್ಷ ಸಿ.ಎ. ಶ್ರೀಧರ್ ಆಚಾರ್ಯ ವಹಿಸಿಕೊಂಡಿದ್ದರು. ಶ್ರೀಯುತರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ “ಸಂಗೀತ ಕ್ಷೇತ್ರದಲ್ಲಿ ಅದ್ಭುತ ಸೇವೆಯನ್ನು ಮಾಡುತ್ತಾ ತನ್ನ ಕಂಠ ಸ್ವರದ ಮೂಲಕ ಡಾ.ರಾಜಕುಮಾರ್ ಅವರನ್ನು ಸದಾ ಸ್ಮರಿಸಿ, ನೆನಪಿಸಿಕೊಂಡು ಬಂದಿರುವ ಜಗದೀಶ್ ಶಿವಪುರ ಶ್ರೀ ಕಾಳಿಕಾಂಬಾ ದೇವಸ್ಥಾನದ ಭಕ್ತಿಗೀತೆಯನ್ನೂ ಹಾಡಿ ಭಕ್ತ ಜನರನ್ನು ಮುದಗೊಳಿಸಿದ್ದಾರೆ. ಮುಂಬಯಿ ನಗರದಲ್ಲಿ…
ಮಂಗಳೂರು : ಪುರಭವನದಲ್ಲಿ ಕರಾವಳಿ ಸಂಗೀತ ಕಲಾವಿದರ ಒಕ್ಕೂಟ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಇದರ 16ನೇ ವಾರ್ಷಿಕೋತ್ಸವ ಸಮಾರಂಭವು ದಿನಾಂಕ 23-09-2023ರಂದು ಜರಗಿತು. ಇದರ ಅಧ್ಯಕ್ಷತೆ ವಹಿಸಿದ ಪ್ಲಾನ್ ಟೆಕ್ ಮತ್ತು ದೈಜಿ ವರ್ಲ್ಡ್ ಮೀಡಿಯಾ ನಿರ್ದೇಶಕರು ಲಾರೆನ್ಸ್ ಡಿಸೋಜ ಇವರ ಮಾತನಾಡುತ್ತಾ “ಸಾಂಸ್ಕೃತಿಕವಾಗಿ ಅಸ್ತಿತ್ವಕ್ಕೆ ಬಂದ ಯಾವುದೇ ಕಲಾ ಸಂಸ್ಥೆಗಳು ತಮ್ಮ ಪ್ರದರ್ಶಿತ ಚಟುವಟಿಕೆಗಳೊಂದಿಗೆ ಸಾಮಾಜಿಕವಾಗಿ ಸ್ಪಂದಿಸುವ ಕಾರ್ಯವಸೆಗಬೇಕು” ಎಂದು ಅಭಿಪ್ರಾಯಪಟ್ಟರು. ಹಿರಿಯ ಕಿರಿಯ ಸಂಗೀತ ಪ್ರತಿಭಾವಂತ ಕಲಾವಿದರ ಈ ಒಕ್ಕೂಟವು ಈ ನಿಟ್ಟಿನಲ್ಲಿ ನಿರಂತರವಾಗಿ ಉಪಯುಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪಾರದರ್ಶಕವಾಗಿ ಕಲಾಭಿಮಾನಿಗಳ ವಿಶ್ವಾಸಕ್ಕೆ ಪಾತ್ರವಾಗಿದೆ ಎಂದು ಅಭಿನಂದಿಸಿದರು. ಮುಖ್ಯ ಅತಿಥಿಗಳಾಗಿ ಮುಂಬೈಯ ವಚನಾ ಹಾಸ್ಪಿಟಾಲಿಟಿ ಸರ್ವೀಸಸ್ ಇದರ ನಿರ್ದೇಶಕರಾದ ಶ್ರೀ ಚಂದ್ರಶೇಖರ್ ಶೆಟ್ಟಿ ಕುಕ್ಕುಂದೂರು, ಎಸ್.ಎಲ್. ಡೈಮಂಡ್ ಹೌಸ್ ಮಾಲಕ ಶ್ರೀ ಎಂ. ರವೀಂದ್ರ ಶೇಟ್ ಭಾಗವಹಿಸಿ ಶುಭ ಕೋರಿದರು. ಸಂಗೀತ ಕ್ಷೇತ್ರದ ಕಲಾ ಸಾಧಕ ಹಿರಿಯರಾದ ಸಂಗೀತ ಶಿಕ್ಷಕ ಗಾಯಕ ಕೆ. ರವಿಶಂಕರ್ ಸುರತ್ಕಲ್,…
ಬೆಂಗಳೂರು : ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ ಧಾರವಾಡ ಹಾಗೂ ಕ್ಷಮತಾ ಹುಬ್ಬಳ್ಳಿ ಪ್ರಸ್ತುತಪಡಿಸುವ ‘ವಸುಂಧರಾ’ ಮಹಿಳಾ ವಿದ್ವನ್ಮಣಿಗಳ ದಿನಪೂರ್ತಿ ಸಂಗೀತ ಸಮ್ಮೇಳನವು ದಿನಾಂಕ 02-10-2023ರಂದು ಬೆಂಗಳೂರಿನ ಜಯನಗರದ ಯುವಪಥ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಬೆಂಗಳೂರಿನ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ, ರೋಟರಿ ಕ್ಲಬ್ ಸಖಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೇಂದ್ರ ಸರ್ಕಾರದ ಸಂಸ್ಕೃತಿ ಇಲಾಖೆ, ಅನಾಮಿಕ ಸಂಸ್ಥೆ, ಕಾಮತ್ ಮತ್ತು ಕಾಮತ್ ಸಹೋದರರು, ಪುಣೆಯ ನಾನಾಸಾಹೇಬ ಅಳವಣಿ ಟ್ರಸ್ಟ್ ಹಾಗೂ ಬಾಗಲಕೋಟೆಯ ನಟರಾಜ ಸಂಗೀತ ವಿದ್ಯಾಲಯ ಮತ್ತು ಕಲಾಸಂಘಗಳ ಸಹಪ್ರಾಯೋಜಕತ್ವದಲ್ಲಿ ವನಿತೆಯರ ಸಂಗೀತ ಸಮ್ಮೇಳನ ದಿನಪೂರ್ತಿ ನಡೆಯಲಿದೆ. ಇದರಲ್ಲಿ ಸಹಕಲಾವಿದರಾದಿಯಾಗಿ ಭಾಗವಹಿಸುವ ಎಲ್ಲರೂ ಮಹಿಳೆಯರೇ ಇರುವುದು ವಿಶೇಷವಾಗಿದೆ. ಹಿಂದುಸ್ತಾನಿ ಹಾಗೂ ಕರ್ನಾಟಕ ಸಂಗೀತಗಳ ನಾದಲಹರಿ ಈ ಸಮ್ಮೇಳನದಲ್ಲಿ ಮೊಳಗಲಿದೆ. ಬೆಂಗಳೂರಿನ ವಿದುಷಿ ಪೂರ್ಣಿಮಾ ಭಟ್ ಕುಲಕರ್ಣಿ ಅವರ ಗಾಯನದೊಂದಿಗೆ ಸಂಗೀತೋತ್ಸವಕ್ಕೆ ಚಾಲನೆ ದೊರೆಯಲಿದೆ. ನಂತರ ಶ್ರೀದೇವಿ ಹಾಗೂ ಡಾ. ಗಂಗಾ ಕಾಮತ್ ಅವರಿಂದ ದ್ವಂದ್ವ ವೀಣಾವಾದನ ಮೂಡಿಬರಲಿದೆ. ಫ್ಲ್ಯೂಟ್…
ಉಡುಪಿ : ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿಯ ವತಿಯಿಂದ ಶ್ರೀ ಶರನ್ನವರಾತ್ರಿ ಮಹೋತ್ಸವದ ಪ್ರಯುಕ್ತ ‘ನವಶಕ್ತಿ ವೈಭವ’ – ವೇಷ ಭೂಷಣ ಮತ್ತು ನೃತ್ಯ ರೂಪಕ ಸ್ಪರ್ಧೆಯು ದಿನಾಂಕ 15-10-2023ನೇ ಭಾನುವಾರ ಬೆಳಿಗ್ಗೆ ಘಂಟೆ 09.09ಕ್ಕೆ ದೇವಳದ ನವದುರ್ಗಾ ಮಂಟಪದಲ್ಲಿ ಉದ್ಘಾಟನೆಗೊಳ್ಳಲಿದೆ. ಸ್ಪರ್ಧೆಯ ನಿಯಮಾವಳಿಗಳು – * ಭಾಗವಹಿಸುವ ತಂಡದಲ್ಲಿ 9 ಮಂದಿ ಸ್ಪರ್ಧಾಳುಗಳು ಕಡ್ಡಾಯವಾಗಿ ಪಾಲ್ಗೊಳ್ಳುವುದು. * ನವರಾತ್ರಿ ವೈಭವ ಸಾರುವ ನವ ದುರ್ಗೆಯರ ಪಾತ್ರಗಳಿಗೆ ಮಾತ್ರ ಅವಕಾಶ. * ತಮಗೆ ಬೇಕಾದ ವೇಷ-ಭೂಷಣ, ಪರಿಕರಗಳನ್ನು ಸ್ಪರ್ಧಾಳುಗಳೇ ತರಬೇಕು. * ಬೆಂಕಿ ಅಥವಾ ಇನ್ಯಾವುದೇ ಅಪಾಯಕಾರಿ ಪರಿಕರಗಳಿಗೆ ಅವಕಾಶ ಇರುವದಿಲ್ಲ. * ಭಾಗವಹಿಸುವ ತಂಡಗಳು ತಮ್ಮ ತಂಡದ 9 ಜನರ ಹೆಸರನ್ನು ಮುಂಗಡವಾಗಿ ನೋಂದಾಯಿಸಿಕೊಳ್ಳತಕ್ಕದ್ದು. * ನವದುರ್ಗಾ ವೈಭವವನ್ನು ಸಾರುವ ವೇಷ-ಭೂಷಣ, ನೃತ್ಯ-ರೂಪಕ ಮತ್ತು ಯಕ್ಷಗಾನ ವೇಷಗಳಿಗೆ ಮಾತ್ರ ಅವಕಾಶ ನೀಡಲಾಗುವುದು. * ಯಾವುದೇ ಧಾರ್ಮಿಕ ಭಾವನೆ, ವಿಚಾರ ಮತ್ತು ನಂಬಿಕೆಗಳಿಗೆ ಅಪಹಾಸ್ಯ ಮಾಡುವಂತಹ ಚಟುವಟಿಕೆಗಳಿಗೆ…