Subscribe to Updates
Get the latest creative news from FooBar about art, design and business.
Author: roovari
ಬೆಂಗಳೂರು : ಆಡಳಿತ ಸಂಶೋಧನಾ ಸಂಸ್ಥೆ ಮತ್ತು ಭಾರತೀಯ ಆಡಳಿತ ಸೇವಾ ಸಂಘ ಕರ್ನಾಟಕ, ಲಡಾಯಿ ಪ್ರಕಾಶನ ಗದಗ ಹಾಗೂ ಗೌರಿ ಮೀಡಿಯಾ ಟ್ರಸ್ಟ್ ಬೆಂಗಳೂರು ಇವರ ಸಹಯೋಗದಲ್ಲಿ ವಿ.ಬಾಲಸುಬ್ರಮಣಿಯನ್ ಅವರ ‘ಫಾಲ್ ಫ್ರಮ್ ಗ್ರೇಸ್’ ಪುಸ್ತಕದ ಕನ್ನಡ ಅನುವಾದ ‘ಕಲ್ಯಾಣ ಕೆಡುವ ಹಾದಿ’ ರೆಬೆಲ್ ಐಎಎಸ್ ಅಧಿಕಾರಿಯ ಆತ್ಮಕಥನ ಪುಸ್ತಕದ ಬಿಡುಗಡೆ ಸಮಾರಂಭವು ದಿನಾಂಕ 02-10-2023ರ ಸೋಮವಾರ ಬೆಳಗ್ಗೆ ಘಂಟೆ 10.00ಕ್ಕೆ ನಡೆಯಲಿದೆ. ಬೆಂಗಳೂರಿನ ಇನ್ ಫ್ಯಾಂಟ್ರಿ ರಸ್ತೆಯಲ್ಲಿರುವ ಭಾರತೀಯ ಆಡಳಿತ ಸೇವಾ ಸಂಸ್ಥೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಸುಪ್ರೀಂ ಕೋರ್ಟಿನ ವಿಶ್ರಾಂತ ನ್ಯಾಯಾಧೀಶರಾದ ನ್ಯಾ.ವಿ.ಗೋಪಾಲ ಗೌಡ ಅಧ್ಯಕ್ಷತೆ ವಹಿಸಿ ಕೃತಿ ಜಡುಗಡೆಗೊಳಿಸಲಿದ್ದಾರೆ. ಎ.ಬಾಲಸುಬ್ರಮಣಿಯನ್ ಪ್ರಸ್ತಾವಿಕ ಮಾತುಗಳನ್ನಾಡಿ, ಪುಸ್ತಕ ಕುರಿತು ಜೆ.ಎನ್.ಯು ಮತ್ತು ಮಂಗಳೂರು ವಿಶ್ವವಿದ್ಯಾಲಯದ ಪ್ರೊ.ವೆಲೇರಿಯನ್ ರೋಡ್ರಿಗಸ್, ಅಜೀಮ್ ಪ್ರೇಮ್ಜಿ ವಿಶ್ವವಿದ್ಯಾಲಯದ ಪ್ರೊ.ಎ.ನಾರಾಯಣ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರೊ.ರಹಮತ್ ತರೀಕೆರೆ ಹಾಗೂ ರೇಷ್ಮೆ ಕೃಷಿಕರಾದ ರಾಮಚಂದ್ರ ಗೌಡ ಪುಸ್ತಕದ ಕುರಿತು ಮಾತನಾಡಲಿದ್ದಾರೆ. ವೇದಿಕೆಯಲ್ಲಿ ಅನುವಾದಕಿ ಎನ್.ಸಂಧ್ಯಾರಾಣಿ, ಪ್ರಕಾಶಕರಾದ ಬಸೂ…
ಬೆಂಗಳೂರು : ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಬೆಂಗಳೂರಿನ ಜಕ್ಕೂರು, 3ನೇ ಅಡ್ಡರಸ್ತೆ, ನವ್ಯನಗರ, ಶ್ರೀರಾಮ, ನಂ.71 ಇಲ್ಲಿರುವ ಶ್ರೀ ರಾಮ ಕಲಾ ವೇದಿಕೆ (ರಿ.) ಅರ್ಪಿಸುವ ‘ಸಂಗೀತ ಸುಧೆ’ ಕಾರ್ಯಕ್ರಮವು ದಿನಾಂಕ 02-10-2023, ಸೋಮವಾರ ಬೆಳಗ್ಗೆ 9.30ಕ್ಕೆ ಬೆಂಗಳೂರಿನ ಬಸವನಗುಡಿ, ಬಿಪಿ ವಾಡಿಯ ರೋಡ್, ನಂ.6 ಇಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಇಲ್ಲಿ ನಡೆಯಲಿದೆ. ಶ್ರೀ ರಜತ್ ಕುಲಕರ್ಣಿಯವರ ‘ಹಿಂದೂಸ್ಥಾನಿ ಗಾಯನ’ಕ್ಕೆ ಶ್ರೀ ಪ್ರಹ್ಲಾದ್ ದೇಶಪಾಂಡೆಯವರು ತಬಲದಲ್ಲಿ ಮತ್ತು ಶ್ರೀ ಗೌರವ್ ಗಡಿಯಾರ್ ಹಾರ್ಮೋನಿಯಂ ಸಾಥ್ ನೀಡಲಿರುವರು. ಪಂ. ವಿನಾಯಕ ತೊರವಿಯವರ 75ನೇ ಹುಟ್ಟುಹಬ್ಬದ ನಿಮಿತ್ತ ಅವರಿಗೆ ಸತ್ಕಾರ ನಡೆಯಲಿದೆ. ಪಂ. ಪ್ರವೀಣ್ ಗೋಡ್ಖಿಂಡಿ ಮತ್ತು ಶ್ರೀ ಷಡಜ್ ಗೋಡ್ಖಿಂಡಿ ಇವರ ‘ಹಿಂದೂಸ್ಥಾನಿ ಬಾನ್ಸುರಿ ವಾದನ’ಕ್ಕೆ ಪಂ. ರವೀಂದ್ರ ಯಾವಗಲ್ ತಬಲ ಸಾಥ್ ನೀಡುವರು. ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ 9845244334.
ಬೆಂಗಳೂರು : ಕಾವ್ಯಸಂಜೆಯು ಹತ್ತು ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭವನ್ನು ಸಂಭ್ರಮಿಸುವ ಸಲುವಾಗಿ ಕಾವ್ಯಸಂಜೆಯ ವತಿಯಿಂದ ‘ಕಾವ್ಯಸಂಜೆ ದಶಮಾನೋತ್ಸವ ಕಾವ್ಯ ಪ್ರಶಸ್ತಿ’ಯನ್ನು ನೀಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಕನ್ನಡ ಕವಿಗಳಿಂದ ಮೂವತ್ತಕ್ಕೂ ಹೆಚ್ಚು ಹಾಗೂ ಐವತ್ತಕ್ಕೆ ಮೀರದಷ್ಟು ಕವಿತೆಗಳನ್ನು ಒಳಗೊಂಡ ಸ್ವರಚಿತ ಕವಿತೆಗಳ ಹಸ್ತಪ್ರತಿಗಳನ್ನು ಆಹ್ವಾನಿಸಲಾಗಿದೆ. * ಅನುವಾದಿತ ಕವಿತೆಗಳು ಬೇಡ. * ಚುಟುಕು, ಹನಿಗವನಗಳು ಬೇಡ. * ಪ್ರಕಟವಾಗಿರುವ ಬಿಡಿ ಕವಿತೆಗಳು ಹಸ್ತಪ್ರತಿಯಲ್ಲಿ ಇದ್ದಲಿ, ಎಲ್ಲಿ ಪ್ರಕಟವಾಗಿದೆ ಎಂಬ ವಿಷಯವನ್ನು ತಿಳಿಸಬೇಕು. ಈ ಪ್ರಶಸ್ತಿಯು ರೂ.10.000/- ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಆಸಕ್ತರು ತಮ್ಮ ಹೊಸ ಕವಿತೆಗಳ ಹಸ್ತಪ್ರತಿಯನ್ನು ಸ್ಪರ್ಧೆಗೆ ಕಳುಹಿಸಲು ವಿನಂತಿಸಲಾಗಿದೆ. ವಿ.ಸೂ: ಯಾವುದೇ ಕಾರಣಕ್ಕೂ ಹಸ್ತಪ್ರತಿಯನ್ನು ಹಿಂದಿರುಗಿಸಲಾಗುವುದಿಲ್ಲ. ಡಿಟಿಪಿ ಮಾಡಿದ ಹಸ್ತಪ್ರತಿಯ ಎರಡು ಸೆಟ್ ಗಳನ್ನು ಕಳಿಸಿಕೊಡಬೇಕು. ಮಿಂಚಂಚೆಯ (email) ಮೂಲಕ ಕಳಿಸುವುದು ಬೇಡ. ಹಸ್ತಪ್ರತಿಯನ್ನು ಕಳುಹಿಸಬೇಕಾದ ವಿಳಾಸ: ನಂ, 619, 7ನೇ ಕ್ರಾಸ್ ಬಿ.ಇ.ಎಮ್.ಎಲ್ ಲೇಔಟ್ 4ನೇ ಹಂತ ರಾಜರಾಜೇಶ್ವರಿ ನಗರ, ಬೆಂಗಳೂರು -560098 ಹೆಚ್ಚಿನ ಮಾಹಿತಿಗಾಗಿ…
ದಿನಾಂಕ 22-09-2023ರಂದು ಬೆಂಗಳೂರಿನ ಕಣ್ಣೂರು ಸಮೀಪದ ಭಾರತೀಯ ಮಾಲ್ ನಲ್ಲಿ ನಡೆದ ವ್ಯಾನ್ ಗೋ-360° ಪ್ರದರ್ಶನ ಹಲವು ಕಾರಣಕ್ಕೆ ಮುಖ್ಯವೆನಿಸಿತ್ತು. ಕಲೆ ಮತ್ತು ಕಲಾ ಪ್ರದರ್ಶನ ಅದರದೇ ಆದ ಭಾಷೆಯನ್ನು ಸ್ವಲ್ಪವಾದರೂ ತಿಳಿದಿದ್ದರೆ ಗ್ರಹಿಸುವುದು ಸುಲಭವೆನಿಸುತ್ತದೆ. ಅಲ್ಲಿ ಬಳಸುವ ಗಾಢವಾದ ವರ್ಣ, ತೆಳು ಬಣ್ಣಗಳು ಭಾವಕ್ಕೆ ತಕ್ಕಂತೆ ಬದಲಾಗುತ್ತಿರುತ್ತವೆ. ಶೋಕ, ವ್ಯಥೆ, ನಿರಾಶೆಯಂತಹ ಮೋಡ ಮುಚ್ಚಿದ ಭಾವಗಳನ್ನು ಹೇಳಲು ಕಂದು, ಕಪ್ಪುವಿನಂತಹ ಬಣ್ಣಗಳನ್ನು ಬಳಸಲಾಗುತ್ತದೆ. ಹರ್ಷ, ಉಲ್ಲಾಸಗಳನ್ನು ಬಿಂಬಿಸಲು ಗಾಢವಾದ ಕಣ್ಣಿಗೆ ಆಹ್ಲಾದ ಕೊಡುವ ವರ್ಣಗಳನ್ನು ಬಳಸಲಾಗುತ್ತದೆ. ಬಣ್ಣ ಮತ್ತು ಕುಂಚ ಕಲಾವಿದನ ಕೈಯ ಹತಾರಗಳು. ಅವೆಲ್ಲವನ್ನೂ ಸಂಯೋಜಿಸುವುದು ಅವನ ಬುದ್ಧಿ ಮತ್ತು ಭಾವ. ಈ ಬುದ್ಧಿ ಭಾವಗಳು ಆಯಾ ಸಂದರ್ಭಕ್ಕೆ ಒದಗುವಂತೆ ಮಾಡುವುದು ಅವನು ಕಂಡ, ಉಂಡ, ಕಾಡಿದ ಜಗತ್ತು. ಈ ಜಗತ್ತಿನಲ್ಲಿ ಕಾಡಿದ ಹೋದೋಟಗಳಿವೆ, ದೇವತೆಗಳಿವೆ, ದೆವ್ವಗಳಿವೆ, ಪ್ರೇಯಸಿಯರಿದ್ದಾರೆ, ರೈತನಿದ್ದಾನೆ, ಹಲವು ಪಕ್ಷಿಪ್ರಾಣಿಗಳು, ಹೊಲದಲ್ಲಿ ಅರಳುವ ಸೂರ್ಯಕಾಂತಿ-ಸಾಸಿವೆಯ ಹಳದಿ ಹೂಗಳೂ ಇವೆ. ಬಿಳಿಯ, ನೀಲಿಯ, ಕೆಂಪಿನ ಹಲವು ಹೂಗಳಿವೆ.…
ಮಂಗಳೂರು : ಕಲ್ಕೂರ ಪ್ರತಿಷ್ಠಾನ ಮಂಗಳೂರು ಇದರ ಆಶ್ರಯದಲ್ಲಿ ದಿನಾಂಕ 10-10-2023 ರಂದು ಡಾ.ಕೋಟ ಶಿವರಾಮ ಕಾರಂತರ ಜನ್ಮದಿನೋತ್ಸವ ಸಮಾರಂಭವು ನಡೆಯಲಿದೆ. ಇದರ ಸಲುವಾಗಿ ಕಾರಂತರ ಬಗ್ಗೆ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಪ್ರೌಢಶಾಲೆ, ಕಾಲೇಜು ಹಾಗೂ ಮುಕ್ತ ಹೀಗೆ ಮೂರು ವಿಭಾಗಗಳಲ್ಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಮೂರು ಪುಟಕ್ಕೆ ಮೀರದಂತೆ ಪ್ರಬಂಧವನ್ನು ರಚಿಸಿ ದಿನಾಂಕ 06-10-2023ರ ಒಳಗಾಗಿ ಸ್ವ ವಿಳಾಸ ಮತ್ತು ಸಂಪರ್ಕ ದೂರವಾಣಿ ಸಂಖ್ಯೆಯೊಂದಿಗೆ ಕಲ್ಕೂರ ಪ್ರತಿಷ್ಠಾನ, ಶ್ರೀಕೃಷ್ಣ ಸಂಕೀರ್ಣ, ಮಹಾತ್ಮಗಾಂಧಿರಸ್ತೆ ಕೊಡಿಯಾಲ್ಬೈಲ್, ಮಂಗಳೂರು 575003 ಈ ವಿಳಾಸಕ್ಕೆ ತಲುಪುವಂತೆ ಕಳುಹಿಸಬೇಕು. ಪ್ರಬಂಧದ ವಿಷಯ ಪ್ರೌಢಶಾಲೆ ವಿಭಾಗ : ಕಾರಂತರ ವಿಜ್ಞಾನ ಸಾಹಿತ್ಯ ಕಾಲೇಜು ವಿಭಾಗ : ಕಾರಂತರು ಮತ್ತು ಯಕ್ಷಗಾನ ಮುಕ್ತ ವಿಭಾಗ ‘ಮೂಕಜ್ಜಿಯ ಕಸುಗಳು’ – ವೈಚಾರಿಕತೆ, ವಿಶ್ಲೇಷಣೆ
ಮಂಗಳೂರು : ಡಾ.ಕೋಟ ಶಿವರಾಮ ಕಾರಂತರ ಜನ್ಮ ದಿನೋತ್ಸವದ ಅಂಗವಾಗಿ ಅಂಚೆ ಕಾರ್ಡಿನಲ್ಲಿ ಡಾ.ಕೋಟ ಶಿವರಾಮ ಕಾರಂತರ ಚಿತ್ರ ರಚನಾ ಸ್ಪರ್ಧೆಯನ್ನು ಶ್ರೀ ಎಸ್.ಪ್ರದೀಪ ಕುಮಾರ ಕಲ್ಕೂರ ಇವರ ಸಂಯೋಜನೆಯಲ್ಲಿ ಮಂಗಳೂರಿನ ಕಲ್ಕೂರ ಪ್ರತಿಷ್ಠಾನ ಆಯೋಜಿಸುತ್ತಿದೆ. ಎಸ್.ಎಸ್.ಎಲ್.ಸಿ. ವರೆಗಿನ ವಿಭಾಗ ಮತ್ತು ಮುಕ್ತ ವಿಭಾಗ ಹೀಗೆ ಎರಡು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಆಸಕ್ತರು ಪೆನ್ಸಿಲ್ನಿಂದ ಕಪ್ಪು ಬಿಳುಪು ಚಿತ್ರವನ್ನು ಪೋಸ್ಟ್ಕಾರ್ಡ್ನಲ್ಲಿ ರಚಿಸಿ, ಸ್ವ-ವಿಳಾಸ, ದೂರವಾಣಿ ಸಂಖ್ಯೆ ಹಾಗೂ ಸ್ಪರ್ಧಾ ವಿಭಾಗವನ್ನು ನಮೂದಿಸಿ ದಿನಾಂಕ 06-10-2023ರ ಒಳಗಾಗಿ ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು. ರಿಗೆ, ಜಾನ್ಚಂದ್ರನ್, ಸಂಚಾಲಕರು, ಅಂಚೆಕಾರ್ಡಿನಲ್ಲಿ ಚಿತ್ರರಚನಾ ಸ್ಪರ್ಧಾ ವಿಭಾಗ ಕಲ್ಕೂರ ಪ್ರತಿಷ್ಠಾನ, ಶ್ರೀ ಕೃಷ್ಣ ಸಂಕೀರ್ಣ, ಮಹಾತ್ಮ ಗಾಂಧಿ ರಸ್ತೆ, ಮಂಗಳೂರು-575003
ಮೂಡಬಿದಿರೆ : ಕನ್ನಡ ಸಾಹಿತ್ಯ ಪರಿಷತ್ತು ಮೂಡಬಿದಿರೆ ತಾಲೂಕು ಘಟಕ ಮತ್ತು ಜೈನ ಪ.ಪೂ.ಕಾಲೇಜಿನ ಜಂಟಿ ಆಶ್ರಯದಲ್ಲಿ ‘ಕವಿ ನಾಗಚಂದ್ರ’ ಎಂಬ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮವು ದಿನಾಂಕ 25-09-2023ರಂದು ಮೂಡಬಿದಿರೆಯ ಜೈನ ಪ.ಪೂ.ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಸಾಹಿತಿಗಳು ಹಾಗೂ ಉಪನ್ಯಾಸಕರು ಆಗಿರುವ ಶ್ರೀ ಟಿ.ಎ.ಎನ್ ಖಂಡಿಗೆ “ಹಳೆಗನ್ನಡ ಕಾಲದ ಜೈನ ಕವಿಯಾದ ನಾಗಚಂದ್ರನು ತನ್ನ ಕಾವ್ಯಗಳಿಂದಾಗಿ ಅಭಿನವ ಪಂಪನೆಂದೇ ಗುರುತಿಸಿಕೊಂಡವನು. ಕಾವ್ಯಕ್ಕೆ ಮೊತ್ತ ಮೊದಲು ಚೌಕಟ್ಟನ್ನು ನಿರ್ಮಿಸಿಕೊಟ್ಟ ಪಂಪನ ಮಾದರಿಯಲ್ಲಿಯೇ ನಾಗಚಂದ್ರನು ಕೂಡಾ ಅಪೂರ್ವ ಕಾವ್ಯಗಳನ್ನು ಕನ್ನಡ ಸಾಹಿತ್ಯಕ್ಕೆ ಕೊಡುಗೆಯಾಗಿ ನೀಡಿದ್ದಾನೆ. ‘ಮಲ್ಲಿನಾಥ ಪುರಾಣ’ ಹಾಗೂ ‘ರಾಮಚಂದ್ರ ಚರಿತ ಪುರಾಣ’ ಎಂಬೆರಡು ತನ್ನ ಮೇರು ಕೃತಿಗಳೊಂದಿಗೆ ಜಿನೋಪಾಸನೆ ಹಾಗೂ ಕಲೋಪಾಸನೆ ಎರಡನ್ನೂ ಮಾಡಿಕೊಂಡು ಬಂದ ನಾಗಚಂದ್ರನು ಒಂದರಲ್ಲಿ ಧರ್ಮ ಹಾಗೂ ಇನ್ನೊಂದರಲ್ಲಿ ಕಾವ್ಯಧರ್ಮವನ್ನು ಇಟ್ಟುಕೊಂಡು ಪಂಪನ ಮಾದರಿಯಲ್ಲಿಯೇ ಕಾವ್ಯ ರಚಿಸಿದ್ದಾನೆ” ಎಂದರು. ಕ.ಸಾ.ಪ. ತಾಲೂಕು ಘಟಕದ ಅಧ್ಯಕ್ಷರಾದ ಶ್ರೀ.ಕೆ.ವೇಣುಗೋಪಾಲ ಶೆಟ್ಟಿಯವರು ಅಧ್ಯಕ್ಷತೆಯನ್ನು ವಹಿಸಿ ಈ…
ವಿರಾಜಪೇಟೆ : ವಿರಾಜಪೇಟೆಯ ಮೂರ್ನಾಡು ರಸ್ತೆಯ ಕಾವೇರಿ ಗಣೇಶೋತ್ಸವ ಸಮಿತಿ ಹಾಗೂ ಮನೆ ಮನೆ ಕಾವ್ಯಗೋಷ್ಠಿ ಬಳಗದ ವತಿಯಿಂದ ‘ಕವಿಗೋಷ್ಠಿ’ಯು ದಿನಾಂಕ 24-09-2023ರಂದು ಭಾನುವಾರ ಮಧ್ಯಾಹ್ನ 2 ಗಂಟೆಗೆ ನಡೆಯಿತು. ಕೊಡಗಿನ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮುಲ್ಲೇಂಗಡ ಮಧೋಶ್ ಪೂವಯ್ಯನವರು ಅಧ್ಯಕ್ಷತೆ ವಹಿಸಿ ಕವಿತೆಗಳನ್ನು ವಿಮರ್ಶಿಸಿ ಕವಿಗಳನ್ನು ಪ್ರೋತ್ಸಾಹಿಸಿದರು. ಕೊಡಗಿನ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಬಿ.ಜಿ.ಅನಂತ ಶಯನ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಈ ಕಾರ್ಯಕ್ರಮವನ್ನು ಕೊಡವ ಮಕ್ಕಡ ಕೂಟದ ಅಧ್ಯಕ್ಷರಾದ ಬೊಳ್ಳಜ್ಹಿರ ಅಯ್ಯಪ್ಪನವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು. ಕಾರ್ಯಕ್ರಮದಲ್ಲಿ ಗಿರೀಶ್ ಎಸ್. ಕಿಗ್ಗಾಲು, ಮೊಣ್ಣಂಡ ಶೋಭಾ ಸುಬ್ಬಯ್ಯ, ಕಸ್ತೂರಿ ಗೋವಿಂದಮ್ಮಯ್ಯ, ಶಿವದೇವಿ ಅವನೀಶ್ಚಂದ್ರ, ಸಾವಿತ್ರಿ ಹೆಚ್.ಜಿ., ಭಾಗ್ಯವತಿ ಅಣ್ಣಪ್ಪ ಟಿ.ವಿ., ಲವಿನ್ ಲೋಪೆಸ್, ಚಿಮ್ಮಚ್ಚಿರ ಪವಿತಾ ರಜನ್, ಈರಮಂಡ ಹರಿಣಿ ವಿಜಯ್, ಸಿಂಚನ ಜಿ.ಎನ್. ಗೊರಹಳ್ಳಿ, ಅನಂತ ಶಯನ ಬಿ.ಜಿ, ಮುಲ್ಲೇಂಗಡ ಮಧೋಶ್ ಪೂವಯ್ಯ, ಪುಷ್ಪಲತಾ ಶಿವಪ್ಪ, ಸೈಮನ್ ಎಸ್. ಮೇಕೇರಿ, ಮೂಕಳೆರ ಟೈನಿ ಪೂಣಚ್ಚ, ನಳಿನಾಕ್ಷಿ, ಜಗದೀಶ್…
ಮಂಗಳೂರು : ಸಂಗೀತ ಪರಿಷತ್ತಿನ ತ್ರಿಂಶತ್ ಸಂಭ್ರಮದ ಪ್ರಯುಕ್ತ ಭಾರತೀಯ ವಿದ್ಯಾಭವನ, ರಾಮಕೃಷ್ಣ ಮಠ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ದಿನಾಂಕ 24-09-2023ರಂದು ‘ಯುವ ಸಂಗೀತೋತ್ಸವ’ ಕೊಡಿಯಾಲ್ ಬೈಲ್ನ ಶಾರದಾ ವಿದ್ಯಾಲಯದಲ್ಲಿ ಜರಗಿತು. ಸ್ಥಳೀಯ ಮತ್ತು ಕಾಸರಗೋಡು, ಕಾರ್ಕಳ, ಧರ್ಮಸ್ಥಳ, ಪುತ್ತೂರು, ಸುರತ್ಕಲ್ ಮತ್ತು ಬೆಳ್ಳಾರೆಯ ಹನ್ನೊಂದು ಮಂದಿ ಸಂಗೀತಗಾರರ ಪ್ರತಿಭೆ ಪ್ರದರ್ಶಿಸಲು ಉತ್ಸವ ವೇದಿಕೆಯಾಯಿತು. ಪ್ರತಿ ಒಂದೂವರೆ ಗಂಟೆ ಅವಧಿಯ ಕಛೇರಿಯಲ್ಲಿ ಮೃದಂಗ, ವಯೊಲಿನ್ ವಾದನದಲ್ಲಿ ಗಾಯಕರು ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಪ್ರಸ್ತುತ ಪಡಿಸಿದರು. ಪ್ರೇಕ್ಷಕರು ನಾದದ ಅಲೆಯಲ್ಲಿ ಮಿಂದರು. ಸಂಗೀತ ಪರಿಷತ್ತಿನ ಅಧ್ಯಕ್ಷ ಎಂ.ವಿ. ಪ್ರದೀಪ ಮಾತನಾಡಿ “1993ರಲ್ಲಿ ಆರಂಭವಾದ ಸಂಸ್ಥೆಗೆ 30 ವರ್ಷ ತುಂಬಿದ್ದು, ತ್ರಿಂಶತ ಸಂಭ್ರಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸಂಸ್ಥೆಯು ಕರ್ನಾಟಕ ಶಾಸ್ತ್ರೀಯ ಸಂಗೀತದ ಕಾರ್ಯಕ್ರಮಗಳನ್ನಲ್ಲದೆ ತಿಂಗಳ ಕಾರ್ಯಕ್ರಮ, ಶ್ರಾವಣ ಸಂಗೀತೋತ್ಸವ, ಆರಾಧನಾ ಮಹೋತ್ಸವ, ಐದು ದಿನಗಳ ಸಂಗೀತ ಉತ್ಸವ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ” ಎಂದರು. ಮ್ಯಾಪ್ಸ್ ಕಾಲೇಜು ವಿದ್ಯಾರ್ಥಿ, ವಯೊಲಿನ್…
ಕಾರ್ಕಳ : ಕನ್ನಡ ಸಂಘ ಕಾಂತಾವರ ಹಾಗೂ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ತಾಲೂಕು ಘಟಕ ಜಂಟಿಯಾಗಿ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ನಡೆಯುವ ತಿಂಗಳ ಉಪನ್ಯಾಸ ಕಾರ್ಯಕ್ರಮ ‘ಅರಿವು -ತಿಳಿವು’ ದಿನಾಂಕ 23-09-2023 ರಂದು ಕಾರ್ಕಳದ ಸರಕಾರಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಇವರು “ಬಿ.ಜಿ.ಎಲ್ ಸ್ವಾಮಿ ಎಂಬ ಗಿಡಮರಗಳ ಒಡನಾಡಿ” ಈ ವಿಷಯದಲ್ಲಿ ಉಪನ್ಯಾಸ ನೀಡುತ್ತಾ “ಕನ್ನಡ ಶಾಸನಗಳಿಂದ ಮೊತ್ತಮೊದಲಿಗೆ ಸಸ್ಯ ಸಂಕುಲಗಳ ಕುರಿತು ಅಧ್ಯಯನ ಮಾಡಿದ ಹೆಗ್ಗಳಿಕೆ ಡಾ.ಬಿ.ಜಿ ಎಲ್. ಸ್ವಾಮಿಯವರಿಗೆ ಸಲ್ಲುತ್ತದೆ. ‘ಹಸಿರು ಹೊನ್ನು’ ಕೃತಿ ಸಾಹಿತ್ಯ ಲೋಕದಲ್ಲಿ ಸಸ್ಯ ಶಾಸ್ತ್ರಗಳ ಕುರಿತಂತೆ ಇರುವ ಪ್ರಸಿದ್ಧ ಮತ್ತು ವೈಶಿಷ್ಯಪೂರ್ಣ ಕೃತಿಯಾಗಿದೆ. ಡಿ.ವಿ.ಜಿ.ಯವರು ಮಾನವ ಜಗತ್ತಿನ ಭಾವಗಳನ್ನು ಕುರಿತು ಬರೆದರೆ ಮಗ ಬಿ.ಜಿ.ಎಲ್ ಸ್ವಾಮಿಯವರು ಸಸ್ಯ ಸಂಕುಲಗಳ ಹೃದಯಗಳ ಹಾಗೂ ಭಾವಗಳ ಜೊತೆ ಬೆರೆತು ಅರಿತರು. ತಂದೆ ಡಿ.ವಿ.ಜಿ.ಯವರಿಂದ ಶಿಸ್ತುಬದ್ಧ ಬದುಕಿನೊಂದಿಗೆ ಹಾಸ್ಯ ವಿನೋದ ಪ್ರವೃತ್ತಿಯಿಂದಲೇ ವಿಡಂಬನೆಗಳನ್ನೂ ಮಾಡಿದವರು. ಅವರು…