Subscribe to Updates
Get the latest creative news from FooBar about art, design and business.
Author: roovari
ಯಕ್ಷಗಾನವು ಒಂದು ಜನಪದ ಕಲೆಯಾಗಿದೆ. ಇದರಲ್ಲಿ ಹಿಮ್ಮೇಳ ಮುಮ್ಮೇಳ ಕಲಾವಿದರೆಂಬ ೨ ವಿಧಗಳಿವೆ. ಹಿಮ್ಮೇಳದಲ್ಲಿ ಭಾಗವತರು, ಮದ್ದಳೆಗಾರ, ಚೆಂಡೆವಾದಕ, ಚಕ್ರತಾಳ ಮತ್ತು ಶೃತಿ ನುಡಿಸುವವ (ಹಾರ್ಮೋನಿಯಂ) ಕಲಾವಿದರಿದ್ದರೆ, ಮುಮ್ಮೇಳದಲ್ಲಿ ಪಕಡಿ ವೇಷ, ಬಣ್ಣದ ವೇಷ, ಸ್ತ್ರೀ ವೇಷಗಳ ಪಾತ್ರಧಾರಿಗಳಿದ್ದಾರೆ. ಹೀಗೆ ಸಾಹಿತ್ಯ, ಸಂಗೀತ, ನೃತ್ಯ, ವಾದ್ಯ, ಅಭಿನಯ ಚಿತ್ರ ಮತ್ತಿತರ ಹಲವು ಬಗೆಯ ಉಪಾಂಗಗಳಿಂದ ಕೂಡಿದ ಯಕ್ಷಗಾನ ಒಂದು ಸಂಕೀರ್ಣ ಕಲೆ. ಈ ಶ್ರೀಮಂತ ಕಲೆಯಲ್ಲಿ ತಮ್ಮ ಗಾನ ಸುಧೆಯನ್ನು ಹರಿಸುತ್ತಿರುವ ಭಾಗವತರು ದೇವಿಪ್ರಸಾದ್ ಆಳ್ವ ತಲಪಾಡಿ. 20.07.1982 ರಂದು ಶ್ರೀಮತಿ ದೇವಕಿ ಆಳ್ವ ಹಾಗೂ ಆನಂದ ಆಳ್ವ ದಂಪತಿಯರ ಮಗನಾಗಿ ಜನನ. ಎಸ್.ಎಸ್.ಎಲ್.ಸಿ ವರೆಗೆ ವಿದ್ಯಾಭ್ಯಾಸ. ಮನೆಯಲ್ಲಿ ಯಕ್ಷಗಾನದ ಬಗ್ಗೆ ಇದ್ದ ಒಲುಮೆ ಆಳ್ವರು ಯಕ್ಷಗಾನಕ್ಕೆ ಬರಲು ಪ್ರೇರಣೆಯಾಯಿತು. ಯಕ್ಷಗಾನದ ಗುರುಗಳು:- ಮಾಂಬಾಡಿ ಸುಬ್ರಹ್ಮಣ್ಯ ಭಟ್, ಅಭಿನವ ವಾಲ್ಮೀಕಿ ಬೊಟ್ಟಿಕೆರೆ ಪುರುಷೋತ್ತಮ ಪೂಂಜ. ನಾಟ್ಯ ಗುರುಗಳು:- ದಯಾನಂದ ಗಟ್ಟಿ ಪಿಲಿಕೂರು, ಹರಿಶ್ಚಂದ್ರ ನಾಯ್ಗ ಮಾಡೂರು. ನೆಚ್ಚಿನ ಭಾಗವತರು:- ಪುರುಷೋತ್ತಮ ಪೂಂಜ,…
ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು 2023-24ನೆಯ ಸಾಲಿನ “ಶಾಸನಶಾಸ್ತ್ರ ಡಿಪ್ಲೊಮಾ” ತರಗತಿಗೆ ಅರ್ಜಿಗಳನ್ನು ಸಲ್ಲಿಸಲು ದಿನಾಂಕ 30-09-2023ರವರೆಗೆ ಅವಕಾಶ ನೀಡಲಾಗಿತ್ತು. ಆದರೆ ಹೆಚ್ಚುವರಿಯಾಗಿ ದಿನಾಂಕ 31-10-2023 ರ ವರೆಗೆ ದಂಡ ಶುಲ್ಕ ರೂಪಾಯಿ 50.00ಗಳನ್ನು ನೀಡಿ ಅರ್ಜಿ ಸಲ್ಲಿಸಲು ಕನ್ನಡ ಸಾಹಿತ್ಯ ಪರಿಷತ್ತು ಅವಕಾಶ ಕಲ್ಪಿಸಿದೆ. ಪರೀಕ್ಷಾ ನಿಯಮಾವಳಿ ಹಾಗೂ ಅರ್ಜಿಯನ್ನು ರೂಪಾಯಿ 25.00ರಂತೆ ಶುಲ್ಕ ಪಾವತಿಸಿ, ಕನ್ನಡ ಸಾಹಿತ್ಯ ಪರಿಷತ್ತಿನ ಮಾರಾಟ ಮಳಿಗೆಯಲ್ಲಿ (ಬೆಂಗಳೂರು) ಪಡೆಯಬಹುದು. ಪರೀಕ್ಷಾ ಅರ್ಜಿಗಳನ್ನು ಅಂತರ್ಜಾಲ ತಾಣ www.kasapa.in ಮೂಲಕ ಪಡೆದುಕೊಳ್ಳಬಹುದು. ಅಂತರ್ಜಾಲ ತಾಣದಲ್ಲಿ ಅರ್ಜಿ ನಮೂನೆಯನ್ನು ಪಡೆದವರು ಪರೀಕ್ಷಾ ಶುಲ್ಕದೊಂದಿಗೆ ಅರ್ಜಿ ಶುಲ್ಕ ರೂಪಾಯಿ 25.00ಗಳನ್ನು ಪ್ರತ್ಯೇಕವಾಗಿ ಪಾವತಿಸಬೇಕಾಗುವುದು. ಹೆಚ್ಚಿನ ವಿವರಗಳಿಗೆ ಗೌರವಕಾರ್ಯದರ್ಶಿಗಳು, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರು -560018. ದೂರವಾಣಿ : 080 26612991, 26623584, 22423867 ಮೂಲಕ ಸಂಪರ್ಕಿಸಬಹುದು. “ಶಾಸನಶಾಸ್ತ್ರ ಡಿಪ್ಲೊಮಾ” ಅವಧಿಯು ಒಂಬತ್ತು ತಿಂಗಳದ್ದಾಗಿದ್ದು, ವಾರಕ್ಕೆ 4ದಿನ ತರಗತಿಗಳು ಇರುತ್ತವೆ. (ಮಂಗಳವಾರದಿಂದ ಶುಕ್ರವಾರದ ವರೆಗೆ). ಎಲ್ಲಾ ತರಗತಿಗಳು ಸಂಜೆ…
ಮಂಗಳೂರು : ಮಂಗಳೂರು ವಿಶ್ವವಿದ್ಯಾಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ನಡೆಯುತ್ತಿರುವ ವಿವೇಕವಾಣಿ ಸರಣಿ ಉಪನ್ಯಾಸ ಕಾರ್ಯಕ್ರಮದ ಇಪ್ಪತ್ತೊಂಬತ್ತನೇ ಉಪನ್ಯಾಸವು ಮಂಗಳೂರಿನ ದೇರಳಕಟ್ಟೆಯ ನಿಟ್ಟೆ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ) ದಲ್ಲಿ ದಿನಾಂಕ 12-10-2023ರಂದು ನಡೆಯಿತು. ಕಾರ್ಯಕ್ರಮದಲ್ಲಿ “ವೈದ್ಯಕೀಯ ಮೌಲ್ಯ ಹಾಗು ನೈಪುಣ್ಯಗಳ ಮರುಗಳಿಕೆ ವಿವೇಕ ಮಾರ್ಗ’ ಎಂಬ ವಿಷಯದ ಕುರಿತು ಮಾತನಾಡಿದ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ನ ಸಲಹೆಗಾರರಾದ ಡಾ.ಎಂ.ಎ.ಬಾಲಸುಬ್ರಹ್ಮಣ್ಯ “ನೀವು ಇಂದು ಏನು ಮಾಡುತ್ತೀರಿ ಅದು ನಿಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ. ಮೊದಲು ನಿಮ್ಮ ಮೇಲೆ ನಿಮಗೆ ನಂಬಿಕೆ ಇರಬೇಕು. ಹಾಗಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು. ಯಾವುದು ನಿಸ್ವಾರ್ಥವೋ ಅದು ನೈತಿಕ ಯಾವುದು ನಿಸ್ವಾರ್ಥತೆಯಲ್ಲವೋ ಅದು ಅನೈತಿಕ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ಆದ್ದರಿಂದ ನಾವು ನಿಸ್ವಾರ್ಥವಾಗಿ ಸೇವೆ ಮಾಡಬೇಕು, ಬದುಕಿನಲ್ಲಿ ಒಂದು ಆದರ್ಶ ಇರಬೇಕು. ಸ್ವಾಮಿ ವಿವೇಕಾನಂದರೇ ಹೇಳಿದಂತೆ ಆದರ್ಶ ಇರುವ ವ್ಯಕ್ತಿ ಸಾವಿರ ತಪ್ಪುಗಳನ್ನು ಮಾಡಿದರೆ ಆದರ್ಶವಿಲ್ಲದ ವ್ಯಕ್ತಿ ಐವತ್ತು ಸಾವಿರ ತಪ್ಪುಗಳನ್ನು ಮಾಡುತ್ತಾನೆ. ಆದ್ದರಿಂದ…
ಬೆಂಗಳೂರು : ಬೆಂಗಳೂರಿನ ‘ಆಕ್ಟ್ ರಿಯಾಕ್ಟ್’ ಅರ್ಪಿಸುವ ಅತೋಲ್ ಫುಗಾರ್ಡ್ ಇವರ ‘ದಿ ಐಲ್ಯಾಂಡ್’ ನಾಟಕದ ರೂಪಾಂತರವಾದ ‘ದ್ವೀಪ’ ನಾಟಕದ ಪ್ರದರ್ಶನವು ದಿನಾಂಕ 15-10-2023ರಂದು ಬೆಂಗಳೂರಿನ ರಂಗಶಂಕರದಲ್ಲಿ ನಡೆಯಲಿದೆ. ಲಕ್ಷ್ಮಣ ಕೆ.ಪಿ ರೂಪಾಂತರ ಮತ್ತು ನಿರ್ದೇಶಿಸಿದ ಈ ನಾಟಕಕ್ಕೆ ಬಿಂದು ರಕ್ಷಿದಿ ಸಹನಿರ್ದೇಶಕಿ ಮತ್ತು ಸಂಗೀತ ನಿರ್ವಹಣೆಯಲ್ಲಿ ಸಹಕರಿಸಲಿದ್ದಾರೆ. ಚಂದ್ರಶೇಖರ.ಕೆ ಬೆಳಕಿನ ವಿನ್ಯಾಸ ಮಾಡಲಿದ್ದು, ರಮಿಕ ಚೈತ್ರ ನಿರ್ಮಾಣ ವ್ಯವಸ್ಥಾಪಕಿಯಾಗಿ ಸಹಕರಿಸಲಿದ್ದಾರೆ. ರಂಗದಲ್ಲಿ ಪ್ರತಿಭಾನ್ವಿತ ನಟರಾದ ಭಾಸ್ಕರ್ ಆರ್ ಹಾಗೂ ನವೀನ್ ಸಾಣೇಹಳ್ಳಿ ನಟಿಸಲಿದ್ದಾರೆ. ಮಧ್ಯಾಹ್ನ ಘಂಟೆ 3:30 ಮತ್ತು ಸಂಜೆ ಘಂಟೆ 7:30ಕ್ಕೆ ಹೀಗೆ ಎರಡು ಪ್ರದರ್ಶನಗಳು ನಡೆಯಲಿದ್ದು, ಟಿಕೇಟು ದರ ರೂಪಾಯಿ 200/- ನಾಟಕದ ಬಗ್ಗೆ : ‘ದ್ವೀಪ’ ದಿಕ್ಕಿಲ್ಲದವರ, ಗತಿಗೆಟ್ಟವರ ನಾಟಕ. ಇಲ್ಲಿನ ಕಥನ, ಪಾತ್ರಗಳು, ರೂಪಕಗಳು ಎಲ್ಲವೂ ಜೀವವನ್ನು ಮತ್ತು ಬದುಕನ್ನು ಉಳಿಸಿಕೊಳ್ಳುವ ಹಪಾಹಪಿಯಲ್ಲೇ ಹುಟ್ಟುಕೊಂಡಿರುವಂತವು. ನಟನೆಯೂ ಇಲ್ಲಿನ ಪಾತ್ರಗಳ ಬದುಕಿನ ಅನಿವಾರ್ಯತೆಯೇ. ದಕ್ಷಿಣ ಆಫ್ರಿಕಾದ ಇಬ್ಬರು ಕಪ್ಪು ನಟರು, ಚಳುವಳಿಗಾರರು ಮಾನವಹಕ್ಕುಗಳಿಗಾಗಿ, ಮನುಷ್ಯ ಘನತೆಗಾಗಿ…
ಬೆಂಗಳೂರು: ಹಿರಿಯ ಪತ್ರಕರ್ತ ಸಚ್ಚಿದಾನಂದ ಮೂರ್ತಿ (ಸಚ್ಚಿ) ಅವರು ದಿನಾಂಕ 13-10-2023ರಂದು ಬೆಂಗಳೂರಿನಲ್ಲಿ ನಿಧನ ಹೊಂದಿದರು. ಅವರಿಗೆ 68 ವರ್ಷ ವಯಸ್ಸಾಗಿತ್ತು. ಸಚ್ಚಿದಾನಂದ ಮೂರ್ತಿಯವರು ದೆಹಲಿಯ ಮಾಧ್ಯಮ ರಂಗದಲ್ಲಿ ಸಕ್ರಿಯರಾಗಿದ್ದ ಕೆಲವೇ ಕೆಲವು ಹಿರಿಯ ಕನ್ನಡಿಗ ಪತ್ರಕರ್ತರಲ್ಲಿ ಒಬ್ಬರಾಗಿದ್ದರು. ರಾಜ್ಯ-ರಾಷ್ಟ್ರಗಳ ವಿದ್ಯಮಾನಗಳ ಜ್ಞಾನಕೋಶದಂತಿದ್ದ ಇವರ ಸಾವು ಮಾಧ್ಯಮರಂಗಕ್ಕೆ ತುಂಬಲಾರದ ನಷ್ಟ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ಸಮಸ್ತ ಕನ್ನಡಿಗರ ಪರವಾಗಿ ಸಂತಾಪ ಸೂಚಿಸಿದ್ದಾರೆ. ಮಾಧ್ಯಮ ವಲಯದಲ್ಲಿ ಸಚ್ಚಿ ಎಂದೇ ಖ್ಯಾತಿ ಪಡೆದಿದ್ದ ಸಚ್ಚಿದಾನಂದ ಅವರು ಕಳೆದ ವರ್ಷವಷ್ಟೇ ನಿವೃತ್ತಿ ಹೊಂದಿದ್ದರು. ನಿವೃತ್ತಿಯಾಗುವವರೆಗೂ ಮಲಯಾಳ ಮನೋರಮಾ ಗ್ರೂಪ್‍ನಲ್ಲೇ ಕಾರ್ಯನಿರ್ವಹಿಸಿದ್ದರು. ರಾಷ್ಟ್ರೀಯ, ಅಂತಾರಾಷ್ಟ್ರೀಯ ರಾಜಕೀಯ ವಿಶ್ಲೇಷಣೆಯಲ್ಲಿ ಸಿದ್ಧಹಸ್ತರಾಗಿದ್ದರು. ನ್ಯೂಡೆಲ್ಲಿ ಅಂಕಣದ ಮೂಲಕ ಮನೆಮಾತಾಗಿದ್ದರು. ರಾಜ್ಯದ ಯಾವುದೇ ಸಮಸ್ಯೆಗಳು ಇದ್ದರೂ ಅದಕ್ಕೆ ಕಳಕಳಿ ವ್ಯಕ್ತ ಪಡಿಸುತ್ತಿದ್ದರು. ಕೇಂದ್ರದ ರಾಜಕಾರಣಿಗಳ ಜೊತೆಗೆ ಆಪ್ತ ಸಂಬಧ ಇಟ್ಟುಕೊಂಡ ಶ್ರೀಯುತರು ಕನ್ನಡ ನಾಡಿನ ಅಭಿವೃದ್ಧಿ ಕಾರ್ಯಕ್ಕೆ ಒತ್ತಾಯಿಸುತ್ತಲೇ ಇರುತ್ತಿದ್ದರು. ಕೋಲಾರ ಮೂಲದ…
ಬೆಂಗಳೂರು: ಭಾರತೀಯ ಸಂಸ್ಕೃತಿ ಪರಂಪರೆಯನ್ನು ಎತ್ತಿ ಹಿಡಿಯುವ ಕೆಲಸವನ್ನು ನಿರಂತರವಾಗಿ ಮಾಡಿ ಕೊಂಡು ಬರುತ್ತಿರುವ ಭಾರತೀಯ ವಿದ್ಯಾ ಭವನದ ಬೆಂಗಳೂರು ಕೇಂದ್ರವು ದಿನಾಂಕ 15-10-2023ರಿಂದ 24-10-2023ರವರೆಗೆ ‘ಶ್ರೀರಾಮ ಕಥಾ ಸುಧಾ’ ಎಂಬ ಗೊಂಬೆ ಹಬ್ಬವನ್ನು ಏರ್ಪಡಿಸಿದೆ. ಕುಶಲಕರ್ಮಿಗಳ ಕುಟುಂಬದಿಂದ ಬಂದ ಅಪರ್ಣ ಮತ್ತು ಶ್ರೀಕಾಂತ ಆಚಾರ್ಯ ಅವರು ಈ ಪ್ರದರ್ಶನವನ್ನು ರೂಪಿಸಿದ್ದಾರೆ. ಕೈಯಿಂದಲೇ ರೂಪಿತವಾದ ಸಾಂಪ್ರದಾಯಿಕ ಶೈಲಿಯ ಗೊಂಬೆಗಳ ಮೂಲಕ ರಾಮಾಯಣ, ಮಹಾಭಾರತ, ಶ್ರೀಮದ್ಭಾಗವತ ಮೊದಲಾದ ಪುರಾಣ ಕತೆಗಳನ್ನು ಬಿಂಬಿಸುವ ಮಹತ್ವದ ಕಾರ್ಯವನ್ನು ಈ ದಂಪತಿ ಹಲವು ವರ್ಷಗಳಿಂದ ಮಾಡುತ್ತಿದ್ದಾರೆ. ಈ ವರ್ಷದ ನವರಾತ್ರಿ ಸಂದರ್ಭದಲ್ಲಿ ರಾಮಾಯಣದ ಕಥೆಯ ಸಾರವನ್ನು ಬಿಂಬಿಸುವ ‘ಗೊಂಬೆ ಹಬ್ಬ’ವನ್ನು ರೂಪಿಸಿದ್ದು, ಭಾರತೀಯ ವಿದ್ಯಾ ಭವನದ ಕೆ.ಆರ್.ಜೆ ಹಾಲ್‍ನಲ್ಲಿ ಈ ಗೊಂಬೆಗಳ ಪ್ರದರ್ಶನವು ನಿರಂತರವಾಗಿ ನಡೆಯಲಿದೆ. ಎಂದು ಭಾರತೀಯ ವಿದ್ಯಾ ಭವನದ ನಿರ್ದೇಶಕರಾದ ಎಚ್.ಎನ್.ಸುರೇಶ್ ಅವರು ತಿಳಿಸಿದ್ದಾರೆ. ಗೊಂಬೆ ಹಬ್ಬವನ್ನು 15-10-2023ರ ಭಾನುವಾರ ಬೆಳಿಗ್ಗೆ ಘಂಟೆ 11.00ಕ್ಕೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ…
ಬೆಂಗಳೂರು : ‘ಜನಪದರು ಸಾಂಸ್ಕೃತಿಕ ವೇದಿಕೆ’ಯಿಂದ ‘ರಂಗಮಾಲೆ -75’ ಅಮೃತ ಮಹೋತ್ಸವ ಪ್ರಯುಕ್ತ ಮೂರು ದಿನಗಳ ರಂಗ ಸಂಭ್ರಮವು ದಿನಾಂಕ 14-10-2023, 15-10-2023 ಮತ್ತು 16-10-2023ರಂದು ಬೆಂಗಳೂರಿನ ನಿಂಬೆಕಾಯಿಪುರದ ಶ್ರೀ ಅಭಯಾಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿರುವ ಜನಪದರು ರಂಗಮಂದಿರದಲ್ಲಿ ನಡೆಯಲಿದೆ. ದಿನಾಂಕ 14-10-2023ರಂದು ಸಂಜೆ 6.30ಕ್ಕೆ ಸಿದ್ದೇಶ್ವರ ನನಸುಮನೆ ರಚಿಸಿ ನಿರ್ದೇಶಿಸಿರುವ ‘ಮಾತೆ ಮಹತ್ವ’ ನಾಟಕ ಪ್ರದರ್ಶನಗೊಳ್ಳಲಿದೆ. ಮಂಡೂರು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಗುರುರಾಜ್ ನಿಂಬೆಕಾಯಿಪುರ ಇವರು ಈ ಕಾರ್ಯಕ್ರಮದ ಪ್ರಾಯೋಜಕರು. ದಿನಾಂಕ 15-10-2023ರಂದು ಸಂಜೆ 6.30ಕ್ಕೆ ಡಾ. ಸಿದ್ಧಲಿಂಗಯ್ಯ ರಚಿಸಿರುವ ಹಾಗೂ ನಾಗೇಶ್ ಬೋಧನ ಹೊಸಹಳ್ಳಿ ನಿರ್ದೇಶಿಸಿರುವ ‘ಏಕಲವ್ಯ’ ನಾಟಕ ಪ್ರದರ್ಶನ ನಡೆಯಲಿದ್ದು, ಬಿದರಹಳ್ಳಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಬಿ.ಜಿ. ರಾಜೇಶ್ ಬಿದರಹಳ್ಳಿ ಈ ಕಾರ್ಯಕ್ರಮದ ಪ್ರಾಯೋಜಕರಾಗಿರುತ್ತಾರೆ. ದಿನಾಂಕ 16-10-2023ರಂದು ಸಂಜೆ 6.30ಕ್ಕೆ ಮುದೇನೂರು ಸಂಗಣ್ಣ ರಚಿಸಿರುವ ಹಾಗೂ ರಾಮಕೃಷ್ಣ ಬೆಳ್ತೂರು ನಿರ್ದೇಶಿಸಿರುವ ‘ಸೂಳೆ ಸಂಕವ್ವ’ ನಾಟಕ ಪ್ರದರ್ಶನಗೊಳ್ಳಲಿದ್ದು, ಶ್ರೀಮತಿ ಅಮರವತಿ ಮುನಿರಾಜು ಗೌಡ ಇವರು ಈ ಕಾರ್ಯಕ್ರಮದ…
ಮಂಗಳೂರು : ಮಂಗಳೂರು : ಸುರತ್ಕಲ್ ತಡಂಬೈಲ್ ಇಲ್ಲಿಯ ಶ್ರೀ ದುರ್ಗಾಂಬಾ ಮಹಿಳಾ ಯಕ್ಷಗಾನ ಮಂಡಳಿಯ ಸದಸ್ಯರಿಂದ ನವರಾತ್ರಿ ಮಹೋತ್ಸವ ಪ್ರಯುಕ್ತ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮವು ದಿನಾಂಕ 15-10-2023ರಿಂದ 20-10-2023ರವರೆಗೆ ನಡೆಯಲಿದೆ. ದಿನಾಂಕ 15-10-2023ರಂದು ಅಪರಾಹ್ನ 4 ರಿಂದ ಶ್ರೀ ಮಹಾಲಿಂಗೇಶ್ವರ ಯಕ್ಷಕಲಾ ಸಂಘ ಕಳತ್ತೂರು ಇವರ ಆಶ್ರಯದಲ್ಲಿ ಕಾಪು, ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ವಾಸುದೇವ ರಾವ್ ಸುರತ್ಕಲ್ ಇವರ ನಿರ್ದೇಶನದಲ್ಲಿ ‘ಶಾಂಭವಿ ವಿಜಯ’, ದಿನಾಂಕ 16-10-2023ರಂದು ರಾತ್ರಿ 8 ಗಂಟೆಗೆ ಮಂಗಳೂರಿನ ಬೋಳಾರದ ಹಳೆಕೋಟೆ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಶ್ರೀ ವಾಸುದೇವ ರಾವ್ ಸುರತ್ಕಲ್ ಇವರ ನಿರ್ದೇಶನದಲ್ಲಿ ‘ಶಾಂಭವಿ ವಿಜಯ’ ಮತ್ತು ದಿನಾಂಕ 17-10-2023ರಂದು ಸಂಜೆ 6.30ಕ್ಕೆ ಪುರಾತನ ಶ್ರೀ ಮಾರಿಯಮ್ಮ ದೇವಸ್ಥಾನ ಶ್ರೀ ವೀರಭದ್ರ ದುರ್ಗಾಪರಮೇಶ್ವರಿ ದೇವಸ್ಥಾನ ಸುರತ್ಕಲ್ ಇದರ ತ್ರೈರೂಪಿಣಿ ರಂಗ ಮಂಟಪದಲ್ಲಿ ಶ್ರೀ ವಾಸುದೇವ ರಾವ್ ಸುರತ್ಕಲ್ ಇವರ ನೇತೃತ್ವದಲ್ಲಿ ‘ಬಿಲ್ಲ ಹಬ್ಬ’ ಯಕ್ಷಗಾನ ತಾಳಮದ್ದಳೆಗಳು ನಡೆಯಲಿದೆ. ದಿನಾಂಕ 18-10-2023ರಂದು ಸಂಜೆ 5-30ಕ್ಕೆ…
ತೆಕ್ಕಟ್ಟೆ: ಕಳೆದ ಹಲವಾರು ವರ್ಷಗಳಿಂದ ಯಶಸ್ವೀ ಕಲಾವೃಂದ ಕೊಮೆ-ತೆಕ್ಕಟ್ಟೆ ಕೆಲವು ಚಿಣ್ಣರಿಗೆ ಹೂವಿನಕೋಲು ಪ್ರದರ್ಶನಕ್ಕೆ ತಯಾರಿ ನಡೆಸಿ ದಿನಾಂಕ 15-10-2023 ರಿಂದ 24-10-2023ರವರೆಗೆ ನವರಾತ್ರಿ ಸಂದರ್ಭದಲ್ಲಿ ಆಯ್ದ ಮನೆ ಮನೆಗಳಿಗೆ ಪ್ರದರ್ಶನ ನೀಡಲು ತೆರಳುತ್ತಿದ್ದಾರೆ. ಪ್ರತೀ ದಿನ ಬೆಳಿಗ್ಗೆ ಘಂಟೆ 8.00ರಿಂದ ಸಂಜೆ ಗಂಟೆ 7.00ರ ತನಕ ಕುಂದಾಪುರ, ಉಡುಪಿ, ಮಂಗಳೂರು ಭಾಗದಲ್ಲಿ 20 ಪೌರಾಣಿಕ ಪ್ರಸಂಗದ ತುಣುಕುಗಳನ್ನು ಅಭ್ಯಸಿಸಿ, ಕಲಾಸಕ್ತರ ಮನೆಗಳಿಗೆ ತೆರಳಿ ಪ್ರದರ್ಶಿಸಲಿದ್ದಾರೆ. ‘ಧನ ಕನಕ, ಸಂಪತ್ತು ಸಂಮೃದ್ಧಿಯಾಗಲೆಂದು’ ಹಾರೈಸುವುದಕ್ಕಾಗಿ ಯಶಸ್ವೀ ಕಲಾವೃಂದ ಚಿಣ್ಣರ ಪಡೆ ಪ್ರತೀ ವರ್ಷದಂತೆ ಈ ವರ್ಷವೂ ಅಭಿಯಾನ ರೂಪದ ಕಾರ್ಯಕ್ರಮವನ್ನು ಆಯೋಜಿಸಿಕೊಂಡಿದೆ. ಈ ಅಳಿವಿನಂಚಿನಲ್ಲಿರುವ ಕಲಾ ಪ್ರಕಾರವನ್ನು ಪುನಃರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಸತತ 15ವರ್ಷಗಳಿಂದ ಯಶಸ್ವೀ ಕಲಾವೃಂದ ಶ್ರಮಿಸುತ್ತಿದೆ. ಕಲಾಸಕ್ತರು ತಮ್ಮ ಮನೆಗೂ ಆಹ್ವಾನಿಸುವುದಿದ್ದರೆ ಸಂಪರ್ಕ ಸಂಖ್ಯೆ:994594771 ಸಂಪರ್ಕಿಸಬಹುದೆಂದು ಅಧ್ಯಕ್ಷರಾದ ಮಲ್ಯಾಡಿ ಸೀತಾರಾಮ ಶೆಟ್ಟಿ ತಿಳಿಸಿದ್ದಾರೆ.
ಮಂಗಳೂರು : ಕಾಂತಾವರ ಕನ್ನಡ ಸಂಘದ 2023ನೇ ಸಾಲಿನ ದತ್ತಿನಿಧಿ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ‘ಶ್ರೀಮತಿ ಸರಸ್ವತಿ ಬಲ್ಲಾಳ್ ಮತ್ತು ಡಾ. ಸಿ.ಕೆ. ಬಲ್ಲಾಳ್ ದಂಪತಿ ಪ್ರತಿಷ್ಠಾನ’ದಿಂದ ನೀಡುವ ‘ಕರ್ನಾಟಕ ಏಕೀಕರಣದ ನೇತಾರ ಕೆ.ಬಿ. ಜಿನರಾಜ ಹೆಗ್ಡೆ ಸ್ಮಾರಕ ಸಾಂಸ್ಕೃತಿಕ ಪ್ರಶಸ್ತಿ’ಗೆ ಬಂಟ್ವಾಳ ತಾಲ್ಲೂಕಿನ ವಿಟ್ಲ ಸಮೀಪದ ಮೂರ್ಕಜೆಯಲ್ಲಿರುವ ಮೈತ್ರೇಯಿ ಗುರುಕುಲವನ್ನು ಆಯ್ಕೆ ಮಾಡಲಾಗಿದೆ. ಹಿರಿಯ ಭಾಷಾ ತಜ್ಞ ಯು.ಪಿ.ಉಪಾಧ್ಯಾಯ ಅವರ ಹೆಸರಿನ ‘ಮಹೋಪಾಧ್ಯಾಯ ಪ್ರಶಸ್ತಿ’ಯನ್ನು ಉಜಿರೆಯ ಡಾ. ಎಸ್.ಡಿ. ಶೆಟ್ಟಿ ಅವರಿಗೆ, ಧಾರವಾಡದ ಹಿರಿಯ ಸಾಹಿತಿ ಡಾ. ಜಿ.ಎಂ. ಹೆಗಡೆ ಅವರ ದತ್ತಿನಿಧಿಯ ‘ಪ್ರಾಧ್ಯಾಪಕ ಸಂಶೋಧಕ ಪ್ರಶಸ್ತಿ’ಯನ್ನು ಚೆನೈಯ ಡಾ. ಶ್ರೀಕೃಷ್ಣ ಭಟ್ ಅರ್ತಿಕಜೆ ಅವರಿಗೆ ಮತ್ತು ಹಿರಿಯ ರಂಗಕರ್ಮಿ ಶ್ರೀಪತಿ ಮಂಜನಬೈಲ್ ಅವರು ಸ್ಥಾಪಿಸಿದ ದತ್ತಿನಿಧಿಯಿಂದ ಕೊಡಲಾಗುವ ‘ಮಂಜನಬೈಲ್ ರಂಗಸನ್ಮಾನ್’ ಪ್ರಶಸ್ತಿಯನ್ನು ಬೆಂಗಳೂರಿನ ವೈ.ವಿ. ಗುಂಡೂರಾವ್ ಅವರಿಗೆ ನೀಡಲಾಗುವುದು. …