Subscribe to Updates
Get the latest creative news from FooBar about art, design and business.
Author: roovari
2023 ಸೆಪ್ಟೆಂಬರ್ 27. ನಾಡಿನ ಹಿರಿಯ ವಿದ್ವಾಂಸರಾದ ಡಾ. ಅಮೃತ ಸೋಮೇಶ್ವರರಿಗೆ 88. ತಮ್ಮ ತಾರುಣ್ಯದ ಕಾಲದಲ್ಲೇ ಅಮೃತರ ತುಳುಗೀತೆಗಳನ್ನು ಗುನುಗುನುಗಿಸುತ್ತಿದ್ದ ನೆರೆಕೂದಲ ಹಿರಿಯರನೇಕರಿಗೆ ‘ನಾವು ಅಂದೇ ಅಮೃತರನ್ನು ಓದಿದ್ದೆವು. ಈಗವರಿಗೆ ಎಂಬತ್ತೆಂಟು ಆಗುವುದಷ್ಟೆನಾ?’ ಎಂಬ ಸಂಶಯಾಶ್ಚರ್ಯ. ಇಂದಿನ ತರುಣ ವಿದ್ಯಾರ್ಥಿಗಳಿಗಂತೂ ‘ ನನ್ನ ಅಜ್ಜನೇ ಅಮೃತರ ನಾಟಕದ ಬಗ್ಗೆ ಹೇಳುತ್ತಿದ್ದರು’ ಎಂಬ ತಲೆಮಾರುಗಳ ನೆನಪು. ಅಂದಿನವರಿಗೂ ಬೇಕಿರುವವರಾಗಿ ಇಂದಿನವರಿಗೂ ಪ್ರಸ್ತುತರಾಗಿ ಬದುಕುವುದೆಂದರೆ ಅದೆಂತಹ ಸಾರ್ಥಕತೆ! ತಿಳಿದ ವಿಚಾರಗಳ ಕುರಿತು ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಇಂದಿನವರಿಗೆ ತಕ್ಷಣ ಗೂಗಲ್ ನೆನಪಾಗುತ್ತದೆ. ಆದರೆ ಕೆಲವು ದಶಕಗಳ ಹಿಂದೆ ವಿಚಾರ ಹುಡುಕಾಡುವವರಿಗೆ ಗೂಗಲ್‌ನಂತಿದ್ದವರು ಅಮೃತರು. ಹೌದು, ಅಮೃತ ಸೋಮೇಶ್ವರರು ಮಾನವತೆಯ ನೆಟ್‌ವರ್ಕ್ ಮೂಲಕ ಆಂತರ್ಯವನ್ನು ಬೆಸೆದ ಅಂತರ್ಜಾಲ. ಸದಾಸಮೃದ್ಧ ಅವಿಚ್ಛಿನ್ನ ಜ್ಞಾನ ಸಂಪುಟ. ಅನೇಕರಿಗೆ ಅಮೃತ ಸೋಮೇಶ್ವರರು ತಮ್ಮ ಪುಸ್ತಕಕ್ಕೆ ಮುನ್ನುಡಿ ಬರೆಸುವ ಕಾರಣದಿಂದ ಹತ್ತಿರವಾದವರು. ಅವರು ಬರೆದಿರುವ ಮುನ್ನುಡಿಗಳನ್ನೇ ಸಂಕಲಿಸಿದರೆ ಒಂದು ಕೃತಿಯೇ ಆಗಬಹುದು. ಮೊನ್ನೆಯಷ್ಟೇ ಕವನ ಬರೆಯಲು ಪ್ರಾರಂಭಿಸಿದ ಚಿಣ್ಣನೂ ತನ್ನ…
ಕಾಸರಗೋಡು : ಕಾಸರಗೋಡಿನ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಸ್ಥೆಯಾದ ರಂಗಚಿನ್ನಾರಿ ಕಾಸರಗೋಡು (ರಿ.) ಇದರ ಮಹಿಳಾ ಘಟಕ ‘ನಾರಿ ಚಿನ್ನಾರಿ’ಯ 9ನೇ ಸರಣಿ ಕಾರ್ಯಕ್ರಮ ‘ವರ್ಷ ರಿಂಗಣ’ ದಿನಾಂಕ 30-09- 2023 ಶನಿವಾರ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ನಡೆಯಲಿದೆ. ಕಾಸರಗೋಡಿನ ಕರಂದಕ್ಕಾಡಿನಲ್ಲಿರುವ ಪದ್ಮಗಿರಿ ಕಲಾಕುಟೀರದಲ್ಲಿ ಈ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ. ಪುಸ್ತಕ ಬಿಡುಗಡೆಯನ್ನು ಮಂಗಳೂರಿನ ಬೆಸೆಂಟ್ ಮಹಿಳಾ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಿಕೆ ಮತ್ತು ಸಾಹಿತಿಯಾದ ಡಾ.ಮೀನಾಕ್ಷಿ ರಾಮಚಂದ್ರ ನೆರವೇರಿಸದ್ದಾರೆ. ನಾರಿ ಚಿನ್ನಾರಿಯ ಕಾರ್ಯಾಧ್ಯಕ್ಷರಾದ ಸವಿತಾ ಟೀಚರ್ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಗೃಹಿಣಿಯಾದ ಶ್ರೀಮತಿ ಸರೋಜಿನಿ ಕೆ.ಭಟ್ ಉಪಸ್ಥಿತರಿದ್ದು ಪ್ರಥಮ ಪ್ರತಿ ಸ್ವೀಕಾರ ಮಾಡಲಿರುವರು. ಇದೇ ಸಂದರ್ಭದಲ್ಲಿ, ಕಾಸರಗೋಡು ಸರಕಾರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಿಕೆ ಮತ್ತು ಕವಯತ್ರಿಯಾದ ಲಕ್ಷ್ಮೀ.ಕೆ ಹಾಗೂ ತುಳು ಜಾನಪದ ಕಲಾವಿದೆಯಾದ ಲಕ್ಷ್ಮೀ ಕುಂಬ್ಡಾಜೆ ಇವರಿಗೆ ಗೌರವಾರ್ಪಣೆ ನಡೆಯಲಿದೆ. ಇದೇ ವೇದಿಕೆಯಲ್ಲಿ ಲೇಖಕಿ ಲಕ್ಷ್ಮೀ.ಕೆ ಇವರ ‘ನೀನಿಲ್ಲ…. ಇಲ್ಲಿ ನಾನು ಮಾತ್ರ’ ಕವನ ಸಂಕಲನ…
ಸುಳ್ಯ : ಸುಳ್ಯದ ನೆಹರೂ ಸ್ಮಾರಕ ಪದವಿ ಪೂರ್ವ ಕಾಲೇಜಿನ ಕನ್ನಡ ವಿಭಾಗದ ವತಿಯಿಂದ ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಭಿರುಚಿಯನ್ನು ಉದ್ದೀಪನಗೊಳಿಸುವ ಸಲುವಾಗಿ ದಿನಾಂಕ 25-09-2023ರಂದು ‘ವಾಚನಾಭಿರುಚಿ ಮತ್ತು ಬರಹ ಕಲೆ’ ಅನ್ನುವ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿತ್ತು. ಯುವ ಸಾಹಿತಿ ಉದಯಭಾಸ್ಕರ್ ಸುಳ್ಯ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಉಪನ್ಯಾಸ ನಡೆಸಿಕೊಟ್ಟರು. “ಕೇವಲ ಕೃತಿ ಪ್ರಕಟಿಸಿ ಸಾಹಿತ್ಯ ಲೋಕಕ್ಕೆ ಅರ್ಪಣೆ ಮಾಡುವುದು ಮಾತ್ರವೇ ಸಾಹಿತ್ಯ ಲೋಕಕ್ಕೆ ಕೊಡಬಹುದಾದ ಕಾಣಿಕೆ ಅಲ್ಲ, ಬರಹದ ಕಲೆ ಇಲ್ಲದವರು ಕೂಡಾ ಗುಣಮಟ್ಟದ ಓದುಗರಾಗುವ ಮೂಲಕ ಮತ್ತು ಗುಣಮಟ್ಟದ ಓದುಗರನ್ನು ಸೃಷ್ಟಿಸುವ ಮೂಲಕವೂ ಸಾಹಿತ್ಯ ಲೋಕಕ್ಕೆ ಕಾಣಿಕೆಯನ್ನು ಕೊಡಬಹುದು. ಮನಸ್ಸನ್ನು ವಿಕಾರಗೊಳಿಸುವಂತಹ ಅಥವಾ ಸಮಾಜಘಾತುಕ ಶಕ್ತಿಗಳಿಗೂ ಪ್ರೇರಣೆ ಕೊಡುವಂತಹ ಅನೇಕ ಸಾಹಿತ್ಯಗಳಿವೆ, ಆದರೆ ಮನಸ್ಸನ್ನು ಅರಳಿಸುವಂತಹ ಮತ್ತು ನಮ್ಮನ್ನು ಸಮಾಜಮುಖಿಯಾಗಿ ಬದಲಿಸಬಹುದಾದ ಸಾಹಿತ್ಯಗಳನ್ನು ನಾವು ಆಯ್ಕೆ ಮಾಡಿಕೊಳ್ಳುವುದರಿಂದ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬಹುದು” ಎಂದು ಉದಯಭಾಸ್ಕರ್ ಸುಳ್ಯ ಅಭಿಪ್ರಾಯಪಟ್ಟರು. ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾರ್ಥಿನಿಯರಾದ ಆಜ್ಞಾ, ಪವಿತ್ರಾ , ಭೂಮಿಕಾ…
ಮಂಗಳೂರು : ತುಳು ಕೂಟ (ರಿ.) ಕುಡ್ಲ ಇದರ ‘ಬಂಗಾರ್ ಪರ್ಬದ ಸರಣಿ ವೈಭವೊ-7’ ಇದರ ಅಂಗವಾಗಿ ದಿನಾಂಕ 28-09-2023ರಂದು ಬೆಳಿಗ್ಗೆ 9.30 ಗಂಟೆಗೆ ಕಂಕನಾಡಿ ಗರೋಡಿಯ ಸರ್ವಮಂಗಳ ಸಭಾಭವನದಲ್ಲಿ ಈ ಬಾರಿ ಮಹಿಳಾ ಸಂಭ್ರಮ ‘ಪೊಂಜೋವುಲೆನ ಆಟ-ಕೂಟ-ನಲಿಕೆ’ ಕಾರ್ಯಕ್ರಮವು ನಡೆಯಲಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಳು ಕೂಟದ ಅಧ್ಯಕ್ಷರಾದ ಮರೋಳಿ ಶ್ರೀ ಬಿ.ದಾಮೋದರ ನಿಸರ್ಗ ಇವರು ವಹಿಸಲಿದ್ದು, ಚಿಲಿಂಬಿಯ ಶ್ರೀ ಸಾಯಿ ಶಕ್ತಿ ಬಳಗದ ನಿರ್ದೇಶಕಿಯಾದ ಶ್ರೀಮತಿ ಲಾವಣ್ಯಾ ವಿಶ್ವಾಸ್ ಕುಮಾರ್ ದಾಸ್ ಹಾಗೂ ಶ್ರೀ ಸಾಯಿ ಮಂದಿರದ ಮೊಕ್ತೇಸರರಾದ ಶ್ರೀ ವಿಶ್ವಾಸ್ ಕುಮಾರ್ ದಾಸ್ ಇವರು ದೀಪ ಪ್ರಜ್ವಲನೆ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮಂಗಳೂರಿನ ಮೇಯರ್ ಸುಧೀರ್ ಶೆಟ್ಟಿ ಮತ್ತು ಜೆ.ಆರ್.ಲೋಬೊ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಮಹಿಳೆಯರಿಗೆ ರಸ ಪ್ರಶ್ನೆ, ಎದುರುಕತೆ/ ಗಾದೆಗಳ ಸಂವಾದ, ಹೂವು, ಉಪ್ಪಿನ ಹರಳು, ಬಿಡಿಹೂ, ರಂಗೋಲಿ ಹುಡಿಯಿಂದ ರಂಗೋಲಿ ಸ್ಪರ್ಧೆ ಹಾಗೂ ಹೂ ಕಟ್ಟುವ ಸ್ಪರ್ಧೆ, ನಡೆಯಲಿದೆ. ರಂಗೋಲಿಗೆ ಬೇಕಾದ ಸಾಹಿತ್ಯ ಅವರವರೇ…
ಉಡುಪಿ : ರಾಗಧನ ಉಡುಪಿ ಸಂಸ್ಥೆಯ ವತಿಯಿಂದ, ಅನಂತಪುರ ದೊಡ್ಡಮನೆ ಕುಟುಂಬದವರು ಕೊಡಮಾಡುವ ಕಲಾವಿಹಾರಿ ದಿ.ಎ. ಈಶ್ವರಯ್ಯ ಸ್ಮಾರಕ ‘ಕಲಾಪ್ರವೀಣ ಪ್ರಶಸ್ತಿ’ ಪ್ರದಾನ ಸಮಾರಂಭ ದಿನಾಂಕ 24-09-2023 ರಂದು ಉಡುಪಿ ಸಮೀಪದ ಕುಕ್ಕೆಹಳ್ಳಿಯ ‘ಕನಸು ರೆಸಾರ್ಟ್’ ನಲ್ಲಿ ನಡೆಯಿತು. ಉಡುಪಿಯ ಹಿರಿಯ ಸಾಹಿತಿ, ಅಂಕಣಕಾರ ಹಾಗೂ ವಿಮರ್ಶಕ ಪ್ರೊ.ಮುರಳೀಧರ ಉಪಾಧ್ಯ ಹಿರಿಯಡಕ ಇವರಿಗೆ ಈ ಪ್ರಶಸ್ತಿಯನ್ನು ರಾಗಧನ ಸಂಸ್ಥೆಯ ರಾಗರತ್ನ ಮಾಲಿಕೆ -16ರ ಸಂದರ್ಭದಲ್ಲಿ ನೀಡಿ ಗೌರವಿಸಲಾಯಿತು “ಕನ್ನಡದ ವಿಷಯಗಳು ವಿಶ್ವವ್ಯಾಪಿಯಾಗುವಂತೆ ಮಾಡುವಲ್ಲಿ ಸಾಹಿತ್ಯ ವಿಮರ್ಶಕ ಮುರಳೀಧರ ಉಪಾಧ್ಯರ ಕೊಡುಗೆ ದೊಡ್ಡದು. ಲೋಕಕ್ಕೆ ಕನ್ನಡವನ್ನು ವಿಸ್ತಾರವಾಗಿ ಪರಿಚಯಿಸುವ ಸೇವೆಯನ್ನು ಅವರು ಮಾಡಿರುತ್ತಾರೆ” ಎಂದು ಪಾದೇಕಲ್ಲು ವಿಷ್ಣು ಭಟ್ಟ ಅಭಿಪ್ರಾಯ ಪಟ್ಟರು. ಅವರು ಪ್ರೊ.ಮುರಳೀಧರ ಉಪಾಧ್ಯ ಹಿರಿಯಡಕ ಇವರಿಗೆ ಶ್ರೀ ಎ.ಈಶ್ವರಯ್ಯ ಸ್ಮಾರಕ ‘ಕಲಾಪ್ರವೀಣ’ ಪ್ರಶಸ್ತಿ ನೀಡುವ ಸಂದರ್ಭದಲ್ಲಿ ಅಭಿನಂದಿಸಿ ಮಾತನಾಡಿದರು. ಶ್ರೀಕೃಷ್ಣಯ್ಯ ಅನಂತಪುರ ಈ ಪ್ರಶಸ್ತಿಯ ಬಗ್ಗೆ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಡಾ.ಶ್ರೀಕಿರಣ ಹೆಬ್ಬಾರ್ ವಹಿಸಿದ್ದರು. ಕನ್ನಡ ಹಾಗೂ ಸಂಸ್ಕೃತಿ ಇಲಾಖೆಯ…
ಗಂಗಾವತಿ : ಜೀವನ್ ಪಬ್ಲಿಕೇಷನ್ಸ್ ವತಿಯಿಂದ ಆಯೋಜಿಸಲಾಗಿದ್ದ ಅರಳು ಕುಸುಮ ಕಥಾ ವಾಚನ ಕಾರ್ಯಕ್ರಮ ದಿನಾಂಕ 24-09-2023 ರಂದು ಗಂಗಾವತಿಯ ವಡ್ಡರಹಟ್ಟಿ ಶ್ರೀ ಸಾಯಿ ಬಾಬ ನಗರದ ಜೀವನ ನೀಲಯದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ವಡ್ಡರಹಟ್ಟಿ ಉಳ್ಳಿಡಗ್ಗಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಸೋಮಪ್ಪ ಜಂಬಲಗಿ “ಮಕ್ಕಳ ಸರ್ವಾಂಗೀಣ ಅಭಿವೃದ್ದಿಗೆ ಹಾಗೂ ಮಕ್ಕಳಲ್ಲಿ ಸಾಹಿತ್ಯಾಭಿರುಚಿ ಬೆಳೆಸಲು ಮಕ್ಕಳ ಕಥಾವಾಚನ ಕಾರ್ಯಕ್ರಮಗಳು ತುಂಬಾ ಉಪಯುಕ್ತವಾಗಿದೆ. ಮಕ್ಕಳಲ್ಲಿ ಕಥೆ ಹೇಳುವ ಮತ್ತು ಕೇಳುವ ಹವ್ಯಾಸ ಮೂಡಿಸುವ ಮೂಲಕ ಮಕ್ಕಳನ್ನ ಮೊಬೈಲ್ ಗೀಳಿನಿಂದ ಹೊರ ತರಲು ಹೆಚ್ಚು ಅನುಕೂಲವಾಗಲಿದೆ” ಎಂದು ಹೇಳಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಡಾ.ಮುಮ್ತಾಜ್ ಬೇಗಂ “ಜೀವನ ಪಬ್ಲಿಕೇಷನ್ಸ್ ಕೇವಲ ಪುಸ್ತಕ ಮುದ್ರಣಕ್ಕೆ ಮಾತ್ರ ಸೀಮಿತವಾಗದೆ, ಸಾಂಸ್ಕೃತಿಕವಾಗಿಯೂ ಮಕ್ಕಳನ್ನು ಒಳಗೊಂಡಂತೆ ಕಾರ್ಯಕ್ರಮ ಹಮ್ಮಿಕೊಳ್ಳುವ ಉದ್ದೇಶವನ್ನು ಒಳಗೊಂಡಿದೆ. ಕಥೆ ಕೇಳುವ ಮತ್ತು ಹೇಳುವ ಪ್ರಕ್ರಿಯೆಯಿಂದ ನೆನಪಿನ ಶಕ್ತಿ, ಶಬ್ದ ಸಂಪತ್ತು, ಕಲ್ಪನಾ ಶಕ್ತಿ ವೃದ್ಧಿಸುತ್ತದೆ” ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಸಂಗಾಪುರದ ಜೈನ ಪಬ್ಲಿಕ್…
ಮುಂಬಯಿ : ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ ಆಯೋಜಿಸುವ ಜಯ ಸಿ. ಸುವರ್ಣ ಸಂಸ್ಮರಣೆ, ಸಮಾರಂಭವು ಕಲೀನಾ ಕ್ಯಾಂಪಸ್‌ನ ಕವಿವರ್ಯ ಕುಸುಮಾಗ್ರಜ ಮರಾಠಿ ಭಾಷಾ ಭವನದಲ್ಲಿ ದಿನಾಂಕ 30-09-2023 ರಂದು ಮಧ್ಯಾಹ್ನ 02.30ಕ್ಕೆ ನಡೆಯಲಿದೆ. ಅಂದು ಅನಿತಾ ಪಿ.ತಾಕೊಡೆಯವರು ಜಯ ಸಿ.ಸುವರ್ಣರ ಜೀವನ ಸಾಧನೆಯ ಕುರಿತು ರಚಿಸಿದ ‘ಸುವರ್ಣಯುಗ’ ಕೃತಿ ಲೋಕಾರ್ಪಣೆ ಹಾಗೂ ಸಾಧಕರಿಗೆ ಗೌರವಾರ್ಪಣೆ ಕಾರ್ಯಕ್ರಮ ನೆರವೇರಲಿದೆ. ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ ಡಾ.ಜಿ.ಎನ್.ಉಪಾಧ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಉತ್ತರ ಮುಂಬಯಿ ಲೋಕಸಭಾ ಕ್ಷೇತ್ರದ ಸಂಸದರಾದ ಗೋಪಾಲ ಸಿ.ಶೆಟ್ಟಿಯವರು ಉದ್ಘಾಟಿಸಲಿದ್ದಾರೆ. ಕರ್ನಾಟಕ ಸರಕಾರದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ ಸಚಿವರಾದ ಮಧು ಬಂಗಾರಪ್ಪನವರು ಕೃತಿಯನ್ನು ಲೋಕಾರ್ಪಣೆಗೊಳಿಸಲಿದ್ದು, ಕನ್ನಡ ವಿಭಾಗ, ಮುಂಬಯಿ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕರಾದ ಡಾ.ಉಮಾ ರಾಮರಾವ್ ಅವರು ಕೃತಿಯನ್ನು ಪರಿಚಯಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿ ಡಾ.ವಿಶ್ವನಾಥ ಕಾರ್ನಾಡ್, ‘ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ’ದ ಅಧ್ಯಕ್ಷರಾದ ಡಾ.ತುಕಾರಾಂ ಪೂಜಾರಿ,…
ಬಂಟ್ವಾಳ : ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸುವ ಪತ್ರಿಕೆಯಾದ ‘ಮಕ್ಕಳ ಜಗಲಿ’ ತನ್ನ ಮೂರನೇ ವರ್ಷದ ಸಂಭ್ರಮದಲ್ಲಿ ‘ಕವನ ಸಿರಿ’ ಮತ್ತು ‘ಕಥಾ ಸಿರಿ’-2023 ಪ್ರಶಸ್ತಿಗಾಗಿ ರಾಜ್ಯ ಮಟ್ಟದ ಕವನ ಮತ್ತು ಕಥಾ ಸ್ಪರ್ಧೆ ಆಯೋಜಿಸುತ್ತಿದ್ದು, ಮಕ್ಕಳಿಂದ ಕವನ ಮತ್ತು ಕಥೆಗಳನ್ನು ಆಹ್ವಾನಿಸುತ್ತಿದೆ. ಸ್ಪರ್ಧೆಗಳು ಎರಡು ವಿಭಾಗಗಳಲ್ಲಿ ನಡೆಯಲಿದ್ದು, ಕವನ ಸ್ಪರ್ಧೆಯ ಮೊದಲ ವಿಭಾಗ 5,6,7 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ವಿಷಯವು ಐಚ್ಛಿಕ (ನಿಮ್ಮ ಆಯ್ಕೆ)ವಾಗಿದೆ. ಕವನವು ಕನಿಷ್ಠ 12 ಸಾಲುಗಳು ಹಾಗೂ ಗರಿಷ್ಠ 20 ಸಾಲುಗಳನ್ನು ಹೊಂದಿರಬೇಕು. ಎರಡನೇ ವಿಭಾಗವು 9,10,11 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ವಿಷಯವು ಐಚ್ಛಿಕ (ನಿಮ್ಮ ಆಯ್ಕೆ)ವಾಗಿದೆ. ಕವನವು ಕನಿಷ್ಠ 16 ಸಾಲುಗಳು ಹಾಗೂ ಗರಿಷ್ಠ 24 ಸಾಲುಗಳನ್ನು ಹೊಂದಿರಬೇಕು. ಕಥಾಸ್ಪರ್ಧೆಯ ಮೊದಲ ವಿಭಾಗ 5,6,7 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ವಿಷಯವು ಐಚ್ಛಿಕ (ನಿಮ್ಮ ಆಯ್ಕೆ)ವಾಗಿದೆ. A4 ಅಳತೆಯ ಕಾಗದದಲ್ಲಿ ಬರಹವು ಎರಡು ಪುಟಗಳನ್ನು ಮೀರಿರಬಾರದು. ಎರಡನೇ ವಿಭಾಗ 9,10,11 ಮತ್ತು 12ನೇ…
ಕಟಪಾಡಿ : ಶ್ರೀ ಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದ ಶ್ರೀ ಕಾಳಹಸ್ತೇಂದ್ರ ಸ್ವಾಮಿಗಳವರ ಚಾತುರ್ಮಾಸ್ಯದ ವ್ರತಾಚರಣೆ ಪ್ರಯುಕ್ತ ಸುರತ್ಕಲ್ ತಡಂಬೈಲಿನ ಶ್ರೀ ದುರ್ಗಾಂಬಾ ಮಹಿಳಾ ಯಕ್ಷಗಾನ ಮಂಡಳಿಯ ಸದಸ್ಯೆಯರಿಂದ ದಿನಾಂಕ 21-09-2023ರಂದು ‘ಸುದರ್ಶನ ವಿಜಯ’ ತಾಳಮದ್ದಳೆ ನಡೆಯಿತು. ಶ್ರೀ ವಾಸುದೇವ ರಾವ್ ಸುರತ್ಕಲ್ ಇವರು ನಿರ್ದೇಶಿಸಿದ ಈ ಕಾರ್ಯಕ್ರಮದಲ್ಲಿ ಶ್ರೀಮತಿಯರಾದ ಸುಲೋಚನ ಮಹಾವಿಷ್ಣುವಾಗಿ, ಸುಮಿತ್ರ ಶಶಿಕಾಂತ ಕಲ್ಲೂರಾಯ ಸುದರ್ಶನನಾಗಿ, ಉಮಾ ದಿವಾಕರ ಲಕ್ಷ್ಮೀಯಾಗಿ ಹಾಗೂ ಅತಿಥಿ ಕಲಾವಿದರಾದ ವಿಶ್ವನಾಥ ಸಾಂತೂರು ದೇವೇಂದ್ರನಾಗಿ, ಜನಾರ್ದನ ಆಚಾರ್ ಮತ್ತು ಅಶೋಕ್ ನಾಯ್ಕ್ ಸಾಂತೂರು ಶತ್ರು ಪ್ರಸೂದನನಾಗಿ ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಭಾಗವತರಾಗಿ ಸುರೇಶ್ ಭಟ್ ಮತ್ತು ರಾಘಣ್ಣ ಹಾಗೂ ಚಂಡೆ ಮದ್ದಳೆಯಲ್ಲಿ ವೆಂಕಟೇಶ್ ಮತ್ತು ಅಶೋಕ ಸಹಕರಿಸಿದರು.
ಕಾಸರಗೋಡು: ಕಾಸರಗೋಡಿನ ವಿದ್ಯಾನಗರದ ಸರಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗದಲ್ಲಿ ‘ಸ್ನೇಹರಂಗ’ ಆಯೋಜಿಸಿದ್ದ ಚಿಂತನ ಕಾರ್ಯಕ್ರಮವು ದಿನಾಂಕ 25-09-2023ರಂದು ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ರಾಷ್ಟ್ರ ಪ್ರಶಸ್ತಿ ವಿಜೇತ ಕನ್ನಡ ಸಿನಿಮಾ ಸಂಗೀತ ನಿರ್ದೇಶಕ ವಿ. ಮನೋಹರ್ “ಪ್ರತೀಯೊಂದು ವಿಚಾರವನ್ನು ಪ್ರಶ್ನಿಸುವುದನ್ನು ರೂಢಿಸಿಕೊಳ್ಳಬೇಕು. ಅದು ನಮ್ಮನ್ನು ಬೆಳೆಸುತ್ತದೆ. ಪ್ರಶ್ನಿಸುವ ಸಂದರ್ಭಗಳಲ್ಲಿ ಸವಾಲುಗಳು ಎದುರಾಗುತ್ತವೆ. ಹಿಂದೆ ಕನ್ನಡದ ಚಾನಲ್ ಒಂದರಲ್ಲಿ ಪ್ರಶ್ನಿಸುವ ಹಾಸ್ಯಮಯ ಧಾರಾವಾಹಿ ಮಾಡಿ ಹೊರದಬ್ಬಿಸಿಕೊಂಡದ್ದೂ ಇದೆ. ಆದರೆ ಸಂಕಷ್ಟಗಳು ಬಂದಾಗ ಕಂಗೆಡಬಾರದು. ನಟ -ನಿರ್ದೇಶಕ ಉಪೇಂದ್ರ ಅವರು ಸಂಗೀತ ನಿರ್ದೇಶನದ ಮೊದಲ ಅವಕಾಶ ನೀಡಿದರು. ಆನಂತರ ಡಾ.ರಾಜ್ ಅವರೂ ಕೈಹಿಡಿದರು. ಜನುಮದ ಜೋಡಿ, ಚಿಗುರಿದ ಕನಸು ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡುವ ಸಂದರ್ಭದಲ್ಲಿ ರಾಜ್ ಅವರ ಒಡನಾಟ ದೊರೆಯಿತು. ಎಳವೆಯಲ್ಲೇ ಚಿತ್ರಗೀತೆಯ ಹುಚ್ಚು ಹಚ್ಚಿಸಿಕೊಂಡವ ನಾನು. ಹುಚ್ಚು ಇರದಿದ್ದರೆ ಈ ಕ್ಷೇತ್ರದಲ್ಲಿ ಪಳಗಲು ಸಾಧ್ಯವಿಲ್ಲ. ಇದೊಂಥರಾ ಒಳ್ಳೆಯ ಹುಚ್ಚು. ಮೊದಲಿಗೆ ವ್ಯಂಗ್ಯ ಚಿತ್ರಕಾರ ಆಗಿದ್ದೆ. ಕ್ಯಾಸೆಟ್…