Subscribe to Updates
Get the latest creative news from FooBar about art, design and business.
Author: roovari
ಬೆಂಗಳೂರು: ದಿನಾಂಕ 19-09-2023 ರಂದು ಎ.ಡಿ.ಎ. ರಂಗಮಂದಿರದಲ್ಲಿ ನಡೆದ ‘ಲೀಲಾ ನಾಟ್ಯ ಕಲಾವೃಂದ’ದ ಯಶಸ್ವೀ 47ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿ ವಿವಿಧ ಆಕರ್ಷಕ ನೃತ್ಯಾವಳಿಗಳು ಕಣ್ಮನ ಸೆಳೆದವು. ಸುಮಾರು 150 ಮಂದಿ ನೃತ್ಯಾಕಾಂಕ್ಷಿಗಳು ಅತ್ಯುತ್ಸಾಹದಿಂದ ಭಾಗವಹಿಸಿದ ನಲಿವಿನ ಹೆಜ್ಜೆ-ಗೆಜ್ಜೆಗಳ ಸಮೂಹ ನೃತ್ಯಾರ್ಪಣೆಯ ಸೌಂದರ್ಯಕರ ನೋಟ ಮುದನೀಡಿತು. ಪುಟಾಣಿ ಮಕ್ಕಳಿಂದ ಹಿಡಿದು ಹದಿಹರೆಯದ ಲಲನೆಯರರೂ ಅಂದವಾದ ಅಲಂಕಾರ, ಸುಮನೋಹರ ವೇಷಭೂಷಣಗಳಲ್ಲಿ ಶೋಭಿಸಿ ರಂಗದ ಮೇಲೆ ವಿವಿಧ ಸುಂದರ ಕೃತಿಗಳನ್ನು ನಿರೂಪಿಸಿದರು. ಅಂಗಶುದ್ಧ-ಲವಲವಿಕೆಯ ನರ್ತನ ಪ್ರೇಕ್ಷಕರಿಂದ ಮೆಚ್ಚುಗೆ ಪಡೆಯಿತು. ಕೊನೆಯಲ್ಲಿ ಪ್ರಸ್ತುತವಾದ ‘ನವರಸ ರಾಮಾಯಣ’-ನೃತ್ಯರೂಪಕದ ವಿಶೇಷವೆಂದರೆ, ಇದು ಕೇವಲ ನೃತ್ಯ ನಾಟಕವಾಗಿರದೆ, ‘ಮಾರ್ಗಂ’ ಸಂಪ್ರದಾಯದ ‘ವರ್ಣ’ ಸ್ವರೂಪ-ವಿನ್ಯಾಸಗಳಲ್ಲಿ, ಅದರ ಎಲ್ಲ ಶಾಸ್ತ್ರೀಯ ವ್ಯಾಕರಣಾಂಶಗಳನ್ನೂ ಒಳಗೊಂಡು ನಿರೂಪಿತವಾದ ಹೊಸ ಪ್ರಯೋಗವಾಗಿತ್ತು. ನೃತ್ತ-ನೃತ್ಯ ಮತ್ತು ಅಭಿನಯಗಳ ಮೆರುಗಿನಲ್ಲಿ ರಾಮಾಯಣದ ಹಲವು ರಸಘಟ್ಟಗಳನ್ನು ಪ್ರದರ್ಶಿಸಲಾಯಿತು. ಭರತನಾಟ್ಯದಲ್ಲಿ ‘ನವರಸ’ಗಳು ತನ್ನದೇ ಆದ ವಿಶೇಷ ಸ್ಥಾನ-ವೈಶಿಷ್ಟ್ಯಗಳನ್ನು ಪಡೆದಿವೆ. ಶೃಂಗಾರ, ಹಾಸ್ಯ, ಭಯಾನಕ, ಕ್ರೋಧ, ವೀರ, ಅದ್ಭುತ, ಭೀಭತ್ಸ, ಕರುಣಾ ಮತ್ತು ಶಾಂತ ಮುಂತಾದ…
ಮಡಿಕೇರಿ : ಕೊಡಗು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಮುಲ್ಲೇಂಗಡ ಮಧೋಶ್ ಪೂವಯ್ಯ ಅವರನ್ನು ಪುನರ್ ನೇಮಕ ಮಾಡಲಾಗಿದೆ ಎಂದು ಚುಟುಕು ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ತೋಂಟದಾರ್ಯ ತಿಳಿಸಿದ್ದಾರೆ. ಪರಿಷತ್ತಿನ ತಾಲೂಕು ಅಧ್ಯಕ್ಷರನ್ನು ನೇಮಕ ಮಾಡುವ ಹೊಣೆಗಾರಿಕೆಯನ್ನು ಮಧೋಶ್ ಪೂವಯ್ಯ ಅವರಿಗೆ ನೀಡಲಾಗಿದೆ. ತೂಕ್ ಬೊಳಕ್ ಕಲೆ, ಕ್ರೀಡೆ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿರುವ ಮಧೋಶ್ ಪೂವಯ್ಯ ಪ್ರಸ್ತುತ ಕೊಡಗು ಪತ್ರಕರ್ತ ಸಂಘದ ವಿರಾಜಪೇಟೆ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ವಿರಾಜಪೇಟೆ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಇವರು ವಿವಿಧ ಸಂಘ ಸಂಸ್ಥೆಗಳಲ್ಲಿ ನಾನಾ ಹುದ್ದೆಗಳನ್ನು ಅಲಂಕರಿಸಿದ್ದಾರೆ.
ಕೊಣಾಜೆ: ಬೊಟ್ಟಿಕೆರೆಯ ಅಂಬುರುಹ ಯಕ್ಷ ಪ್ರತಿಷ್ಠಾನದ ವತಿಯಿಂದ ಅಂಬುರುಹದಲ್ಲಿ ಯಕ್ಷಶ್ರಾವಣ 2023 ಹಾಗೂ ದಿ. ಬೊಟ್ಟಿಕೆರೆ ಪುರುಷೋತ್ತಮ ಪೂಂಜ ವಿರಚಿತ ಯಕ್ಷಗಾನ ಪ್ರಸಂಗ ‘ಲೋಕಾಭಿರಾಮ’ ಕೃತಿ ಬಿಡುಗಡೆಕಾರ್ಯಕ್ರಮವು ದಿನಾಂಕ 17-09-2023ರಂದು ನಡೆಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮಂಗಳೂರು ವಿ.ವಿ ಡಾ.ಪಿ.ದಯಾನಂದ ಪೈ ಮತ್ತು ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ಶ್ರೀಪತಿ ಕಲ್ಲೂರಾಯ “ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಯಕ್ಷಗಾನದ ಹಿಮ್ಮೇಳ ಮತ್ತು ಮುಮ್ಮೇಳದಲ್ಲಿ ತೊಡಗಿಕೊಂಡು ಸವ್ಯಸಾಚಿಯಾಗಿ ಗುರುತಿಸಿಕೊಂಡವರು. ಜೊತೆಗೆ ಯಕ್ಷಗಾನ ಸಾಹಿತ್ಯ ಕ್ಷೇತ್ರದಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಓರ್ವ ವಿದ್ವತ್ ಪೂರ್ಣ ಕಲಾವಿದ” ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೊಟ್ಟಿಕೆರೆಯ ಅಂಬುರುಹ ಯಕ್ಷ ಪ್ರತಿಷ್ಠಾನದ ಅಧ್ಯಕ್ಷೆ ಶೋಭಾ ಪೂಂಜ ವಹಿಸಿದ್ದರು. ಪ್ರತಿಷ್ಠಾನದ ಉಪಾಧ್ಯಕ್ಷ ರಾಂ ಹೊಳ್ಳ ಸ್ವಾಗತಿಸಿ, ದೀವಿತ್ ಕೋಟ್ಯಾನ್ ಕೃತಿಯನ್ನು ಪರಿಚಯಿಸಿ, ಸದಾಶಿವ ಆಳ್ವ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಲೋಕಾಭಿರಾಮ ಪ್ರಸಂಗದ ಆಯ್ದ ಭಾಗದ ಯಕ್ಷಗಾನ ತಾಳಮದ್ದಳೆ ಹಾಗೂ ನರಶಾರ್ದೂಲ ಯಕ್ಷಗಾನ ಪ್ರದರ್ಶನ ನಡೆಯಿತು.
ಮಂಗಳೂರು : ಮಂಗಳೂರಿನ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ವಠಾರದಲ್ಲಿ ಶ್ರೀಕಾಳಿಕಾಂಬಾ ವಿನಾಯಕ ಯಕ್ಷಗಾನ ತರಬೇತಿ ಕೇಂದ್ರದ ವಿದ್ಯಾರ್ಥಿಗಳಿಂದ ‘ಶ್ರೀದೇವಿ ಮಹಿಷಮರ್ದಿನಿ’ ಎನ್ನುವ ಯಕ್ಷ ಕಥಾನಕವನ್ನು ದಿನಾಂಕ 17-09-2023ರ ಶ್ರೀವಿಶ್ವಕರ್ಮ ಪೂಜಾ ಮಹೋತ್ಸವದ ಸಂದರ್ಭದಲ್ಲಿ ಪ್ರದರ್ಶಿಸಲಾಯಿತು. ಯಕ್ಷ ಗುರು ಡಾ. ದಿನಕರ್ ಪಚ್ಚನಾಡಿಯವರ ನಿರ್ದೇಶನದಲ್ಲಿ ಪ್ರದರ್ಶಿಸಲ್ಪಟ್ಟ ಈ ಪ್ರಸಂಗದ ಹಿಮ್ಮೇಳದಲ್ಲಿ ಭಾಗವತರಾಗಿ ಭವ್ಯಶ್ರೀ ಮಂಡೆಕೋಲು ಅತ್ಯುತ್ತಮ ಸ್ವರ ಮಾಧುರ್ಯದ ಮೂಲಕ ಅಪಾರ ಜನ ಮೆಚ್ಚುಗೆಗೆ ಪಾತ್ರರಾದರು. ಹಾಗೆಯೇ ವಿದ್ಯಾರ್ಥಿಗಳು ಪ್ರಥಮ ಬಾರಿಗೆ ಪ್ರದರ್ಶನವನ್ನು ನೀಡಿದರೂ ಕೂಡ ಯಾವುದೇ ವೃತ್ತಿಪರರಿಗೆ ಕಡಿಮೆ ಇಲ್ಲದಂತೆ ತಮ್ಮ ಆಂಗಿಕ – ವಾಚಿಕ-ಶಾರೀರಿಕ ಅಭಿನಯದ ಮೂಲಕ ಕಲಾಸಕ್ತರ ಮನಸೂರೆಗೊಂಡರು. ಈ ಸಂದರ್ಭದಲ್ಲಿ ಯಕ್ಷ ತರಬೇತಿ ನೀಡಿದ ದಿನಕರ್ ಪಚ್ಚನಾಡಿಯವರನ್ನು ಅಭಿನಂದಿಸಲಾಯಿತು. ಶ್ರೀಕಾಳಿಕಾಂಬಾ ವಿನಾಯಕ ದೇವಸ್ಥಾನದ ಸದಸ್ಯರಾದ ಕೆ. ಕೆ. ವಿಠ್ಠಲ್ ಹಾಗೂ ಜಯಕರ ಟಿ ಉಪಸ್ಥಿತರಿದ್ದರು. ಯಕ್ಷಗಾನ ಕೇಂದ್ರದ ಅಧ್ಯಕ್ಷರಾದ ಶ್ರೀ ಗುರುರಾಜ್ ಕೆ ಜೆ, ಸಂಚಾಲಕರಾದ ನಾಗರಾಜ್ ಆಚಾರ್ ಹಾಗೂ ಕಾರ್ಯದರ್ಶಿ ಪ್ರದೀಪ್ ಆಚಾರ್ಯ ಉರ್ವ…
ಧಾರವಾಡ : ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆ, ಧಾರವಾಡ ವತಿಯಿಂದ 2023ನೆಯ ಸಾಲಿನ ರಾಘವೇಂದ್ರ ಪಾಟೀಲ ಕಥಾ ಪ್ರಶಸ್ತಿಗಾಗಿ ಅಪ್ರಕಟಿತ ಹಸ್ತಪ್ರತಿಗಳನ್ನು ಆಹ್ವಾನಿಸಲಾಗಿದೆ. ಈ ಪ್ರಶಸ್ತಿಯು ರೂ.20,000/- ನಗದು, ಪ್ರಶಸ್ತಿ ಫಲಕ ಮತ್ತು ಸನ್ಮಾನವನ್ನು ಒಳಗೊಂಡಿರುತ್ತದೆ. ಸ್ಪರ್ಧೆಗೆ ಮುಕ್ತ ಪ್ರವೇಶವಿದ್ದು, ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ. ಕನ್ನಡದ ಹಿರಿಯ-ಕಿರಿಯ ಲೇಖಕರೆಲ್ಲ ಭಾಗವಹಿಸಬಹುದು. ಅಪ್ರಕಟಿತ ಕಥೆಗಳು ಮತ್ತು ನಿಯತಕಾಲಿಕಗಳು, ವಿಶೇಷಾಂಕಗಳಲ್ಲಿ ಪ್ರಕಟವಾದ ಆದರೆ ಪುಸ್ತಕ ರೂಪದಲ್ಲಿ ಪ್ರಕಟವಾಗದಿರುವ ಕಥೆಗಳನ್ನು ಮಾತ್ರ ಸ್ಪರ್ಧೆಗೆ ಪರಿಗಣಿಸಲಾಗುವುದು. ಸ್ಪರ್ಧಿಗಳು ಕಡ್ಡಾಯವಾಗಿ 12 ಫಾಂಟು ಸೈಟಿನಲ್ಲಿ, A4 ಅಳತೆಯ ಕಾಗದದಲ್ಲಿ, 80-120 ಪುಟಗಳಿಗೆ ಮೀರದಂತೆ ಟೈಪು ಮಾಡಿ, ಬೈಂಡು ಮಾಡಲಾದ ಕಥೆಗಳ ಮೂರು ಪ್ರತಿಗಳನ್ನು ದಿನಾಂಕ 12-11-2023ರೊಳಗೆ ನಮ್ಮ ವಿಳಾಸಕ್ಕೆ ಕಳಿಸಬೇಕು. ಯಾವುದೇ ಕಾರಣಕ್ಕೂ ಹಸ್ತಪ್ರತಿಗಳನ್ನು ಹಿಂದಿರುಗಿಸಲಾಗುವುದಿಲ್ಲ, ಹೆಚ್ಚಿನ ಮಾಹಿತಿಗಾಗಿ ಸಾಹಿತ್ಯ ವೇದಿಕೆಯ ಸಂಚಾಲಕರನ್ನು ಸಂಪರ್ಕಿಸಿ. ಶ್ರೀ ವಿಕಾಸ ಹೊಸಮನಿ, ಸಂಚಾಲಕರು, ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆ, 2ನೆಯ ಕ್ರಾಸ್, 2ನೆಯ ಮೇನ್, ದಾನೇಶ್ವರಿ ನಗರ, ಹಾವೇರಿ -581110. ಮೊಬೈಲ್…
ಮುಂಬೈ : ಮಧುರತರಂಗ (ರಿ.) ದಕ್ಷಿಣ ಕನ್ನಡ, ಮಂಗಳೂರು, ಮಹಾರಾಷ್ಟ್ರದ ಕನ್ನಡ ಕಲಾಭಿಮಾನಿಗಳಿಗೆ ಹೃದಯಸ್ಪರ್ಶಿ ನಮನಗಳೊಂದಿಗೆ ಜಗದೀಶ್ ಶಿವಪುರ ಇವರ ಸಂಯೋಜನೆಯಲ್ಲಿ 50ರ ಸುವರ್ಣ ಸಂಭ್ರಮ ‘ಸ್ವರಕಂಠೀರವ’ ಡಾ. ರಾಜ್ ಸವಿನೆನಪು ಕಾರ್ಯಕ್ರಮವು ದಿನಾಂಕ 24-09-2023ನೇ ಭಾನುವಾರ ಸಂಜೆ ಗಂಟೆ 4ಕ್ಕೆ ಮುಂಬೈ, ಸಾಂತಕ್ರೂಸ್ (ಈಸ್ಟ್)ನ ಬಿಲ್ಲವರ ಅಸೋಸಿಯೇಶನ್ಸ್ ಆಡಿಟೋರಿಯಂನಲ್ಲಿ ನಡೆಯಲಿದೆ. ಇದೇ ಸಂದರ್ಭದಲ್ಲಿ ‘ಸ್ವರತಪಸ್ವಿ’, ‘ಕರ್ನಾಟಕ ಸ್ವರಕಂಠೀರವ’ ಜ್ಯು. ರಾಜ್ಕುಮಾರ್ ಖ್ಯಾತಿಯ ಜಗದೀಶ ಶಿವಪುರ ಇವರಿಂದ ಡಾ.ರಾಜ್ ಸವಿನೆನಪಿನ ಮಧುರ ಗೀತೆಗಳು ಮತ್ತು ಶ್ರೀಮತಿ ದೀಪಿಕಾ ದಿವಾಕರ್ ಆಚಾರ್ಯ ಇವರ ‘ನೃತ್ಯ ವೈವಿಧ್ಯತೆ’ ಪ್ರದರ್ಶನಗೊಳ್ಳಲಿದೆ. ಶ್ರೀ ಜಗದೀಶ್ ಶಿವಪುರ ಇವರ ಸ್ವಾಗತ ಪ್ರಸ್ತಾವನೆಯೊಂದಿಗೆ ಪ್ರಾರಂಭಗೊಳ್ಳಲಿರುವ ಈ ಸಮಾರಂಭಕ್ಕೆ ಶ್ರೀಮತಿ ಸವಿತಾ ಅಶೋಕ್ ಪುರೋಹಿತ್ ದೀಪ ಪ್ರಜ್ವಲನೆ ಮಾಡಲಿದ್ದಾರೆ. ನವಿ ಮುಂಬೈಯ ಪನ್ವೆಲ್ ನಲ್ಲಿರುವ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಅಧ್ಯಕ್ಷರಾದ ಸಿ.ಎ. ಶ್ರೀ ಶ್ರೀಧರ ಆಚಾರ್ಯ ಸಮಾರಂಭದ ಸಭಾಧ್ಯಕ್ಷತೆ ವಹಿಸಿದ್ದು, ‘ಕರ್ನಾಟಕ ಮಲ್ಲ’ ದಿನಪತ್ರಿಕೆಯ ಸಂಪಾದಕರಾದ ಶ್ರೀ ಚಂದ್ರಶೇಖರ್ ಪಾಲೆತ್ತಾಡಿ…
ಪುತ್ತೂರು : ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು,ಪುತ್ತೂರು ಇದರ ವತಿಯಿಂದ ಶ್ರೀ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯುತ್ತಿರುವ 57ನೇ ಸಾರ್ವಜನಿಕ ಶ್ರೀ ಗಣೇಶೋತ್ಸವದ ಅಂಗವಾಗಿ ‘ಶುಕ್ರ ಸಂಜೀವಿನಿ’ ಎಂಬ ತಾಳಮದ್ದಳೆ ದಿನಾಂಕ 21-09-2023ರಂದು ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀ ಮರೀಲು ನರಸಿಂಹ ಭಟ್ ಹಾಗೂ ಶ್ರೀ ಲಕ್ಷ್ಮೀ ನಾರಾಯಣ ಭಟ್ ಬಟ್ಯಮೂಲೆ ಹಾಗೂ ಚೆಂಡೆ ಮದ್ದಳೆಗಳಲ್ಲಿ ಶ್ರೀ ಪದ್ಯಾಣ ಜಯರಾಮ ಭಟ್ ಮತ್ತು ಶ್ರೀ ದಂಬೆ ಈಶ್ವರ ಶಾಸ್ತ್ರೀ ಸಹಕರಿಸಿದರು. ಮುಮ್ಮೇಳದಲ್ಲಿ ಬೃಹಸ್ಪತಿಯಾಗಿ ಶ್ರೀಮತಿ ಪ್ರೇಮಲತಾ ರಾವ್, ಶುಕ್ರಾಚಾರ್ಯರಾಗಿ ಶ್ರೀಮತಿ ಜಯಂತಿ ಹೆಬ್ಬಾರ್ ಮತ್ತು ಶ್ರೀಮತಿ ಶುಭಾ ಜೆ.ಸಿ.ಅಡಿಗ, ಕಚನಾಗಿ ಶ್ರೀಮತಿ ಶುಭಾ ಗಣೇಶ್, ದೇವಯಾನಿಯಾಗಿ ಶ್ರೀಮತಿ ಕಿಶೋರಿ ದುಗ್ಗಪ್ಪ ನಡುಗಲ್ಲು ಮತ್ತು ಶ್ರೀಮತಿ ಮನೋರಮಾ.ಜಿ.ಭಟ್, ವೃಷಪರ್ವನಾಗಿ ಶ್ರೀಮತಿ ಹರಿಣಾಕ್ಷಿ .ಜೆ.ಶೆಟ್ಟಿ ಹಾಗೂ ಧೂಮಕೇತುವಾಗಿ ಶ್ರೀಮತಿ ಶಾರದಾ ಅರಸ್ ಸಹಕರಿಸಿದರು. ಸಂಘದ ನಿರ್ದೇಶಕ ಶ್ರೀ ಭಾಸ್ಕರ ಬಾರ್ಯ ಸ್ವಾಗತಿಸಿ, ಶ್ರೀ ರಾಜೇಶ್ ಬನ್ನೂರು ವಂದಿಸಿದರು. ಶ್ರೀಗಣೇಶೋತ್ಸವ ಸಮಿತಿಯ…
ಉಡುಪಿ/ಮಂಗಳೂರು : ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣವಾಗಿ 50 ವರ್ಷ ಪೂರ್ಣಗೊಳ್ಳಲಿರುವ ಸುವರ್ಣ ಮಹೋತ್ಸವದ ಸಂದರ್ಭ ಕರ್ನಾಟಕ ಸಂಭ್ರಮ 50 ಹೆಸರಾಗಲಿ ಕರ್ನಾಟಕ ಉಸಿರಾಗಲಿ ಕನ್ನಡ ಎಂಬ ಶೀರ್ಷಿಕೆಯಡಿ ರಾಜ್ಯಾದ್ಯಂತ ವರ್ಷಪೂರ್ತಿ ವೈವಿಧ್ಯಮಯ, ವರ್ಣಮಯ ಹಾಗೂ ಅರ್ಥಪೂರ್ಣವಾಗಿ ಆಚರಿಸುವ ಮೂಲಕ ವಿಶೇಷ ಮೆರಗು ನೀಡಲು ರಾಜ್ಯ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉದ್ದೇಶಿಸಿದೆ. ಈ ಸಂಭ್ರಮ ಹೆಚ್ಚಿಸಲು ಕನ್ನಡ ನಾಡು-ನುಡಿ ಸಂಸ್ಕೃತಿಯನ್ನು ಬಿಂಬಿಸುವ ವಿಶಿಷ್ಟವಾದ ಲಾಂಛನ (ಲೋಗೋ)ವನ್ನು ಬಳಸಲು ತೀರ್ಮಾನಿಸಲಾಗಿದ್ದು, ಆಸಕ್ತರಿಂದ ಸುಂದರವಾದ ಲಾಂಛನದ ಮಾದರಿಗಳನ್ನು ಆಹ್ವಾನಿಸಲಾಗಿದೆ. ಆಯ್ಕೆಯಾಗುವ ಮಾದರಿ ಲಾಂಛನಕ್ಕೆ ರೂ.25,000/- ಬಹುಮಾನ ನಿಗದಿಪಡಿಸಲಾಗಿದೆ. ಲಾಂಛನದ ಮಾದರಿಯನ್ನು ಕಳುಹಿಸಲು ಸೆಪ್ಟೆಂಬರ್ 30 ಕೊನೆಯ ದಿನವಾಗಿರುತ್ತದೆ. ಆಸಕ್ತರು ಮಾಹಿತಿಗೆ https://www.kannadasiri.karnataka.gov.in ನೋಡಬಹುದು.
ಉಡುಪಿ : ಎರಡೂವರೆ ದಶಕಗಳ ಕಾಲ ವಿವಿಧ ಮೇಳಗಳಲ್ಲಿ ವೇಷಧಾರಿಯಾಗಿ ಕಲಾಸೇವೆ ಮಾಡಿದ ಯುವ ಕಲಾವಿದ ಹೆರಂಜಾಲು ರಾಜೇಂದ್ರ ಗಾಣಿಗ (41ವರ್ಷ) ಅಲ್ಪಕಾಲದ ಅಸೌಖ್ಯದಿಂದ ದಿನಾಂಕ 21-09-2023ರಂದು ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮಾರಣಕಟ್ಟೆ, ಹಾಲಾಡಿ, ಸೌಕೂರು, ನೀಲಾವರ ಮೇಳಗಳಲ್ಲಿ ಹಾಗೂ ಸುಮಾರು ಹತ್ತು ವರ್ಷಗಳ ಕಾಲ ಮಂದಾರ್ತಿ ಮೇಳದಲ್ಲಿ ಪುರುಷ ವೇಷಧಾರಿಯಾಗಿ ಕಲಾ ಸೇವೆಗೈದಿದ್ದಾರೆ. ಅವಿವಾಹಿತರಾಗಿದ್ದ ಇವರು ತಾಯಿ ಹಾಗೂ ಅಪಾರ ಸಂಖ್ಯೆಯ ಕಲಾಭಿಮಾನಿಗಳನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ಸೂಚಿಸಿದ್ದಾರೆ.
ಉಡುಪಿ : ರಾಗ ಧನ, ಉಡುಪಿ (ರಿ) ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರ್ಕಾರದ ಸಹಯೋಗದೊಂದಿಗೆ ಆಯೋಜಿಸುತ್ತಿರುವ ಕಲಾವಿಹಾರಿ ಶ್ರೀ ಎ.ಈಶ್ವರಯ್ಯ ಸ್ಮಾರಕ ಕಲಾಪ್ರವೀಣ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ರಾಗರತ್ನಮಾಲಿಕೆ -16 ‘ಭಾವಗಾನಸಿಂಚನ’ ಕಾರ್ಯಕ್ರಮವು ದಿನಾಂಕ 24-09-2023ರ ಭಾನುವಾರ ಕುಕ್ಕೆಹಳ್ಳಿಯ ಕನಸು ರೆಸಾರ್ಟಿನಲ್ಲಿ ನಡೆಯಲಿದೆ. ಸಂಜೆ 3.30ರಿಂದ ಆರಂಭವಾಗಲಿರುವ ಈ ಕಾರ್ಯಕ್ರಮದಲ್ಲಿ ಮೊದಲಿಗೆ ಹೊಸಬೆಟ್ಟಿನ ಕಲಾ ತರಂಗಿಣಿ ತಂಡದ ಶ್ರೀ ರಾಜೇಶ್ ರಾವ್ ಮತ್ತು ಶಿಷ್ಯರಿಂದ ವೇಣು ವಾದನ ನಡೆಯಲಿದ್ದು, ಶ್ರೀ ಬಾಲಚಂದ್ರ ಭಾಗವತ್ ಮೃದಂಗದಲ್ಲಿ ಸಹಕರಿಸಲಿದ್ದಾರೆ. ಬಳಿಕ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಅತಿಥಿ ಗಣ್ಯರು ಪ್ರೊ. ಮುರಳೀಧರ ಉಪಾಧ್ಯ ಹಿರಿಯಡಕ ಇವರಿಗೆ ಕಲಾವಿಹಾರಿ ಶ್ರೀ ಎ.ಈಶ್ವರಯ್ಯ ಸ್ಮಾರಕ ‘ಕಲಾಪ್ರವೀಣ’ ಪ್ರಶಸ್ತಿ ಪ್ರದಾನ ಮಾಡಲಿರುವರು. ಸಭಾಕಾರ್ಯಕ್ರಮದ ಬಳಿಕ ನಡೆಯಲಿರುವ ‘ಭಾವಗಾನಸಿಂಚನ’ ಕಾರ್ಯಕ್ರಮವದ ಹಾಡುಗಾರಿಕೆಯಲ್ಲಿ ಕೆ.ಆರ್.ರಾಘವೇಂದ್ರ ಆಚಾರ್ಯ, ಶ್ರೀಮತಿ ಗಾರ್ಗಿ ಎನ್ ಶಬರಾಯ, ಶ್ರೀಮತಿ ಶ್ರುತಿ ಗುರುಪ್ರಸಾದ್ ಹಾಗೂ ಕುಮಾರಿ ಶ್ರಾವ್ಯ ಬಾಸ್ರಿ ಭಾಗವಹಿಸಲಿದ್ದು, ತಬಲಾದಲ್ಲಿ ಎನ್.ಮಾಧವ ಆಚಾರ್ಯ,…