Subscribe to Updates
Get the latest creative news from FooBar about art, design and business.
Author: roovari
ತೀರ್ಥಹಳ್ಳಿ : ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ತೀರ್ಥಹಳ್ಳಿ ಮತ್ತು ಪ್ರಗತಿ ಪ್ರಕಾಶನ ಮೈಸೂರು ಇವರ ವತಿಯಿಂದ ಸರ್ಜಾಶಂಕರ್ ಹರಳಿಮಠ ಇವರ ಸಂಶೋಧನಾ ಕೃತಿ ‘ಕನ್ನಡತನ’ ದಿನಾಂಕ 28 ಸೆಪ್ಟೆಂಬರ್ 2024ರಂದು ತೀರ್ಥಹಳ್ಳಿಯಲ್ಲಿ ಲೋಕಾರ್ಪಣೆಗೊಂಡಿತು. ಈ ಕಾರ್ಯಕ್ರಮದಲ್ಲಿ ಕೃತಿ ಬಿಡುಗಡೆಗೊಳಿಸಿದ ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ಕೆ.ಆರ್ಾ. ದುರ್ಗಾದಾಸ್ ಇವರು ಮಾತನಾಡಿ ‘ದೇಶದಲ್ಲಿ ಜಾತಿ, ಕೋಮು ಸಂಘರ್ಷ ನಡೆದಾಗ ಸಾಮೂಹಿಕ ಬೆಂಬಲ ಇರುವುದಿಲ್ಲ. ಸೌಹಾರ್ದ, ಪ್ರೀತಿ ಬಯಸುವ ಬಹುಸಂಖ್ಯಾತರು ದೇಶದಲ್ಲಿದ್ದಾರೆ. ಆದರೆ ಒಗ್ಗಟ್ಟಿಗಾಗಿ ಧ್ವನಿಗೂಡಿಸುವಲ್ಲಿ ಹಿಂದೆ ಬಿದ್ದಿದ್ದಾರೆ. ಸಂಸ್ಕೃತ, ಹಿಂದಿ ಭಾಷಾ ಹೇರಿಕೆ ಭಿನ್ನವಾಗಿಲ್ಲ. ಕನ್ನಡದ ಯಜಮಾನಿಕೆಯ ಗಟ್ಟಿತನವನ್ನೇ ಕನ್ನಡದ ಕವಿಗಳು ಜಾಗೃತಗೊಳಿಸಿದ್ದಾರೆ. ಕುವೆಂಪು ಆ ಸಾಲಿಗೆ ಸೇರುವ ಅಗ್ರ ಗಣ್ಯರು. ಹಗೆತನ, ದ್ವೇಷ, ಅಸೂಯೆ ಬಿಟ್ಟು ಕನ್ನಡಿಗರು ಒಗ್ಗೂಡಬೇಕು. ಕನ್ನಡದ ಜೊತೆಗೆ ಬದುಕುವ ತುಳು, ಕೊಡವ, ಬಂಜಾರ ಮುಂತಾದ ಭಾಷೆಗಳಿಗೂ ಆದ್ಯತೆ ನೀಡಬೇಕು’ ಎಂದು ಸಲಹೆ ನೀಡಿ ‘ಭಾಷೆ ಸ್ವಾಯತ್ತ ಅಲ್ಲ. ಅದನ್ನು ನುಡಿಯುವ, ಆಡುವ ಮನುಜನ ಸ್ಥಾನಮಾನಕ್ಕೆ ಹೊಂದಿಕೊಂಡಿದೆ.…
ಬೆಂಗಳೂರು : ಕರ್ನಾಟಕ ಸಾಹಿತ್ಯ ಅಕಾಡೆಮಿಯು ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಗೊಟಗೋಡಿ, ಹಾವೇರಿ ಜಿಲ್ಲೆ ಇವರ ಸಹಯೋಗದಲ್ಲಿ ಗಿರಿಜನ ಉಪಯೋಜನೆಯಡಿ ‘ಕನ್ನಡ ಸಾಹಿತ್ಯ ಮತ್ತು ಸಾಂವಿಧಾನಿಕ ಮೌಲ್ಯಗಳು’ ಎಂಬ ಹೆಸರಿನಲ್ಲಿ ಮೂರು ದಿನಗಳ ಕಮ್ಮಟವನ್ನು ಅಕ್ಟೋಬರ್ ಕೊನೆಯ ವಾರದಲ್ಲಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಗೊಟಗೋಡಿ, ಹಾವೇರಿ ಜಿಲ್ಲೆಯಲ್ಲಿ ನಡೆಸಲು ಉದ್ದೇಶಿಸಿದ್ದು, ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತಿಯಿರುವ 20ರಿಂದ 45 ವರ್ಷ ವಯಸ್ಸುಳ್ಳ ಪರಿಶಿಷ್ಟ ಪಂಗಡಕ್ಕೆ ಸೇರಿದ ರಾಜ್ಯದ ಎಲ್ಲಾ ಭಾಗದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 08 ಅಕ್ಟೋಬರ್ 2024. ಆಸಕ್ತ ಅಭ್ಯರ್ಥಿಗಳು http://karnatakasahithyaacademy.org ನಿಂದ ಅರ್ಜಿ ನಮೂನೆ ಹಾಗೂ ವಿವರಗಳನ್ನು ಪಡೆದುಕೊಳ್ಳಬಹುದಾಗಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯು ರಿಜಿಸ್ಟ್ರಾರ್ ಕರಿಯಪ್ಪ ತಿಳಿಸಿದ್ದಾರೆ.
ಬೆಂಗಳೂರು : ಪರಂ ಹಿಸ್ಟರಿ ಸೆಂಟರ್ ಮತ್ತು ಪರಂ ಫೌಂಡೇಷನ್ ಇದರ ವತಿಯಿಂದ ಇತಿಹಾಸ ಮೇಲೊಂದು ಬೆಳಕು (ಯುವ ಮನಕ್ಕೆ ಭಾರತವನ್ನು ಅರಿಯುವ ಮಾರ್ಗ) ಎಂಬ ವಿಷಯದ ಬಗ್ಗೆ ‘ಬೀದಿ ನಾಟಕ ಸ್ಪರ್ಧೆ 2024’ಯನ್ನು ದಿನಾಂಕ 05 ಅಕ್ಟೋಬರ್ 2024ರಂದು ಬೆಂಗಳೂರಿನ ಬನಶಂಕರಿ 2ನೇ ಹಂತ, ಸುಚಿತ್ರ ಸಿನಿಮಾ ಮತ್ತು ಕಲ್ಚರಲ್ ಅಕಾಡೆಮಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಸ್ಪರ್ಧೆಯ ವಿಜೇತರಿಗೆ ಮೊದಲನೇ ಬಹುಮಾನ ರೂ.10,000/-, ಎರಡನೇ ಬಹುಮಾನ ರೂ.8,000/- ಮತ್ತು ಮೂರನೇ ಬಹುಮಾನ ರೂ.5,000/- ನಗದು ಬಹುಮಾನಗಳನ್ನು ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ 9066123286 ನ್ನು ಸಂಪರ್ಕಿಸಿರಿ.
ಕನ್ನಡದ ಮುಖ್ಯ ಲೇಖಕಿಯರಲ್ಲೊಬ್ಬರಾದ ಶ್ರೀಮತಿ ಸುನಂದಾ ಬೆಳಗಾಂವಕರ ಇವರ ‘ಕಜ್ಜಾಯ’, ‘ಕೈತುತ್ತು’, ‘ಕೊಡುವುದೇನು ಕೊಂಬುವುದೇನು’, ‘ಕಾಕ ಭುಶುಂಡಿ’ (ಲಲಿತ ಪ್ರಬಂಧಗಳ ಸಂಕಲನ), ‘ಮೃದ್ಗಂಧ’ (ಕಥಾಸಂಕಲನ), ‘ಶಾಲ್ಮಲಿ’ (ಕವನ ಸಂಕಲನ), ‘ನಾಸು’, ‘ಝವಾದಿ’, ‘ಕಾಯಕ ಕೈಲಾಸ’ (ಕಾದಂಬರಿ) ಎಂಬ ಕೃತಿಗಳನ್ನು ಪ್ರಕಟಿಸಿದ್ದಾರೆ. ಅವರ ಚೊಚ್ಚಲ ಕಾದಂಬರಿಯಾದ ‘ನಾಸು’ ಇವರಿಗೆ ಕನ್ನಡ ಸಾಹಿತ್ಯದಲ್ಲಿ ಭದ್ರ ನೆಲೆಯನ್ನು ಒದಗಿಸಿದೆ. ‘ನಾಸು’ ಎಂದರೆ ‘ನಾಯಿ ಸೂಳೆಮಗ’ ಎಂಬ ಬೈಗುಳ ಪದದ ಅಪಭ್ರಂಶವಾಗಿದೆ. ಆಕರ್ಷಕವಾದ ತಲೆಬರಹದ ಬದಲು ಇಂಥ ಶೀರ್ಷಿಕೆಯನ್ನು ಇಡುವುದರ ಮೂಲಕ ಲೇಖಕಿಯು ಹೊಸತನವನ್ನು ಮೆರೆದಿದ್ದಾರೆ. ವಿದ್ವತ್ತಿಗೆ ಹೆಸರಾದ ಮಾಧ್ವ ಬ್ರಾಹ್ಮಣ ಕುಟುಂಬಕ್ಕೆ ಸೇರಿದ ಅನಂತಾಚಾರ್ಯರು ಬುದ್ಧಿ ಪಳಗಿದ, ಶ್ರದ್ಧೆ ಬೆಳಗಿದ ಶಿಕ್ಷಕರಾಗಿದ್ದು, ಕಾಳಿದಾಸನ ನಾಟಕಗಳು, ಕಾವ್ಯಗಳು, ವೇದಶಾಸ್ತ್ರ ಪುರಾಣಗಳನ್ನು ಅರಗಿಸಿಕೊಂಡವರು. ಜಾಣರನ್ನು ಬೆಳಗಿಸುವ ಗುರುಗಳು. ಆದರೆ ದಡ್ಡರನ್ನು ದಾರಿಗೆ ಹಚ್ಚುವ ತಾಳ್ಮೆ ಇಲ್ಲದವರು. ಅವರ ಮಕ್ಕಳ ಪೈಕಿ ವಿಷ್ಣು ಮತ್ತು ಅರುಂಧತಿಯರು ಮೇಧಾವಿಗಳಾಗಿ ತಂದೆಯ ಪ್ರೀತಿಗೆ ಪಾತ್ರರಾದರೆ, ಹಿರಿಯ ಮಗನಾಗಿ ಹುಟ್ಟಿ, ಓದು ತಲೆಗೆ ಹತ್ತದೆ…
ಕಲಬುರಗಿ : ರಂಗಮಂಡಲ ಬೆಂಗಳೂರು ಮತ್ತು ರಾಷ್ಟ್ರಕೂಟ ಸಾಂಸ್ಕೃತಿಕ ಪ್ರತಿಷ್ಠಾನ ಆಯೋಜಿಸಿರುವ ಮನುಕುಲದ ನೋವಿಗೆ ಮದ್ದಾಗಲಿ ಕವಿತೆಗಳು ಜನಸಾಮಾನ್ಯರ ದನಿಯಾಗಲಿ ಕಾವ್ಯ ‘ಕಾವ್ಯ ಸಂಸ್ಕೃತಿ ಯಾನ’ ಕಾರ್ಯಕ್ರಮದ ತೃತೀಯ ಕವಿಗೋಷ್ಠಿಯನ್ನು ದಿನಾಂಕ 29 ಸೆಪ್ಟೆಂಬರ್ 2024ರಂದು ಬೆಳಿಗ್ಗೆ 10-00 ಗಂಟೆಗೆ ತೊಗರಿನಾಡು ಕಲಬುರಗಿಯ ಐಡಿಯಲ್ ಫೈನ್ ಆರ್ಟ್ಸ್ ಕಾಲೇಜಿನ ಕಲಾ ನಿಕೇತನದಲ್ಲಿ ಹಮ್ಮಿಕೊಳ್ಳಲಾಗಿದೆ. ಹಿರಿಯ ಸಾಹಿತಿಗಳಾದ ಡಾ. ಕಾಶಿನಾಥ ಅಂಬಲಗೆ ಇವರು ಕಲಬುರಗಿ ಕಾವ್ಯ ಸಂಸ್ಕೃತಿ ಯಾನದ ಸರ್ವಾಧ್ಯಕ್ಷರಾಗಿದ್ದು, ಹಿರಿಯ ಕವಿಗಳಾದ ಡಾ.ಬಸವರಾಜ ಸಾದರ ಇವರು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು. ಬೆಳಿಗ್ಗೆ 11-30 ಗಂಟೆಗೆ ನಡೆಯಲಿರುವ ಕವಿಗೋಷ್ಠಿ 1ರ ಅಧ್ಯಕ್ಷತೆಯನ್ನು ಕನಕ ಪ್ರಶಸ್ತಿ ಪುರಸ್ಕೃತ ಹಿರಿಯ ಲೇಖಕರಾದ ಡಾ. ಸ್ವಾಮಿರಾವ ಕುಲಕರ್ಣಿ ಇವರು ವಹಿಸಲಿದ್ದು ಹಾಗೂ ಮಧ್ಯಾಹ್ನ 2-00 ಗಂಟೆಗೆ ನಡೆಯಲಿರುವ ಕವಿಗೋಷ್ಠಿ 2ರ ಅಧ್ಯಕ್ಷತೆಯನ್ನು ಪ್ರಾಧ್ಯಾಪಕ ಮತ್ತು ಕಾದಂಬರಿಕಾರ್ತಿ ಡಾ. ಜಯದೇವಿ ಗಾಯಕವಾಡ ಇವರು ವಹಿಸಲಿರುವರು. ಸಂಜೆ ಸರ್ವಾಧ್ಯಕ್ಷರೊಂದಿಗೆ ಸಂವಾದ ಮತ್ತು ಸಮಾರೋಪ ಸಮಾರಂಭ ನಡೆಯಲಿದೆ.
ಮೈಸೂರು : ರಂಗಾಯಣ ಮೈಸೂರು ಇದರ ವತಿಯಿಂದ ರಂಗಾಯಣ ವಾರಾಂತ್ಯ ರಂಗಪ್ರದರ್ಶನದ ಪ್ರಯುಕ್ತ ಸಮುದಾಯ ರಾಯಚೂರು ಪ್ರಸ್ತುತ ಪಡಿಸುವ ಡಾ. ವಿಕ್ರಮ್ ವಿಸಾಜಿಯವರ ‘ರಕ್ತ ವಿಲಾಪ’ ನಾಟಕ ಪ್ರದರ್ಶನವು ದಿನಾಂಕ 29 ಸೆಪ್ಟೆಂಬರ್ 2024ರಂದು ಸಂಜೆ 6-00 ಗಂಟೆಗೆ ಮೈಸೂರು ರಂಗಾಯಣದ ಭೂಮಿಗೀತದಲ್ಲಿ ನಡೆಯಲಿದೆ. ಈ ನಾಟಕದ ನಿರ್ದೇಶನ ಪ್ರವೀಣ್ ರೆಡ್ಡಿ ಗುಂಜಹಳ್ಳಿ ಹಾಗೂ ಸಹ ನಿರ್ದೇಶನ ಶ್ರೀಮತಿ ನಿರ್ಮಲಾ ವೇಣುಗೋಪಾಲ ಇವರು ಮಾಡಿದ್ದು, ಸಂಗೀತ ಇನ್ಸಾಫ್ ಹೊಸಪೇಟೆ ನೀಡಿದ್ದು, ಬೆಳಕು – ಲಕ್ಷ್ಮಣ ಮಂಡಲಗೇರಾ, ಪ್ರಸಾಧನ – ವೆಂಕಟ್ ನರಸಿಂಹಲು ಹಾಗೂ ರಂಗ ಸಜ್ಜಿಕೆ ನಾಗರಾಜ ಸಿರವಾರ ಇವರುಗಳು ಸಹಕರಿಸಲಿದ್ದಾರೆ.
ಮೈಸೂರು : ನಟನ ರಂಗಶಾಲೆಯ ವತಿಯಿಂದ ನಟನ ಪಯಣ ರೆಪರ್ಟಿರಿ ತಂಡದ ಪ್ರಯೋಗದ ಪ್ರಯುಕ್ತ ದಿನಾಂಕ 29 ಸೆಪ್ಟೆಂಬರ್ 2024ರಂದು ಸಂಜೆ 6-30 ಗಂಟೆಗೆ ಮೈಸೂರಿನ ರಾಮಕೃಷ್ಣ ನಗರ, ನಟನ ರಂಗಶಾಲೆಯಲ್ಲಿ ‘ಅಂಧಯುಗ’ ನಾಟಕ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ಈ ನಾಟಕದ ಮೂಲ ರಚನೆ ಧರ್ಮವೀರ ಭಾರತಿ, ಕನ್ನಡಾನುವಾದ ಸಿದ್ಧಲಿಂಗ ಪಟ್ಟಣ ಶೆಟ್ಟಿ ಹಾಗೂ ತಿಪ್ಪೇಸ್ವಾಮಿ. ದಿಶಾ ರಮೇಶ್ ಸಂಗೀತ ಮತ್ತು ದೃಶ್ಯ ಸಂಯೋಜನೆ ವಿನ್ಯಾಸ ಮೇಘ ಸಮೀರ ಮಾಡಿದ್ದು, ಮಂಡ್ಯ ರಮೇಶ್ ನಿರ್ದೇಶನ ಮಾಡಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ 7259537777, 9480468327 ಮತ್ತು 9845595505 ಸಂಪರ್ಕಿಸಿರಿ.
ಬೆಂಗಳೂರು : ರಾಜ್ಯಾದ್ಯಂತ ಸಕ್ರಿಯವಾಗಿರುವ ಸಂಗೀತ-ನೃತ್ಯ ಕಲಾವಿದರ ಪರಿಚಯಾತ್ಮಕ ಪುಸ್ತಕ ಹೊರತರಲು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ನಿರ್ಧರಿಸಿದೆ. ಈ ವಿಷಯ ತಿಳಿಸಿದ ಅಕಾಡೆಮಿ ಅಧ್ಯಕ್ಷೆ ಶುಭಾ ಧನಂಜಯ, ಬಹುವರ್ಷಗಳಿಂದಲೂ ನನೆಗುದಿಗೆ ಬಿದ್ದಿದ್ದ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿದೆ. ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದೂಸ್ತಾನಿ ಸಂಗೀತ, ಸುಗಮ ಸಂಗೀತ, ಭರತನಾಟ್ಯ, ಕಥಾಕೀರ್ತನ ಮತ್ತು ಗಮಕ ಪ್ರಕಾರಗಳಲ್ಲಿ ಕಲಾಸೇವೆಯಲ್ಲಿ ತೊಡಗಿರುವ ಹಿರಿಯ ಮತ್ತು ಕಿರಿಯ ಕಲಾವಿದರ ಪರಿಚಯವನ್ನು ‘ನಮ್ಮ ಕಲಾವಿದರು’ ಶೀರ್ಷಿಕೆಯಡಿ ಪುಸ್ತಕ ರೂಪದಲ್ಲಿ ಹೊರತರಲಾಗುವುದು. ‘ನಮ್ಮ ಕಲಾವಿದರು’ ಶೀರ್ಷಿಕೆಯಡಿ ಸಂಗ್ರಹಿಸಲಾಗುವ ಎಲ್ಲಾ ಕಲಾಪ್ರಕಾರಗಳ ಕಲಾವಿದರ ಸಮಗ್ರ ಮಾಹಿತಿಯನ್ನು ಡಿಜಿಟಲೀಕರಣ ಮಾಡಿ ಅಕಾಡೆಮಿಯ ವೆಬ್‌ಸೈಟ್‌ನಲ್ಲಿ ಆಳವಡಿಸಲಾಗುವುದು. ರಾಜ್ಯದ ಎಲ್ಲೆಡೆ ಕಲಾಸೇವೆ ಮಾಡುತ್ತಿರುವ ಕಲಾವಿದರು ತಮ್ಮ ಸ್ವವಿವರಗಳನ್ನು ಅಕಾಡೆಮಿಯ ವೆಬ್ ಸೈಟ್ ageetanrityaacademykarnataka.gov.in ಅಲ್ಲಿರುವ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಕಳಿಸಬೇಕು ಎಂದು ಕೋರಿದ್ದಾರೆ. ಕಲಾವಿದರು ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಸಂಗೀತಕ್ಕೆ ಸಂಬಂಧಿಸಿದಂತೆ ಪಿ. ಶ್ರೀನಿವಾಸಮೂರ್ತಿ (9945194569), ಹಿಂದೂಸ್ತಾನಿ ಸಂಗೀತಕ್ಕೆ ನಿರಂಜನಮೂರ್ತಿ (8277766109), ನೃತ್ಯಕ್ಕಾಗಿ…
ವಿಟ್ಲ : ಮೃತ್ತಿಕಾ ಆರ್ಟ್ ಸ್ಕೂಲ್ ವತಿಯಿಂದ 1ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ನಾಲ್ಕು ದಿನಗಳ ‘ಆರ್ಟ್ ಕ್ಯಾಂಪ್’ನ್ನು ವಿಟ್ಲದ ಸ್ಕೂಲ್ ರೋಡ್, ಪ್ರಿಂಟ್ ಪಾಯಿಂಟ್ ಎದುರುಗಡೆ, ರಾಧ ಕೃಪಾ ಕಾಂಪೌಂಡ್, ಶ್ರೀ ವಿದ್ಯಾ ಟ್ಯೂಷನ್ ಸೆಂಟರ್ ಇಲ್ಲಿ ದಿನಾಂಕ 07 ಅಕ್ಟೋಬರ್ 2024ರಿಂದ 10 ಅಕ್ಟೋಬರ್ 2024ರವರೆಗೆ ಪ್ರತಿದಿನ ಬೆಳಗ್ಗೆ 9-00 ಗಂಟೆಯಿಂದ 4-00 ಗಂಟೆವರೆಗೆ ಹಮ್ಮಿಕೊಳ್ಳಲಾಗಿದೆ. ಹೆಸರು ನೋಂದಾಯಿಸಲು ದಿನಾಂಕ 04 ಅಕ್ಟೋಬರ್ 2024 ಕೊನೆಯ ದಿನವಾಗಿದ್ದು, ಹೆಚ್ಚಿನ ಮಾಹಿತಿಗಾಗಿ 6361183939 ಮತ್ತು 8310814115ನ್ನು ಸಂಪರ್ಕಿಸಿರಿ.
ಮಂಗಳೂರು : ಮಂಗಳೂರಿನ ಲೇಖಕಿಯರ ವಾಚಕಿಯರ ಸಂಘದ ಹಿರಿಯ ಸದಸ್ಯೆ ಬಿ. ಎಂ. ರೋಹಿಣಿಯವರ ಮಾತೃಶ್ರೀಯವರಾದ ದೇವಕಿಯಮ್ಮನವರ ಸ್ಮರಣಾರ್ಥ ಆಯೋಜಿಸಿದ ದತ್ತಿನಿಧಿ ಕಾರ್ಯಕ್ರಮ ‘ಜೀವ -ಭಾವ-ಯಾನ’ ದಿನಾಂಕ 13 ಸೆಪ್ಟೆಂಬರ್ 2024ರ ಶುಕ್ರವಾರದಂದು ಮಂಗಳೂರಿನ ಸಂತ ಅಲೋಶಿಯಸ್ ಪ್ರೌಢ ಶಾಲಾ ಸಭಾಂಗಣದಲ್ಲಿ ನಡೆಯಿತು. ವಿದ್ಯಾರ್ಥಿ ಆಯುಷ್ ಪ್ರೇಂ ಹಾಡಿದ ಕುವೆಂಪು ಅವರ ‘ಮುಚ್ಚುಮರೆಯಿಲ್ಲದೆಯೇ’ ಆಶಯಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಶಾಲೆಯ ಕನ್ನಡ ಅಧ್ಯಾಪಿಕೆ ಕ್ರಿಸ್ ಎವರ್ಟ್ ಡಿಸೋಜ ಅವರು ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಲೆಯ ಮುಖ್ಯೋಪಾಧ್ಯಾಯರಾದ ಫಾ. ಜಾನ್ಸನ್ ಪಿಂಟೋ ಎಸ್. ಜೆ. ಮಾತನಾಡಿ ‘’ಜೀವನ ಅಂದರೆ ಬರಿಯ ವಿದ್ಯೆ ಮತ್ತು ನೌಕರಿಯಲ್ಲ. ಓದು ಹಾಗೂ ಜ್ಞಾನದ ಮೂಲ. ಓದಿನ ಜೊತೆ ಬರೆಯುವ ಹವ್ಯಾಸ ಬೆಳೆಸಿಕೊಂಡರೆ ವೈಚಾರಿಕತೆ ಹೆಚ್ಚುತ್ತದೆ.” ಎಂದು ವಿದ್ಯಾರ್ಥಿಗಳಿಗೆ ಓದಿನ ಮಹತ್ವವನ್ನು ತಿಳಿಸಿದರು. ಪ್ರಾಸ್ತಾವಿಕ ಮಾತನಾಡಿದ ದತ್ತಿನಿಧಿಯ ಪೋಷಕರಾದ ಬಿ. ಎಂ. ರೋಹಿಣಿ “ಪ್ರತಿಯೊಬ್ಬನ ಮನಸಿನೊಳಗೆ ರಾಕ್ಷಸನಿದ್ದಾನೆ ಹಾಗೂ ದೇವತೆಯರೂ ಇದ್ದಾರೆ. ಹೃದಯದೊಳಗಿನ ದೇವತೆಯನ್ನು ಜಾಗೃತವಾಗಿರಿಸಿ ರಾಕ್ಷಸನನ್ನು ತುಳಿಯಬೇಕಾದರೆ…