Subscribe to Updates
Get the latest creative news from FooBar about art, design and business.
Author: roovari
ಕೋಟ : ಯಶಸ್ವೀ ಕಲಾವೃಂದ (ರಿ.) ಕೊಮೆ, ತೆಕ್ಕಟ್ಟೆ ಸಂಸ್ಥೆಯ ಪುಟಾಣಿಗಳ ‘ಯಕ್ಷಗಾನ ಪೂರ್ವರಂಗ ಪ್ರಾತ್ಯಕ್ಷಿಕೆ’ಯು ದಿನಾಂಕ 15-09-2023ರಂದು ಕೋಟ ವಿವೇಕ ಪದವಿ ಪೂರ್ವ ಕಾಲೇಜಿನ ಎಮ್.ಜಿ.ಎಮ್.ಆಡಿಟೋರಿಯಂ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ದೀವಟಿಕೆಗೆ ಎಣ್ಣೆ ಹಾಕುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಕೋಟ ವಿವೇಕ ವಿದ್ಯಾ ಸಂಸ್ಥೆಯ ಪ್ರಾಂಶುಪಾಲರಾದ ಜಗದೀಶ ನಾವುಡ “ಯಕ್ಷಗಾನದ ಮೂಲ ಸತ್ವವು ಯಕ್ಷರಂಗದಲ್ಲಿ ವಿರಳವಾಗಿದೆ. ಪೂರ್ವರಂಗ ಪ್ರಾತ್ಯಕ್ಷಿಕೆಯ ಮೂಲಕ ರಂಗದಲ್ಲಿ ಎಳೆ ಎಳೆಯಾಗಿ ಮಕ್ಕಳಿಗೆ ಬಿತ್ತರಿಸುವ ಕಾರ್ಯ ಮಹತ್ತರವಾದದ್ದು. ಯಶಸ್ವೀ ಕಲಾವೃಂದ ಹಲವಾರು ವರ್ಷಗಳಿಂದ ಅತ್ಯುನ್ನತ ಕಾರ್ಯಕ್ರಮವನ್ನು ಆಯೋಜಿಸಿಕೊಂಡು ಮೆರೆದಿರುವುದನ್ನು ಹತ್ತಿರದಿಂದ ಬಲ್ಲೆವು. ಚಿಣ್ಣರ ಮೂಲಕವೇ ಚಿಣ್ಣರಿಗೆ ಕಲೆಯನ್ನು ಉಣಿಸಿದಾಗ ಹೆಚ್ಚು ಫಲಕಾರಿಯಾಗುವುದರಲ್ಲಿ ಸಂಶಯವಿಲ್ಲ” ಎಂದು ಅಭಿಪ್ರಾಯ ಪಟ್ಟರು. ಗೌರವ ಉಪಸ್ಥಿತಿಯಲ್ಲಿ ವಿವೇಕ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾದ್ಯಾಯರಾದ ಭಾಸ್ಕರ ಆಚಾರ್ಯ, ಕೋಟ ವಿದ್ಯಾ ಸಂಘದ ಜೊತೆ ಕಾರ್ಯದರ್ಶಿಗಳಾದ ಮಂಜುನಾಥ ಉಪಾಧ್ಯ, ಯಕ್ಷ ಗುರು ಪ್ರಾಚಾರ್ಯ ದೇವದಾಸ್ ರಾವ್ ಕೂಡ್ಲಿ, ಕಾರ್ಯದರ್ಶಿ ವೆಂಕಟೇಶ ವೈದ್ಯ ಉಪಸ್ಥಿತರಿದ್ದರು. ವಿವೇಕ ಬಾಲಕಿಯರ…
ಪುತ್ತೂರಿನ ನೆಲದ ಮಹತ್ವವನ್ನು ಜಗತ್ತಿನ ಸಾಂಸ್ಕೃತಿಕ ಲೋಕಕ್ಕೆಲ್ಲ ತಿಳಿಯುವ ಹಾಗೆ ಮಾಡಿದ ಇಬ್ಬರು ಮಹನೀಯರೆಂದರೆ… ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ. ಶಿವರಾಮ ಕಾರಂತ ಮತ್ತು ಪದ್ಮಶ್ರೀ ಪ್ರಶಸ್ತಿ ಪಡೆದ ಬಿ.ವಿ. ಕಾರಂತ. ಡಾ. ಶಿವರಾಮ ಕಾರಂತರು, ಬಿ.ವಿ. ಕಾರಂತರಂತಹ ಹಿರಿಯರು ರಂಗಭೂಮಿಯಲ್ಲಿ ಸಾಂಸ್ಕೃತಿಕ ಶಿಕ್ಷಣವನ್ನು ನಾಡಿನಾದ್ಯಂತ ಪಸರಿಸುವುದರಲ್ಲಿ ಹೆಸರು ಮಾಡಿದವರು, ಮಾತ್ರವಲ್ಲ ನಾಡಿನ ಎಲ್ಲರ ಸಾಂಸ್ಕೃತಿಕ ಬದುಕಿನಲ್ಲಿ ಎಚ್ಚರವಾಗಿಯೂ ಕೆಲಸ ಮಾಡಿದವರು. ಮುಖ್ಯವಾಗಿ ಮಕ್ಕಳ ಸಾಂಸ್ಕೃತಿಕ ಶಿಕ್ಷಣಕ್ಕೆ ಬಹುಮುಖ್ಯ ಕೊಡುಗೆ ನೀಡಿದವರು ಶಿವರಾಮ ಕಾರಂತರು. ಇವರು ಪುತ್ತೂರನ್ನು ಅರಸಿ ಬಂದು ಇಲ್ಲಿ ನೆಲೆಯಾಗಿ ಸುದೀರ್ಘ ಕಾಲ ತಮ್ಮ ಸಾಹಿತ್ಯ, ರಂಗಭೂಮಿ, ಶಿಕ್ಷಣ, ಪರಿಸರ ಮುಂತಾದ ಹಲವು ಹತ್ತು ಮುಖಗಳನ್ನು ತೆರೆದಿಡುತ್ತಾರೆ. ಬಿ.ವಿ. ಕಾರಂತರು ಪುತ್ತೂರಿಗೆ ಬಂದು ಇಲ್ಲಿ ನಿಲ್ಲದೆ ‘ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’ ಎನ್ನುತ್ತಾ ಜಗದಗಲಕ್ಕೆ ಜಂಗಮರ ಹಾಗೆ ಪಯಣ ನಡೆಸುತ್ತಾ ರಂಗಭೂಮಿಯ ಬಹುಮುಖ್ಯ ಆಯಾಮಗಳ ಸಾಧ್ಯತೆಗಳನ್ನು ಪರಿಚಯಿಸುತ್ತಾರೆ. ಕನ್ನಡದಲ್ಲಿ ಒಂದು ಮಾತಿದೆ. ‘ಹತ್ತೂರು ಕೊಟ್ಟರೂ ಪುತ್ತೂರು ಬಿಡ’ ಎಂಬುದಾಗಿ. ಪುತ್ತೂರಿನ…
ಮಂಗಳೂರು : ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕರ್ನಾಟಕ ಕರಾವಳಿ ನೃತ್ಯ ಕಲಾ ಪರಿಷತ್ ಇದರ ವತಿಯಿಂದ ದಿನಾಂಕ 24-12-2023 ಹಾಗೂ 25-12-2023ರಂದು ಉಡುಪಿ ಅಂಬಲಪಾಡಿಯ ಜನಾರ್ದನ ಮಹಾಕಾಳಿ ದೇವಸ್ಥಾನದ ಭವಾನಿ ಮಂಟಪದಲ್ಲಿ ಹಮ್ಮಿಕೊಳ್ಳಲಿರುವ ಎರಡು ದಿನಗಳ ಶಾಸ್ತ್ರೀಯ ನೃತ್ಯ ಕಲಾವಿದರ ನೃತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಕರಾವಳಿಯ ಮೂಲದ ನೃತ್ಯ ವಿದ್ವಾಂಸ ನಾಟ್ಯಾಚಾರ್ಯ ಪ್ರೊಫೆಸರ್ ಕೆ.ರಾಮಮೂರ್ತಿ ರಾವ್ ಇವರನ್ನು ಸರ್ವಾನುಮತಿಯಿಂದ ಆಯ್ಕೆ ಮಾಡಲಾಯಿತು. ಪ್ರೊ.ಕೆ.ರಾಮಮೂರ್ತಿಯವರು ಪ್ರಸ್ತುತ ಮೈಸೂರಿನಲ್ಲಿ ನೆಲೆಸಿದ್ದು ನೂಪುರ ಎಂಬ ನೃತ್ಯ ಸಂಸ್ಥೆಯ ಮೂಲಕ ಕಲಾ ಸೇವೆಯನ್ನು ಮಾಡುತ್ತಿದ್ದಾರೆ. ಒರ್ವ ಕಲಾವಿದರಾಗಿ, ಗುರುವಾಗಿ, ನೃತ್ಯ ನಿರ್ದೇಶಕರಾಗಿ, ಕಲಾ ವಿಮರ್ಶಕರಾಗಿ ಮತ್ತು ಬರಹಗಾರರಾಗಿ ನೃತ್ಯಕ್ಷೇತ್ರದಲ್ಲಿ ಅವರದ್ದು ವೈವಿಧ್ಯಮಯ ವ್ಯಕ್ತಿತ್ವ. ನಾಟ್ಯಾಚಾರ್ಯ ದಿ.ವಿಷ್ಣುದಾದಾಸ್ ಇವರಲ್ಲಿ ನೃತ್ಯಭ್ಯಾಸ ಮೈಸೂರಿನ ಆಸ್ಥಾನ ವಿದ್ವಾನ್ ಎಸ್.ಎನ್.ಮರಿಯಪ್ಪ ಮತ್ತು ಲಕ್ಷ್ಮೀಪತಿ ಭಾಗವತರಿಂದ ಸಂಗೀತಭ್ಯಾಸ ಮಾಡಿರುವರು. ನಟುವಾಂಗದಲ್ಲಿ. ವಿಶೇಷ ಪರಿಣತಿ ಹೊಂದಿರುವ ಇವರು ಭರತನಾಟ್ಯದ ಜೂನಿಯರ್ ಸೀನಿಯರ್ ವಿದ್ವತ್ ಈ ಎಲ್ಲಾ ಪರೀಕ್ಷೆಗಳಲ್ಲೂ ರಾಂಕ್ ವಿಜೇತರು. ನೃತ್ಯಕ್ಕೆ ಸಂಬಂಧಿಸಿದ ನೂರಾರು…
ಇತೀಚಿನ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಲನಚಿತ್ರ ಖ್ಯಾತಿಯ ಗಗನ್ ರಾಮ್ ಪ್ರಸಕ್ತ ಸಾಲಿನ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಗೆ ಆಯ್ಕೆಯಾದ ಕರ್ನಾಟಕದ ಏಕೈಕ ರಂಗ ವಿದ್ಯಾರ್ಥಿ. ಶಾಲಾ ದಿನಗಳಿಂದ, ಅಂದರೆ 2005 ರಿಂದ ಇಲ್ಲಿಯವರೆಗೂ ಸುಮಾರು 18 ವರ್ಷಗಳಿಂದ ರಂಗಭೂಮಿಯಲ್ಲಿ ಗಗನ್ ರಾಮ್ ತೊಡಗಿಕೊಂಡಿರುತ್ತಾರೆ. ಖ್ಯಾತ ಸಾಹಿತಿಗಳಾದ ಡಿ.ಆರ್.ನಾಗರಾಜ್ ಅವರ ಶ್ರೀಮತಿಯವರಾದ ಸಿ.ಎನ್.ಗಿರಿಜಮ್ಮ ಇವರಿಂದ ರಂಗಭೂಮಿ ಪರಿಚಯವಾಯಿತು. ಶಾಲಾ ದಿನಗಳಲ್ಲಿ ಗಗನ್ ರಾಮ್ ಮಾಡಿದ ಪ್ರಮುಖ ನಾಟಕಗಳೆಂದರೆ ‘ಮಾಮಾ ಮೋಶಿ’, ‘ಗಾಂಪರ ಗುಂಪು’, ‘ಕಣ್ಣಿಗೆ ಮಣ್ಣು’. ಶಾಲಾ ಮತ್ತು ಕಾಲೇಜು ದಿನಗಳಲ್ಲಿ ಆರಂಭವಾದ ರಂಗಭೂಮಿಯ ನಂಟನ್ನು ಮುಂದುವರಿಸುತ್ತ, ಮುಂದೆ 2010 ರಿಂದ ಬೆಂಗಳೂರಿನ ಸುಮಾರು 26ಕ್ಕೂ ಹೆಚ್ಚು ಹವ್ಯಾಸಿ ಮತ್ತು ವೃತ್ತಿಪರ ತಂಡಗಳಲ್ಲಿ ಇದುವರೆಗೂ 80ಕ್ಕೂ ಹೆಚ್ಚು ನಾಟಕಗಳಲ್ಲಿ ಭಾಗವಹಿಸಿದ್ದಾರೆ ಮತ್ತು ಅವುಗಳ ಒಟ್ಟು 550ಕ್ಕೂ ಹೆಚ್ಚು ಪ್ರದರ್ಶನಗಳಲ್ಲಿ ನಟನಾಗಿ ರಂಗದ ಮೇಲೆ ಕಾಣಿಸಿಕೊಂಡಿರುತ್ತಾರೆ. ಎಂ.ಬಿ.ಎ ಸ್ನಾತಕೋತ್ತರ ಪದವೀಧರರಾಗಿರುವ ಗಗನ್ ರಾಮ್, ಕಲೆಯನ್ನೇ ವೃತ್ತಿಯಾಗಿಸಿಕೊಳ್ಳಬೇಕೆಂದು ನಿರ್ಧರಿಸಿದ ನಂತರ 2018ರಲ್ಲಿ ನೀನಾಸಂ ರಂಗ…
ಪುತ್ತೂರು : ದ.ಕ ಜಿಲ್ಲಾ ಕ.ಸಾ.ಪ ಪುತ್ತೂರು ತಾಲೂಕು ಘಟಕ ಮತ್ತು ಉಪ್ಪಿನಂಗಡಿ ಹೋಬಳಿ ಘಟಕದ ನೇತೃತ್ವದಲ್ಲಿ ಹಾಗೂ ರೋಟರಿ ಕ್ಲಬ್ ಉಪ್ಪಿನಂಗಡಿ ಇದರ ಸಂಚಾಲಕತ್ವದಲ್ಲಿ ಆಯೋಜಿಸುವ ಪುತ್ತೂರು ತಾಲೂಕು ಮಟ್ಟದ ಭಾಷಣ ಸ್ಪರ್ಧೆ ಹಾಗೂ ದೇಶಭಕ್ತಿ ಗೀತೆ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಸ್ಪರ್ಧೆಯು ದಿನಾಂಕ 01-10-2023ರ ಆದಿತ್ಯವಾರದಂದು ಉಪ್ಪಿನಂಗಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ. ಈ ಎರಡೂ ಸ್ಪರ್ಧೆಯು ಪ್ರಾಥಮಿಕ ಶಾಲಾ ವಿಭಾಗ, ಪ್ರೌಢಶಾಲಾ ವಿಭಾಗ, ಕಾಲೇಜು ವಿಭಾಗ ಮತ್ತು ಸಾರ್ವಜನಿಕ ವಿಭಾಗದಲ್ಲಿ ನಡೆಯಲಿದೆ. ವಿಜೇತರಿಗೆ ಪ್ರಥಮ, ದ್ವಿತೀಯ, ತೃತೀಯ ಹಾಗೂ ಪ್ರೋತ್ಸಾಹಕ ಬಹುಮಾನವನ್ನು ನೀಡಿ ಗೌರವಿಸಲಾಗುವುದು. ನಿಯಮಗಳು : ಮೂರು ನಿಮಿಷದ ಕಾಲಾವಕಾಶ, ಸ್ಪರ್ಧೆಯ ವಿಷಯ ಗಾಂಧಿ ಜಯಂತಿ/ಸ್ವಾತಂತ್ರ್ಯ/ ದೇಶಭಕ್ತಿ ಯಾವುದೇ ವಿಷಯವನ್ನು ಆಯ್ಕೆ ಮಾಡಬಹುದು, ದೇಶಭಕ್ತಿ ಗೀತೆಗೆ ಕರೋಕೆ ಬಳಸಲು ಅವಕಾಶವಿಲ್ಲ, ಸಮೂಹ ಗೀತೆಗೆ ಅವಕಾಶವಿಲ್ಲ, ಜಾತಿ, ಮತ, ಧರ್ಮ ನಿಂದನೆಗೆ ಹಾಗೂ ರಾಜಕೀಯ ವಿಷಯಗಳಿಗೆ ಅವಕಾಶ ಇಲ್ಲ. ಪುತ್ತೂರು ತಾಲೂಕಿನಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು, ಹಾಗೂ ಪುತ್ತೂರು…
ಮಂಗಳೂರು : ಆರ್ಟ್ ಕೆನರಾ ಟ್ರಸ್ಟ್, ಮಂಗಳೂರು ಮತ್ತು ಕವಿತಾ ಕುಟೀರ, ಪೆರಡಾಲ ಇವರ ಸಹಯೋಗದಲ್ಲಿ ಕಾಸರಗೋಡಿನ ಪೆರಡಾಲದಲ್ಲಿರುವ ನವಜೀವನ ಹೈಸ್ಕೂಲಿನ ಹಿರಿಯ ವಿದ್ಯಾರ್ಥಿಗಳ ಸಹಕಾರದೊಂದಿಗೆ ಆಯೋಜಿಸಲಾಗುವ ನೂರ ಒಂದು(101) ಕತೆ ಮತ್ತು ಕವನಗಳನ್ನು ಒಳಗೊಂಡ ಸಂಕಲನವನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವವರಿದ್ದು ಅವಕಾಶ ಪಡೆಯುವುದಕ್ಕಾಗಿ ತಮ್ಮ ಬರಹಗಳನ್ನು ದಿನಾಂಕ 30-10-2023ರ ಒಳಗಾಗಿ ಸಲ್ಲಿಸಲು ಕೋರಲಾಗಿದೆ. ಕನ್ನಡ ಭಾಷೆಯಲ್ಲಿ ರಚಿತವಾದ ಕತೆ ಮತ್ತು ಕವನಗಳನ್ನು ಕಳುಹಿಸಲು ಅವಕಾಶವಿದ್ದು, ಆಯ್ಕೆಯಾದ ಬರಹಗಳನ್ನು 30-11-2023ರ ಒಳಗೆ ತಿಳಿಸಲಾಗುವುದು. ಆಯ್ಕೆಯಲ್ಲಿ ತೀರ್ಪುಗಾರರ ನಿರ್ಧಾರವೇ ಅಂತಿಮವಾಗಿರುತ್ತದೆ. ಆಯ್ಕೆಯಾದ ಬರಹಗಾರರಿಗೆ ಸಂಕಲನದ ಬಿಡುಗಡೆ ಸಂದರ್ಭದಲ್ಲಿ ಪ್ರಮಾಣಪತ್ರದೊಂದಿಗೆ ಪುಸ್ತಕವನ್ನು ಕೊಡಲಾಗುವುದು. ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಹುಟ್ಟಿ ಬೆಳೆದ ಹಾಗೂ ವಿದ್ಯಾರ್ಥಿಗಳಾಗಿರುವ ಎಲ್ಲರಿಗೂ ಭಾಗವಹಿಸಲು ಅವಕಾಶವಿದ್ದು, ಲೇಖಕರು 18 ರಿಂದ 35 ವರ್ಷದ ಒಳಗಿನವರಾಗಿರಬೇಕು. (ಜನವರಿ 1988 ರಿಂದ ದಶಂಬರ 2004ರ ಮಧ್ಯೆ ಜನಿಸಿದವರು). 300 ಪದಗಳನ್ನು ಮೀರದಂತೆ ಕವನ ಮತ್ತು 500 ಪದಗಳನ್ನು ಮೀರದಂತೆ ಸಣ್ಣ ಕತೆ…
ಮಂಗಳೂರು : ಬೆಸಂಟ್ ಹಳೆ ವಿದ್ಯಾರ್ಥಿ ಸಂಘ ವಸಂತ ಪ್ರೇಮಿ ಮಂಡಳಿಯ ವತಿಯಿಂದ ಅಂತರ್ ಶಾಲಾ ಕರ್ನಾಟಕ ಶಾಸ್ತ್ರೀಯ ಸಂಗೀತ, ವಾದ್ಯ ಸಂಗೀತ, ಕನ್ನಡ ಭಾಷಣ ಹಾಗೂ ಭಕ್ತಿಗೀತೆ ಸ್ಪರ್ಧೆಗಳು ಬೆಸಂಟ್ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ದಿನಾಂಕ 12-09-2023ರಂದು ಅಧ್ಯಕ್ಷೆ ಕಾತ್ಯಾಯಿನಿ ರಾವ್ ಇವರ ನೇತೃತ್ವದಲ್ಲಿ ನಡೆಯಿತು. ಬೆಸಂಟ್ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಸತೀಶ್ ಶೆಟ್ಟಿಯವರು ಸಂಸ್ಥೆಯ ಅಧ್ಯಕ್ಷ ಮಣೇಲ್ ಅಣ್ಣಪ್ಪ ನಾಯಕ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ನಾಯಕ್ ರೂಪ್ ಸಿಂಗ್, ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ತ್ರಿವೇಣಿ ಮತ್ತು ಅಧ್ಯಕ್ಷೆ ಕಾತ್ಯಾಯಿನಿ ರಾವ್ ಇವರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಪ್ರಾಥಮಿಕ ಶಾಲೆಗೆ ರೂ.10,000/- ದೇಣಿಗೆಯನ್ನೂ ಹಾಗೂ ಹೈಸ್ಕೂಲ್ ವಿಭಾಗದಿಂದ ಇಬ್ಬರು ಮತ್ತು ಕಾಲೇಜು ವಿಭಾಗದಿಂದ ಇಬ್ಬರಿಗೆ ವಿದ್ಯಾರ್ಥಿ ವೇತನ ನೀಡಲಾಯಿತು. ಕಾರ್ಯಕ್ರಮವನ್ನು ಹರಿಣಿ ಜೆ. ಮತ್ತು ಭಾರತಿ ಗಣೇಶ್ ನಿರೂಪಿಸಿ, ವಸಂತಿ ದೇವೇಂದ್ರ ವಂದಿಸಿದರು. ಸ್ಪರ್ಧಾ ವಿಜೇತರು: ಕರ್ನಾಟಕ ಶಾಸ್ತ್ರೀಯ ಸಂಗೀತ…
ಬೈಲೂರು : ಬೈಲೂರು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಸಿಂಹ ಮಾಸದ 5ನೇ ಕಾರ್ಯಕ್ರಮ ದಿನಾಂಕ 15-09-2023 ಶುಕ್ರವಾರ ಸಂಜೆ ಗಂಟೆ 6ರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವು ವಿದ್ವಾನ್ ಮಧೂರು ಬಾಲಸುಬ್ರಹ್ಮಣ್ಯರವರಿಂದ ಹಾಗೂ ಅವರ ಶಿಷ್ಯರಿಂದ ನೆರವೇರಿತು. ವಯೊಲಿನ್ ನಲ್ಲಿ ಶ್ರೀಧರ್ ಆಚಾರ್ ಮತ್ತು ಮೃದಂಗದಲ್ಲಿ ಬಾಲಚಂದ್ರ ಭಾಗವತ್ ಸಹಕರಿಸಿದರು. ಕಾರ್ಯದರ್ಶಿ ಶ್ರೀಯುತ ನಾರಾಯಣ ದಾಸ್ ಉಡುಪ ಕಲಾವಿದರನ್ನು ಸ್ವಾಗತಿಸಿ, ದೀಪ ಬೆಳಗಿಸುವುದರೊದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಹೆಚ್ಚು ದೇವಿ ಕೃತಿಗಳನ್ನು ಶಿಷ್ಯೆಯರಿಂದ ಹಾಡಿಸಿ, ಕೊನೆಗೆ ಫರಸ್ ರಾಗದ ಅದಿತಾಳದ ತಿಲ್ಲಾನದೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡಿತು. ಕು.ಶ್ರಾವಣಿ ಶಾಸ್ತ್ರಿ, ಕು.ಜೇತ್ರ ಮಯ್ಯ, ಕು.ಹಿತಾ ಮಯ್ಯ, ಡಾ.ರಶ್ಮಿ ನಾಯಕ್, ಮಾ.ಯಶಸ್ವೀ ನಾಯಕ್, ಸ್ವಾತಿ ರಾವ್, ಸರಸ್ವತಿ ಉಡುಪ, ಸಪ್ನಾ ಕೊಳತ್ತಾಯ, ಶ್ರಾವ್ಯ ಬಾಸ್ತ್ರಿ, ರಂಜನಿ ಸಾಮಗ ಇವರೆಲ್ಲಾ ಇಂದು ಗುರುಗಳ ಜೊತೆಯಲ್ಲಿ ಹಾಡಿ ಮಹಿಷ ಮರ್ದಿನಿ ದೇವರ ಸನ್ನಿಧಿಯಲ್ಲಿ ಸಂಗೀತ ಸೇವೆ ಅರ್ಪಣೆ ಮಾಡಿದಾಗ, ರಾಮಕೃಷ್ಣ ಕೊಡಂಚರು ಧನ್ಯವಾದ ಸಮರ್ಪಸಿದರು.
ಮಂಗಳಗಂಗೋತ್ರಿ : ಮಂಗಳೂರು ವಿವಿ ಪ್ರಸಾರಾಂಗ ಪ್ರಕಟಿಸಿದ ಕೊಡವ ಸಾಂಸ್ಕೃತಿಕ ಅಧ್ಯಯನ ಪೀಠ ಸಿದ್ಧಪಡಿಸಿದ ಶ್ರೀ ನಾಗೇಶ್ ಕಾಲೂರು ಇವರ ‘ಶ್ರೀಕಾವೇರಿ ದರ್ಶನಂ’ ಮತ್ತು ಅವರೇ ಅನುವಾದಿಸಿದ ‘ಕೊಡಗಿನಿಂದ ಗಿರಿತನಕ’ ಎಂಬ ಎರಡು ಕೃತಿಗಳು ಸಿಂಡಿಕೇಟ್ ಸಭಾಂಗಣದಲ್ಲಿ ದಿನಾಂಕ 15-09-2023ರಂದು ಬಿಡುಗಡೆಗೊಂಡಿತು. ಈ ಕಾರ್ಯಕ್ರಮದಲ್ಲಿ ಕೃತಿ ಲೋಕಾರ್ಪಣೆಗೊಳಿಸಿದ ಮಂಗಳೂರು ವಿವಿಯ ಕುಲಪತಿ ಪ್ರೊ. ಜಯರಾಜ್ ಅಮೀನ್ ಇವರು ಮಾತನಾಡುತ್ತಾ “ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಯನ, ಸಂಶೋಧನೆ ಹಾಗೂ ಪ್ರಕಟಣೆಯಂತಹ ಶೈಕ್ಷಣಿಕ ಕಾರ್ಯಗಳಿಗೆ ಆದ್ಯತೆ ಸಿಗಬೇಕೇ ಹೊರತು ಇತರ ವಿಷಯಗಳಿಗಲ್ಲ. ವಿವಿಯ ಪ್ರಕಟಣೆಗಳು ಸಮಾಜಕ್ಕೆ ಉಪಯುಕ್ತವಾಗುವಂತಿದ್ದು ಸಾಮಾಜಿಕ ಸಾಂಸ್ಕೃತಿಕ ಮತ್ತು ವೈಚಾರಿಕ ಪ್ರಜ್ಞೆಯನ್ನು ಉತ್ತಮಪಡಿಸಬೇಕು. ಕಾವೇರಿ ನಮಗೆ ನದಿ ಮಾತ್ರವಲ್ಲ. ಅದರೊಂದಿಗೆ ನಮಗೊಂದು ಭಾವನಾತ್ಮಕವಾದ ನಂಟಿದೆ. ಅದರ ಒಳಹೊರಗನ್ನು ಕಾವ್ಯಾತ್ಮಕವಾಗಿ ಶ್ರೀಕಾವೇರಿ ದರ್ಶನಂ ಕಾವ್ಯ ಹಿಡಿದಿಟ್ಟಿದೆ. ಪ್ರಸಾರಾಂಗ ಇಂತಹ ಮೌಲಿಕ ಕೃತಿಗಳ ಪ್ರಕಟಣೆಯ ಮೂಲಕ ವಿವಿಯ ಗೌರವವನ್ನು ಹೆಚ್ಚಿಸಿದೆ” ಎಂದು ಹೇಳಿದರು. ಸಮಾರಂಭದಲ್ಲಿ ವಿವಿಗೆ ನೂತನ ಕುಲಸಚಿವರಾಗಿ ಬಂದು ಅಧಿಕಾರ ಸ್ವೀಕರಿಸಿದ ಕೆ.ರಾಜು ಕೆ.ಎ.ಎಸ್. ಇವರು…
ಮಂಗಳೂರು : ಗಾಂಧಿನಗರದ ಶ್ರೀ ಗೋಕರ್ಣನಾಥೆಶ್ವರ ಕಾಲೇಜಿನ ಲಲಿತಾ ಕಲಾ ಸಂಘ ಹಾಗೂ ಮಹಿಳಾ ಘಟಕದ ನೇತ್ರತ್ವದಲ್ಲಿ ಸಾಮಾಜಿಕ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ‘ಪ್ಲಾಸ್ಟಿಕ್ ಮುಕ್ತ ಭಾರತ’ ಎಂಬ ವಿಷಯದ ಕುರಿತು ಬೀದಿ ನಾಟಕ ಪ್ರದರ್ಶನವು ದಿನಾಂಕ 14-09-2023ರಂದು ಗಾಂಧಿ ಪಾರ್ಕ್ ಸಮೀಪದಲ್ಲಿ ಜರುಗಿತು. ಕಾಲೇಜಿನ ಪ್ರಾಂಶುಪಾಲೆ ಡಾ. ಆಶಾಲತಾ ಸುವರ್ಣ ಇವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸುಮಾರು 25 ವಿದ್ಯಾರ್ಥಿಗಳು ಬೀದಿನಾಟಕ ಪ್ರದರ್ಶನದಲ್ಲಿ ಪಾಲ್ಗೊಂಡಿದರು. ಲಲಿತ ಕಲಾ ಸಂಘ ಮತ್ತು ಮಹಿಳಾ ಘಟಕದ ಮುಖ್ಯಸ್ಥೆಯಾದ ಡಾ. ನಿಶಾ ಯುವರಾಜ್ ಮತ್ತು ಕುಮಾರಿ ಸಂಗೀತ ಸಾಲ್ಯಾನ್ ಭಾಗವಹಿಸಿದ್ದರು.