Author: roovari

ಬೆಂಗಳೂರು : ರಂಗಾಸ್ಥೆ ಅಭಿನಯಿಸುವ ಜನಪದ ಹಾಗೂ ಕುಮಾರವ್ಯಾಸ ಭಾರತದ ಸಂಗಮ ‘ದ್ರೋಪತಿ ಹೇಳ್ತವ್ಳೆ’ ನಾಟಕ ಪ್ರದರ್ಶನವನ್ನು ದಿನಾಂಕ 19 ಜೂನ್ 2025ರಂದು ಸಂಜೆ 7-30 ಗಂಟೆಗೆ ಬೆಂಗಳೂರಿನ ಜೆ.ಪಿ. ನಗರದಲ್ಲಿರುವ ರಂಗಶಂಕರದಲ್ಲಿ ಹಮ್ಮಿಕೊಳ್ಳಲಾಗಿದೆ. ಗಣೇಶ ಮಂದಾರ್ತಿ ಇವರು ವಿನ್ಯಾಸ, ಸಂಗೀತ ಮತ್ತು ನಿರ್ದೇಶನ ಮಾಡಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ 88674 19347, 97422 42313 ಮತ್ತು 81477 93773 ಸಂಖ್ಯೆಯನ್ನು ಸಂಪರ್ಕಿಸಿರಿ.

Read More

ಉಡುಪಿ : ಮಾಹೆಯ ಎಂ.ಐ.ಸಿ.ಯಲ್ಲಿ ನಡೆದ ಅಂತರಾಷ್ಟ್ರೀಯ ಸಮ್ಮೇಳನದ ಸಂದರ್ಭದಲ್ಲಿ ಇಂದ್ರಾಳಿ ಯಕ್ಷಗಾನ ಕೇಂದ್ರದ ಯಕ್ಷರಂಗದ ಕಲಾವಿದರಿಂದ ‘ಜಾಂಬವತಿ ಕಲ್ಯಾಣ’ ಯಕ್ಷಗಾನ ಕಾರ್ಯಕ್ರಮವು ದಿನಾಂಕ 14 ಜೂನ್ 2025ರಂದು ನಡೆಯಿತು. ಕಾರ್ಯಕ್ರಮದಲ್ಲಿ ಎಂ.ಐ.ಸಿ. ನಿರ್ದೇಶಕರು, ಮಲ್ಟಿಮೀಡಿಯ ಸಂಪನ್ಮೂಲ ಕೇಂದ್ರದ ಸಂಯೋಜಕಿ ಡಾ. ಶುಭಾ ಎಚ್.ಎಸ್. ಇವರುಗಳು ಉಪಸ್ಥಿತರಿದ್ದರು.

Read More

ಬೆಂಗಳೂರು : ನಿರುದ್ಯೋಗಿ ಯುವಕ-ಯುವತಿಯರಿಗೆ ಕೆನರಾ ಬ್ಯಾಂಕ್ ಪ್ರಾಯೋಜಕತ್ವದಲ್ಲಿ ರಾಮನಗರ ಜಿಲ್ಲೆಯ ಬಿಡದಿಯ ಜೋಗರದೊಡ್ಡಿಯಲ್ಲಿ ಕೆ.ಪಿ.ಜೆ. ಪ್ರಭು ಕರಕುಶಲ ತರಬೇತಿ ಸಂಸ್ಥೆಗೆ ದಿನಾಂಕ 25 ಜೂನ್ 2025ರಿಂದ ಪ್ರವೇಶಾತಿ ಆರಂಭವಾಗಲಿದೆ. ಸಂಸ್ಥೆಯು 1991ರಿಂದ ನಿರುದ್ಯೋಗ ಯುವಕ-ಯುವತಿಯರಿಗೆ ಮರ ಮತ್ತು ಕಲ್ಲು ಕೆತ್ತನೆ, ಲೋಹ ಶಿಲ್ಪ ಮತ್ತು ಕುಂಭ ಕಲೆ ವಿಭಾಗಗಳಲ್ಲಿ ಉಚಿತವಾಗಿ ತರಬೇತಿ ನೀಡುತ್ತಿದೆ. ಕನಿಷ್ಠ 7ನೇ ತರಗತಿ ಉತ್ತೀರ್ಣರಾಗಿರುವ 18ರಿಂದ 35 ವರ್ಷದೊಳಗಿನ ನಿರುದ್ಯೋಗಿ ಯುವಕ – ಯುವತಿಯವರು ಪ್ರವೇಶ ಪಡೆಯಬಹುದಾಗಿದೆ. ಇದುವರೆಗೂ 1300 ಹೆಚ್ಚು ವಿದ್ಯಾರ್ಥಿಗಳು ಶಿಲ್ಪಕಲಾ ಶಿಕ್ಷಣ ಪಡೆದಿದ್ದಾರೆ. ಈ ಪೈಕಿ ಶೇ.92ರಷ್ಟು ವಿದ್ಯಾರ್ಥಿಗಳು ಲಾಭದಾಯಕ ಹುದ್ದೆಗಳಲ್ಲಿದ್ದು, ಹಲವರು ರಾಷ್ಟ್ರ, ರಾಜ್ಯ ಮಟ್ಟದ ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ. ಮರ, ಕಲ್ಲು ಕೆತ್ತನೆ ಹಾಗೂ ಲೋಹ ಶಿಲ್ಪ ವಿಭಾಗಗಳಲ್ಲಿ ತರಬೇತಿ ಅವ 18 ಮತ್ತು ಕುಂಭ ಕಲೆ (ಟೆರಕೋಟ) ವಿಭಾಗದ ತರಬೇತಿಯ ಅವ 6 ತಿಂಗಳಾಗಿದೆ. ತರಬೇತಿ ಅವಯಲ್ಲಿ ಊಟ, ವಸತಿ, ಸಮವಸ್ತ್ರ, ಉಪಕರಣಗಳು/ ಕಚ್ಚಾ ಸಾಮಗ್ರಿಗಳನ್ನು ಉಚಿತವಾಗಿ ಒದಗಿಸಲಾಗುವುದು…

Read More

ಉಡುಪಿ : ಪರ್ಯಾಯ ಶ್ರೀ ಪುತ್ತಿಗೆ ಮಠ ಶ್ರೀಕೃಷ್ಣ ಮಠ ಉಡುಪಿ ಇದರ ಆಶ್ರಯದಲ್ಲಿ ಪಣಂಬೂರು ವೆಂಕಟ್ರಾಯ ಐತಾಳ ಸಾಂಸ್ಕೃತಿಕ ಪ್ರತಿಷ್ಠಾನದ 8ನೇ ವಾರ್ಷಿಕೋತ್ಸವದ ಪ್ರಯುಕ್ತ ಪಣಂಬೂರು ವೆಂಕಟ್ರಾಯ ಐತಾಳ ಸಂಸ್ಮರಣಾ ಯಕ್ಷಗಾನ ಸಪ್ತಾಹ ಹಾಗೂ ಅಷ್ಟಾವಧಾನ ಕಾರ್ಯಕ್ರಮವು ದಿನಾಂಕ 15 ಜೂನ್ 2025ರಂದು ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಉದ್ಘಾಟನೆಗೊಂಡಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಮಾತನಾಡಿ “ಕಲೆ ಯಾವತ್ತೂ ಒಂದೇ ಭಾಷೆಗೆ ಸೀಮಿತವಾಗಿರಬಾರದು. ಅದು ಸೀಮಾತೀತವಾಗಿರಬೇಕು. ಯಕ್ಷಗಾನ ಕೂಡ ಇಂದು ಜಾಗತಿಕ ಕಲೆಯಾಗಿದೆ. ಯಕ್ಷಗಾನ ಇಂದು ಜಾಗತೀಕ ಕಲೆಯಾಗಿ ಪ್ರಸಿದ್ಧಿಯಾಗಲು ಇಂಗ್ಲೀಷ್ ಮೂಲಕ ಯಕ್ಷಗಾನ ನಡೆಸಿಕೊಟ್ಟ ಪಣಂಬೂರು ವೆಂಕಟ್ರಾಯ ಐತಾಳರ ಪ್ರಯತ್ನವೇ ಕಾರಣ. ಸಾಧಿಸಿದ ಕಲೆಯ ಮೂಲಕವೇ ಆ ವ್ಯಕ್ತಿಯನ್ನು ಗುರುತಿಸುವುದೇ ಆ ವ್ಯಕ್ತಿಯ ಸಾಧನೆಯಾಗುತ್ತದೆ. ಅಂತಹ ಗೌರವಕ್ಕೆ ವೆಂಕಟ್ರಾಯ ಐತಾಳರು ಭಾಜನರಾಗಿದ್ದಾರೆ. ನಾವು ಚಿಕ್ಕವರಿರುವಾಗ ಇಂಗ್ಲೀಷ್‌ ನಲ್ಲಿ ಹೇಗೆ ಯಕ್ಷಗಾನ ಮಾಡಬಹುದು ಎಂಬ ಕುತೂಹಲವಿತ್ತು. ಅದನ್ನು ಐತಾಳರು ತೋರಿಸಿಕೊಟ್ಟಿದ್ದಾರೆ.…

Read More

ಪೊನ್ನಂಪೇಟೆ : ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ಅಧೀನದಲ್ಲಿ ‘ಕೆ.ಎಂ.ಎ. ದಫ್ ಮುಟ್ಟ್ (ರಾತೀಬ್)’ ತಂಡವನ್ನು ನೂತನವಾಗಿ ಅಸ್ತಿತ್ವಕ್ಕೆ ತರಲಾಗಿದ್ದು, ಬೆಂಗಳೂರು ದೂರದರ್ಶನ ಕೇಂದ್ರದಲ್ಲಿ ದಿನಾಂಕ 13 ಜೂನ್ 2025ರಂದು ದಫ್ ಮುಟ್ಟ್ ಪ್ರದರ್ಶನವನ್ನು ಪ್ರಸ್ತುತಪಡಿಸಿದೆ. ಈ ಮೂಲಕ ಕೊಡವ ಮುಸ್ಲಿಮರ ಸಾಂಪ್ರದಾಯಿಕ ಧಾರ್ಮಿಕ ಕಲೆಯನ್ನು ಬೆಂಗಳೂರು ದೂರದರ್ಶನ ಚಂದನ ವಾಹಿನಿ ದಾಖಲೀಕರಣಗೊಳಿಸಿತು. ಕೊಡವ ಮುಸ್ಲಿಂ ಸಮುದಾಯದ ಸಾಂಪ್ರದಾಯಿಕ ಧಾರ್ಮಿಕ ಕಲೆಯಾದ ‘ದಫ್ ಮುಟ್ಟ್ ‘ ಅನ್ನು ಮತ್ತಷ್ಟು ಪ್ರೋತ್ಸಾಹಿಸಿ ಅದರ ಅಸ್ತಿತ್ವವನ್ನು ಉಳಿಸಿ ಬೆಳೆಸುವ ಹಿನ್ನೆಲೆಯಲ್ಲಿ ಈ ತಂಡವನ್ನು ರಚಿಸಲಾಗಿದ್ದು, ಕೆ.ಎಂ.ಎ. ಅಧ್ಯಕ್ಷ ದುದ್ದಿಯಂಡ ಹೆಚ್. ಸೂಫಿ ಹಾಜಿ ಅವರ ನೇತೃತ್ವದಲ್ಲಿ ಬೆಂಗಳೂರಿಗೆ ತೆರಳಿದ ‘ಕೆ.ಎಂ.ಎ. ದಫ್ ಮುಟ್ಟ್’ ತಂಡ ದೂರದರ್ಶನದ ಅತ್ಯಾಧುನಿಕ ಸ್ಟುಡಿಯೋದಲ್ಲಿ ಈ ಕಲೆಯನ್ನು ಎರಡು ಗಂಟೆಗಳ ಕಾಲ ಪ್ರದರ್ಶಿಸಿತು. ಈ ಸಂದರ್ಭ ಮಾತನಾಡಿದ ಕೆ.ಎಂ.ಎ. ಅಧ್ಯಕ್ಷ ದುದ್ದಿಯಂಡ ಸೂಫಿ ಹಾಜಿ, “ಧೀರತ್ವ ತೋರಿದ ಹುತಾತ್ಮ ಸೂಫಿವರ್ಯರನ್ನು ಸ್ತುತಿಗೀತೆಗಳ ಮೂಲಕ ಸ್ಮರಿಸುವ ಸೂಫಿ ಸಾಹಿತ್ಯದ ಪ್ರಮುಖ ಭಾಗವಾಗಿರುವ…

Read More

ಕಾಸರಗೋಡು: ಕಾಸರಗೋಡಿನ ಸೀತಮ್ಮ ಪುರುಷ ನಾಯಕ ಕನ್ನಡ ಭವನ ಮತ್ತು ಗ್ರಂಥಾಲಯ, ಕನ್ನಡ ಭವನ ಪ್ರಕಾಶನ ಸಂಸ್ಥೆಯಿಂದ ನಾಡೋಜ ಡಾ. ಕಯ್ಯಾರ ಕಿಞ್ಣಣ್ಣ ರೈ ಇವರ ಜನ್ಮದಿನೋತ್ಸವದ ಪ್ರಯುಕ್ತ ನೀಡಲಾಗುವ 2025ನೆಯ ಸಾಲಿನ ನಾಡೋಜ ಡಾ. ಕಯ್ಯಾರ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 16 ಜೂನ್ 2025ರ ಸೋಮವಾರದಂದು ನಡೆಯಿತು. ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿದ ಹಿರಿಯ ಸಾಹಿತಿ ರಾಧಾಕೃಷ್ಣ ಉಳಿಯತ್ತಡ್ಕ ಮಾತನಾಡಿ “ನಾಡೋಜ ಡಾ. ಕಯ್ಯಾರ ಪ್ರಶಸ್ತಿಗೆ ಸಾಹಿತ್ಯ ಹಾಗೂ ಮಾಧ್ಯಮ ರಂಗದಲ್ಲಿ ಅನುಪಮ ಸೇವೆ ಸಲ್ಲಿಸಿ ಜನಪ್ರಿಯರಾದ ಡಾ. ಸದಾನಂದ ಪೆರ್ಲರಿಗೆ ಕಯ್ಯಾರರ ಹೆಸರಿನ ರಾಷ್ಟ್ರೀಯ ಪ್ರಶಸ್ತಿ ನೀಡಿರುವುದರಿಂದ ಅರ್ಹ ವ್ಯಕ್ತಿಗೆ ಶ್ರೇಷ್ಠ ವ್ಯಕ್ತಿಯ ಹೆಸರಿನ ಪ್ರಶಸ್ತಿ ನೀಡಿರುವ ಕೀರ್ತಿಗೆ ಸಂಸ್ಥೆಯು ಭಾಜನವಾಗಿದೆ. ಸಾಹಿತ್ಯ ರಂಗ ಹಾಗೂ ಮಾಧ್ಯಮ ರಂಗದಲ್ಲಿ ತಮ್ಮ ಅವಿರತ ದುಡಿಮೆಯಿಂದ ಸಾಂಸ್ಕೃತಿಕ ಕ್ಷೇತ್ರವನ್ನು ಬೆಳೆಸಿದ ಪೆರ್ಲ ಅವರು ಕಯ್ಯಾರರನ್ನು ಪ್ರಾತಿನಿಧಿಕ ಕವಿಯಾಗಿ ಇಟ್ಟುಕೊಂಡು ಕಾಸರಗೋಡಿನ ಹೋರಾಟವನ್ನು ಸಮಗ್ರವಾಗಿ ಅಧ್ಯಯನ ನಡೆಸಿ ಮಹತ್ವಪೂರ್ಣವಾದ ಮಹಾಪ್ರಬಂಧವನ್ನು ಮಂಡಿಸಿ…

Read More

ಉಡುಪಿ : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಉಡುಪಿ ತಾಲೂಕು ಘಟಕ ಹಾಗೂ ಅಮ್ಮ ಪ್ರಕಾಶನ ಕಟಪಾಡಿ ಇವರ ಸಹಯೋಗದಲ್ಲಿ ರಂಗಭೂಮಿ ಹಾಗೂ ಸಿನೆಮಾ ಕ್ಷೇತ್ರದಲ್ಲಿ ಸಕ್ರೀಯವಾಗಿರುವ ಸಾಹಿತಿ ಬಾಸುಮ ಕೊಡಗುರವರ ‘ನಡುರಾತ್ರಿಯ ಸ್ವಾತಂತ್ರ್ಯ’ ಕವನ ಸಂಕಲನ ಲೋಕಾರ್ಪಣೆ ಸಮಾರಂಭವು ದಿನಾಂಕ 22 ಜೂನ್ 2025ರ ಭಾನುವಾರ ಸಂಜೆ 4-30 ಗಂಟೆಗೆ ಉಡುಪಿಯ ಮಥುರಾ ಕಂಫರ್ಟ್ಸ್ ಸಭಾಂಗಣದಲ್ಲಿ ನಡೆಯಲಿದೆ. ಖ್ಯಾತ ವ್ಯೆದ್ಯರೂ ಸಾಹಿತಿಗಳೂ ಆಗಿರುವ ಡಾ. ಭಾಸ್ಕರಾನಂದ ಕುಮಾರ್ ಕೃತಿ ಬಿಡುಗಡೆ ಮಾಡಲಿದ್ದು, ಕ.ಸಾ.ಪ. ಉಡುಪಿ ಘಟಕ ಆಯೋಜಿಸಿರುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರವಿರಾಜ್ ಎಚ್.ಪಿ.ಯವರು ವಹಿಸಲಿದ್ದಾರೆ. ಡಾ. ನಿಕೇತನರವರು ಕೃತಿ ಪರಿಚಯ ಮಾಡಲಿದ್ದು, ಸಂಕಲನಕ್ಕೆ ಬೆನ್ನುಡಿ ಬರೆದಿರುವ ಶ್ರೀಮತಿ ಜಾನಕಿ ಬ್ರಹ್ಮಾವರ, ಕವಯತ್ರಿ ಪೂರ್ಣಿಮಾ ಸುರೇಶ್ ಅತಿಥಿಗಳಾಗಿ ಉಪಸ್ಥಿತರಿರುತ್ತಾರೆ. ಕಟಪಾಡಿಯ ವನಸುಮ ಟ್ರಸ್ಟ್ ಮತ್ತು ವನಸುಮ ವೇದಿಕೆ ಹಾಗೂ ಅಮ್ಮ ಪ್ರಕಾಶನದ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿರುತ್ತಾರೆ. ಆರಂಭದಲ್ಲಿ ಗಾನಪಲ್ಲವಿ ತಂಡದಿಂದ ಬಾಸುಮ ಕೊಡಗು ರಚನೆಯ ಹಾಡುಗಳ ಗಾಯನ…

Read More

ಉಡುಪಿ : ಕಾಪು ಮಂಥನ ರೆಸಾರ್ಟ್ ನಲ್ಲಿ ದಿನಾಂಕ 16 ಜೂನ್ 2025ರಂದು ಪೂರ್ವಾಹ್ನ ಶಾಸಕರಾದ ಶ್ರೀ ಗುರ್ಮೆ ಸುರೇಶ್ ಶೆಟ್ಟಿಯವರ ನೇತೃತ್ವದಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಯಕ್ಷಶಿಕ್ಷಣ ಶಾಲೆಗಳ ಮುಖ್ಯಶಿಕ್ಷಕರ ಸಭೆಯು ನಡೆಯಿತು. ಅಪರಾಹ್ನ ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಕುಂದಾಪುರ ಮತ್ತು ಬೈಂದೂರು ವಿಧಾನಸಭಾ ಕ್ಷೇತ್ರದ ಯಕ್ಷಶಿಕ್ಷಣ ಶಾಲೆಗಳ ಮುಖ್ಯಶಿಕ್ಷಕರ ಸಭೆ, ಶಾಸಕರಾದ ಶ್ರೀ ಕಿರಣ್ ಕುಮಾರ್ ಕೊಡ್ಗಿ ಹಾಗೂ ಗುರುರಾಜ್ ಗಂಟಿಹೊಳೆಯವರ ಸಮ್ಮುಖದಲ್ಲಿ ನಡೆಯಿತು. ಸಭೆಯಲ್ಲಿ ಕುಂದಾಪುರ, ಬೈಂದೂರು, ಬ್ರಹ್ಮಾವರದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಉಪಸ್ಥಿತರಿದ್ದರು. ಯಕ್ಷಶಿಕ್ಷಣ ಟ್ರಸ್ಟ್ ಕಾರ್ಯದರ್ಶಿ ಮುರಲಿ ಕಡೆಕಾರ್ ಉಭಯ ಸಭೆಗಳಲ್ಲಿ ಈ ಬಾರಿಯ ಯಕ್ಷಶಿಕ್ಷಣದ ಒಟ್ಟು ಸಿದ್ಧತೆಗಳ ಕುರಿತು ಮಾಹಿತಿ ನೀಡಿದರು. ಎರಡೂ ಸಭೆಗಳಲ್ಲಿ ಟ್ರಸ್ಟಿಗಳಾದ ವಿ.ಜಿ. ಶೆಟ್ಟಿ ಮತ್ತು ಗಣೇಶ್ ಬ್ರಹ್ಮಾವರ ಭಾಗವಹಿಸಿದ್ದರು.

Read More

ಉಡುಪಿ : ರಾಗ ಧನ ಉಡುಪಿ (ರಿ.) ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಆಯೋಜಿಸುತ್ತಿರುವ ರಾಗರತ್ನಮಾಲಿಕೆ – 38ನೇ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿಯು ದಿನಾಂಕ 22 ಜೂನ್ 2025ರಂದು ಅಪರಾಹ್ನ 3-00 ಗಂಟೆಗೆ ಉಡುಪಿಯ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಮೊದಲಿಗೆ ರಾಗ ಧನ ಸಂಸ್ಥೆಯ ವಾರ್ಷಿಕ ಮಹಾಸಭೆ ನಡೆಯಲಿದ್ದು, ಸಂಜೆ 4-45 ಗಂಟೆಗೆ ಬೆಂಗಳೂರಿನ ಶ್ರೀಮತಿ ಕಲಾವತಿ ಅವಧೂತ್ ಇವರ ಹಾಡುಗಾರಿಕೆಗೆ ಬೆಂಗಳೂರಿನ ಬಿ.ಕೆ. ರಘು ಇವರಿಂದ ವಯೋಲಿನ್, ಬೆಂಗಳೂರಿನ ಕೆ.ಯು. ಜಯಚಂದ್ರ ರಾವ್ ಇವರು ಮೃದಂಗ ಮತ್ತು ಪುತ್ತೂರಿನ ಬಾಲಕೃಷ್ಣ ಹೊಸಮನೆ ಇವರು ಮೋರ್ಸಿಂಗ್ ನಲ್ಲಿ ಸಹಕರಿಸಲಿದ್ದಾರೆ ಎಂದು ರಾಗ ಧನ ಸಂಸ್ಥೆಯ ಕಾರ್ಯದರ್ಶಿ ಉಮಾಶಂಕರಿ ತಿಳಿಸಿದ್ದಾರೆ.

Read More

ಬೆಂಗಳೂರು : ಕಲಾ ಗಂಗೋತ್ರಿ ಅಭಿನಯಿಸುವ ‘ಮನೆ ಮನೆ ಕಥೆ’ ನಾಟಕ ಪ್ರದರ್ಶನವನ್ನು ದಿನಾಂಕ 18 ಜೂನ್ 2025ರಂದು ಸಂಜೆ 7-30 ಗಂಟೆಗೆ ಬೆಂಗಳೂರಿನ ಜೆ.ಪಿ. ನಗರದಲ್ಲಿರುವ ರಂಗ ಶಂಕರದಲ್ಲಿ ಹಮ್ಮಿಕೊಳ್ಳಲಾಗಿದೆ. ಭಾರ್ಗವಿ ನಾರಾಯಣ್ ರಂಗ ರೂಪ ನೀಡಿದ್ದು, ಡಾ. ಬಿ.ಎ. ರಾಜಾರಾಂ ನಿರ್ದೇಶನ ಮಾಡಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ 99723 98931 ಶ್ರೀನಿವಾಸ ಕೈವಾರ ಮತ್ತು 99864 83097 ದುರ್ಗಾದಾಸ್ ಇವರನ್ನು ಸಂಪರ್ಕಿಸಿರಿ.

Read More