Subscribe to Updates
Get the latest creative news from FooBar about art, design and business.
Author: roovari
ಮಣಿಪಾಲ : ಡಾ. ಟಿಎಂಎ ಪೈ ಫೌಂಡೇಶನ್ ವತಿಯಿಂದ 2022ನೇ ಸಾಲಿನ ಡಾ. ಟಿ.ಎಂ.ಎ. ಪೈ ಅತ್ಯುತ್ತಮ ಕೊಂಕಣಿ ಪುಸ್ತಕ ಪುರಸ್ಕಾರಕ್ಕಾಗಿ ಕೊಂಕಣಿ ಪುಸ್ತಕಗಳನ್ನು ಆಹ್ವಾನಿಸಲಾಗಿದೆ. ದಿನಾಂಕ 01-01-2019ರಿಂದ 31-12-2021ರ ಮಧ್ಯೆ ಪ್ರಕಟಿತ ದೇವನಾಗರಿ, ಕನ್ನಡ, ಮಲಯಾಳಂ, ರೋಮನ್ ಲಿಪಿಯ ಪುಸ್ತಕಗಳು ಪ್ರಶಸ್ತಿಗೆ ಅರ್ಹ. 4 ಪ್ರತಿಗಳನ್ನು ದಿನಾಂಕ 31-10-2023ರೊಳಗೆ ಅಧ್ಯಕ್ಷರು, ಡಾ. ಟಿ.ಎಂ.ಎ. ಪೈ ಫೌಂಡೇಶನ್, ಸಿಂಡಿಕೇಟ್ ಹೌಸ್, ಮಣಿಪಾಲ-576104 ಇಲ್ಲಿಗೆ ಕಳುಹಿಸಿ, www.drtmapaifoundation.com ಸಂಪರ್ಕಿಸಬಹುದು.
ಮಡಿಕೇರಿ : ಕೊಡಗು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ 2023-24ನೇ ಸಾಲಿನಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮಗಳ ಯೋಜನೆ ಮತ್ತು ಸೇವೆಗಳ ಕುರಿತು ಜನ ಜಾಗೃತಿ ಮೂಡಿಸಲು ಕೊಡಗು ಜಿಲ್ಲೆಯಲ್ಲಿನ ಜಾನಪದ ಕಲಾ ತಂಡ (ಬೀದಿ ನಾಟಕ)ಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಪ್ರತಿ ಬೀದಿ ನಾಟಕ ಜಾನಪದ ಕಲಾ ತಂಡದಲ್ಲಿ 8 ಜನ (ಸ್ಥಳೀಯ ಕಲಾವಿದರು) ಸದಸ್ಯರು ಇರಬೇಕು. ಇವರಲ್ಲಿ 2 ಮಹಿಳಾ ಕಲಾವಿದರಿರಬೇಕು. ಇಲಾಖೆಯ ಯೋಜನೆಗಳ ಬಗ್ಗೆ ಬೀದಿ ನಾಟಕ ಪ್ರದರ್ಶನದ ಅನುಭವವಿರಬೇಕು. ಆಸಕ್ತ ಜಾನಪದ ಕಲಾತಂಡಗಳು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ, ಐ.ಇ.ಸಿ. ವಿಭಾಗ, ಮಡಿಕೇರಿ, ಕೊಡಗು ಜಿಲ್ಲೆ ಇಲ್ಲಿ ಕಚೇರಿ ವೇಳೆಯಲ್ಲಿ ಅರ್ಜಿಯನ್ನು ಪಡೆದುಕೊಂಡು ಸೆಪ್ಟೆಂಬರ್ 21ರೊಳಗೆ ಸಲ್ಲಿಸಬೇಕು.
ಕಾಸರಗೋಡು : ಎಡನೀರು ಸ್ವಾಮೀಜೀಸ್ ಹೈಯರ್ ಸೆಕೆಂಡರಿ ಶಾಲಾ ಸಭಾಂಗಣದಲ್ಲಿ ಡಾ.ರಮಾನಂದ ಬನಾರಿಯವರ ನೂತನ ಕವಿತೆ, ಖಂಡ ಕಾವ್ಯಗಳ ಸಂಕಲನವಾದ ‘ಸದ್ದಾಗಿಯು ಸದ್ದಾಗದ ಸದ್ದುಗಳು’ ಎಂಬ ಕೃತಿಯ ಲೋಕಾರ್ಪಣೆ ಕಾರ್ಯಕ್ರಮವು ದಿನಾಂಕ 09-09-2023ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಕೃತಿ ಬಿಡುಗಡೆಗೊಳಿಸಿದ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ವಿಶ್ರಾಂತ ಮುಖ್ಯಸ್ಥರಾದ ಖ್ಯಾತ ವಿದ್ವಾಂಸ ಡಾ. ವಸಂತಕುಮಾರ್ ತಾಳ್ತಜೆಯವರು ಮಾತನಾಡುತ್ತಾ “ಡಾ. ರಮಾನಂದ ಬನಾರಿ ಮಂಜೇಶ್ವರ ಅವರದು ಸಹಜ ಕಾವ್ಯ. ಸಾಮಾಜಿಕ ಸಂಗತಿಗಳಿಗೆ, ಸಮಾಜದ ಏರುಪೇರುಗಳಿಗೆ, ಕಾಲಾನುಗತ ಬದಲಾವಣೆಗಳಿಗೆ ಅವರ ಕವಿ ಹೃದಯ ಮಿಡಿದಿದೆ. ಮೌಲ್ಯಗಳಲ್ಲಿ ಆದ ಬದಲಾವಣೆಗಳಿಗೆ ಅವರ ಕವಿತೆಗಳು ಸ್ಪಂದಿಸಿವೆ” ಎಂದು ಹೇಳಿದ್ದಾರೆ. ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಆಶೀರ್ವಚನ ನೀಡಿ, “ಕುಟುಂಬ ವೈದ್ಯರಾಗಿ, ಯಕ್ಷಗಾನ ಅರ್ಥಧಾರಿಯಾಗಿ, ಸಾಹಿತಿಯಾಗಿ ಡಾ. ರಮಾನಂದ ಬನಾರಿ ಕನ್ನಡಕ್ಕೆ ಸಲ್ಲಿಸಿದ ಸೇವೆ ಮಹತ್ತರವಾದುದು. ಗಡಿನಾಡಿನಲ್ಲಿ ಸಾಹಿತ್ಯದ ಜೊತೆಗೆ ಕನ್ನಡದ ಜ್ಯೋತಿ ನಿರಂತರ ಉರಿಯುತ್ತಿರಬೇಕು ಹಾಗೂ ಕನ್ನಡ…
ಮುಂಬಯಿ : ಅಜೆಕಾರು ಕಲಾಭಿಮಾನಿ ಬಳಗದ 22ನೇ ವಾರ್ಷಿಕೋತ್ಸವದ ಸಮಾರೋಪ ಸಮಾರಂಭ ದಿನಾಂಕ 10-09-2023ರಂದು ನಡೆಯಿತು. ಮುಂಬಯಿ ಕುರ್ಲಾ ಬಂಟರ ಸಂಘದ ರಾಧಾಬಾಯಿ ಟಿ.ಭಂಡಾರಿ ಸಭಾಗೃಹದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಯಕ್ಷಗಾನ, ಯಕ್ಷರಕ್ಷಾ ಪ್ರಶಸ್ತಿ ಪ್ರದಾನ ಹಾಗೂ ‘ಅರುವ’ ಗ್ರಂಥ ಬಿಡುಗಡೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಾಬಾಸ್ ಗ್ರೂಫ್ ಆಫ್ ಕಂಪನೀಸ್ ನ ಆಡಳಿತ ನಿರ್ದೇಶಕರಾದ ಮಹೇಶ್ ಎಸ್.ಶೆಟ್ಟಿ “ಕಳೆದ 22 ವರ್ಷಗಳಿಂದ ಅಜೆಕಾರು ಬಾಲಕೃಷ್ಣ ಶೆಟ್ಟಿಯವರು ತಮ್ಮ ಮುಂದಾಳತ್ವದ ಅಜೆಕಾರು ಕಲಾಭಿಮಾನಿ ಬಳಗದ ಆಶ್ರಯದಲ್ಲಿ ತವರೂರ ಅದೆಷ್ಟೋ ಕಲಾವಿದರನ್ನು ಈ ಮುಂಬಯಿ ಮಾಹಾನಗರಕ್ಕೆ ಆಹ್ವಾನಿಸಿ, ಯಕ್ಷಗಾನ ಮತ್ತು ತಾಳ ಮದ್ದಳೆಯನ್ನು ಪ್ರದರ್ಶಿಸುತ್ತಾ ಬಂದವರಿದ್ದಾರೆ. ಇಂಗ್ಲೀಷ್ ಮಾಧ್ಯಮದಲ್ಲಿ ಕಲಿಯುವ ಸುಮಾರು ಒಂದು ಸಾವಿರಕ್ಕೂ ಅಧಿಕ ಮಕ್ಕಳಿಗೆ ಯಕ್ಷಗಾನವನ್ನು ಕಲಿಸಿದ ಹಿರಿಮೆ ಇವರೊಂದಿಗಿದೆ. ಕೇವಲ ಮಕ್ಕಳಿಗೆ ಮಾತ್ರವಲ್ಲ ನನ್ನನ್ನು ಸೇರಿಸಿ ಬಂಟರ ಸಂಘದ ಅನೇಕ ಪದಾಧಿಕಾರಿಗಳಿಗೆ ಯಕ್ಷಗಾನವನ್ನು ಕಲಿಸಿ, ಕಾಲಿಗೆ ಗೆಜ್ಜೆ ಕಟ್ಟಿ ಕುಣಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.…
ಉಡುಪಿ : ದಿನಾಂಕ 23-09-2023 ಮತ್ತು 24-09-2023ರಂದು ಅಮೇರಿಕಾದ ಕ್ಯಾಲಿಫೋರ್ನಿಯಾದ ಹೇವಾರ್ಡ್‌ನ ಶಾಬೂ ಕಾಲೇಜಿನ ಸಭಾಂಗಣದಲ್ಲಿ ಕನ್ನಡ ಕೂಟದ ಆಯೋಜನೆಯಲ್ಲಿ ನಡೆಯುವ ಯಕ್ಷಗಾನ ಪ್ರದರ್ಶನಕ್ಕೆ ‘ಯಕ್ಷಗಾನ ತರಬೇತಿ’ ನೀಡಲು ಯಕ್ಷಗುರು ಕೆ.ಜಿ. ಗಣೇಶ್ ಅಮೆರಿಕಾಕ್ಕೆ ತೆರಳಿದ್ದಾರೆ. ಕೆ.ಜೆ. ಗಣೇಶ್ ಇವರು ಈ ಹಿಂದೆ ಏಳು ಬಾರಿ ಅಮೇರಿಕಾಕ್ಕೆ ತೆರಳಿ, ಅಲ್ಲಿ ವಾಸವಿರುವ ನಮ್ಮ ಊರಿನವರಿಗೆ ಯಕ್ಷಗಾನ ತರಬೇತಿ ನೀಡಿರುತ್ತಾರೆ. ಈ ಬಾರಿ ‘ಚಕ್ರವ್ಯೂಹ’ ಎಂಬ ಪ್ರಸಂಗವನ್ನು ನಿರ್ದೇಶಿಸಿ, ಭಾಗವತರಾಗಿ ಭಾಗವಹಿಸಲಿದ್ದಾರೆ. ದಿನಾಂಕ 01-10-2023ರಂದು ಸಾನ್ವಾನ್ಯ ಸನಾತನ ಧರ್ಮಕೇಂದ್ರದಲ್ಲಿ ಗಣೇಶೋತ್ಸವ ಪ್ರಯುಕ್ತ ‘ಮೀನಾಕ್ಷಿ ಕಲ್ಯಾಣ’ ಹಾಗೂ ದಿನಾಂಕ 07-10-2023ರಂದು ‘ವೀರಮಣಿ ಕಾಳಗ’ ಎಂಬ ಪ್ರಸಂಗಗಳನ್ನು ನಿರ್ದೇಶಿಸಲಿದ್ದಾರೆ.
ಸುರತ್ಕಲ್ : ಕೃಷ್ಣಾಪುರ–ಕಾಟಿಪಳ್ಳ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ 45ನೇ ಗಣೇಶೋತ್ಸವದ ಪ್ರಯುಕ್ತ ಕೃಷ್ಣಾಪುರ ಯುವಕ ಮಂಡಲವು ಕೇಂದ್ರ ಮೈದಾನದಲ್ಲಿ ಯಕ್ಷಗಾನ ಸ್ಪರ್ಧೆಯನ್ನು ಏರ್ಪಡಿಸಿತ್ತು. ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ ಆಹ್ವಾನಿತ ಕಾಲೇಜು ಯಕ್ಷತಂಡಗಳ ಅಂತರ್ ಜಿಲ್ಲಾ, ಅಂತರ್ ಕಾಲೇಜು ತೆಂಕುತಿಟ್ಟಿನ ಯಕ್ಷಗಾನ ಸ್ಪರ್ಧೆಯು ದಿನಾಂಕ 10-09-2023ರಂದು ಜರಗಿತು. ಈ ಕಾರ್ಯಕ್ರಮವನ್ನು ಪಟ್ಲ ಫೌಂಡೇಶನ್ ಯಕ್ಷಧ್ರುವ ಯಕ್ಷ ಶಿಕ್ಷಣದ ಪ್ರಧಾನ ಸಂಚಾಲಕರಾದ ಪಣಂಬೂರು ವಾಸುದೇವ ಐತಾಳ್ ಉದ್ಘಾಟಿಸಿ ಮಾತನಾಡುತ್ತಾ “ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸ್ಥಳೀಯ ಕಲೆಗಳ ಅಧ್ಯಯನ ಹಾಗೂ ಕಾರ್ಯ ವಿಸ್ತಾರಕ್ಕೆ ಮಹತ್ವ ನೀಡಲಾಗಿದ್ದು, ಯಕ್ಷ ಶಿಕ್ಷಣ ಪರಿಗಣನೆಗೆ ಸೂಕ್ತವಾಗಿದೆ. ಯಕ್ಷಗಾನ ಸರ್ವಾಂಗ ಸುಂದರ ಕಲೆ, ಕಲಾ ಪೋಷಣೆಗೆ ಪ್ರೇಕ್ಷಕರ ಪ್ರೋತ್ಸಾಹವು ಅಗತ್ಯ. ಪಟ್ಲ ಫೌಂಡೇಶನ್ ವತಿಯಿಂದ 37 ಶಾಲೆಗಳಲ್ಲಿ ಉಚಿತ ಯಕ್ಷ ಶಿಕ್ಷಣ ಪ್ರಾರಂಭಗೊಂಡಿದ್ದು, ಮುಂದಿನ 10 ವರ್ಷಗಳಲ್ಲಿ 15,000 ವಿದ್ಯಾರ್ಥಿಗಳಿಗೆ ಯಕ್ಷಗಾನವನ್ನು ಕಲಿಸುವ ಗುರಿಯಿದೆ” ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ ಮಂಗಳೂರು ಮಹಾನಗರ ಪಾಲಿಕೆ ಮೇಯರ್…
ಕುಂದಾಪುರ : ಸೀತಾಲಕ್ಷ್ಮೀ ಮತ್ತು ಬಿ.ಎಮ್.ರಾಮಕೃಷ್ಣ ಹತ್ವಾರ್ ಸರಕಾರಿ ಪ್ರೌಢಶಾಲೆ ಬೀಜಾಡಿಯಲ್ಲಿ ದಿನಾಂಕ 09-09-2023ರಂದು ಯಶಸ್ವೀ ಕಲಾವೃಂದ (ರಿ.)ಕೊಮೆ, ತೆಕ್ಕಟ್ಟೆ ಇವರಿಂದ ‘ಯಕ್ಷಗಾನ ಪೂರ್ವರಂಗ ಪ್ರಾತ್ಯಕ್ಷಿಕೆ’ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ದೀವಟಿಕೆಗೆ ಎಣ್ಣೆ ಹಾಕುವ ಮೂಲಕ ಮರುಚಾಲನೆ ಮಾಡಿ ಮಾತನ್ನಾಡಿದ ಬೀಜಾಡಿ ಶೇಷಗಿರಿ ಗೋಟ “ಎಳೆವೆಯಲ್ಲಿ ಯಕ್ಷಗಾನದ ಆಟ ಆಡಿದ್ದು ನೆನಪಾಗುತ್ತಿದೆ. ಯಕ್ಷಗಾನದಿಂದಲೇ ಹಳ್ಳಿಯಲ್ಲಿ ಸಂಸ್ಕೃತಿ ಉಳಿದಿದೆ. ಪ್ರಾಚೀನ ಕಲೆಯಾದ ಯಕ್ಷಗಾನ ಪಾಶ್ಚಾತ್ಯ ದೇಶಗಳಲ್ಲೂ ಹೆಸರು ಮಾಡಿದೆ. ಯಕ್ಷಗಾನ ವಿದ್ಯಾಭ್ಯಾಸಕ್ಕೂ ಪೂರಕ. ಇಂತಹ ಕಲೆಯನ್ನು ಬೆಳೆಸಿ, ತಲೆಯಲ್ಲಿ ಹೊತ್ತು ಅಳಿದ ಭಾಗಕ್ಕೆ ಪುನಃಶ್ಛೇತನ ನೀಡುವ ನಿಟ್ಟಿನಲ್ಲಿ ಸಂಸ್ಥೆ ಸಾಧಿಸುತ್ತಿರುವುದು ಯೋಗ್ಯ ಬೆಳವಣಿಗೆ. ಮಕ್ಕಳಿಗೆ ಕಲಿಸಿ, ಮಕ್ಕಳಿಂದಲೇ ಮಕ್ಕಳಿಗಾಗಿ ಶಾಲೆಗಳಲ್ಲಿ ಪ್ರದರ್ಶಿಸುವ ಕಾರ್ಯ ಸ್ತುತ್ಯರ್ಹ” ಎಂದರು. “ಕಾರ್ಯಕ್ರಮದ ಹಿಂದಿನ ಖರ್ಚುಗಳಿಂದೊಡಗೂಡಿದ ತಯಾರಿಯೊಂದಿಗೆ ಜಿಲ್ಲೆಯ ಐದು ಶಾಲೆಗಳಲ್ಲಿ ಉಚಿತವಾಗಿ ಯಾವುದೇ ಸಂಸ್ಥೆಗೆ ಹೊರೆ ಆಗದ ಹಾಗೆ ಕಾರ್ಯಕ್ರಮವನ್ನು ನಿರ್ವಹಿಸುತ್ತಿರುವುದು ನಿಜಕ್ಕೂ ಅದ್ಭುತ ಕಾರ್ಯ” ಎಂದು ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ವಿನೋದ ಅಭಿಪ್ರಾಯಪಟ್ಟರು. ಶಾಲಾಭಿವೃದ್ಧಿ…
ಉಡುಪಿ : ‘ಹಂದೆ ಯಕ್ಷವೃಂದ ಕೋಟ’ ಆಯೋಜನೆಯಲ್ಲಿ ಹಲವು ಯಕ್ಷಗಾನ ಪ್ರಸಂಗಗಳ ಮುದ್ರಣ ದಾಖಲೆಯ ಶ್ರೀ ಪಾವಂಜೆ ಗುರುರಾಯರ 75 ನೇ ಪುಣ್ಯದಿನದ ಸಂಸ್ಮರಣದ ಅಂಗವಾಗಿ ದಿನಾಂಕ 23-09-2023 ರಂದು ಉಡುಪಿ ರಾತ್ರಿ ಘಂಟೆ 07.00ರಿಂದ ಶ್ರೀ ಮೂಲಿಕೆ ರಾಮಕೃಷ್ಣಯ್ಯ ವಿರಚಿತ ಯಕ್ಷಗಾನ ಬಯಲಾಟ ನಡೆಯಲಿರುವುದು. ಮಂಗಳೂರಿನ ಜನಾರ್ದನ ಹಂದೆ ಇವರ ಸಂಯೋಜನೆಯಲ್ಲಿ ನಡೆಯಲಿರುವ ಈ ಯಕ್ಷಗಾನದ ಹಿಮ್ಮೇಳದಲ್ಲಿ ಸರ್ವಶ್ರೀಗಳಾದ ಪ್ರಸಾದ್ ಕುಮಾರ್ ಮೊಗೆಬೆಟ್ಟು, ಲಂಬೋದರ ಹೆಗಡೆ, ಕೆ.ಜೆ.ಸುಧೀಂದ್ರ, ಸುದೀಪ ಉರಾಳ. ಹಾಗೂ ಮುಮ್ಮೇಳದಲ್ಲಿ ಸರ್ವಶ್ರೀಗಳಾದ ಸಂಜೀವ ಹೆನ್ನಾಬೈಲ್, ಸುಜಯೀಂದ್ರ ಹಂದೆ, ರವಿ ಕೌಂಡ್ಲಿ, ರಾಘವೇಂದ್ರ ತುಂಗ, ಸ್ಫೂರ್ತಿ ಭಟ್, ಶ್ರೀನಾಥ ಉರಾಳ, ಸುಹಾಸ ಕರಬ, ವೆಂಕಟೇಶ ವೈದ್ಯ ಮತ್ತಿತರರು ಭಾಗವಹಿಸಲಿದ್ದಾರೆ.
ಮಂಗಳೂರು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಶಾಂತಿನಗರ ಕಾವೂರು ಆಶ್ರಯದಲ್ಲಿ ಗಣೇಶ ಚತುರ್ಥಿ ಪ್ರಯುಕ್ತ ದಿನಾಂಕ 20-09-2023ರಂದು ಮುಕ್ತ ರಸಪ್ರಶ್ನೆ ಸ್ಪರ್ಧೆ ಆಯೋಜಿಸಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸಲು ವಯಸ್ಸಿನ ಮಿತಿ ಇಲ್ಲ. ಇಬ್ಬರ ಒಂದು ತಂಡವಾಗಿ ಭಾಗವಹಿಸಬಹುದು. ಬೆಳಗ್ಗೆ 9.30ಕ್ಕೆ ಸ್ಪರ್ಧೆ ಆರಂಭವಾಗಲಿದೆ. ಪ್ರಚಲಿತ ವಿದ್ಯಮಾನ, ಸಾಮಾನ್ಯ ಜ್ಞಾನ, ಭಾರತೀಯ ಸಂಸ್ಕೃತಿ, ಇತಿಹಾಸ, ಪುರಾಣ, ಕ್ರೀಡೆ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಾಧಕರು ಕುರಿತ ವಿಷಯದಲ್ಲಿ ಪ್ರಶ್ನೆಗಳು ಇವೆ. ಪ್ರಥಮ ಸುತ್ತಿನಲ್ಲಿ ಲಿಖಿತ ಪರೀಕ್ಷೆ ನಡೆಯಲಿದ್ದು, ಅದರಲ್ಲಿ ಎಂಟು ತಂಡಗಳನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಗುವುದು. ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದವರಿಗೆ ನಗದು ಬಹುಮಾನ ನೀಡಲಾಗುವುದು. ಹೆಚ್ಚಿನ ಮಾಹಿತಿ ಮತ್ತು ಹೆಸರು ನೋಂದಾಯಿಸಲು ದೂರವಾಣಿ ಸಂಖ್ಯೆ 9901319694 ಸಂಪರ್ಕಿಸಬಹುದು.
ಅಪರಾಧ ಮಾಡಿದ ವ್ಯಕ್ತಿಯ ಪತ್ತೆಗೆ ಕಾರಣವಾಗುವ ಸುಳಿವುಗಳನ್ನು ಒಬ್ಬ ಪತ್ತೇದಾರಿ ಹುಡುಕುತ್ತಾನೆ. ಅದೇ ರೀತಿ ಒಬ್ಬ ಸಾಹಿತಿಯಾದವನು ತನ್ನ ಪತ್ತೇದಾರಿ ಸಾಹಿತ್ಯದಲ್ಲಿ ‘ಪತ್ತೇದಾರಿ’ ಎನ್ನುವ ಪಾತ್ರಕ್ಕೆ ಪ್ರಾಮುಖ್ಯತೆ ನೀಡಿ ಮೊದಲಿನಿಂದ ಕೊನೆಯವರೆಗೆ ಓದುಗನೊಬ್ಬನನ್ನು ಸೆರೆ ಹಿಡಿಯುವುದೆಂದರೆ ಸುಲಭದ ಮಾತಲ್ಲ. ಪ್ರತಿಕ್ಷಣ ಪ್ರತಿ ಹಂತದಲ್ಲೂ ರೋಚಕತೆ, ಕುತೂಹಲ, ಉತ್ಸುಕತೆ ತುಂಬಲು ಅಂತಹ ಸನ್ನಿವೇಶಗಳನ್ನು ಆತನ ಬರವಣಿಗೆಯಲ್ಲಿ ಸೃಷ್ಟಿಸಿರಬೇಕಾಗುತ್ತದೆ. ಈ ನಿಟ್ಟಿನಲ್ಲಿ ಓದುಗರನ್ನು ತನ್ನದೇ ಶೈಲಿಯಲ್ಲಿ ಮೋಡಿ ಮಾಡಿದ ಕೀರ್ತಿ ಖಂಡಿತವಾಗಿಯೂ ಎನ್. ನರಸಿಂಹಯ್ಯನವರಿಗೆ ಸಲ್ಲುತ್ತದೆ. ಎನ್. ನರಸಿಂಹಯ್ಯನವರ ಕುರಿತಾದ ಬರಹ ಎಂಬ ವಿಚಾರ ಬಂದಾಗ ಅವರ ಬಗೆಗೆ ತಿಳಿದುಕೊಳ್ಳುವ ಸಲುವಾಗಿ ಜಾಲಾಡಿದಾಗ ನನಗೆ ದೊರೆತ ಹಾಗೂ ಮನಸ್ಸಿಗೆ ತೋಚಿದ ಕೆಲವೊಂದು ವಿಚಾರಗಳನ್ನು ಬರೆಯುವುದಕ್ಕೆ ಮುಂದಾದೆ. ಎನ್. ನರಸಿಂಹಯ್ಯನವರು ತಮ್ಮ ಪತ್ತೇದಾರಿ ಕಾದಂಬರಿಗಳಲ್ಲಿ ಓದುಗರನ್ನು ಸೆರೆ ಹಿಡಿಯುವಲ್ಲಿ ಹೇಗೆ ಯಶಸ್ಸನ್ನು ಕಂಡುಕೊಂಡಿದ್ದರು ಎಂಬುದಕ್ಕೆ ಅವರ ಓದುಗ ಅಭಿಮಾನಿಯೊಬ್ಬರು ಪ್ರಮುಖ ಪತ್ತೇದಾರಿ ಸಾಹಿತಿಗಳ ಹೆಸರಿನ ಪಟ್ಟಿಯನ್ನು ಮುಂದಿಡುತ್ತಾ, ಇವರೆಲ್ಲಾ ಪತ್ತೇದಾರಿ ಸಾಹಿತ್ಯವನ್ನು ಬರೆದರೂ “ಎನ್. ನರಸಿಂಹಯ್ಯನವರು…