Author: roovari

ಮಂಗಳೂರು : ಶ್ರೀ ಶಾರದಾ ನಾಟ್ಯಾಲಯ ಹೊಸಬೆಟ್ಟು ಇದರ ರಜತ ಸಂಭ್ರಮದ ಪ್ರಯುಕ್ತ ‘ನೃತ್ಯ ಶರಧಿ’ ಸರಣಿ ಕಾರ್ಯಕ್ರಮವು ದಿನಾಂಕ 07-09-2023ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಿತು. ಕರ್ನಾಟಕ ಕಲಾಶ್ರೀ ವಿದುಷಿ ಶ್ರೀಮತಿ ಶಾರದಾಮಣಿ ಶೇಖರ್ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕದ್ರಿ ನೃತ್ಯ ವಿದ್ಯಾನಿಲಯ ಚಾರಿಟೇಬಲ್ ಟ್ರಸ್ಟ್ (ರಿ) ಇದರ ನೃತ್ಯ ನಿರ್ದೇಶಕರಾದ ನಾಟ್ಯ ವಿಶಾರದ ಶ್ರೀ ಯು.ಕೆ. ಪ್ರವೀಣ್ ಇವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದರು ಮತ್ತು ಈರ್ವರೂ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಲಿ ಎಂದು ಶುಭ ಹಾರೈಸಿದರು. ಪುಷ್ಪಾಂಜಲಿ, ಗಣಪತಿ ಸ್ತುತಿಯೊಂದಿಗೆ ಶುಭಾರಂಭಗೊಂಡ ಕಾರ್ಯಕ್ರಮ ನಾಟ್ಯದ ಅಧಿದೇವನಾದ ನಟರಾಜನಿಗೆ, ರಂಗ ದೇವತೆಗಳಿಗೆ, ದಿಕ್ಪಾಲಕರಿಗೆ ಹಾಗೂ ಗುರುಗಳಿಗೆ ನಮಿಸಿ ಕಾರ್ಯಕ್ರಮ ಮುಂದುವರಿಯಿತು. ಪುಟಾಣಿ ಮಕ್ಕಳು ಶ್ಯಾಮಲೆ ಮೀನಾಕ್ಷಿ ಅವರ ಹಾಡಿಗೆ ನರ್ತಿಸಿದರು. ನಟರಾಜ, ಸರಸ್ವತಿ, ಗುರು ಹಾಗೂ ಪ್ರೇಕ್ಷಕರಿಗೆ ವಂದಿಸುವ ನಾಟ್ಯಗಣಪತಿಗೆ ನಮನ ಎಂಬ ನೃತ್ಯ ಪ್ರೇಕ್ಷಕರ ಮನಸ್ಸಿಗೆ ಮುದನೀಡಿತು. ಶಿವನ ಕುರಿತಾದ ‘ನಟನಂ ಆಡಿನಾರ್’ ಮತ್ತು ‘ಕಂಡೆ…

Read More

ಉಡುಪಿ: ಬೈಲೂರು ಮಹಿಷಮರ್ದಿನಿ ದೇವಸ್ಥಾನದಲ್ಲಿ ಸಿಂಹ ಮಾಸದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ‘ತರಣಿ ಸೇನ ಕಾಳಗ’ ಪ್ರಸಂಗದ ಯಕ್ಷಗಾನ ತಾಳ ಮದ್ದಳೆ ಕೂಟ ದಿನಾಂಕ 08-09-23ರ ಶುಕ್ರವಾರ ಸಂಜೆ ನಡೆಯಿತು. ಬೈಲೂರು ಮಹಿಷಮರ್ದಿನಿ ಯಕ್ಷಗಾನ ಮಂಡಳಿ ಸದಸ್ಯರು ಹಾಗೂ ಅತಿಥಿ ಕಲಾವಿದರು ಸೇರಿ ನಡಿಸಿಕೊಟ್ಟ ಈ ಕಾರ್ಯಕ್ರಮದ ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀಯುತ ದೇವಿಪ್ರಸಾದ್ ಕಟೀಲ್, ಮೃದಂಗದಲ್ಲಿ ಗುರುಗಳಾದ ಶ್ರೀಯುತ ಮುರಳಿಧರ್ ಭಟ್ ಕಟೀಲ್, ಚಂಡೆಯಲ್ಲಿ  ಶ್ರೀಯುತ ಗಣೇಶ್ ಭಟ್, ಚಕ್ರತಾಳದಲ್ಲಿ ಶ್ರೀಯುತ ಜಯಕರ ಬೈಲೂರು ಸಹಕರಿಸಿದರು. ಅರ್ಥದಾರಿಗಳಾಗಿ ಶ್ರೀರಾಮನಾಗಿ ಶ್ರೀಯುತ ಜಯರಾಮ ಆಚಾರ್, ವಿಭಿಷಣನಾಗಿ ಶ್ರೀಯುತ ಗಣೇಶ್ ಭಟ್ ಉಡುಪಿ, ತರಣಿ ಸೇನನಾಗಿ ಶ್ರೀಯುತ ಶ್ರೀಶ ಆಚಾರ್ ಮಟ್ಟು ಕಟಪಾಡಿ, ರಾವಣನಾಗಿ ಶ್ರೀಯುತ ನಾಗರಾಜ್ ಉಪಾಧ್ಯ ಮಾರ್ಪಳ್ಳಿ ಭಾಗವಹಿಸಿದರು.

Read More

ಮಂಗಳೂರು: ವಿದ್ವಾನ್ ಡಾ. ಪ್ರಭಾಕರ ಅಡಿಗ ಕದ್ರಿ ಸಂಪಾದಿತ ಕೃತಿ ‘ಲಘು ಶಾಕಲಮ್’ ಬಿಡುಗಡೆ ಕಾರ್ಯಕ್ರಮವು ಕಲ್ಕೂರ ಪ್ರತಿಷ್ಠಾನದ ಆಶ್ರಯದಲ್ಲಿ ದಿನಾಂಕ 16-09-2023ರಂದು ಸಂಜೆ 4.30ಕ್ಕೆ ಕದ್ರಿ ಕಂಬಳ ರಸ್ತೆಯ ಮಲ್ಲಿಕಾ ಬಡಾವಣೆಯ ಮಂಜು ಪ್ರಾಸಾದದ ವಾದಿರಾಜ ಮಂಟಪದಲ್ಲಿ ನಡೆಯಲಿದೆ. ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಎಸ್. ಪ್ರದೀಪ ಕುಮಾರ ಕಲ್ಕೂರ ಅಧ್ಯಕ್ಷತೆ ವಹಿಸಿ ಕೃತಿ ಬಿಡುಗಡೆಗೊಳಿಸುವರು. ಉಡುಪಿ ಸಂಸ್ಕೃತ ಕಾಲೇಜಿನ ಡಾ. ಶಿವಪ್ರಸಾದ ತಂತ್ರಿ ಶುಭಾಶಂಸನೆಗೈಯ್ಯಲಿದ್ದು ಕೃತಿಕಾರ ಡಾ. ಪ್ರಭಾಕರ ಅಡಿಗರು ಕೃತಿಯನ್ನು ಪರಿಚಯಿಸಲಿದ್ದಾರೆ. ಜೋಯಿಸರು, ಪುರೋಹಿತರಾಗಿರುವ ವಿದ್ವಾನ್ ಹರಿಪ್ರಸಾದ ಭಟ್ ಅವರ ಪ್ರಾಯೋಜಕತ್ವದಲ್ಲಿ ಮುದ್ರಣಗೊಂಡಿರುವ ಈ ಕೃತಿ ಬಿಡುಗಡೆ ಸಮಾರಂಭದಲ್ಲಿ ಅರ್ಚಕ ಬೆಳ್ಮಣ್ ಬಿ. ಶ್ರೀಧರ ಭಟ್, ಜ್ಯೋತಿಷಿ ವಿದ್ವಾನ್ ಮುರಲೀ ತಂತ್ರಿ ಬೈಲೂರು, ಅರ್ಚಕ, ಜ್ಯೋತಿಷಿ ವೇ.ಮೂ. ಶ್ರೀಕಾಂತ ಸಾಮಗ ಭಾಗವಹಿಸಲಿದ್ದಾರೆ.

Read More

ಮೈಸೂರು : ‘ಪರಿವರ್ತನ ರಂಗ ಸಮಾಜ’ ಪ್ರಸ್ತುತ ಪಡಿಸುವ ಪ್ರೊ. ಎಸ್.ಆರ್. ರಮೇಶ್ ವಿನ್ಯಾಸ ಮತ್ತು ನಿರ್ದೇಶನದ ‘ಅಂಗಳದಲ್ಲಿ ಮಂಗಳ ಹಕ್ಕಿಯ ನೆರಳು’ ನಾಟಕ ಪ್ರದರ್ಶನವು ದಿನಾಂಕ 16-09-2023 ಮತ್ತು 17-09-2023ರಂದು ಮೈಸೂರಿನ ನಮನ ಕಲಾ ಮಂಟಪದಲ್ಲಿ ಸಂಜೆ ಗಂಟೆ 6-30ಕ್ಕೆ ನಡೆಯಲಿದೆ. ನಾಟಕ ‘ಅಂಗಳದಲ್ಲಿ ಮಂಗಳ ಹಕ್ಕಿಯ ನೆರಳು’ ಜಗತ್ತಿನ ಶ್ರೇಷ್ಠ ನಾಟಕಕಾರರಲ್ಲಿ ಒಬ್ಬರಾದ ಅತೊಲ್ ಫುಗಾರ್ಡ್ 2014ರಲ್ಲಿ ರಚಿಸಿದ ‘ದಿ ಶಾಡೋ ಆಫ್ ದಿ ಹಮ್ಮಿಂಗ್ ಬರ್ಡ್’ ನಾಟಕದಿಂದ ಪ್ರೇರಿತ ಕೃತಿ. ಸ್ವತಃ ಅತೊಲ್ ಫುಗಾರ್ಡ್ ನಟಿಸಿರುವ ಈ ಕೃತಿಗೆ ಮುಖ್ಯ ಪ್ರೇರಣೆ ಅವರು ಅಮೆರಿಕದಲ್ಲಿ ನೆಲೆಸಿರುವಾಗ ಕಂಡ ಹಮ್ಮಿಂಗ್ ಬರ್ಡಿನ ನೆರಳು. ಪ್ಲೇಟೋ ರಚಿಸಿದ ‘ದಿ ರಿಪಬ್ಲಿಕ್’ ಕೃತಿ ಕೇಂದ್ರ ಬಿಂದು ಸಹ ನೆರಳು. ಪ್ಲೇಟೋನ ತಾತ್ವಿಕ ರೂಪಕ ಹಾಗೂ ಫುಗಾರ್ಡ್ ಕಂಡ ಹಕ್ಕಿಯ ನೆರಳಿನ ನಡುವಿನ ಜಿಜ್ಞಾಸೆ ‘ದಿ ಶಾಡೋ ಆಫ್ ಹಮ್ಮಿಂಗ್ ಬರ್ಡ್’. ಈ ಕೃತಿಯನ್ನು ಮೂಲವಾಗಿಟ್ಟುಕೊಂಡು ಕನ್ನಡದ ನೆಲೆಗೆ ತಕ್ಕಂತೆ ಮೈಸೂರಿನ ರಂಗ…

Read More

ಉಡುಪಿ : ಭಾವನಾ ಫೌಂಡೇಷನ್ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಸಂಯೋಜನೆಯಲ್ಲಿ ಕಲಾಕೃತಿಗಳ ಪ್ರದರ್ಶನ ದಿನಾಂಕ 15-09-2023 ರಿಂದ 24-09-2023ರ ವರೆಗೆ ಬಡಗುಪೇಟೆಯ “ಹತ್ತು ಮೂರು ಇಪ್ಪತ್ತೆಂಟು ಗ್ಯಾಲರಿ”ಯಲ್ಲಿ ನಡೆಯಲಿದೆ. ಕಲಾವಿದರಾದ ಜನಾರ್ದನ ಹಾವಂಜೆ ಹಾಗೂ ಸಂತೋಷ್ ಪೈಇವರ ಗಣೇಶ ಹಾಗೂ ಕೃಷ್ಣನಿಗೆ ಸಂಬಂಧಿಸಿದ ಕಲಾಕೃತಿಗಳು “ಮಾರುತ ಪ್ರಿಯ” ಎನ್ನುವ ಶೀರ್ಷಿಕೆಯಡಿಯಲ್ಲಿ ಪ್ರದರ್ಶನಗೊಳ್ಳಲಿದೆ. ಗಣಪತಿ ಹಾಗೂ ಕೃಷ್ಣನ ಬಗೆಗಿನ ಅನುಭವಗಳನ್ನು ಕಲಾಸಕ್ತರಿಗೆ ಹಂಚುವ ಕಲಾಪ್ರದರ್ಶನ ಇದಾಗಿದ್ದು, ಸುಮಾರು 18 ಕಾವಿ ಕಲೆಯ ಕಲಾಕೃತಿಗಳೂ, 12 ಛಾಯಾಚಿತ್ರಗಳೂ ಇಲ್ಲಿ ಪ್ರದರ್ಶನಗೊಳ್ಳುತ್ತವೆ. ಇದರ ಜೊತೆಗೆ ಬಹುಶಿಸ್ತೀಯ ಅನುಭವಗಳನ್ನು ಪಡೆಯಲು ದಿನಾಂಕ 16-09-2023 ರ ಶನಿವಾರ ವಾಸ್ತುಶಾಸ್ತ್ರಜ್ಞ ಸುಬ್ರಹ್ಮಣ್ಯ ಭಟ್ಟರೊಂದಿಗೆ ಹಾಗೂ ದಿನಾಂಕ 20-09-2023ರ ಬುಧವಾರ ಸಂಜೆ 5ಕ್ಕೆ ನಾಡೋಜ ಕೆ.ಪಿ.ರಾವ್‌ ಇವರೊಂದಿಗೆ ಚಿಂತನ ಮಂಥನ ಕಾರ್ಯಕ್ರಮವೂ ಇದೆ. 18-09-2023ರ ಸೋಮವಾರದಂದು ಸಂಜೆ ಘಂಟೆ 6.00ಕ್ಕೆ ಯಕ್ಷಗುರು ಹಾವಂಜೆ ಮಂಜುನಾಥಯ್ಯ ಹಾಗೂ ವಿದುಷಿ ಅಕ್ಷತಾ ವಿಶು ರಾವ್‌ ಇವರಿಂದ “ಭೂ-ಕೈಲಾಸ” ವಾಚನ-ಪ್ರವಚನ ನಡೆಯಲಿದೆ. ದಿನಾಂಕ…

Read More

ಪುತ್ತೂರು : ಪುತ್ತೂರಿನ ಸ್ಕೌಟಿಂಗ್ ಸೆಂಟರ್ ಬೊಳುವಾರು ಶಾಲಾವಠಾರದ ಅಭಿಜ್ಞಾನ ಮಕ್ಕಳ ನಾಟಕ ಬಳಗ ಪ್ರಯೋಗಿಸುವ ಮೂಲಕಥೆ ಸಚ್ಚಿದಾನಂದ ಹೆಗ್ಗಡೆಯವರ ಮಕ್ಕಳ ನಾಟಕ ‘ಕಾರಂತಜ್ಜನಿಗೊಂದು ಪತ್ರ’ ದಿನಾಂಕ 15-09-2023ರಂದು ಅಪರಾಹ್ನ 3 ಘಂಟೆಗೆ ಬಂಟರ ಭವನ ಕೊಂಬೆಟ್ಟುವಿನ ಶ್ರೀ ರಾಮಕೃಷ್ಣ ಪ್ರೌಢ ಶಾಲೆಯಲ್ಲಿ, ದಿನಾಂಕ 16-09-2023ರಂದು ಅಪರಾಹ್ನ 2 ಘಂಟೆಗೆ ಬೊಳುವಾರು ಶಾಲಾವಠಾರದ ಸ್ಕೌಟಿಂಗ್ ಸೆಂಟರಿನಲ್ಲಿ ಮತ್ತು ದಿನಾಂಕ 19-09-2023ರಂದು ಸಂಜೆ 5 ಘಂಟೆಗೆ ಮಹಾಲಿಂಗೇಶ್ವರ ದೇವಳ ವಠಾರದ ಗಣೇಶೋತ್ಸವ ವೇದಿಕೆಯಲ್ಲಿ ಪ್ರದರ್ಶನಗೊಳ್ಳಲಿದೆ. ಈ ನಾಟಕಕ್ಕೆ ರಂಗಪಠ್ಯ ಮತ್ತು ನಿರ್ದೇಶನ ಐ.ಕೆ.ಬೊಳುವಾರು ಮಾಡಿದ್ದು, ನೃತ್ಯ, ವಸ್ತ್ರ ವಿನ್ಯಾಸ ಹಾಗೂ ಪ್ರಸಾಧನ ಶ್ರೀಮತಿ ರೂಪಕಲಾ ಕೆ. ಮತ್ತು ರಂಗನಿರ್ಮಾಣ ಹಾಗೂ ನಿರ್ವಹಣೆ ಶ್ರೀಮತಿ ಸುನೀತಾ ಎಂ. ಇವರದ್ದು. ‘ಕಾರಂತಜ್ಜನಿಗೊಂದು ಪತ್ರ’ ಮಕ್ಕಳ ನಾಟಕದ ಪಾತ್ರವರ್ಗದಲ್ಲಿ ತೃಶಾ, ಸಾಯಿ ಕೀರ್ತನ್, ಚೈತ್ರೇಶ್, ವಿದೀಕ್ಷಾ, ನೇತ್ರಾ, ಹರ್ಷಿಣಿ, ಧನ್ವಿತಾ, ನಿರೀಕ್ಷಾ, ನಿಶಾ, ಶ್ರೀಕೃತಿ, ಧೃತಿ, ರಶ್ಮಿ ಕೆ., ಶ್ರೇಯಾ, ಸುನೇಧಿ, ಅಚಲ್, ಸಮರ್ಥ, ಸಂಭ್ರಮ ರೈ,…

Read More

ಕಾಸರಗೋಡು: ಕಾಸರಗೋಡಿನ ಮುನ್ಸಿಪಲ್ ಕಾನ್ಫರೆನ್ಸ್ ಹಾಲ್ ನಲ್ಲಿ ಇಲ್ಲಿನ ಸಾಹಿತ್ಯಕ. ಸಾಂಸ್ಕೃತಿಕ ಸಂಘಟನೆಯಾದ ರಂಗ ಚಿನ್ನಾರಿಯ ನೇತೃತ್ವದ ಸ್ವರ ಚಿನ್ನಾರಿ ಸಂಗೀತ ಘಟಕದ ಉದ್ಘಾಟನೆ ದಿನಾಂಕ 09-09-2023ರ ಶನಿವಾರದಂದು ನಡೆಯಿತು. ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ರಾಜ್ಯಾಧ್ಯಕ್ಷ ಹಾಗೂ ಖ್ಯಾತ ಸುಗಮ ಸಂಗೀತ ಗಾಯಕರೂ ಆಗಿರುವ ವೈ.ಕೆ.ಮುದ್ದುಕೃಷ್ಣ “ಗಡಿಪ್ರದೇಶವಾದ ಕಾಸರಗೋಡಿನಲ್ಲಿ ಅಸಂಖ್ಯಾತ ಕನ್ನಡ ಕವಿಗಳು, ಗಾಯಕರು, ಸಂಗೀತಗಾರರು ನೆಲೆಸಿದ್ದಾರೆ. ಅವರಲ್ಲಿರುವ ಪ್ರತಿಭೆಗಳು ರಾಜ್ಯಮಟ್ಟದಲ್ಲಿ ಗುರುತಿಸುವಂತಾಗಬೇಕು. ಈ ನೆಲದ ಸ್ವರದ ನಾದ ಮಾಧುರ್ಯದ ಪ್ರತೀಕವಾಗಿರುವ ಪ್ರತಿಭೆಗಳಿಗೆ ಅವಕಾಶವನ್ನು ನೀಡುವ ವೇದಿಕೆಯನ್ನು ಮುಂದೆ ರಾಜ್ಯದ ರಾಜಧಾನಿಯಲ್ಲೂ ಕಲ್ಪಿಸಿಕೊಡಲಾಗುವುದು” ಎಂದು ಹೇಳಿದರು. ‌ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅಂತರರಾಷ್ಟ್ರೀಯ ಮಿಮಿಕ್ರಿ ಕಲಾವಿದ, ಚಲನಚಿತ್ರನಟರೂ ಆದ ಮಿಮಿಕ್ರಿ ದಯಾನಂದ್ ಅವರು ಸುಗಮ ಸಂಗೀತದ ತಮ್ಮ ನಂಟನ್ನು ನೆನಪಿಸಿಕೊಂಡರು. “ಕನ್ನಡದ ಸಂಗೀತವನ್ನು ಕಾಸರಗೋಡಿನಲ್ಲಿ ಉಳಿಸಬೇಕಾದ ಅಗತ್ಯವನ್ನು ಒತ್ತಿ ಹೇಳಿದರು. ಸಾಂಸ್ಕೃತಿಕ ಕ್ಷೇತ್ರದಲ್ಲಿ ತಮ್ಮದೇ ಛಾಪನ್ನು ಮೂಡಿಸಿದ ರಂಗ ಚಿನ್ನಾರಿ, ನಾರಿ ಚಿನ್ನಾರಿ…

Read More

ಕನ್ನಡದ ಖ್ಯಾತ ಕವಿಯಾಗಿ, ಸಾಹಿತಿಯಾಗಿ, ಸಮಾಜದ ಆದರ್ಶ ವ್ಯಕ್ತಿಯಾಗಿ ಬಾಳಿದ ದಿನಕರ ದೇಸಾಯಿಯವರು ತಮ್ಮ ಸೃಜನಶೀಲವಾದ ಚುಟುಕು ಸಾಹಿತ್ಯದ ಮೂಲಕ ಅಮರರಾದರು. “ಚುಟುಕು ಬ್ರಹ್ಮ” ಎಂಬ ಸತ್ಕೀರ್ತಿ ಅವರ ಪಾಲಿಗೆ ಸ್ಥಿರವಾಯಿತು. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅಲಗೇರಿ ಎಂಬ ಪುಟ್ಟ ಹಳ್ಳಿಯಲ್ಲಿ 10-09-1909ರಲ್ಲಿ ಹುಟ್ಟಿದರು. ತಂದೆ ದತ್ತಾತ್ರೇಯ ದೇಸಾಯಿ ತಾಯಿ ಅಂಬಿಕಾ. ಇವರ ತಂದೆ ಶಾಲಾ ಶಿಕ್ಷಕರಾಗಿದ್ದ ಕಾರಣ ತಂದೆಯ ಪ್ರಭಾವ, ವರ್ಚಸ್ಸು ಇವರಲ್ಲಿ ರಕ್ತಗತವಾಗಿತ್ತು. ರಂಗ ರಾವ್ ಹಿರೇಕರೂರು ಎಂಬ ಪಂಡಿತರು ಇವರನ್ನು ಪ್ರತಿಭಾ ಸಂಪನ್ನರಾಗಿ ಬೆಳೆಸಿದರು. ಧಾರವಾಡದಲ್ಲಿ ಮೆಟ್ರಿಕ್ ಪರೀಕ್ಷೆ, ಇಂಟರ್ ಮೀಡಿಯೇಟ್ ಶಿಕ್ಷಣ ಬೆಂಗಳೂರಿನಲ್ಲಿ, ಬಿ.ಎ. ಕನ್ನಡ ಮೈಸೂರಿನಲ್ಲಿ ಅಧ್ಯಯನ ಮಾಡುತ್ತಾ ಎಂ.ಎ., ಎಲ್.ಎಲ್.ಬಿ. ಪದವೀಧರರಾದರು. ಬಿ.ಎಂ.ಶ್ರೀ ಅವರ ಇಂಗ್ಲೀಷ್ ಗೀತೆಗಳ ಪ್ರಭಾವ, ಬಿ.ಎಂ. ಶ್ರೀಕಂಠಯ್ಯ, ಬಿ.ಸೀತಾ ರಾಮಯ್ಯ, ಬಿ.ಎಸ್. ವೆಂಕಣ್ಣ ಮೊದಲಾದ ಸಾಹಿತಿ ಸಾಧಕರ ಗಾಢವಾದ ಪ್ರಭಾವದಿಂದ ದಿನಕರ ದೇಸಾಯಿಯವರು ಸಮರ್ಥ ಸಾಹಿತಿಯಾಗಿ ಬೆಳೆದು ಪ್ರವರ್ಧಮಾನರಾದರು. ಮಾತ್ರವಲ್ಲ ರಾಜಕೀಯ ಧುರೀಣರಾದರು. ಭಾರತ ಸೇವಕ…

Read More

ಯಕ್ಷಗಾನ ನಮ್ಮ ಹೆಮ್ಮೆಯ ಸಂಕೇತವಾದ ಒಂದು ಶ್ರೇಷ್ಠ ಕಲೆ. ಅದು ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಮೇರುಕಲೆ. ಇಂತಹ ಶ್ರೀಮಂತ ಕಲೆಯಲ್ಲಿ ಮಿಂಚುತ್ತಿರುವ ಕಲಾವಿದರು ಮಂಜುನಾಥ ಮೊಗವೀರ ಮತ್ಯಾಡಿ. ಅಕ್ಕಣಿ ಮೊಗವೀರ ಹಾಗೂ ಸದಿಯ ಮೊಗವೀರ ಮತ್ಯಾಡಿ ಇವರ ಮಗನಾಗಿ 26.01.1978ರಂದು ಜನನ. ಬಿ.ಎ ಪದವಿಯನ್ನು ಪಡೆದಿರುತ್ತಾರೆ. ಯಕ್ಷಗಾನದ ಪ್ರಥಮ ಗುರುಗಳು ಶ್ರೀಯುತ ಸುಬ್ರಾಯ ಮಲ್ಯ ಹಲ್ಲಾಡಿ, ಈಗ ಪೂರ್ಣ ಗುರುಗಳಾಗಿ ತಿದ್ದಿ ತೀಡಿದವರು ಪ್ರಸಾದ್ ಕುಮಾರ್ ಮೊಗೆಬೆಟ್ಟು. ಚಿಕ್ಕವನಿರುವಾಗ ಊರಿನ ಕಲಾ ಸಂಘ ಅಂಬಾ ಯಕ್ಷಗಾನ ಕಲಾ ಸಂಘ ಇದರ ಪ್ರದರ್ಶನ. ಅದರಲ್ಲಿ ನನ್ನ ನೆಚ್ಚಿನ ಕಲಾವಿದರು ವಾಸುದೇವ ರಾವ್ ಮತ್ಯಾಡಿ. ಇವರ ಅಭಿನಯ, ಕುಣಿತ ಮಾತು ಇದಕ್ಕೆ ತುಂಬಾ ಆಕರ್ಷಿತನಾಗಿ, ಹಾಗೆಯೇ ಅವರನ್ನೇ ಅನುಸರಿಸಿದೆ. ಅವರು ಪ್ರಸ್ತುತ ಕಾರ್ಕಳದಲ್ಲಿ ಲೆಕ್ಕ ಪರಿಶೋಧಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಂದೆ ತಾಯಿ ಕೂಡ ಪ್ರೇರಕರು. ಏಕೆಂದರೆ, ನಾನು ಯಕ್ಷಗಾನ ಮನೆಯಲ್ಲಿ ಕುಣಿದಾಗ ಅವರು ಸಂತೋಷ ಪಡುತ್ತಿದ್ದರು. ಅದೇ ನನಗೆ ಪ್ರೇರಣೆ. ರಂಗಕ್ಕೆ ಹೋಗುವ ಮೊದಲು…

Read More

ಮೈಸೂರು : ಆನ್ ಸ್ಟೇಜ್ ಯೂತ್ ಥೀಯೆಟರ್ ಪ್ರಸ್ತುತ ಪಡಿಸುವ ಪಿ. ಲಂಕೇಶ್ ರಚಿಸಿರುವ ವಿನೋದ ಸಿ.ಮೈಸೂರು ಇವರ ಪರಿಕಲ್ಪನೆ ಮತ್ತು ನಿರ್ದೇಶನದ ‘ಪೊಲೀಸರಿದ್ದಾರೆ ಎಚ್ಚರಿಕೆ’ ನಾಟಕದ ಪ್ರದರ್ಶನವು ಮೈಸೂರಿನ ಕಲಾಮಂದಿರ ಆವರಣದ ಕಿರುರಂಗ ಮಂದಿರದಲ್ಲಿ ದಿನಾಂಕ 10-09-2023ರಂದು ಸಂಜೆ 7 ಗಂಟೆಗೆ ನಡೆಯಲಿದೆ. ನಾಟಕದ ಸಂಗೀತ ನಿರ್ವಹಣೆ ಉಲ್ಲಾಸ್ ಮತ್ತು ಮೇಕಪ್ ಅಂಕೇಶ್ ಮಾಡಲಿದ್ದು, ಪಾತ್ರಧಾರಿಗಳಾಗಿ ಗಣೇಶ್ ಬಿ.ಎಲ್., ನಂದೀಶ್ ಯು. ಮತ್ತು ಮನೋಹರ್ ವೈ. ಕಲಾಭಿಮಾನಿಗಳನ್ನು ರಂಜಿಸಲಿದ್ದಾರೆ. ನಿರ್ದೇಶಕ ವಿನೋದ ಸಿ. ಮೈಸೂರು : ಮಂಡ್ಯ ರಮೇಶ್ ರವರ “ನಟನ” ರಂಗ ಶಾಲೆಯಲ್ಲಿ 2 ವರ್ಷ ವಿದ್ಯಾರ್ಥಿಯಾಗಿ, ಶ್ರೀ ಶಿವಕುಮಾರ ರಂಗ ಪ್ರಯೋಗ (ಸಾಣೀಹಳ್ಳಿ) ಶಾಲೆಯಲ್ಲಿ ಪದವೀಧರರು, ಶಿವ ಸಂಚಾರ ತಿರುಗಾಟ, ಡಾ. ಗಂಗೂ ಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದಲ್ಲಿ ಎಂ.ಎ. ಡ್ರಾಮಾ ಮಾಡಿರುತ್ತಾರೆ. ನಟನಾ ತಯಾರಿ ವರ್ಕ್ ಶಾಪ್ : Workshop in Mysuru… for theatre ನಲ್ಲಿ 21 ದಿನಗಳ workshop.…

Read More