Author: roovari

06 ಮಾರ್ಚ್ 2023 ತುಮಕೂರು: ತುಮಕೂರು ಜಿಲ್ಲೆಯ ಸದ್ಯದ ಸಾಂಸ್ಕೃತಿಕ ರಾಯಭಾರಿಯಂತೆ ಮೆಳೇಹಳ್ಳಿ ದೇವರಾಜ್ ನಿರಂತರವಾಗಿ ರಂಗತರಬೇತಿ ನೀಡುತ್ತಾ ನೂರಾರು ವಿದ್ಯಾರ್ಥಿಗಳಿಗೆ ಬಣ್ಣದ ಪರಿಚಯ ಮಾಡಿಕೊಟ್ಟಿದ್ದಾರೆ. ಅವರ ಜೊತೆ ಕೈಜೋಡಿಸಿರುವ ಅವರ ಕುಟುಂಬದ ಎಲ್ಲಾ ಸದಸ್ಯರು ಅಭಿನಂದನಾರ್ಹರು. ಇಂತಹ ಕಾರ್ಯಗಳಿಗೆ ನಮ್ಮ ಬೆಂಬಲ ಸದಾ ಇರುತ್ತದೆ ಎಂದು ತುಮಕೂರು ವಿ.ವಿ. ಕಲಾ ಕಾಲೇಜು ಪ್ರಾಂಶುಪಾಲರಾದ ಪ್ರೊ. ಕರಿಯಣ್ಣ ಅಭಿಪ್ರಾಯಪಟ್ಟರು. ಅವರು ಡಮರುಗ ತಂಡವು ದಿನಾಂಕ 04-03-2023 ಶನಿವಾರ ಮೆಳೇಹಳ್ಳಿಯ ವಿ. ರಾಮಮೂರ್ತಿ ರಂಗಸ್ಥಳದಲ್ಲಿ ಪ್ರಯೋಗಿಸಿದ ಟಿ.ಪಿ. ಕೈಲಾಸಂರವರ ಟೊಳ್ಳು ಗಟ್ಟಿ ನಾಟಕ ಉದ್ಘಾಟಿಸಿ ಮಾತನಾಡಿದರು. ನಂತರ ಮಾತನಾಡಿದ ಉಪನ್ಯಾಸಕ ಡಾ. ಶಿವಣ್ಣ ಬೆಳವಾಡಿಯವರು ವೃದ್ಧಾಶ್ರಮಗಳು ಹೆಚ್ಚಾಗುತ್ತಿರುವ ಇಂದಿನ ಸಮಾಜದಲ್ಲಿ ಚಿಕಿತ್ಸಕ ರೀತಿಯಲ್ಲಿ ಕೈಲಾಸಂ ನಾಟಕ ನಿಲ್ಲುತ್ತದೆ. ಇಂದಿನ ಯುವಕರಿಗೆ ನಾಟಕದ ಆಶಯಗಳು ದಕ್ಕುವಂತಾಗಲಿ ಎಂದರು. ಸಭಾರಂಭದಲ್ಲಿ ಹೋಬಳಿ ಕ.ಸಾ.ಪ. ಅಧ್ಯಕ್ಷ ಬಿ. ವಜ್ರಪ್ಪ, ರಂಗ ನಿರ್ದೇಶಕ ಮೆಳೇಹಳ್ಳಿ ದೇವರಾಜು ಉಪಸ್ಥಿತರಿದ್ದರು. ನಂತರ ಸಮಸಮಾಜವನ್ನು ಕಟ್ಟಿದ ಸಮಾಜಕ್ಕೆ ಯಾವುದೇ ಉಪಯೋಗವಿಲ್ಲದ, ಸ್ವಾರ್ಥವನ್ನು ಕಟ್ಟಿಕೊಂಡು…

Read More

6 ಮಾರ್ಚ್ 2023, ಉಡುಪಿ: ಜನಪದ ಉಳಿಸಲು ಜಾನಪದ ಹಬ್ಬ – ತಲ್ಲೂರು ನಮ್ಮ ಜನಪದ ಕಲೆಗಳನ್ನು ಉಳಿಸಬೇಕು ಎಂಬ ಮಹತ್ತರವಾದ ಉದ್ದೇಶದಿಂದ ಜಿಲ್ಲೆಯಾದ್ಯಂತ ಜಾನಪದ ಹಬ್ಬವನ್ನು ಆಚರಿಸಲಾಗುತ್ತಿದೆ ಎಂದು ಜಾನಪದ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ತಿಳಿಸಿದರು. ಸುಮನಸಾ ಕೊಡವೂರು, ತಲ್ಲೂರ್ಸ್‌ ಫ್ಯಾಮಿಲಿ ಟ್ರಸ್ಟ್‌, ಕರ್ನಾಟಕ ಜಾನಪದ ಪರಿಷತ್ತು, ಉಡುಪಿ ಜಿಲ್ಲಾ ಘಟಕದ ವತಿಯಿಂದ ಭಾನುವಾರ ಅಜ್ಜರಕಾಡು ಭುಜಂಗ ಪಾರ್ಕ್‌ನಲ್ಲಿ ನಡೆದ ಜಾನಪದ ಹಬ್ಬ–2023 ಹಾಗೂ ಜಾನಪದ ಸಂಘಟಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಸುಮನಸಾದ ರಂಗಹಬ್ಬದ ವೇದಿಕೆಯಲ್ಲಿ ಅವರು ಏಳು ದಿನ ಕಾರ್ಯಕ್ರಮ ನಡೆಸಿದ್ದರು. ಅಲ್ಲಿಯೇ ಒಂದು ದಿನ ಕಾರ್ಯಕ್ರಮ ಮಾಡಲು ವೇದಿಕೆ ಒದಗಿಸಿ ಎಂದು ಕೇಳಿದಾಗ ಅವಕಾಶ ಮಾಡಿ ಕೊಟ್ಟಿದ್ದಾರೆ. ಜಿಲ್ಲೆಯಲ್ಲಿ ಈಗಾಗಲೇ 25ಕ್ಕೂ ಅಧಿಕ ಕಾರ್ಯಕ್ರಮಗಳನ್ನು ನಡೆಸಿದ್ದೇವೆ. ಎಲ್ಲರ ಸಹಕಾರವನ್ನು ಪಡೆದು ಇನ್ನಷ್ಟು ಕಡೆಗಳಲ್ಲಿ ಜಾನಪದ ಹಬ್ಬ ನಡೆಸಲಾಗುವುದು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಕಾಶ್‌ ಜಿ. ಕೊಡವೂರು ಮಾತನಾಡಿ, ಕರ್ನಾಟಕದ ಕಲೆಗಳಲ್ಲಿ…

Read More

6 ಮಾರ್ಚ್ 2023, ಮಂಗಳೂರು: ಇದೊಂದು ವಿಶೇಷ ಸಂದರ್ಭ, ಒಂದು ಅಪೂರ್ವ ಸಂಗೀತ ಕಾರ್ಯಕ್ರಮಕ್ಕೆ ಮಂಗಳೂರು ಸಾಕ್ಷಿಯಾಗಲಿದೆ. ವರಾಹ ರೂಪಂ ವ್ಹಾ..ಪೊರ್ಲುಯಾ ಕಾರ್ಯಕ್ರಮದ ಈ ಶೀರ್ಷಿಕೆಯೇ ಕುತೂಹಲ ಹುಟ್ಟಿಸಿದೆ. ಜಗತ್ತಿನಾದ್ಯಂತ ತುಳುವರನ್ನು ರೋಮಾಂಚನ ಗೊಳಿಸಿದ್ದ “ವ್ಹಾ ಪೊರ್ಲುಯಾ” ಎಂಬ ಹಾಡು ಆಗಲೇ “ಇದು ಹೇಗೆ ಎಲ್ಲಿಂದ ಯಾರಿಂದ ಹುಟ್ಟಿಕೊಂಡಿತು”..? ಎಂಬ ಊಹೆಗಳನ್ನು ಹುಟ್ಟಿಸಿಹಾಕಿತ್ತು. ಹಿರಿಯರೋರ್ವರು ಇದು ಶತಮಾನದ ಹಾಡು ಎಂದಿದ್ದರು. ಈಗ ಹಲವಾರು ವರ್ಷಗಳ ಬಳಿಕ (15 ಅಥವಾ 16 ವರ್ಷಗಳು) “ವರಾಹ ರೂಪಂ” ಎನ್ನುವ ಹಾಡು ಜಗತ್ತಿನಾದ್ಯಂತ ಇಡೀ ದೇಶದ ಸಂಗೀತ ಪ್ರೇಮಿಗಳು ಹುಬ್ಬೇರಿಸುವಂತೆ ಮಾಡಿದೆ. ಸಂಗೀತ, ಸಾಹಿತ್ಯ, ಹಾಡುಗಾರಿಕೆ ಒಂದಕ್ಕೊಂದು ಮಿಗಿಲು. ಈ ಹಾಡಿನಿಂದ ಪ್ರೇರಣೆಗೊಂಡ ಸಂಗೀತಕಾರರುಗಳು ತಾವೂ ತಮ್ಮದೇ ರೀತಿಯಲ್ಲಿ ಹಾಡಿ, ಭಾರಿಸಿ ಆಸ್ವಾದಿಸಿಕೊಂಡಿದ್ದಾಗಿದೆ. ಈ ಎರಡೂ ಹಾಡುಗಳಲ್ಲಿ ಜಾನಪದ ಮತ್ತು ಶಾಸ್ತ್ರೀಯ ಸಂಗೀತದ ಮೂಲ ಸತ್ವಗಳು ಅಡಕವಾಗಿರುವುದು ಮತ್ತೊಂದು ವಿಶೇಷ. ಎರಡೂ ಹಾಡುಗಳ ಮೂಲ ಗಾಯಕರು, ಹಾಡು ಬರೆದಿರುವ ಸಾಹಿತಿ ಇವರ ಒಗ್ಗೂಡುವಿಕೆಯ ಸಂಗೀತ ಕಾರ್ಯಕ್ರಮ…

Read More

06 ಮಾರ್ಚ್ 2023, ಮಂಗಳೂರು: ಕಣ್ಣೂರು ವಿಶ್ವವಿದ್ಯಾನಿಲಯದ 2022-2023ರ ಸಾಲಿನ ವಿವಿಧ ವಿಭಾಗಗಳ ಕಲೋತ್ಸವ ಸ್ಪರ್ಧೆಗಳು ತಲಶ್ಯೇರಿ ಬ್ರನ್ನನ್ ಕಾಲೇಜಿನಲ್ಲಿ ಮಾರ್ಚ್ 1ರಿಂದ ನಡೆಯುತ್ತಿದ್ದು, ಸದಾಶಿವ ಮಾಸ್ಟರ್ ಪೊಯ್ಯೆ ಇವರ ನಿರ್ದೇಶನದಲ್ಲಿ ಸರಕಾರಿ ಕಾಲೇಜು ಕಾಸರಗೋಡು ಇಲ್ಲಿನ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದ ‘ಬಲಿ’ ನಾಟಕ ಪ್ರಥಮ ಸ್ಥಾನ ಗಳಿಸುವುದರೊಂದಿಗೆ ತಂಡದ ಸ್ವರ್ಣ ಕೆ.ಎಸ್. ವೈಯಕ್ತಿಕ ವಿಭಾಗದಲ್ಲಿ ಅತ್ಯುತ್ತಮ ನಾಯಕಿ ನಟಿ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ. ಅಕ್ರಮ ಭೂ ಕಬಳಿಕೆ, ನಗರೀಕರಣದ ಸೋಗಿನಲ್ಲಿ ಕಳೆದುಹೋಗುತ್ತಿರುವ ಪಾರಂಪರಿಕ ಬದುಕಿನ ಕುರಿತಾಗಿರುವ ‘ಬಲಿ’ ನಾಟಕ ಮೂಲತ: ಅಕ್ಷತಾರಾಜ್ ಪೆರ್ಲರ ‘ಬೇಲಿ’ ತುಳು ನಾಟಕವಾಗಿದೆ. ‘ಬೇಲಿ’ 2020ರ ಕುಡ್ಲ ತುಳುಕೂಟ ಆಯೋಜನೆಯ ಧರ್ಮಸ್ಥಳ ರತ್ನವರ್ಮ ಹೆಗ್ಗಡೆ ಹಸ್ತಪ್ರತಿ ಪ್ರಶಸ್ತಿ ಪುರಸ್ಕೃತ ನಾಟಕವಾಗಿದ್ದು ಮಂಗಳೂರು ವಿಶ್ವವಿದ್ಯಾನಿಲಯ ಮಂಜುನಾಥೇಶ್ವರ ತುಳುಪೀಠ ಪ್ರಕಟಿಸಿದ್ದು, 2021ರ ಸಾಲಿನ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನಿತ ಕೃತಿಯಾಗಿದೆ. ಮೂಲ ತುಳುನಾಟಕ ಮಂಗಳೂರು ಆಕಾಶವಾಣಿಯ ತುಳು ನಾಟಕ ಸರಣಿಯಲ್ಲಿ ಶಶಿರಾಜ್ ಕಾವೂರು ನಿರ್ದೇಶನದಲ್ಲಿ ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ…

Read More

05 ಮಾರ್ಚ್ 2023, ಉಡುಪಿ: ಸಿನಿಮಾ, ಧಾರಾವಾಹಿಗಳಿಗಿಂತ ರಂಗಭೂಮಿ ದೊಡ್ಡದು: ಪರಮಾನಂದ ಸಾಲಿಯಾನ್‌ ಸಿನಿಮಾ, ಧಾರವಾಹಿಗಳು ಚೆನ್ನಾಗಿ ಕಾಣಬಹುದು. ಆದರೆ ಅಲ್ಲಿ ಎಷ್ಟು ಕಟ್‌, ರೀಟೇಕ್‌ಗಳು ಇರುತ್ತವೆ ಎಂಬುದು ನೋಡುಗರಿಗೆ ಗೊತ್ತಿರುವುದಿಲ್ಲ. ಈ ರೀತಿಯ ಕಟ್‌, ರೀಟೇಕ್‌ಗಳಿಲ್ಲದೇ ರಂಗದಲ್ಲಿ ಪ್ರದರ್ಶನಗೊಳ್ಳುವ ಕಲೆಗಳಲ್ಲಿ ಇಲ್ಲ. ಹಾಗಾಗಿ ರಂಗಭೂಮಿ ದೊಡ್ಡದು ಎಂದು ರಂಗಕರ್ಮಿ ಪರಮಾನಂದ ಸಾಲಿಯಾನ್‌ ಹೇಳಿದರು. ಸಾಂಸ್ಕೃತಿಕ ಸಂಘಟನೆ ಸುಮನಸಾ ಕೊಡವೂರು ವತಿಯಿಂದ ಅಜ್ಜರಕಾಡು ಭುಜಂಗಪಾರ್ಕ್‍ನಲ್ಲಿ ಹಮ್ಮಿಕೊಂಡಿರುವ ರಂಗಹಬ್ಬ-11 ಇದರ ಏಳನೇ ದಿನದ ಕಾರ್ಯಕ್ರಮದಲ್ಲಿ ಶನಿವಾರ ಅವರು ಮಾತನಾಡಿದರು. ಹಿಂದೆ ರಂಗಭೂಮಿಯಲ್ಲಿ ಅಷ್ಟೊಂದು ಪ್ರಯೋಗಗಳು ಇರಲಿಲ್ಲ. ಹಾಸ್ಯ ನಾಟಕಕ್ಕೆ ದುರಂತ ಹಾಡು, ದುರಂತ ನಾಟಕಕ್ಕೆ ಹಾಸ್ಯ ಪದ್ಯ ಬರೆದು ಮಾಡಲಾಗುತ್ತಿತ್ತು. ಇವತ್ತು ರಂಗಭೂಮಿ ಬಹಳ ಎತ್ತರಕ್ಕೆ ಹೋಗಿದೆ. ಬಹಳ ರಂಗತಂತ್ರಗಳಿವೆ. ರಂಗಭೂಮಿಯಲ್ಲಿ ನಿರ್ದೇಶಕರಿಂದ ತರಬೇತಿ ಪಡೆದು ಒಮ್ಮೆ ರಂಗಕ್ಕೆ ಹೋದ ಮೇಲೆ ಯಾರೂ ಸಹಾಯಕ್ಕೆ ಬರುವುದಿಲ್ಲ. ಸ್ವಂತ ಪ್ರತಿಭೆ, ಪರಿಶ್ರಮದಿಂದಲೇ ಕಲೆ ಪ್ರದರ್ಶಿಸಬೇಕಾಗುತ್ತದೆ ಎಂದು ವಿಶ್ಲೇಷಿಸಿದರು. ಸುಮನಸಾ ಯಾವುದನ್ನೇ ಮಾಡಲಿ ಶಿಸ್ತುಬದ್ಧವಾಗಿ ಮಾಡುತ್ತದೆ. ನವ್ಯ, ವಿಡಂಬನಾತ್ಮಕ ನಾಟಕಗಳಿಗೆ…

Read More

05 ಮಾರ್ಚ್ 2023, ಮಂಗಳೂರು: ಯಕ್ಷಗಾನ ಒಂದು ವಿಶ್ವವಿಖ್ಯಾತ ಕಲೆ. ಗಾನ-ನೃತ್ಯ-ಮಾತುಗಾರಿಕೆ-ವೇಷ ಭೂಷಣಗಳ ಮೇಳೈಕೆ ಈ ಯಕ್ಷಗಾನ. ಇದರಲ್ಲಿ ಪದ್ಯ ಹೇಳುವ ಭಾಗವತರದ್ದು ನಿರ್ದೇಶಕರ ಕೆಲಸ. ನಿರ್ದೇಶನ – ಸಮಯಪ್ರಜ್ಞೆ – ಸೃಜನಶೀಲತೆ ಮುಂತಾದ ಗುಣಗಳು ಇದ್ದಲ್ಲಿ ಮಾತ್ರ ಒಬ್ಬ ಯಶಸ್ವೀ ಭಾಗವತರಾಗುವುದಕ್ಕೆ ಸಾಧ್ಯ. ನಮ್ಮ ನಡುವೆ ಇಂತಹ ನೂರಾರು ಭಾಗವತರಿದ್ದಾರೆ. ಅವರಲ್ಲಿ ಕೆಲವರು ಪ್ರಸಿದ್ಧಿಯನ್ನು ಪಡೆದರೆ, ಇನ್ನೂ ಕೆಲವರು ಎಲೆ ಮರೆಯ ಕಾಯಿಯಂತೆ ಯಕ್ಷಕಲಾ ಸೇವೆಯಲ್ಲಿ ತೊಡಗಿದ್ದಾರೆ. ಅಂತವರಲ್ಲಿ ಒಬ್ಬರು ಶ್ರೀ ಸಂತೋಷ್ ಕುಮಾರ್ ಆರ್ಡಿ. 19 .061984ರಂದು ಲಕ್ಷ್ಮಿ ಹಾಗೂ ಶ್ಯಾಮ ಪೂಜಾರಿ ಇವರ ಮಗನಾಗಿ ಜನನ. ೫ ನೇ ತರಗತಿವರೆಗೆ ವಿದ್ಯಾಭ್ಯಾಸ. ಸುತ್ತಮುತ್ತಲಿನ ಪರಿಸರದಲ್ಲಿ ನಡೆಯುತ್ತಿದ್ದ ಯಕ್ಷಗಾನ ಪ್ರದರ್ಶನಗಳನ್ನು ನೋಡಿ ಅದರ ಪ್ರಭಾವದಿಂದ ಪ್ರೇರಣೆಗೊಂಡು ಯಕ್ಷಗಾನ ರಂಗಕ್ಕೆ ಬಂದರು. ಪ್ರಾಚಾರ್ಯ ಕೆ.ಪಿ.ಹೆಗಡೆ ಹಾಗೂ ಎನ್.ಜಿ ಹೆಗಡೆ ಇವರ ಯಕ್ಷಗಾನದ ಗುರುಗಳು. ಗೋಳಿಗರಡಿ ಮೇಳದಲ್ಲಿ 1 ವರ್ಷ ಶ್ರುತಿ ಪೆಟ್ಟಿಗೆ ಕೆಲಸ ಮಾಡಿ, ಮಡಾಮಕ್ಕಿ ಮೇಳದಲ್ಲಿ ಸಂಗೀತಗಾರರಾಗಿ 1…

Read More

05 ಮಾರ್ಚ್, ಮೈಸೂರು: “ಪಠ್ಯವನ್ನು ರಂಗ ಚಟುವಟಿಕೆಯ ಮೂಲಕ ಕಲಿಸುವ ಆಟ – ಪಾಠ ವಿಧಾನವನ್ನು ಇಂಡಿಯನ್ ಥಿಯೇಟರ್ ಫೌಂಡೇಷನ್ ಅನುಷ್ಟಾನಗೊಳಿಸುತ್ತಿದ್ದು, ನಗರದ ಹಾರ್ಡ್ವಿಕ್ ಶಿಕ್ಷಣ ಸಂಸ್ಥೆಯ  ಮೂಲಕ ಜಾರಿಗೊಳಿಸಲಾಗುವುದು” ಎಂದು ಭಾರತೀಯ  ಶೈಕ್ಷಣಿಕ ರಂಗಭೂಮಿ ಸಂಸ್ಥೆಯ ನಿರ್ದೇಶಕ ಪ್ರಸನ್ನ ಹೇಳಿದರು. ಹಾರ್ಡ್ವಿಕ್ ಶಿಕ್ಷಣ ಸಂಸ್ಥೆಯಲ್ಲಿ ಮಾರ್ಚ್ ತಿಂಗಳ 2 ನೇ ತಾರೀಖಿನಂದು ಆಯೋಜಿಸಿದ್ದ ಶೈಕ್ಷಣಿಕ ರಂಗ ಭೂಮಿ ಚಟುವಟಿಕೆಗಳ ಉದ್ಘಾಟನೆಯ ಕಾರ್ಯಕ್ರಮದಲ್ಲಿ ಅವರು  ಮಾತನಾಡಿದರು. ಶಿಕ್ಷಕರಿಗೆ ಪಠ್ಯಕ್ರಮ ಮುಗಿಸುವ ಧಾವಂತ, ಮಕ್ಕಳಿಗೆ ಅಂಕ ಮತ್ತು ಶ್ರೇಣಿ ಮೂಲಕ ಮುನ್ನುಗುವ ಛಲದಿಂದಾಗಿ ಪಠ್ಯವನ್ನು ಆಟ-ಪಾಠವಾಗಿ ಕಲಿಯುವ ವಿಧಾನ ಕಣ್ಮರೆಯಾಗಿದೆ. ಪಠ್ಯಕ್ರಮ-ಶ್ರೇಣಿ ಗುರಿ ಇಲ್ಲದ ಶಿಕ್ಷಣ ಸಂಸ್ಥೆಗಳು ಶಾಪಗ್ರಸ್ತ ಸಂಸ್ಥೆಗಳಂತೆ ಉಳಿಯುತ್ತದೆ, ಮುಚ್ಚ ಬೇಕಾಗುತ್ತದೆ. ಇಂಥ ‘ಶಾಪ’ವನ್ನು ವರವಾಗಿ ಪರಿವರ್ತಿಸುವ ಶೈಕ್ಷಣಿಕ ರಂಗಭೂಮಿ ಮೂಲಕ ಪಠ್ಯವನ್ನೇ ರಂಗ ಪ್ರಸಂಗವಾಗಿ ಪರಿವರ್ತಿಸಿ ಕಲಿಸುವ ವಿಧಾನವನ್ನು ಈ ಸಂಸ್ಥೆ ಅಳವಡಿಸುತ್ತದೆ. 1960ರಲ್ಲೇ ಆದ್ಯರಂಗಾಚಾರ್ಯರು ನಾಟಕ ಅಕಾಡೆಮಿಯಲ್ಲಿದ್ದಾಗ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ, ರಾಷ್ಟ್ರೀಯ ಶಿಕ್ಷಣ ಸಂಸ್ಥೆ…

Read More

04 ಮಾರ್ಚ್ 2023,ಉಡುಪಿ: ಅನಗತ್ಯ ಗೊಂದಲಗಳಿಂದ ಹೊರಬರಲು ರಂಗಮಾಧ್ಯಮ ಆಗತ್ಯ: ಕೃಷ್ಣಮೂರ್ತಿ ಆಚಾರ್ಯ ಉಡುಪಿ: ದೇಶವು ಎದುರಿಸುತ್ತಿರುವ ಗೊಂದಲಗಳಿಗೆ ಪರಿಹಾರ ಕಂಡುಕೊಳ್ಳಲು, ಆ ಗೊಂದಲಗಳಿಂದ ಹೊರಬರಲು ರಂಗಮಾಧ್ಯಮ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ಅಗತ್ಯ ಎಂದು ಸಮಾಜಸೇವಕ ಕೆ. ಕೃಷ್ಣಮೂರ್ತಿ ಆಚಾರ್ಯ ಹೇಳಿದರು. ಸಾಂಸ್ಕೃತಿಕ ಸಂಘಟನೆ ಸುಮನಸಾ ಕೊಡವೂರು ವತಿಯಿಂದ ಅಜ್ಜರಕಾಡು ಭುಜಂಗಪಾರ್ಕ್‍ನಲ್ಲಿ ಹಮ್ಮಿಕೊಂಡಿರುವ ರಂಗಹಬ್ಬ-11 ಇದರ ಶುಕ್ರವಾರದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಲೆಗಳು ಜಾತಿ, ಮತ, ಧರ್ಮಗಳನ್ನು ಮಿರಿ ಎಲ್ಲರನ್ನು ಒಗ್ಗೂಡಿಸುತ್ತದೆ. ಮನರಂಜನೆಯಿಂದ ಮನಸ್ಥಿತಿ ಸುಧಾರಣೆಯಾಗುತ್ತದೆ. ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದು ವಿಶ್ಲೇಷಿಸಿದರು. ನಿರಂತರ ಕಲೆ ಸಾಂಸ್ಕೃತಿಕ ಚಟುವಟಿಕೆ ನಡೆಯುವುದು ಈ ಮಣ್ಣಿನ ವೈಶಿಷ್ಟ್ಯ. ಸುಮನಸಾ ಇಂಥ ವಿಶಿಷ್ಟತೆಯನ್ನು ಹರಡುತ್ತಿರುವ ಸಂಸ್ಥೆ. ಇದು ರಂಗಭೂಮಿಗೆ ಸೀಮಿತವಾಗೇ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರಗಳಲ್ಲಿಯೂ ಕೆಲಸ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ನಾವು ಎಷ್ಟು ಸಮಯ ಬದುಕಿದ್ದೆವು ಎಂಬುದು ಮುಖ್ಯವಲ್ಲ. ಬದುಕಿದ್ದಾಗ ಏನು ಮಾಡಿದ್ದೆವು. ಸಮಾಜಕ್ಕೆ ಏನು ಕೊಡುಗೆ ನೀಡಿದ್ದೆವು ಎಂಬುದು ಮುಖ್ಯ. ಹಾಗಾಗಿ…

Read More

04 ಮಾರ್ಚ್ 2023, ಮಂಗಳೂರು: ಜ್ಞಾನವೇ ಎಲ್ಲ ಧರ್ಮಗಳ ಸಾರ: ಪ್ರೊ.ಯಡಪಡಿತ್ತಾಯ ಮಂಗಳಗಂಗೋತ್ರಿ: ಭಾರತೀಯ ದರ್ಶನಗಳು ಬದುಕಿನ ಮಾನಸಿಕ, ಬೌದ್ದಿಕ, ಅಧ್ಯಾತ್ಮಿಕ ವಿಕಸನದ ಜೊತೆಗೆ ಸಾಮಾಜಿಕ ಸಂಸ್ಕಾರವನ್ನು ಉನ್ನತಿಗೇರಿಸುವ ಜ್ಞಾನ ಪರಂಪರೆಯನ್ನು ಹೊಂದಿದೆ. ಜ್ಞಾನಕ್ಕೆ ಯಾವುದೇ ಮಿತಿಯಿಲ್ಲ, ಗಡಿಗಳಿಲ್ಲ, ಜ್ಞಾನ ಎಲ್ಲಕ್ಕಿಂತ ಮಿಗಿಲು ಎಂಬುದು ಜಗತ್ತಿನ ಎಲ್ಲ ಧರ್ಮಗಳ ಸಾರವಾಗಿದೆ. ಭಾರತೀಯ ವೇದೊಪನಿಷತ್ತುಗಳು ಮತ್ತು ದರ್ಶನಗಳು ಜಾಗತಿಕ ಮನ್ನಣೆಗೆ ಪಾತ್ರವಾಗಿದೆ ಎಂದು ಮಂಗಳೂರು ವಿವಿಯ ಕುಲಪತಿ ಪ್ರೊ. ಪಿ.ಎಸ್ ಯಡಪಡಿತ್ತಾಯ ಹೇಳಿದರು. ಅವರು ಸೋಮವಾರ ಮಂಗಳೂರು ವಿವಿ ಪ್ರಸಾರಾಂಗ ಪ್ರಕಟಿಸಿದ ಸಮಾಜಶಾಸ್ತ್ರಜ್ಞ ಉಡುಪಿ ಶ್ರೀಪತಿ ತಂತ್ರಿ ಇವರ ‘ಭಾರತೀಯ ದರ್ಶನಗಳ ಇತಿಹಾಸ – ಒಂದು ಮಾನವ ಶಾಸ್ತ್ರೀಯ ವಿಮರ್ಶೆ’ ಎಂಬ ಕೃತಿಯನ್ನು ಸಿಂಡಿಕೇಟ್ ಸಭಾಂಗಣದಲ್ಲಿ ಬಿಡುಗಡೆಗೊಳಿಸಿ ಮಾತನಾಡಿದರು. ಶ್ರೀಪತಿ ತಂತ್ರಿಯವರದು ವಿದ್ವತ್ಪೂರ್ಣ ನೇರ ನಡೆ ನುಡಿಯ ವ್ಯಕ್ತಿತ್ವ . ಚಿಕಿತ್ಸಕ ದೃಷ್ಟಿಕೋನದ ಅವರು ಮಂಗಳೂರು ವಿಶ್ವವಿದ್ಯಾನಿಲಯದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಭಾರತೀಯ ದರ್ಶನಗಳ ಇತಿಹಾಸದ ಕುರಿತ ಅವರ ಸಂಶೋಧನೆಯು ಮಂಗಳೂರು ವಿವಿಯ…

Read More

03 ಮಾರ್ಚ್ 2023, ಉಡುಪಿ:  4ನೇ ದಿನದ ಸುಮನಸ ರಂಗ ಹಬ್ಬ(ಮಾರ್ಚ್ 01, ಬುಧವಾರ)ದಲ್ಲಿ ಪ್ರದರ್ಶನಗೊಂಡ ಏಕಲವ್ಯ – ಕನ್ನಡ ಯಕ್ಷಗಾನ  – ಪೂರ್ಣಿಮಾ ಜನಾರ್ದನ ಕೊಡವೂರು ಕಂಡಂತೆ ಏಕಲವ್ಯ – ಕನ್ನಡ ಯಕ್ಷಗಾನ ತಂಡ: ಸುಮನಸಾ ಕೊಡವೂರು ನಿರ್ದೇಶನ: ಗುರು ಬನ್ನಂಜೆ ಸಂಜೀವ ಸುವರ್ಣ ಕರಾವಳಿಯ ಜೀವನಾಡಿ, ಕರಾವಳಿ ಜನತೆಯ ಅನುಗಾಲದ ಒಡನಾಡಿ ಯಕ್ಷಗಾನ ಎಂದರೆ ಆಬಾಲ ವೃದ್ಧರಾದಿಯಾಗಿ ಎಲ್ಲರೂ ಇಷ್ಟಪಡುವ ಕಲಾ ಪ್ರಕಾರ . ಅದರಲ್ಲೂ ಮಹಿಳಾ ಮಣಿಗಳ ಯಕ್ಷಗಾನ ಅಂದರೆ ಇನ್ನಷ್ಟು ಒಲವು. ಅಲ್ಲದೆ ಸಾಮಾಜಿಕ ಸೇವೆಯ ಪರಿಕಲ್ಪನೆ ಯೊಂದಿಗೆ ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿಕೊಂಡ ಒಂದು ಸಂಸ್ಥೆ ತನ್ನದೇ ಧ್ಯೇಯೋದ್ಧೇಶಗಳನ್ನು ಬೆಳೆಸಿಕೊಂಡು ನಾಟಕವನ್ನು ಜೀವಾಳವಾಗಿಟ್ಟುಕೊಂಡು ಯಕ್ಷಗಾನ ,ಜಾನಪದ ಕಲೆಗಳಿಗೂ ಪ್ರಾಮುಖ್ಯತೆ ನೀಡಿ ಕಲಾ ಸಾಮ್ರಾಜ್ಯದಲ್ಲಿ ವಿಹರಿಸುತ್ತಾ ತನ್ನದೇ ಸಂಸ್ಥೆಯ ಮಹಿಳಾ ಕಲಾವಿದರಿಗೆ ಯಕ್ಷಗಾನ ಪ್ರಸ್ತುತಿ ನಡೆಸಿಕೊಡಲು ಅವಕಾಶ ಮಾಡಿಕೊಟ್ಟದ್ದು ನಿಜಕ್ಕೂ ಅಭಿನಂದನೀಯ . ಕಳೆದ ವರುಷದವರೆಗೆ ನಾಟಕ ,ಯಕ್ಷಗಾನ ಗಳನ್ನು ನೋಡುತ್ತಾ ಆನಂದಿಸುತ್ತಾ ಸಂಸ್ಥೆಯ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಾ ಬಂದ…

Read More