Subscribe to Updates
Get the latest creative news from FooBar about art, design and business.
Author: roovari
ಬೆಂಗಳೂರು: ದೇಶಹಳ್ಳಿ ಜಿ.ನಾರಾಯಣ ಇವರ 100ನೆಯ ಜನ್ಮದಿನದ ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದಿನಾಂಕ 02-09-2023 ರಂದು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಆಚರಿಸಲಾಯಿತು. ಈ ವೇಳೆ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಇವರು “ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ತ್ರೈವಾರ್ಷಿಕ ಮತ್ತು ಪಂಚವಾರ್ಷಿಕ ಯೋಜನೆಗಳ ಮೂಲಕ ಪರಿಷತ್ತಿನ ಅಭಿವೃದ್ಧಿಗೆ ಕಾರಣೀಕರ್ತರಾಗಿ, ಪರಿಷತ್ತಿನಲ್ಲಿ ಒಂದು ಹೊಸ ಶಕೆ ಪ್ರಾರಂಭಿಸಿದವರು ದೇಶಹಳ್ಳಿ ಜಿ.ನಾರಾಯಣರು. 1969 ರಿಂದ 1978ರವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಶ್ರೀಯುತರು ಕನ್ನಡ ನಾಡು ನುಡಿಗೆ ಅಪಾರ ಸೇವೆಯನ್ನು ಸಲ್ಲಿಸಿದ್ದರು. ಇವರು 1942ರಲ್ಲಿ `ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳವಳಿಯಲ್ಲಿʼ ಭಾಗವಹಿಸಿ ಸೆರೆಮನೆ ಸೇರಿದ್ದರು. 1957ರಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯ ಸದಸ್ಯರಾಗಿದ್ದ ನಾರಾಯಣ ಅವರು 1964ರಲ್ಲಿ ಬೆಂಗಳೂರಿನ ಮೇಯರಾಗಿ ಸೇವೆ ಸಲ್ಲಿಸಿದವರು. ಕನ್ನಡ ಪತ್ರಿಕಾ ಅಕಾಡೆಮಿ ಅಧ್ಯಕ್ಷ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆಗಿದ್ದ ಅವರು ನಿರಂತರ ಕನ್ನಡ…
ಉಡುಪಿ : ಬೈಲೂರು ಶ್ರೀ ಮಹಿಷಮರ್ದಿನಿ ಯಕ್ಷಗಾನ ಮಂಡಳಿಯ ಆಶ್ರಯದಲ್ಲಿ ತೆಂಕುತಿಟ್ಟು ಯಕ್ಷಗಾನ ಚಂಡೆ ಮದ್ದಳೆ ತರಬೇತಿ ತರಗತಿಯು ದಿನಾಂಕ 22/8/2023 ಮಂಗಳವಾರ ಪ್ರಾರಂಭಗೊಂಡಿತು.ಈ ಕಾರ್ಯಕ್ರಮವನ್ನು ಗಣಪತಿ ಸ್ತುತಿಯೊಂದಿಗೆ ದೀಪ ಬೆಳಗುವುದರ ಮೂಲಕ ಉದ್ಘಾಟಿಸಲಾಯಿತು. ಯಕ್ಷಗಾನ ಮಂಡಳಿಯ ನಿರ್ದೇಶಕರು ಹಾಗೂ ಗುರುಗಳೂ ಆದ ಶ್ರೀ ಮುರಳೀಧರ ಭಟ್, ತರಬೇತಿ ಗುರುಗಳಾದ ಶ್ರೀ ಆನಂದ ಗುಡಿಗಾರ್ ಕೆರ್ವಾಶೆ, ಭಾಗವತರಾದ ಶ್ರೀ ನಕ್ರೆ ನಾಗರಾಜ್ ಭಟ್, ಯಕ್ಷಗಾನ ಮಂಡಳಿಯ ಅಧ್ಯಕ್ಷರಾದ ಶ್ರೀ ಜಯಕರ್ ಬೈಲೂರು, ಕಾರ್ಯದರ್ಶಿ ಶ್ರೀ ವಾದಿರಾಜ ಆಚಾರ್ಯ, ಕೋಶಾಧಿಕಾರಿ ಶ್ರೀ ಮೋಹನ ಆಚಾರ್ಯ, ಸಹ ಕಾರ್ಯದರ್ಶಿ ಶ್ರೀ ಪತಿ ನಾಯಕ್, ಶ್ರೀ ಕಿಶೋರ್.ಸಿ.ಉದ್ಯಾವರ, ರಾಮಕೃಷ್ಣ ಕೊಂಡಂಚ, ನಾರಾಯಣರಾವ್, ಗೌರವಾಧ್ಯಕ್ಷ ಶ್ರೀ ಜಯರಾಮ ಆಚಾರ್ಯ ಹಾಗೂ ಸಂಘದ ಸದಸ್ಯರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಈ ತರಗತಿಗಳು ಪ್ರತಿ ಮಂಗಳವಾರ ಸಂಜೆ 6.00ರಿಂದ ನಡೆಯಲಿದ್ದು, ಹೆಚ್ಚಿನ ಮಾಹಿತಿಗಾಗಿ 9844634464, 9481426796 ಈ ಸಂಖ್ಯೆಗಳನ್ನು ಸಂಪರ್ಕಿಸಬಹುದು.
ಮಂಗಳೂರು : ಸ್ವಚ್ಛ ಮಂಗಳೂರು ಫೌಂಡೇಷನ್ ಮತ್ತು ಜಸ್ಟೀಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಟ್ರಸ್ಟ್ ಸಹಯೋಗದೊಂದಿಗೆ ಮಂಗಳೂರು ರಾಮಕೃಷ್ಣ ಮಠದ ವಿವೇಕಾನಂದ ಸಭಾಭವನದಲ್ಲಿ ‘ಜಿಜ್ಞಾಸಾ’ : ಸನಾತನ ಚಿಂತನ ಗಂಗಾ : ದ್ವೈಮಾಸ ಮೊದಲ ಸರಣಿ ಉಪನ್ಯಾಸ ಕಾರ್ಯಕ್ರಮವು ದಿನಾಂಕ 03-09-2023ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಖ್ಯಾತ ವಿಜ್ಞಾನಿ, ಲೇಖಕ ಮತ್ತು ಸಂಶೋಧಕ ಡಾ. ಆನಂದ್ ರಂಗನಾಥನ್ ಇವರು ‘ಭಾರತ 2047 – ಅವಕಾಶಗಳ ತಾಣ’ ವಿಷಯದ ಕುರಿತು ಉಪನ್ಯಾಸ ನೀಡಿ “ಭಾರತವು ಹಿಂದೆ ಹಲವಾರು ಅವಕಾಶಗಳನ್ನು ಕೈ ಚೆಲ್ಲಿದೆ, ಆದರೆ ಇಂದು ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಮುನ್ನಡೆಯುವ ದೇಶವಾಗಿ ಮಾರ್ಪಾಟುಗೊಂಡಿದೆ. ಇಡೀ ವಿಶ್ವಕ್ಕೆ ಬಾಧಿಸಿದ ಕೋವಿಡ್-19 ಅನ್ನು ನಮ್ಮ ದೇಶವು ಸಮರ್ಥವಾಗಿ ಎದುರಿಸಿರುತ್ತದೆ. ಇದು ಭಾರತದ ಸಾಮರ್ಥ್ಯವನ್ನು ತೋರಿಸುತ್ತದೆ. ಇಂದು ನಮ್ಮ ಮುಂದೆ ಬೇರೆ ಬೇರೆ ಕ್ಷೇತ್ರದಲ್ಲಿ ಹಲವಾರು ಅವಕಾಶಗಳಿವೆ. ಮುಂದಿನ 25 ವರ್ಷಗಳು ನಿಜಕ್ಕೂ ಭಾರತದ ಇತಿಹಾಸದಲ್ಲಿ ಅಮೃತ ಕಾಲವಾಗಲಿದೆ” ಎಂದು ಹೇಳಿದರು. ಮಂಗಳೂರು ರಾಮಕೃಷ್ಣ…
ಮಂಗಳೂರು : ಶ್ರೀ ಕೃಷ್ಣ ಸೇವಾ ಟ್ರಸ್ಟ್ ಹಾಗೂ ರಜತ ಮಹೋತ್ಸವ ಸಮಿತಿ ಶ್ರೀ ಕೃಷ್ಣ ಮಂದಿರ ಅಶೋಕನಗರ ಇದರ ಆಶ್ರಯದಲ್ಲಿ ಬೆಳ್ಳಿ ಹಬ್ಬ ವರ್ಷಾಚರಣೆಯ ಪ್ರಯುಕ್ತ ‘ಬೆಳ್ಳಿ ಹಬ್ಬದ ಸಂಭ್ರಮ 2023-24’ ಇದರ ಉದ್ಘಾಟನಾ ಸಮಾರಂಭವು ದಿನಾಂಕ 07-09-2023ರ ಗುರುವಾರ ದಂದು ಮಂಗಳೂರಿನ ಅಶೋಕನಗರದಲ್ಲಿರುವ ಗೋಕುಲ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ಈ ಕಾರ್ಯಕ್ರಮವನ್ನು ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥರು ಮತ್ತು ಯಕ್ಷಗಾನ ಅರ್ಥಧಾರಿಗಳಾದ ಡಾ.ವಿನಾಯಕ ಭಟ್ ಗಾಳಿಮನೆ ಉದ್ಘಾಟಿಸಲಿರುವರು. ಸಭಾ ಕಾರ್ಯಕ್ರಮದ ಬಳಿಕ ಯಕ್ಷಾರಾಧನ ಕಲಾಕೇಂದ್ರ ಉರ್ವ ಇದರ ನಿರ್ದೇಶಕಿ ನೃತ್ಯ ವಿದುಷಿ ಶ್ರೀಮತಿ ಸುಮಂಗಲಾ ರತ್ನಾಕರ ರಾವ್ ಮತ್ತು ಬಳಗದವರಿಂದ ‘ಜಾಂಬವತೀ ಕಲ್ಯಾಣ’ ಯಕ್ಷಗಾನ ನಡೆಯಲಿರುವುದು.
ಬಂಟ್ವಾಳ : ಯಕ್ಷ ಮೌಕ್ತಿಕ ಮಹಿಳಾ ಕೂಟ ಮಂಗಲ್ಪಾಡಿ ಇದರ ಸದಸ್ಯೆಯರಿಂದ ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ ‘ಚಂದ್ರಹಾಸ ಚರಿತ್ರೆ’ ಎಂಬ ಯಕ್ಷಗಾನ ತಾಳಮದ್ದಳೆಯು ದಿನಾಂಕ 08-09-2023ರಂದು ಮಧ್ಯಾಹ್ನ ಗಂಟೆ 2ರಿಂದ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಇಲ್ಲಿ ನಡೆಯಲಿದೆ. ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀ ಹರೀಶ ಬಳಂತಿಮುಗರು, ಚೆಂಡೆಯಲ್ಲಿ ಶ್ರೀ ಸುಬ್ರಹ್ಮಣ್ಯ ಭಟ್ ದೇಲಂತಮಜಲು ಮತ್ತು ಮದ್ದಳೆಯಲ್ಲಿ ಮಾ.ಸಮರ್ಥ ಉಡುಪ. ಮುಮ್ಮೇಳದಲ್ಲಿ ಚಂದ್ರಹಾಸನಾಗಿ ಶ್ರೀಮತಿ ರಾಜಶ್ರೀ ನಾವಡ, ಕಪ್ಪದ ದೂತನಾಗಿ ಶ್ರೀಮತಿ ಸುಲೋಚನ ನಾವಡ, ದುಷ್ಟಬುದ್ಧಿಯಾಗಿ ಶ್ರೀಮತಿ ಸರಸ್ವತಿ ಹೊಳ್ಳ, ವಿಷಯೆಯಾಗಿ ಶ್ರೀಮತಿ ಶ್ರೀಲತಾ ನಾವಡ, ಕುಳಿಂದ ಮತ್ತು ಕಾಳಿಕಾದೇವಿಯಾಗಿ ಶ್ರೀಮತಿ ಜಯಲಕ್ಷ್ಮೀ ಮಯ್ಯ ಮತ್ತು ಮದನನಾಗಿ ಶ್ರೀಮತಿ ಜಯಲಕ್ಷ್ಮೀ ಕಾರಂತ್ ಸಹಕರಿಸಲಿದ್ದಾರೆ.
ಮಂಗಳೂರು : ಕವನ ಸಂಕಲನಗಳಿಗೆ ಲೇಖಕ-ಲೇಖಕಿಯರಿಂದ ಕವನಗಳ ಆಹ್ವಾನ. ಮಂಗಳೂರಿನ ಕಥಾಬಿಂದು ಪ್ರಕಾಶನ ಕನ್ನಡ ಸಾಹಿತ್ಯವನ್ನು ಬೆಳೆಸುವ ನಿಟ್ಟಿನಲ್ಲಿ ಹಲವು ಸಾಹಿತ್ಯ ಸ್ನೇಹಿ ಯೋಜನೆಗಳನ್ನು ನೀಡುತ್ತಾ ಬಂದಿದೆ. ಈ ವರ್ಷದ ಅಕ್ಟೋಬರ್ 29ರಂದು ಸಂಸ್ಥೆಯ 16ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದು, ದಿನಪೂರ್ತಿ ಕಾರ್ಯಕ್ರಮವನ್ನು ಮಂಗಳೂರಿನ ಪುರಭವನದಲ್ಲಿ ಆಯೋಜಿಸಲಾಗಿದೆ. ಈ ಸಂದರ್ಭದಲ್ಲಿ ಉದಯೋನ್ಮುಖ ಬರಹಗಾರರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ರಿಯಾಯಿತಿ ದರದಲ್ಲಿ ಪುಸ್ತಕ ಪ್ರಕಟಿಸುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಇದರ ಅನ್ವಯ 32 ಪುಟ ಮೀರದ ಸೈಡ್ ಪಿನ್ ಪುಸ್ತಕಗಳನ್ನು ಹೊರ ತರುವ ಗುರಿ ಇಡಲಾಗಿದೆ. ಲೇಖಕರು ಈ ಕೆಳಗಿನ ಒಳ ಹೂರಣವನ್ನು ಕಳಿಸಬೇಕಾಗುತ್ತದೆ. 1. ಒಂದು ಪುಟ ಮೀರದ 30 ಕವನಗಳನ್ನು ವಾಟ್ಸಪ್ ಮುಖಾಂತರ 9341410153 WhatsApp ಗೆ ಸೆಪ್ಟೆಂಬರ್ 20ರ ಒಳಗಾಗಿ ತಲುಪಿಸಬೇಕು. 2. 150 ಶಬ್ದ ಮೀರದ ಲೇಖಕರ ಮಾತು 3. 150 ಶಬ್ದ ಮೀರದ ಮುನ್ನುಡಿ 4. 50 ಶಬ್ಬ ಮೀರದ ಲೇಖಕರ ಪರಿಚಯ ಮತ್ತು ಕಲರ್ ಫೋಟೋ ಇವೆಲ್ಲವನ್ನೂ ಏಕ…
ಮಂಗಳೂರು : ಅವಿಭಜಿತ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಯ ಕರಾವಳಿ ಲೇಖಕಿಯರ-ವಾಚಕಿಯರ ಸಂಘ (ರಿ.) ವತಿಯಿಂದ ಡಾ. ಕೆ.ವಿ. ಜಲಜಾಕ್ಷಿ ಸಂಸ್ಮರಣಾ ಕಾರ್ಯಕ್ರಮ ಹಾಗೂ ಕವನ ರಚನಾ ಸ್ಪರ್ಧೆಯ ಬಹುಮಾನ ವಿತರಣೆ ಕಾರ್ಯಕ್ರಮವು ದಿನಾಂಕ : 09-09-2023ನೇ ಶನಿವಾರ ಅಪರಾಹ್ನ ಗಂಟೆ 2.30ಕ್ಕೆ ಉರ್ವಸ್ಟೋರಿನ ಸಾಹಿತ್ಯ ಸದನದಲ್ಲಿ ನಡೆಯಲಿದೆ. ಡಾ. ಕೆ.ವಿ. ಜಲಜಾಕ್ಷಿ ಸಂಸ್ಮರಣಾ ಪ್ರತಿಷ್ಠಾನದ ವಿ.ಜಿ. ಭಟ್ ಇವರು ಪ್ರಸ್ತಾವನೆ ಮಾಡಲಿದ್ದು, ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಭಾರತಿ ಪಿಲಾರ್ ಇವರು ಸಂಸ್ಮರಣೆ ಮಾಡಲಿದ್ದಾರೆ. ಮುಖ್ಯ ಅತಿಥಿಯಾಗಿ ಶ್ರೀ ಗೋಕರ್ಣನಾಥೇಶ್ವರ ಪದವಿ ಕಾಲೇಜಿನ ಕನ್ನಡ ವಿಭಾಗದ ವಿಶ್ರಾಂತ ಮುಖ್ಯಸ್ಥರಾದ ಡಾ.ನರಸಿಂಹಮೂರ್ತಿ ಭಾಗವಹಿಸಲಿದ್ದು, ಕ.ಲೇ.ವಾ. ಸಂಘದ ಅಧ್ಯಕ್ಷರಾದ ಡಾ. ಜ್ಯೋತಿ ಚೇಳ್ಯಾರು ಇವರ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ಜರಗಲಿದೆ. ವಿಶ್ರಾಂತ ಶಿಕ್ಷಕಿಯಾದ ಶ್ರೀಮತಿ ಉಷಾ ಎಂ. ಇವರಿಂದ ತೀರ್ಪುಗಾರರ ಅನಿಸಿಕೆ ಹಾಗೂ ಶ್ರೀಮತಿ ಗುಣವತಿ ರಮೇಶ್ ಮತ್ತು ಶ್ರೀಮತಿ ಸುಮಾ ಬಾರ್ಕೂರ್ ಇವರುಗಳು…
ಮಂಗಳೂರು : ಕಲ್ಲಚ್ಚು ಪ್ರಕಾಶನದ 14ನೇ ಆವೃತ್ತಿಯ 2023ನೇ ಸಾಲಿನ ‘ಕಲ್ಲಚ್ಚು ಪ್ರಶಸ್ತಿ’ ಪ್ರದಾನ ಸಮಾರಂಭ ಹಾಗೂ ಮಹೇಶ ಆರ್.ನಾಯಕ್ ಅವರ ಕೃತಿ ‘ಮೊಹಬ್ಬತ್ ಕಾ ದಾಗ…’ ಕಥಾ ಸಂಕಲನದ ಬಿಡುಗಡೆ ಸಮಾರಂಭವು ದಿನಾಂಕ 02-09-2023ರಂದು ನಡೆಯಿತು. ಈ ಪ್ರತಿಷ್ಠಿತ “ಕಲ್ಲಚ್ಚು ಪ್ರಶಸ್ತಿ” ಸ್ವೀಕರಿಸಿದ ಹಿರಿಯ ಸಾಹಿತಿ ತುರುವೇಕೆರೆ ಪ್ರಸಾದ್ “ಸಾಹಿತ್ಯ, ಕಿರುತೆರೆ ಮತ್ತು ಸಿನಿಮಾರಂಗದ ಬರವಣಿಗೆ ಕ್ಷೇತ್ರದಲ್ಲಿ ನಿರಂತರ ಅಧ್ಯಯನ ಹಾಗೂ ತಾದ್ಯಾತ್ಮಕತೆ ಇಲ್ಲದೆ ಯಶಸ್ಸು ಖಂಡಿತ ಅಸಾಧ್ಯ ಹಾಗಾಗಿ ವಿಪುಲ ಅವಕಾಶ ಇರುವ ಇದಕ್ಕೆ ಪಾದಾರ್ಪಣೆ ಮಾಡುವ ಯುವ ಜನತೆ ಇದನ್ನು ಸ್ಪಷ್ಟ ಮನಗಂಡು ಮುನ್ನಡೆಯಬೇಕು” ಎಂಬ ಸಂದೇಶವನ್ನು ನೀಡಿ ಕಿರುತೆರೆ ಚಲನಚಿತ್ರ ರಂಗದ ಬರವಣಿಗೆ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಧರ್ಮದರ್ಶಿ ಹರಿಕೃಷ್ಣ ಪುನರೂರು ಪ್ರಶಸ್ತಿ ಪ್ರದಾನ ಮಾಡಿ ಸಾಹಿತ್ಯದ ಮೂಲಮಂತ್ರವಾಗಿರುವ ಕನ್ನಡ ಶಾಲೆಗಳನ್ನು ಉಳಿಸುವ ಕೈಂಕರ್ಯವನ್ನು ನಾವು ಕಟಿಬದ್ಧರಾಗಿ ಮಾಡುವಂತೆ ಕರೆನೀಡಿದರು. ಗೋವಿಂದದಾಸ ಕಾಲೇಜು ಪ್ರಾಂಶುಪಾಲ ಪ್ರೊ.ಪಿ.ಕೃಷ್ಣಮೂರ್ತಿ ಅಭಿನಂದನಾ ಮಾತುಗಳಾನ್ನಾಡಿದರು. ಈ ಸಂದರ್ಭದಲ್ಲಿ “ಮೊಹಬ್ಬತ್ ಕಾ…
ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ‘ಡಾ. ಟಿ. ವಿ. ವೆಂಕಟಾಚಲಶಾಸ್ತ್ರೀ ವಿದ್ವತ್ ದತ್ತಿ ಪ್ರಶಸ್ತಿ’ ಮತ್ತು ‘ಶ್ರೀಮತಿ ಟಿ. ಗಿರಿಜ ಸಾಹಿತ್ಯ ದತ್ತಿ ಪ್ರಶಸ್ತಿ’ ಪ್ರದಾನ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಪತ್ರಿಕೆಯ ನೂರನೇ ಸಂಪುಟದ ವಿಶೇಷ ಸಂಚಿಕೆ ಬಿಡುಗಡೆ ಜೊತೆಗೆ 90 ವರ್ಷಗಳನ್ನು ಪೂರೈಸಿದ ಹಿರಿಯ ವಿದ್ವಾಂಸರಾದ ನಾಡೋಜ ಡಾ. ಟಿ.ವಿ ವೆಂಕಟಾಚಲಶಾಸ್ತ್ರೀ ಅವರಿಗೆ ಸನ್ಮಾನ ಕಾರ್ಯಕ್ರಮವು ದಿನಾಂಕ 01-09-2023ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು “ವಿಶಾಲ ಮೈಸೂರು ಎಂದಿದ್ದ ನಮ್ಮ ನಾಡಿನ ಹೆಸರು ‘ಕರ್ನಾಟಕ’ ಎಂದು ಹೆಸರಾಗಲು ನಾಡೋಜ ಡಾ. ಟಿ.ವಿ.ವೆಂಕಟಾಚಲಶಾಸ್ತ್ರಿಗಳು ಬರೆದ ‘ನಮ್ಮ ಕರ್ನಾಟಕ’ ಎನ್ನುವ ಕೃತಿಯ ಪ್ರಭಾವವಿದೆ. ಕರ್ನಾಟಕದ ಪದದ ಮೂಲವನ್ನು ಶಾಸನ-ಶಾಸ್ತ್ರೀಯ ಗ್ರಂಥಗಳಾದಿಯಾಗಿ ಅವರು ಹುಡುಕಿದ ಕ್ರಮ ಮಾದರಿಯಾಗಿದೆ. ಈ ಕೃತಿಯನ್ನು ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದ್ದು ಹೆಮ್ಮೆಯ ಸಂಗತಿ. ಪ್ರೊ.ಟಿ.ವಿ.ವೆಂಕಟಾಚಲ ಶಾಸ್ತ್ರಿಗಳು ನಮ್ಮ ನಾಡು ನುಡಿಗಳ…
ಕಾರ್ಕಳ : ಕನ್ನಡ ಸಂಘ ಕಾಂತಾವರ, ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ತಾಲೂಕು ಸಮಿತಿ ಹಾಗೂ ಕರ್ನಾಟಕ ಗಮಕ ಕಲಾ ಪರಿಷದ್ ಇದರ ಕಾರ್ಕಳ ತಾಲೂಕು ಘಟಕದ ಸಂಯುಕ್ತ ಆಶ್ರಯದಲ್ಲಿ ಹರಿಶ್ಚಂದ್ರ ಕಾವ್ಯದ ವಾಚನ ವ್ಯಾಖ್ಯಾನವು ದಿನಾಂಕ 31-08-2023ರಂದು ಕಾರ್ಕಳ ಸರಕಾರಿ ಪ.ಪೂ.ಕಾಲೇಜಿನಲ್ಲಿ ನಡೆಯಿತು. “ರಾಘವಾಂಕ ಕವಿ ವಿರಚಿತ ಹರಿಶ್ಚಂದ್ರ ಕಾವ್ಯದ ವಿಶ್ವೇಶ್ವರ ಸಾಕ್ಷಾತ್ಕಾರ” ಎಂಬ ಗಮಕ ವಾಚನ ವ್ಯಾಖ್ಯಾನ ಕಾರ್ಯಕ್ರಮದಲ್ಲಿ ಅವರು ವ್ಯಾಖ್ಯಾನಕಾರರಾಗಿ ಹರಿಶ್ಚಂದ್ರ ಕಾವ್ಯದ ಮಹತ್ವವನ್ನು ಹೇಳಿ ಕಾವ್ಯದ ವ್ಯಾಖ್ಯಾನವನ್ನು ನೆರವೇರಿಸಿದರು. ಗಮಕಿ ವಿದ್ವಾನ್ ಸುರೇಶ್ ರಾವ್ ಅತ್ತೂರು ಅವರು ಕಾವ್ಯದ ವಾಚನಕಾರರಾಗಿ ಭಾಗವಹಿಸಿದ್ದರು. “ಹರನೆಂಬುದೇ ಸತ್ಯ. ಸತ್ಯವೆಂಬುದೇ ಹರ. ಅದನ್ನುಳಿದು ಅನ್ಯವಿಲ್ಲ. ದೇವರೊಬ್ಬನೇ ಎಂಬ ಸಂದೇಶವನ್ನು ಸಾರುವ ರಾಘವಾಂಕ ಕವಿಯ ಹರಿಶ್ಚಂದ್ರ ಕಾವ್ಯವು ಹನ್ನೆರಡನೇ ಶತಮಾನದ ಶ್ರೇಷ್ಠ ಕಾವ್ಯಗಳಲ್ಲಿ ಒಂದಾಗಿದೆ” ಎಂಬುದಾಗಿ ಹಿರಿಯ ವ್ಯಾಖ್ಯಾನಕಾರರಾದ ಗಮಕಿ ವಿದ್ವಾನ್ ತೆಕ್ಕೆಕೆರೆ ಸುಬ್ರಹ್ಮಣ್ಯ ಭಟ್ ಬೆಂಗಳೂರು ಇವರು ಇಲ್ಲಿ ಮಾತನಾಡುತ್ತಾ ತಿಳಿಸಿದರು. ಕನ್ನಡ ಸಂಘದ ಕಾರ್ಯಾಧ್ಯಕ್ಷರಾದ ಡಾ.ನಾ.ಮೊಗಸಾಲೆ, ಗಮಕ…