Author: roovari

ಬಂಟ್ವಾಳ : ಬಂಟ್ವಾಳ ತಾಲೂಕು ಆಡಳಿತ, ಶಿಕ್ಷಣ ಇಲಾಖೆ, ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ವಿವಿಧ ರೋಟರಿ ಕ್ಲಬ್‌ಗಳ ಸಹಕಾರದೊಂದಿಗೆ ಸಂಸಾರ ಜೋಡುಮಾರ್ಗ ಆಯೋಜನೆಯಲ್ಲಿ ದಿನಾಂಕ 14-06-2024ರಂದು ಮುಂಬೈ ಛತ್ರಪತಿ ಶಿವಾಜಿ ಮಹರಾಜ್ ವಸ್ತು ಸಂಗ್ರಹಾಲಯದ ‘ಮ್ಯೂಸಿಯಂ ಆನ್ ವೀಲ್ಸ್’ ಕಾರ್ಯಕ್ರಮದಲ್ಲಿ ಒರಿಗಾಮಿ ಕಲಾಕೃತಿಗಳನ್ನೊಳಗೊಂಡ ‘ಒರಿಗಾಮಿ ಬಸ್’ ಬಂಟ್ವಾಳಕ್ಕೆ ಆಗಮಿಸಿದ್ದು, ಬಿ.ಸಿ. ರೋಡಿನ ಮಿನಿವಿಧಾನ ಸೌಧದ ಮುಂಭಾಗದಲ್ಲಿ ಶಾಲಾಮಕ್ಕಳು, ಸಾರ್ವಜನಿಕರ ವೀಕ್ಷಣೆಗೆ ಚಾಲನೆ ನೀಡಲಾಯಿತು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಕಾಗದದ ರಾಕೆಟ್ ಹಾರಿಬಿಡುವ ಮೂಲಕ ವೀಕ್ಷಣೆಗೆ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಶಾಸಕರು “ಮುಂಬಯಿನ ಮ್ಯೂಸಿಯಂ ಸಂಸ್ಥೆಯೊಂದು ಈ ರೀತಿ ಹಳ್ಳಿ ಪ್ರದೇಶಕ್ಕೆ ತೆರಳಿ ಉತ್ತಮ ದರ್ಜೆಯ ಕಲೆಯನ್ನು ಸಾಮಾನ್ಯರಿಗೆ ತಿಳಿಸುವ ಪ್ರಯತ್ನ ಮಾಡಿರುವುದು ಶ್ಲಾಘನೀಯ. ಒರಿಗಾಮಿ ಕಾಗದದ ಕಲೆಯಾಗಿದ್ದು, ಕಾಗದವನ್ನು ವಿಧವಿಧ ರೀತಿಯಲ್ಲಿ ಮಡಚಿ ಅದರಲ್ಲಿ ವಿಶಿಷ್ಟವಾದ ಆಕಾರಗಳು ಮತ್ತು ಶಿಲ್ಪಗಳನ್ನು ರಚಿಸುವುದು ಒರಿಗಾಮಿ ಕಲೆಯ ವೈಶಿಷ್ಟ್ಯತೆ. ಶಾಲಾ ಮಕ್ಕಳು ಇದರ ಸದುಪಯೋಗ ಪಡೆಯುವಂತೆ…

Read More

ಉಡುಪಿ : ಉಡುಪಿಯ ಯಕ್ಷಗಾನ ಕಲಾರಂಗವು ದಿನಾಂಕ 23-06-2024ರಂದು ಸಂಸ್ಥೆಯ ಐ.ವೈ.ಸಿ. ಸಭಾಭವನದಲ್ಲಿ ‘ತಾಳಮದ್ದಳೆ ಪ್ರಶಸ್ತಿ 2024’ ಪ್ರದಾನ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಸಮಾರಂಭದಲ್ಲಿ ಮೂಡಬಿದ್ರೆಯ ಶ್ರೀ ಜೈನ ಮಠದ ಸ್ವಸ್ತಿ ಶ್ರೀಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಮಹಾಸ್ವಾಮಿಗಳು ಅನುಗ್ರಹ ಸಂದೇಶ ನೀಡಿ “ಯಕ್ಷಗಾನ ನಮ್ಮ ನಾಡಿನ ಪರಿಪೂರ್ಣ ಕಲಾಪ್ರಕಾರ. ತಾಳಮದ್ದಲೆ ಏಕಕಾಲದಲ್ಲಿ ಪುರಾಣದ ಕತೆಯನ್ನು ಜನ ಸಾಮಾನ್ಯರಿಗೆ ತಲಪಿಸುತ್ತಾ, ವ್ಯಾಖ್ಯಾನಿಸುತ್ತಾ, ಮುರಿದು ಕಟ್ಟುತ್ತಾ ಬಂದಿದೆ. ಅನೇಕ ವಿದ್ವಾಂಸರು ಇದನ್ನು ಶತಮಾನಗಳಿಂದ ಮಾಡುತ್ತಾ ಬಂದಿದ್ದಾರೆ. ಪ್ರಸ್ತುತ ಸಂಘರ್ಷದ ಸಂದರ್ಭದಲ್ಲಿ ಇದರ ಕೊಡುಗೆ ಅತ್ಯಂತ ಮಹತ್ವದ್ದು” ಎಂದು ಅಭಿಪ್ರಾಯಪಟ್ಟರು. ತಲಾ ರೂ.20,000/- ನಗದು ಮತ್ತು ಪ್ರಶಸ್ತಿ ಪತ್ರಗಳನ್ನೊಳಗೊಂಡಿರುವ ಮಟ್ಟಿ ಮುರಲೀಧರ ರಾವ್ ಸ್ಮರಣಾರ್ಥ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ಯನ್ನು ಜಬ್ಬಾರ್ ಸಮೊ ಅವರಿಗೂ, ಪೆರ್ಲ ಕೃಷ್ಣ ಭಟ್ ಸ್ಮರಣಾರ್ಥ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ಯನ್ನು ಸೇರಾಜೆ ಸೀತಾರಾಮ ಭಟ್ ಅವರಿಗೂ ಪ್ರದಾನ ಮಾಡಲಾಯಿತು. ಶಾರದಾ ವಿದ್ಯಾ ಸಂಸ್ಥೆಗಳ ಸಂಸ್ಥಾಪಕರಾದ ಡಾ. ಎಂ.ಬಿ. ಪುರಾಣಿಕರು ಅಧ್ಯಕ್ಷತೆ ವಹಿಸಿದ್ದರು. ವಿದ್ವಾನ್…

Read More

ಬಂಟ್ವಾಳ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ವತಿಯಿಂದ ನಡೆಸುವ ಯಕ್ಷ ಶಿಕ್ಷಣ ಯಕ್ಷಗಾನ ನಾಟ್ಯ ತರಬೇತಿ ಅಭಿಯಾನದ ಅಂಗವಾಗಿ ಪುಂಜಾಲಕಟ್ಟೆ ಕರ್ನಾಟಕ ಪಬ್ಲಿಕ್ ಸ್ಕೂಲಿನ ಪ್ರೌಢ ಶಾಲಾ ವಿಭಾಗದಲ್ಲಿ ದಿನಾಂಕ 21-06-2024ರಂದು ಚಾಲನೆಗೊಂಡಿತು. ಪುಂಜಾಲಕಟ್ಟೆ ಘಟಕ ಅಧ್ಯಕ್ಷರಾದ ಯಶೋಧರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದ ಈ ಕಾರ್ಯಕ್ರಮವನ್ನು ಘಟಕದ ಗೌರವ ಮಾರ್ಗದರ್ಶಿ ಜಯಂತ್ ಶೆಟ್ಟಿಯವರು ಉದ್ಘಾಟಿಸಿದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ಯಾಂ ಪ್ರಸಾದ್ ಸಂಪಿಗೆತ್ತಾಯ, ಘಟಕದ ಯಕ್ಷಗುರು ದಿನೇಶ್ ಶೆಟ್ಟಿ ಕಾವಳಕಟ್ಟೆ, ಯಕ್ಷಗುರುಗಳಾದ ರಕ್ಷಿತ್ ಶೆಟ್ಟಿ ಪಡ್ರೆ, ಸಾಯಿಸುಮಾ ನಾವಡ, ದಿವಾಕರ ದಾಸ್ ಕಾವಳಕಟ್ಟೆ, ಘಟಕ ಮಹಿಳಾ ಸಮಿತಿ ಪ್ರಮುಖರಾದ ಲಕ್ಷ್ಮೀ ಸಂಜೀವ ಶೆಟ್ಟಿ, ಉಮಾ ಡಿ. ಗೌಡ, ಶಾಲಾಭಿವೃದ್ಧಿ ಸಮಿತಿ ಸದಸ್ಯ ಮಂಜಪ್ಪ, ಜಯರಾಮ ಶೆಟ್ಟಿ, ಕಿಶೋರ್ ಶೆಟ್ಟಿ, ಘಟಕ ಪ್ರಮುಖರಾದ ಪುರುಷೋತ್ತಮ ಪೂಜಾರಿ ಬೊಳೆಕ್ಕಿನಕೋಡಿ, ರಮೇಶ್ ಶೆಟ್ಟಿ ಮಜಲೋಡಿ, ಪ್ರಭಾಕರ ಪಿ.ಎಂ., ಉದಯ ಕುಮಾರ್ ಶೆಟ್ಟಿ, ಯೋಗೀಶ್, ವಿನೋದ್ ಶೆಟ್ಟಿ, ಚಂದ್ರಶೇಖರ ಶೆಟ್ಟಿ ಕುಮಂಗಿಲ, ದಿನಕರ ಶೆಟ್ಟಿ…

Read More

ಮಂಗಳೂರು : ಅಮೃತ ಪ್ರಕಾಶ ಪತ್ರಿಕೆಯ ಸಾರಥ್ಯದಲ್ಲಿ ವಿಜಯ ಬ್ಯಾಂಕ್ ನ ನಿವೃತ್ತ ಮುಖ್ಯ ಪ್ರಬಂಧಕರಾದ ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿಯವರ ‘ಪ್ರಕೃತಿಯೇ ಮಹಾಮಾತೆ’ ಎಂಬ ಪುಸ್ತಕ ಬಿಡುಗಡೆ ಕಾರ್ಯಕ್ರಮವು ದಿನಾಂಕ 27-06-2024ರಂದು ಮಧ್ಯಾಹ್ನ 12-00 ಗಂಟೆಗೆ ಮಂಗಳೂರು ಪತ್ರಿಕಾ ಭವನದಲ್ಲಿ ನಡೆಯಲಿದೆ.   ಮಂಗಳೂರಿನ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಶ್ರೀ ಕೆ. ಜೈರಾಜ್ ಬಿ. ರೈ ಇವರ ಅಧ್ಯಕ್ಷತೆಯಲ್ಲಿ ವಿಶ್ರಾಂತ ಪ್ರಾಂಶುಪಾಲರು ಮತ್ತು ನಿರ್ದೇಶಕರಾದ ಡಾ. ದೇವರಾಜ್ ಇವರು ಕೃತಿ ಲೋಕಾರ್ಪಣೆ ಮಾಡಲಿರುವರು. ವಿಕಾಸ ಸೇವಾ ಪ್ರತಿಷ್ಠಾನದ ಅಧ್ಯಕ್ಷರು ಮತ್ತು ಸಮಾಜ ಸೇವಕರಾದ ಶ್ರೀ ಸದಾನಂದ ಉಪಾಧ್ಯಾಯ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.       

Read More

ಬೆಂಗಳೂರು : ಸ್ವರ ಫೌಂಡೇಷನ್ ಸಂಸ್ಥೆಯ ವತಿಯಿಂದ ‘ಸಂಗೀತೋತ್ಸವ ಹಾಗೂ ಗೌರವ ಸನ್ಮಾನ’ ಕಾರ್ಯಕ್ರಮವನ್ನು ದಿನಾಂಕ 29-06-2024ರಂದು ಸಂಜೆ 4-00 ಗಂಟೆಗೆ ಬೆಂಗಳೂರಿನ ಜೆ.ಸಿ. ರಸ್ತೆಯ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದೆ. ಸಭಾ ಕಾರ್ಯಕ್ರಮವನ್ನು ಕರ್ನಾಟಕ ಸರಕಾರದ ಘನತೆವೆತ್ತ ರಾಜ್ಯಪಾಲರು ಸನ್ಮಾನ್ಯ ಶ್ರೀ ಥಾವರ್ ಚಂದ್ ಗೆಹ್ಲೋಟ್ ಇವರು ಉದ್ಘಾಟನೆ ಮಾಡಲಿರುವರು. ಶ್ರೀಮತಿ ಭಾರತಿದೇವಿ ರಾಜಗುರು, ಖ್ಯಾತ ಹಿಂದೂಸ್ತಾನಿ ಗಾಯಕರಾದ ಪಂಡಿತ್ ವಿನಾಯಕ ತೊರವಿ ಮತ್ತು ಪದ್ಮಶ್ರೀ ಪಂಡಿತ್ ವೆಂಕಟೇಶ ಕುಮಾರ ಇವರಿಗೆ ಸನ್ಮಾನಿಸಲಾಗುವುದು. ಭಾರತ ರತ್ನ ಉಸ್ತಾದ್ ಬಿಸ್ಮಿಲ್ಲಾ ಖಾನ್ ಶಿಷ್ಯರಾದ ಪಂಡಿತ್ ಶೈಲೇಶ ಭಾಗವತ್ ಮತ್ತು ಖ್ಯಾತ ಅಂತರಾಷ್ಟ್ರೀಯ ಸಿತಾರ್ ವಾದಕರಾದ ಉಸ್ತಾದ್ ರಫೀಕ್ ಖಾನ್ ಇವರಿಂದ ಶಹನಾಯಿ ಸಿತಾರ್ ‘ಜುಗಲ್ ಬಂದಿ’, ಖ್ಯಾತ ನೃತ್ಯಾಂಗನೆ ವಿದುಷಿ ವಾಣಿಗಣಪತಿಯವರ ಶಿಷ್ಯೆ ವಿದುಷಿ ಮಾಳವಿಕಾ ನಾಯರ್ ಇವರಿಂದ ‘ಭರತನಾಟ್ಯ’, ಖ್ಯಾತ ಹಿಂದೂಸ್ತಾನಿ ಗಾಯಕರಾದ ಡಾ. ಮುದ್ದು ಮೋಹನ್ ಇವರಿಂದ ಹಿಂದೂಸ್ತಾನಿ ಗಾಯನ, ಖ್ಯಾತ ಹಿಂದೂಸ್ತಾನಿ ಗಾಯಕರಾದ ಪದ್ಮಶ್ರೀ ಪಂಡಿತ್ ವೆಂಕಟೇಶ ಕುಮಾರ…

Read More

ಮಂಗಳೂರು : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಯಕ್ಷ ಶಿಕ್ಷಣ ಯೋಜನೆಯ ಅಡಿಯಲ್ಲಿ ಸರಕಾರಿ ಪ್ರೌಢ ಶಾಲೆ ಮೀನಕಳಿಯ – ಬೈಕಂಪಾಡಿ ಇಲ್ಲಿ 2024-25ನೇ ಸಾಲಿನ ಯಕ್ಷನಾಟ್ಯ ತರಬೇತಿಯು ದಿನಾಂಕ 19-06-2024ರಂದು ಉದ್ಘಾಟನೆಗೊಂಡಿತು. ಶ್ಯಾಮ ಕನ್ ಸ್ಟ್ರಕ್ಷನ್ಸ್ ನ ಇಂಜಿನಿಯರ್ ಶ್ರೀ ಪ್ರಸಿದ್ಧ ಪಿ. ಇವರು ಕಾರ್ಯಕ್ರಮ ಉದ್ಘಾಟಿಸಿ “ಯಕ್ಷಗಾನ ಎಲ್ಲಾ ಪ್ರಕಾರಗಳಲ್ಲಿಯೂ ಜ್ಞಾನ ವೃದ್ಧಿಗೆ ಪ್ರಯೋಜನವಾಗುತ್ತದೆ. ಯಕ್ಷಗಾನ ಬರೇ ಕಲೆಗೋಸ್ಕರ ಕಲಿಯುವುದಲ್ಲ, ನಮ್ಮ ಸಂಸ್ಕೃತಿಯನ್ನು ಮುಂದುವರಿಸಿಕೊಂಡು ಹೋಗಲು ಸದಾವಕಾಶ” ಎಂದು ಹೇಳಿ ಶುಭ ಕೋರಿದರು. ಯಕ್ಷ ಶಿಕ್ಷಣ ಸಂಚಾಲಕರಾದ ಪಣಂಬೂರು ವಾಸುದೇವ ಐತಾಳ್ (ಯು.ಎಸ್.ಎ) ಇವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮುಖ್ಯ ಅತಿಥಿ ಶ್ರೀ ಶಿವರಾಮ ಪಣಂಬೂರು ಇವರು ಮಾತನಾಡುತ್ತ “ಶುದ್ಧ ಕನ್ನಡ ಇಂದಿಗೂ ಉಳಿದಿದೆ ಎಂದಾದರೆ ಅದು ಯಕ್ಷಗಾನದಿಂದ ಮಾತ್ರ. ಅಲ್ಲದೆ ಗುರು ಹಿರಿಯರನ್ನು ಗೌರವದಿಂದ ಕಾಣಲು ಇಂತಹ ಯಕ್ಷ ಶಿಕ್ಷಣದಿಂದ ಮಾತ್ರ ಸಾಧ್ಯ” ಎಂದರು. ಶಾಲಾ ಮುಖ್ಯೋಪಾಧ್ಯಾಯ ಶ್ರೀ ಲಕ್ಷ್ಮೀನಾರಾಯಣ ಇವರು ಮಾತನಾಡುತ್ತಾ “ವಿದ್ಯಾರ್ಥಿಗಳು ಉನ್ನತ ವ್ಯಾಸಂಗ…

Read More

ಸೋಮವಾರಪೇಟೆ : ಕೊಡಗು ಜಿಲ್ಲಾ ಮತ್ತು ಸೋಮವಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಮಹಿಳಾ ಸಹಕಾರ ಸಮಾಜ, ಅಕ್ಕನ ಬಳಗದ ಆಶ್ರಯದಲ್ಲಿ ಕವಯತ್ರಿ ಜಲಜಾ ಶೇಖರ್ ಇವರ ‘ಪ್ರತೀಕ್ಷ’ ಮತ್ತು ‘ವಿಲೋಕನ’ ಕೃತಿಗಳ ಬಿಡುಗಡೆ ಸಮಾರಂಭವು ದಿನಾಂಕ 18-06-2024ರಂದು ಮಹಿಳಾ ಸಹಕಾರ ಸಮಾಜದಲ್ಲಿ ನಡೆಯಿತು. ‘ವಿಲೋಕನ’ಕೃತಿಯನ್ನು ಕೊಡಗು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷರಾದ ಬಿ.ಜಿ. ಅನಂತಶಯನ ಬಿಡುಗಡೆಗೊಳಿಸಿ ಮಾತನಾಡಿ, “ಇಪ್ಪತ್ತೆರಡು ಲೇಖನಗಳನ್ನು ಹೊಂದಿರುವ ವಿಲೋಕನ ಒಂದು ಸುಂದರ ಪುಸ್ತಕವಾಗಿದ್ದು, ವಿವಿಧ ವಿಚಾರಗಳಿದ್ದು, ಸಂಗ್ರಹಕ್ಕೆ ಯೋಗ್ಯವಾಗಿದೆ” ಎಂದು ಹೇಳಿದರು. ಹಾಗೂ ನಿವೃತ್ತ ಪ್ರಾಂಶುಪಾಲ ಪ್ರೊ. ಧರ್ಮಪ್ಪ ಇವರು ‘ಪ್ರತೀಕ್ಷ’ ಕವನ ಸಂಕಲನವನ್ನು ಬಿಡುಗಡೆಗೊಳಿಸಿ ಕೃತಿ ಕುರಿತು ಮಾತನಾಡಿ, “ಅಣ್ಣ ಬಸವಣ್ಣ ಮತ್ತು ಅಕ್ಕಮಹಾದೇವಿ ಮೇಲಿನ ಕವನಗಳು ಗಮನ ಸೆಳೆಯುತ್ತವೆ. ಕವಿಗಳು ಯಾವಾಗಲೂ ಕಲ್ಪನಾಲೋಕದಲ್ಲಿ ಇದ್ದು, ಅವರ ತಲೆಯಲ್ಲಿ ಯೋಚನಾಲಹರಿ ಹರಿಯತ್ತಿರಬೇಕು. ಆಗಾದಾಗ ಮಾತ್ರ ಕನವ ಸಂಕಲನಗಳು ಮೂಡಿಬರಲು ಸಾಧ್ಯ” ಎಂದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ…

Read More

ಧಾರವಾಡ : ಧಾರವಾಡ ತಾಲೂಕು ಬ್ರಾಹ್ಮಣ ಸಭೆಯ ಸಹಭಾಗಿತ್ವದಲ್ಲಿ ಆಯೋಜಿಸಿದ ದಿ. ಬಿ. ಟಿ. ಕುಲಕರ್ಣಿ ಅವರ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮವು ದಿನಾಂಕ 20-06-2024ರ ಗುರುವಾರದಂದು ಧಾರವಾಡದ ಮಾಳಮಡ್ಡಿಯ ಗಾಯತ್ರಿ ಸಭಾ ಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಶಿಕ್ಷಣ ಹಾಗೂ ‘ಸೃಜನಶೀಲ ಕಲೆಗಳು’ ಎಂಬ ವಿಷಯದ ಬಗ್ಗೆ ಮಾತನಾಡಿದ ಸಾಹಿತಿ ಮತ್ತು ಚಿಂತಕರಾದ ಡಾ. ಕೃಷ್ಣ ಕಟ್ಟಿ “ನಮ್ಮ ಸಂಪ್ರದಾಯದಲ್ಲಿ 64 ಕಲೆಗಳಾದರೆ, ಜೈನ ಸಂಪ್ರದಾಯದಲ್ಲಿ 72 ಕಲೆಗಳು. ಅದರಲ್ಲಿಯೂ 7 ಕಲೆಗಳು, ಸಂಗೀತ, ನಾಟಕ, ನೃತ್ಯ, ಸಾಹಿತ್ಯ, ಕಾವ್ಯ, ಹೀಗೆ ಅತೀ ಮುಖ್ಯವಾದ ಕಲೆಗಳು. ನಮ್ಮ ಶಾಲೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ಸೃಜನಶೀಲ ಕಲೆ (ಕ್ರಾಫ್ಟ್ )ಕಾಣೆಯಾಗುತ್ತಿದೆ. ಸೃಜನ ಶೀಲ ಕಲೆಗಳು ಕೇವಲ ಮನೋರಂಜನೆ ವಸ್ತುಗಳಾಗಾದೆ, ಶಿಕ್ಷಣ, ಪ್ರತಿಭೆ, ಪರಿಶ್ರಮ, ಭಕ್ತಿ, ಸಂಸ್ಕಾರ ಹಾಗೂ ಸಂಸ್ಕೃತಿ ಎಲ್ಲವೂ ಒಂದೇ ದಾರದಲ್ಲಿ ಪೊಣಿಸಿದ ಮಣಿಗಳಂತಾದಾಗ ಮಾತ್ರ ಪರಿಶುದ್ಧ ಜ್ಞಾನ ಪ್ರಾಪ್ತವಾಗುತ್ತದೆ. ತಿಳಿನೀರಿನ ಸರೋವರದಂತೆ ಮನಕುಲಕ್ಕೆ ಹಿತವಾಗುವ ಸೃಜನಾತ್ಮಕ ಕಲೆಗಳು ದಾರಿದೀಪವಾಗಿ…

Read More

ಉಡುಪಿ : ರಾಷ್ಟ್ರೀಯ ನಾಟಕ ಶಾಲೆ (ಎನ್‌ಎಸ್‌ಡಿ)ಯ ವಾರಣಾಸಿ ಕೇಂದ್ರದ 20 ಮಂದಿಯ ತಂಡವು ಯಕ್ಷಗಾನ ಕಲಿಕೆಗಾಗಿ ಉಡುಪಿಗೆ ಆಗಮಿಸಿದ್ದಾರೆ. ತಂಡದಲ್ಲಿ 11 ಮಂದಿ ಹುಡುಗರು ಮತ್ತು 9 ಮಂದಿ ಹುಡುಗಿಯರಿದ್ದಾರೆ. ಡೆಲ್ಲಿ, ಮಣಿಪುರ, ಬಿಹಾರ, ನಾಗಾಲ್ಯಾಂಡ್, ಜಾರ್ಖಂಡ್, ಛತ್ತೀಸ್‌ಗಡ, ಉತ್ತರ ಪ್ರದೇಶ ಮೊದಲಾದ ರಾಜ್ಯಗಳ ವಿದ್ಯಾರ್ಥಿಗಳು ಈ ತಂಡದಲ್ಲಿದ್ದಾರೆ. ಇವರು ಉಡುಪಿಯ ಅದಮಾರು ಮಠದ ಅತಿಥಿಗೃಹದಲ್ಲಿ ತಂಗಿದ್ದು, 04-06-2024ರಿಂದ ಯಕ್ಷಗಾನದ ವಿವಿಧ ಮಟ್ಟು, ತಿಟ್ಟುಗಳನ್ನು ಕಲಿಯುತ್ತಿದ್ದಾರೆ. ಯಕ್ಷಗುರು ಉಡುಪಿಯ ಯಕ್ಷಸಂಜೀವ ಯಕ್ಷಗಾನ ಕೇಂದ್ರದ ಬನ್ನಂಜೆ ಸಂಜೀವ ಸುವರ್ಣ ಇವರಿಗೆ ಯಕ್ಷ ತರಬೇತಿ ನೀಡುತ್ತಿದ್ದಾರೆ. ಪೂರ್ಣಪ್ರಜ್ಞ ಯಕ್ಷಗಾನ ಕೇಂದ್ರ ಪೂರಕ ಸಹಕಾರ ನೀಡುತ್ತಿದೆ. ಯಕ್ಷಗಾನ ಮಟ್ಟುಗಳನ್ನು ಅಭ್ಯಸಿಸಿರುವ ಇವರು ಪೂರ್ವರಂಗ, ತಾಳಗಳು, ಕುಣಿತ ಇತ್ಯಾದಿಗಳನ್ನು ಕಲಿಯುತ್ತಿದ್ದಾರೆ. ಯಕ್ಷಗಾನದ ಸುಮಾರು 15 ರಾಗಗಳನ್ನು ಕಲಿತಿದ್ದಾರೆ. ಸಂಗೀತ, ನೃತ್ಯ ಇತ್ಯಾದಿಗಳ ತಳಸ್ಪರ್ಷಿ ಜ್ಞಾನ ಹೊಂದಿದ್ದು ಈ ವಿದ್ಯಾರ್ಥಿಗಳು ಯಕ್ಷಗಾನವನ್ನು ಚೆನ್ನಾಗಿ ಅಭ್ಯಸಿಸುವ ಈ ವಿದ್ಯಾರ್ಥಿಗಳ ಜೊತೆಗೆ ಕೇಂದ್ರದ ನಿರ್ದೇಶಕ ಪ್ರವೀಣ್ ಗುಂಜನ್ ಇದ್ದಾರೆ. ಯಕ್ಷಗಾನ…

Read More

ಮಂಗಳೂರು : ಕೃಷ್ಣಾಪುರ ಯುವಕಮಂಡಲ ಆಯೋಜಿಸುವ ದಕ್ಷಿಣ ಕನ್ನಡ ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳನ್ನೊಳಗೊಂಡ ಜನಪದ ನೃತ್ಯ ಸ್ಪರ್ಧೆಯು ದಿನಾಂಕ 08-09-2024ರಂದು ಸಂಜೆ ಘಂಟೆ 5.00ರಿಂದ ನಡೆಯಲಿದೆ. ಸ್ಪರ್ಧೆಯಲ್ಲಿ ಒಂದು ಸಂಸ್ಥೆಯಿಂದ ಒಂದು ತಂಡ ಹಾಗೂ ಒಬ್ಬ ಸ್ಪರ್ಧಿ ಒಂದೇ ತಂಡದಲ್ಲಿ ಮಾತ್ರ ಭಾಗವಹಿಸಲು ಅವಕಾಶವಿದ್ದು, ಗರಿಷ್ಠ 10 ತಂಡಗಳಿಗೆ ಮಾತ್ರ ಅವಕಾಶ ಇದೆ. ಸ್ಪರ್ಧಾಳುಗಳಿಗೆ ವಯಸ್ಸಿನ ಮಿತಿ ಇರುವುದಿಲ್ಲ. ಹಾಗೂ ಸ್ಪರ್ಧಾ ಕೂಟಕ್ಕೆ ಪ್ರವೇಶ ಶುಲ್ಕ ಇರುವುದಿಲ್ಲ. ನೃತ್ಯವು ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವಂತಿರಬೇಕು ಮತ್ತು ಯಾವುದೇ ಜಾತಿ-ಮತ-ಧರ್ಮ ಅಥವಾ ಧರ್ಮಾಚರಣೆಗಳನ್ನು ಅವಹೇಳನಕಾರಿಯಾಗಿ ಅಣಕಿಸುವಂತಿರಬಾರದು. ಹೆಸರು ನೊಂದಾಯಿಸಲು ಕೊನೆಯ ದಿನಾಂಕ 15-08-2024. ಹೆಚ್ಚಿನ ವಿವರಗಳಿಗಾಗಿ ಸಂಪರ್ಕ ಸಂಖ್ಯೆ : 7259595962, 9611475265, 9448094050.

Read More