Author: roovari

ಮುದ್ರಾಡಿ : ನಮ ತುಳುವೆರ್ ಕಲಾ ಸಂಘಟನೆ (ರಿ) ಮತ್ತು ಕರ್ನಾಟಕ ಬೀದಿ ನಾಟಕ ಅಕಾಡೆಮಿ ನೀಡುವ ಪ್ರತಿಷ್ಠಿತ “ಸಿ.ಜಿ.ಕೆ. ರಂಗ ಪುರಸ್ಕಾರ-2024’ಕ್ಕೆ ಉಡುಪಿ ಜಿಲ್ಲೆಯಿಂದ ನಟ ನಿರ್ದೇಶಕ ಸಂಘಟಕ ರವಿರಾಜ್ ಎಚ್.ಪಿ. ಆಯ್ಕೆಯಾಗಿರುತ್ತಾರೆ. ಇವರು ಕಳೆದ 30 ವರ್ಷಗಳಿಂದ ರಂಗಭೂಮಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು, ನಟ ನಿರ್ದೇಶಕ ಸಂಘಟಕರಾಗಿ ಸೇವೆ ಸಲ್ಲಿಸಿರುತ್ತಾರೆ. ಇವರ ನಟನೆ ಹಾಗೂ ನಿರ್ದೇಶನಕ್ಕೆ ರಾಜ್ಯಮಟ್ಟದ ಪ್ರಶಸ್ತಿಗಳು ಬಂದಿರುತ್ತದೆ ಹಾಗೂ ಲಾಕ್ ಡೌನ್ ಸಂದರ್ಭದಲ್ಲಿ ಇವರ ಪರಿಕಲ್ಪನೆಯಲ್ಲಿ ನಡೆಸಿದ ‘ಹೀಗೊಂದು ರಂಗ ಕಲಿಕೆ’ ಸುಮಾರು ಹತ್ತು ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿರುತ್ತಾರೆ. ಹಲವು ಟಿ.ವಿ. ಧಾರವಾಹಿ, ಚಲನಚಿತ್ರಗಳಲ್ಲಿ ಪೋಷಕ ನಟನಾಗಿ ಪಾತ್ರ ನಿರ್ವಹಿಸಿರುತ್ತಾರೆ. ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ಇದರ ಸಂಚಾಲಕರಾಗಿ ಉಡುಪಿ ಜಿಲ್ಲೆಯಲ್ಲಿ ಹಲವಾರು ನಾಟಕ, ಸಾಂಸ್ಕೃತಿಕ ಉತ್ಸವಗಳನ್ನು ಕಳೆದ ಐದು ವರ್ಷಗಳಿಂದ ನಡೆಸಿಕೊಂಡು ಬಂದಿರುತ್ತಾರೆ. ಪ್ರಸ್ತುತ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಇದರ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Read More

ಬೆಂಗಳೂರು : ಗೌರವ ಪ್ರಶಸ್ತಿ – 2023 : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ 2023ನೇ ಸಾಲಿನಲ್ಲಿ (1) ಕೊಂಕಣಿ ಸಾಹಿತ್ಯ, (2) ಕೊಂಕಣಿ ಕಲೆ (ಕೊಂಕಣಿ ನಾಟಕ, ಸಂಗೀತ, ಚಲನಚಿತ್ರ) (3) ಕೊಂಕಣಿ ಜಾನಪದ ಈ ಮೂರು ವಿಭಾಗಗಳಲ್ಲಿ ಜೀವಮಾನದ ಸಾಧನೆಗಾಗಿ ಅರ್ಹರಿಂದ ‘ಗೌರವ ಪ್ರಶಸ್ತಿ’ಗಾಗಿ ಅರ್ಜಿ ಕರೆಯಲಾಗಿದೆ. ಈ ಪ್ರಶಸ್ತಿಯು ಸನ್ಮಾನದೊಂದಿಗೆ ರೂ.50,000/- ಗೌರವಧನ ಮತ್ತು ಪ್ರಮಾಣಪತ್ರವನ್ನೊಳಗೊಂಡಿದೆ. ಪುಸ್ತಕ ಬಹುಮಾನ – 2022 ಮತ್ತು 2023 : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು 2022ರ ಕ್ಯಾಲೆಂಡರ್ ವರ್ಷದಲ್ಲಿ (2022 ಜನವರಿ 1ರಿಂದ 2022 ಡಿಸೆಂಬರ್ 31) ಹಾಗೂ 2023ರ ಕ್ಯಾಲೆಂಡರ್ ವರ್ಷದಲ್ಲಿ (2023 ಜನವರಿ 1ರಿಂದ 2023 ಡಿಸೆಂಬರ್ 31) ಪ್ರಕಟಿತವಾದ (1) ಕೊಂಕಣಿ ಕವನ, (2) ಕೊಂಕಣಿ ಸಣ್ಣಕತೆ ಅಥವಾ ಕಾದಂಬರಿ, (3) ಕೊಂಕಣಿಗೆ ಭಾಷಾಂತರಿಸಿದ ಕೃತಿ (ಪ್ರಥಮ ಆದ್ಯತೆ) ಅಥವಾ ಲೇಖನ/ ಅಧ್ಯಯನ ವಿಮರ್ಶೆ ಬಗ್ಗೆ ಲೇಖಕರಿಂದ ಪ್ರಕಾಶಕರಿಂದ ಪುಸ್ತಕ ಬಹುಮಾನಕ್ಕಾಗಿ ಪುಸ್ತಕದ 4 ಪ್ರತಿಗಳ…

Read More

ಪುತ್ತೂರು : ಪದವರ್ಣವೆಂಬುದು ಭರತನಾಟ್ಯದಲ್ಲಿ ಪ್ರಮುಖವಾದ ನೃತ್ಯಬಂಧವಾಗಿದೆ. ಸುಮಾರು 25-30 ನಿಮಿಷ ಅಥವಾ ಕೆಲವೊಮ್ಮೆ ಮುಕ್ಕಾಲು ಗಂಟೆಯವರೆಗೆ ವಿಸ್ತರಿಸುವ ಈ ನೃತ್ಯವು ಇತ್ತೀಚಿಗಿನ ದಿನಗಳಲ್ಲಿ ಭರತನಾಟ್ಯ ಕಾರ್ಯಕ್ರಮಗಳಿಂದ ಮರೆಯಾಗುತ್ತಿವೆ. ಸುದೀರ್ಘವಾದ ಪ್ರಸ್ತುತಿ, ಘನ ಸಾಹಿತ್ಯ, ಅರ್ಥವಾಗದ ತಮಿಳು, ತೆಲುಗು ಭಾಷೆಗಳು, ನಾಯಕ-ನಾಯಕಿ ಭಾವ ಇತ್ಯಾದಿಗಳೆಲ್ಲ ಇದನ್ನು ಅರ್ಥ ಮಾಡಿ ರಂಜಿಸಲು ಅಡ್ಡಿಯಾಗಿವೆ. ಈ ನಿಟ್ಟಿನಲ್ಲಿ ಮತ್ತೊಮ್ಮೆ ಪದವರ್ಣಗಳ ಮೂಲ ಆಶಯವನ್ನು ಜಾಗೃತಗೊಳಿಸಲು ಹಾಗೂ ಪದವರ್ಣವನ್ನು ವೀಕ್ಷಿಸಲು ಬೇಕಾಗುವ ತಾಳ್ಮೆಯನ್ನು ಹೆಚ್ಚಿಸಲು ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ತನ್ನ ಸರಣಿ ಕಾರ್ಯಕ್ರಮ ‘ನೃತ್ಯಾಂತರಂಗ’ದಲ್ಲಿ ಈ ಹೊಸ ಯೋಜನೆಯೊಂದಿಗೆ ‘ವರ್ಣಿಕ’ ಎಂಬ ಶೀರ್ಷಿಕೆಯಲ್ಲಿ 2 ಸರಣಿಯಲ್ಲಿ 5 ಪದವರ್ಣಗಳನ್ನು ಪ್ರಸ್ತುತಪಡಿಸಿತು. ಪುತ್ತೂರಿನ ದರ್ಬೆಯ ಶಶಿಶಂಕರ ಸಭಾಂಗಣದಲ್ಲಿ ದಿನಾಂಕ 08-06-2024ರಂದು ಸಂಜೆ ಗಂಟೆ 5-45ಕ್ಕೆ ‘ವರ್ಣಿಕ- 1’ ಪ್ರಾರಂಭವಾಯಿತು. ಸಂಸ್ಥೆಯ ವಿದ್ಯಾರ್ಥಿಗಳಿಂದ ಪ್ರಾರ್ಥನೆ ನಡೆಯಿತು. ಹಿರಿಯ ವಿದ್ಯಾರ್ಥಿನಿ ವಿದುಷಿ ವಸುಧಾ ನಿರೂಪಣೆ ಮಾಡಿದರು. ಗಿರೀಶ್ ಕುಮಾರ ಶಂಖನಾದ ಹಾಗೂ ಪ್ರೀತಿಕಲಾ ಓಂಕಾರನಾದ ಮಾಡಿದರು. ಅಭ್ಯಾಗತರಾದ ಶ್ರೀ…

Read More

ಮಡಿಕೇರಿ : ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಪ್ರಕಟವಾಗುವ ತ್ರೈಮಾಸಿಕ ‘ಹಿಂಗಾರ’ ಪುಸ್ತಕ ಇದರ 6 ಸಂಚಿಕೆಗಳ ಒಟ್ಟು ‘ಸಂಯುಕ್ತ ಸಂಚಿಕೆ’ಯನ್ನು ಹೊರತರಲು ಉದ್ದೇಶಿಸಲಾಗಿದೆ. ಈ ಸಂಬಂಧ ಅರೆಭಾಷೆಯಲ್ಲಿ ಕಥೆ, ಕವನ, ಲೇಖನ, ಹನಿಗವನ, ಜನಪದ, ಸಂಸ್ಕೃತಿ, ಕಲೆ, ಸಾಹಿತ್ಯ, ವ್ಯಕ್ತಿಚಿತ್ರ ಮತ್ತಿತರ ವಿಚಾರಗಳ ಕುರಿತು ಬರಹಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ‘ಅರೆಭಾಷೆ ಬರಹ’ಗಳನ್ನು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಕಚೇರಿ, ಕಾಫಿ ಕೃಪಾ ಕಟ್ಟಡ, 1ನೇ ಮಹಡಿ, ರಾಜಾಸೀಟು ರಸ್ತೆ, ಮಡಿಕೇರಿ -571 201 ಇಲ್ಲಿಗೆ ಕಳುಹಿಸಲು ಕೋರಿದೆ. ಹೆಚ್ಚಿನ ಮಾಹಿತಿಗಳನ್ನು – 6362588677 ಇಲ್ಲಿಂದ ಪಡೆಯಬಹುದಾಗಿದೆ.

Read More

ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಸಭಾಂಗಣದಲ್ಲಿ ಪರಿಷತ್ತಿನ ಎರಡು ಪ್ರಮುಖ ಪ್ರಶಸ್ತಿಗಳಾದ ‘ಕುವೆಂಪು ಸಿರಿಗನ್ನಡ ದತ್ತಿ’ ಹಾಗೂ ‘ಕನ್ನಡ ಚಳವಳಿ ವೀರಸೇನಾನಿ ಮ. ರಾಮಮೂರ್ತಿ ದತ್ತಿ’ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 21-06-2024ರಂದು ನಡೆಯಿತು. ಈ ಸಮಾರಂಭದಲ್ಲಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು “ಸಾಹಿತ್ಯ ರಾಜಕೀಯವನ್ನು ಎಚ್ಚರಿಸುವ ಶಕ್ತಿಯಾಗಬೇಕೆಂದು ರಾಷ್ಟ್ರಕವಿ ಕುವೆಂಪು ಅವರು ಬಯಸಿದ್ದರು. ‘ಅಖಂಡ ಕರ್ನಾಟಕ : ಅಲ್ತೊ ನಮ್ಮ ನಾಲ್ಕು ದಿನದ ರಾಜಕೀಯ ನಾಟಕ ! ಇಂದು ಬಂದು ನಾಳೆ ಸಂದುಹೋಹ ಸಚಿವ ಮಂಡಲ ರಚಿಸುವೊಂದು ಕೃತಕವಲ್ತೊ ಸಿರಿಗನ್ನಡ ಸರಸ್ವತಿಯವಜ್ರ ಕರ್ಣಕುಂಡಲ !’ ಎಂದು ಬಹು ಹಿಂದೆಯೇ ಎಚ್ಚರಿಸಿದ್ದರು. ಸಾಹಿತ್ಯವು ವ್ಯಕ್ತಿತ್ವ ನಿರ್ಮಾಣದಲ್ಲಿ ಬಹಳ ಮುಖ್ಯ ಪಾತ್ರವನ್ನು ವಹಿಸಬೇಕು ಎಂದು ಕುವೆಂಪು ಅವರು ಬಯಸಿದ್ದರು. ಇಂತಹ ಮನಸ್ಥಿತಿಯನ್ನು ಪಡೆಯಲು ಅವರಿಗೆ ರಾಮಕೃಷ್ಣಾಶ್ರಮದಲ್ಲಿ ದೊರೆತ ಸಂಸ್ಕಾರ ಕಾರಣವಾಗಿತ್ತು ಎಂದರು. 1928ರಲ್ಲಿ ಕಲ್ಬುರ್ಗಿಯಲ್ಲಿ ಜರುಗಿದ 14ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪುಟ್ಟಪ್ಪನವರ…

Read More

ಬೆಂಗಳೂರು : “ಆರ್ಯಭಟ ಸಾಂಸ್ಕೃತಿಕ ಸಂಸ್ಥೆ”ಯು 49ನೇ ವಾರ್ಷಿಕ ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿಯನ್ನು ಕೊಡಮಾಡುತ್ತಿದ್ದು, 6 ಜನ ವಿದೇಶದಲ್ಲಿದ್ದು ಸಾಧನೆ ಮಾಡಿದ ಕನ್ನಡಿಗರ ಸಮೇತ ವಿವಿಧ ಕ್ಷೇತ್ರಗಳಲ್ಲಿ ಕೃಷಿ ಮಾಡಿದ ಒಟ್ಟು 60 ಸಾಧಕರಿಗೆ ಈ ವರ್ಷದ ‘ಆರ್ಯಭಟ’ ಪ್ರಶಸ್ತಿಯನ್ನು ಘೋಷಿಸಿದೆ. 23-06-2024ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಅದ್ದೂರಿ ಸಮಾರಂಭದಲ್ಲಿ ‘ಆರ್ಯಭಟ ಪ್ರಶಸ್ತಿ’ಯನ್ನು ಕರ್ನಾಟಕ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾದ ಡಾ. ಹೆಚ್.ಬಿ. ಪ್ರಭಾಕರ ಶಾಸ್ತ್ರಿಯವರು ಪ್ರದಾನ ಮಾಡಲಿದ್ದಾರೆ. ಕಳೆದ ಮೂರು ದಶಕಗಳಿಂದ ಕನ್ನಡ ರಂಗಭೂಮಿಯಲ್ಲಿ ಕಲಾವಿದರಾಗಿ, ನಿರ್ದೇಶಕರಾಗಿ, ನಾಟಕಕಾರರಾಗಿ, ರಂಗವಿಮರ್ಶಕರಾಗಿ, ರಂಗ ತರಬೇತಿ ಶಿಕ್ಷಕರಾಗಿ, ರಂಗಭೂಮಿ ಪತ್ರಿಕೆಯ ಸಂಪಾದಕರಾಗಿ, ರಂಗ ಸಂಘಟಕರಾಗಿ ವಿವಿಧ ಆಯಾಮಗಳಲ್ಲಿ ನಿರಂತರವಾಗಿ ರಂಗಸೇವೆ ಸಲ್ಲುಸುತ್ತಾ ಬಂದಿರುವ ಶಶಿಕಾಂತ ಯಡಹಳ್ಳಿಯವರು ಈ ಸಲದ ಅಂತರಾಷ್ಟ್ರೀಯ ‘ಆರ್ಯಭಟ’ ಪ್ರಶಸ್ತಿಗೆ ರಂಗಭೂಮಿ ವಿಭಾಗದಿಂದ ಆಯ್ಕೆಯಾಗಿದ್ದಾರೆ. ‘ಸೃಷ್ಟಿ ಜನನಾಟ್ಯ ಕಲಾ ಕೇಂದ್ರ’ ಎನ್ನುವ ಸಂಸ್ಥೆಯನ್ನು ಹುಟ್ಟುಹಾಕಿ ನಿರಂತರವಾಗಿ ನಾಟಕಗಳನ್ನು ರಚಿಸಿ ನಿರ್ದೇಶಿಸಿ ನಿರ್ಮಿಸುತ್ತಾ ಬಂದಿರುವ ಯಡಹಳ್ಳಿಯವರು ಕನ್ನಡ ರಂಗಭೂಮಿಗರ ತಮ್ಮದೇ ಆದ…

Read More

ಮೂಡಬಿದ್ರೆ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ಇದರ ಯಕ್ಷ ಶಿಕ್ಷಣ ಯೋಜನೆಯಡಿಯಲ್ಲಿ ಮೂಡಬಿದ್ರೆಯ ಕಡಂದಲೆ ಶ್ರೀ ಸುಬ್ರಮಣ್ಯ ಸ್ವಾಮಿ ಪ್ರೌಢಶಾಲೆಯಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಮೂಡಬಿದ್ರಿ ಘಟಕದ ಸಹಕಾರದೊಂದಿಗೆ ಯಕ್ಷಶಿಕ್ಷಣ ನಾಟ್ಯ ತರಬೇತಿ ಅಭಿಯಾನ ಕಾರ್ಯಕ್ರಮವು ದಿನಾಂಕ 21-06-2024ರಂದು ನಡೆಯಿತು. ಈ ಕಾರ್ಯಕ್ರಮವನ್ನು ಮುಲ್ಕಿ ಮೂಡಬಿದ್ರಿ ಕ್ಷೇತ್ರದ ಶಾಸಕರಾದ ಶ್ರೀಯುತ ಉಮನಾಥ್ ಕೋಟ್ಯಾನ್ ಇವರು ಉದ್ಘಾಟಿಸಿದರು. ವೇದಿಕೆಯಲ್ಲಿ ಪಟ್ಲ ಫೌಂಡೇಶನ್ ಟ್ರಸ್ಟಿನ ಮೂಡುಬಿದ್ರೆ ಘಟಕದ ಅಧ್ಯಕ್ಷರಾದ ದಿವಾಕರ್ ಶೆಟ್ಟಿ ಖಂಡಿಗೆ, ಅಭಯಚಂದ್ರ ಜೈನ್, ಶ್ರೀಪತಿ ಭಟ್, ಶಾಲಾ ಮುಖ್ಯೋಪಾಧ್ಯಾಯರಾದ ದಿನಕರ್ ಕುಂಭಾಶಿ, ನಾಟ್ಯ ಗುರುಗಳಾದ ಅನ್ವಿತಾ ಕೆರೆಕಾಡು ಉಪಸ್ಥಿತರಿದ್ದರು ಹಾಗೂ ಪಟ್ಲ ಫೌಂಡೇಶನ್ ಮೂಡುಬಿದ್ರೆ ಘಟಕದಿಂದ ಸದಾಶಿವ ನೆಲ್ಲಿಮಾರ್, ಸದಾಶಿವ ಶೆಟ್ಟಿಗಾರ್, ಮನೋಜ್ ಕುಮಾರ್ ಶೆಟ್ಟಿ, ಅರುಣ್ ಕುಮಾರ್ ಸಮಾಜ ಮಂದಿರ, ನವೀನ್ ಶೆಟ್ಟಿ, ಶಾಲಾ ಶಿಕ್ಷಕ ಶಿಕ್ಷಕಿಯರು, ಹಳೆ ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಿದ್ದರು. ಘಟಕದ ಸಂಚಾಲಕರಾದ ರವಿಪ್ರಸಾದ್ ಕೆ. ಶೆಟ್ಟಿಯವರು ಕಾರ್ಯಕ್ರಮವನ್ನು ನಿರೂಪಿಸಿ, ಶಾಲಾ…

Read More

ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯ, ಕನಕದಾಸ ಅಧ್ಯಯನ ಪೀಠ, ಕನಕದಾಸ ಸಂಶೋಧನಾ ಕೇಂದ್ರದ ವತಿಯಿಂದ ‘ಕನಕ ಸ್ಮೃತಿ’ ಕಾರ್ಯಕ್ರಮವನ್ನು ದಿನಾಂಕ 25-06-2024ರಂದು ಮಂಗಳಗಂಗೋತ್ರಿ ಡಾ. ಯು.ಆರ್. ರಾವ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ, 2023-24ನೇ ಸಾಲಿನ ‘ಕನಕ ಪುರಸ್ಕಾರ ಪ್ರದಾನ’ ಮತ್ತು ಕನಕ ಪುರಸ್ಕಾರ ಪಡೆದ ಆಯ್ದ ಗಾಯಕರಿಂದ ಕನಕ ಕೀರ್ತನ ಪ್ರಸ್ತುತಿ ನಡೆಯಲಿದೆ. ವಿಧಾನ ಸಭಾಧ್ಯಕ್ಷರಾದ ಸನ್ಮಾನ್ಯ ಯು.ಟಿ. ಖಾದರ್ ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದು, ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಪಿ.ಎಲ್. ಧರ್ಮ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಪುತ್ತೂರು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ನರೇಂದ್ರ ರೈ ದೇರ್ಲ ಇವರು ವಿಶೇಷ ಉಪನ್ಯಾಸ ನೀಡಲಿದ್ದಾರೆ.

Read More

ಬೆಂಗಳೂರು : ನಾಡಿನ ಅಗ್ರಗಣ್ಯ ಮಹಿಳಾ ಸಾಹಿತಿಯಾಗಿದ್ದ ನಾಡೋಜ ಕಮಲಾ ಹಂಪನಾ ಇವರು ದಿನಾಂಕ 22-06-2024 ರ ಶನಿವಾರದಂದು ರಾಜಾಜಿನಗರದ ಮನೆಯಲ್ಲಿ ಮಲಗಿದ್ದಲ್ಲಿಯೇ ಚಿರನಿದ್ರೆಗೆ ಜಾರಿದ್ದಾರೆ. ಇವರಿಗೆ 89ವರ್ಷ ವಯಸ್ಸಾಗಿತ್ತು. ತಮ್ಮ ಅಧ್ಯಯನ, ಅಧ್ಯಾಪನ, ಲೇಖನ, ಭಾಷಣ ಮತ್ತು ಸಂಶೋಧನೆಗಳಿಂದ 60 ವರ್ಷಗಳ ಕಾಲ ಸಾಹಿತ್ಯ ಕ್ಷೇತ್ರದಲ್ಲಿ ಅವಿರತವಾಗಿ ಕೃಷಿ ಮಾಡುತ್ತಾ ಬಂದಿರುವ ಪ್ರೊ. ಕಮಲಾ ಹಂಪನಾ ಇವರು ಸಮಕಾಲೀನ ಕನ್ನಡ ಸಾಹಿತ್ಯದ ಹಿರಿಯ ಬರಹಗಾರ್ತಿ. ಡಾ. ಕಮಲಾ ಹಂಪನಾ ಅವರ ಬರವಣಿಗೆಯ ಹರಹು ದೊಡ್ಡದು. ಅವರ ಸಮಗ್ರ ಸಾಹಿತ್ಯವನ್ನು ಒಳಗೊಂಡ ಒಂಬತ್ತು ಬೃಹತ್ ಸಂಪುಟಗಳು ಹೊರಬಂದಿವೆ. ಸಂಶೋಧನೆ ಅವರ ಮೊದಲ ಆಯ್ಕೆ. ಪ್ರಕಟವಾದ 60ಕ್ಕೂ ಹೆಚ್ಚು ಕೃತಿಗಳಲ್ಲಿ ಸೃಜನಕೃತಿಗಳೂ ಸೇರಿವೆ. ನಾಟಕ, ಕತೆಗಳು ಮತ್ತು ವಚನಗಳಲ್ಲಿ ಸೃಷ್ಟಿಶಕ್ತಿಯ ವಿನ್ಯಾಸ ಕೆನೆಕಟ್ಟಿದೆ. ಬಿಂದಲಿ, ಬುಗುಡಿ ಹಾಗೂ ಬಯಲು ಇವು ಆಧುನಿಕ ವಚನಗಳಿರುವ ಸಂಕಲನಗಳು. ಇವಲ್ಲದೆ Attimabbe and Chalukyas, ಹಾಗೂ Jainism and Other Essays- ಎಂಬ ಎರಡು ಇಂಗ್ಲಿಷ್ ಪುಸ್ತಕ…

Read More

ಮಂಗಳೂರು : ಯಕ್ಷಗಾನ ಚಿಕ್ಕಮೇಳ ತಿರುಗಾಟದಲ್ಲಿ ಶಿಸ್ತು ಮೂಡಿಸುವ ಉದ್ದೇಶದೊಂದಿಗೆ ‘ತೆಂಕುತಿಟ್ಟು ಚಿಕ್ಕ ಮೇಳಗಳ ಒಕ್ಕೂಟ ಕೇಂದ್ರ ಸಮಿತಿ ದ .ಕ. ಜಿಲ್ಲೆ’ ಹೆಸರಿನ ಸಂಘಟನೆ ಅಸ್ತಿತ್ವಕ್ಕೆ ಬಂದಿದೆ. ತೆಂಕುತಿಟ್ಟು ಚಿಕ್ಕ ಮೇಳಗಳ ಒಕ್ಕೂಟ ಕೇಂದ್ರ ಸಮಿತಿಯ ಅಧ್ಯಕ್ಷ ಸರಪಾಡಿ ಅಶೋಕ ಶೆಟ್ಟಿ ದಿನಾಂಕ 17-06-2024ರ ಸೋಮವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ “ಈ ಹಿಂದೆ ಚಿಕ್ಕಮೇಳಗಳ ತಿರುಗಾಟದ ಸಂದರ್ಭದಲ್ಲಿ ಶಿಸ್ತು ಉಲ್ಲಂಘನೆ, ಯಕ್ಷಗಾನ ಕಲಿಯದವರಿಂದ ಚಿಕ್ಕಮೇಳ ತಿರುಗಾಟ ಹೀಗೆ ಅನೇಕ ದೂರುಗಳು ಕೇಳಿಬಂದಿತ್ತು. ಇದೇ ಕಾರಣಕ್ಕೆ ಸಮಾನ ಮನಸ್ಕರು ಒಟ್ಟುಸೇರಿ ಚಿಕ್ಕಮೇಳಗಳ ಒಕ್ಕೂಟ ರಚಿಸಿದ್ದೇವೆ. ಈಗಾಗಲೇ 45 ತಂಡಗಳು ಒಕ್ಕೂಟದಲ್ಲಿ ನೋಂದಣಿ ಮಾಡಿಕೊಂಡಿವೆ. ಇನ್ನೂ ಕೆಲವು ತಂಡಗಳು ನೋಂದಣಿ ಮಾಡಿಕೊಳ್ಳಲಿವೆ.” ಎಂದರು. ಚಿಕ್ಕಮೇಳಗಳು ನೋಂದಣಿಗೊಂಡ ನಂತರ ತಂಡಗಳು ಒಕ್ಕೂಟದ ಅಧಿಕೃತ ಪರವಾನಿಗೆ ಪಡೆದು ತಿರುಗಾಟ ನಡೆಸಲಿದ್ದಾರೆ. ಸಂಜೆ ಘಂಟೆ 6.00 ರಿಂದ ರಾತ್ರಿ 10.30ರ ವರೆಗೆ ಕನ್ನಡ ಅಥವಾ ತುಳುವಿನ ಯಾವುದಾದರೂ ಒಳ್ಳೆಯ ಸಂದೇಶ ಇರುವ ಸನ್ನಿವೇಶದ ಪ್ರದರ್ಶನವನ್ನು ಪ್ರದರ್ಶಿಸಲಿದೆ.…

Read More