Author: roovari

ಮಂಗಳೂರು : ಕರಾವಳಿ ಲೇಖಕಿಯರ -ವಾಚಕಿಯರ ಸಂಘದಿಂದ ಬಿ. ಎಸ್. ಶಂಕರನಾರಾಯಣ ದತ್ತಿನಿಧಿ ಬಹುಮಾನಕ್ಕಾಗಿ ಮಂಗಳೂರು ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕಿಯರಿಂದ ಸ್ವರಚಿತ ಕವನಗಳನ್ನು ಆಹ್ವಾನಿಸಲಾಗಿದೆ. ಕವನದ ವಿಷಯ ‘ನನ್ನ ಅಪ್ಪ’. ಮೊದಲ ಮೂರು ವಿಜೇತರಿಗೆ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಲಾಗುವುದು. ಸ್ಪರ್ಧಿಗಳ ಹೆಸರು, ಕಲಿಸುವ ಶಾಲೆಯ ಹೆಸರು ಮತ್ತು ವಿಳಾಸವನ್ನು ಪ್ರತ್ಯೇಕ ಹಾಳೆಯಲ್ಲಿ ಬರೆಯಬೇಕು. ಕೈಬರಹದ ಅಥವಾ ಡಿ. ಟಿ. ಪಿ. ಮಾಡಿದ ಕವಿತೆಯನ್ನು ಕರಾವಳಿ ಲೇಖಕಿಯರ ವಾಚಕಿಯರ ಸಂಘ, ಸಾಹಿತ್ಯ ಸದನ, ಉರ್ವಸ್ಟೋರ್, ಅಶೋಕನಗರ ಅಂಚೆ ಕಚೇರಿಯ ಬಳಿ, ಮಂಗಳೂರು -575006. ಈ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸಬೇಕು. ಕವನಗಳು ತಲುಪಲು ಕೊನೆಯ ದಿನಾಂಕ 31 ಅಕ್ಟೋಬರ್ 2024.

Read More

ತೀರ್ಥಹಳ್ಳಿ : ಕಳೆದ ನವೆಂಬರ್ 2023ಕ್ಕೆ ಮೈಸೂರು ರಾಜ್ಯಕ್ಕೆ ಕರ್ನಾಟಕವೆಂದು ಮರು ನಾಮಕರಣವಾಗಿ 50 ವರ್ಷಗಳು ಪೂರ್ಣಗೊಂಡ ಹಿನ್ನಲೆಯಲ್ಲಿ ಕರ್ನಾಟಕ ಸಂಭ್ರಮ – 50 – ‘ಹೆಸರಾಯಿತು ಕನ್ನಡ, ಉಸಿರಾಗಲಿ ಕನ್ನಡ’ ಎಂಬ ಘೋಷಣೆಯೊಂದಿಗೆ ನಿರಂತರ ಒಂದು ವರ್ಷ ಕನ್ನಡದ ಇತಿಹಾಸ, ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ನಾಡು ನುಡಿಗೆ ಸಂಬಂಧಿಸಿದಂತೆ ಮತ್ತು ಯುವ ಜನತೆಯಲ್ಲಿ ಕನ್ನಡ – ಕನ್ನಡಿಗ ಕರ್ನಾಟಕದ ಅರಿವು ಮೂಡಿಸುವ ಯೋಜನೆಗಳನ್ನು ಹಮ್ಮಿಕೊಳ್ಳುವ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2023-24ರ ಆಯವ್ಯಯದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಪ್ರಕಟಿಸಿದ್ದರು. ಈ ಹಿನ್ನಲೆಯಲ್ಲಿ ಅಭಿಯಾನದ ನಿಮಿತ್ತವಾಗಿ 1 ನವೆಂಬರ್ 2023ರಿಂದ ನವೆಂಬರ್ 2024ರವರೆಗೆ ರಾಜ್ಯಾದ್ಯಂತ ವರ್ಷಪೂರ್ತಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ಇದರ ಅಂಗವಾಗಿ 2 ನವೆಂಬರ್ 2023ರಂದು ವಿಜಯನಗರ ಜಿಲ್ಲೆಯ ಹಂಪಿಯಿಂದ ಪ್ರಾರಂಭವಾದ ಕರ್ನಾಟಕ ಸಂಭ್ರಮ –50 ಜ್ಯೋತಿ ರಥ ಯಾತ್ರೆಗೆ ಮುಖ್ಯಮಂತ್ರಿ ಚಾಲನೆ ನೀಡಿದ್ದರು. ಈ ಕರ್ನಾಟಕ- ಸಂಭ್ರಮ-50 ಜ್ಯೋತಿ ರಥಯಾತ್ರೆಯು 13 ಅಕ್ಟೋಬರ್ 2024ರಂದು ತೀರ್ಥಹಳ್ಳಿಗೆ ಹೊಸನಗರದಿಂದ…

Read More

ಪುತ್ತೂರು : ಕಳೆದ 35 ವರ್ಷಗಳಿಂದ ಉಪನ್ಯಾಸಕಿಯಾಗಿ ಸುದೀರ್ಘ ಸೇವೆಯನ್ನು ಸಲ್ಲಿಸಿ, ನಿವೃತ್ತರಾದ ಶ್ರೀಮತಿ ಉಷಾ ಕೆ.ಯವರು ನಿರಂತರವಾಗಿ ಪತ್ರಿಕೆಗಳಲ್ಲಿ ಪ್ರಕಟಿಸುತ್ತಿದ್ದ ವೈಚಾರಿಕ – ಮಾನವೀಯ ಮೌಲ್ಯಗಳುಳ್ಳ ಲೇಖನಗಳ ಸಂಗ್ರಹ ‘ತೆರೆದ ಗವಾಕ್ಷಿ’ ಕೃತಿ ದಿನಾಂಕ 12 ಅಕ್ಟೋಬರ್ 2024ರಂದು ಪುತ್ತೂರಿನ ಅನುರಾಗ ವಠಾರದಲ್ಲಿ ರಾಜೇಶ್ ಪವರ್ ಪ್ರೆಸ್ ಇದರ ಮಾಲಕರಾದ ಶ್ರೀ ರಘುನಾಥ ರಾವ್ ಇವರು ಲೋಕಾರ್ಪಣೆಗೊಳಿಸಿದರು. ಹಿರಿಯ ಸಾಹಿತಿಗಳಾದ ನಾರಾಯಣ ರೈ ಕುಕ್ಕುವಳ್ಳಿಯವರು ಕೃತಿ ಕುರಿತು ಹಾಗೂ ಸಾರಸ್ವತ ಸೌರಭದ ವ್ಯವಸ್ಥಾಪಕ ಸಂಪಾದಕರಾದ ಸುಳ್ಳಿ ರಾಧಾಕೃಷ್ಣ ನಾಯಕ್ ಅವರು ಕೃತಿಕಾರರ ಕುರಿತು ಮಾತನಾಡಿದರು. ಹಿರಿಯ ಸಾಹಿತಿಗಳಾದ ಶ್ರೀ ವಿ.ಬಿ. ಆರ್ತಿಕಜೆ, ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀ ಬಿ. ಪುರಂದರ ಭಟ್, ಪತ್ರಕರ್ತರಾದ ಶ್ರೀ ಜಯಾನಂದ ಪೆರಾಜೆ ಇನ್ನಿತರರು ಉಪಸ್ಥಿತರಿದ್ದರು.

Read More

ಬಂಟ್ವಾಳ : ಕಲ್ಲಡ್ಕ ಶ್ರೀ ಶಾರದಾ ಸೇವಾ ಪ್ರತಿಷ್ಠಾನ ಹಾಗೂ ಶಾರದಾ ಪೂಜಾ ಉತ್ಸವ ಸಮಿತಿಯ ನೇತೃತ್ವದಲ್ಲಿ ಕಲ್ಲಡ್ಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಿನಾಂಕ 11 ಅಕ್ಟೋಬರ್ 2024ರಂದು ‘ಶಾಂತಶ್ರೀ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮವು ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಸುಳ್ಯ ರೋಟರಿ ಆಂಗ್ಲಮಾಧ್ಯಮ ಶಾಲೆಯ ಶಿಕ್ಷಕಿ ನಳಿನಾಕ್ಷಿ ವಿ. ಆಚಾರ್ಯ “ದೇವರ ಪ್ರಾರ್ಥನೆಯ‌ ಮೂಲಕ ಮನಸ್ಸಿನ ಕ್ಲೇಶಗಳು ದೂರವಾದರೆ ಅದುವೆ ನಮ್ಮ‌ ಬದುಕಿಗೆ ನಿಜವಾದ ಅಲಂಕಾರ. ಹಬ್ಬದ ಸಂತೋಷವನ್ನು ಹಂಚಿ ಸಾರ್ವಜನಿಕವಾಗಿ ಸಂಭ್ರಮಿಸುವುದರ ಹಿಂದೆ ಸಂಘಟನಾ ಶಕ್ತಿ ಜಾಗೃತವಾಗಬೇಕು. ನಿಜವಾದ ಆಶೋತ್ತರ ಅಡಗಿದೆ. ಇದು ನಿರಂತರವಾಗಿರಬೇಕು” ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಮುಕ್ಕ‌ ಶ್ರೀನಿವಾಸ ಮೆಡಿಕಲ್ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಸುಕೇಶ್ ಕೊಟ್ಟಾರಿ ಮಾತನಾಡಿ ಧಾರ್ಮಿಕ ಆಚರಣೆಗಳು ಹೆಚ್ಚು ಹೆಚ್ಚು ನಡೆಯುವುದರ ಜೊತೆಗೆ ಸನಾತನ ಹಿಂದೂ ಧರ್ಮದ ವಿರುದ್ಧ ಅಪಪ್ರಚಾರ ನಡೆಸುವವರಿಗೂ ತಕ್ಕಪಾಠ ಕಲಿಸುವಂತೆ ಕರೆ ನೀಡಿದರು. ಗೋಳ್ತಮಜಲು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ವಿಜಯಶಂಕರ ಆಳ್ವ ಮಾತನಾಡಿ…

Read More

ಪ್ರಸ್ತುತ ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಅಧ್ಯಕ್ಷರಾಗಿರುವ ಡಾ. ಚನ್ನಪ್ಪ ಕಟ್ಟಿಯವರ ಸಮಗ್ರ ಕಥೆಗಳ ಸಂಕಲನ ‘ಕಥಾ ಕಿನ್ನುರಿ’ ಅವರ ಅದ್ಬುತ ಕಥನ ಶೈಲಿಗೆ ಸಾಕ್ಷಿಯಾಗಿ ನಿಲ್ಲುವ, ಅನೇಕ ವೈಶಿಷ್ಟ್ಯಗಳನ್ನು ಒಳಗೊಂಡ ಒಂದು ಕೃತಿ. ಕಥೆ, ಕಾವ್ಯ, ಅನುವಾದ, ವಿಮರ್ಶೆ ಮೊದಲಾದ ಹಲವು ಹಲವು ಪ್ರಕಾರಗಳಲ್ಲಿ ಕೈಯಾಡಿಸಿರುವರಾದರೂ ಸಣ್ಣ ಕಥೆಗಳಲ್ಲಿ ಅವರ ಬರವಣಿಗೆಯ ಪ್ರತಿಭೆ ಹೆಚ್ಚು ಸಶಕ್ತವಾಗಿ ಪ್ರಕಟವಾದಂತೆ ಕಾಣುತ್ತದೆ. ಈ ಕೃತಿಯಲ್ಲಿ ಅವರ ಲೇಖನಿಯಿಂದ ಅನಾಯಾಸವಾಗಿ ಹರಿದು ಬಂದ 24 ಕಥೆಗಳಿವೆ. ಇದು ಈಗಾಗಲೇ ಮೂರು ಸಂಕಲನಗಳಲ್ಲಿ ಪ್ರಕಟವಾಗಿರುವ ಸಮಗ್ರ ಕಥೆಗಳ ಸಂಕಲನ. ಇಲ್ಲಿ ಹೆಚ್ಚಿನವು ಗ್ರಾಮೀಣ ಜನರ ಬದುಕಿನ ಅಗುಹೋಗುಗಳಿಗೆ ಸಂಬಂಧಪಟ್ಟ ಕಥೆಗಳು. ಹಳ್ಳಿಯ ಜನರ ಬದುಕಿನ ಏಳು ಬೀಳುಗಳು, ಕೌಟುಂಬಿಕ ಹಾಗೂ ಸಾಮಾಜಿಕ ಸಂಬಂಧಗಳು, ರಾಜಕೀಯ ಒಳಸುಳಿಗಳು, ಹೆಣ್ಣು-ಗಂಡುಗಳ ನಡುವಣ ಪ್ರೇಮ-ದಾಂಪತ್ಯ- ವಿವಾಹೇತರ ಸಂಬಂಧಗಳು, ಅವರ ಮೇಲೆ ಆಧುನಿಕ ನಗರೀಕೃತ ಜೀವನ ಶೈಲಿಯ ಪ್ರಭಾವ ಹಾಗೂ ಪರಿಣಾಮಗಳು- ಮೊದಲಾದ ಪ್ರಸಕ್ತ ವಿದ್ಯಮಾನಗಳು ಸಶಕ್ತವಾಗಿ ಅವರ ಕಥೆಗಳಲ್ಲಿ ಅನಾವರಣಗೊಳ್ಳುತ್ತವೆ. ಪ್ರಸ್ತುತ…

Read More

ಉಡುಪಿ : ಪರ್ಕಳದ ಸರಿಗಮ ಭಾರತಿ ಸಂಗೀತ ವಿದ್ಯಾಲಯದಲ್ಲಿ ದಿನಾಂಕ 12 ಅಕ್ಟೋಬರ್ 2024ರಂದು ವಿಜಯದಶಮಿ ಸಂಗೀತೋತ್ಸವ, ಸಂಸ್ಥೆಯ ರಜತ ಸಂಭ್ರಮ ಸಮಾರಂಭ ಜರಗಿತು. ಬೆಳಗ್ಗೆ 8-00 ಗಂಟೆಗೆ ಮಣಿಪಾಲದ ಹಿಂದುಸ್ತಾನಿ ಗಾಯಕ ಪಂಡಿತ್‌ ರವಿಕಿರಣ್‌ ಅವರು ‘ಶ್ರೀ ದುರ್ಗಾ ಮಾತೆ’ಯ ಪ್ರಾರ್ಥನೆಯನ್ನು ಪ್ರಸ್ತುತ ಪಡಿಸುವ ಮೂಲಕ ಉತ್ಸವಕ್ಕೆ ಚಾಲನೆ ನೀಡಿದರು. ಬಳಿಕ ಸಂಗೀತ ಶಾಲೆಯ ವಿದ್ಯಾರ್ಥಿಗಳು ಪಿಳ್ಳಾರಿ ಗೀತೆಗಳನ್ನು ಹಾಡಿದರು ಹಾಗೂ ಅಭಿನವ್‌ ಭಟ್‌ ಹಾಗೂ ತನ್ವಿ ಶಾಸ್ತ್ರಿ ಇವರಿಂದ ಹಾಡುಗಾರಿಕೆ ನಡೆಯಿತು. ವಿಧಾನ ಪರಿಷತ್‌ ಮಾಜಿ ಸದಸ್ಯ ಕ್ಯಾಪ್ಟನ್‌ ಗಣೇಶ್‌ ಕಾರ್ಣಿಕ್‌ ಇವರು ದೀಪ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಅತಿಥಿಗಳಾಗಿ ಉಡುಪಿಯ ಹಿರಿಯ ಸಾಹಿತಿ ಪ್ರೊ. ಮುರಲೀಧರ ಉಪಾಧ್ಯ ಹಾಗೂ ಪರ್ಕಳದ ಮಂಜುನಾಥ ಉಪಾಧ್ಯ ಭಾಗವಹಿಸಿ ಶುಭಹಾರೈಸಿದರು. ಇದೇ ಸಂದರ್ಭದಲ್ಲಿ ಬಹುಮುಖ ಪ್ರತಿಭೆಯ ಕಲಾವಿದೆ ಶ್ರೀಮತಿ ಸುರೇಖಾ ಭಟ್‌ ಪಟ್ಲ ಇವರನ್ನು ಅಭಿನಂದಿಸಿ ಸರಿಗಮ ಭಾರತಿ ಪರವಾಗಿ ಗೌರವಿಸಲಾಯಿತು. ಸಂಸ್ಥೆಯ ನಿರ್ದೇಶಕ ಡಾ. ಉದಯಶಂಕರ ಭಟ್‌ ಪ್ರಸ್ತಾವಿಕವಾಗಿ…

Read More

ಪುತ್ತೂರು : ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ನವರಾತ್ರಿ ಉತ್ಸವದ ಅಂಗವಾಗಿ ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇದರ ವತಿಯಿಂದ ದಿನಾಂಕ 10 ಅಕ್ಟೋಬರ್ 2024ರಂದು ‘ಶುಕ್ರ ಸಂಜೀವಿನಿ’ ಎಂಬ ತಾಳಮದ್ದಳೆ ಶ್ರೀ ದೇವಳದಲ್ಲಿ ಜರಗಿತು. ಹಿಮ್ಮೇಳದಲ್ಲಿ ಭಾಗವತರಾಗಿ ಭವ್ಯ ಶ್ರೀ ಕುಲ್ಕುಂದ ಹಾಗೂ ಚೆಂಡೆ ಮದ್ದಲೆಗಳಲ್ಲಿ ಪಿ.ಟಿ. ಜಯರಾಮ ಭಟ್, ಮುರಳೀಧರ ಕಲ್ಲೂರಾಯ, ಮಾಸ್ಟರ್ ಅಮೋಘ ಶಂಕರ್ ಹಾಗೂ ಮಾಸ್ಟರ್ ಅಭಯಕೃಷ್ಣ ಸಹಕರಿಸಿದರು. ಮುಮ್ಮೇಳದಲ್ಲಿ ಭಾಸ್ಕರ ಬಾರ್ಯ (ಶುಕ್ರಾಚಾರ್ಯ), ಭಾಸ್ಕರ ಶೆಟ್ಟಿ ಸಾಲ್ಮರ (ಕಚ), ನಾ. ಕಾರಂತ ಪೆರಾಜೆ (ದೇವಯಾನಿ), ಗೋಪಾಲ ಶೆಟ್ಟಿ ಕಳೆಂಜ (ವೃಷಪರ್ವ), ಗಣರಾಜ್ ಭಟ್ ಬಡೆಕ್ಕಿಲ (ಧೂಮಕೇತ) ಸಹಕರಿಸಿದರು. ಶಿವಪ್ರಸಾದ್ ರೈ ಮತ್ತು ಮುರಳೀಧರ ರೈ ಮಠಂತಬೆಟ್ಟು ಕಲಾವಿದರನ್ನು ಗೌರವಿಸಿದರು. ದಿವಂಗತ ಶ್ರೀನಿವಾಸ ರೈ ಅವರ ಪತ್ನಿ ಶ್ರೀಮತಿ ಸವಿತಾ ಎಸ್. ರೈ ಹಾಗೂ ಮನೆಯವರು ಉಪಸ್ಥಿತರಿದ್ದರು.

Read More

ಬೆಂಗಳೂರು : ರಾಷ್ಟ್ರೋತ್ಥಾನ ಸಾಹಿತ್ಯ ಇದರ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ‘ಕನ್ನಡ ಪುಸ್ತಕ ಹಬ್ಬ 2024’ವನ್ನು ದಿನಾಂಕ 26 ಅಕ್ಟೋಬರ್ 2024ರಿಂದ 01 ಡಿಸೆಂಬರ್ 2024ರವರೆಗೆ ಬೆಂಗಳೂರಿನ ಕೆಂಪೇಗೌಡನಗರ, ರಾಷ್ಟ್ರೋತ್ಥಾನ ಪರಿಷತ್, ‘ಕೇಶವಶಿಲ್ಪ’ ಸಭಾಂಗಣದಲ್ಲಿ ಆಯೋಜಿಸಲಾಗಿದೆ. 37 ದಿನಗಳ ಕನ್ನಡ ಪುಸ್ತಕ ಪ್ರದರ್ಶನ ಮತ್ತು ಮಾರಾಟವನ್ನು ಬೆಳಗ್ಗೆ 10-00 ಗಂಟೆಯಿಂದ ರಾತ್ರಿ 9-00 ಗಂಟೆವರೆಗೆ ಹಮ್ಮಿಕೊಳ್ಳಲಾಗಿದೆ. ಇದೇ ಸಂದರ್ಭದಲ್ಲಿ ಹೊಸ ಪುಸ್ತಕಗಳ ಲೋಕಾರ್ಪಣೆ, ವಿದ್ಯಾರ್ಥಿಗಳಿಗಾಗಿ ಸ್ಪರ್ಧೆಗಳು ಸಂಗೀತ, ನೃತ್ಯ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

Read More

ಮಂಗಳೂರು: ಸಾಹಿತಿ ಶಿವರಾಮ ಕಾರಂತರ ಜನ್ಮದಿನದ ಅಂಗವಾಗಿ ಕಲ್ಕೂರ ಪ್ರತಿಷ್ಠಾನವು ಆಯೋಜಿಸಿದ್ದ ಕಾರಂತರ ಜನ್ಮದಿನಾಚರಣೆ ಹಾಗೂ ‘ಕಾರಂತ’ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 10 ಅಕ್ಟೋಬರ್ 2024ರ ಗುರುವಾರದಂದು ಮಂಗಳೂರಿನ ಪತ್ತುಮುಡಿ ಸೌಧದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ 2024ನೇ ಸಾಲಿನ ಕಾರಂತ ಪ್ರಶಸ್ತಿಯನ್ನು ಬಹುಶ್ರುತ ವಿದ್ವಾಂಸ ಎಂ. ಪ್ರಭಾಕರ ಜೋಶಿ ಇವರಿಗೆ ಪ್ರದಾನ ಮಾಡಲಾಯಿತು. ಪ್ರಶಸ್ತಿ ಪ್ರದಾನ ಮಾಡಿದ ಮಂಗಳೂರು ವಿ. ವಿ. ಕುಲಪತಿ ಪ್ರೊ. ಪಿ. ಎಲ್. ಧರ್ಮ ಮಾತನಾಡಿ “ಭವಿಷ್ಯವನ್ನು ಇಂದೇ ತಿಳಿಯುವ ಮಟ್ಟಕ್ಕೆ ತಂತ್ರಜ್ಞಾನ ಬೆಳೆದಿದೆ, ಸಂಶೋಧನೆಗಳು ನಡೆಯುತ್ತವೆ, ಆದರೆ ನಮ್ಮ ನಡುವಿನ ಸಾಧಕರ ಅದ್ಭುತ ಕೃತಿಗಳ ಬಗ್ಗೆ ಯುವಜನರಿಗೆ ಗೊತ್ತಿಲ್ಲ. ಪುಸ್ತಕಗಳ ಸ್ಪರ್ಶ ಸುಖ, ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಕಾರಂತರ ಜನ್ಮದಿನವು ಪುಸ್ತಕ ಓದುವ ಕ್ರಾಂತಿ ಸೃಷ್ಟಿಸಬೇಕು. ಕಾರಂತರ ‘ಚೋಮನ ದುಡಿ’ಯಲ್ಲಿ ಬರುವ ದುಡಿಯು ಕೇವಲ ಸಾಮಾಜಿಕ ಸಂಕೇತದ ದುಡಿಯಲ್ಲ. ಆ ದುಡಿಯಲ್ಲಿ ಸಾಮಾಜಿಕ ನೋವು, ಧ್ವನಿ ಇಲ್ಲದವರ ಧ್ವನಿ, ಕ್ರಾಂತಿ ಎಲ್ಲವೂ ಇವೆ. ಈ ಕೃತಿಯು…

Read More

ಮಂಗಳೂರು : ಕಡಬ ಸಂಸ್ಮರಣಾ ಸಮಿತಿ ರಥಬೀದಿ ಮಂಗಳೂರು ಇದರ ಪಂಚಮ ವಾರ್ಷಿಕೋತ್ಸವ ಸಮಾರಂಭವು ದಿನಾಂಕ 27 ಅಕ್ಟೋಬರ್ 2024ರಂದು ಅಪರಾಹ್ನ 2-30 ಗಂಟೆಗೆ ಮಂಗಳೂರಿನ ರಥಬೀದಿಯಲ್ಲಿರುವ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ‘ಕಡಬದ್ವಯ ಸಂಸ್ಮರಣಾ ಯಕ್ಷಗಾನ ಪ್ರಶಸ್ತಿ’ ಪ್ರದಾನ ಹಾಗೂ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ. ಈ ಕಾರ್ಯಕ್ರಮ ಅಧ್ಯಕ್ಷತೆಯನ್ನು ಕಡಬ ಸಂಸ್ಮರಣಾ ಸಮಿತಿಯ ಅಧ್ಯಕ್ಷರಾದ ಶ್ರೀ ಸುಂದರ ಆಚಾರ್ಯ ಬೆಳುವಾಯಿ ಇವರು ವಹಿಸಲಿದ್ದು, ಹಿರಿಯ ಕಲಾವಿದರಾದ ಶ್ರೀ ಜಯರಾಮ ಆಚಾರ್ಯ ಬಂಟ್ವಾಳ ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಡಾ. ದಿನಕರ ಪಚ್ಚನಾಡಿ ಇವರ ನಿರ್ದೇಶನದಲ್ಲಿ ಶ್ರೀ ಕಾಳಿಕಾಂಬಾ ವಿನಾಯಕ ಯಕ್ಷಗಾನ ಕೇಂದ್ರದ ಸದಸ್ಯರುಗಳು ‘ಶ್ರೀ ರಾಮ ದರ್ಶನ’ ಹಾಗೂ ಜಿಲ್ಲೆಯ ಸುಪ್ರಸಿದ್ಧ ಕಲಾವಿದರುಗಳಿಂದ ‘ದಮಯಂತಿ ಪುನಃ ಸ್ವಯಂವರ’ ಎಂಬ ಪ್ರಸಂಗದ ಯಕ್ಷಗಾನ ಪ್ರದರ್ಶನ ನಡೆಯಲಿದೆ.

Read More