Author: roovari

ಬಂಟ್ವಾಳ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟಿನ ಸ್ಥಾಪಕಾಧ್ಯಕ್ಷ ಶ್ರೀ ಪಟ್ಲ ಸತೀಶ್ ಶೆಟ್ಟಿ ಅವರ ಆಶಯದಂತೆ ಯಕ್ಷಧ್ರುವ ಯಕ್ಷ ಶಿಕ್ಷಣ ಅಭಿಯಾನದಡಿಯಲ್ಲಿ ದಿನಾಂಕ 26-08-2023ರಂದು ಬಂಟ್ವಾಳ ತಾಲೂಕಿನ ಕೊಯಿಲ ಸರಕಾರಿ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಯಕ್ಷ ತರಬೇತಿ ಕಾರ್ಯಕ್ರಮದ ಉದ್ಘಾಟನೆ ನಡೆಯಿತು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಯಕ್ಷಗಾನ ಕಲಾವಿದರಾದ ಶ್ರೀ ಸರಪಾಡಿ ಅಶೋಕ ಶೆಟ್ಟಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಾಲಾಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ದುರ್ಗಾದಾಸ್ ಶೆಟ್ಟಿ ಮಾವಂತೂರು ಇವರು ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸದಸ್ಯ ಹಿಲಾರಿ ಡಿಸೋಜ, ರಂಗಭೂಮಿ ಕಲಾವಿದ ರತ್ನದೇವ್ ಪುಂಜಾಲಕಟ್ಟೆ, ಶಿಕ್ಷಕರಾದ ಧನಂಜಯ, ಜ್ಯೋತಿ, ಆಶಾಲತಾ, ಪ್ರಶ್ಮಿತ, ಸುಶ್ಮಿತ ಮೊದಲಾದವರು ಉಪಸ್ಥಿತರಿದ್ದರು. ಯಕ್ಷ ಗುರು ಪ್ರೇಮರಾಜ್ ಕೊಯಿಲ ಇವರು ವಿದ್ಯಾರ್ಥಿಗಳಿಗೆ ಯಕ್ಷಗಾನ ನಾಟ್ಯ ತರಗತಿ ಪ್ರಾರಂಭಿಸಿದರು.  ಶಾಲಾ ಮುಖ್ಯ ಶಿಕ್ಷಕಿ  ಸೌಮ್ಯಾ ಎಚ್. ಸ್ವಾಗತಿಸಿ, ಸಹ ಶಿಕ್ಷಕರಾದ ಪ್ರವೀಣ್ ಕಾಮತ್ ವಂದಿಸಿ, ರಮೇಶ್ ಮಯ್ಯ ಕಾರ್ಯಕ್ರಮ‌ ನಿರೂಪಿಸಿದರು. ಸುಮಾರು ಎಂಭತ್ತಮೂರು ಮಂದಿ ವಿದ್ಯಾರ್ಥಿಗಳು…

Read More

ಪುತ್ತೂರು : ಶ್ರೀ ಆಂಜನೇಯ 55ರ ಸಂಭ್ರಮ ಇದರ ಅಂಗವಾಗಿ, ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠ ಕಲ್ಲಮೆ ಇಲ್ಲಿ ನಡೆಯಲಿರುವ ಶ್ರೀ ರಾಮಾಯಣ ದರ್ಶನಂ ತಾಳಮದ್ದಳೆ ಸಪ್ತಾಹದ ಪ್ರಯುಕ್ತ ದಿನಾಂಕ 26-08-2023ರಂದು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ವತಿಯಿಂದ ‘ಶ್ರೀರಾಮ ವನ ಗಮನ’ ಎಂಬ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀ ಲಕ್ಷ್ಮೀನಾರಾಯಣ ಭಟ್ ಬಟ್ಯಮೂಲೆ, ಶ್ರೀ ಗಿರೀಶ್ ಮುಳಿಯಾಲ, ಚಂಡೆ ಮದ್ದಳೆಗಳಲ್ಲಿ ಶ್ರೀ ಪದ್ಯಾಣ ಶಂಕರನಾರಾಯಣ ಭಟ್, ಶ್ರೀ ಮುರಳೀಧರ ಕಲ್ಲೂರಾಯ ಕುಂಜೂರುಪಂಜ, ಶ್ರೀ ಅಚ್ಯುತ ಪಾಂಗಣ್ಣಾಯ ಕೋಡಿಬೈಲು ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀ ಭಾಸ್ಕರ ಬಾರ್ಯ (ದಶರಥ), ಶ್ರೀ ಶ್ರೀಧರ್ ರಾವ್ ಕುಂಬ್ಳೆ (ಕೈಕೇಯಿ), ಶ್ರೀ ಪಕಳಕುಂಜ ಶ್ಯಾಮ್ ಭಟ್ (ಮಂಥರೆ), ಶ್ರೀ ದಿವಾಕರ ಆಚಾರ್ಯ ಗೇರುಕಟ್ಟೆ (ಶ್ರೀ ರಾಮ) ಮತ್ತು ಶ್ರೀ ದುಗ್ಗಪ್ಪ ನಡುಗಲ್ಲು (ಲಕ್ಷ್ಮಣ) ಸಹಕರಿಸಿದರು. ಶ್ರೀ ದೇವಳದ ವ್ಯವಸ್ಥಾಪಕರಾದ ಡಾ. ಸೀತಾರಾಮ ಭಟ್ ಕಲ್ಲಮೆ ದೀಪ ಪ್ರಜ್ವಲನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ…

Read More

ಮಂಗಳೂರು : ಸದ್ಗುರು ಸಂಗೀತ ಪಾಠಶಾಲಾ (ರಿ) ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಆಯೋಜಿಸಿರುವ ‘ಸಾಂಸ್ಕೃತಿಕ ವೈಭವ’ ಕಾರ್ಯಕ್ರಮವು ದಿನಾಂಕ 15-08-2023ರಂದು ಕರಂಗಲ್ಪಾಡಿಯ ಸುಬ್ರಹ್ಮಣ್ಯ ಸಭಾದಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ಸುಬ್ರಹ್ಮಣ್ಯ ಸಭಾ ಸದನ ಕರಂಗಲ್ಪಾಡಿ ಇದರ ಅಧ್ಯಕ್ಷರಾದ ಶ್ರೀ ಹರ್ಷ ಕುಮಾರ್ ಕೇದಿಗೆ ಅವರು ಉದ್ಘಾಟಿಸಿ ಮಾತನಾಡುತ್ತಾ “ಭಾರತೀಯ ಸನಾತನ ಸಂಸ್ಕೃತಿಯ ಎಲ್ಲಾ ಕಲೆಗಳಲ್ಲೂ ಎಲ್ಲರನ್ನೂ ರಮಿಸುವ ಕಲೆಯೆಂದರೆ ಸಂಗೀತ ಎಂದು ನುಡಿದರು. ಸಂಗೀತಕ್ಕೆ ವಿಶೇಷವಾದ ಶಕ್ತಿ ಇದೆ, ಕಲಿಯುಗದಲ್ಲಿ ಭಗವಂತನ ಸಾಕ್ಷಾತ್ಕಾರ ಪಡೆಯುವುದಕ್ಕೆ ಯೋಗ ತಪಸ್ಸು ಜ್ಞಾನ ಮತ್ತು ಭಕ್ತಿ ಇವೇ ಮೊದಲಾದ ಮಾರ್ಗಗಳಿದ್ದರೂ ನಾದ ರೂಪನಾಗಿರುವ ಪರಮಾತ್ಮನನ್ನು ನಾದ ರೂಪದಿಂದಲೇ ಒಲಿಸಿಕೊಳ್ಳಲು ಸುಲಭ ಸಾಧನವೇ ಸಂಗೀತ” ಎಂದು ಹೇಳಿದರು. ಕಲಾಶ್ರೀ ವಿದುಷಿ ಕಮಲ ಭಟ್, ವಿದುಷಿ ವಿನಯ ರಾವ್, ಮೃದಂಗ ವಿದ್ವಾಂಸ ಮನೋಹರ ರಾವ್, ಶರ್ಮಿಳಾ ರಾವ್, ಪೋಷಕರಾದ ವಿಶ್ವೇಶ್ವರ ಭಟ್, ಕೆ.ಎಂ.ಸಿ.ಯ ವೈದ್ಯರಾದ ಡಾ. ದೇವಿ ಪ್ರಸಾದ್, ಸಂಸ್ಕೃತ ಉಪನ್ಯಾಸಕ…

Read More

ಧರ್ಮಸ್ಥಳ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶಾಂತಿವನ ಟ್ರಸ್ಟ್, ಕರ್ನಾಟಕ ಸರ್ಕಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಇವರ ಸಹಯೋಗದಲ್ಲಿ 20ನೇ ವರ್ಷದ ರಾಜ್ಯಮಟ್ಟದ ಅಂಚೆ-ಕುಂಚ ಸ್ಪರ್ಧೆ ವಿಜೇತರಿಗೆ ಪುರಸ್ಕಾರ ಹಾಗೂ 29ನೇ ವರ್ಷದ ‘ಜ್ಞಾನಶರಧಿ’ ಮತ್ತು ‘ಜ್ಞಾನವಾರಿಧಿ’ 2023ನೇ ಸಾಲಿನ ನೈತಿಕ ಮೌಲ್ಯಾಧರಿತ ಪುಸ್ತಕಗಳ ಲೋಕಾರ್ಪಣೆ ಸಮಾರಂಭ ಪ್ರಯುಕ್ತ ‘ಕುಂಚ-ಗಾನ-ನೃತ್ಯ ವೈಭವ’ವು ದಿನಾಂಕ 19-08-2023ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಮಹೋತ್ಸವ ಸಭಾ ಭವನದಲ್ಲಿ ನಡೆಯಿತು. ಈ ಸಮಾರಂಭದಲ್ಲಿ ಕೃತಿ ಬಿಡುಗಡೆಗೊಳಿಸಿದ ಖ್ಯಾತ ವಾಗ್ಮಿ ಮೈಸೂರಿನ ಪ್ರೊ. ಕೃಷ್ಣೇ ಗೌಡ ಇವರು “ಜ್ಞಾನ ಸಂಪಾದನೆಗೆ ನಾನಾ ಮಾರ್ಗಗಳಿದ್ದು, ಕಲಿಯುವ ಮನಸ್ಸಿದ್ದಲ್ಲಿ ನಮ್ಮ ಸುತ್ತಲಿನ ಪ್ರಕೃತಿಯಿಂದಲೇ ಅಪಾರ, ಜ್ಞಾನ ಸಂಪಾದನೆ ಮಾಡಬಹುದು. ಪ್ರತಿಯೊಬ್ಬ ವ್ಯಕ್ತಿಯ ಸರ್ವತೋಮುಖ ಬೆಳವಣಿಗೆ, ಬೌದ್ಧಿಕ ವಿಕಸನವಾಗಬೇಕು, ವ್ಯಕ್ತಿಯ ಪರಿಪೂರ್ಣತೆಯೇ ಶಿಕ್ಷಣದ ಗುರಿ. ಉತ್ತಮ ಗುಣಮಟ್ಟದ ಶಿಕ್ಷಣ ಪಡೆಯುವ ಅವಕಾಶ ಇವತ್ತು ಎಲ್ಲರಿಗೂ ಇದೆ. ಶಿಕ್ಷಣ ಸಂಪಾದನೆಯ ಜತೆಯಲ್ಲಿ ಕೌಶಲ್ಯ ಮತ್ತು…

Read More

ಕುಂದಾಪುರ : ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ ಅವರ ಆಶಯದಂತೆ ಯಕ್ಷಶಿಕ್ಷಣ ಟ್ರಸ್ಟ್ ಆಶ್ರಯದಲ್ಲಿ ಹೆಸ್ಕುತ್ತೂರು ಸರಕಾರಿ ಪ್ರೌಢಶಾಲೆಯಲ್ಲಿ ದಿನಾಂಕ 23-08-2023ರಂದು ಯಕ್ಷಶಿಕ್ಷಣ ಉದ್ಘಾಟನೆಗೊಂಡಿತು. ಯಕ್ಷಶಿಕ್ಷಣ ಟ್ರಸ್ಟಿನ ಕಾರ್ಯದರ್ಶಿ ಶ್ರೀ ಮುರಲಿ ಕಡೆಕಾರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಉಡುಪಿ ಯಕ್ಷಗಾನ ಕೇಂದ್ರದಲ್ಲಿ ಎರಡು ವರ್ಷದಿಂದ ವಿದ್ಯಾರ್ಥಿಯಾಗಿದ್ದುಕೊಂಡು, ಗುರು ಬನ್ನಂಜೆ ಸಂಜೀವ ಸುವರ್ಣರಿಂದ ಯಕ್ಷಗಾನವನ್ನು ಅಭ್ಯಾಸ ಮಾಡಿದ ಅಬ್ದುಲ್ ರವೂಫ್ ಇವರು ಈ ಶಾಲೆಯ ಮುಖ್ಯೋಪಾಧ್ಯಾಯರಾಗಿರುವುದು ನಾವೆಲ್ಲ ಹೆಮ್ಮೆ ಪಡುವಂತ ವಿಚಾರವಾಗಿದೆ ಎಂದು ಶುಭಕೋರಿದರು. ಯಕ್ಷಗಾನ ಕಲಾರಂಗದ ಉಪಾಧ್ಯಕ್ಷ ಎಸ್.ವಿ. ಭಟ್, ಖ್ಯಾತ ಯಕ್ಷಗಾನ ಹಾಸ್ಯ ಕಲಾವಿದರಾದ ಹಳ್ಳಾಡಿ ಜಯರಾಮ ಶೆಟ್ಟಿ ಹಾಗೂ ಪಂಚಾಯತ್ ಸದಸ್ಯರಾದ ರಾಘವೇಂದ್ರ ಶೆಟ್ಟಿ ಅಭ್ಯಾಗತರಾಗಿ ಶುಭಕೋರಿದರು. ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಅಬ್ದುಲ್ ರವೂಫ್ ಎಲ್ಲರನ್ನು ಸ್ವಾಗತಿಸಿದರು. ಶಾಲಾ ಶಿಕ್ಷಕರಾದ ಶ್ರೀ ಉದಯ್ ಕುಮಾರ್ ಶೆಟ್ಟಿಯವರು ನಿರೂಪಿಸಿದ ಕಾರ್ಯಕ್ರಮದ ಕೊನೆಯಲ್ಲಿ ಶ್ರೀ ರಾಘವೇಂದ್ರ ಡಿ. ಧನ್ಯವಾದ ಸಮರ್ಪಿಸಿದರು. ಯಕ್ಷಗಾನ ಗುರುಗಳಾದ ಐರೋಡಿ ಶ್ರೀ ಮುಂಜುನಾಥ…

Read More

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಪ್ರೊ. ಜಿ.ವೆಂಕಟಸುಬ್ಬಯ್ಯನವರ 110ನೆಯ ಜನ್ಮ ದಿನವನ್ನು ದಿನಾಂಕ 23-08-2023ರಂದು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿ ಇವರು “ಪ್ರೊ.ಜಿ.ವೆಂಕಟಸುಬ್ಬಯ್ಯನವರಿಗೆ ಸಿಗಬೇಕಾದ ಗೌರವಗಳು ಯಾವುದೂ ಸಕಾಲಕ್ಕೆ ಸಿಗಲಿಲ್ಲ. ಅವರಿಗೆ 92ನೆಯ ವರ್ಷಕ್ಕೆ ನಾಡೋಜ, ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದಾಗ 98ವರ್ಷ, ಪಂಪ ಪ್ರಶಸ್ತಿ ಬಂದಾಗ 101ವರ್ಷ, ಪದ್ಮಶ್ರೀ ಬಂದಾಗ 104 ವರ್ಷ, ಕೇಂದ್ರ ಸರ್ಕಾರದ ಭಾಷಾ ಸಮ್ಮಾನ ಗೌರವ ಬಂದಾಗ 105ವರ್ಷ, ಜಿ.ವಿಯವರು ಇದರ ಕುರಿತು ಎಂದಿಗೂ ಆಕ್ಷೇಪ ವ್ಯಕ್ತಪಡಿಸದೆ ಇನ್ನೂ ಕನ್ನಡದ ಸೇವೆ ಮಾಡುವ ಅವಕಾಶಕ್ಕಾಗಿ ಹಾತೊರೆಯುತ್ತಿದ್ದ ಕನ್ನಡದ ಕಟ್ಟಾಳು. 1954ರಲ್ಲಿ ಮೊದಲು ಅವರು ಗೌರವ ಕಾರ್ಯದರ್ಶಿಗಳಾಗಿದ್ದು ಮತ್ತು 1964ರಲ್ಲಿ ಅಧ್ಯಕ್ಷರಾದರು. ಆಗ ಪರಿಷತ್ತು ಆರ್ಥಿಕ ಸಂಕಷ್ಟದಲ್ಲಿದ್ದಾಗ ಜಿದ್ದಿನಿಂದ ಓಡಾಡಿ ಹಿರಿಯರಿಂದ, ಕನ್ನಡ ಪ್ರೇಮಿಗಳಿಂದ ಅನುದಾನ ತಂದರು. ನಿಘಂಟು ತಜ್ಞರಾಗಿ ಹೆಸರು ಮಾಡಿದ ವೆಂಕಟಸುಬ್ಬಯ್ಯನವರು ಕನ್ನಡ ಸಾಹಿತ್ಯ ಪರಿಷತ್ತಿಗೂ ದೊಡ್ಡ ಪ್ರಮಾಣದ…

Read More

31.08.1968 ರಂದು ಗುರುರಾಜ ಆಚಾರ್ಯ ಹಾಗೂ ಇಂದಿರಾ ಇವರ 3 ಗಂಡು ಮಕ್ಕಳಲ್ಲಿ ನಡುವಿನವರಾಗಿ ಹರಿಹರದಲ್ಲಿ ಎಚ್ ವಿನಯ ಆಚಾರ್ಯ ಹೊಸಬೆಟ್ಟು ಅವರ ಜನನ. ಪಿಯುಸಿವರೆಗೆ ವಿದ್ಯಾಭ್ಯಾಸ. ಮಳೆಗಾಲದಲ್ಲಿ ಹರಿಹರ, ದಾವಣಗೆರೆ ಮುಂತಾದೆಡೆ ತಂದೆಯವರ ನೇತೃತ್ವದಲ್ಲಿ ನಡೆಯುತ್ತಿದ್ದ ಯಕ್ಷಗಾನಗಳನ್ನು ನೋಡುತ್ತಾ ಪುರಾಣದ ಬಗ್ಗೆ ಆಸಕ್ತಿ ಬೆಳೆಯಿತು. ಮುಂಡಾಜೆ ಸದಾಶಿವ ಶೆಟ್ಟಿಯವರು ಹೇಳುವಂತೆ 6 ತಿಂಗಳ ಮಗುವಾಗಿರುವಾಗವೇ ಅವರು ವಾಸುದೇವನಾಗಿ ಬುಟ್ಟಿಯಲ್ಲಿಟ್ಟುಕೊಂಡಿದ್ದರು. 1991ರಲ್ಲಿ ಊರಿಗೆ ಬಂದ ನಂತರ ಯಕ್ಷಗಾನದ ಆಸಕ್ತಿ ಹೆಚ್ಚಿತು. ಸಮಾನ ಮನಸ್ಕರು ಸೇರಿ ನಟಗಿರಿ ಯಕ್ಷಗಾನ ಮಂಡಳಿ ಎಂಬ ತಂಡ ಕಟ್ಟಿದ್ದು. ಎಂ ಶಂಕರನಾರಾಯಣ ಮೈರ್ಪಾಡಿ, ಗಿರೀಶ ನಾವಡರು ಇವರ ಯಕ್ಷಗಾನದ ಗುರುಗಳು. ಸುತ್ತಮುತ್ತಲೆಲ್ಲಾ ದೇವಸ್ಥಾನಗಳ ಜಾತ್ರೆ ಹಬ್ಬ ಮೊದಲಾದೆಡೆ ಸುಮಾರು ನೂರಕ್ಕೂ ಹೆಚ್ಚು ಯಕ್ಷಗಾನ ಮಾಡಿದರುವ ಅನುಭವ ವಿನಯ ಆಚಾರ್ಯ. ತಾಳಮದ್ದಳೆಯಲ್ಲಿ ಆಸಕ್ತಿ ಮೂಡಿ ಪ್ರತಿ ವರ್ಷ ಅಕ್ಟೋಬರ್ 1 ರಂದು ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಇಡೀ ರಾತ್ರಿಯ ತಾಳಮದ್ದಳೆಗಳ ಸಂಘಟನೆ 1997ರಿಂದ ಎಲ್ಲಾ ತಾಳಮದ್ದಳೆಗಳು ಯಶಸ್ವಿಯಾಗುವುದರೊಂದಿಗೆ…

Read More

ಮುಂಬಯಿ : ‘ಕರ್ನಾಟಕ ಸಂಘ ರತ್ನ’ ಪ್ರಶಸ್ತಿ ಪುರಸ್ಕೃತ ಅಭಿನಯ ಮಂಟಪ (ರಿ) ಮುಂಬಯಿ ಇದರ 41ನೇಯ ವಾರ್ಷಿಕೋತ್ಸವದ ಪ್ರಯುಕ್ತ ‘ನೃತ್ಯ ವೈಭವ, ಸನ್ಮಾನ ಮತ್ತು ನಾಟಕ’ ಕಾರ್ಯಕ್ರಮವು ದಿನಾಂಕ 09-09-2023ರ ಶನಿವಾರ ಸಂಜೆ ಸಾಂತಕ್ರೂಜ್ ಪೂರ್ವದ ಬಿಲ್ಲವ ಭವನದಲ್ಲಿ ನಡೆಯಲಿದೆ. ಇದೇ ಸಂದರ್ಭದಲ್ಲಿ ಮನರ೦ಜನೆಯ ಅಂಗವಾಗಿ ಅಭಿನಯ ಮ೦ಟಪದ ಸದಸ್ಯರಿಂದ ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ‘ನೃತ್ಯ ವೈಭವ’ ಹಾಗೂ ಅಭಿನಯ ಮಂಟಪದ ಸದಸ್ಯರಿಂದ ದಿ. ಯು.ಆರ್. ಚಂದರ್‌ ರಚನೆಯ ಹಾಗೂ ಶ್ರೀ ಕರುಣಾಕರ ಕೆ. ಕಾಪು ಇವರ ನಿರ್ದೇಶನದ ‘ಕಲ್ಕುಡ – ಕಲ್ಲುರ್ಟಿ’ ಚಾರಿತ್ರಿಕ ಜಾನಪದ ನಾಟಕದ ಪ್ರದರ್ಶನವಿದೆ. ಅಭಿನಯ ಮಂಟಪ (ರಿ.) ಮುಂಬಯಿ ಇದರ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ತಮಗೆಲ್ಲರಿಗೂ ಆದರದ ಸ್ವಾಗತ ಕೋರಿದ್ದಾರೆ.

Read More

ಮೈಸೂರು: ನಗರದ ರಂಗಭೂಮಿ ಕ್ಷೇತ್ರದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿರುವ ಅದಮ್ಯ ರಂಗ ಶಾಲೆಯು 30 ದಿನಗಳ ಅವಧಿಯ ರಂಗ ತರಬೇತಿ ಶಿಬಿರ ಆಯೋಜಿಸಿದ್ದು, ಹವ್ಯಾಸಿ ರಂಗಾಸಕ್ತರಿಂದ ಅರ್ಜಿ ಆಹ್ವಾನಿಸಿದೆ. ಕೆ.ಜಿ.ಕೊಪ್ಪಲಿನ ಹೊಸನ್ಯಾಯಾಲಯದ ಮುಂಭಾಗದ ನೇಗಿಲಯೋಗಿ ಮರುಳೇಶ್ವರ ಸೇವಾಭವನದಲ್ಲಿ ಸೆಪ್ಟೆಂಬರ್ 1ರಿಂದ ಅಕ್ಟೋಬರ್ 1ರವರೆಗೆ 30 ದಿನಗಳ ಕಾಲ ಪ್ರತಿದಿನ ಸಂಜೆ 6.30 ರಿಂದ ರಾತ್ರಿ 9ರವರೆಗೆ ಶಿಸ್ತುಬದ್ಧವಾಗಿ ಶಿಬಿರವು ನಡೆಯಲಿದೆ. 18 ರಿಂದ 60 ವಯೋಮಿತಿಯೊಳಗಿನವರು ಈ ಅಭಿನಯ ತರಬೇತಿ ಶಿಬಿರದಲ್ಲಿ ಭಾಗವಹಿಸಬಹುದಾಗಿದೆ. ಶಿಬಿರದ ಅವಧಿಯಲ್ಲಿ ನಾಟಕವೊಂದನ್ನು ಆಯ್ಕೆ ಮಾಡಿಕೊಂಡು, ಶಿಬಿರಾರ್ಥಿಗಳಿಂದಲೇ ಅಭಿನಯ ಮಾಡಿಸಿ ಸಮಾರೋಪದಲ್ಲಿ ಪ್ರದರ್ಶನ ಮಾಡಲಾಗುವುದು. ಶಿಬಿರ ಪೂರ್ಣಗೊಳಿಸಿದ ಎಲ್ಲರಿಗೂ ಅಧಿಕೃತ ಪ್ರಮಾಣ ಪತ್ರವನ್ನೂ ನೀಡಲಾಗುವುದು, ಅಭಿನಯ ಕಲಿಕೆಯಲ್ಲಿ ಆಸಕ್ತಿ ಇರುವವರು ಆಗಸ್ಟ್ 31ರೊಳಗೆ ರಂಗಶಾಲೆಯ ಕಾರ್ಯದರ್ಶಿಯಾದ ಚಂದ್ರು ಮಂಡ್ಯ ಅವರಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಗರಿಷ್ಠ 30 ಮಂದಿಗೆ ಮಾತ್ರ ಅವಕಾಶವಿರುತ್ತದೆ.  ಹೆಚ್ಚಿನ ಮಾಹಿತಿಗಾಗಿ ಮೊ. 8660103141, 7204034040

Read More

ಕಾಸರಗೋಡು : ಕಲಾಕುಂಚ ಗಡಿನಾಡು ಘಟಕ, ಕೇರಳ ಶಾಖೆಯ ಸಹಯೋಗದೊಂದಿಗೆ ಶ್ರೀ ಕ್ಷೇತ್ರ ಕೊಂಡವೂರು ಇಲ್ಲಿ ಶ್ರೀಮತಿ ಲಕ್ಷ್ಮೀ ವಿ ಭಟ್ ಇವರ ಭಕ್ತಿಮಂಜರಿ, ಸುಚರಿತರು, ಕಲರವ, ಭಾರತಾಂಬೆಗೆ ನಮನ ಮತ್ತು ಭಾವಸ್ಪರ್ಶ ಎಂಬ ಐದು ಕವನ ಸಂಕಲನಗಳು  ಶ್ರೀ ಕ್ಷೇತ್ರದ ಗಾಯತ್ರಿ ಮಂಟಪದಲ್ಲಿ ಲೋಕಾರ್ಪಣೆಗೊಂಡವು. ‘ಭಕ್ತಿ ಮಂಜರಿ’ ಕೃತಿ ಬಿಡುಗಡೆ ಮಾಡಿ ಶ್ರೀ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ಮಾಡಿದರು. ಈ ಸಂದರ್ಭದಲ್ಲಿ ಆಶಯ ನುಡಿಗಳನಾಡುತ್ತಾ ಕೃತಿಗಳ ಮುನ್ನುಡಿ, ಬೆನ್ನುಡಿ ಬರೆದು ಸಹಾಯ ಮಾಡಿದವರ ಹೆಸರುಗಳನ್ನು ಕವಯತ್ರಿ ಶ್ರೀಮತಿ ಲಕ್ಷ್ಮೀ ವಿ. ಭಟ್ ಸ್ಮರಿಸಿಕೊಂಡರು. ಶ್ರೀ ನಾರಾಯಣ ಮೂಡಿತ್ತಾಯ ‘ಸುಚರಿತರು’, ಶ್ರೀ ವಿ.ಬಿ.ಕುಳಮರ್ವ ‘ಕಲರವ’, ಶ್ರೀಮತಿ ಮೀನಾಕ್ಷಿ ರಾಮಚಂದ್ರನ್ ‘ಭಾರತಾಂಬೆಗೆ ನಮನ’, ಡಾ. ಸುರೇಶ ನೆಗಳಗುಳಿ ‘ಭಾವಸ್ಪರ್ಶ’ ಕವನ ಸಂಕಲನವನ್ನು ಲೋಕಾರ್ಪಣೆ ಮಾಡಿ ಕೃತಿಯ ಅವಲೋಕನ ಮಾಡಿದರು. ಈ ಎಲ್ಲಾ ಕೃತಿಗಳ ಮುದ್ರಕರಾದ ಶ್ರೀ ಪಿ.ವಿ. ಪ್ರದೀಪ್ ಕುಮಾರ್ ಶುಭ ಹಾರೈಸಿದರು. ಕುಮಾರಿ ಸುಪ್ರಭಾ ರಾವ್, ರಾಧಾಮಣಿ…

Read More