Subscribe to Updates
Get the latest creative news from FooBar about art, design and business.
Author: roovari
ಪುತ್ತೂರು : ಡಾ. ಶಿವರಾಮ ಕಾರಂತ ಅಧ್ಯಯನ ಕೇಂದ್ರ ವಿವೇಕಾನಂದ ಕಾಲೇಜು ಪುತ್ತೂರು ಇವರು ಕೊಡಮಾಡುವ ಶ್ರೀ ನಿರಂಜನ ಪ್ರಶಸ್ತಿ 2023 ಹಾಗೂ ಶ್ರೀ ಸಿದ್ಧಮೂಲೆ ಶಂಕರನಾರಾಯಣ ಭಟ್ಟರು ಸ್ಥಾಪಿಸಿ ವಿದ್ವಾಂಸರಿಗೆ ನೀಡುವ ಶ್ರೀ ಶಂಕರ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 09-05-2024ರಂದು ಪುತ್ತೂರು ವಿವೇಕಾನಂದ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಶ್ರೀ ನಿರಂಜನ ಪ್ರಶಸ್ತಿ 2023ರನ್ನು ಹಿರಿಯ ಸಾಹಿತಿಗಳಾದ ಪ್ರೊ. ಶ್ರೀ ವಿ. ಬಿ. ಅರ್ತಿಕಜೆಯವರಿಗೆ ಹಾಗೂ ಶ್ರೀ ಶಂಕರ ಸಾಹಿತ್ಯ ಪ್ರಶಸ್ತಿಯನ್ನು ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ಟ ಸಂಪ್ರತಿಷ್ಠಾನಕ್ಕೆ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯದ ಕುಲಪತಿ ಶ್ರೀ ನಿರಂಜನ ವಾನಳ್ಳಿ ಮತ್ತು ಬೆಟ್ಪಂಪಾಡಿ ಪದವಿ ಕಾಲೇಜಿನ ಪ್ರಾಚಾರ್ಯ ಶ್ರೀ ವರದರಾಜ ಚಂದ್ರಗಿರಿಯವರು ಅಭಿನಂದನಾ ಮಾತುಗಳನ್ನಾಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಡಾ. ಕೃಷ್ಣ ಭಟ್, ವಿವೇಕಾನಂದ ಪದವಿ ಮಹಾವಿದ್ಯಾಲಯದ ಅಧ್ಯಕ್ಷರಾದ ಡಾ. ಶ್ರೀಪತಿ ಕಲ್ಲೂರಾಯ, ಕಾರ್ಯದರ್ಶಿಗಳಾದ ಮುರಳಿ ಕೃಷ್ಣ…
ಪುತ್ತೂರು : ಹಿರಿಯ ಸಾಹಿತಿಗಳಾದ ದಿವಂಗತ ಡಾ. ಪಾಲ್ತಾಡಿ ರಾಮಕೃಷ್ಣ ಆಚಾರ್ ಅವರಿಗೆ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ ಶ್ರದ್ಧಾಂಜಲಿ ಸಭೆಯು ದಿನಾಂಕ 09-05-2024 ರಂದು ಪುತ್ತೂರಿನ ಅನುರಾಗ ವಠಾರದಲ್ಲಿ ನಡೆಯಿತು. ನಿವೃತ್ತ ಶಿಕ್ಷಕರಾದ ಶ್ರೀಧರ್ ರೈ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳಾದ ಬಿ. ಪುರಂದರ ಭಟ್, ಡಾ. ವರದರಾಜ ಚಂದ್ರಗಿರಿ, ನಾರಾಯಣ ರೈ ಕುಕ್ಕುವಳ್ಳಿ, ವಿಜಯಕುಮಾರ್, ಬಿ. ವಿ. ಸೂರ್ಯನಾರಾಯಣ, ಬಿ. ಐತಪ್ಪ ನಾಯ್ಕ ಮುಂತಾದವರು ದಿ.ಪಾಲ್ತಾಡಿ ರಾಮಕೃಷ್ಣ ಆಚಾರ್ ಅವರೊಂದಿಗಿನ ಒಡನಾಟದ ಅನುಭವವನ್ನು ಹಂಚಿ ನುಡಿ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಪ್ರೊ. ದತ್ತಾತ್ರೇಯ ರಾವ್ ಇವರು ರಾಮಕೃಷ್ಣ ಆಚಾರ್ ಅವರು ರಚಿಸಿದ ತುಳು ಕವಿತೆಯೊಂದನ್ನು ಹಾಡಿ ವಿಶೇಷವಾಗಿ ನುಡಿ ನಮನ ಸಲ್ಲಿಸಿದರು. ಶ್ರೀಮತಿ ಶಾಂತ ಪುತ್ತೂರು, ರಂಗನಾಥ್ ರಾವ್, ಸಂತೋಷ್ ಕುಮಾರ್, ಸೂರ್ಯ ನಾರಾಯಣ ಶರ್ಮಾ, ಲೋಕೇಶ್ ಮುಂತಾದವರು ಉಪಸ್ಥಿತರಿದ್ದರು. ಕ.ಸಾ.ಪ ತಾಲೂಕು ಘಟಕದ ಅಧ್ಯಕ್ಷರಾದ ಪುತ್ತೂರು ಉಮೇಶ್…
ಗೋವಿಂದ ದಾಸ ಕಾಲೇಜಿನ ಗ್ರಂಥಾಲಯ ವಿಭಾಗವು, ಆಂತರಿಕ ಗುಣಮಟ್ಟ ಖಾತರಿ ಕೋಶದ ಸಹಭಾಗಿತ್ವದಲ್ಲಿ ನಡೆಸುತ್ತಿರುವ ಪುಸ್ತಕ ಪ್ರೀತಿ ಪರಿಚಯ ಸರಣಿ ಕಾರ್ಯಕ್ರಮದಲ್ಲಿ ತೃತೀಯ ಬಿ. ಸಿ. ಎ. ವಿದ್ಯಾರ್ಥಿನಿ ದಿವ್ಯಶ್ರೀ ಕೆ. ಎನ್. ಭಟ್ ಇವರು ಸಪ್ನ ಬುಕ್ ಹೌಸ್ ಬೆಂಗಳೂರು 2002ರಲ್ಲಿ ಮುದ್ರಿಸಿದ ಟಿ. ಆರ್. ಅನಂತರಾಮು ಇವರ ‘ಶಕ್ತಿ ಸಾರಥಿ ರಾಷ್ಟ್ರಪತಿ ಅಬ್ದುಲ್ ಕಲಾಂ’ ಎಂಬ ಪುಸ್ತಕವನ್ನು ಪರಿಚಯಿಸಿದರು. 120 ಪುಟಗಳ ಈ ಪುಸ್ತಕವು ಹದಿನಾಲ್ಕು ಲೇಖನಗಳನ್ನು ಒಳಗೊಂಡಿದೆ. ಈ ಕೃತಿಯಲ್ಲಿ ಬಾನಾಡಿಗಳಂತೆ ಬಾನಿನಲ್ಲಿ ಹಾರಬೇಕೆಂದು ಬಯಸಿದ ಹುಡುಗ ಮುಂದೆ ತಂತ್ರಜ್ಞಾನದಿಂದ ನಮ್ಮ ಆಕಾಶವನ್ನು ಆಳಿದ ಕಥೆ, ನಮ್ಮ ಪ್ರಜಾಪ್ರಭುತ್ವದ ರಥಕ್ಕೇ ಸಾರಥಿಯಾದ ಕಥೆ, ಸೋಲನ್ನು ಅರಗಿಸಿಕೊಂಡು ತಮ್ಮ ಭವಿಷ್ಯವನ್ನು ರೂಪಿಸಿಕೊಂಡ ಮಹಾನ್ ವ್ಯಕ್ತಿಯ ಜೀವನ ಚಿತ್ರಣ ಸುಂದರವಾಗಿ ಮೂಡಿಬಂದಿವೆ ಎಂದರು. ಅಬ್ದುಲ್ ಕಲಾಂರವರು ತಮಿಳುನಾಡಿನ ರಾಮೇಶ್ವರಂನಲ್ಲಿ, 15-10-1937ರಂದು ಜನಿಸಿದರು. ತಂದೆ ಜೈನುಲಾಬ್ದಿನ್ ಮರಕಯಾರ್, ತಾಯಿ ಆಶಿಯಮ್ಮ. ಕಲಾಂ ಏಳು ಮಕ್ಕಳಲ್ಲಿ ಕೊನೆಯವರು. ತಂದೆ ದೋಣಿಗಳ ಮಾಲೀಕರಷ್ಟೇ ಅಲ್ಲ,…
ನಿಡ್ಲೆ : ಸ್ಪೂರ್ತಿದಾಯಕ ಮತ್ತು ಕಲಿಕೆಗೆ ಅವಕಾಶ ಮಾಡಿಕೊಡುವ ಕರುಂಬಿತ್ತಿಲ್ ಶಿಬಿರವು ದಿನಾಂಕ 15-05-2024ರಿಂದ 19-05-2024ರವರೆಗೆ ಬೆಳ್ತಂಗಡಿ ತಾಲೂಕಿನ ನಿಡ್ಲೆಯಲ್ಲಿರುವ ಕರುಂಬಿತ್ತಿಲ್ ಮನೆಯಲ್ಲಿ ನಡೆಯಲಿದೆ. ದಿನಾಂಕ 15-05-2024ರಂದು ಬೆಳಗ್ಗೆ 9-30ಕ್ಕೆ ಶ್ರೀ ಡಿ.ಬಿ. ಪ್ರಕಾಶ್ ದೇವಾಡಿಗ, ಶ್ರೀ ಧರ್ಮಸ್ಥಳ ಗೋಪಾಲ ದೇವಾಡಿಗ ಮತ್ತು ಶ್ರೀ ನಿತ್ಯಾನಂದ ದೇವಾಡಿಗ ಇವರಿಂದ ಮಂಗಳ ವಾದ್ಯ ಪ್ರಸ್ತುತಿಗೊಳ್ಳಲಿದೆ. 10-30 ಗಂಟೆಗೆ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀ ಪದಾಂಗಳವರು ಇವರಿಂದ ಉದ್ಘಾಟನೆ ನಡೆಯಲಿದೆ. ವಿದ್ವಾನ್ ಉದಯಕುಮಾರ್ ಸರಳತಾಯ ಇವರಿಂದ ಪ್ರವಚನ ಮತ್ತು ಅಮೇರಿಕಾದ ಮೃದಂಗ ವಾದಕರಾದ ಡಾ. ರಮೇಶ್ ಶ್ರೀನಿವಾಸನ್ ಇವರಿಂದ ವಿಶೇಷ ಸಂಗೀತ ಮೇಳ ಜರುಗಲಿದೆ. ಸಂಜೆ ಗಂಟೆ 4-00ರಿಂದ ಶ್ರೀಮತಿ ಇಂದಿರಾ ಕಡಂಬಿಯವರಿಂದ ಪ್ರಸ್ತುತಗೊಳ್ಳಲಿರುವ ಭರತನಾಟ್ಯ ಪ್ರದರ್ಶನಕ್ಕೆ ಹಾಡುಗಾರಿಕೆಯಲ್ಲಿ ಶ್ರೀ ಟಿ.ವಿ. ರಾಮ್ ಪ್ರಸಾದ್, ಶ್ರೀ ವಿಠಲ್ ರಂಗನ್ ಮತ್ತು ಶ್ರೀ ಎಂ.ಎಸ್. ವರದನ್ ಮತ್ತು ಶ್ರೀ ಪಯ್ಯನೂರ್ ಗೋವಿಂದಪ್ರಸಾದ್ ಸಹಕರಿಸಲಿದ್ದಾರೆ. 7-00 ಗಂಟೆಗೆ ಶ್ರೀ ವಿಷ್ಣು ಆರ್. ಮತ್ತು ತಂಡದವರಿಂದ ನವತಾರ್…
ಕಾಸರಗೋಡು : ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ 110ನೇ ಸಂಸ್ಥಾಪನ ದಿನಾಚರಣೆಯು ಕಾಸರಗೋಡಿನಲ್ಲಿರುವ ಸಾಹಿತ್ಯ ಪರಿಷತ್ತು ಕಚೇರಿಯಲ್ಲಿ ದಿನಾಂಕ 05-05-2024ರಂದು ನಡೆಯಿತು. ಹಿರಿಯ ಸಾಹಿತಿ ವೈ. ಸತ್ಯನಾರಾಯಣ ಕಾಸರಗೋಡು ಇವರು ಸಂಸ್ಥಾಪನ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ “ಕನ್ನಡಿಗರನ್ನು ಬೆಸೆಯುವಲ್ಲಿ ಕನ್ನಡವನ್ನು ಬೆಳೆಸುವಲ್ಲಿ ಸಾಹಿತ್ಯ ಪರಿಷತ್ತಿನ ಕೊಡುಗೆ ಅಪಾರವಾದುದು” ಎಂದು ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸಿದರು. ಮೀಯಪದವು ಶ್ರೀ ವಿದ್ಯಾವರ್ಧಕ ಹೈಯರ್ ಸೆಕಂಡರಿ ಶಾಲೆಯ ಮುಖ್ಯ ಶಿಕ್ಷಕ ರಾಜಾರಾಮ ರಾವ್ ಇವರು ‘ಜನಸಾಮಾನ್ಯರತ್ತ ಕನ್ನಡ ಸಾಹಿತ್ಯ ಪರಿಷತ್ತು’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಹುಟ್ಟು ಬೆಳೆದು ಬಂದ ದಾರಿ, ಜನಸಾಮಾನ್ಯರನ್ನು ತನ್ನತ್ತ ಸೆಳೆದ ಬಗೆಯನ್ನು ವಿವರಿಸಿ ಕನ್ನಡ ಭಾಷೆ, ಸಂಸ್ಕೃತಿಯ ಬೆಳವಣಿಗೆಯಲ್ಲಿ ಪರಿಷತ್ ವಹಿಸಿದ ಪಾತ್ರ ಮಹತ್ತರವಾದುದು ಎಂದು ಅವರು ಹೇಳಿದರು. ಮೀಯಪದವು ಹೈಯರ್…
ಮೈಸೂರು : ನಟನ ರಂಗಶಾಲೆ ವತಿಯಿಂದ ಒಂದು ವರ್ಷದ ಅಭಿನಯ ಮತ್ತು ರಂಗ ತರಬೇತಿಯ ‘ರಂಗಭೂಮಿ ಡಿಪ್ಲೊಮಾ 2024-25’ ತರಗತಿಯು ಪ್ರತಿದಿನ ಸಂಜೆ ಗಂಟೆ 5-30ರಿಂದ ರಾತ್ರಿ ಗಂಟೆ 9-00ರವರೆಗೆ ನಡೆಯಲಿದೆ. 16ರಿಂದ 30 ವರ್ಷ ವಯೋಮಿತಿಯ ಅರ್ಹ ಅಭ್ಯರ್ಥಿಗಳು ನಟನ ರಂಗಶಾಲೆಯ ಕಛೇರಿಯಲ್ಲಿ ಅಥವಾ ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಅರ್ಜಿಯನ್ನು ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ನಿಗದಿತ ಅರ್ಜಿ ಶುಲ್ಕದೊಂದಿಗೆ ನೇರವಾಗಿ ಅಥವಾ ಅಂಚೆಯ ಮುಖಾಂತರ ಕಛೇರಿಗೆ ತಲುಪಿಸತಕ್ಕದ್ದು. ಆಯ್ಕೆ ಪ್ರಕ್ರಿಯೆಯು ನೇರ ಸಂದರ್ಶನದ ಮೂಲಕ ನಡೆಯಲಿದ್ದು, ಅಭ್ಯರ್ಥಿಗಳು ಸಂದರ್ಶನದಲ್ಲಿ ಕಡ್ಡಾಯವಾಗಿ ಭಾಗವಹಿಸತಕ್ಕದ್ದು. ಪ್ರವೇಶ ಪ್ರಕ್ರಿಯೆ ಮತ್ತು ಸಂದರ್ಶನ (ಆಡಿಷನ್)ವು ನಟನ ರಂಗಶಾಲೆಯಲ್ಲಿ ದಿನಾಂಕ 19-05-2024ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 01ರವರೆಗೆ ನಡೆಯಲಿದೆ. ವೆಬ್‌ಸೈಟ್ : www.natanamysuru.org ವಿಳಾಸ: ನಟನ ರಂಗಶಾಲೆ, ರಾಮಕೃಷ್ಣ ನಗರ ‘ಕೆ’ ಬ್ಲಾಕ್, ಮೈಸೂರು -570022 ಪ್ರವೇಶ ಶುಲ್ಕ ಮತ್ತು ಇತರ ಮಾಹಿತಿಗಳಿಗಾಗಿ ಸಂಪರ್ಕಿಸಿ : 7259537777, 9480468327
ಐವತ್ತರ ದಶಕದಲ್ಲಿ ಕನ್ನಡ ನವೋದಯ ಕಾವ್ಯವು ತನ್ನ ಸತ್ವವನ್ನು ಬಹುಮಟ್ಟಿಗೆ ಕಳೆದುಕೊಂಡಿದ್ದು ಕಾವ್ಯದಲ್ಲಿ ಏಕತಾನತೆ ಕಂಡುಬರತೊಡಗಿತ್ತು. ನಿಸರ್ಗ ಸೌಂದರ್ಯ, ಆದರ್ಶ ಪ್ರೇಮ, ದೇಶಭಕ್ತಿ ಮೊದಲಾದ ಆಶಯಗಳು ಬೇಂದ್ರೆ, ಕುವೆಂಪು, ಪು.ತಿ.ನ. ಇವರೆಲ್ಲರ ಹಾದಿಯಲ್ಲೇ ಪುನರುಕ್ತವಾಗುತ್ತಿದ್ದವು. ಕಾವ್ಯವು ತನ್ನ ಸಿದ್ಧ ಭಾಷೆಯಲ್ಲಿ ಆರಾಧನೆ-ಸಮರ್ಪಣ ಭಾವವನ್ನು ಬಿಟ್ಟು ಬೇರೆ ಯಾವ ಅನುಭವದ ವ್ಯಾಖ್ಯಾನಕ್ಕೂ ಎಡೆಗೊಡುತ್ತಿರಲಿಲ್ಲ. ಇಂಥ ಸಂದರ್ಭದಲ್ಲಿ ಗೋಪಾಲಕೃಷ್ಣ ಅಡಿಗರು ಹೊಸ ಕಾವ್ಯಭಾಷೆಯ ಮೂಲಕ ಹೊಸ ಅನುಭವ, ಭಾವನೆಗಳನ್ನು ವ್ಯಕ್ತಪಡಿಸತೊಡಗಿದರು. ನವೋದಯ ಕಾವ್ಯಕ್ಕೆ ಪ್ರತಿಕ್ರಿಯೆಯಾಗಿ ಬಂದ ನವ್ಯ ಕಾವ್ಯವು ಕ್ರಮೇಣ ಕನ್ನಡ ನಾಡಿನಾದ್ಯಂತ ಹಬ್ಬಿತು. ಕೇರಳದ ಭಾಗವಾಗಿರುವ ಕಾಸರಗೋಡಿನಲ್ಲಿ ನವ್ಯ ಸಾಹಿತ್ಯವನ್ನು ಕಟ್ಟಿ ಬೆಳೆಸುವ ಉದ್ದೇಶದಿಂದ ಕಾವ್ಯ ರಚನೆಯನ್ನು ಮಾಡಿದವರ ಪೈಕಿ ಎಂ. ಗಂಗಾಧರ ಭಟ್ಟರೂ ಒಬ್ಬರು. ಅವರ ‘ನೆರಳು’ (1967) ಸಂಕಲನದಲ್ಲಿ ಎಲ್ಲ ಉದಯೋನ್ಮುಖ ಕವಿಗಳಲ್ಲಿರುವಂತೆ ನೋವು, ಹತಾಶೆ, ಹಟ ಮತ್ತು ಪ್ರತಿಭಟನೆಗಳಿವೆ. ಕಾವ್ಯದ ವಿನ್ಯಾಸದಲ್ಲಿ ಭಿನ್ನತೆಯನ್ನು ತರಬಯಸುವ ತುಡಿತವಿದೆ. ನವ್ಯ ಸಾಹಿತ್ಯವನ್ನು ಪ್ರಭಾವಿಸಿದ ಭ್ರಮ ನಿರಸನ, ಯಾಂತ್ರಿಕ ಜೀವನ, ಮೌಲ್ಯಗಳ ಅಳಿವು,…
ಬೆಂಗಳೂರು : ರಂಗಮಂಡಲ (ರಿ.) ಬೆಂಗಳೂರು ಮತ್ತು ಸಿವಗಂಗ ಟ್ರಸ್ಟ್ (ರಿ.) ಇದರ ವತಿಯಿಂದ ಹಮ್ಮಿಕೊಂಡಿದ್ದ ‘ಬಣ್ಣದ ಬೇಸಿಗೆ’ ಮಕ್ಕಳ ರಂಗ ಶಿಬಿರದ ಸಮಾರೋಪ ಸಮಾರಂಭವು ದಿನಾಂಕ 12-05-2024ರಂದು ಸಂಜೆ 6-00 ಗಂಟೆಗೆ ಸಿವಗಂಗ ರಂಗಮಂದಿರದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಬೆಂಗಳೂರಿನ ಬಿ.ಎಂ.ಶ್ರೀ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಬೈರಮಂಗಲ ರಾಮೇಗೌಡ, ನಮ್ಮ ಕನ್ನಡಿಗರ ವಿಜಯಸೇನೆ ಇದರ ಅಧ್ಯಕ್ಷರಾದ ಶ್ರೀ ವಿಜಯಕುಮಾರ್ ಎಸ್., ಸರ್ ಎಂ. ವಿ. ಬಡಾವಣೆಯ ಅಧ್ಯಕ್ಷರಾದ ಶ್ರೀ ರಮೇಶ್ ಎನ್. ಮತ್ತು ಚಲನಚಿತ್ರ ಕಲಾವಿದ ಹಾಗೂ ಸಂಗೀತ ನಿರ್ದೇಶಕರಾದ ಶ್ರೀ ಪ್ರಶಾಂತ ಸಿದ್ಧಿಯವರು ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ನಿರ್ಮಲ ನಾದನ್ ಅವರು ನಿರ್ದೇಶನದಲ್ಲಿ ರಾಷ್ಟ್ರಕವಿ ಕುವೆಂಪು ವಿರಚಿತ ‘ನನ್ನ ಗೋಪಾಲ’ ಮಕ್ಕಳ ನಾಟಕದ ಪ್ರದರ್ಶನ ನಡೆಯಲಿದೆ. ಈ ನಾಟಕದ ರಂಗ ವಿನ್ಯಾಸ ಭೀಮೇಶ್ ಕೆ. ಮತ್ತು ಕಲಾವಿನ್ಯಾಸ ಮಧು ಆರ್ಯ ಇವರು ಮಾಡಿದ್ದು, ಸಂಗೀತ ನಿರ್ದೇಶನ ಪ್ರಶಾಂತ್ ಸಿದ್ಧಿ ಮತ್ತು ಪ್ರಸಾದನದಲ್ಲಿ ಎಸ್. ಮೋಹನ್ ಕುಮಾರ್ ಸಹಕರಿಸಲಿದ್ದಾರೆ.
ಕಾಸರಗೋಡು : ಬೇಕಲ ಗೋಕುಲಂ ಗೋಶಾಲೆ ಪರಂಪರಾ ವಿದ್ಯಾಪೀಠದಲ್ಲಿ ಒಂಭತ್ತು ದಿನಗಳ ನೃತ್ಯೋತ್ಸವ ‘ವೈಶಾಖ ನಟನಂ 24’ ಕಾರ್ಯಕ್ರಮವು ದಿನಾಂಕ 08-05-2024ರಂದು ಪ್ರಾರಂಭಗೊಂಡಿತು. ಈ ಕಾರ್ಯಕ್ರಮವನ್ನು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಪ್ರಧಾನ ಅರ್ಚಕರಾದ ಸುಬ್ರಹ್ಮಣ್ಯ ಅಡಿಗ ಇವರು ದೀಪ ಬೆಳಗಿಸಿ ಚಾಲನೆಯನ್ನು ನೀಡಿ ಮಾತನಾಡುತ್ತಾ “ಭಾರತೀಯ ಕಲಾಪ್ರಕಾರಗಳು ಸಂಸ್ಕೃತಿಯ ಪ್ರತೀಕವಾಗಿದೆ. ಸಂಗೀತ, ನೃತ್ಯ ಮೊದಲಾದ ವಿಶಿಷ್ಟ ಕಲೆಗಳಿಗೆ ಪ್ರೋತ್ಸಾಹವನ್ನು ನೀಡುವ ನಿಟ್ಟಿನಲ್ಲಿ ಗೋಕುಲಂ ಗೋಶಾಲೆಯ ನಿರಂತರ ಪ್ರಯತ್ನ ಶ್ಲಾಘನೀಯ. ಸಂಗೀತ, ನೃತ್ಯ, ಯಕ್ಷಗಾನ, ಭಜನೆ ಮೊದಲಾದವುಗಳಲ್ಲಿ ಮಕ್ಕಳನ್ನು ತೊಡಗಿಸಿಕೊಂಡಾಗ ಅದು ಮುಂದಿನ ತಲೆಮಾರಿಗೆ ವರ್ಗಾವಣೆಯಾಗುತ್ತದೆ. ಇಂತಹ ಕಲಾಪ್ರಕಾರಗಳನ್ನು ಉಳಿಸಿಕೊಳ್ಳುವಲ್ಲಿ ಹಿರಿಯರು ಮುತುವರ್ಜಿ ವಹಿಸಬೇಕು” ಎಂದು ಅಭಿಪ್ರಾಯಪಟ್ಟರು. ಗೋಶಾಲೆಯ ಪ್ರಧಾನರಾದ ವಿಷ್ಣುಪ್ರಸಾದ ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಹಾಗೂ ಪೂರಕಳಿ ಅಕಾಡೆಮಿ ಅಧ್ಯಕ್ಷ ಕೆ. ಕುಂಞರಾಮನ್, ಸಂಗೀತಗಾರ ಟಿ.ಪಿ. ಶ್ರೀನಿವಾಸನ್, ಮೋರ್ಸಿಂಗ್ ವಾದಕ ಪಯ್ಯನ್ನೂರು ಗೋವಿಂದ ಪ್ರಸಾದ್, ಪಲ್ಲವ ನಾರಾಯಣನ್ ಶುಭಹಾರೈಸಿದರು. ವಿನೋದ್ ಕೃಷ್ಣನ್ ಸ್ವಾಗತಿಸಿ, ಡಾ. ನಾಗರತ್ನ ವಂದಿಸಿದರು.…
ಅಜೆಕಾರು : ಮುಂಬೈಯ ಯಕ್ಷಗುರು ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರು ತಮ್ಮ ಹುಟ್ಟೂರು ಅಜೆಕಾರಿನ ಕಲ್ಕುಡಮಾರ್ ಎಂಬಲ್ಲಿ ನೂತನವಾಗಿ ಕಟ್ಟಿಸಿದ ‘ಶ್ರೀ ಬಾಲಾಜಿ’ ಬಾಲಾಶಯ ನಿಲಯದ ಗೃಹಪ್ರವೇಶದ ಪ್ರಯುಕ್ತ ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯ ಸೇವಾ ಬಯಲಾಟ ಹಾಗೂ ಕಲಾವಿದರರಿಗೆ ಸನ್ಮಾನ ಕಾರ್ಯಕ್ರಮವು ದಿನಾಂಕ 03-05-2024 ರಂದು ಅಜೆಕಾರಿನ ಕಲ್ಕುಡಮಾರಿನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಲು ಆಗಮಿಸಿದ ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ ಶ್ರೀಮದ್ ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದಂಗಳವರು ಮಾತನಾಡಿ “ಕರಾವಳಿ ಭಾಗದ ಪ್ರಮುಖ ಧಾರ್ಮಿಕ ಮತ್ತು ಸಾಂಸ್ಕೃತಿಕ ಸ್ವರೂಪದ ಏಕೈಕ ಕಲೆ ಯಕ್ಷಗಾನ. ಪುರಾಣದ ಸಂದೇಶಗಳನ್ನು ಸರಳ ರೂಪದಲ್ಲಿ ಜನಮಾನಸಕ್ಕೆ ಮುಟ್ಟಿಸುವ ಶ್ರೇಷ್ಠ ಕಾರ್ಯ ಯಕ್ಷಗಾನದಿಂದ ಆಗುತ್ತಿದೆ. ಅದೇ ರೀತಿ ತಮ್ಮ ಬದುಕಿನ ಅಶೋತ್ತರಗಳು ಈಡೇರಿದ ಸಂದರ್ಭದಲ್ಲಿ ಹರಕೆ ಬಯಲಾಟಗಳನ್ನು ಆಡಿಸುವ ಸಂಪ್ರದಾಯವೂ ಇಲ್ಲಿ ಬೆಳೆದು ಬಂದಿದೆ. ಮುಖ್ಯ ಅಭ್ಯಾಗತರಾಗಿ ಆಗಮಿಸಿದ ಕಟೀಲು ಕ್ಷೇತ್ರದ ಆನುವಂಶಿಕ ಅರ್ಚಕ ವೇದಮೂರ್ತಿ ಅನಂತಪದ್ಮನಾಭ ಆಸ್ರಣ್ಣರು…