Subscribe to Updates
Get the latest creative news from FooBar about art, design and business.
Author: roovari
ಮಡಿಕೇರಿ : ವಿಶ್ವ ಜಾನಪದ ದಿನದ ಅಂಗವಾಗಿ ಆನ್ಲೈನ್ ಜಾನಪದ ಕಥಾಸ್ಪರ್ಧೆಗೆ ಆಹ್ವಾನ ನೀಡಲಾಗಿದೆ. ಭಾಗವಹಿಸುವವರು ಸೆಪ್ಟೆಂಬರ್ 5ರ ಒಳಗೆ ಕೊಡಗಿನ ಐತಿಹಾಸಿಕ ಜಾನಪದ ಕಥೆಗಳನ್ನು, 5 ನಿಮಿಷ ಮೀರದಂತೆ ವಿಡಿಯೋ ಮಾಡಿ, ಈ 9448048875, 9448614999 ಮೊಬೈಲ್ ಸಂಖ್ಯೆಗೆ ಕಳುಹಿಸಿಕೊಡುವಂತೆ, ಕೊಡಗು ಜಿಲ್ಲಾ ಜಾನಪದ ಪರಿಷತ್ ಘಟಕದ ಅಧ್ಯಕ್ಷ ಬಿ.ಜಿ. ಅನಂತಶಯನ ಹೇಳಿದ್ದಾರೆ. ಪ್ರಥಮ ಬಹುಮಾನವಾಗಿ ನಗದು ರೂ.750/-, ದ್ವಿತೀಯ ರೂ.500/- ಹಾಗೂ ತೃತೀಯ ರೂ.250/- ನೀಡಲಾಗುತ್ತದೆ. ಅಂಕ ನೀಡುವಾಗ ನಿಗದಿತ ಸಮಯ, ಕಥೆ, ಪ್ರಸ್ತುತಿ ಮತ್ತು ಭಾಷಾ ಸ್ಪಷ್ಟತೆಯನ್ನು ಪರಿಗಣಿಸಲಾಗುತ್ತದೆ.
ಕಾಸರಗೋಡು : ರಂಗಚಿನ್ನಾರಿ ಕಾಸರಗೋಡು (ರಿ) ಇದರ ಮಹಿಳಾ ಘಟಕ ‘ನಾರಿಚಿನ್ನಾರಿ’ಯ ಕಾರ್ಯಕ್ರಮ ‘ಓಣಂ ಸಂಧ್ಯಾ’ವು ಕಾಸರಗೋಡಿನ ‘ಪದ್ಮಗಿರಿ ಕಲಾ ಕುಟೀರ’ದಲ್ಲಿ ದಿನಾಂಕ 26-08-2023ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಸಾಹಿತಿ, ಉಡುಪಿಯ ಎಂಜಿಎಂ ಕಾಲೇಜಿನ ಉಪನ್ಯಾಸಕಿ ಕಾತ್ಯಾಯಿನಿ ಕುಂಜಿಬೆಟ್ಟು ಅವರ ಐದು ಕೃತಿಗಳು ಅನಾವರಣಗೊಂಡವು. ‘ಓಣಂ ಸಂಧ್ಯಾ’ ಕಾರ್ಯಕ್ರಮದ ಉದ್ಘಾಟನೆಯನ್ನು ಕೇಂದ್ರೀಯ ವಿಶ್ವವಿದ್ಯಾಲಯ ಕಾಸರಗೋಡು ಸಹಾಯಕ ಪ್ರಾಧ್ಯಾಪಕರಾದ ಡಾ. ಲಕ್ಷ್ಮೀ ಇವರು ನೆರವೇರಿಸಿದರು. ಸಭಾಧ್ಯಕ್ಷತೆಯನ್ನು ಲೆಕ್ಕ ಪರಿಶೋಧಕರು ಹಾಗೂ ನಾರಿ ಚಿನ್ನಾರಿಯ ಗೌರವಾಧ್ಯಕ್ಷರಾದ ತಾರಾ ಜಗದೀಶ್ ಅವರು ವಹಿಸಿದ್ದರು. ರಂಗ ಚಿನ್ನಾರಿ ಇದರ ಮುಖ್ಯಸ್ಥ ಕಲಾವಿದ ಕಾಸರಗೋಡು ಚಿನ್ನಾ ಅವರು ಆಶಯದ ನುಡಿಗಳನ್ನು ನುಡಿದರು . ಇದೇ ಸಂದರ್ಭದಲ್ಲಿ ಏಕತಾರಿ ಸಂಚಾರಿ (ಕವನ ಸಂಕಲನ), ಕೊಕ್ಕೊ ಕೋಕೋ (ಮಕ್ಕಳ ನಾಟಕ), ಶಿವರಾಮ ಕಾರಂತರ ಕನ್ನಡ ಪ್ರಜ್ಞೆ (ಸಂಪಾದಿತ), ಕನಕದಾಸೆರ್ನ ರಾಮಧಾನ್ಯ ಚರಿತೆ (ಅನುವಾದ) ಮತ್ತು ಮೊಗೇರಿ ಗೋಪಾಲಕೃಷ್ಣ ಅಡಿಗ (ವಾಚಿಕೆ) ಈ ಐದು ಕೃತಿಗಳನ್ನು ಗಡಿನಾಡಿನ ಮಹತ್ವದ ಮಹಿಳಾ ಬರಹಗಾರರಾದ ವಿಜಯಲಕ್ಷ್ಮೀ…
ಸುಳ್ಯ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ವತಿಯಿಂದ ಯಕ್ಷಧ್ರುವ -ಯಕ್ಷಶಿಕ್ಷಣ ನಾಟ್ಯ ತರಬೇತಿ ಶಿಕ್ಷಣ ಅಭಿಯಾನದ ಉಚಿತ ಯಕ್ಷಗಾನ ತರಬೇತಿ ಉದ್ಘಾಟನಾ ಕಾರ್ಯಕ್ರಮವು ಪಂಜದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ದಿನಾಂಕ 16-08-2023ರಂದು ನಡೆಯಿತು. ಸುಳ್ಯದ ಶಾಸಕಿ ಭಾಗೀರಥಿ ಮುರುಳ್ಯ ಅವರು ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ “ನಮ್ಮಲ್ಲಿರುವ ಪ್ರತಿಭೆಗಳಿಗೆ ಒಂದಲ್ಲೊಂದು ಅವಕಾಶಗಳು ಸಿಕ್ಕೇ ಸಿಗುತ್ತವೆ. ನಮ್ಮ ಪ್ರಯತ್ನ, ಶ್ರಮ, ಪರಿಶ್ರಮದಿಂದ ಯಶಸ್ಸು ಸಾಧ್ಯ. ಯಾವುದೇ ಕ್ಷೇತ್ರದ ಸಾಧನೆಗೆ ತರಬೇತಿ ಅಗತ್ಯವಾಗಿದೆ. ಯಕ್ಷಗಾನ ಕ್ಷೇತ್ರದಲ್ಲಿ ಅದೆಷ್ಟೋ ಸಾಧಕರನ್ನು ನಾವು ಕಾಣಬಹುದಾಗಿದೆ. ಇಂದು ಪಟ್ಲ ಫೌಂಡೇಶನ್ ವತಿಯಿಂದ ಮಕ್ಕಳಿಗೆ ಉಚಿತ ಯಕ್ಷಗಾನ ತರಬೇತಿ ನೀಡುತ್ತಿರುವುದು ಮಕ್ಕಳಲ್ಲೂ ಯಕ್ಷಗಾನ ಕ್ಷೇತ್ರದ ಬಗ್ಗೆ ಆಸಕ್ತಿ ಬೆಳೆಸಲು ಪೂರಕವಾಗಲಿ” ಎಂದು ಶುಭ ಹಾರೈಸಿದರು. ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಜಯಲಕ್ಷ್ಮೀ, ಮಾಜಿ ಅಧ್ಯಕ್ಷೆ ಪೂರ್ಣಿಮಾ ದೇರಾಜೆ, ಯಕ್ಷಗಾನ ತರಬೇತುದಾರ ಗಿರೀಶ್ ಗಡಿಕಲ್ಲು, ಪ್ರೀತಮ್ ವಿದ್ಯಾಸಂಸ್ಥೆಯ ಶಿಕ್ಷಕರು, ಸಿಬ್ಬಂದಿಗಳು ಮತ್ತು ಮಕ್ಕಳು ಉಪಸ್ಥಿತರಿದ್ದರು. ಮಂಗಳೂರು ಯಕ್ಷಧ್ರುವ…
ಬೆಂಗಳೂರು : ಪ್ರವರ ಥಿಯೇಟರ್ ದಶಕದ ಸಂಭ್ರಮಕ್ಕೆ ಹಿರಿಯ ರಂಗಕರ್ಮಿಗಳಾದ ಗುಂಡಣ್ಣ.ಸಿ.ಕೆ ಇವರು ದಿನಾಂಕ 25-8-2023 ರಂದು ಬೆಂಗಳೂರಿನ ಕೆ.ಹೆಚ್ ಕಲಾಸೌಧದಲ್ಲಿ ಚಾಲನೆ ನೀಡಿದರು. ಪತ್ರಕರ್ತರಾದ ಜೋಗಿ, ಸದಾಶಿವ ಶಣೈ ಮತ್ತು ಡಾ. ಅಜಯ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಪ್ರವರ ಥಿಯೇಟರ್ ತಂಡದ ಸಂಸ್ಥಾಪಕರಾದ ಹನು ರಾಮಸಂಜೀವ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಬೆಂಗಳೂರಿನ ರಂಗತಂಡಗಳಾದ ದೃಶ್ಯಕಾವ್ಯ, ರಂಗರಥ, ಪ್ರಕಸಂ, ರಂಗಪಯಣ, ನೆನಪು, ದಾಟು ಥಿಯೇಟರ್, ಪಯಣ, ಅಶ್ವಘೋಷ ಥಿಯೇಟರ್ ಮತ್ತು ಪ್ರವರ ಥಿಯೇಟರ್ ತಂಡದ ಸದಸ್ಯರು ರಂಗಗೀತಗಳನ್ನು ಪ್ರಸ್ತುತಪಡಿಸಿದರು. ರಂಗ ಗೀತೆ ಕಾರ್ಯಕ್ರಮದ ಬಳಿಕ ಬೆಂಗಳೂರಿನ ‘ನಿರ್ದಿಗಂತ’ ತಂಡದ ಸದಸ್ಯರು ಡಾ. ಶ್ರೀಪಾದ ಭಟ್ ಅವರ ನಿರ್ದೇಶನದ “ಗಾಯಗಳು” ನಾಟಕವನ್ನು ಪ್ರಸ್ತುತಪಡಿಸಿದರು.
ಮಂಗಳೂರು : ಅಕ್ಕಮಹಾದೇವಿ ವೀರಶೈವ ಮಹಿಳಾ ಸಂಘದ ದಶಮಾನೋತ್ಸವ ಸಂಭ್ರಮ ಹಾಗೂ ಜಿಲ್ಲಾಮಟ್ಟದ ಸಮೂಹಗಾನ ದೇಶಭಕ್ತಿ ಗೀತೆ ಸ್ಪರ್ಧೆಯು ದಿನಾಂಕ 13-08-2023ರಂದು ನಗರದ ಶಾರದಾ ವಿದ್ಯಾಲಯ ಕೋಡಿಯಾಲ್ ಬೈಲಿನಲ್ಲಿ ನಡೆಯಿತು. ಜಿಲ್ಲಾಮಟ್ಟದ ಸಮೂಹಗಾನ ದೇಶಭಕ್ತಿ ಗೀತೆ ಸ್ಪರ್ಧೆಯನ್ನು ದಕ್ಷಿಣ ಕನ್ನಡ ಜಿಲ್ಲೆ ಮಹಿಳಾ ಮಂಡಲಗಳ ಒಕ್ಕೂಟ (ರಿ.) ಮಂಗಳೂರು ಇದರ ಅಧ್ಯಕ್ಷರಾದ ಶ್ರೀಮತಿ ಚಂಚಲ ತೇಜೋಮಯ ಇವರು ಉದ್ಘಾಟಿಸಿ “ಅಕ್ಕಮಹಾದೇವಿ ಸಂಘವು ಸಮಾಜದ ಎಲ್ಲ ಜನರನ್ನು ಒಗ್ಗೂಡಿಸಿಕೊಂಡು ಸಮಾಜಮುಖಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ. ಮುಂದೆಯು ಅನೇಕ ಚಟುವಟಿಕೆಗಳು ನಿಮ್ಮ ಸಂಘದಿಂದ ನೆರವೇರಲಿ” ಎಂದು ಶುಭ ಹಾರೈಸಿದರು. ಮುಖ್ಯ ಅತಿಥಿಯಾಗಿದ್ದ ಶ್ರೀಮತಿ ಪಲ್ಲವಿ ಕಾರಂತ್ ರೋಟರಿ ಕ್ಲಬ್ ಬಿ.ಸಿ.ರೋಡ್ ಇವರು ಮಾತನಾಡುತ್ತಾ “ಸಕಾರಾತ್ಮಕ ಚಿಂತನೆಗಳಿಂದ ಹೆಣ್ಣು ಮಕ್ಕಳು ಒಗ್ಗೂಡಿದರೆ, ಉತ್ತಮ ಕಾರ್ಯಗಳು ನೆರವೇರಲು ಸಾಧ್ಯವಿದೆ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಈ ಸಂಘಕ್ಕೆ ದಶಮಾನೋತ್ಸವ ಶತಮಾನೋತ್ಸವವಾಗಲಿ” ಎಂದು ಶುಭ ಕೋರಿದರು. ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷರಾದ ಸುಮಾ ಅರುಣ್ ಮಾನ್ವಿ ಅವರು ಕಾರ್ಯಕ್ರಮದ ಬಗ್ಗೆ…
ಪುತ್ತೂರು : ಶ್ರೀ ತಿರುಮಲ ವೆಂಕಟರಮಣ ಸ್ವಾಮೀ ದೇವಸ್ಥಾನ ಬಂಟ್ವಾಳ, ಇದರ ಆಶ್ರಯದಲ್ಲಿ ಶ್ರಾವಣ ಮಾಸದ ಸೇವೆಯ ಪ್ರಯುಕ್ತ ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದ ವತಿಯಿಂದ ‘ಚೂಡಾಮಣಿ’ ಎಂಬ ತಾಳಮದ್ದಳೆ ದಿನಾಂಕ 24-08-2023ರಂದು ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀ ಸತೀಶ್ ಇರ್ದೆ, ಚೆಂಡೆ ಮದ್ದಳೆಗಳಲ್ಲಿ ಶ್ರೀ ಪದ್ಯಾಣ ಶಂಕರನಾರಾಯಣ ಭಟ್ ಮತ್ತು ಶ್ರೀ ಮುರಳೀಧರ ನೇರಂಕಿ ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀಮತಿ ಶುಭಾ ಅಡಿಗ (ಹನೂಮಂತ), ಶ್ರೀಮತಿ ಕಿಶೋರಿ ದುಗ್ಗಪ್ಪ ನಡುಗಲ್ಲು (ಶೃಂಗಾರ ರಾವಣ), ಶ್ರೀಮತಿ ಮನೋರಮಾ ಜಿ. ಭಟ್ (ಸೀತಾ), ಶ್ರೀಮತಿ ಹರಿಣಾಕ್ಷಿ ಜೆ.ಶೆಟ್ಟಿ (ಲಂಕಿಣಿ) ಸಹಕರಿಸಿದರು. ದೇವಳದ ಆಡಳಿತ ಸಮಿತಿಯ ಜೊತೆ ಕಾರ್ಯದರ್ಶಿ ಶ್ರೀ ನಾಗೇಂದ್ರ ಪೈ ಸ್ವಾಗತಿಸಿ, ಮಹಿಳಾ ಯಕ್ಷಗಾನ ಸಂಘದ ಸಂಚಾಲಕ ಶ್ರೀ ಭಾಸ್ಕರ ಬಾರ್ಯ ವಂದಿಸಿದರು.
ಬಂಟ್ವಾಳ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಇದರ ವತಿಯಿಂದ ನಡೆಯುತ್ತಿರುವ ಯಕ್ಷಧ್ರುವ ಯಕ್ಷ ಶಿಕ್ಷಣ ಯೋಜನೆಯ ನಾಟ್ಯ ತರಗತಿಯ ಅಭಿಯಾನದಡಿ ಯಕ್ಷಗಾನ ತರಬೇತುದಾರ ಶಿಕ್ಷಕರಿಗೆ ಬಿ.ಸಿ.ರೋಡ್ ರಂಗೋಲಿ ಹೊಟೇಲಿನಲ್ಲಿ ಯಕ್ಷಗಾನ ಶಿಕ್ಷಣದ ಕಾರ್ಯಾಗಾರ ದಿನಾಂಕ 22-08-2023ರಂದು ನಡೆಯಿತು. ಯಕ್ಷಗಾನ ಸೂರಿಕುಮೇರು ಗೋವಿಂದ ಭಟ್ಟರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಾಗಾರದಲ್ಲಿ ತೆಂಕುತಿಟ್ಟು ನಾಟ್ಯ ಪರಂಪರೆ, ತಾಳ ಪ್ರಸ್ತುತಿಯಲ್ಲಿರುವ ಅಭಿಪ್ರಾಯ ಬೇಧವನ್ನು ಪರಿಗಣಿಸಿ ತೆಂಕುತಿಟ್ಟು ಯಕ್ಷಗಾನ ಲೋಕದಲ್ಲಿ ಏಕರೂಪದ ಯಕ್ಷ ಶಿಕ್ಷಣ ಮುಂದಿನ ಪೀಳಿಗೆಗೆ ದೊರಕಬೇಕೆಂಬ ಸದುದ್ದೇಶದಿಂದ ತಯಾರಿಸಿದ ಯಕ್ಷಧ್ರುವ-ಯಕ್ಷ ಶಿಕ್ಷಣದ ಪಠ್ಯದ ಕೈಪಿಡಿ ಬಿಡುಗಡೆಗೊಳಿಸಲಾಯಿತು. ಕೈಪಿಡಿ ತಯಾರಿಕೆಯ ಹಂತ ಮತ್ತು ಯಕ್ಷಧ್ರುವ ಯಕ್ಷ ಶಿಕ್ಷಣದ ಧ್ಯೇಯೋದ್ದೇಶಗಳ ಬಗ್ಗೆ ಯಕ್ಷಧ್ರುವ ಯಕ್ಷಶಿಕ್ಷಣದ ನಿರ್ದೇಶಕ ಭಾಗವತ ಪಟ್ಲ ಸತೀಶ್ ಶೆಟ್ಟಿ ದಿಕ್ಸೂಚಿ ಭಾಷಣ ಮಾಡಿದರು. ಪ್ರಸಕ್ತ ಯೋಜನೆಯ ಬಗ್ಗೆ ಹಿರಿಯ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ ಶೆಟ್ಟಿ ಪ್ರಸ್ತಾವನೆಗೈದರು. ಯಕ್ಷಗಾನ ವಿದ್ವಾಂಸರಾದ ಡಾ. ಎಂ.ಪ್ರಭಾಕರ ಜೋಶಿ, ಪ್ರೊ. ಎಂ.ಎಲ್.ಸಾಮಗ, ಯಕ್ಷಗಾನ ಹಿರಿಯ ಕಲಾವಿದರಾದ ಬಂಟ್ವಾಳ…
ಬೆಂಗಳೂರು : ಕಳೆದ 46 ವರ್ಷಗಳಿಂದ ಕನ್ನಡ ನಾಟಕರಂಗದಲ್ಲಿ ಸಕ್ರಿಯವಾಗಿರುವ ಬೆಂಗಳೂರಿನ ‘ಸಂಧ್ಯಾ ಕಲಾವಿದರು’ ಹವ್ಯಾಸಿ ನಾಟಕ ತಂಡವು ದಿನಾಂಕ 02-09-2023 ಶನಿವಾರದಂದು ಸಂಜೆ 7.30 ಗಂಟೆಗೆ ಹನುಮಂತ ನಗರದ ಕೆ.ಹೆಚ್.ಕಲಾಸೌಧದಲ್ಲಿ ಹಿರಿಯ ನಾಟಕಕಾರ ಶ್ರೀ ಎಸ್.ವಿ. ಕೃಷ್ಣ ಶರ್ಮ ವಿರಚಿತ ‘ಮುಖವಾಡ’ ಒಂದು ನಿಗೂಢ ಕಥನ ನಾಟಕದ ಪ್ರದರ್ಶನವನ್ನು ನೀಡುತ್ತಿದೆ. ನಿರ್ದೇಶನ ಪ್ರದೀಪ್ ಅಂಚೆ ಹಾಗೂ ನಿರ್ವಹಣೆ ವೈ.ಕೆ.ಸಂಧ್ಯಾ ಶರ್ಮ. ಅಭಿನಯಿಸುವ ಕಲಾವಿದರು- ಪೂಜಾ ರಾವ್, ರಾಘವೇಂದ್ರ ನಾಯಕ್, ಶ್ರೀಕಾಂತ್ ಶ್ರೌತಿ, ಸುನಿಲ್ ನಾಗರಾಜ ರಾವ್ ಮತ್ತು ವಿಜಯ ಕಶ್ಯಪ್. ಬೆಳಕು- ಮಹದೇವಸ್ವಾಮಿ, ರಂಗಸಜ್ಜಿಕೆ- ವಿಶ್ವನಾಥ ಮಂಡಿ. ಹಿನ್ನಲೆ ಸಂಗೀತ ನಿರ್ವಹಣೆ-ನರೇಂದ್ರ ಕಶ್ಯಪ್ ಮುಖವಾಡ ನಾಟಕದ ಸಾರಾಂಶ ಮನದಾಳದಲ್ಲೆಲ್ಲೋ ಹುದುಗಿರುವ ಮಾನವನ ಕ್ರೌರ್ಯ, ಸಜ್ಜನಿಕೆಯ ಮುಖವಾಡವನ್ನು ಕಳಚಿ, ಒಮ್ಮೆಲೆ ಅವನ ನೈಜ ಸ್ವಭಾವವನ್ನು ಅನಾವರಣಗೊಳಿಸುವ ಕಥೆಯೇ ‘ಮುಖವಾಡ’ ನಾಟಕದ ವಸ್ತು. ಬರಹಗಾರನೊಬ್ಬನ ಬರವಣಿಗೆಗೂ, ಅವನ ಚಿಂತನೆಗಳಿಗೂ, ಸ್ವಭಾವಗಳಿಗೂ ಇರುವ ಅಂತರ, ಸಮನ್ವಯವಿಲ್ಲದ ಅವನ ನೈಜ ನಡವಳಿಕೆಗಳನ್ನು ಎತ್ತಿ ತೋರಿಸುವ ನಾಟಕವಾಗಿ…
ಬಂಟ್ವಾಳ : ಯಕ್ಷಧ್ರುವ ಯಕ್ಷಶಿಕ್ಷಣ ನಾಟ್ಯ ತರಬೇತಿ ಶಿಕ್ಷಣದ ಅಭಿಯಾನದಡಿ ಶ್ರೀ ರಾಮ ಪ್ರೌಢ ಶಾಲೆ ಅರ್ಕುಳ ಫರಂಗಿಪೇಟೆಯಲ್ಲಿ ದಿನಾಂಕ 19-08-2023ರಂದು ಯಕ್ಷಧ್ರುವ ಪಟ್ಲ ಫೌಂಡೇಷನ್ನಿನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿಯವರು ಯಕ್ಷಶಿಕ್ಷಣ ತರಗತಿಯನ್ನು ಉದ್ಘಾಟಿಸಿ ಮಾತನಾಡುತ್ತಾ “ಯಕ್ಷಗಾನ ಒಂದು ಶ್ರೇಷ್ಠ ಕಲೆ, ಎಲ್ಲಾ ಪ್ರಕಾರದ ಕಲೆಗಳ ಸಮ್ಮಿಲನವಾದ ಯಕ್ಷಗಾನವಿಂದು ಜಾಗತಿಕ ಕಲೆಯಾಗಿ ಮೇಳೈಸುತ್ತಿದೆ” ಎಂದು ಹೇಳಿದರು. ಫರಂಗಿಪೇಟೆ ಶ್ರೀರಾಮ ಪ್ರೌಢ ಶಾಲೆಯ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಈ ತರಗತಿಯಲ್ಲಿ ಭಾಗವಹಿಸಿದರು. ವೇದಿಕೆಯಲ್ಲಿ ಶ್ರೀ ರಾಮ ವಿದ್ಯಾ ಸಂಸ್ಥೆಯ ಶಾಲಾಡಳಿತ ಮಂಡಳಿ ಅಧ್ಯಕ್ಷರಾದ ಅರ್ಕುಳ ಬೀಡು ವಜ್ರನಾಭ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಎ.ಕೆ. ಜಯರಾಮ ಶೇಕ, ನಿವೃತ್ತ ಮುಖ್ಯ ಶಿಕ್ಷಕರಾದ ದೇವದಾಸ್ ಕೆ.ಆರ್., ರೋಟರಿ ಕ್ಲಬ್ ಫರಂಗಿಪೇಟೆಯ ಕೋಶಾಧಿಕಾರಿ ದಿನೇಶ್ ಶೆಟ್ಟಿ ಕೊಟ್ಟಿಂಜ, ಯಕ್ಷ ದ್ರುವ – ಯಕ್ಷ ಶಿಕ್ಷಣದ ಶಿಕ್ಷಕರಾದ ಅನ್ವೇಶ್ ಶೆಟ್ಟಿ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಶೈಲಜಾ, ಪ್ರೌಢ ಶಾಲಾ ಮುಖ್ಯ ಶಿಕ್ಷಕ ಜಯ ಕುಮಾರ್…
ಮಂಗಳೂರು : ಶಾರದಾ ಪದವಿ ಪೂರ್ವ ಕಾಲೇಜಿನ ಕನ್ನಡ ಸಂಘದ ಆಶ್ರಯದಲ್ಲಿ ಲಕ್ಷ್ಮೀಶ ಕವಿಯ ‘ಜೈಮಿನಿ ಭಾರತ’ದ ಸೀತಾ ಪರಿತ್ಯಾಗ ಪ್ರಸಂಗದ ಗಾಯನ-ನೃತ್ಯ ಪ್ರಾತ್ಯಕ್ಷಿಕೆ ‘ಯಕ್ಷ ರಸಾಯನ’ ಕಾರ್ಯಕ್ರಮವು 23-08-2023ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ. ಎಂ.ಬಿ.ಪುರಾಣಿಕ್ ಇವರು ಕಲಾವಿದರಿಗೆ ಗೌರವಾರ್ಪಣೆ ಸಲ್ಲಿಸಿ ಮಾತನಾಡುತ್ತಾ “ಭಾರತೀಯ ಧರ್ಮ, ಸಂಸ್ಕೃತಿಗಳ ಪ್ರಸಾರ ಕಾರ್ಯದಲ್ಲಿ ಯಕ್ಷಗಾನದ ಪಾತ್ರ ಮಹತ್ತರವಾದುದು. ಈವತ್ತು ಜನಸಾಮಾನ್ಯರ ಬಾಯಿಯಲ್ಲೂ ರಾಮಾಯಣ, ಮಹಾಭಾರತ, ಪುರಾಣಗಳ ಕಥೆಗಳು ಹರಿದಾಡುವುದಿದ್ದರೆ ಅದಕ್ಕೆ ಕಾರಣ ಯಕ್ಷಗಾನ. ಯಕ್ಷಗಾನದ ವೀಕ್ಷಣೆ, ಅಭ್ಯಾಸ ನಮ್ಮ ನಡೆನುಡಿಗಳನ್ನು ತಿದ್ದಿ ಉತ್ತಮ ಸಂಸ್ಕಾರ ನೀಡಬಲ್ಲುದು” ಎಂದು ಅಭಿಪ್ರಾಯಪಟ್ಟರು. ಯಕ್ಷಗಾನ ಕಾರ್ಯಕ್ರಮದ ಮುಮ್ಮೇಳದಲ್ಲಿ ಪ್ರಸಿದ್ಧ ಕಲಾವಿದರಾದ ಶ್ರೀ ಸರ್ಪಂಗಳ ಈಶ್ವರ ಭಟ್, ಡಾ. ಶ್ರುತೀಕೀರ್ತಿ ರಾಜ, ಡಾ.ಮಹೇಶ್ ಹಾಗೂ ವಿದ್ಯಾರ್ಥಿ ಚಿ| ಯಕ್ಷ್ ಮೊದಲಾದವರು ಪಾತ್ರ ನಿರ್ವಹಿಸಿದರೆ, ಭಾಗವತಿಕೆಯಲ್ಲಿ ಶ್ರೀಮತಿ ಶಾಲಿನಿ ಹೆಬ್ಬಾರ್, ಚೆಂಡೆಯಲ್ಲಿ ಶ್ರೀ ಮುರಾರಿ ಕಡಂಬಳಿತ್ತಾಯ, ಮದ್ದಳೆಯಲ್ಲಿ ವಿದ್ಯಾರ್ಥಿ ಚಿ| ವರುಣ್ ಹೆಬ್ಬಾರ್…