Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ನಿವೃತ್ತ ಪ್ರಾಧ್ಯಾಪಕ ಡಾ.ವಿ.ಕೆ.ಯಾದವ್ ಸಸಿಹಿತ್ಲು ಇವರ ‘ಮೊಗವೀರೆರ್ನ ಸಾಂಸ್ಕೃತಿಕ ಬದ್ಕ್ ಬೊಕ್ಕ ಆರ್ಥಿಕ ಚಿಂತನೆ’ ಎಂಬ ತುಳುವಿನಲ್ಲಿ ಪ್ರಕಟಿತ ಮೊದಲ ಪಿ.ಎಚ್.ಡಿ. ಅಧ್ಯಯನಪೂರ್ಣ ಗ್ರಂಥವೊಂದನ್ನು ರಚಿಸಿದ್ದು, ತುಳು ಭಾಷೆಯಲ್ಲೂ ಸಂಶೋಧನಾ ಗ್ರಂಥ ಬಂತು ಎಂಬುದು ತುಳು ನಾಡಿಗೆ ಹೆಮ್ಮೆಯನ್ನು ತಂದಿದೆ. ದಿನಾಂಕ 27-08-2023ರಂದು ಅಪರಾಹ್ನ 2.45ಕ್ಕೆ ಈ ಗ್ರಂಥ ಬಪ್ಪನಾಡು ದೇವಸ್ಥಾನದ ಅನ್ನಪೂರ್ಣ ಸಭಾಂಗಣದಲ್ಲಿ ಬಿಡುಗಡೆಯಾಗಲಿದೆ. ಸಾಂಸ್ಕೃತಿಕ ಹರಿಕಾರ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಮೋಹನ್ ಆಳ್ವ ಇವರು ಕೃತಿ ಲೋಕಾರ್ಪಣೆ ಮಾಡಲಿದ್ದಾರೆ. ನಾಡೋಜ ಡಾ. ಜಿ.ಶಂಕರ್ ಕಾರ್ಯಕ್ರಮ ಉದ್ಘಾಟಿಸಲಿರುವರು. ಕಾರ್ಯಕ್ರಮದಲ್ಲಿ ಮಂಗಳೂರು ಅಲೋಶಿಯಸ್ ಕಾಲೇಜಿನ ಪ್ರಾಧ್ಯಾಪಕ ಡಾ. ಮಹಾಲಿಂಗ ಭಟ್ ಕೆ. ಅವರು ಗ್ರಂಥವನ್ನು ಪರಿಚಯಿಸುವರು. ಸಸಿಹಿತ್ಲು ಶ್ರೀ ಭಗವತಿ ಕ್ಷೇತ್ರದ ಆನುವಂಶಿಕ ಆಡಳಿತ ಮೊಕ್ತೇಸರ ಶ್ರೀನಿವಾಸ ಯಾನೆ ಅಪ್ಪು ಪೂಜಾರಿ ಅವರು ಶುಭ ಹಾರೈಸಲಿದ್ದು, ಶಾಸಕರಾದ ಉಮಾನಾಥ ಕೋಟ್ಯಾನ್, ಯಶ್‌ಪಾಲ್ ಸುವರ್ಣ ಮತ್ತಿತರರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಅಪರಾಹ್ನ 2 ಘಂಟೆಗೆ ಬಜಪೆ…
ಮಂಗಳೂರು : ಗುರುತು ಪ್ರಕಾಶನ ಮುಂಬೈ ಸಮರ್ಪಿಸುವ ಶ್ರೀ ಬಾಬು ಶಿವ ಪೂಜಾರಿ ಮತ್ತು ಬಳಗದ ‘ಬಿಲ್ಲವರ ಗುತ್ತು ಬರ್ಕೆಗಳು’ ಸಂಶೋಧನಾ ಗ್ರಂಥ ಲೋಕಾರ್ಪಣೆಗೊಳ್ಳಲಿದೆ. ಈ ಕಾರ್ಯಕ್ರಮವು ದಿನಾಂಕ 27-08-2023ರ ಆದಿತ್ಯವಾರ ಬೆಳಗ್ಗೆ 9:30ಕ್ಕೆ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಳದ ಕೊರಗಪ್ಪ ಕಲ್ಯಾಣ ಮಂಟಪದ ವೇದಿಕೆಯಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿದೆ. ಸುಮಾರು 7 ವರ್ಷಗಳ ಕಾಲದ ಸುದೀರ್ಘ ಸಂಶೋಧನೆಯ ಫಲವಾಗಿ ಬಿಲ್ಲವರ ಪ್ರತಿಷ್ಠಿತ ಮನೆತನಗಳ ಅಪೂರ್ವ ಇತಿಹಾಸವಿರುವ ಮುಂಬಯಿ ಶ್ರೀ ಬಾಬು ಶಿವ ಪೂಜಾರಿ ಅವರ ಮುಂದಾಳತ್ವದಲ್ಲಿ ರಚನೆಗೊಂಡ ಬಿಲ್ಲವರ ಗುತ್ತು (ಬರ್ಕೆ, ಬೀಡು, ಬಾವ, ಜನನ, ಗುರಿಕಾರಮನೆ, ಭಂಡಾರ ಮನೆ ನಟ್ಟಿಲ್ಲು ಮತ್ತು ಸಾನದ ಮನೆ) ಎಂಬ ಸಂಶೋಧನಾ ಗ್ರಂಥ ಇದಾಗಿದೆ. ಈ ಕಾರ್ಯಕ್ರಮಕ್ಕೆ ತಮ್ಮೆಲ್ಲರನ್ನೂ ಸ್ವಾಗತಿಸುತ್ತಿದ್ದೇವೆ. ಅಪೂರ್ವ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿರುವ ಬಿಲ್ಲವರ ಅನೇಕ ಪ್ರತಿಷ್ಠಿತ ಮನೆತನಗಳ ದಾಖಲೀಕರಣವಾಗಿರುವ ಈ ಗ್ರಂಥವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಮಹತ್ತರವಾದ ಕಾರ್ಯ ನಮ್ಮಿಂದ ಆಗಬೇಕಾಗಿದೆ. ಅದಕ್ಕಾಗಿ ಈ ಕಾರ್ಯಕ್ರಮಕ್ಕೆ ನಮ್ಮೆಲ್ಲರ…
ಕಾಸರಗೋಡು : ಕಲಾಕುಂಚ ಗಡಿನಾಡ ಘಟಕ ಕೇರಳ ಶಾಖೆಯ ಸಹಯೋಗದೊಂದಿಗೆ ಶ್ರೀಮತಿ ಲಕ್ಷ್ಮೀ ವಿ. ಭಟ್ ಇವರ ‘ಭಕ್ತಿ ಮಂಜರಿ’, ‘ಸುಚರಿತರು’, ‘ಕಲರವ’, ‘ಭಾರತಾಂಬೆಗೆ ನಮನ’ ಮತ್ತು ‘ಭಾವ ಸ್ಪರ್ಶ’ ಎಂಬ ಪಂಚ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮವು ದಿನಾಂಕ 29-08-2023ರಂದು ಕಾಸರಗೋಡು ಜಿಲ್ಲೆಯ ಉಪ್ಪಳದ ಶ್ರೀ ಕ್ಷೇತ್ರ ಕೊಂಡೆವೂರು ಇಲ್ಲಿ ನಡೆಯಲಿದೆ. ಈ ಕಾರ್ಯಕ್ರಮವನ್ನು ಕೊಂಡೆವೂರಿನ ಶ್ರೀ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಯವರು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿ ಆಶೀರ್ವಚನ ನೀಡಲಿದ್ದಾರೆ. ಲೇಖಕಿ ಶ್ರೀಮತಿ ಲಕ್ಷ್ಮೀ ವಿ.ಭಟ್ ಇವರಿಂದ ಆಶಯ ನುಡಿ ಮತ್ತು ಕು. ಅದಿತಿಲಕ್ಷ್ಮೀ ಇವರಿಂದ ಪೂಜಾ ನೃತ್ಯವಿದೆ. ಶ್ರೀ ಶ್ರೀ ಶ್ರೀ ಗಳವರು ತಮ್ಮ ದಿವ್ಯ ಹಸ್ತಗಳಿಂದ ‘ಭಕ್ತಿ ಮಂಜರಿ’ ಕೃತಿ ಲೋಕಾರ್ಪಣೆ ಮಾಡಿ ಕೃತಿಯ ಕುರಿತು ಮಾತನಾಡಲಿದ್ದಾರೆ. ಕು. ಸುಪ್ರಜಾ ರಾವ್ ಹಾಗೂ ಶ್ರೀಮತಿ ರಾಧಾಮಣಿ ಆರ್.ರಾವ್ ಕೃತಿಯಲ್ಲಿನ ಕವನಗಳನ್ನು ಹಾಡಲಿದ್ದಾರೆ. ಶ್ರೀ ಪಿ. ನಾರಾಯಣ ಮೂಡಿತ್ತಾಯ ಇವರು ‘ಸುಚರಿತರು’ ಕೃತಿ ಲೋಕಾರ್ಪಣೆ ಮಾಡಿ ಕೃತಿಯ…
ಪುತ್ತೂರು : ಶ್ರೀ ಮೂಕಾಂಬಿಕಾ ಕಲ್ಬರಲ್ ಅಕಾಡೆಮಿ (ರಿ.) ಪುತ್ತೂರು ಪ್ರಸ್ತುತ ಪಡಿಸುವ ಗುರು ಬಿ. ದೀಪಕ್ ಕುಮಾರ್ ಇವರ ನಿರ್ದೇಶನದ ‘ನೃತ್ಯೋತ್ಕ್ರಮಣ -2023’ ಗೆಜ್ಜೆಗಿರಿತ ಬೊಲ್ಪು ಎಂಬ ತುಳು ನೃತ್ಯರೂಪಕ ದಿನಾಂಕ 27-08-2023ರಂದು ಸಂಜೆ ಪುತ್ತೂರಿನ ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆಯಲಿದೆ. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುತ್ತೂರಿನ ಅಕ್ಷಯ ಕಾಲೇಜಿನ ಚೇರ್ ಮನ್ ಶ್ರೀ ಜಯಂತ ನಡುಬೈಲು ವಹಿಸಲಿದ್ದು, ಪುತ್ತೂರಿನ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಆಡಳಿತ ಮಂಡಳಿಯ ಕೋಶಾಧಿಕಾರಿಯಾದ ಶ್ರೀ ಅಶೋಕ್ ಕುಂಬಳೆಯವರು ಅಭ್ಯಾಗತರಾಗಿ ಆಗಮಿಸಲಿದ್ದಾರೆ. ಶ್ರೀ ಮೂಕಾಂಬಿಕಾ ಕಲ್ಬರಲ್ ಅಕಾಡೆಮಿಯ ಸಂಚಾಲಕಿ ಶ್ರೀಮತಿ ಪ್ರಭಾ ಬಿ. ಶಂಕರ್, ನಿರ್ದೇಶಕ ಗುರು ಬಿ.ದೀಪಕ್ ಕುಮಾರ್, ಸಂಗೀತ ಹಾಗೂ ನೃತ್ಯಗುರು ವಿದುಷಿ ಪ್ರೀತಿಕಲಾ ದೀಪಕ್ ಹಾಗೂ ನೃತ್ಯಗುರು ವಿದ್ವಾನ್ ಗಿರೀಶ್ ಕುಮಾರ್ ಕಲಾಭಿಮಾನಿಗಳಿಗೆ ಆದರದ ಸ್ವಾಗತ ಕೋರಿದ್ದಾರೆ.
ಬಂಟ್ವಾಳ : ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ಘಟಕ ಹಾಗೂ ‘ಅಭಿರುಚಿ’ ಜೋಡುಮಾರ್ಗ ಸಹಯೋಗದಲ್ಲಿ ‘ಶ್ರೀ ಏರ್ಯ-ಒಂದು ನೆನಪು’ ಕಾವ್ಯ ವಾಚನ-ವ್ಯಾಖ್ಯಾನ ಕಾರ್ಯಕ್ರಮವು ದಿನಾಂಕ 27-08-2023 ರವಿವಾರದಂದು ಸಂಜೆ ಗಂಟೆ 4ಕ್ಕೆ ಬಿ.ಸಿ.ರೋಡಿನ ಕನ್ನಡ ಭವನದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಡಾ. ತುಕಾರಾಮ್ ಪೂಜಾರಿಯವರು ಏರ್ಯ ಸಂಸ್ಕರಣೆ ಮಾಡಲಿದ್ದಾರೆ. ನಂತರ ನಡೆಯಲಿರುವ ‘ಕಾವ್ಯ ವಾಚನ-ವ್ಯಾಖ್ಯಾನ’ದಲ್ಲಿ ಖ್ಯಾತ ಗಮಕಿಯಾದ ಶ್ರೀಮತಿ ಮಂಜುಳಾ ಸುಬ್ರಹ್ಮಣ್ಯ ಇವರಿಂದ ಕಾವ್ಯ ವಾಚನ ಹಾಗೂ ಉಪನ್ಯಾಸಕರಾದ ಶ್ರೀಮತಿ ರೇಶ್ಮಾ ಜಿ. ಭಟ್ ಇವರಿಂದ ವ್ಯಾಖ್ಯಾನ ನಡೆಯಲಿದೆ. ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ಘಟಕ ಹಾಗೂ ‘ಅಭಿರುಚಿ’ ಜೋಡುಮಾರ್ಗ ಇದರ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ನಿಮಗೆಲ್ಲರಿಗೂ ಪ್ರೀತಿಯ ಸ್ವಾಗತ ಕೋರಿದ್ದಾರೆ.
ಪುತ್ತೂರು: ಶ್ರೀ ಆಂಜನೇಯ ಯಕ್ಷಗಾನ ಕಲಾಸಂಘ ಬೊಳುವಾರು ಪುತ್ತೂರು ಇದರ 55ನೇ ವರ್ಷದ ಪ್ರಯುಕ್ತ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠ ಕಲ್ಲಮೆ – ಸರ್ವೆ ಸಹಯೋಗದಲ್ಲಿ ದಿನಾಂಕ 26-08-2023ರಿಂದ 01-09-2023ರವರೆಗೆ ‘ಶ್ರೀ ರಾಮಾಯಣ ದರ್ಶನಂ ತಾಳಮದ್ದಳೆ ಸಪ್ತಾಹ’ವು ಮಠದಲ್ಲಿ ಜರಗಲಿದೆ. ದಿನಾಂಕ 26-08-2023ನೇ ಶನಿವಾರದಂದು ಕಲ್ಲಮೆ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದ ವ್ಯವಸ್ಥಾಪಕರಾದ ಡಾ. ಸೀತಾರಾಮ ಭಟ್ ದೀಪ ಪ್ರಜ್ವಲಿಸಿ ಸಪ್ತಾಹವನ್ನು ಉದ್ಘಾಟಿಸಲಿದ್ದಾರೆ. ಬಳಿಕ ‘ಶ್ರೀರಾಮ ವನ ಗಮನ’ ತಾಳಮದ್ದಳೆ ಜರಗಲಿದೆ. ದಿನಾಂಕ 27-08-2023ರಂದು ‘ಭರತಾಗಮನ’, 28-08-2023ರಂದು ‘ಪಂಚವಟಿ’, 29-08-2023ರಂದು ‘ವಾಲಿ ಮೋಕ್ಷ’, 30-08-2023ರಂದು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದ ಕಲಾವಿದರಿಂದ ‘ಚೂಡಾಮಣಿ’, ದಿನಾಂಕ 31-08-2023ರಂದು ‘ಅತಿಕಾಯ ಮೋಕ್ಷ’ ಹಾಗೂ ಸಪ್ತಾಹದ ಕೊನೆಯ ದಿನ 01-09-2023ರಂದು ಸಂಜೆ 5.30ರಿಂದ ‘ಶ್ರೀ ರಾಮ ನಿರ್ಯಾಣ’ ತಾಳಮದ್ದಳೆ ನಡೆಯಲಿದೆ. ಈ ಸಪ್ತಾಹದಲ್ಲಿ ಪ್ರಸಿದ್ಧ ಕಲಾವಿದರೊಂದಿಗೆ ಹವ್ಯಾಸಿ ಕಲಾವಿದರು ಹಿಮ್ಮೇಳ ಮತ್ತು ಮುಮ್ಮೇಳದಲ್ಲಿ ಭಾಗವಹಿಸುತ್ತಿರುವುದು ವಿಶೇಷವಾಗಿದ್ದು, ಸಪ್ತಾಹದ ಯಶಸ್ಸಿಗೆ ಕಲಾಭಿಮಾನಿಗಳು ಸರ್ವ…
ಪುತ್ತೂರು : ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ನೇತೃತ್ವದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು, ಗ್ರಾಮ ಪಂಚಾಯತ್ ಕೋಡಿಂಬಾಡಿ ಸಹಕಾರದಲ್ಲಿ ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಇದರ ಸಂಯೋಜನೆ ಹಾಗೂ ಹೊರನಾಡ ಕನ್ನಡಿಗ ಮಿತ್ರಂಪಾಡಿ ಜಯರಾಮ ರೈ ಅಬುದಾಬಿ ಇವರ ಮಹಾಪೋಷಕತ್ವದಲ್ಲಿ ಸರಕಾರಿ ಪ್ರೌಢ ಶಾಲೆ ಶಾಂತಿನಗರದಲ್ಲಿ ಗ್ರಾಮ ಸಾಹಿತ್ಯ ಸಂಭ್ರಮದ 8ನೇ ಸರಣಿ ಕಾರ್ಯಕ್ರಮ ದಿನಾಂಕ 26-08-2023ರಂದು ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಪುತ್ತೂರಿನ ಶಾಸಕರಾದ ಶ್ರೀ ಅಶೋಕ್ ಕುಮಾರ್ ರೈ ಕೋಡಿಂಬಾಡಿ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಕ.ಸಾ.ಪ. ಪುತ್ತೂರು ತಾಲೂಕು ಅಧ್ಯಕ್ಷರಾದ ಪುತ್ತೂರು ಶ್ರೀ ಉಮೇಶ್ ನಾಯಕ್ ವಹಿಸಲಿದ್ದು, ಮುಖ್ಯ ಅತಿಥಿಯಾಗಿ ಗ್ರಾಮ ಪಂಚಾಯತ್ ಕೋಡಿಂಬಾಡಿ ಅಧ್ಯಕ್ಷರಾದ ಶ್ರೀಮತಿ ಮಲ್ಲಿಕಾ ಅಶೋಕ್, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ರೋಹಿತ್, ಸಿ.ಆರ್.ಪಿ.ಒ. ಶ್ರೀ ಮಹಮ್ಮದ್ ಅಶ್ರಫ್, ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಶ್ರೀ ಪ್ರಕಾಶ್ ಗೌಡ ಭಾಗವಹಿಸಲಿರುವರು. ಹಿರಿಯ ಸಾಹಿತಿಗಳಾದ ಶ್ರೀ ರಾಜೇಂದ್ರ ಆರಿಗ, ಪತ್ರಕರ್ತ ಶ್ರೀ ಸಂತೋಷ್ ಕುಮಾರ್, ನಾಟಕ ರಚನೆಕಾರರಾದ…
ಗೋಕರ್ಣ : ಪರಮಪೂಜ್ಯ ರಾಜರ್ಷಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತ್ತು ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ ಶ್ರೀರಾಮಚಂದ್ರಾಪುರ ಮಠ ಇವರ ಆಶ್ರಯ ಮತ್ತು ಶುಭಾಶೀರ್ವಾದದೊಂದಿಗೆ ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ) ಪ್ರಸ್ತುತ ಪಡಿಸುವ ”ಮಂಜುನಾದ” ಸಂಗೀತ ಕಛೇರಿಯು ದಿನಾಂಕ 26-08-2023 ಶನಿವಾರ ಮಧ್ಯಾಹ್ನ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಪರಿಸರ, ಅಶೋಕೆ, ಗೋಕರ್ಣ ಇಲ್ಲಿ ನಡೆಯಲಿದೆ. ಪ್ರಸಿದ್ಧ ಸಂಗೀತಗಾರ ಡಾ. ರಾಜಕುಮಾರ್ ಭಾರತಿಯವರ ಮಾರ್ಗದರ್ಶನದಲ್ಲಿ ರಚಿತವಾದ ಐದು ಕೃತಿಗಳನ್ನು ಡಾ.ಡಿ.ವೀರೇಂದ್ರ ಹೆಗ್ಗಡೆಯವರು ದಿನಾಂಕ 14-08-2022ರಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲೋಕಾರ್ಪಣೆ ಮಾಡಿದ್ದರು. ಶ್ರೀ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಸುಮಾರು 25 ಕೃತಿಗಳನ್ನು ರಚಿಸಿ ಜನಪ್ರಿಯಗೊಳಿಸುವ ‘ಮಂಜುನಾದ’ ಯೋಜನೆಯ ಪ್ರಥಮ ಭಾಗ ಇದಾಗಿತ್ತು. ಈಗಾಗಲೇ ರಾಜ್ಯದ ವಿವಿಧೆಡೆ 15 ಕಛೇರಿಗಳು ನಡೆದಿದ್ದು, ಇದು 16ನೆಯ ಸಂಗೀತ ಕಛೇರಿಯಾಗಿರುತ್ತದೆ. ‘ಮಂಜುನಾದ’ ಸಂಗೀತ ಕಛೇರಿಯ ಹಾಡುಗಾರಿಕೆಯಲ್ಲಿ ಉಷಾ ರಾಮಕೃಷ್ಣ ಭಟ್ ಮಣಿಪಾಲ, ಅದಿತಿ ಪ್ರಹ್ಲಾದ್ ಬೆಂಗಳೂರು, ಆಶ್ವೀಜಾ ಉಡುಪ ಕಿನ್ನಿಗೋಳಿ, ಮೇಧಾ ಉಡುಪ ಮಂಗಳೂರು ಮತ್ತು ಶರಣ್ಯಾ ಕೆ.ಎನ್. ಸುರತ್ಕಲ್,…
ಮಡಿಕೇರಿ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಡಿಕೇರಿ, ಸೋಮವಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕೊಡ್ಲಿಪೇಟೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಹಲಸಿನ ಮರ ಶ್ರೀಮತಿ ಗೌರಮ್ಮ ಶಾಂತ ಮಲ್ಲಪ್ಪ ಪ್ರಥಮ ದರ್ಜೆ ಕಾಲೇಜು ಕೊಡ್ಲಿಪೇಟೆ ಇವರ ಸಂಯುಕ್ತ ಆಶ್ರಯದಲ್ಲಿ ‘ಆರೋಡ ದಾಸೋಹಿ ಧರ್ಮ ಚಿಂತಾಮಣಿ ಮಹಾಶರಣ ಲಿಂ. ಮಾಗನೂರು ಬಸಪ್ಪ ದತ್ತಿ ಕಾರ್ಯಕ್ರಮದಂತೆ ಶರಣ ಸಂಸ್ಕೃತಿಯ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಕೊಡ್ಲಿಪೇಟೆಯ ಹಲಸಿನಮರ ಶ್ರೀಮತಿ ಗೌರಮ್ಮ ಶಾಂತಮಲ್ಲಪ್ಪ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ದಿನಾಂಕ 26-08-2023ರಂದು ಬೆಳಿಗ್ಗೆ 11:00 ಗಂಟೆಗೆ ಏರ್ಪಡಿಸಲಾಗಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಎಂ.ಪಿ. ಕೇಶವ ಕಾಮತ್ ಇವರು ವಹಿಸಲಿದ್ದಾರೆ. ಕಾರ್ಯಕ್ರಮಕ್ಕೆ ಆಶೀರ್ವಚನವನ್ನು ಶ್ರೀ ಕ್ಷೇತ್ರ ಕಿರಿಕೊಡ್ಲಿ ಮಠದ ಪೀಠಾಧಿಪತಿ ಶ್ರೀ ಶ್ರೀ ಶ್ರೀ ಸದಾಶಿವ ಸ್ವಾಮೀಜಿಗಳು ನೀಡಲಿದ್ದು, ಕಾರ್ಯಕ್ರಮದ ಉದ್ಘಾಟನೆಯನ್ನು ಉಚ್ಚ ನ್ಯಾಯಾಲಯದ ಹಿರಿಯ ವಕೀಲರಾದ ಶ್ರೀ ಎಚ್.ಎಸ್. ಚಂದ್ರಮೌಳಿ ನೆರವೇರಿಸಲಿದ್ದಾರೆ.…
ಕುತ್ತಾರು ಪದವು : 76ನೇ ವರ್ಷದ ಸ್ವಾತಂತ್ರ್ಯೋತ್ಸವದ ಆಚರಣೆಯ ಪ್ರಯುಕ್ತ ಯಕ್ಷನಂದನ ಪಿ.ವಿ. ಐತಾಳರ ಇಂಗ್ಲಿಷ್ ಯಕ್ಷಗಾನ ಬಳಗ ಮತ್ತು ರೋಟರಿ ಕ್ಲಬ್ ಪೋರ್ಟ್ ಟೌನ್ ಪಣಂಬೂರು ಇದರ ವತಿಯಿಂದ ಕುತ್ತಾರು ಪದವಿನ ಬಾಲ ಸಂರಕ್ಷಣಾ ಕೇಂದ್ರದಲ್ಲಿ ಮಕ್ಕಳ ಜತೆಗೂಡಿ ನಡೆಸುವ ಸಾಂಸ್ಕೃತಿಕ, ನಲಿವು ಸಂಭ್ರಮ ಕಾರ್ಯಕ್ರಮ ದಿನಾಂಕ 15-08-2023ರಂದು ನಡೆಯಿತು. ಬಾಲ ಸಂರಕ್ಷಣ ಕೇಂದ್ರ ಕುತ್ತಾರು ಪದವು ಇದರ ಸಂಚಾಲಕರಾದ ಶ್ರೀ ಪಿ. ಅನಂತ ಕೃಷ್ಣ ಭಟ್ ಅವರು “ಯಕ್ಷನಂದನ ಜತೆಯಾಗಿ ಮಾಡಿದ ಕಾರ್ಯಕ್ರಮ ಮಕ್ಕಳಿಗೆ ಆನಂದ ಜತೆಗೆ ಬಾಲ್ಯದಲ್ಲಿನ ಸಂಭ್ರಮದ ಆಚರಣೆಯಾಗಿದೆ. ಪ್ರತೀ ವರ್ಷ ಮಾಡುತ್ತಿರುವ ಈ ಸೇವೆ ಶ್ಲಾಘನೀಯ” ಎಂದರು. ರೋಟರಿ ಪೋರ್ಟ್ ಟೌನ್ ಅಧ್ಯಕ್ಷರಾದ ಕೋಮಲ ರಾಮನ್, ಯಕ್ಷನಂದನದ ಸದಸ್ಯೆ ಸೌಜನ್ಯ ಶ್ರೀಕುಮಾರ್ ತಮ್ಮ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಯಕ್ಷನಂದನದ ಅಧ್ಯಕ್ಷ ಡಾ. ಪಿ. ಸತ್ಯಮೂರ್ತಿ ಐತಾಳ, ವಾಣಿ ಎಸ್. ಐತಾಳ, ಶ್ಯಾಮಲಾ ಎಸ್. ಐತಾಳ, ರೋಟರಿ ಪಣಂಬೂರಿನ ಪಿ. ರಾಜೇಂದ್ರ ಬಸವರಾಜ್, ನವೀನ್ ಕುಮಾರ್,…