Author: roovari

10 ಫೆಬ್ರವರಿ 2023: ಚಿಕ್ಕ, ಚೊಕ್ಕ, ಶುದ್ಧ ಹಾಸ್ಯಭರಿತ ಸುಂದರ ಪ್ರಸ್ತುತಿ ಸೀತು ಮದುವೆ .ಅಂದಿನ ಕನ್ನಡದ ಹಾಸ್ಯ ಚಕ್ರವರ್ತಿ ಬೀಚಿ ಅವರ ಸಣ್ಮ ಕಥೆಯನ್ನು ನಾಟಕ ರೂಪದಲ್ಲಿ ಪ್ರಸ್ತುತ ಪಡಿಸಿದ ಶೈಲೇಶ್ ಅವರ ಸೈಡ್ ಸೈಡ್ ವಿಂಗ್ ತಂಡ ಅಭಿನಂದನಾರ್ಹರು. ಭಾಷಾ ಶುದ್ಧತೆ, ಸಮಯೋಚಿತ ಸಂಭಾಷಣೆ, ನಾಟಕವನ್ನು ಅಂತ್ಯದವರೆಗೂ ಜೀವಂತವಾಗಿಟ್ಟು ಹಾಸ್ಯದ ನಗೆಗಡಲಲ್ಲಿ ತೇಲಿಸುತ್ತದೆ. ಅಭಿನಯದಲ್ಲಿ ಭರತ್ ಅಜ್ಜಿಯ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿ ನಾಟಕದ ಜೀವಾಳವಾಗಿದ್ದಾನೆ. ನಟ ಭಯಂಕರ, ನಟ ರಾಕ್ಷಸ!!!! ತನ್ನ ಜೀವಂತಿಕೆಯಿಂದ ಮಿಕ್ಕೆಲ್ಲಾ ಪಾತ್ರಗಳನ್ನು ಬಡಿದು ಬಾಯಿಗೆ ಹಾಕ್ಕೊಂಡಿದ್ದಾನೆ. ವಿನಾ ವೆಂಕಟೇಶಂ ನನತೋ ನನಾತಃ ಅನ್ನುವ ಬದಲು ವಿನಾ ಭರತಂ ನನತೋ ನ ನಾಟಕಃ ಅನ್ನುವುದು ಸೂಕ್ತವೇನೋ. ಅಭಿನವ ಪಂಡರೀಬಾಯಿ ಆಸ್ಥಾನ ಕಲಾವಿದೆ ಲತಾ ಮೇಡಂ ಅವರು ಸೀತುನ ಶರೀರವನ್ನು ಆಗಾಗ ಕೆಡಿಸಿದ್ದರೂ ತಮ್ಮ ಅಭಿನಯವನ್ನು ಎಲ್ಲೂ ಕೆಡಿಸಲಿಲ್ಲ. ಸಿಂಚನ ಅಲಿಯಾಸ್ ಸೀತು ಹಿಂದಿ ಭಾಷೆಯಲ್ಲಿ ಪ್ರವೀಣೆ, ಸಂಗೀತ ಕಲಾನಿಧಿ ಪುರಂದರದಾಸರ ಕಾಲದ ಅಜ್ಜಿಯ ಮೊಮ್ಮಗಳು,…

Read More

08 ಫೆಬ್ರವರಿ 2023, ಮಂಗಳೂರು: “ಇಂದು ನಾವು ಇಬ್ಬರು ವ್ಯಕ್ತಿಗಳನ್ನಲ್ಲ, ಎಸ್.ವಿ.ಪಿ.ಯವರ ಎರಡು ತತ್ವಗಳಿಗೆ ಪ್ರಶಸ್ತಿ ನೀಡಿ ಪುರಸ್ಕರಿಸಿದ್ದೇವೆ” – ಡಾ. ಬಿ. ಎ. ವಿವೇಕ ರೈ. ಪ್ರೊ.ಎಸ್.ವಿ.ಪರಮೇಶ್ವರ ಭಟ್ಟ ಪ್ರತಿಷ್ಠಾನ ಮಂಗಳೂರು ಇದರ ಆಶ್ರಯದಲ್ಲಿ ಪ್ರೊ. ಎಸ್.ವಿ. ಪರಮೇಶ್ವರ ಭಟ್ಟ ಸಂಸ್ಮರಣ ಪ್ರಶಸ್ತಿ ಪ್ರದಾನ ಸಮಾರಂಭ 2023 ಸೈಂಟ್ ಅಲೋಶಿಯಸ್ ಕಾಲೇಜಿನ ಸಾನಿಧ್ಯ ಸಭಾ ಭವನದಲ್ಲಿ ಫೆ.8ರಂದು ಸಂಪನ್ನಗೊಂಡಿತು. ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಬಿ.ಎ.ವಿವೇಕ ರೈಯವರು ಅಧ್ಯಕ್ಷ ಸ್ಥಾನದಿಂದ ಮಾತನಾಡುತ್ತಾ ಇಂದು ನಾವು ಇಬ್ಬರು ವ್ಯಕ್ತಿಗಳನ್ನಲ್ಲ ಎಸ್.ವಿ.ಪಿ.ಯವರ ಎರಡು ತತ್ವಗಳನ್ನು ಪ್ರಶಸ್ತಿ ನೀಡಿ ಗೌರವಿಸಿದ್ದೇವೆ ಎಂದರು.”ಕರ್ನಾಟಕದಲ್ಲಿ ಬೌದ್ಧ ಸಂಸ್ಕೃತಿ” ಎಂಬ ಮಹಾ ಸಂಶೋಧನಾ ಗ್ರಂಥವನ್ನು ಬರೆದು ಬುದ್ಧನ ಅಹಿಂಸಾ ತತ್ವದ ಕಡೆ ಬೆಳಕು ಚೆಲ್ಲಿದ ತಾಳ್ತಜೆಯವರು ಒಂದು ಕಡೆ, ವಚನ ಸಾಹಿತ್ಯದ ಬಗ್ಗೆ ಸಾಕಷ್ಟು ಕೃಷಿ ಮಾಡಿ ಕಾಯಕ ತತ್ವದ ಕಡೆಗೆ ಒತ್ತು ಕೊಟ್ಟ ಡಾ.ಒ.ಎಲ್.ನಾಗಭೂಷಣ ಸ್ವಾಮಿ ಇನ್ನೊಂದು ಕಡೆ. ಬುದ್ಧ ತತ್ವ ಮತ್ತು ಬಸವ ತತ್ವ ಎರಡನ್ನೂ ಎಸ್.ವಿ. ಪಿ.ಯವರು…

Read More

09 ಫೆಬ್ರವರಿ 2023, ಬೆಂಗಳೂರು: ಇಂದಿನ ಗ್ರಾಮ ಬದುಕಿನ ವಿನ್ಯಾಸಗಳ ಬಗೆಗೆ ಹಲವರಲ್ಲಿ ಹಲವು ತರಹದ ವಾದಗಳಿವೆ. ಜಾಗತೀಕರಣ ಎನ್ನುವುದು ಹಳ್ಳಿಗಳ ಸ್ವರೂಪವನ್ನು ಸಂಪೂರ್ಣ ಬದಲಿಸಿಬಿಟ್ಟಿದೆ ಎಂದು ಕೆಲವರು ಪುರಾವೆಗಳನ್ನು ಒದಗಿಸುತ್ತಾರೆ. ನಗರದ ಐಷಾರಾಮದ ಬದುಕು ಹಳ್ಳಿಗರನ್ನು ಇನ್ನಿಲ್ಲದಂತೆ ಸೆಳೆದು ಅವರು ಕೃಷಿಯಿಂದ ವಿಮುಕ್ತರಾಗುತ್ತಿದ್ದಾರೆ ಎನ್ನುವ ಮಾತುಗಳೂ ಕೇಳಿಬರುತ್ತಿವೆ. ಹಳ್ಳಿಗರು ತಾವಾಗಿ ಉಳಿಯದೆ ನಗರದವರ ಬದುಕಿನ ಶೈಲಿಯನ್ನು ಹಳ್ಳಿಯಲ್ಲೇ ಅನುಕರಿಸಲು ಆರಂಭಿಸಿದ್ದಾರೆ ಎಂದು ಕೆಲವರು ದೂರುತ್ತಿರುವುದು ಕೇಳಿಬರುತ್ತಿದೆ. ಆದರೆ ಈ ವಾದಕ್ಕೆ ಪ್ರತಿವಾದ ಮಾಡುವ ಗುಂಪೂ ಇದೆ. ಅವರ ಪ್ರಕಾರ ಹಳ್ಳಿಯ ಬದುಕು ಎಂದಿನಂತೆಯೇ ಇದೆ. ನಗರದಲ್ಲಿ ವಾಸಿಸುವವರ ಮನೆಗೆ ಒಂದಷ್ಟು ಜನ ಬಂದುಬಿಟ್ಟರೆ ಅವರನ್ನು ಸಂಭಾಳಿಸುವುದು ಕಷ್ಟದ ಕೆಲಸವಾಗುತ್ತದೆ, ಆದರೆ ಹಳ್ಳಿ ಮಂದಿ ಇದನ್ನು ಸಮರ್ಥವಾಗಿ ನಿಭಾಯಿಸುತ್ತಾರೆ; ಹಾಗಾಗಿ ಅವರಲ್ಲಿ ನಿಜವಾದ ದೃಢತ್ವ ಇದೆ ಎನ್ನುವುದು ಅವರ ವಾದ. ಮೇಲಿನ ಎರಡೂ ವಾದಗಳಿಗೆ ಕಿವಿಗೊಡುವವರಿಗೆ ನಿಜದ ವಾಸ್ತವ ಇನ್ನೂ ನಿಲುಕಿಲ್ಲ. ಹಳ್ಳಿಗಳು ಎಂದರೆ ಇಂಗ್ಲಿಷ್ ತೊಡಕು ಇರುವ ಮಕ್ಕಳು, ಅವರ…

Read More

ಕಲೆ ನೀವು ನೋಡುವುದಲ್ಲ ಆದರೆ ಇತರರರು ಕಲೆಯನ್ನು ನೋಡುವಂತೆ ಮಾಡುವುದು ಎಂಬ ಒಂದು ಮಾತಿದೆ. ಅದೇ ರೀತಿ ಮಂಡಲ ಆರ್ಟ್ ನಲ್ಲಿ ಸತತ ಪರಿಶ್ರಮ, ತಾಳ್ಮೆ, ಆಸಕ್ತಿಯಿಂದ ಕಲಿತು ಇಂದು ಈ ಕಲೆಯಲ್ಲಿ ತನ್ನದೇ ಛಾಪು ಮೂಡಿಸುತ್ತಿರುವ ಓರ್ವ ಕಲಾವಿದೆ ರಾಧಿಕಾ ಮಕರಂದ ಬಾಯರಿ. ರಾಮಕೃಷ್ಣ ಹೆಬ್ಬಾರ್ ಮತ್ತು ಗೀತಾ ಇವರ ಮಗಳಾಗಿ 18.06.1994 ರಂದು ಜನನ. MSc (organic chemistry) ಇವರ ವಿದ್ಯಾಭ್ಯಾಸ. ಚಿಕ್ಕ ವಯಸ್ಸಿನಿಂದ ಆಸಕ್ತಿ ಇತ್ತು. ಲಾಕ್ ಡೌನ್ ಆಗಿದ್ದು, ಆಸಕ್ತಿ ಪೂರಕವಾಗಿ ಸಹಾಯವಾಯಿತು. ಯೂಟ್ಯೂಬ್ ಅಲ್ಲಿ “Goodness In You” ಎಂಬ ಆರ್ಟ್ ಚಾನೆಲ್ ನೋಡಿ ಅಭ್ಯಾಸ ಮಾಡಿ ಇಂದು ಒಳ್ಳೆಯ ಚಿತ್ರ ಕಲಾವಿದೆಯಾಗಿ ಬೆಳೆಯಲು ಸಾಧ್ಯವಾಯಿತು ಎಂದು ರಾಧಿಕಾ ಅವರು ಹೇಳುತ್ತಾರೆ. ಡಾಟ್ ಮಂಡಲ ಆರ್ಟ್ ಇವರ ನೆಚ್ಚಿನ ಚಿತ್ರಕಲೆ.ಡೆಮಿ ಡೇವಿಡ್ಸನ್, ನೈರೋಬಿ, ಪ್ರಸುನ್ ಬಾಲಸುಬ್ರಮಣ್ಯಂ (Mandala Artist) ನೆಚ್ಚಿನ ಚಿತ್ರಕಲಾಕಾರರು. ಒಂದು ಡಾಟ್ ಮಂಡಲ ಆರ್ಟ್ ಮಾಡಲು 6 ರಿಂದ 8 ದಿನ…

Read More

MANGALURU; FEB 07: As many as 9 achievers and an institution were presented with the prestigious State Level ‘Sandesha Awards’ 2023 in recognition of their achievements in different fields at the grand award ceremony held at the Sandesha Foundation for Culture and Education premises in Bajjodi, Mangalore on the evening of  Tuesday,  February 07, 2023. Most Rev. Dr Henry D’Souza, Chairman, Sandesha Institute and Bishop of Ballary Diocese presided over the programme. DrM Mohan Alva, Chairman, Alva’s Educational Institutions, Moodbidre was the chief guest. Most Rev. Dr Peter Paul Saldanha, Bishop of Mangalore and Most Rev. Dr Gerald Isaac Lobo,…

Read More

ಪ್ರತಿ ತಿಂಗಳೂ 2 ದಿನಗಳ ರಂಗ ತರಬೇತಿ ಸರಣಿ ಶಿಬಿರ – ಪೆಬ್ರವರಿ18 ಮತ್ತು 19ರಂದು ರಾಜ್ಯದ ಹೆಸರಾಂತ ನಟ,ನೀನಾಸಂ ಪದವೀಧರ ಶ್ರೀ ವಿನೀತ್ ಕುಮಾರ ನಿರ್ದೇಶನದಲ್ಲಿ…… 08 ಫೆಬ್ರವರಿ 2023: “ರಂಗಭೂಮಿ ಕ್ಷೇತ್ರಕ್ಕೆ ಇನ್ನಷ್ಟು ಹೊಸಬರು ಬರುವಂತಾಗಬೇಕು. ಹಾಗೆಯೇ ಕಲೆಯಲ್ಲಿ ಆಸಕ್ತಿ ಇದ್ದು, ಉತ್ತಮ ಕಲಾವಿದರಾಗಲು ಇಚ್ಚಿಸುವವರು, ಮುಂದೆ ಕಲೆಯಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸುವಂತಾಗಲು ಬೆಳಕಿನ ಹಾಗೂ ಸಾಧ್ಯತೆಯ ರಹದಾರಿ ಈ ಶಿಬಿರಗಳು ಆಗಬೇಕು. ಒಟ್ಟು ರಂಗಭೂಮಿ ಬೆಳೆಯಬೇಕು ಎಂಬ ಮಹತ್ವದ ಸಂಕಲ್ಪದೊಂದಿಗೆ ರಂಗಭೂಮಿ (ರಿ.) ಉಡುಪಿ 2021ರ ಅಕ್ಟೋಬರ್ ನಿಂದ ಪ್ರತೀ ತಿಂಗಳು ಎರಡು ದಿನಗಳ ರಂಗತರಬೇತಿ ಕಾರ್ಯಾಗಾರವನ್ನು ನಡೆಸುತ್ತಿರುವುದು ತಮಗೆ ಈಗಾಗಲೇ ತಿಳಿದ ವಿಚಾರವೇ.” ಈ ತರಬೇತಿ ಸರಣಿಯ ಕಾರ್ಯಾಗಾರವು ‌ ಶ್ರೀ ಮಂಡ್ಯ ರಮೇಶ್ ಹಾಗೂ ಶ್ರೀ ಮಂಜುನಾಥ ಎಲ್. ಬಡಿಗೇರ್ ಮತ್ತು ಶ್ರೀ ಹುಲುಗಪ್ಪ ಕಟ್ಟಿಮನಿ, ಶ್ರೀ ಉಮೇಶ್ ಸಾಲಿಯಾನ್, ಶ್ರೀ ಪ್ರಶಾಂತ್ ಉದ್ಯಾವರ , ಶ್ರೀ ಭುವನ್ ಮಣಿಪಾಲ, ಶ್ರೀ ಚೇತನ್…

Read More

ಸರಳ ಸುಂದರತೆಯಿಂದ ಸಮೃದ್ಧಿಗೊಂಡ ರಜತ ಸಮ್ಮೇಳನ 05 ಫೆಬ್ರವರಿ 2023, ಉಜಿರೆ: ದಕ ಕಸಾಪದ 25ನೇಯ ಕನ್ನಡ ಸಾಹಿತ್ಯ ಸಮ್ಮೇಳನ ಉಜಿರೆಯಲ್ಲಿ ಡಾ. ಹೇಮಾವತಿ ವೀ. ಹೆಗ್ಗಡೆಯವರ ಸರ್ವಧ್ಯಕ್ಷತೆಯಲ್ಲಿ ಇದೀಗ ಸಂಪನ್ನಗೊಂಡಿದೆ. ಇದೊಂದು ದಕ ಕಸಾಪಕ್ಕೆ ನಿಜಕ್ಕೂ ಹೆಮ್ಮೆಯ ಕ್ಷಣ, ಇದನ್ನು ಸಾರ್ಥಕಗೊಳಿಸುವ ನಿಟ್ಟಿನಲ್ಲಿ ಕಳೆದೊಂದು ವರ್ಷದಿಂದ ದಕ ಕಸಾಪದ ಅಧ್ಯಕ್ಷರಾಗಿರುವ ಡಾ. ಎಂ ಪಿ ಶ್ರೀನಾಥ್ ಮತ್ತು ಅವರ ತಂಡ ಪಟ್ಟ ಪ್ರಾಮಾಣಿಕ ಪ್ರಯತ್ನಕ್ಕೆ ಮೊತ್ತ ಮೊದಲು ಅಭಿನಂದನೆಗಳು. ದಕ ಕಸಾಪ ಕಳೆದೊಂದು ವರ್ಷದಿಂದ ಒಂದಿಷ್ಟು ಹೊಸ ಚಿಂತನೆಗಳೊಂದಿಗೆ ಬಹುತೇಕ ಎಲ್ಲರನ್ನೂ ಒಳಗೊಳ್ಳುವ ದೃಷ್ಟಿಯಿಂದ ಹೆಜ್ಜೆ ಹಾಕಲು ಆರಂಭ ಮಾಡಿದ್ದೆ ಒಂದು ಆಶಾದಾಯಕ ಬೆಳವಣಿಗೆ. ಈ ಹಿನ್ನೆಲೆಯಲ್ಲಿ ಈ ಬಾರಿಯ ಉಜಿರೆಯ ರಜತ ಸಮ್ಮೇಳನದ ಬಗ್ಗೆ ಸಹಜವಾಗಿಯೇ ಅನೇಕ ನಿರೀಕ್ಷೆಗಳಿದ್ಥವು. ಅವುಗಳನ್ನೆಲ್ಲ ಹೆಚ್ಚು ಕಡಿಮೆ ಪೊರೈಸಿ ಒಂದು ಯಶಸ್ವೀ ದಾಖಲೆ ಬರೆದ ಕೀರ್ತಿಯೂ ಈ ಸಮ್ಮೇಳನಕ್ಕೆ ಖಂಡಿತ ಲಭಿಸಿದೆ ಒಂದಿಷ್ಟು ಪ್ರೇಕ್ಷಕರ ಕೊರತೆಯ ನಡುವೆ. ಒಂದು ಸಮ್ಮೇಳನ ಸಂಪೂರ್ಣ ಸಫಲ…

Read More

ಜಿಲ್ಲೆಯ ಪ್ರತಿಭೆಗಳನ್ನು ಕಂಡು ಅಚ್ಚರಿ ಅನಿಸಿದೆ – ಸುಮತಿ ಕೃಷ್ಣನ್ ಮಂಗಳೂರು, ಫೆಬ್ರವರಿ 05: ಮಣಿ ಕೃಷ್ಣಸ್ವಾಮಿ ಅಕಾಡೆಮಿ ಮತ್ತು ನಾಗರಿಕ ಸಲಹಾ ಸಮಿತಿಯು ಆಯೋಜಿಸಿದ 40ನೇ ಉದಯರಾಗ ಸಂಗೀತ ಕಛೇರಿ ಸಂದರ್ಭ ಮುಖ್ಯ ಅತಿಥಿಗಳಾಗಿ ಆಗಮಿಸಿದ ಚೆನ್ನೈನ ಮ್ಯೂಸಿಕ್ ಅಕಾಡೆಮಿ ಕಾರ್ಯದರ್ಶಿ ಸುಮತಿ ಕೃಷ್ಣನ್ ಅವರು ಅರ್ಚನಾ ಹಾಗೂ ಸಮನ್ವಿಯವರ ಸಂಗೀತ ಕಛೇರಿ ಆಲಿಸಿದ ಬಳಿಕ ಇಂತಹ ಪ್ರತಿಭೆಗಳು ಕರ್ನಾಟಕ ಕರಾವಳಿ ಪ್ರದೇಶದಲ್ಲಿ ಅರಳುತ್ತಿರುವುದನ್ನು ಕಂಡು ನನಗೆ ಅಚ್ಚರಿ ಅನಿಸಿದೆ ಎಂದು ಹೇಳಿ ಯುವ ಕಲಾವಿದರಿಗೆ ಶುಭ ಹಾರೈಸಿದರು. ಸಂಗೀತ ಕಛೇರಿಗೆ ಪೃಥ್ವಿ ಭಾಸ್ಕರ್ ವಯಲಿನ್ ನಲ್ಲಿ, ನಿಕ್ಷಿತ್ ಪುತ್ತೂರು ಮೃದಂಗದಲ್ಲಿ ಮತ್ತು ರಾಧಿಕಾ ಶಂಕರ್ ತಂಬೂರಿಯಲ್ಲಿ ಸಹಕರಿಸಿದರು. ನಾಗರಿಕ ಸಲಹಾ ಸಮಿತಿಯ ಅಧ್ಯಕ್ಷರಾದ ಡಾ ಕೆ ರಾಜ್ ಮೋಹನ್ ರಾವ್ 40 ಉದಯರಾಗಗಳನ್ನು ಐದು ವರ್ಷಗಳಲ್ಲಿ ಪೂರೈಸಿದ ಸಾಧನಾ ಪಥವನ್ನು ವಿವರಿಸಿದರು. 70ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿರುವ ಅಕಾಡೆಮಿಯ ಕಾರ್ಯದರ್ಶಿ, ಪಿ ನಿತ್ಯಾನಂದ ರಾವ್ ಕಳೆದ ಮೂರು ದಶಕಗಳಲ್ಲಿ…

Read More

“ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ ಇಲ್ಲೇ ಇರುವ ಪ್ರೀತಿ ಸ್ನೇಹಗಳ ಗುರುತಿಸದಾದೆನು ನಮ್ಮೊಳಗೆ” –  ರಾಷ್ಟ್ರಕವಿ ಡಾ. ಜಿ. ಎಸ್. ಶಿವರುದ್ರಪ್ಪ ಕನ್ನಡವನ್ನು ಬೌಧಿಕವಾಗಿ ಮತ್ತೊಂದು ಶಿಖರಕ್ಕೆ ಏರಿಸಿ ನವೋದಯ ಸಾಹಿತ್ಯಕ್ಕೆ ಸಾಮಗಾನ ಹಾಡಿದ, ದೇಶ ಕಂಡ ಅಪರೂಪದ ಸಾಹಿತಿ ಡಾ. ಜಿ. ಎಸ್. ಶಿವರುದ್ರಪ್ಪನವರು. ಶಿವರುದ್ರಪ್ಪ ಅವರು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಫೆಬ್ರವರಿ 7, 1926ರಂದು ಗುಗ್ಗುರಿ ಶಾಂತ ವೀರಪ್ಪ ಮತ್ತು ವೀರಮ್ಮನವರ ಪುತ್ರನಾಗಿ ಜನಿಸಿದರು. ಮಾಧ್ಯಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದ ತಂದೆ ಶಾಂತ ವೀರಪ್ಪನವರಿಂದ ಸಾಹಿತ್ಯದ ಗೀಳು ಹತ್ತಿಸಿಕೊಂಡ ಇವರು ಬಾಲ್ಯದಲ್ಲಿಯೇ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು ಅಧ್ಯಯನ ಮತ್ತು ಸಾಹಿತ್ಯದಲ್ಲಿ ಬಹಳ ಆಸಕ್ತಿ ಹೊಂದಿದ್ದರು. ಶಾಲಾ ಉಪಾಧ್ಯಾಯರ ಮಗನಾದ ಜಿ. ಎಸ್. ಎಸ್. (ಗುಗ್ಗರಿ ಶಾಂತ ವೀರಪ್ಪ ಶಿವರುದ್ರಪ್ಪ) ಅವರು ಎಸ್.ಎಸ್.ಎಲ್.ಸಿ. ಮುಗಿಯುತ್ತಿದ್ದಂತೆ ಬಡತನದಿಂದಾಗಿ ಸರಕಾರಿ ನೌಕರಿ ಹಿಡಿದು ದುಡಿಯಲಾರಂಭಿಸಿದರು. ಗುಬ್ಬಿ ತಾಲೂಕು ಕಛೇರಿಯಲ್ಲಿ ಗುಮಾಸ್ತರಾಗಿ ಸೇರಿದರು. ಆದರೆ ಓದಲೇ ಬೇಕೆಂಬ ಅದಮ್ಯ ಆಸೆಯಿಂದ ಕೆಲಸಕ್ಕೆ ವಿದಾಯ…

Read More

ಮಂಗಳೂರು, ಫೆಬ್ರವರಿ 21: ಅಪರೂಪವೆನಿಸುವ, ಸುಂದರ, ಮನೋಹರ ಕ್ಷಣಗಳಿಗೆ ಸಾಕ್ಷಿಯಾಯ್ತು ಮಂಗಳೂರಿನ ಡಾನ್ ಬೋಸ್ಕೋ ಸಭಾಂಗಣ ಕಳೆದ ಜನವರಿ ೨೧ರಂದು. ಮಂಗಳೂರಿನ ಪ್ರಸಿದ್ಧ ಗಾನ ನೃತ್ಯ ಅಕಾಡೆಮಿಯ ನಿರ್ದೇಶಕಿಯಾದ ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ ಅವರ ಶಿಷ್ಯೆಯರಿಂದ ನಡೆದ ನೃತ್ಯ ಪ್ರದರ್ಶನ ನಿಜಕ್ಕೂ ಚೇತೋಹಾರಿಯಾಗಿತ್ತು.ಮೊದಲಿಗೆ ನೃತ್ಯವನ್ನು ಪ್ರಸ್ತುತ ಪಡಿಸಿದವರು ಸಂಸ್ಥೆಯ ಈಗತಾನೇ ಬಿರಿಯಲನುವಾಗುತ್ತಿರುವ ಮೊಗ್ಗುಗಳಿಂತಿರುವ ಮುಕುಳ ತಂಡದವರು. ೧೦ ಸದಸ್ಯರ ಈ ತಂಡ ಮೊದಲಿಗೆ ಗಣಪತಿ ಕವಿತ್ವವನ್ನು ಪ್ರಸ್ತುತ ಪಡಿಸಿದರು. ಇದು ಗಣಪತಿಯ ತತ್ವವನ್ನು ಸಾರುವ ನೃತ್ಯ. ಎರಡನೆಯ ಪ್ರಸ್ತುತಿಯಾಗಿ ನಟರಾಜನನ್ನು ಸ್ತುತಿಸುವ ನಟೇಶ ಕೌತ್ವ ಸುಂದರವಾಗಿ ಮೂಡಿ ಬಂದಿತು. ಮೂರನೆಯದು ಹರಿ ಹರಿ ರಾಮ ಎಂಬ ಭಜನ್. ಭದ್ರಾಚಲ ರಾಮದಾಸರ ಈ ರಚನೆಯಲ್ಲಿ ಸಂಕ್ಷಿಪ್ತವಾಗಿ ರಾಮನ ಕಥೆಯನ್ನು, ವಿಶೇಷವಾಗಿ ಶಬರಿಯ ಕಥೆಯನ್ನು ನಿರೂಪಿಸಲಾಯಿತು. ಮುಕುಳ ತಂಡದ ಕೊನೆಯ ಪ್ರಸ್ತುತಿಯಾಗಿ ಪುರಂದರ ದಾಸರ ಆಡ ಹೋದಲ್ಲೆ ಮಕ್ಕಳು ಆಡಿಕೊಂಬರು ನೋಡಮ್ಮ ಎಂಬ ದೇವರ ನಾಮದಲ್ಲಿ ಕೃಷ್ಣನ ತುಂಟಾಟಗಳನ್ನು ಅತೀ ಸುಂದರವಾಗಿ ಪ್ರದರ್ಶಿಸಲಾಯಿತು. ಎರಡನೆಯ…

Read More