Author: roovari

ಉಡುಪಿ : ಯಕ್ಷಗಾನ ಕಲಾರಂಗವು ಸಹೃದಯಿ ಕಲಾ ಪೋಷಕ ಮಟ್ಟಿ ಮುರಲೀಧರ ರಾವ್ ಮತ್ತು ಅರ್ಥಧಾರಿ ಪಂಡಿತ ಪೆರ್ಲ ಕೃಷ್ಣ ಭಟ್ ನೆನಪಿನಲ್ಲಿ ನೀಡುವ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ಗೆ ಅರ್ಥಧಾರಿ, ಹವ್ಯಾಸಿ ಕಲಾವಿದ, ಪ್ರಸಂಗಕರ್ತ, ಪ್ರವಚನಕಾರ ಸೇರಾಜೆ ಸೀತಾರಾಮ ಭಟ್ಟ ಹಾಗೂ ಅನುಕ್ರಮವಾಗಿ ಅರ್ಥಧಾರಿ, ಹವ್ಯಾಸಿ ವೇಷಧಾರಿ ಜಬ್ಬಾರ ಸಮೊ ಆಯ್ಕೆಯಾಗಿದ್ದಾರೆ. ದಿನಾಂಕ 23-06-2024ರ ಭಾನುವಾರದಂದು ಅಪರಾಹ್ನ 3-00 ಗಂಟೆಗೆ ಸಂಸ್ಥೆಯ ನೂತನ ಕಟ್ಟಡ ಇನ್ಫೋಸಿಸ್ ಫೌಂಡೇಶನ್ ಯಕ್ಷಗಾನ ಡೆವಲಪ್‌ಮೆಂಟ್, ಟ್ರೈನಿಂಗ್ ಅಂಡ್ ರಿಸರ್ಚ್ ಸೆಂಟರಿನಲ್ಲಿ ಪ್ರಶಸ್ತಿ ಪ್ರದಾನ ಮತ್ತು ತಾಳಮದ್ದಲೆ ಜರಗಲಿದೆ ಎಂಬುವುದಾಗಿ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತಿಳಿಸಿದ್ದಾರೆ. ಪ್ರಶಸ್ತಿಯು ರೂ.20,000/- ನಗದು ಪುರಸ್ಕಾರ ಮತ್ತು ಪ್ರಶಸ್ತಿ ಫಲಕಗಳನ್ನೊಳಗೊಂಡಿರುತ್ತದೆ.

Read More

ಉಡುಪಿ : ಯಕ್ಷ ರಂಗಾಯಣ ಕಾರ್ಕಳ ವತಿಯಿಂದ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ‘ಅಭಿನಯ ಕಲೆಯಿಂದ ಕೌಶಲ್ಯ ಅಭಿವೃದ್ಧಿ’ ಒಂದು ದಿನದ ರಂಗ ತರಬೇತಿ ಶಿಬಿರವು ಉಡುಪಿಯ ಅಜ್ಜರಕಾಡು ಡಾ. ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪಿ.ಜಿ.ಎ.ವಿ. ಸಭಾಂಗಣದಲ್ಲಿ ದಿನಾಂಕ 05-06-2024ರಂದು ನಡೆಯಿತು. ಈ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ. ಜಿ. ಶಂಕ‌ರ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಭಾಸ್ಕರ್ ಶೆಟ್ಟಿ ಎಸ್. “ರಂಗ ಅಭಿನಯ, ಅಭಿನಯ ಕಲೆ, ರಂಗ ಕೌಶಲ್ಯಗಳಿಗೆ ನಿಕಟವಾದ ಸಂಬಂಧವಿದ್ದು, ಜಾಗತೀಕರಣ ಮತ್ತು ಜಾಗತೀಕರಣೋತ್ತರ ಸಂದರ್ಭ ಪ್ರಪಂಚದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಕೌಶಲ್ಯಗಳಿಗೆ ಪ್ರಾಶಸ್ತ್ಯ ಸಿಗುತ್ತಿದೆ. ಕಲಿಕೆ ನಿಂತ ನೀರಾಗಬಾರದು, ನಿರಂತರವಾಗಿದ್ದರೆ ಮಾತ್ರ ಕೌಶಲ್ಯವನ್ನು ಗಳಿಸಲು ಸಾಧ್ಯ. ನಮ್ಮ ಬದುಕಿನ ವಿವಿಧ ಸ್ತರಗಳಲ್ಲಿ ಅರ್ಥಗರ್ಭಿತ ಜೀವನ ಕಟ್ಟಿಕೊಳ್ಳಲು ರಂಗ ತರಬೇತಿ ಶಿಬಿರಗಳು ಉಪಯುಕ್ತವಾಗಿವೆ. ಅಂತಹ ಕೌಶಲ್ಯವನ್ನು ಬೆಳೆಸಿಕೊಂಡು ಸುಂದರ ಬದುಕು ಕಟ್ಟಿಕೊಳ್ಳಿ”…

Read More

ಕುಂದಾಪುರ : ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ ಐರೋಡಿ ಇವರ ವತಿಯಿಂದ ‘ನೆನಪಿನಂಗಳದಲ್ಲಿ ನಾವುಡರು ಧಾರೇಶ್ವರರ ನುಡಿನಮನ’ ಕಾರ್ಯಕ್ರಮವು ದಿನಾಂಕ 17-06-2024ರಂದು ಅಪರಾಹ್ನ 3-00 ಗಂಟೆಗೆ ಸಾಲಿಗ್ರಾಮದ ಗುಂಡ್ಮಿಯ ಸದಾನಂದ ರಂಗ ಮಂಟಪದಲ್ಲಿ ನಡೆಯಲಿದೆ. ಯಕ್ಷಗಾನ ಅಕಾಡೆಮಿ ಬೆಂಗಳೂರು ಇದರ ಅಧ್ಯಕ್ಷರಾದ ಡಾ. ತಾಲ್ಲೂರು ಶಿವರಾಮ್ ಶೆಟ್ಟಿ ಇವರು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಲಿರುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ ಇದರ ಅಧ್ಯಕ್ಷರಾದ ಆನಂದ ಸಿ. ಕುಂದರ್ ಇವರು ವಹಿಸಲಿರುವರು. ಇದೇ ಸಂದರ್ಭದಲ್ಲಿ ಮಲೆನಾಡಿನ ಕೋಗಿಲೆ ಪ್ರಸಿದ್ಧ ಬಡಗು ತಿಟ್ಟಿನ ಭಾಗವತರಾದ ಶಿವಶಂಕರ್ ಭಟ್ ಹರಿಹರಪುರ ಇವರನ್ನು ಸನ್ಮಾನಿಲಾಗುವುದು. ಪ್ರಸಂಗಕರ್ತರು ಹಾಗೂ ಸಾಹಿತಿಯಾದ ಡಾ. ಬಸವರಾಜ್ ಶೆಟ್ಟಿಗಾರ್ ಕೋಟೇಶ್ವರ ಇವರು ಅಭಿನಂದನಾ ನುಡಿಗಳನ್ನಾಡುವರು. ಶ್ರೀ ಮಹಿಷಮರ್ಧಿನೀ ಯಕ್ಷ ಕಲಾ ಪ್ರತಿಷ್ಠಾನದ ಕಲಾವಿದರಿಂದ ಅಜ್ಞಾತ ಕವಿ ವಿರಚಿತ ‘ಗದಾಯುದ್ಧ’ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.

Read More

ಮಂಗಳೂರು. ಸಾಹಿತಿ, ವಿದ್ವಾನ್ ರಮಾನಾಥ ಕೋಟೆಕಾರು ಅಲ್ಪ ಕಾಲದ ಅಸೌಖ್ಯದಿಂದಾಗಿ ದಿನಾಂಕ 11-06-2024ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಇವರಿಗೆ 67ವರ್ಷ ವಯಸ್ಸಾಗಿತ್ತು. ಸೋಮೇಶ್ವರ ಕೊಲ್ಯದ ಬ್ರಹ್ಮಶ್ರೀ ನಾರಾಯಣ ಗುರು ಧ್ಯಾನ ಮಂದಿರದ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಇವರು ಬ್ರಹ್ಮಶ್ರೀ ನಾರಾಯಣ ಗುರು ಧರ್ಮಶಿಕ್ಷಣ ಕೇಂದ್ರದ ಮಾರ್ಗದರ್ಶಕರಾಗಿದ್ದರು. ಶ್ರೀ ಗೋಕರ್ಣನಾಥೇಶ್ವರ ಬ್ಯಾಂಕ್ ಇದರ ನಿರ್ದೇಶಕರಾಗಿ ಹಾಗೂ ಮಂಗಳೂರಿನ ಮಣ್ಣಗುಡ್ಡೆಯಲ್ಲಿರುವ ಶ್ರೀ ಸತ್ಯಸಾಯಿ ಸೇವಾ ಕೇಂದ್ರದಲ್ಲಿಯೂ ಸೇವೆ ಸಲ್ಲಿಸಿದ್ದರು. ಬಿಲ್ಲವ ಸಮಾಜ ಟ್ರಸ್ಟ್ ಇದರ ಟ್ರಸ್ಟಿಯಾಗಿ, ಜಾನಪದ ಸಂಶೋಧಕರಾಗಿ, ಪರಿಣಿತ ಹಾರ್ಮೋನಿಯಂ ವಾದಕರಾಗಿ, ಖಚಿತ ಜ್ಞಾನದ ಭಜನಾಪಟುವಾಗಿ, ಸಾಹಿತಿಯಾಗಿ, ಶಾಸ್ತ್ರೀಯ ಸಂಗೀತದಲ್ಲಿ ವಿದ್ವತ್ ಪದವಿ ಪಡೆದಿದ್ದರು. ಹಲವಾರು ಪುಸ್ತಕ ಗಳನ್ನು ರಚಿಸಿದ್ದ ಇವರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕೋಟೆಕಾರ್ ಬೀರಿ ಇದರ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಮಂಗಳೂರಿನ ಹಂಪನ್ ಕಟ್ಟೆಯಲ್ಲಿ ದಶಕಗಳ ಕಾಲದ ಹಿಂದೆ ಸುದರ್ಶನ್ ಫ್ರೇಮ್ ವರ್ಕ್ಸ್ ಹಾಗೂ ಕೆಲವು ವರ್ಷಗಳ ಹಿಂದೆ ಕೊಡಿಯಲ್ ಬೈಲ್ ನಲ್ಲಿ…

Read More

ಮಂಗಳೂರು : ಆರ್ಟ್ ಕೆನರಾ ಟ್ರಸ್ಟ್ ಮಂಗಳೂರು, ಕವಿತಾ ಕುಟೀರ ಪೆರಡಾಲ ಮತ್ತು ಕಾಸರಗೋಡಿನ ಪೆರಡಾಲದ ನವಜೀವನ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿಗಳ ಸಹಯೋಗದಲ್ಲಿ ಖ್ಯಾತ ಸಾಹಿತಿ, ದಿವಂಗತ ನಾಡೋಜ ಕಯ್ಯಾರ ಕಿಞ್ಞಣ್ಣ ರೈ ಅವರ ಜನ್ಮ ದಿನಾಚರಣೆಯನ್ನು ದಿನಾಂಕ 08-06-2024ರಂದು ಕೊಡಿಯಾಲಗುತ್ತು ಕಲೆ ಮತ್ತು ಸಂಸ್ಕೃತಿ ಕೇಂದ್ರದಲ್ಲಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ನ್ಯಾಯವಾದಿ ಕಳ್ಳಿಗೆ ತಾರಾನಾಥ ಶೆಟ್ಟಿ, ನಿಟ್ಟೆ ಡೀಮ್ಡ್ ವಿಶ್ವವಿದ್ಯಾನಿಲಯದ ಮಾನವಿಕ ವಿಭಾಗದ ಮುಖ್ಯಸ್ಥೆ ಡಾ. ಸಾಯಿಗೀತಾ ಹೆಗ್ಡೆ, ಕವಿತಾ ಕುಟೀರದ ಅಧ್ಯಕ್ಷ ದುರ್ಗಾಪ್ರಸಾದ್ ರೈ, ಆರ್ಟ್ ಕೆನರಾ ಟ್ರಸ್ಟಿನ ಅಧ್ಯಕ್ಷ ಸುಭಾಸ್‌ಚಂದ್ರ ಬಸು, ನವಜೀವನ ಪ್ರೌಢಶಾಲೆಯ ದಿವಂಗತ ಕವಿಯ ಹಲವಾರು ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು. ಕವಿ ಹಾಗೂ ಮಂಗಳೂರು ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿ ಎನ್. ಸುಬ್ರಾಯ ಭಟ್ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು. ಕಲಾವಿದ ಸೈಯದ್ ಆಸಿಫ್ ಅಲಿ ಅವರು ರಚಿಸಿದ ದಿವಂಗತ ಕವಿಯ ಆಯಿಲ್ ಆನ್ ಕ್ಯಾನ್ವಾಸ್ ಭಾವಚಿತ್ರವು ವೇದಿಕೆಯನ್ನು ಅಲಂಕರಿಸಿತು. ಕಯ್ಯಾರ ಕಿಞ್ಞಣ್ಣ ರೈ ಅವರ ಪುತ್ರ…

Read More

ಕಾಸರಗೋಡು : ಕಾಸರಗೋಡಿನ ಖ್ಯಾತ ಸಾಹಿತ್ಯಿಕ ಸಾಂಸ್ಕೃತಿಕ ಸಂಸ್ಥೆಯಾದ ರಂಗ ಚಿನ್ನಾರಿಯ ಮಹಿಳಾ ಘಟಕ ನಾರಿ ಚಿನ್ನಾರಿ ಏರ್ಪಡಿಸಿದ ‘ಗೆಜ್ಜೆ ತರಂಗ’ ಕಾರ್ಯಕ್ರಮವು ದಿನಾಂಕ 09-06-2024ರಂದು ಕಾಸರಗೋಡಿನ ಕರಂದಕ್ಕಾಡು ಪದ್ಮಗಿರಿ ಕಲಾ ಕುಟೀರದಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ಖ್ಯಾತ ನೃತ್ಯ ಗುರುಗಳಾದ ವಿದುಷಿ ವಿದ್ಯಾಲಕ್ಷ್ಮೀ ಕುಂಬಳೆ “ಶಾಸ್ತ್ರೀಯ ನೃತ್ಯವನ್ನು ಕಲಿಯುವುದರಿಂದ ಮಾನಸಿಕವಾಗಿ ದೈಹಿಕವಾಗಿ ಅದು ನಮ್ಮನ್ನು ಗಟ್ಟಿ ಗೊಳಿಸುತ್ತದೆ. ತಪಸ್ಸು ಮಾಡಿದಂತೆ ನಿರಂತರ ಅಭ್ಯಾಸದಿಂದ ಮಾತ್ರ ಅದನ್ನು ಒಲಿಸಿಕೊಳ್ಳಬಹುದು. ಮಕ್ಕಳಲ್ಲಿ ಸುಪ್ತವಾಗಿರುವ ಪ್ರತಿಭೆಗಳಿಗೆ ಸೂಕ್ತ ವೇದಿಕೆಗಳೇ ಇಲ್ಲದ ಕಾಲಘಟ್ಟದಲ್ಲಿ ರಂಗ ಚಿನ್ನಾರಿ ಏರ್ಪಡಿಸುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮಗಳು ಇನ್ನೊಬ್ಬರಿಗೆ ಅನುಕರಣೀಯ” ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಮಾತನಾಡಿದ ನೃತ್ಯ ಗುರುಗಳಾದ ನಟನ ತಿಲಕಂ ಸುರೇಂದ್ರನ್ ಪಟ್ಟೇನ್ ಇವರು “ಸಾವಿರಾರು ವಿದ್ಯಾರ್ಥಿಗಳು ಶಾಸ್ತ್ರೀಯ ನೃತ್ಯವನ್ನು ಕಲಿಯುತ್ತಿದ್ದರೂ ಅದು ಕೇವಲ ಸ್ಪರ್ಧೆಗೆ ಮಾತ್ರ ಸೀಮಿತಗೊಳ್ಳಲಾರದು. ಕಲೆ ಯಾವತ್ತೂ ಕೈ ಬಿಡೋದಿಲ್ಲ” ಎಂದರು. ನಾರಿ ಚಿನ್ನಾರಿಯ ಅಧ್ಯಕ್ಷರಾದ ಶ್ರೀಮತಿ ಸವಿತಾ ಐ. ಭಟ್ ಇವರು…

Read More

ಸುರತ್ಕಲ್ : ಸುರತ್ಕಲ್ಲಿನ ನಾಟ್ಯಾಂಜಲಿ ಅಕಾಡೆಮಿ ಸಂಸ್ಥೆಯು ಹಮ್ಮಿಕೊಂಡ ‘ನೃತ್ಯ ಉಪಯುಕ್ತ ಕಾರ್ಯಾಗಾರ’ವು ದಿನಾಂಕ 08-06-2024 ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಗ್ರಾಮಾಂತರ ಪ್ರದೇಶವಾದ ಚೇಳಾಯ್ರು ಖಂಡಿಗೆಯ ನಾಟ್ಯಾಂಜಲಿ ಮಂದಿರದಲ್ಲಿ ನಡೆಯಿತು. ಕರ್ನಾಟಕ ಕಲಾಶ್ರೀ ವಿದುಷಿ ರಾಜಶ್ರೀ ಉಳ್ಳಾಲ್ ಉದ್ಘಾಟಿಸಿದ ಭರತನಾಟ್ಯ ವಿದ್ವತ್ ಹಂತದ ನೃತ್ಯ ಉಪಯುಕ್ತ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ವಿದುಷಿ ಸುಮಂಗಲಾ ರತ್ನಾಕರ್ ಭಾಗವಹಿಸಿದರು. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ವಿದ್ವತ್ ಹಂತದ ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದುಕೊಂಡರು. ಸಂಸ್ಥೆಯ ನಿರ್ದೇಶಕ ಕರ್ನಾಟಕ ಕಲಾಶ್ರೀ ವಿದ್ವಾನ್ ಕೆ. ಚಂದ್ರಶೇಖರ ನಾವಡ ಸ್ವಾಗತಿಸಿ, ವಂದಿಸಿದರು.

Read More

ಉಡುಪಿ : ರಂಗಭೂಮಿ (ರಿ.) ಉಡುಪಿ ಇದರ ವತಿಯಿಂದ ದಿವಂಗತ ಕುತ್ಪಾಡಿ ಆನಂದ ಗಾಣಿಗರ ಸ್ಮರಣಾರ್ಥ ರಂಗಭೂಮಿ ‘ಆನಂದೋತ್ಸವ -2024’ ಕಲಾ ಸಾಧನೆಯ ಜೀವನಕ್ಕೆ ನಲ್ಮೆಯ ನಮನ ಕಾರ್ಯಕ್ರಮವನ್ನು ದಿನಾಂಕ 16-06-2024ರಂದು ಸಂಜೆ 5.45ಕ್ಕೆ ಉಡುಪಿಯ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಧಾರ್ಮಿಕ, ಶೈಕ್ಷಣಿಕ, ಕಲೆ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಅಭೂತಪೂರ್ವ ಸೇವೆ ಸಲ್ಲಿಸಿದ ಕೋಟದ ಗೀತಾನಂದ ಪ್ರತಿಷ್ಠಾನದ ಪ್ರವರ್ತಕರಾದ ಶ್ರೀ ಆನಂದ ಸಿ. ಕುಂದರ್ ಇವರಿಗೆ ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ (ರಿ.) ಪ್ರಾಯೋಜಿತ ‘ಸಂಸ್ಕೃತಿ ಸಾಧಕ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಅಂಬಲಪಾಡಿ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಇದರ ಪ್ರವರ್ತಕರಾದ ನಾಡೋಜ ಡಾ. ಜಿ. ಶಂಕರ್ ಇವರು ಈ ಸಮಾರಂಭದ ಅಧ್ಯಕ್ಷತೆ ವಹಿಸಿ ಉದ್ಘಾಟನೆ ಮಾಡಲಿರುವರು. ಸಭಾ ಕಾರ್ಯಕ್ರಮದ ಬಳಿಕ ನಡೆಯಲಿರುವ ನಾಟಕೋತ್ಸವದಲ್ಲಿ ಶ್ರೀ ಶಶಿರಾಜ್ ಕಾವೂರು ರಚಿಸಿರುವ ಮೋಹನ್ ಚಂದ್ರ ಯು. ಇವರ ನಿರ್ದೇಶನದಲ್ಲಿ ಮಂಗಳೂರಿನ ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದ ತಂಡದವರು “ನೆಮ್ಮದಿ…

Read More

ಬೆಂಗಳೂರು : ಜಗದೀಶ ಹೊಸಬಾಳೆ ಮತ್ತು ವಿನಾಯಕ ವಾಜಗದ್ದೆ ಇದರ ಸಂಯೋಜನೆಯಲ್ಲಿ ಕವಿ ಹಲಸಿನ ಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ ‘ಅಂಬಾ ಶಪಥ’ ತಾಳಮದ್ದಳೆಯು ದಿನಾಂಕ 14-07-2024ರಂದು ಮಧ್ಯಾಹ್ನ 3-15 ಗಂಟೆಗೆ ಬೆಂಗಳೂರಿನ ಎನ್.ಆರ್. ಕಾಲೋನಿಯ ಡಾ. ಸಿ. ಅಶ್ವತ್ಥ ಕಲಾಭವನದಲ್ಲಿ ನಡೆಯಲಿದೆ. ಮುಮ್ಮೇಳದಲ್ಲಿ ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ, ವಾಸುದೇವ ರಂಗ ಭಟ್ಟ, ಸಂಕದಗುಂಡಿ ಗಣಪತಿ ಭಟ್ಟ ಹಾಗೂ ಹಿಮ್ಮೇಳದಲ್ಲಿ ಕೊಳಗಿ ಕೇಶವ ಹೆಗಡೆ, ಅನಂತ ಪದ್ಮನಾಭ ಘಾಟಕ್ ಮತ್ತು ಗಣೇಶ ಗಾಂವ್ಕರ್ ಇವರುಗಳು ಭಾಗವಹಿಸಲಿದ್ದಾರೆ.

Read More

ಕನ್ನಡದ ಮಹತ್ವದ ಲೇಖಕರಾದ ಡಾ. ನಾ. ಮೊಗಸಾಲೆಯವರ ‘ನೀರು’ ಎಂಬ ಕಾದಂಬರಿಯು ಒಂದು ದೃಷ್ಟಿಯಲ್ಲಿ ನೀಳ್ಗತೆಯಂತೆ ಇದ್ದರೂ 250 ಪುಟಗಳಷ್ಟು ಬೆಳೆದು ಕಾದಂಬರಿಯ ವ್ಯಾಪ್ತಿಯನ್ನು ಪಡೆದಿದೆ. ಕಥೆ, ಕಾದಂಬರಿ ಎಂದು ವಿಂಗಡಿಸಿ ಲಕ್ಷಣವನ್ನು ವಿಧಿಸುವವರಿಗೆ ಇದೊಂದು ಗಟ್ಟಿ ಸವಾಲಾಗಿ ಪರಿಣಮಿಸಿದೆ. ಮನುಷ್ಯ ಸಂಬಂಧದೊಳಗೆ ಸಹಜವಾದ ಅಸೂಯೆ, ಸ್ಪರ್ಧೆ, ಫಟಿಂಗತನ, ಕಾಮ ಕ್ರೋಧಾದಿಗಳ ತಳಮಟ್ಟದ ಹುಡುಕಾಟವನ್ನು ಕಾದಂಬರಿಕಾರರು ಹೊಸ ಬಗೆಯಲ್ಲಿ ನಡೆಸಿದ್ದಾರೆ. ತಮ್ಮ ಹೆಚ್ಚಿನ ಕೃತಿಗಳಂತೆ ಇಲ್ಲೂ ಮರಣ, ಕೊಲೆ, ದೊಂಬಿಗಳನ್ನು ತಂದಿಲ್ಲ. ಮನುಷ್ಯರು ಪರಸ್ಪರ ದೂರವಾಗುವುದಕ್ಕೆ ಕಾರಣವಾಗುವ ಅಂತರಂಗದ ಸ್ಥಾಯೀ ಸಂಚಾರೀ ಭಾವ ಮನಃಶಾಸ್ತ್ರೀಯವಾಗಿ ವಿಶ್ಲೇಷಣೆಗೊಳಗಾಗುವುದೇ ಈ ಕೃತಿಯ ಪ್ರತ್ಯೇಕತೆಯಾಗಿದೆ. ಪಾತ್ರ ನಿರ್ಮಾಣದ ತಂತ್ರ, ಸಂಭಾಷಣೆಯ ಸೊಗಸು, ಪರಿಸರ ಸೃಷ್ಟಿಯ ಕಲಾತ್ಮಕತೆ, ಆಧುನಿಕ ಕಾನೂನುಗಳ ವಿಶ್ಲೇಷಣೆ, ವ್ಯಕ್ತಿ ತನ್ನ ಸುತ್ತ ನಿರ್ಮಿಸಿಕೊಳ್ಳುವ ಪ್ರಭಾವಲಯ, ರಾಜಕಾರಣ ಮತ್ತು ಸಂಸ್ಕೃತಿಗಳೊಳಗಿನ ಸಂಘರ್ಷ, ಧರ್ಮ ಹಾಗೂ ಆಚಾರಗಳೊಳಗೆ ತಪ್ಪುವ ತಾಳ, ಅಮಾನವೀಯ – ಅಸಂಗತ ನಡವಳಿಕೆಯಿಂದ ತನ್ನ ಸುತ್ತ ತಾನೇ ಬೇಲಿ ಬಿಗಿದುಕೊಂಡು ಪಾಡುಪಟ್ಟು ಹೊರಬರಲಾಗದೆ…

Read More