Author: roovari

ಮಡಿಕೇರಿ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಡಿಕೇರಿ ವತಿಯಿಂದ ಮಡಿಕೇರಿಯಲ್ಲಿ ನಡೆದ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ನಾ ಡಿಸೋಜಾರವರ ಹೆಸರಿನಲ್ಲಿ ಸ್ಥಾಪಿತವಾಗಿರುವ ನಾ ಡಿಸೋಜ ಮಕ್ಕಳ ಸಾಹಿತ್ಯ ಪುರಸ್ಕಾರ ದತ್ತಿನಿಧಿಯಂತೆ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಕಥೆ ಬರೆಯುವ ಸ್ಪರ್ಧೆ ಮತ್ತು ಕಥೆ ರಚನಾ ವಿಧಾನದ ಕುರಿತು ಉಪನ್ಯಾಸವು ಮಡಿಕೇರಿಯ ಸರಕಾರಿ ಜೂನಿಯರ್ ಕಾಲೇಜಿನಲ್ಲಿ ದಿನಾಂಕ 25-08-2023ರ ಶುಕ್ರವಾರ ಸಮಯ 10.30 ಗಂಟೆಗೆ ಏರ್ಪಡಿಸಲಾಗಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಎಂ.ಪಿ. ಕೇಶವ ಕಾಮತ್ ವಹಿಸಿಕೊಳ್ಳಲಿದ್ದು, ಉದ್ಘಾಟನೆಯನ್ನು ಕೊಡಗು ಜಿಲ್ಲಾ ಪದವಿ ಪೂರ್ವ ಕಾಲೇಜು ಉಪ ನಿರ್ದೇಶಕರಾದ ಪುಟ್ಟರಾಜುರವರು ನೆರವೇರಿಸಲಿದ್ದಾರೆ. ಕತೆ ರಚನೆ ಕುರಿತು ಉಪನ್ಯಾಸವನ್ನು ಸಾಹಿತಿ ಶ್ರೀಮತಿ ಸುನೀತಾ ಕುಶಾಲನಗರ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಡಿಕೇರಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪಿ.ಆರ್. ವಿಜಯ, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀಮತಿ…

Read More

ಮುಂಬೈ : ಕರ್ನಾಟಕ ಸೇವಾ ಸಂಘ ಮೋಹನೆ ಮತ್ತು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿಯ ಸಹಯೋಗದಲ್ಲಿ ದಿನಾಂಕ 18-08-2023ರಂದು ಆರ್.ಎಸ್.ಡೈರಿ ಫಾರ್ಮ್ ಮೋಹನೆ ಬಳಿಯ ದಿ.ರಾಜೀವಿ ಪದ್ಮನಾಭ ಶೆಟ್ಟಿ ಮೆಮೋರಿಯಲ್ ಹಾಲ್ ನಲ್ಲಿ ಅಜೆಕಾರು ಕಲಾಭಿಮಾನಿ ಬಳಗದ ಸಂಚಾಲಕತ್ವದಲ್ಲಿ ತವರೂರ ನಾಮಾಂಕಿತ ಕಲಾವಿದರಿಂದ ‘ಸ್ವಾಮಿ ಕೊರಗಜ್ಜ’ ತುಳು ತಾಳಮದ್ದಳೆಯ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ಸೇವಾ ಸಂಘ (ರಿ.) ಮೋಹನೆ, ಕಲ್ಯಾಣ್ ಇದರ ಅಧ್ಯಕ್ಷರಾದ ಹರೀಶ್ ಶೆಟ್ಟಿ ಶಿಮುಂಜೆ ಪರಾರಿಯವರು ಮಾತನಾಡುತ್ತಾ “ಕರಾವಳಿಯ ಯಕ್ಷಗಾನ ಕಲೆ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಪ್ರಧಾನ ಪಾತ್ರ ವಹಿಸಿದೆ. ವಿಶೇಷವಾಗಿ ತುಳುನಾಡಿನಲ್ಲಿ ನಮ್ಮ ಹಿರಿಯರು ಅದನ್ನು ಪೋಷಿಸಿಕೊಂಡು ಬಂದಿದ್ದಾರೆ. ಮುಂಬೈಯಲ್ಲಿ ನೆಲೆಯೂರಿದ ನಾವೆಲ್ಲ ಇಲ್ಲಿ ಹುಟ್ಟಿ ಬೆಳೆದ ಮಕ್ಕಳಿಗೆ ತುಳು ಸಂಸ್ಕೃತಿ ಮತ್ತು ಯಕ್ಷಗಾನದ ಸೊಗಡನ್ನು ಪರಿಚಯಿಸುವ ಮೂಲಕ ಆ ಪರಂಪರೆಯನ್ನು ಉಳಿಸಿ ಬೆಳೆಸಬೇಕಾಗಿದೆ” ಎಂದು ಹೇಳಿದರು. ಸಂಘದ ಗೌರವಾಧ್ಯಕ್ಷ ದಯಾಶಂಕರ ಪಿ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಸೇವಾ ಸಂಘದ…

Read More

ಹುಬ್ಬಳ್ಳಿ : ಡಾ. ಡಿ.ಎಸ್. ಕರ್ಕಿ ಸಾಹಿತ್ಯ ವೇದಿಕೆಯಿಂದ ನಾಲ್ಕು ವರ್ಷಗಳ ‘ಡಾ. ಡಿ.ಎಸ್. ಕರ್ಕಿ ಕಾವ್ಯ ಪ್ರಶಸ್ತಿ’ಗೆ ಕವನ ಸಂಕಲನಗಳನ್ನು ಆಹ್ವಾನಿಸಲಾಗಿದೆ. ಕೋವಿಡ್ ಇನ್ನಿತರ ಕಾರಣಗಳಿ೦ದ ಹಿ೦ದಿನ ಮೂರು ವರ್ಷಗಳಿಂದ ಪ್ರಶಸ್ತಿ ನೀಡಿರಲಿಲ್ಲ. ಈಗ 2020, 2021, 2022 ಹಾಗೂ ಈ ವರ್ಷದ್ದೂ ಸೇರಿ ನಾಲ್ಕು ವರ್ಷಗಳಲ್ಲಿ ಪ್ರಕಟವಾದ ಮುದ್ರಿತ ಕವನ ಸಂಕಲನಗಳಿಗೆ ತಲಾ ರೂ.10,000/- ಮೊತ್ತವಿರುವ ಪ್ರಶಸ್ತಿಯನ್ನು ನೀಡಲಾಗುವುದು. ನವೆಂಬರ್ ತಿಂಗಳಲ್ಲಿ ಕರ್ಕಿ ಅವರ 116ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಕವನ ಸಂಕಲನಗಳು ಮೊದಲ ಬಾರಿಗೆ ಪ್ರಕಟವಾಗಿದ್ದಾಗಿರಬೇಕು. ಅನುವಾದಿತ ಕೃತಿಗಳಾಗಿರಬಾರದು. ಈ ಮೊದಲು ಯಾವುದೇ ಪ್ರಶಸ್ತಿ ಪಡೆದಿರಬಾರದು. ಆಸಕ್ತರು ಕವನ ಸಂಕಲನದ ಎರಡು ಪ್ರತಿಗಳನ್ನು ಸೆಪ್ಟೆಂಬರ್ 5ರೊಳಗೆ ಎಂ.ಎ.ಸುಬ್ರಹ್ಮಣ್ಯ, ಸಾಹಿತ್ಯ ಪ್ರಕಾಶನ, ಕೊಪ್ಪಿಕರ ರಸ್ತೆ, ಹುಬ್ಬಳ್ಳಿ-580020 ಇಲ್ಲಿಗೆ ಕಳುಹಿಸಿಕೊಡಬೇಕು.

Read More

ಮಂಗಳೂರು : ಶ್ರೀ ವೆಂಕಟೇಶ ಶಿವಭಕ್ತಿ ಯೋಗ ಸಂಘದ ಆಶ್ರಯದಲ್ಲಿ ಶ್ರೀ ಗೋಕರ್ಣನಾಥೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಆಗಸ್ಟ್ 31ರಂದು ನಡೆಯುವ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಅಂಗವಾಗಿ ಭಾಷಣ ಸ್ಪರ್ಧೆ ಆಯೋಜಿಸಲಾಗಿದೆ. ಅಂದು ಬೆಳಗ್ಗೆ 9.30ರಿಂದ ಕಾಲೇಜು (ಪಿಯುಸಿ, ಪದವಿ) ವಿದ್ಯಾರ್ಥಿಗಳಿಗೆ ‘ಬದುಕು ‘ನಿಂತ ನೀರಾಗಬಾರದು. ನಿರಂತರವಾಗಿ ಹರಿಯುತ್ತಿರಬೇಕು’, ಅಂತರ್ ಹೈಸ್ಕೂಲ್ ವಿದ್ಯಾರ್ಥಿಗಳಿಗೆ (8ರಿಂದ 10ನೇ ತರಗತಿ) ‘ಮಾನವೀಯತೆಯಲ್ಲಿ ಜಾತಿ ಭೇದವಿಲ್ಲ’ ವಿಚಾರವಾಗಿ ತುಳು-ಕನ್ನಡ-ಇಂಗ್ಲಿಷ್‌ ಭಾಷಣ ಸ್ಪರ್ಧೆ ಏರ್ಪಡಿಸಲಾಗಿದೆ. ಭಾಷಣ ಶ್ರೀ ನಾರಾಯಣ ಗುರುಗಳ ತತ್ವ ಆದರ್ಶ, ಸಂದೇಶಗಳನ್ನು ಪ್ರತಿಪಾದಿಸುವ, ಪ್ರತಿಬಿಂಬಿಸುವ ರೀತಿಯಲ್ಲಿರಬೇಕು. ವಿಜೇತರಿಗೆ ನಗದು ಪುರಸ್ಕಾರ ಹಾಗೂ ಪ್ರಮಾಣ ಪತ್ರ ನೀಡಲಾಗುವುದು. ಶಾಲಾ ಕಾಲೇಜು ಮುಖ್ಯಸ್ಥರು ತಮ್ಮ ಕಾಲೇಜಿನಿಂದ ಭಾಗವಹಿಸುವ ವಿದ್ಯಾರ್ಥಿಗಳ ವಿವರಗಳನ್ನು ಆಗಸ್ಟ್ 25ರೊಳಗೆ ಕಳುಹಿಸಬೇಕು.

Read More

ಮಂಗಳೂರು : ಕೇಂದ್ರ ಸರಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮಂತ್ರಾಲಯದಿಂದ 2023-24ನೇ ಸಾಲಿಗೆ ರಾಷ್ಟ್ರೀಯ ಪ್ರಧಾನ ಮಂತ್ರಿ ‘ಬಾಲ ಪುರಸ್ಕಾರ ಪ್ರಶಸ್ತಿ’ಗೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಗ್ರಾಮ ಪಂಚಾಯಿತಿ ಹಾಗೂ ಜಿಲ್ಲಾ ಮಟ್ಟದಲ್ಲಿ ಕೂಡ ಆಗಸ್ಟ್ 31ರೊಳಗೆ ಅರ್ಜಿ ಸಲ್ಲಿಸಬೇಕು. ಜಿಲ್ಲೆಯಲ್ಲಿ ಧೈರ್ಯ ಮತ್ತು ಸಾಹಸದಿಂದ ಇತರರನ್ನು ರಕ್ಷಿಸಿದ ಹಾಗೂ ಕ್ರೀಡೆ, ಸಮಾಜ ಸೇವೆ, ವಿಜ್ಞಾನ ಮತ್ತು ತಂತ್ರಜ್ಞಾನ ಪರಿಸರ ಸಂರಕ್ಷಣೆ, ಕಲೆ ಮತ್ತು ಸಂಸ್ಕೃತಿ ಮತ್ತು ನೂತನ ಆವಿಷ್ಕಾರಗಳನ್ನು ಮಾಡಿ ಉತ್ತಮ ಸಾಧನೆ ಮಾಡಿದ 18 ವರ್ಷದೊಳಗಿನ ಮಕ್ಕಳನ್ನು ಗುರುತಿಸಿ ಆನ್‌ಲೈನ್ https://awards.gov.in ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಾಣಾಧಿಕಾರಿ ತಿಳಿಸಿದ್ದಾರೆ.

Read More

ಮಂಗಳೂರು : ಶ್ರೀ ಕ್ಷೇತ್ರ ಕದ್ರಿಯಲ್ಲಿ ಸೆಪ್ಟಂಬರ್ 6ರಂದು ಕಲ್ಕೂರ ಪ್ರತಿಷ್ಠಾನವು ಆಯೋಜಿಸಲಿರುವ ರಾಷ್ಟ್ರೀಯ ಮಕ್ಕಳ ಉತ್ಸವ ಶ್ರೀ ಕೃಷ್ಣ ವೇಷ ಸ್ಪರ್ಧೆಯ ಅಂಗವಾಗಿ ‘ಶ್ರೀ ಕೃಷ್ಣನ ಕುರಿತು ಸ್ವರಚಿತ ಭಜನೆ ಹಾಗೂ ಭಕ್ತಿಗೀತೆ ರಚನಾ ಸ್ಪರ್ಧೆ’ಯನ್ನು ಹಮ್ಮಿಕೊಳ್ಳಲಾಗಿದೆ. ಲಯಬದ್ಧ ಹಾಗೂ ಲಾಲಿತ್ಯಪೂರ್ಣವಾಗಿ ಶಾಸ್ತ್ರೀಯ ಶೈಲಿಯಲ್ಲಿ ಸುಮಧುರವಾಗಿ ಹಾಡಲು ಯೋಗ್ಯವಾದ ಭಜನೆ ಹಾಗೂ ಭಕ್ತಿಗೀತೆಗಳಿಗೆ ಆದ್ಯತೆ ನೀಡಲಾಗುವುದು. ಮುಕ್ತ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದ್ದು, ಕನ್ನಡ ಹಾಗೂ ತುಳು ಭಾಷೆಗಳಲ್ಲಿ ರಚಿಸಿದ ಭಜನೆ ಹಾಗೂ ಭಕ್ತಿಗೀತೆಗಳನ್ನು ಸೆಪ್ಟಂಬರ್ 2ರೊಳಗಾಗಿ ತಮ್ಮ ಪೂರ್ಣ ವಿಳಾಸ, ಮೊಬೈಲ್ ಸಂಖ್ಯೆಯೊಂದಿಗೆ ಈ ಕೆಳಗಿನ ವಿಳಾಸಕ್ಕೆ ಕಳುಹಿಸಬಹುದು ಅಥವಾ ವಾಟ್ಸಪ್ ಮಾಡಬಹುದಾಗಿದೆ. ಆಯ್ದ ಕೃತಿಗಳನ್ನು ಪುಸ್ತಕ ರೂಪದಲ್ಲಿ ಮುದ್ರಿಸಿ ಪ್ರಕಟಿಸಲಾಗುವುದು. ವಿಳಾಸ : ಶ್ರೀಮತಿ ಗೀತಾ ಲಕ್ಷ್ಮೀಶ್, ಶ್ರೀ ಕೃಷ್ಣ ಭಜನೆ, ಭಕ್ತಿಗೀತೆ ಸ್ಪರ್ಧಾ ವಿಭಾಗ, ಕಲ್ಕೂರ ಪ್ರತಿಷ್ಠಾನ, ಶ್ರೀ ಕೃಷ್ಣ ಸಂಕೀರ್ಣ, ಮಹಾತ್ಮ ಗಾಂಧಿ ರಸ್ತೆ, ಕೊಡಿಯಾಲ್ ಬೈಲ್, ಮಂಗಳೂರು ಅಥವಾ 9535656805ಗೆ ವಾಟ್ಸಪ್ ಕಳುಹಿಸಬೇಕು.

Read More

ಶಶಿಧರ ಕೋಟೆಯವರು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕು ಕಳಂಜ ಗ್ರಾಮದ ಕೋಟೆ ವಸಂತ ಕುಮಾರ್ ಹಾಗೂ ಶ್ರೀಮತಿ ಪಾರ್ವತಿ ವಸಂತ ಕುಮಾರ್ ಇವರ ಸುಪುತ್ರ. 21.08.1965ರಂದು ಜನಿಸಿದ ಇವರು ಎಂ.ಎ ಇಂಗ್ಲಿಷ್ ಪದವಿ ಪಡೆದು, 4 ವರ್ಷ ಉಪನ್ಯಾಸ ಸೇವೆಯನ್ನು ಸಲ್ಲಿಸಿ ಸಂಗೀತದ ಮೇಲಿನ ಪ್ರೀತಿಯಿಂದ ಉಪನ್ಯಾಸಕ ಸೇವೆಯನ್ನು ಬಿಟ್ಟು 1992ರಲ್ಲಿ ಸಂಗೀತ ಕ್ಷೇತ್ರದ ಹೆಚ್ಚಿನ ಸಾಧನೆಗೆ ಬೆಂಗಳೂರಿಗೆ ಆಗಮಿಸಿದರು. ಶಶಿಧರ್ ಕೋಟೆಯವರು ಬಾಲಮುರಳಿ ಹಾಗೂ ಜೇಸುದಾಸ್ ಇವರಿಬ್ಬರ ಅಭಿಮಾನಿ ಹಾಗೂ ಇಬ್ಬರೂ  ನನಗೆ ಮಾನಸ ಗುರುಗಳು ಇದ್ದ ಹಾಗೆ ಮತ್ತು ಇಬ್ಬರನ್ನೂ ನಾನು ಆರಾಧನೆ ಮಾಡುತ್ತೇನೆ ಎಂದು ಹೇಳುತ್ತಾರೆ. ಸಂಗೀತ ಕ್ಷೇತ್ರದಲ್ಲಿ 30 ವರ್ಷಗಳಿಂದ ಸೇವೆಯನ್ನು ಸಲ್ಲಿಸುತ್ತಿರುವ ಕೋಟೆಯವರು. ಪೂರ್ಣಾವಧಿ ಗಾಯಕರಾಗಿ 5000ಕ್ಕೂ ಹೆಚ್ಚು ಸಂಗೀತ ಕಾರ್ಯಕ್ರಮಗಳನ್ನು ನೀಡಿರುತ್ತಾರೆ. ಬರಹಗಾರನಾಗಿ, ಕಿರುತೆರೆ ನಿರೂಪಕನಾಗಿ, ನಟನಾಗಿ, ಚಲನಚಿತ್ರಗಳಲ್ಲಿ ಅಭಿನಯಿಸಿದ ಖ್ಯಾತಿ ಇವರದ್ದು. ದೂರದರ್ಶನ, ಆಕಾಶವಾಣಿ ಹಾಗೂ ಅನೇಕ ಧ್ವನಿ ಸುರುಳಿಗಳಲ್ಲಿ ಹಾಡಿದ ಅನುಭವಿ. ಬಾಲ್ಯದಿಂದಲೂ ಸಂಗೀತ, ಯಕ್ಷಗಾನ, ಸಾಹಿತ್ಯ, ಚದುರಂಗ…

Read More

ಉಡುಪಿ : ತಲ್ಲೂರು ಫ್ಯಾಮಿಲಿ ಟ್ರಸ್ಟ್ ಉಡುಪಿ ಇದರ ಪ್ರವರ್ತಕ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರು ಯಕ್ಷಗಾನ ರಂಗಕ್ಕೆ ಅನುಪಮ ಕೊಡುಗೆ ನೀಡಿದ ವಿದ್ವಾಂಸರಿಗಾಗಿ ತಮ್ಮ ಮಾತಾಪಿತರ ಸ್ಮರಣಾರ್ಥ ಸ್ಥಾಪಿಸಿದ ಪ್ರತಿಷ್ಠಿತ ‘ತಲ್ಲೂರು ಕನಕಾ-ಅಣ್ಣಯ್ಯ ಶೆಟ್ಟಿ’ ಪ್ರಶಸ್ತಿಯನ್ನು ಖ್ಯಾತ ಹಿರಿಯ ಮೃದಂಗ ವಾದಕ ವಿದ್ವಾನ್ ಕೆ. ಬಾಬು ರೈ ಅವರಿಗೆ ದಿನಾಂಕ 15-08-2023ರಂದು ಎಡನೀರು ಮಠದಲ್ಲಿ ನಡೆದ ಕೆ. ಬಾಬು ರೈಯವರ ಶತಮಾನೋತ್ಸವ ಆಚರಣೆಯ ಸಂದರ್ಭಲ್ಲಿ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರು ಪ್ರದಾನ ಮಾಡಿದರು. ಯಕ್ಷಗಾನ ಕಲಾರಂಗದ ಮೂಲಕ ಪ್ರತೀ ವರ್ಷ ವಿದ್ವಾಂಸರಿಗೆ ನೀಡುವ ಈ ಪ್ರಶಸ್ತಿ 40,000/- ರೂ. ನಿಧಿಯನ್ನೊಳಗೊಂಡಿದೆ. ಈ ಸಂದರ್ಭದಲ್ಲಿ ಅನುಗ್ರಹ ಸಂದೇಶ ನೀಡಿದ ಶ್ರೀಗಳು “ಬಾಬು ರೈ ಅವರು, ಶತಾಯುಷಿ ಕಲಾವಿದರಷ್ಟೇ ಅಲ್ಲ ಶತಮಾನದ ಶ್ರೇಷ್ಠ ಕಲಾವಿದರಾಗಿದ್ದಾರೆ. ಅವರ ವಿನಯಗುಣ, ಸರಳತೆ, ಜೀವನೋತ್ಸಾಹ ಕಿರಿಯರಿಗೆ ಮಾದರಿಯಾಗಿದೆ. ಅವರು ಸಂಗೀತ ಲೋಕ ಹಾಗೂ ಯಕ್ಷಗಾನ ರಂಗಕ್ಕೆ ನೀಡಿದ ಅನುಪಮ ಕೊಡುಗೆಯನ್ನು ನಾವು ಮರೆಯುವಂತಿಲ್ಲ.…

Read More

ಯಲ್ಲಾಪುರ :  ಶ್ರೀ ಸುಮೇರು ಜ್ಯೋತಿರ್ವನಮ್ ಇವರು ಭಾರತೀಯ ಜ್ಞಾನ ವಿಜ್ಞಾನ ಪರಿಷದ್ (ರಿ.) ಮೈಸೂರು, ಅಖಿಲ ಭಾರತೀಯ ಸಾಹಿತ್ಯ ಪರಿಷದ್ (ರಿ.) ಹಾಗೂ ಸಾತ್ವಿಕ್ ಫೌಂಡೇಶನ್ (ರಿ.) ಕಾಗಾರಕೊಡ್ಲು ಇದರ ಸಹಯೋಗದೊಂದಿಗೆ ‘ಭಾರತೀಯತೆಯ ಗರಿಮೆ’ ಎಂಬ ವಿಷಯದಲ್ಲಿ ರಾಷ್ಟ್ರಮಟ್ಟದ ಪ್ರಬಂಧ ಸ್ಪರ್ಧೆ ನಡೆಸುತ್ತಿದ್ದು ಆಸಕ್ತರು 30-08-2023ರ ಒಳಗೆ ತಮ್ಮ ಪ್ರಬಂಧವನ್ನು ಕಳುಹಿಸಲು ಈ ಮೂಲಕ ಕೇಳಿಕೊಳ್ಳಲಾಗಿದೆ. ನಿಯಮಗಳು :  ಪ್ರಬಂಧವು ನಮ್ಮ ನಾಡು, ನಡೆ, ನುಡಿ, ಸಂಸ್ಕೃತಿ, ಕಾವ್ಯ ಸಾಹಿತ್ಯ ಮತ್ತು ಇತಿಹಾಸ ಆಚರಣೆ ಇತ್ಯಾದಿಗಳ ವಿಷಯಗಳನ್ನು ಒಳಗೊಂಡಿರಲಿ. ಪ್ರಬಂಧವು ಬಿಂದು ರೂಪವಾಗಿರಲಿ ಮತ್ತು ಒಂದು ಬಿಂದುವಿನ ವಿವರಣೆ ನಾಲ್ಕೈದು ವಾಕ್ಯಗಳನ್ನು ಮೀರದಿರಲಿ. ಭಾರತೀಯತೆಯ ಎಲ್ಲಾ ಮಜಲುಗಳನ್ನು ಮುಟ್ಟುವ ಅನೇಕ ಬಿಂದುಗಳಿಂದ ಕೂಡಿದ ಸಂಕ್ಷೇಪ ಹಾಗೂ ಸಾರಭೂತ ಪ್ರಬಂಧವಾಗಿರಲಿ. ಪುಟಗಳ ನಿರ್ಬಂಧ ಇರುವುದಿಲ್ಲ ಮತ್ತು ವಯೋಮಾನ ನಿರ್ಬಂಧ ಇರುವುದಿಲ್ಲ. ಕೈ ಬರಹದಕಲ್ಲಿ ಅಥವಾ ಟೈಪ್ ಮಾಡಿದ ಪ್ರಬಂಧವನ್ನು ನೇರವಾಗಿ, ಅಂಚೆ, ವಾಟ್ಸ್ ಆ್ಯಪ್ ಅಥವಾ ಮೇಲ್ ಮೂಲಕ ತಲುಪಿಸಬಹುದು. ಬರಹವು…

Read More

ಓದಿದ್ದು ಭೌತಚಿಕಿತ್ಸಕಿ/ಫಿಸಿಯೋಥೆರಪಿಸ್ಟ್. ಯಕ್ಷಗಾನದ ಅತಿಯಾದ ಒಲವು. ಹೀಗೆ ವೃತ್ತಿ ಹಾಗೂ ಪ್ರವೃತ್ತಿಯನ್ನು ಜೊತೆಗೆ ಸರಿ ಸಮಾನವಾಗಿ ಸ್ವೀಕರಿಸಿ ಯಕ್ಷಗಾನ ರಂಗದಲ್ಲಿ ತನ್ನದೇಯಾದ ಛಾಪು ಮೂಡಿಸುತ್ತಿರುವ ಪ್ರತಿಭೆ ಸಂಧ್ಯಾ ನಾಯಕ್. 13.03.1996ರಂದು ಸದಾನಂದ ನಾಯಕ್ ಮತ್ತು ನಂದಿನಿ ನಾಯಕ್ ಇವರ ಮಗಳಾಗಿ ಜನನ. ತಾಯಿಯ ಪ್ರೇರಣೆ ಹಾಗೂ ಯಕ್ಷಗಾನದ ವೇಷಭೂಷಣ, ಅಲ್ಲಿರುವ ಹಾಡು, ನಾಟ್ಯ ಹಾಗೂ ಮಾತುಗಾರಿಕೆ ಎಲ್ಲವನ್ನೂ ಕೂಡಿದ ಯಕ್ಷಗಾನದ ಮೇಲಿನ ಆಸಕ್ತಿ ನನ್ನನ್ನು ಸೆಳೆಯಿತು ಎಂದು ಹೇಳುತ್ತಾರೆ ಸಂಧ್ಯಾ. ಪ್ರಸಾದ್ ಕುಮಾರ್ ಮೊಗೆಬೆಟ್ಟು, ಮಂಜುನಾಥ್ ಕುಲಾಲ್, ಪ್ರತೀಶ್ ಕುಮಾರ್, ರತ್ನಾಕರ್ ಆಚಾರ್ ಪುತ್ತೂರು ಇವರ ಯಕ್ಷಗಾನದ ಗುರುಗಳು. ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ:- ಪ್ರಸಂಗವನ್ನು ಓದಿ, ಪಾತ್ರದ ಬಗ್ಗೆ ಯೂಟ್ಯೂಬ್ ಮುಖಾಂತರ ಯಾವ ರೀತಿಯಲ್ಲೆಲ್ಲ ಅಭಿನಯ ಆಗಲಿ ಮಾತುಗಾರಿಕೆಯಾಗಲಿ ಹೇಗೆ ಮಾಡಬಹುದು ಎಂದು ನೋಡುತ್ತೇನೆ. ಹಾಗೆಯೇ ಗುರುಗಳಲ್ಲಿ ಕೇಳಿ ತಿಳಿದುಕೊಳುತ್ತೇನೆ. ಶ್ವೇತಕುಮಾರ ಚರಿತ್ರೆ, ಲವಕುಶ, ಬಬ್ರುವಾಹನ ಕಾಳಗ, ರಾಣಿ ಶಶಿಪ್ರಭೆ ಇವರ ನೆಚ್ಚಿನ…

Read More