Author: roovari

‘ಯಥಾ ಗುರು ತಥಾ ಶಿಷ್ಯ’ ಎಂಬ ನಾಣ್ಣುಡಿಗೆ ಅನ್ವಯರಾಗಿರುವ ನೃತ್ಯಗುರು ವಿದುಷಿ ಮೇದಿನಿ ಭರತ್ ಮತ್ತು ಕಲಾವಿದೆ ಕುಮಾರಿ ಶ್ರೇಯಾ ರಾಜಶೇಖರ್ ಹಿರೇಮಠ್ ಇಬ್ಬರೂ ಬಹುಮುಖ ಪ್ರತಿಭಾನ್ವಿತರು. ನೃತ್ಯಕಲಾವಿದೆ ಹಾಗೂ ಗುರುವಾಗಿ ಬದ್ಧತೆಯಿಂದ ‘ಚಿತ್ಸಭಾ ಕಲಾಶಾಲೆ’ ನೃತ್ಯಸಂಸ್ಥೆಯ ಮೂಲಕ ನೂರಾರು ಉದಯೋನ್ಮುಖ ಕಲಾವಿದರನ್ನು ರೂಪಿಸುತ್ತಿರುವ ಮೇದಿನಿಯವರ ನುರಿತ ಗರಡಿಯಲ್ಲಿ ತರಬೇತಿ ಪಡೆಯುತ್ತಿರುವ ಕಲಾಶಿಲ್ಪ ಈ ಶ್ರೇಯಾ. ಶ್ರೀ ರಾಜಶೇಖರ್ ಹಿರೇಮಠ ಮತ್ತು ಬಿ.ಹೆಚ್. ರೇಣುಕಾರ ಪುತ್ರಿ ಶ್ರೇಯಾ, ಕಳೆದ ಹಲವಾರು ವರ್ಷಗಳಿಂದ ಭರತನಾಟ್ಯಾಭ್ಯಾಸ ಮಾಡುತ್ತಿದ್ದು, ಈಗಾಗಲೇ ಇವಳು ಅಖಿಲ ಭಾರತ ಗಂಧರ್ವ ಮಹಾವಿದ್ಯಾಲಯ ಮಂಡಲ ನೃತ್ಯ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿದ್ದು ಅನೇಕ ವೇದಿಕೆಗಳಲ್ಲಿ ತನ್ನ ಪ್ರತಿಭಾ ಪ್ರದರ್ಶನ ಮಾಡಿದ್ದಾಳೆ. ರಂಗಭೂಮಿ- ಚಲನಚಿತ್ರಗಳ ಅಭಿನಯ ತರಬೇತಿ ಹೊಂದಿರುವ ಶ್ರೇಯಾಗೆ ಬರವಣಿಗೆ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತ ಕೂಡ ಹವ್ಯಾಸ. ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಪದವಿ ತರಗತಿಯಲ್ಲಿ ಓದುತ್ತಿರುವ ಶ್ರೇಯಾ, ದಿನಾಂಕ 30 ಆಗುಸತ 2025ರ ಶನಿವಾರ ಸಂಜೆ 5-30 ಗಂಟೆಗೆ ನಗರದ ಜೆ.ಎಸ್.ಎಸ್. ಆಡಿಟೋರಿಯಂನಲ್ಲಿ…

Read More

ಕಾಸರಗೋಡು : ಕಾಸರಗೋಡಿನ ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಹಾಗೂ ಗ್ರಂಥಾಲಯ (ರಿ.) ಕನ್ನಡ ಭವನ ಪ್ರಕಾಶನ ಇದರ ವತಿಯಿಂದ ಕನ್ನಡ ಭವನದ ರಜತ ಸಂಭ್ರಮ ವರ್ಷಾಚರಣೆಯ ಪ್ರಯುಕ್ತ ವಿಶೇಷ ಕಾರ್ಯಕ್ರಮವನ್ನು ದಿನಾಂಕ 27 ಆಗಸ್ಟ್ 2025ರಂದು ಸಂಜೆ 5-00 ಗಂಟೆಗೆ ಕಾಸರಗೋಡು ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಸ್ಮಾರಕ ಸಭಾಂಗಣದಲ್ಲಿ ನಡೆಯಲಿದೆ. ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ ನಿರ್ದೇಶಕರಾದ ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ ಇವರು ದೀಪ ಪ್ರಜ್ವಲನೆ ಮಾಡಲಿದ್ದು, ಸಂಸ್ಥಾಪಕರಾದ ಡಾ. ವಾಮನ್ ರಾವ್ ಬೇಕಲ್ ಸಂಧ್ಯಾರಾಣಿ ಟೀಚರ್ ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷರಾದ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಇವರು ಅಧ್ಯಕ್ಷತೆ ವಹಿಸಲಿದ್ದು, ಜನಪ್ರಿಯ ಪತ್ರಕರ್ತ, ಸಾಹಿತಿ ನಿರ್ಮಾಪಕರಾದ ಗಣೇಶ್ ಕಾಸರಗೋಡು ಇವರಿಗೆ ‘ರಾಷ್ಟ್ರಕವಿ ಗೋವಿಂದ ಪೈ ರಾಷ್ಟ್ರೀಯ ಪ್ರಶಸ್ತಿ -2025’ ಪ್ರದಾನ ಸಮಾರಂಭ ನಡೆಯಲಿದೆ.

Read More

ಉಡುಪಿ : ಚಿತ್ರಕಲಾ ಮಂದಿರ ಕಲಾಶಾಲೆಯ 2002-2007 ಸಾಲಿನ ಹಳೆ ವಿದ್ಯಾರ್ಥಿಗಳು ಆಯೋಜಿಸಿರುವ ‘ಸಂಗಮ’ ಸಮೂಹ ಕಲಾಪ್ರದರ್ಶನವು ದಿನಾಂಕ 23 ಆಗಸ್ಟ್ 2025ರಂದು ಕಲಾಶಾಲೆಯ ವಿಭೂತಿ ಆರ್ಟ್ ಗ್ಯಾಲರಿಯಲ್ಲಿ ಉದ್ಘಾಟನೆಗೊಂಡಿತು. ಈ ಕಲಾಪ್ರದರ್ಶನವನ್ನು ಉದ್ಘಾಟಿಸಿದ ಮಧುರಂ ವೈಟ್ ಲೋಟಸ್‌ನ ಆಡಳಿತ ನಿರ್ದೇಶಕರಾದ ಆಜಯ್ ಪಿ. ಶೆಟ್ಟಿಯವರು ಮಾತನಾಡಿ “ಉಡುಪಿಯ ಕಲಾವಲಯದಲ್ಲಿ ಸಾಕಷ್ಟು ಉತ್ತಮ ಕಲಾ ಪ್ರತಿಭೆಗಳಿವೆ. ಅದನ್ನು ಇನ್ನಷ್ಟು ಪೋಷಿಸುವ ಕೆಲಸವಾಗಬೇಕು. ಉಡುಪಿಯ ಪರಂಪರೆ ಜಗತ್ತಿಗೆ ತಿಳಿಯುವಂತಾಗಬೇಕು. ಈ ಕಲಾವಿದರೆಲ್ಲರೂ ಎಷ್ಟೋ ವರ್ಷಗಳ ತರುವಾಯ ಮತ್ತೆ ಸೇರಿ ಈ ಪ್ರದರ್ಶನವನ್ನು ಏರ್ಪಡಿಸಿರುವುದು ಹಾಗೂ ತಾವು ತಮ್ಮ ಗುರುಗಳಿಗೆ ಗುರುವಂದನೆ ಈ ಸಂದರ್ಭದಲ್ಲಿ ಸಲ್ಲಿಸಿರುವುದು ಬಹಳ ಮಹತ್ವಪೂರ್ಣವಾದುದು” ಎಂಬುದಾಗಿ ಅಭಿಪ್ರಾಯಪಟ್ಟರು. ಇನ್ನೋರ್ವ ಅತಿಥಿ ಸ್ಮರಣಿಕಾ ಸಂಸ್ಥೆಯ ಮಾಲಕರಾದ ದಿವಾಕರ್ ಸನಿಲ್ ಮಾತನಾಡಿ “ಗಣೇಶೋತ್ಸವದ ಈ ಶುಭ ಸಂದರ್ಭದಲ್ಲಿ ಗಣಪತಿಯ ಬಗೆಗಿನ ವಿವಿಧ ಚಿತ್ರಗಳು ಮನಸೂರೆಗೊಳ್ಳುವಂತೆ ರಚಿತವಾಗಿದ್ದು, ಕಲೆಯ ಆರಾಧನೆಯೂ ದೈವಿಕ ಭಾವನೆಯನ್ನು ಸೃಜಿಸುತ್ತದೆ” ಎಂದರು. ಗುರುವಂದನೆಯನ್ನು ಸ್ವೀಕರಿಸಿ ಮಾತನಾಡಿದ ಕಲಾಶಾಲೆಯ ಮಾಜಿ ಪ್ರಾಂಶುಪಾಲರಾದ…

Read More

ಗಾಂಜಾಂ ತಿಮ್ಮಣ್ಣಯ್ಯ ಮತ್ತು ಸುಬ್ಬಮ್ಮ ದಂಪತಿಯ ದ್ವಿತೀಯ ಪುತ್ರ ಪ್ರೊ. ವೆಂಕಟಸುಬ್ಬಯ್ಯ. ಇವರು ಜನಿಸಿದ್ದು ದಿನಾಂಕ 23 ಆಗಸ್ಟ್ 1913 ಮಂಡ್ಯ ಜಿಲ್ಲೆಯ ಕೈಗೋನಹಳ್ಳಿಯಲ್ಲಿ. ಇವರ ಹಿರಿಯರು ನೆಲೆಸಿದ್ದು ಮುದಗುಂದೂರಿನಲ್ಲಿ. ಪೌರೋಹಿತ್ಯ ಕಾರ್ಯಗಳನ್ನು ಮಾಡಿಕೊಂಡು ಕಷ್ಟದಲ್ಲಿ ಸರಳ ಜೀವನ ನಿರ್ವಹಣೆ ಮಾಡುತ್ತಿದ್ದ ಇವರ ಹಿರಿಯರು ಮೈಸೂರು ರಾಜ್ಯದಲ್ಲಿ ಕ್ಷಾಮ ತಲೆದೋರಿದಾಗ ಜೀವನ ನಿರ್ವಹಣೆ ಕಷ್ಟವಾಗಿ ಶ್ರೀರಂಗಪಟ್ಟಣದ ಉಪನಗರವಾದ ಪುಟ್ಟ ಕುಗ್ರಾಮ ‘ಗಾಂಜಾಂ’ನಲ್ಲಿ ನೆಲೆಸಿದರು. ತಂದೆ ಗಾಂಜಾಂ ತಿಮ್ಮಣ್ಣಯ್ಯ ಸಂಸ್ಕೃತ ಹಾಗೂ ಕನ್ನಡದಲ್ಲಿ ವಿದ್ವಾಂಸರಾಗಿದ್ದು, ಮೈಸೂರು ಅರಮನೆಯಲ್ಲಿ ಗೌರವದ ಸ್ಥಾನವನ್ನು ಪಡೆದಿದ್ದರು. 1937ರಲ್ಲಿ ಮೈಸೂರು ಮಹಾರಾಜ ಕಾಲೇಜಿನಿಂದ ಎಂ.ಎ. ಪದವಿಯನ್ನು ಪ್ರಥಮ ಸ್ಥಾನವನ್ನು ಸುವರ್ಣ ಪದಕದೊಂದಿಗೆ ಪಡೆದು ತೇರ್ಗಡೆ ಹೊಂದಿದರು. ಮುಂದೆ ಬಿ.ಟಿ. ಪದವಿಯನ್ನು ಪಡೆದ ಇವರು 1939ರಲ್ಲಿ ವೃತ್ತಿ ಜೀವನಕ್ಕೆ ಪಾದರ್ಪಣೆ ಮಾಡಿ 40 ವರ್ಷಗಳ ಕಾಲ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದರು. ಅದಾಗಲೇ 1937ರಲ್ಲಿ ಲಕ್ಷ್ಮೀಯವರನ್ನು ಬಾಳ ಸಂಗಾತಿಯನ್ನಾಗಿ ಪಡೆದುಕೊಂಡಿದ್ದರು. ಮಂಡ್ಯದ ಮುನ್ಸಿಪಲ್ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ, ಬೆಂಗಳೂರಿನ ಬೆಂಗಳೂರು ಹೈಸ್ಕೂಲಿನ…

Read More

ವಿಜಯಪುರ : ‘ಬೆರಗು’ ಪ್ರಕಾಶನ ಇದರ ವತಿಯಿಂದ ರಾಜ್ಯಮಟ್ಟದ ‘ಪ್ರೊ. ಎಚ್.ಟಿ. ಪೋತೆ’ ಪ್ರಶಸ್ತಿಗಾಗಿ ಸಂಶೋಧನೆ ಮತ್ತು ಅನುವಾದಿತ ಸಂಬಂಧಿ ಬರಹಗಳ ಹಸ್ತಪ್ರತಿಗಳನ್ನು ಆಹ್ವಾನಿಸಿದೆ. ಪ್ರಶಸ್ತಿ ರೂ.10,000/- ನಗದು, ಪ್ರಶಸ್ತಿ, ಸ್ಮರಣಿಕೆ ಒಳಗೊಂಡಿದ್ದು, ಹಸ್ತಪ್ರತಿ ಸಲ್ಲಿಸಲು 25 ಸೆಪ್ಟೆಂಬರ್ 2025 ಕೊನೆಯ ದಿನಾಂಕವಾಗಿರುತ್ತದೆ. ವಿಳಾಸ: ವಿಜಯಲಕ್ಷ್ಮಿ ಆರ್. ಕತ್ತಿ, ಬೆರಗು ಪ್ರಕಾಶನ, ವಿನಾಯಕ ನಗರ, ಆಲಮೇಲ -586 202, ವಿಜಯಪುರ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: 7795341335 ಸಂಪರ್ಕಿಸಿರಿ.

Read More

ವಂಡ್ಸೆ : ಆಶೀರ್ವಾದ್ ಫ್ರೆಂಡ್ಸ್ ಅಬ್ಬಿ ಹರವರಿ ವಂಡ್ಸೆ ಇವರ ಆಯೋಜನೆಯಲ್ಲಿ ‘ಯಕ್ಷ ರಾಘವ ಜನ್ಸಾಲೆ’ ಪ್ರತಿಷ್ಠಾನ (ರಿ.) ಹಾಗೂ ತೆಂಕು ಬಡಗು ತಿಟ್ಟಿನ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಗಾನ ಸಾರಥಿ ಜನ್ಸಾಲೆ ಮತ್ತು ಯಕ್ಷಧ್ರುವ ಪಟ್ಲರ ಸಾರಥ್ಯದಲ್ಲಿ ‘ಯಕ್ಷ ಹೆಜ್ಜೆ’ ಕಾರ್ಯಕ್ರಮವು ದಿನಾಂಕ 24 ಆಗಸ್ಟ್ 2025ರಂದು ಸಂಜೆ 4-30 ಗಂಟೆಗೆ ವಂಡ್ಸೆಯ ಉಪಾಧ್ಯಾಯರ ಗದ್ದೆಯಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ‘ಪಾರಿಜಾತ’ ಮತ್ತು ‘ಯಾಜ್ಞಸೇನೆ’ ಎಂಬ ಪ್ರಸಂಗದ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

Read More

ಕುಮಾರಸ್ವಾಮಿ ತೆಕ್ಕುಂಜ ಇವರು ಈಗಾಗಲೇ ತಮ್ಮ ಕಥೆ-ಕಾದಂಬರಿ-ಪ್ರಬಂಧ ಸಂಕಲನಗಳ ಮೂಲಕ ಕನ್ನಡದ ಓದುಗರಿಗೆ ಚಿರಪರಿಚಿತರಾಗಿದ್ದಾರೆ. ಈಗ ಅವರ ‘ಬದುಕು ಮಾಯೆಯ ಮಾಟ’ ಎಂಬ ಒಂದು ಕಾದಂಬರಿ ಪ್ರಕಟವಾಗಿದೆ. ಮುಂಬಯಿ ಬದುಕಿನ ಅನುಭವವುಳ್ಳ ಇವರು ತಮ್ಮ ಈ ಹಿಂದಿನ ಕಥಾಸಂಕಲನ ‘ವಡಾಪಾವ್’ನಲ್ಲಿ ಮಾಡಿದಂತೆ ಇಲ್ಲಿಯೂ ನಮ್ಮನ್ನು ಮುಂಬಯಿಯ ಗಲ್ಲಿಗಳಲ್ಲಿ ಸುತ್ತಿಸುತ್ತಾರೆ. ಇದು ಒಂದು ಸಾಮಾಜಿಕ ಕಾದಂಬರಿ. ಕಥಾನಾಯಕಿ ಪುಷ್ಪಾ ಕರಾವಳಿ ಜಿಲ್ಲೆಯ ಮುಂಡಕ್ಕೂರು ಎಂಬ ಹಳ್ಳಿಯಲ್ಲಿ ಒಂದು ಸಾಂಪ್ರದಾಯಿಕ ಕುಟುಂಬದಲ್ಲಿ ಹುಟ್ಟಿದವಳು. ಇಬ್ಬರು ತಮ್ಮಂದಿರಿದ್ದರೂ ಅಪ್ಪನಿಗೆ ಮಗಳೇ ಅಚ್ಚುಮೆಚ್ಚು. ಮಗಳ ಕಡೆಗೆ ಅಪ್ಪನ ಗಮನ ಕಡಿಮೆಯಾದದ್ದಕ್ಕೋ ಏನೋ ಪುಷ್ಪಾ ಓದಿನಲ್ಲಿ ಬುದ್ಧಿವಂತಳಾಗಿದ್ದರೂ ಹದಿವಯಸ್ಸಿನಲ್ಲೇ ಸಿಕ್ಕ ಸಿಕ್ಕ ಗಂಡು ಮಕ್ಕಳ ಹಿಂದೆ ಹೋಗಿ ಯೌವನದ ತೀಟೆಯನ್ನು ತೀರಿಸಿಕೊಳ್ಳುತ್ತ ಜಾರುತ್ತ ಹೋಗುತ್ತಾಳೆ. ಅವಳು ಗರ್ಭ ತೆಗೆಸಿಕೊಂಡ ಸುದ್ದಿ ಊರಲ್ಲಿ ಹರಡುವ ಮುನ್ನವೇ ಎಚ್ಚರಗೊಂಡ ಅಮ್ಮ ಅವಳ ಕೈಗೆ ಒಂದಷ್ಟು ಹಣ ಕೊಟ್ಟು ‘ಮನೆ ಬಿಟ್ಟು ಎಲ್ಲಾದರೂ ಹೋಗು’ ಎಂದು ಸಿಟ್ಟಿನಿಂದ ಹೇಳುತ್ತಾಳೆ. ಸ್ವಾಭಿಮಾನಿ ಪುಷ್ಪಾ ಮರುದಿನವೇ…

Read More

ಮಂಗಳೂರು : ತಬ್ಲಾ ಸೋಲೋ ಮತ್ತು ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಕಾರ್ಯಕ್ರಮ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಹಾಡುಗಾರಿಕೆ ಹಾಗೂ ರಾಗ, ತಾಳಗಳ ಕುರಿತು ಮಾಹಿತಿ ನೀಡುವ ರಿಮ್ಜಿಮ್ ಬೈಠಕ್ ನ್ನು ಮಂಗಳೂರಿನ ಸಂಗೀತ ಭಾರತಿ ಪ್ರತಿಷ್ಠಾನವು ದಿನಾಂಕ 24 ಆಗಸ್ಟ್ 2025ರಂದು ಸಂಜೆ 5-30 ಗಂಟೆಗೆ ಮಂಗಳೂರಿನ ಕೊಡಿಯಾಲ್ ಬೈಲ್‌ನಲ್ಲಿರುವ ಶಾರದಾ ವಿದ್ಯಾಲಯದ ಧ್ಯಾನ ಮಂದಿರದಲ್ಲಿ ಆಯೋಜಿಸಿದೆ. ಈ ಕಾರ್ಯಕ್ರಮದ ಪೂರ್ವಾರ್ಧದಲ್ಲಿ ತಲ್ಲಾ ಸೋಲೋ ಕಾರ್ಯಕ್ರಮವನ್ನು ಧಾರವಾಡದ ಯುವ ಕಲಾವಿದ ಹೇಮಂತ್ ಜೋಶಿ ನಡೆಸಿಕೊಡಲಿದ್ದಾರೆ. ಉತ್ತರಾರ್ಧದಲ್ಲಿ ಬೆಂಗಳೂರಿನ ಯುವ ಗಾಯಕ ಅನಿರುದ್ಧ ಐತಾಳ್ ಹಾಡಲಿದ್ದಾರೆ. ಹಾರ್ಮೋನಿಯಂನಲ್ಲಿ ಗೋವಾದ ದತ್ತರಾಜ್ ಮಾಲ್ಶಿ ಸಹಕರಿಸಲಿದ್ದಾರೆ. ಪ್ರಸ್ತುತಪಡಿಸುವ ರಾಗಗಳ ಕುರಿತು ಸಂಪೂರ್ಣ ಮಾಹಿಸಿ, ರಾಗದ ಶ್ರೀಮಂತಿಕೆ, ಏರಿಳಿತ ಹಾಗೂ ಶೈಲಿಗಳ ಕುರಿತು ಮಾಹಿತಿಯನ್ನು ಯುವ ಗಾಯಕ ಅನಿರುದ್ಧ ಐತಾಳ್ ನೀಡಲಿದ್ದಾರೆ. ಬಳಿಕ ಸಂಗೀತಾಸಕ್ತರ ಪ್ರಶ್ನೆಗಳಿದ್ದಲ್ಲಿ ಸಂಗೀತಗಾರರು ಉತ್ತರಿಸಲಿದ್ದಾರೆ. ಬೆಂಗಳೂರಿನ ಖ್ಯಾತ ಉದ್ಯಮಿ ಡಾ. ಪಿ. ದಯಾನಂದ ಪೈ ಇವರ ಪ್ರಾಯೋಜಕತ್ವದಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಸಂಗೀತಾಕ್ತರೆಲ್ಲರಿಗೂ…

Read More

ಸುಳ್ಯ : ಭೀಮರಾವ್ ವಾಷ್ಠರ್ ಅಭಿಮಾನಿಗಳ ಬಳಗ ಸುಳ್ಯ ಇದರ ವತಿಯಿಂದ ಆಯೋಜಿಸುವ ‘ಭೀಮರಾವ್ ವಾಷ್ಠರ್ ಉತ್ಸವ’ ಸಮಾರಂಭವು ದಿನಾಂಕ 24 ಆಗಸ್ಟ್ 2025ರಂದು ಬೆಳಿಗ್ಗೆ 9-30ಕ್ಕೆ ಸುಳ್ಯದ ಕನ್ನಡ ಭವನ ಸಭಾಂಗಣದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದ ಅಂಗವಾಗಿ ಅಭಿನಂದನಾ ಸಮಾರಂಭ, ಚುಟುಕು ಕವಿಗೋಷ್ಠಿ ಹಾಗೂ ಸಂಗೀತ ರಸಮಂಜರಿ ನಡೆಯಲಿವೆ. ಕಾರ್ಯಕ್ರಮದಲ್ಲಿ ಸುಳ್ಯದ ಚಂದನ ಸಾಹಿತ್ಯ ವೇದಿಕೆಯ ಅಧ್ಯಕ್ಷರಾದ ಎಚ್. ಭೀಮರಾವ್ ವಾಷ್ಠರ್ ಇವರನ್ನು ಅಭಿನಂದನಾ ಗೌರವದಿಂದ ಸನ್ಮಾನಿಸಲಾಗುವುದು. ಉತ್ಸವವನ್ನು ಸುಳ್ಯದ ಅಚ್ಚಾವರ ದೇವರಕಳಿಯ ಚೈತನ್ಯ ಸೇವಾಶ್ರಮ ಸಂಚಾಲಕರಾದ ಶ್ರೀ ಶ್ರೀ ಯೋಗೇಶ್ವರಾನಂದ ಸರಸ್ವತಿ ಸ್ವಾಮೀಜಿ ಇವರು ಉದ್ಘಾಟಿಸಲಿದ್ದು, ಹಿರಿಯ ಸಾಹಿತಿ ಪ್ರಭಾಕರ ಶಿಶಿಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಏಳು ಮಂದಿ ಸನ್ಮಾನಿತರ ಪರವಾಗಿ ಹಿರಿಯ ಸಾಹಿತಿ ನಾರಾಯಣ ರೈ ಕುಕ್ಕುವಳ್ಳಿ ನುಡಿಗಟ್ಟು ನೀಡಲಿದ್ದು, ಕರ್ನಾಟಕ ಭಾವೈಕ್ಯತಾ ಪರಿಷತ್ ಅಧ್ಯಕ್ಷ ಇಕ್ಬಾಲ್ ಬಾಳಿಲ ತಮ್ಮ ಅಭಿಪ್ರಾಯ ಹಂಚಿಕೊಳ್ಳಲಿದ್ದಾರೆ. ಹೃದಯದ ಮಾತು ಕಾರ್ಯಕ್ರಮದಲ್ಲಿ ಬೆಳಕು ಟ್ರಸ್ಟ್ ಅಧ್ಯಕ್ಷ ಹಾಗೂ ಸಂಜೆವಾಹಿನಿ ಪತ್ರಿಕೆಯ ಪ್ರಧಾನ…

Read More

ಬೆಂಗಳೂರು : ನಿಘಂಟು ತಜ್ಞ ಪ್ರೊ. ಜಿ. ವೆಂಕಟಸುಬ್ಬಯ್ಯ ಇವರ ಸ್ಮರಣಾರ್ಥ ಕಥೆಕೂಟ ಸಂಸ್ಥೆಯು ಸ್ಥಾಪಿಸಿರುವ ‘ಪ್ರೊ. ಜಿ. ವೆಂಕಟಸುಬ್ಬಯ್ಯ ಭಾಷಾ ಸಮ್ಮಾನ್ ಪುರಸ್ಕಾರ’ಕ್ಕೆ 2024ನೇ ಸಾಲಿನಲ್ಲಿ ಅನುವಾದಕ ಪ್ರೊ. ಎಸ್.ಎನ್. ಶ್ರೀಧರ್ ಹಾಗೂ 2025ನೇ ಸಾಲಿನ ಪ್ರಶಸ್ತಿಗೆ ಅನುವಾದಕಿ ಭಾಷಾ ಸಂಶೋಧಕಿ ತಮಿಳ್ ಸೆಲ್ಲಿ ಇವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ರೂ.10,000/- ನಗದು ಮತ್ತು ಫಲಕವನ್ನು ಒಳಗೊಂಡಿದೆ. ದಿನಾಂಕ 01 ನವೆಂಬರ್ 2025ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಹಿರಿಯ ಕವಿ ಸುಬ್ರಾಯ ಚೊಕ್ಕಾಡಿ, ಸಾಹಿತಿಗಳಾದ ಗಿರೀಶ್ ರಾವ್ ಹತ್ತಾರ್ (ಜೋಗಿ), ಕಥೆಕೂಟದ ನಿರ್ವಾಹಕ ಗೋಪಾಲಕೃಷ್ಣ ಕುಂಟಿನಿ, ಜಿ.ವಿ. ಅರುಣ ಇದ್ದರು. ನಿಘಂಟು ತಜ್ಞ ಪ್ರೊ. ಜಿ. ವೆಂಕಟಸುಬ್ಬಯ್ಯ ಸ್ಮರಣಾರ್ಥ ಇವರ ಹೆಸರಿನಲ್ಲಿ ‘ಕಥಕೂಟ’ ಸಂಸ್ಥೆಯು ಪ್ರಶಸ್ತಿ ಆರಂಭಿಸಿದ್ದು, ಭಾಷೆಯಲ್ಲಿ ವಿಶಿಷ್ಟ ಪ್ರಯೋಗಗಳನ್ನು ಮಾಡಿದ ಭಾಷೆಗೆ ಸೃಜನಶೀಲ ಕೊಡುಗೆ ನೀಡಿದ ಮತ್ತು ಭಾಷೆಯ ಸಾಧ್ಯತೆಗಳನ್ನು ವಿಸ್ತರಿಸುವ ಕೆಲಸದಲ್ಲಿ ನಿರತರಾಗಿರುವ ಪ್ರತಿಭಾವಂತರಿಗೆ ಪ್ರತಿ ವರ್ಷ ‘ಪ್ರೊ. ಜಿ.…

Read More