Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಉಳ್ಳಾಲ ತಾಲೂಕು ಘಟಕ, ಕರಾವಳಿ ಸಂಗೀತ ಕಲಾವಿದರ ಒಕ್ಕೂಟ (ರಿ.) ದ.ಕ. ಉಡುಪಿ ಜಿಲ್ಲೆ ಮತ್ತು ಶಾರದಾ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್, ದೇವಿನಗರ, ತಲಪಾಡಿ ಇವರ ಸಂಯುಕ್ತ ಸಹಯೋಗದಲ್ಲಿ ‘ಭಾವಯಾನ’ ಕನ್ನಡ ಗೀತ-ಸಂಗೀತ ಕಾರ್ಯಾಗಾರವನ್ನು ದಿನಾಂಕ 13-06-2024ರಂದು ಬೆಳಿಗ್ಗೆ ಗಂಟೆ 9-00ರಿಂದ ಶಾರದಾ ವಿದ್ಯಾನಿಕೇತನ ಡೇ-ಬೋರ್ಡಿಂಗ್ ವಿಭಾಗದ ಸರಸ್ವತಿ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಶಾರದಾ ಸಮೂಹ ವಿದ್ಯಾ ಸಂಸ್ಥೆಗಳ ಅಧ್ಯಕ್ಷರಾದ ಡಾ. ಎಂ.ಬಿ. ಪುರಾಣಿಕ್ ಇವರು ಈ ಕಾರ್ಯಾಗಾರದ ಉದ್ಘಾಟನೆ ಮಾಡಲಿದ್ದು, ದ.ಕ. ಜಿಲ್ಲಾ ಕ.ಸಾ.ಪ. ಉಳ್ಳಾಲ ತಾಲೂಕು ಇದರ ಅಧ್ಯಕ್ಷರಾದ ಡಾ. ಧನಂಜಯ ಕುಂಬ್ಳೆ ಇವರು ಅಧ್ಯಕ್ಷತೆ ವಹಿಸಲಿರುವರು. ಮಂಗಳೂರು ಸ್ಮಾರ್ಟ್ ಸಿಟಿಯ ಜನರಲ್ ಮ್ಯಾನೇಜರ್ ಶ್ರೀ ಕೆ.ಎಸ್. ಅರುಣ್ ಪ್ರಭ, ಕರ್ನಾಟಕ ಅರಣ್ಯ ಇಲಾಖೆಯ ನಿವೃತ್ತ ಅಧಿಕಾರಿ ಶ್ರೀ ಕೆರೆಮನೆ ನರಸಿಂಹ ಹೆಗಡೆ, ಕರಾವಳಿ ಸಂಗೀತ ಕಲಾವಿದರ ಒಕ್ಕೂಟ (ರಿ) ಅಧ್ಯಕ್ಷರಾದ ಶ್ರೀ ದೀಪಕ್‌ರಾಜ್ ಉಳ್ಳಾಲ್ ಮತ್ತು ಶಾರದಾ ವಿದ್ಯಾನಿಕೇತನದ…
ದುಬೈ : ಯಕ್ಷಗಾನ ಅಭ್ಯಾಸ ಕೇಂದ್ರ ದುಬೈ ಯು.ಎ.ಇ. ವತಿಯಿಂದ ದುಬೈ ಯಕ್ಷೋತ್ಸವವು ದಿನಾಂಕ 09-06-2024ರಂದು ಮಧ್ಯಾಹ್ನ 2-00 ಗಂಟೆಯಿಂದ ದುಬೈನ ಕರಮ ಶೇಖ್ ರಷೀದ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಯಕ್ಷಗಾನ ಅಭ್ಯಾಸ ಕೇಂದ್ರದ ಯು.ಎ.ಇ.ಯ ಬಾಲ-ಯುವ ಮತ್ತು ಪರಿಣತ-ಪ್ರೌಢ ಕಲಾವಿದರಿಂದ ‘ದಾಶರಥಿ ದರ್ಶನ’ ಪೌರಾಣಿಕ ಕನ್ನಡ ಪ್ರಸಂಗದ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಅವರ ಗಾನಸಾರಥ್ಯ, ಯುವ ಭಾಗವತರಾದ ಭವ್ಯಶ್ರೀ ಹರೀಶ ಕುಲ್ಕುಂದ ಮತ್ತು ಕೃಷ್ಣಪ್ರಸಾದ್ ರಾವ್ ಸುರತ್ಕಲ್ ಇವರ ಭಾಗವತಿಕೆಯಲ್ಲಿ ಪ್ರಸಂಗ ಮೂಡಿಬರಲಿದೆ. ಹಿಮ್ಮೇಳದಲ್ಲಿ ಸವಿನಯ ನೆಲ್ಲಿತೀರ್ಥ, ಮಯೂರ ನಾಯ್ಗ, ಪುತ್ತಿಗೆ ವೆಂಕಟೇಶ ಶಾಸ್ತ್ರಿ ಮತ್ತು ಭವಾನಿ ಶಂಕರ ಶರ್ಮ ಭಾಗವಹಿಸುವರು. ಚಕ್ರತಾಳದಲ್ಲಿ ಮಾಸ್ಟರ್ ಭವ್ಯಶ್ರೀ ಅವರ ಪುತ್ರ ಅಗಸ್ತ್ಯ ಕುಲ್ಕುಂದ ಕಾಣಿಸಿಕೊಳ್ಳಲಿದ್ದು, ಜತೆಗೆ ಸ್ಥಳೀಯ ಕಲಾವಿದರು ಹಿಮ್ಮೇಳದಲ್ಲಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಪ್ರಧಾನ ಸಂಚಾಲಕ ಶಶಿಧರ ಶೆಟ್ಟಿ ಬರೋಡ ಮತ್ತು ಯು.ಎ.ಇ.ಯ ಗಣ್ಯರ ಸಮ್ಮುಖದಲ್ಲಿ ಈ ಬಾರಿಯ ‘ಯಕ್ಷಶ್ರೀ ರಕ್ಷಾ ಗೌರವ…
ಸುಂಟಿಕೊಪ್ಪ : ನಾಕೂರು ಶಿರಂಗಾಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಂಜಿಕೆರೆ ಸಮುದಾಯ ಭವನದಲ್ಲಿ ತಲಕಾವೇರಿ ಜ್ಞಾನವಿಕಾಸ ತಂಡದ ವತಿಯಿಂದ ಬೀದಿ ನಾಟಕದ ಮೂಲಕ ಸಾಮಾಜಿಕ ಅರಿವು ಮೂಡಿಸುವ ಕಾರ್ಯಕ್ರಮವು ದಿನಾಂಕ 02-06-2024ರಂದು ನಡೆಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಕಾನ್‌ಬೈಲ್ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ತಲಾಕಾವೇರಿ ಜ್ಞಾನವಿಕಾಸ ತಂಡದಿಂದ ವೈಯಕ್ತಿಕ ಆರೋಗ್ಯದ ಬಗ್ಗೆ ಕಾಳಜಿ, ಅಪ್ರಾಪ್ತ ವಯಸ್ಕ ಮಕ್ಕಳಿಗೆ ವಿವಾಹ ನಡೆಸುವುದರಿಂದ ಮುಂದಾಗುವ ದುಷ್ಪಾರಿಣಾಮ, ತಮ್ಮ ಸುತ್ತ ಮುತ್ತಲಿನ ಪರಿಸರ ಸ್ವಚ್ಛತೆ, ಪ್ಲಾಸ್ಟಿಕ್ ಬಳಕೆಯಿಂದ ಪರಿಸರದ ಮೇಲೆ ಆಗುತ್ತಿರುವ ಹಾನಿ ಹಾಗೂ ತಮ್ಮ ಸುತ್ತಮುತ್ತಲಿನಲ್ಲಿ ಹಸಿರು ಪರಿಸರವನ್ನು ಸಂರಕ್ಷಿಸುವ ವಿಚಾರದ ಕುರಿತು ಬೀದಿನಾಟಕದ ಮೂಲಕ ಅರಿವು ಮೂಡಿಸಲಾಯಿತು. ಕಾರ್ಯಕ್ರಮವನ್ನು ಗ್ರಾಮ ಪಂಚಾಯತ್ ಕಾರ್ಯದರ್ಶಿ ಚಂದ್ರಶೇಖರ್ ಉದ್ಘಾಟಿಸಿದರು. ವೇದಿಕೆಯಲ್ಲಿ ಕಾನ್‌ಬೈಲ್ ಸರಕಾರಿ ಪ್ರೌಢಶಾಲೆಯ ಶಿಕ್ಷಕರಾದ ಮೂರ್ತಿ, ಗ್ರಾಮ ಪಂಚಾಯತ್ ಸದಸ್ಯೆ ಪ್ರೇಮಾ, ಜ್ಞಾನವಿಕಾಸ ಕೇಂದ್ರ ಸಮನ್ವಯ ಅಧಿಕಾರಿ ಮಾಲಿನಿ, ಒಕ್ಕೂಟದ ಅಧ್ಯಕ್ಷೆ ಖತೀಜ, ಸೇವಾ ಪ್ರತಿನಿಧಿ ಯಶೋಧ ಬಸವರಾಜ್ ಉಪಸ್ಥಿತರಿದ್ದರು. ಪ್ರೌಢಶಾಲೆಯ…
ಮಂಗಳೂರು : ಜರ್ನಿ ಥೇಟರ್ ಗ್ರೂಪ್ (ರಿ.) ಮತ್ತು ಮಾಂಡ್ ಸೊಭಾಣ್ ಕಲಾಂಗಣ್ ಶಕ್ತಿನಗರ ಇವುಗಳ ಆಶ್ರಯದಲ್ಲಿ ‘ಕ್ರಾಸ್ ಫೇಡ್’ ಮೂರು ದಿವಸಗಳ ಬೆಳಕಿನ ವಿನ್ಯಾಸದ ಕಾರ್ಯಾಗಾರವನ್ನು ದಿನಾಂಕ 25-06-2024ರಿಂದ 27-06-2024ರವರೆಗೆ ಮಂಗಳೂರಿನ ಶಕ್ತಿನಗರದ ಕಲಾಂಗಣ್ ಇಲ್ಲಿ ಆಯೋಜಿಸಲಾಗಿದೆ. ರಂಗಾಯಣದ ಕೃಷ್ಣಕುಮಾರ್ ನಾರ್ಣಕಜೆ ಮತ್ತು ನೀನಾಸಂನ ಮಧುಸೂದನ್ ಇವರುಗಳು ಈ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿರುವರು. ಹೆಚ್ಚಿನ ಮಾಹಿತಿ ಹಾಗೂ ನೋಂದಾವಣೆಗಾಗಿ 9380412518 ಸಂಪರ್ಕಿಸಿರಿ.
ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರರ 133ನೆಯ ಜನ್ಮದಿನೋತ್ಸವ ಕಾರ್ಯಕ್ರಮವು ದಿನಾಂಕ 06-06-2024ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು ಮಾತನಾಡಿ “ಉತ್ತಮ ಆಡಳಿತಗಾರರಾಗಿದ್ದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಕನ್ನಡ ಸಾಹಿತ್ಯ ಪರಿಷತ್ತನ್ನು ಬೆಳೆಸಿದರು, ಜೀವನ ಪತ್ರಿಕೆಯನ್ನು ನಡೆಸಿದರು. ಬರಹಗಾರರಿಗೆ ಬೆಂಬಲವಾಗಿ, ಪುಸ್ತಕ ಪ್ರಕಾಶನಕ್ಕೆ ಸಹಾಯ ಮಾಡಿದ್ದರಿಂದ ಕನ್ನಡ ಸಾಹಿತ್ಯ ಬಹುಮುಖಿಯಾಗಿ ಬೆಳೆಯುವುದು ಸಾಧ್ಯವಾಯಿತು. ಕರ್ಣಾಟಕ ಸಾಹಿತ್ಯ ಪರಿಷತ್ತು ಸ್ಥಾಪನೆಯಾಗಬೇಕು ಎಂದು ಸೂಚಿಸಿದವರಲ್ಲಿ ಮಾಸ್ತಿಯವರೂ ಪ್ರಮುಖರು. 1943ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾದ ಮಾಸ್ತಿಯವರ ಮುಖ್ಯವಾದ ಕೊಡುಗೆ ಕನ್ನಡ ಸಾಹಿತ್ಯ ಪರಿಷತ್ತಿನ ವಿಕೇಂದ್ರೀಕರಣ. ಅವರ ಕಾಲದಲ್ಲಿ ಸದಸ್ಯರ ಸಂಖ್ಯೆ 2,500ಕ್ಕೆ ಏರಿತು. ಮಹಿಳಾ ಶಾಖೆ ಕೂಡ ಆರಂಭವಾಯಿತು. ‘ಕನ್ನಡ ಸರಸ್ವತಿ ಹಳ್ಳಿಗೆ ಬಂದಳು’ ಎನ್ನುವ ಯೋಜನೆಯಡಿ ಹಳ್ಳಿ-ಹಳ್ಳಿಗಳಲ್ಲಿಯೂ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳು ನಡೆದವು. ಮಾಸ್ತಿಯವರು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ಕಲಾಪಗಳಿಗೆ ಎಷ್ಟೇ ದೂರ ಪ್ರಯಾಣ ಮಾಡಿದರೂ…
ಉಡುಪಿ : ಕೋಟೇಶ್ವರದ ಎನ್.ಆರ್.ಎ.ಎಂ.ಎಚ್. ಪ್ರಕಾಶನ ಮತ್ತು ಸ್ಥಿತಿಗತಿ ತ್ರೈಮಾಸಿಕ ಪತ್ರಿಕೆಗಳ ಆಶ್ರಯದಲ್ಲಿ ಕನ್ನಡದ ಹೆಸರಾಂತ ಕಾದಂಬರಿಕಾರ, ಸಂಘಟಕ ದಿ. ಪಾಂಡೇಶ್ವರ ಸೂರ್ಯನಾರಾಯಣ ಚಡಗ ಅವರ ನೆನಪಿನಲ್ಲಿ ಕೊಡುವ 15ನೇ ವರ್ಷದ ‘ಕಾದಂಬರಿ ಪ್ರಶಸ್ತಿ’ಗೆ 2023ರಲ್ಲಿ ಪ್ರಥಮ ಆವೃತ್ತಿಯಾಗಿ ಪ್ರಕಟವಾದ ಕಾದಂಬರಿಗಳನ್ನು ಲೇಖಕ ಹಾಗೂ ಪ್ರಕಾಶಕರಿಂದ ಆಹ್ವಾನಿಸಲಾಗಿದೆ. ಆಸಕ್ತರು ತಮ್ಮ ಕೃತಿಯ ಮೂರು ಪ್ರತಿಗಳನ್ನು ಸ್ಪರ್ಧೆಯ ಸಂಚಾಲಕರಾದ ಪ್ರೊ. ಉಪೇಂದ್ರ ಸೋಮಯಾಜಿ, ‘ಶ್ರೀ’ ಚಿತ್ರಪಾಡಿ, ಅಂಚೆ ಸಾಲಿಗ್ರಾಮ, ಉಡುಪಿ ಜಿಲ್ಲೆ – 575225 ವಿಳಾಸಕ್ಕೆ ದಿನಾಂಕ 30-08-2024ರ ಒಳಗೆ ತಲುಪುವಂತೆ ಕಳುಹಿಸಿಕೊಡಬಹುದು. ನವೆಂಬರ್ ತಿಂಗಳಲ್ಲಿ ಸಾರ್ವಜನಿಕ ಸಮಾರಂಭದಲ್ಲಿ ಪ್ರದಾನಗೊಳ್ಳಲಿರುವ ಈ ಪ್ರಶಸ್ತಿಯು, ಪ್ರಶಸ್ತಿ ಪತ್ರ, ಸ್ಮರಣಿಕೆ ಹಾಗೂ ರೂ.10 ಸಾವಿರ ನಗದನ್ನು ಒಳಗೊಂಡಿದೆ ಎಂದು ಪ್ರಶಸ್ತಿ ಸಮಿತಿಯ ಅಧ್ಯಕ್ಷ ಡಾ. ಭಾಸ್ಕರಾಚಾರ್ಯ ತಿಳಿಸಿದ್ದಾರೆ.
ಉಡುಪಿ : ಝೇಂಕಾರ ತಂಡದ 10ನೇ ವಾರ್ಷಿಕೋತ್ಸವ ಸಮಾರಂಭದ ಪ್ರಯುಕ್ತ ‘ನಾದ ಝೇಂಕಾರ’ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ದಿನಾಂಕ 09-06-2024ರಂದು ಸಂಜೆ 7-00 ಗಂಟೆಗೆ ಉಡುಪಿಯ ಟೌನ್ ಹಾಲ್ ಇಲ್ಲಿ ಆಯೋಜಿಸಲಾಗಿದೆ. ಕುಮಾರಿ ಸೂರ್ಯಗಾಯತ್ರಿ ಇವರು ಹಾಡುಗಾರಿಕೆಗೆ ಮೃದಂಗದಲ್ಲಿ ವಿದ್ವಾನ್ ಪಿ.ವಿ. ಅನಿಲ್ ಕುಮಾರ್, ವಯೋಲಿನ್ ವಿದ್ವಾನ್ ಗಣರಾಜ ಕಾರ್ಲೆ, ತಬಲಾದಲ್ಲಿ ವಿದ್ವಾನ್ ಪ್ರಶಾಂತ್ ಶಂಕರ್, ಕೀಬೋರ್ಡಿನಲ್ಲಿ ವಿದ್ವಾನ್ ವಿನೀಶ್ ಕೆ.ಪಿ. ಹಾಗೂ ತಾಳ ವಾದ್ಯದಲ್ಲಿ ವಿದ್ವಾನ್ ಸಿಲೇಶ್ ಮಾರಾರ್ ಇವರುಗಳು ಸಹಕರಿಸಲಿದ್ದಾರೆ.
ಕವಿ ಕಯ್ಯಾರರ ಒಂದು ಕವಿತೆಯ ಪಾಠವನ್ನು ಅವರಿಂದಲೇ ಹೇಳಿಸಿಕೊಳ್ಳುವ ಭಾಗ್ಯ ಪೆರಡಾಲದ ನವಜೀವನ ಪ್ರೌಢಶಾಲೆಯಲ್ಲಿ ಅವರ ವಿದ್ಯಾರ್ಥಿನಿಯಾಗಿದ್ದ ನನಗೆ ದೊರೆತಿತ್ತು. ಮಹಾಭಾರತದ ಕರ್ಣನ ಪಾತ್ರವನ್ನು ಕೇಂದ್ರೀಕರಿಸಿದ ಆ ರಚನೆಯು ಕಯ್ಯಾರರ ‘ಬೇಡುವೆಂ ಚಂದ್ರವಂಶದ ಕುಡಿಯ ಕಾಪಾಡು’ ಎಂಬ ಶೀರ್ಷಿಕೆಯ ಸಣ್ಣಕಾವ್ಯದ ಒಂದು ಭಾಗವಾಗಿತ್ತು. ಒಂಬತ್ತನೇ ತರಗತಿಯಲ್ಲಿ ನಮಗೆ ಅದು ಪಠ್ಯವಾಗಿತ್ತು. ಈ ಪಠ್ಯಭಾಗವು ಕರ್ಣನ ಬದುಕಿನ ಒಂದು ನಿರ್ಣಾಯಕ ಪ್ರಸಂಗದ ನಿರೂಪಣೆಯಾಗಿತ್ತು. ಕರ್ಣನ ಭೇಟಿಗಾಗಿ ಬಂದ ಕುಂತಿ, ತಾಯಿ ಮಗನ ನಡುವೆ ನಡೆದ ಹೃದಯಸ್ಪರ್ಶಿ ಸಂಭಾಷಣೆ, ಆಕೆಯ ಕೋರಿಕೆಯಂತೆ ವರವನ್ನು ನೀಡುವ ಕರ್ಣ-ಒಟ್ಟಿನಲ್ಲಿ ಕರುಣರಸ ಮಡುಗಟ್ಟಿದ ಸನ್ನಿವೇಶ. ಕರ್ಣನ ಬದುಕಿನ ದುರಂತ ಎಂಥವರ ಮನಸ್ಸನ್ನೂ ಕಲಕಿಬಿಡುವಂಥದ್ದು. ಕಂಚಿನ ಕಂಠದ ನಮ್ಮ ಗುರುಗಳು ಆ ದುರಂತದ ಎಳೆಯನ್ನು ಕವಿ ಕಲ್ಪನೆಯಿಂದ ಅನುಭವಿಸಿ ಬರೆದರು. ಪಾಠ ಮಾಡುವಾಗ ಮತ್ತೆ ಅದು ಮರುಹುಟ್ಟು ಪಡೆದು ರಸಸ್ಯಂದಿಯಾಗಿ ನಮ್ಮ ಎಳೆಯ ಕಿವಿಗಳನ್ನು ಮುಟ್ಟುತ್ತಿದ್ದರೆ ಗುರುಗಳ ಕಪೋಲದಲ್ಲೂ ನಮ್ಮ ಕಣ್ಣಲ್ಲೂ ನೀರು. ಈಗ ಮತ್ತೆ ಐವತ್ತು ವರ್ಷಗಳ ಬಳಿಕ…
ಮಂಗಳೂರು : ಇತ್ತೀಚೆಗೆ ಅಗಲಿದ ಹಿರಿಯ ಕೊಂಕಣಿ ಸಾಹಿತಿ, ಸಂಘಟಕ ಮತ್ತು ಕಲಾವಿದರ ಸಂಘಟನೆಯ ಅಧ್ಯಕ್ಷ ಸಿಕೇರಾಮ್, ಸುರತ್ಕಲ್ ಇವರಿಗೆ ನುಡಿನಮನ ಕಾರ್ಯಕ್ರಮವು ಅವರ 70ನೇ ಜನ್ಮದಿನವಾದ 05-06-2024ರ ಬುಧವಾರ ಸಂಜೆ ಮಂಗಳೂರಿನ ಬೆಂದೂರ್ ಮಿನಿ ಸಭಾಗೃಹದಲ್ಲಿ ನಡೆಯಿತು. ಸಿಕೇರಾಮ್ ಅವರ ಅತ್ಯಂತ ಕಿರಿಯ ಅಭಿಮಾನಿ ಪುಟಾಣಿ ಜೊಅನ್ ನೈರಾ ಮೊರಾಸ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ನುಡಿನಮನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಿಕೇರಾಮ್ ಸುರತ್ಕಲ್ ಕಾವ್ಯನಾಮದಿಂದಲೇ ಖ್ಯಾತರಾಗಿರುವ ರೊನಾಲ್ಡ್ ಜೋಸೆಫ್ ಸಿಕ್ವೇರಾ ಇವರ ಬದುಕಿನ ಬಗ್ಗೆ ಶ್ರೀಮತಿ ಎವ್ಲಾಲಿಯಾ ಡಿ ಸೊಜಾ ಮಾತನಾಡಿ ಅವರ ಅಪರೂಪದ, ಜನಾನುರಾಗಿ – ಜೀವನೋತ್ಸಾಹಿ ವ್ಯಕ್ತಿತ್ವದ ವಿಭಿನ್ನಮಜಲುಗಳನ್ನು ತೆರೆದಿಟ್ಟರು. ” ರೊನಾಲ್ಡ್ ಹನ್ನೆರಡು ಭಾಷೆಗಳನ್ನು ಬಲ್ಲವರಾಗಿದ್ದು, ಕೊಂಕಣಿ – ಕನ್ನಡ ಮಾತ್ರವಲ್ಲ ಹಿಂದೀ ಗೀತೆಗಳ ಬಗ್ಗೆಯೂ ಅವರಿಗೆ ಅಪಾರ ಜ್ಞಾನವಿತ್ತು. ವಿಲ್ಪಿ ರೆಬಿಂಬಸ್ ಹಾಗೂ ಮೊಹಮ್ಮದ್ ರಫೀ ಹಾಡುಗಳೆಲ್ಲವೂ ಅವರಿಗೆ ಕಂಠಪಾಠ ಇದ್ದವು. ಇಳಿವಯಸ್ಸಿನಲ್ಲೂ ತಬ್ಲಾ ತರಗತಿಗೆ ಹಾಜರಾಗುತ್ತಿದ್ದರು. ಅಮೆಚೂರ್ ರೇಡಿಯೊ ಕ್ಲಬ್ ಸದಸ್ಯರಾಗಿದ್ದ…
ಪುತ್ತೂರು : ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ (ರಿ.) ಪುತ್ತೂರು ಅರ್ಪಿಸುವ ಪದವರ್ಣಗಳ ವಿಶಿಷ್ಟ ಪ್ರಸ್ತುತಿಯಾದ ‘ನೃತ್ಯಾಂತರಂಗ 111’ (ವರ್ಣಿಕ 2) ಕಾರ್ಯಕ್ರಮವನ್ನು ದಿನಾಂಕ 09-06-2024ರಂದು ಸಂಜೆ 4-30 ಗಂಟೆಗೆ ಪುತ್ತೂರಿನ ದರ್ಬೆಯ ಶಶಿಶಂಕರ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ವಿದ್ವಾನ್ ದೀಪಕ್ ಕುಮಾರ್, ವಿದುಷಿ ಅಕ್ಷತಾ ಕೆ. ಮತ್ತು ವಿದುಷಿ ಅಪೂರ್ವ ಗೌರಿ ದೇವಸ್ಯ ಇವರುಗಳು ನೃತ್ಯ ಪ್ರಸ್ತುತಿ ನೀಡಲಿದ್ದು, ಮಂಗಳೂರಿನ ಸಹಾಯಕ ಪ್ರೊಫೆಸರ್ ಆಗಿರುವ ಡಾ. ನಿರೀಕ್ಷಾ ಶೆಟ್ಟಿ ಇವರು ಭಾಗವಹಿಸಲಿರುವರು.