Subscribe to Updates
Get the latest creative news from FooBar about art, design and business.
Author: roovari
ಯಕ್ಷಗಾನ ಎಂದರೆ ಪುರುಷ ಪ್ರಧಾನವಾದದ್ದು. ರಂಗದಲ್ಲಿ ಪುರುಷರೇ ಮಹಿಳೆಯರಾಗುತ್ತಿದ್ದರು. ಇಲ್ಲಿ ಎಲ್ಲವೂ ಪುರುಷಮಯ ಎಂಬ ಕಾಲ ಬದಲಾಗಿದೆ. ಪುರುಷ ಪ್ರಧಾನವಾದ ಯಕ್ಷಗಾನ ಕ್ಷೇತ್ರದಲ್ಲಿ ಇರುವ ತಾಳಮದ್ದಳೆಯಲ್ಲೂ ಮಹಿಳೆಯರು ಲಗ್ಗೆ ಇಟ್ಟಿದ್ದಾರೆ. ಮೇಲಾಗಿ ಮಹಿಳೆಯರೇ ಸೇರಿ ಯಕ್ಷಗಾನ ತಾಳಮದ್ದಳೆ ಸಂಘಟಿಸಿ, ಪುರುಷರಿಗೆ ಸವಾಲೊಡ್ಡುತ್ತಿದ್ದಾರೆ. ಸ್ತ್ರೀ ಸಹಜ ಬೆಡಗು, ಬಿನ್ನಾಣವಷ್ಟೇ ಅಲ್ಲ; ಭಯಾನಕ, ಭೀಭತ್ಸ, ಶೃಂಗಾರ, ಕರುಣೆ, ವೀರ ಹೀಗೆ ಎಲ್ಲಾ ತರಹದ ಪುರುಷ ಪಾತ್ರವನ್ನು ಮಾಡಿ ಯಕ್ಷಗಾನ ತಾಳಮದ್ದಳೆ ಕ್ಷೇತ್ರದಲ್ಲಿ ಸೈ ಎನಿಸಿಕೊಳ್ಳುತ್ತಿದ್ದಾರೆ ಮಹಿಳೆಯರು. ಹೀಗೆ ಯಕ್ಷಗಾನ ರಂಗದಲ್ಲಿ “ಯಕ್ಷ ಮಂಜುಳಾ” ಕದ್ರಿ ಎಂಬ ಒಂದು ತಂಡ ಕಟ್ಟಿ ಯಕ್ಷಗಾನ ರಂಗದಲ್ಲಿ ಹಾಗೂ ಹಲವಾರು ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿರುವವರು ಶ್ರೀಮತಿ ಪೂರ್ಣಿಮಾ ಪ್ರಭಾಕರ ರಾವ್ ಪೇಜಾವರ. ಕೊಡಗಿನ ಕಾವೇರಿಯ ಪದತಲದಲ್ಲಿರುವ ಭಾಗಮಂಡಲದ ದಿ.ನಾರಾಯಣ ಸರಳಾಯ ಮತ್ತು ಭವಾನಿ ಸರಳಾಯ ಇವರ ಮಗಳಾಗಿ 16.02.1959ರಂದು ಜನಿಸಿದ ಪೂರ್ಣಿಮಾ ಪ್ರಭಾಕರ ರಾವ್ ಪೇಜಾವರ ವಾಣಿಜ್ಯ ಪದವೀಧರೆ (B.Com). ಕಾಲೇಜು ದಿನಗಳಲ್ಲಿ ಡಾ.ಚಂದ್ರಶೇಖರ ದಾಮ್ಲೆ, ಸುಳ್ಯ…
ಉಡುಪಿ : ಹಿರಿಯ ಸಾಹಿತಿ, ಸಂಶೋಧಕ ಡಾ. ಬಿ.ವಿ. ಶಿರೂರು ಇವರು 2024ನೇ ಸಾಲಿನ ‘ಸೇಡಿಯಾಪು ಕೃಷ್ಣಭಟ್ಟ ಪ್ರಶಸ್ತಿ’ಗೆ ಆಯ್ಕೆಯಾಗಿರುತ್ತಾರೆ. ಕನ್ನಡ ಭಾಷೆ, ಸಾಹಿತ್ಯ, ವ್ಯಾಕರಣ, ಭಾಷಾ ಶಾಸ್ತ್ರ, ಕಥನ ಕಾವ್ಯ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ಮಹತ್ವದ ಕೊಡುಗೆ ನೀಡಿರುವ ಸೇಡಿಯಾಪು ಕೃಷ್ಣ ಭಟ್ಟರ ನೆನಪಿನಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುವುದು ಎಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ತಿಳಿಸಿರುತ್ತಾರೆ. ಪ್ರಶಸ್ತಿಯು ರೂಪಾಯಿ 10,000ನಗದು ಹಾಗೂ ಪ್ರಶಸ್ತಿ ಫಲಕವನ್ನೊಳಗೊಂಡಿರುತ್ತದೆ. 1941 ಮಾರ್ಚ್ 2ರಂದು ಜನಿಸಿದ ಡಾ. ಬಿ.ವಿ. ಶಿರೂರು 1963ರಲ್ಲಿ ಬಿ.ಎ., 1965ರಲ್ಲಿ ಎಂ.ಎ. ಹಾಗೂ ಪಿ.ಎಚ್.ಡಿ. ಪದವಿ ಪಡೆದರು. ಶ್ರೀಯುತರು 1966ರಿಂದ 1985ರವರೆಗೆ ನರೇಗಲ್ ಇಲ್ಲಿನ ಶ್ರೀ ಅನ್ನದಾನೀಶ್ವರ ಮಹಾವಿದ್ಯಾಲಯದಲ್ಲಿ ಅಧ್ಯಾಪಕರಾಗಿ, ಪ್ರವಾಚಕರಾಗಿ ಹಾಗೂ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ್ದರು. ನಂತರ 1985ರಲ್ಲಿ ಕರ್ನಾಟಕ ವಿ.ವಿ.ಯ ಕನ್ನಡ ಅಧ್ಯಯನ ಪೀಠದಲ್ಲಿ ಜೈನಸಾಹಿತ್ಯ ಪ್ರವಾಚಕರಾಗಿ ಸೇರಿ 1994ರಲ್ಲಿ ಪ್ರಾಧ್ಯಾಪಕರಾಗಿ 2001ರಲ್ಲಿ ನಿವೃತ್ತಿಯಾದರು. ಹಳೆಗನ್ನಡ ವಚನ ಸಾಹಿತ್ಯ…
ಮಂಗಳೂರು : ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ, ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು ಹಾಗೂ ದ. ಕ. ಜಿಲ್ಲಾ ಘಟಕ ವತಿಯಿಂದ ಮಂಗಳೂರು ತಾಲೂಕು ಘಟಕದ ಪದಗ್ರಹಣ ಮತ್ತು ಜಾನಪದ ವಿಚಾರ ಸಂಕಿರಣ ಕಾರ್ಯಕ್ರಮವು ದಿನಾಂಕ 08-06-2024ರ ಅಪರಾಹ್ನ 2.30ಕ್ಕೆ ಉರ್ವ ತುಳು ಭವನದ ಸಮೀಪವಿರುವ ಮಹಿಳಾ ಮಂಡಲಗಳ ಒಕ್ಕೂಟದಲ್ಲಿ ನಡೆಯಲಿದೆ. ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು ಇದರ ಅಧ್ಯಕ್ಷೆ ಚಂಚಲಾ ತೇಜೋಮಯ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಉರ್ವ ಠಾಣೆಯ ಪೊಲೀಸ್ ಇನ್ ಸೆಕ್ಟರ್ ಭಾರತಿ ಜಿ. ಉದ್ಘಾಟಿಸಲಿರುವರು. ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅತಿಥಿಯಾಗಿ ಭಾಗವಹಿಸಲಿದ್ದು, ಕ. ಜಾ. ಪ. ಅಧ್ಯಕ್ಷ ಪ್ರವೀಣ್ ಕುಮಾರ್, ಕಾರ್ಯದರ್ಶಿ ರಾಜೇಶ್ ಸ್ಕೈಲಾರ್ಕ್, ಕೋಶಾಧಿಕಾರಿ ತಾರಾನಾಥ ಶೆಟ್ಟಿ ಬೋಳಾರ, ಜಿಲ್ಲಾ ಸಂಚಾಲಕ ರಾಜೇಶ್ ಆಳ್ವ, ಪ್ರಾಧ್ಯಾಪಕ ಪುರುಷೋತ್ತಮ ಬಲಾಯ ಭಾಗವಹಿಸಲಿದ್ದಾರೆ.
ಕಾಸರಗೋಡು: ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ಪೆರಿಯ ಇಲ್ಲಿನ ಕನ್ನಡ ವಿಭಾಗದ ವತಿಯಿಂದ ಸುಳ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ಪೆರಿಯ ಕಾಲೇಜಿನಲ್ಲಿ ಕನ್ನಡದ ಪ್ರಸಿದ್ಧ ಲೇಖಕ ಪೂರ್ಣಚಂದ್ರ ತೇಜಸ್ವಿಯವರ ‘ಅಬಚೂರಿನ ಪೋಸ್ಟಾಫೀಸು’ ಎಂಬ ಕಥಾಸಂಕಲನದ ಕಥೆಗಳ ಕುರಿತ ವಿಮರ್ಶಾ ಸ್ಪರ್ಧೆಯು ದಿನಾಂಕ 30-05-2024 ರಂದು ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಲಕ್ಷ್ಮೀ ನಾರಾಯಣ ಕಜಿಗದ್ದೆ ಮಾತನಾಡಿ ಪೂರ್ಣಚಂದ್ರ ತೇಜಸ್ವಿಯವರ ಬರವಣಿಗೆಯ ವಿಶೇಷತೆಯನ್ನು ವಿವರಿಸಿದರು. ಅಲ್ಲದೆ ಜೀವನದಲ್ಲಿ ಸಾಹಿತ್ಯದ ಓದು, ಆಸಕ್ತಿಯ ಮಹತ್ವದ ಕುರಿತು ತಿಳಿಸಿದರು. ಸಾಹಿತ್ಯದ ಓದು ನಮ್ಮನ್ನು ಇತರರಿಗಿಂತ ಭಿನ್ನವಾಗಿಸುತ್ತದೆ ಎಂದರು. ಕಾರ್ಯಕ್ರಮದ ಸಂಯೋಜಕ ಕೇರಳ ಕೇಂದ್ರಿಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಭಾರ ಮುಖ್ಯಸ್ಥೆ ಡಾ. ಸೌಮ್ಯಾ ಎಚ್. ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸುಳ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಸತೀಶ್ಕುಮಾರ್ ಕೆ. ಆರ್. ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಸಹಾಯಕ ಪ್ರಾಧ್ಯಾಪಿಕೆಯರಾದ ಡಾ.ಜಯಶ್ರೀ ಮತ್ತು ಸರಸ್ವತಿ ಕೆ. ಉಪಸ್ಥಿತರಿದ್ದರು. ಸುಳ್ಯ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕರಾದ…
ಸಾಂಪ್ರದಾಯಿಕ ಶೈಲಿಯ ಸಂಪೂರ್ಣ ಮಾರ್ಗ ಪದ್ಧತಿಯನ್ನು ಒಳಗೊಂಡ ಭರತನಾಟ್ಯ ರಂಗ ಪ್ರವೇಶಗಳನ್ನು ಕಂಡು ಆನಂದಿಸಲು ವಿರಳವಾಗಿರುವ ಈ ಸಮಯದಲ್ಲಿ, ದಿನಾಂಕ 12-05-2024ರಂದು ಮಂಗಳೂರು ಪುರಭವನದಲ್ಲಿ ಗಾನ ನೃತ್ಯ ಅಕಾಡೆಮಿ ವತಿಯಿಂದ ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ ಇವರ ಶಿಷ್ಯೆ ಕುಮಾರಿ ಮಹತಿ ಪಾವನಸ್ಕರ್ ಇವಳ ಭರತನಾಟ್ಯ ರಂಗ ಪ್ರವೇಶ ಅರ್ಥಪೂರ್ಣವಾಗಿ ಜರುಗಿತು. ಕಲಾವಿದೆಯ ಲೀಲಾಜಾಲ ಚಲನೆಗಳು, ಸಾಹಿತ್ಯದ ಸಾರವನ್ನು ಭಾವಪೂರ್ಣವಾಗಿ ರಸಿಕನ ಹೃದಯಕ್ಕೆ ತಲುಪಿಸುತ್ತಿದ್ದ ಕಣ್ಣುಗಳು, ನೃತ್ತಭಾಗದಲ್ಲಿನ ಅಂಗಶುದ್ಧಿ, ನುರಿತ ಆಹಾರ್ಯ, ಪರಿಪೂರ್ಣ ನೃತ್ಯಸಂಯೋಜನೆ, ವಿದ್ವತ್ಪೂರ್ಣ ಹಿಮ್ಮೇಳ ಹಾಗೂ ನೃತ್ಯದ ಅನುಭಾವವನ್ನು ಇಮ್ಮಡಿಗೊಳಿಸುತ್ತಿದ್ದ ಸುಂದರ ಉಡುಪು ಹಾಗೂ ಆಭರಣಗಳಿಂದ ಕಲಾವಿದೆ ನೃತ್ಯದ ಮೂಲಕ ನೋಡುಗರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಳು. ದ್ವಿತೀಯ ಪಿಯುಸಿಯ ವಿದ್ಯಾರ್ಥಿನಿಯಾಗಿದ್ದರೂ ಪಾಠ ಹಾಗೂ ಪಠ್ಯೇತರ ಚಟುವಟಿಕೆಗಳನ್ನು ಸಂಪೂರ್ಣ ಸಮತೋಲನದಲ್ಲಿ ಯಶಸ್ವಿಯಾಗಿ ನಿಭಾಯಿಸಿದ ರೀತಿ ಉದಾಹರಣಾತ್ಮಕವಾಗಿತ್ತು. ಮೊತ್ತ ಮೊದಲನೆಯದಾಗಿ ಪುಷ್ಪಾಂಜಲಿಯ ಮೂಲಕ ನಾಟ್ಯಾಧಿದೇವತೆ ನಟರಾಜನನ್ನು ವಂದಿಸಿ ಕಾರ್ಯಕ್ರಮಕ್ಕೆ ದೈವಿಕ ಪ್ರಾರಂಭವನ್ನು ನೀಡುತ್ತಾ, ವಿಘ್ನ ನಿವಾರಕನಾದ ಗಣೇಶನನ್ನು ಸುತ್ತಿಸುವ ಮೂಲಕ ವಿನಾಯಕನಲ್ಲಿ ನಿರ್ವಿಘ್ನವಾಗಿ…
ಕಾಸರಗೋಡು: ಕನ್ನಡ ಭಾಷೆ, ಸಂಸ್ಕೃತಿಗಳಿಗೆ ಅಮೂಲ್ಯ ಕೊಡುಗೆ ನೀಡಿದ ಹಿರಿಯ ಸಾಧಕರನ್ನು ಅವರ ಮನೆಯಂಗಳದಲ್ಲಿ ಗೌರವಿಸುವ ಕನ್ನಡ ಸಾಹಿತ್ಯ ಪರಿಷತ್ನ ಕೇರಳ ಗಡಿನಾಡ ಘಟಕದ ‘ಸಾಹಿತ್ಯ ಪರಿಷತ್ತಿನ ನಡಿಗೆ ಹಿರಿಯ ಸಾಧಕರ ಕಡೆಗೆ’ ಕಾರ್ಯಕ್ರಮವು ದಿನಾಂಕ 01-06-2024 ರಂದು ನಡೆಯಿತು. ಕಾರ್ಯಕ್ರಮದ ಅಂಗವಾಗಿ ಬಹುಭಾಷಾ ವಿದ್ವಾಂಸ, ಸಂಶೋಧಕ, ತಮಿಳುನಾಡಿನ ಮದುರೈ ಕಾಮರಾಜ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ನಿವೃತ್ತ ಮುಖ್ಯಸ್ಥ ಡಾ. ಹರಿಕೃಷ್ಣ ಭರಣ್ಯ ಇವರನ್ನು ಕುಂಬಳೆ ಸಮೀಪದ ನಾರಾಯಣಮಂಗಲದ ಅವರ ನಿವಾಸದಲ್ಲಿ ಅಭಿನಂದಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಅವರು ಹರಿಕೃಷ್ಣ ಭರಣ್ಯ ಮತ್ತು ಶ್ಯಾಮಲಾ ದಂಪತಿಯನ್ನು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಗಳನ್ನು ನೀಡಿ ಅಭಿನಂದಿಸಿದರು. ಅಭಿನಂದನಾ ಭಾಷಣ ಮಾಡಿದ ಸಾಹಿತಿ ಹಾಗೂ ನಿವೃತ್ತ ಅಧ್ಯಾಪಕ ವಿ. ಬಿ. ಕುಳಮರ್ವ “ಕನ್ನಡ, ತುಳು, ತಮಿಳು, ಮಲೆಯಾಳ, ಹವಿಗನ್ನಡ, ಇಂಗ್ಲೀಶ್, ಹಿಂದಿ ಸೇರಿದಂತೆ ಬಹುಭಾಷಾ ಪಂಡಿತರಾಗಿರುವ ಹರಿಕೃಷ್ಣ ಭರಣ್ಯರು…
ಮಂಗಳೂರು : ಕವಿತಾ ಕುಟೀರ (ರಿ.) ಪೆರಡಾಲ, ಆರ್ಟ್ ಕೆನರಾ ಟ್ರಸ್ಟ್ ಮತ್ತು ನವಜೀವನ ಹೈಸ್ಕೂಲ್ ಪೆರಡಾಲ, ಕಾಸರಗೋಡು ಇದರ ಹಿರಿಯ ವಿದ್ಯಾರ್ಥಿಗಳ ಸಹಯೋಗದೊಂದಿಗೆ ಕವಿ ಕಯ್ಯಾರ ಕಿಞ್ಞಣ್ಣ ರೈ ಜನ್ಮ ದಿನಾಚರಣೆಯನ್ನು ದಿನಾಂಕ 08-06-2024ರಂದು ಸಂಜೆ 5-00 ಗಂಟೆಗೆ ಮಂಗಳೂರಿನ ಜಿ.ಜಿ. ರಸ್ತೆಯ ಕೊಡಿಯಾಲಗುತ್ತು (ಪಶ್ಚಿಮ) ಕೊಡಿಯಾಲಗುತ್ತು ಕಲೆ ಮತ್ತು ಸಾಂಸ್ಕೃತಿಕ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ. ಕವಿತಾ ಕುಟೀರ ಇದರ ಅಧ್ಯಕ್ಷರಾದ ದುರ್ಗಾಪ್ರಸಾದ್ ರೈ ಮತ್ತು ಆರ್ಟ್ ಕೆನರಾ ಟ್ರಸ್ಟ್ ಇದರ ಅಧ್ಯಕ್ಷರಾದ ಸುಭಾಸ್ ಚಂದ್ರ ಬಸು ಇವರ ಗೌರವ ಉಪಸ್ಥಿತಿಯಲ್ಲಿ ವಕೀಲರಾದ ಕಳ್ಳಿಗೆ ತಾರಾನಾಥ ಶೆಟ್ಟಿ ಮತ್ತು ನಿಟ್ಟೆ ವಿಶ್ವ ವಿದ್ಯಾಲಯದ ಮಾನವಿಕ ವಿಭಾಗದ ಮುಖ್ಯಸ್ಥರಾದ ಡಾ. ಸಾಯಿಗೀತಾ ಹೆಗ್ಡೆ ಇವರು ನುಡಿ ನಮನ ಸಲ್ಲಿಸಲಿದ್ದಾರೆ. ಕವಿ ಕಯ್ಯಾರ ಸ್ಮೃತಿ ‘ಐಕ್ಯವೇ ಮಂತ್ರ’ ಉಡುಪಿ, ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳ ಬರಹಗಾರರ ಆಯ್ದ ಕತೆ ಕವನ ಸಂಕಲನದ ಪ್ರಕಟಣಾ ಪೂರ್ವ ತಯಾರಿ.
ವಿಜಯಪುರ : ವಿಜಯಪುರ ನಗರದಿಂದ ಅನತಿ ದೂರದಲ್ಲಿರುವ ತೊರವೆಯ ಶ್ರೀ ನೃಸಿಂಹ ದೇವಸ್ಥಾನದಲ್ಲಿ ತೊರವೆ ರಾಮಾಯಣ ಮಹಾಕಾವ್ಯದ ಯುದ್ಧಕಾಂಡದಲ್ಲಿರುವ `ಶ್ರೀರಾಮ ಪಟ್ಟಾಭಿಷೇಕಂ’ ಪ್ರಸಂಗದ ಗಮಕ ವಾಚನ-ವ್ಯಾಖ್ಯಾನ ಕಾರ್ಯಕ್ರಮವು ದಿನಾಂಕ 30-05-2024 ರಂದು ಅರ್ಥಪೂರ್ಣವಾಗಿ ಜರುಗಿತು `ಶ್ರೀ ಜನಕಜಾ ರಮಣ, ವಿಮಲ ಸರೋಜ ಸಂಭವ ಜನಕ……….. ಸುರಭೂಜ ತೊರವೆಯ ರಾಯ ನರಹರಿ ಪಾಲಿಸುಗೆ ಜಗವ’ ಎಂಬ ಮಂಗಲಾಚರಣ ಪದ್ಯದೊಂದಿಗೆ ಗಮಕಿಗಳಾದ ಶ್ರೀಮತಿ ಪುಷ್ಪಾ ಕುಲಕರ್ಣಿ ಹಾಗೂ ಶ್ರೀಮತಿ ಭೂದೇವಿ ಕುಲಕರ್ಣಿ ಇವರುಗಳು ಗಮಕ ವಾಚನವನ್ನು ಆರಂಭಿಸಿದರು. 14 ವರುಷಗಳ ವನವಾಸದಿಂದ ಅಯೋಧ್ಯೆಗೆ ಮರಳಿ ಬಂದ ರಾಮನು ತನ್ನ ತಾಯಂದಿರು ಹಾಗೂ ತಮ್ಮಂದಿರನ್ನು ಕಂಡು ಪಡುವ ಆನಂದ, ಅಣ್ಣನನ್ನು ಅಪ್ಪಿಕೊಂಡು ಕಣ್ಣೀರಿಡುವ ಭರತ ಇವರುಗಳೆಲ್ಲ ಪ್ರಾಚೀನ ಭಾರತೀಯ ಸಂಸ್ಕೃತಿಯ ಆದರ್ಶ ಪಾತ್ರಗಳಾಗಿ ಮೂಡಿ ನಿಂತರು. ಶ್ರೀರಾಮನ ಪಟ್ಟಾಭಿಷೇಕವು ಸುಗ್ರೀವ, ವಿಭೀಷಣ, ಕಪಿಸೈನ್ಯಗಳ ಉತ್ಸಾಹದಿಂದ ವೈಭವಪೂರ್ಣವಾಗಿ ನೆರವೇರಿತು. ಶ್ರೀರಾಮನು ವಿಭೀಷಣನಿಗೆ ಹಾಗೂ ಸುಗ್ರೀವಾದಿ ಕಪಿಗಳಿಗೆ ಏರ್ಪಡಿಸಿದ ಭೋಜನಕೂಟ ಆತ್ಮೀಯವಾಗಿತ್ತು. ಆ ಭೋಜನಕೂಟದಲ್ಲಿ ಶ್ರೀರಾಮನು ಹನುಮಂತನಿಗೆ ಬೇರೆ…
ಕಾಸರಗೋಡು : ಸಾಮಾಜಿಕ ಸಾಂಸ್ಕೃತಿಕ ಸಂಸ್ಥೆ ರಂಗಚಿನ್ನಾರಿ ಕಾಸರಗೋಡು (ರಿ.), ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ‘ನಾರಿ ಚಿನ್ನಾರಿ’ ಪ್ರಸ್ತುತ ಪಡಿಸುವ ಕಾಸರಗೋಡಿನ ಉದಯೋನ್ಮುಖ ನೃತ್ಯ ಪ್ರತಿಭೆಗಳ ಅನಾವರಣ ‘ಗೆಜ್ಜೆ ತರಂಗ’ ನೃತ್ಯ ಪ್ರದರ್ಶನವನ್ನು ದಿನಾಂಕ 09-06-2024ರಂದು ಸಂಜೆ 3-30 ಗಂಟೆಗೆ ಕಾಸರಗೋಡಿನ ಕರೆಂದಕ್ಕಾಡು ಪದ್ಮಗಿರಿ ಕಲಾ ಕುಟೀರದಲ್ಲಿ ಹಮ್ಮಿಕೊಳ್ಳಲಾಗಿದೆ. ನಾರಿ ಚಿನ್ನಾರಿಯ ಅಧ್ಯಕ್ಷರಾದ ಶ್ರೀಮತಿ ಸವಿತಾ ಐ. ಭಟ್ ಇವರ ಅಧ್ಯಕ್ಷತೆಯಲ್ಲಿ ನೃತ್ಯ ಗುರುಗಳಾದ ವಿದುಷಿ ವಿದ್ಯಾಲಕ್ಷ್ಮೀ ಕುಂಬಳೆ ಇವರು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ನೃತ್ಯ ಗುರುಗಳಾದ ನಟನ ತಿಲಕಂ ಸುರೇಂದ್ರನ್ ಪಟ್ಟೇನ್ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವರು. ಕುಮಾರಿ ಯಶ್ನಾ ಬಿ. ನಾಯ್ಕ್ ಮತ್ತು ಕುಮಾರಿ ಶಾನ್ವಿ ಕೆ. ಇವರು ಭರತನಾಟ್ಯ, ಕುಮಾರಿ ಕೃಷ್ಣಪ್ರಭಾ ಪಿಳ್ಳೆಯವರು ಮೋಹಿನಿಯಾಟಂ, ಕುಮಾರಿ ದ್ರುವಿತಾ ಸಿ.ಎಸ್. ಇವರು ಜಾನಪದ ನೃತ್ಯ, ಕುಮಾರಿ ಕೃಷ್ಣೇಂದು ಕೂಚುಪುಡಿ, ಕುಮಾರಿ ಶಿವಾನಿ ಕೂಡ್ಲು ಕೇರಳ ನಟನಂ ಹಾಗೂ ಕುಮಾರಿ ಗೀತಪ್ರಿಯ ಡಿ. ಮತ್ತು ಕುಮಾರಿ…
ಉಡುಪಿ : ವಿಶ್ವ ಭಾರತ ಕರ್ನಾಟಕ ಪ್ರತಿಷ್ಠಾನ ಬೆನಗಲ್ ಪ್ರಾಯೋಜಿತ ಕವಿ ದಿ. ಕುರಾಡಿ ಸೀತಾರಾಮ ಅಡಿಗರ ನೆನಪಿನ ‘ಕುರಾಡಿ ಸೀತಾರಾಮ ಅಡಿಗ ಕಾವ್ಯ ಪ್ರಶಸ್ತಿ’ಗಾಗಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ಸಂಸ್ಥೆಯು 2023ರಲ್ಲಿ ಮೊದಲ ಆವೃತ್ತಿಯಲ್ಲಿ ಪ್ರಕಟಣೆಗೊಂಡ ಕವನ ಸಂಕಲನಗಳನ್ನು ಆಹ್ವಾನಿಸಿತ್ತು. ಈ ಪ್ರಶಸ್ತಿಗೆ ವಿಜಯಪುರದ ಸುಮಿತ್ ಮೇತ್ರಿಯವರ ‘ಈ ಕಣ್ಣುಗಳಿಗೆ ಸದಾ ನೀರಡಿಕೆ’ ಹಾಗೂ ಮಂಗಳೂರಿನ ಜಯಶ್ರೀ ಬಿ. ಕದ್ರಿಯವರ ‘ಕೇಳಿಸದ ಸದ್ದುಗಳು’ ಕೃತಿಗಳು ಆಯ್ಕೆಯಾಗಿರುತ್ತವೆ ಎಂದು ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸಂಚಾಲಕರಾದ ರವಿರಾಜ್ ಎಚ್.ಪಿ. ತಿಳಿಸಿದರು. ಪ್ರಶಸ್ತಿಗೆ 42 ಕೃತಿಗಳು ಬಂದಿದ್ದು, ಕನ್ನಡ ಸಾಹಿತ್ಯ ಲೋಕದ ಹಿರಿಯ ವಿಮರ್ಶಕರಾದ ಬೆಂಗಳೂರಿನ ಪ್ರೊ. ಎಚ್. ದಂಡಪ್ಪ ಹಾಗೂ ಉಡುಪಿಯ ಪ್ರೊ. ಮುರುಳೀಧರ ಉಪಾಧ್ಯ ಹಿರಿಯಡ್ಕ ಅವರು ತೀರ್ಪುಗಾರರಾಗಿ ಸಹಕರಿಸಿದ್ದರು. ಪ್ರಶಸ್ತಿಯು ರೂ.10,000/- ಗೌರವ ನಗದಿನೊಂದಿಗೆ ಪ್ರಶಸ್ತಿಪತ್ರ ಹಾಗೂ ಫಲಕವನ್ನು ಒಳಗೊಂಡಿದ್ದು ಇಬ್ಬರಿಗೆ ಹಂಚಿಹೋಗಿವೆ. ಆಗಸ್ಟ್ ತಿಂಗಳಲ್ಲಿ ಪ್ರಶಸ್ತಿ ಪ್ರದಾನ ನಡೆಸಲಾಗುವುದು ಎಂದು ಪ್ರಶಸ್ತಿ ಸಮಿತಿಯ ಸಂಚಾಲಕಿ ಪೂರ್ಣಿಮಾ…