Author: roovari

ತೆಕ್ಕಟ್ಟೆ : ಯಶಸ್ವೀ ಕಲಾವೃಂದ ಕೊಮೆ-ತೆಕ್ಕಟ್ಟೆ, ಧಮನಿ ಹಾಗೂ ದಿಮ್ಸಾಲ್ ಸಂಸ್ಥೆಗಳ ಸಹಯೋಗದಲ್ಲಿ ನಡೆಯುತ್ತಿರುವ ‘ರಜಾರಂಗು-24’ ಮಕ್ಕಳ ಬೇಸಿಗೆ ಶಿಬಿರದ 17ನೇ ದಿನದ ಕಾರ್ಯಕ್ರಮವು ದಿನಾಂಕ 27-04-2024ರಂದು ಕುಂದಾಪುರ ಕೋಡಿಯ ಲೈಟ್ ಹೌಸ್ ಬಳಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಕಡಲ ವೀರ ತಂಡದ ಮತ್ಸ್ಯೋದ್ಯಮಿ ಗೋಪಾಲ್ ಕೋಡಿ “ಮರಳು ಶಿಲ್ಪ ವಿಭಿನ್ನ ಕಲೆ. ಸುಂದರ ಸಮುದ್ರ ಸನಿಹದಲ್ಲಿ ಅರಳುವ, ಉರಿ ಬಿಸಿಲಲ್ಲಿದ್ದರೂ ಬಿಸಿಲನ್ನು ನೆನಪಿಸದ ರೀತಿಯಲ್ಲಿ ತನ್ಮಯತೆಗೊಳಪಡಿಸುವ, ಎಷ್ಟೇ ಬಿಸಿಲಿದ್ದರೂ ಗೋಚರಿಸದಂತೆ ತಮ್ಮನ್ನು ಕಲಾ ಲೋಕಕ್ಕೆ ಕೊಂಡೊಯ್ಯುವ ಕಲೆಯಾಗಿದೆ. ಮರಳನ್ನು ಗುಡ್ಡೆ ಮಾಡಿ ಮತ್ಸ್ಯವನ್ನು ಬಿಡಿಸುತ್ತಿದ್ದಂತೆಯೇ ಮಕ್ಕಳು ಹೇಳದೇ ಕೇಳದೇ ತಮ್ಮೊಳಗಿನ ಕಲ್ಪನೆಯನ್ನು ಮರಳ ರಾಶಿಯಲ್ಲಿ ತಮಗೆ ತೋಚಿದಂತೆ ಬಿಡಿಸುತ್ತಾ ಬಿಡಿಸುತ್ತಾ, ಆಮೆ, ಮೀನು, ಹಾವು, ಮಡಿಕೆ ಹೀಗೆ ಹಲವನ್ನು ಮರಳಿಂದ ಅರಳಿಸಿದ ಮಕ್ಕಳ ಉತ್ಸಾಹ ನಿಜಕ್ಕೂ ನಮ್ಮಂತಹ ಹಿರಿಯರಿಗೂ ಸ್ಪೂರ್ತಿ ತರುತ್ತದೆ” ಎಂದು ಅಭಿಪ್ರಾಯಪಟ್ಟರು. ಮರಳು ಶಿಲ್ಪ ರಚನಾಕಾರ ರವಿ ಹಿರೇಬೆಟ್ಟು, ರಂಗ ನಿರ್ದೇಶಕ ನಾಗೇಶ ಕೆದೂರು, ಅಶೋಕ್…

Read More

ಕುಂದಾಪುರ : ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆಯ ಶ್ವೇತಯಾನ-1999 ಇದರ 24ನೆಯ ಕಾರ್ಯಕ್ರಮದಲ್ಲಿ ‘ನವರಸ ಯಕ್ಷಗಾಯನ’ವು ದಿನಾಂಕ 27-04-2024ರಂದು ‘ಗೌರೀಶ’ ಕೊಡ್ಲಬೈಲು ಶಿರಿಯಾರದಲ್ಲಿ ನಡೆಯಿತು. ಈ ಕಾರ್ಯಕ್ರಮದ ಪ್ರಾಯೋಜಕರಾದ ಶಿರಿಯಾರದ ಕೊಡ್ಲಬೈಲಿನ ರಾಘವೇಂದ್ರ ಭಟ್ ಇವರು ರಜತ್ ಭಟ್ ಹಾಗೂ ಸ್ತುತಿಯವರಿಗೆ ಅಭಿನಂದನೆಯನ್ನು ಸಲ್ಲಿಸಿ ಮಾತನಾಡಿ “ಕಲಾ ಚಟುವಟಿಕೆಗಳನ್ನು ಕರಾವಳಿ ಭಾಗದಲ್ಲಿ ನಿರಂತರವಾಗಿ ನೆರವೇರಿಸಿಕೊಂಡು ಬಂದ ಸಂಸ್ಥೆ. 25ನೇ ವರ್ಷದ ಸಂದರ್ಭದಲ್ಲಿ ವಾರಕ್ಕೆರಡೆಂಬಂತೆ ವರ್ಷಪೂರ್ತಿ ಕಾರ್ಯಕ್ರಮ ಮಾಡುವುದು ಸಾಹಸವೇ ಅಹುದು. 24ನೇ ಶ್ವೇತಯಾನದ ಕಾರ್ಯಕ್ರಮವಾಗಿ ಇಂದು ‘ನವರಸ ಯಕ್ಷಗಾಯನ’ ಯಶಸ್ವೀ ಕಲಾವೃಂದ ನಮ್ಮೂರಿನಲ್ಲಿ ನೆರವೇರಿಸಿಕೊಂಡಿದೆ. ಯಶಸ್ಸನ್ನೇ ಕಾಣುತ್ತಿರುವ ಸಂಸ್ಥೆಯ ವಿದ್ಯಾರ್ಥಿ ನಮ್ಮ ಮಗ ರಜತ್ ಎಂದು ಹೇಳುವಲ್ಲಿ ಹೆಮ್ಮೆಯಾಗುತ್ತಿದೆ” ಎಂದು ಅಭಿಪ್ರಾಯಪಟ್ಟರು. “ಪ್ರತಿಭೆಗಳಿಗೆ ಅವಕಾಶ ಕೊಡುವ ಕಾಯಕದಲ್ಲಿ ಸಾರ್ವಜನಿಕರೂ ಭಾಗಿಯಾಗಬೇಕಾದರೆ ಅವಕಾಶ ಕಲ್ಪಿಸಿಕೊಡಬೇಕು. ಸಂಸ್ಥೆಯ ರಜತ ಸಂಭ್ರಮವನ್ನು ಸಮಾಜವೂ ಆಚರಿಸಿಕೊಂಡ ಹೆಮ್ಮೆ ನಮಗೆ” ಎಂದು ಶಕುಂತಲಾ ಮಾತನ್ನಾಡಿದರು. ವಿಷ್ಣುಮೂರ್ತಿ, ಮಂಜುಳಾ, ಭಾಗವತ ಚಂದ್ರಯ್ಯ ಆಚಾರ್, ದರ್ಶನ್ ಗೌಡ, ಕಾರ್ಯದರ್ಶಿ ವೆಂಕಟೇಶ ವೈದ್ಯ…

Read More

ಮೈಸೂರು : ಬ್ರಹ್ಮರ್ಷಿ ಕಶ್ಯಪ ಶಿಲ್ಪಕಲಾ ಶಾಲಾ ವತಿಯಿಂದ ಅರುಣ್ ಯೋಗಿರಾಜ್ ಪ್ರಸ್ತುತ ಪಡಿಸುವ ಬೇಸಿಗೆ ಶಿಬಿರವನ್ನು ದಿನಾಂಕ 02-05-2024ರಿಂದ 16-02-2024ರವರೆಗೆ ಪ್ರತಿದಿನ 9-30 ಗಂಟೆಯಿಂದ 12-30ರವರೆಗೆ ಮೈಸೂರಿನ ಬ್ರಹ್ಮರ್ಷಿ ಕಶ್ಯಪ ಶಿಲ್ಪಕಲಾ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಶಿಬಿರವು 6ರಿಂದ 15 ವರ್ಷದ ಮಕ್ಕಳಿಗಾಗಿ ಸೋಮವಾರದಿಂದ ಶನಿವಾರದ ತನಕ ನಡೆಯಲಿದೆ.

Read More

ಕವಿತೆಯೆಂದರೆ ಹಾಗೆ ನಿಶ್ಶಬ್ದಕ್ಕೂ ಧ್ವನಿ ನೀಡುವ ಭೋರ್ಗರೆಯುವ ಕಡಲು, ಭವದ ಸಾಯುಜ್ಯಕ್ಕೆ ಉರಿವ ಹಣತೆ ಎನ್ನುವ ಕವಯಿತ್ರಿ ಜಯಶ್ರೀ ಬಿ. ಕದ್ರಿಯವರ ಕವಿತೆಗಳಲ್ಲಿ ಅವರು ತಮ್ಮ ಭಟ್ಟಿಯಿಳಿ‌ಸಿದ ಭಾವಗಳಿಗೆ ಅಕ್ಷರಗಳ ರೂಪು ಕೊಡುತ್ತಾರಾದರೂ ತಮ್ಮ ಸುತ್ತ ಮುತ್ತ ಕಾಣುವ ಮನಸ್ಸು ಒಲ್ಲದ ವಿಚಾರಗಳ ವಿರುದ್ಧ ಪ್ರತಿಭಟನೆ ವ್ಯಕ್ತ ಪಡಿಸುವಾಗಲೂ ಮೃದುವಾಗಿ ನೆಲಕ್ಕೆ ಬೀಳುವ ಪಾರಿಜಾತದಂತೆ ಪಿಸುಗುಟ್ಟುವ ಧ್ವನಿಯಲ್ಲಿ ಮಾತನಾಡುತ್ತಾರೆ. Unheard melodies are sweeter ಅನ್ನುವಂತೆ ಕೇಳಿಸದ ಸದ್ದುಗಳು, ಮೌನದಾಚೆಯ ಶಬ್ದಗಳು ಮತ್ತು ನಿಶ್ಶಬ್ದಗಳ (ಅಂದರೆ ಸಾಮಾನ್ಯರ ಬಾಹ್ಯೇಂದ್ರಿಯಗಳ ಅರಿವಿಗೆ ಬಾರದ ವಿಚಾರಗಳ) ಬಗ್ಗೆ ಹೆಚ್ಚು ಒಲವಿರುವ ಕವಯಿತ್ರಿ ಈಕೆ. ‘ಶಕುಂತಲೆ’, ‘ಅಡುಗೆ’, ‘ಮರೀಚಿಕೆ’, ‘ವಿಮರ್ಶೆ’ ಮೊದಲಾದ ಅವರ ಅನೇಕ ಕವಿತೆಗಳು ಸ್ತ್ರೀ ಸಂವೇದನೆಯ ಕವಿತೆಗಳು. ಅಲ್ಲಿ ಪುರುಷ ಪ್ರಧಾನ ಸಮಾಜದಲ್ಲಿ ಸ್ತ್ರೀಯರಿಗಾಗುವ ಅನ್ಯಾಯಗಳ ವಿರುದ್ಧ ಏರು ಧ್ವನಿಯಲ್ಲಿ ಏನೂ ಹೇಳದೆ ಬಹಳ ಸೂಚ್ಯವಾಗಿ ಹೆಣ್ಣಿನ ಸಂಕಷ್ಟಗಳನ್ನು ಹೇಳುವ ಅವರು ತಮ್ಮ ಸದ್ದಿಲ್ಲದ ಸಂಯಮದ ಮೂಲಕ ಓದುಗರ ಗಮನ ಸೆಳೆಯುತ್ತಾರೆ. ಬೆಳಕಿನ…

Read More

ಮಂಗಳೂರು : ಕೊಂಕಣಿಯ ಪ್ರಮುಖ ಸಾಂಸ್ಕೃತಿಕ ಸಂಘಟನೆ ಮಾಂಡ್‌ ಸೊಭಾಣ್‌ ಕೊಂಕಣಿಯನ್ನು ಉಳಿಸಿ, ಬೆಳೆಸಿ, ಶೃಂಗರಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ತನ್ನ ಧ್ಯೇಯವನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಮಕ್ಕಳ ಪ್ರತಿಭಾ ಶಿಬಿರಗಳನ್ನು ಆಯೋಜಿಸುತ್ತಾ ಬಂದಿದ್ದು ಈ ಸಾಲಿನ ನವದಿನಗಳ ವೋಪ್‌ (ಒಪ್ಪ) ಶಿಬಿರದ ಉದ್ಘಾಟನೆ 27-04-24 ರಂದು ಮಂಗಳೂರಿನ ಶಕ್ತಿನಗರದ ಕಲಾಂಗಣದಲ್ಲಿ ನೆರವೇರಿತು. ಡಾ. ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಮೈಸೂರು ಇವರಿಂದ ಈ ಶಿಬಿರಕ್ಕೆ ಮಾನ್ಯತೆ ದೊರೆತ ಈ ಶಿಬಿರವನ್ನು ಗಾಯಕ ಮತ್ತು ಸಂಗೀತಗಾರ ರಿತೇಶ್‌ ಒಝೇರಿಯೊ ಮಣ್ಣಿನ ಮೂರ್ತಿಗೆ ಚಿನ್ನದ ಬಣ್ಣ ಬಳಿದು ವಿಶಿಷ್ಟ ರೀತಿಯಲ್ಲಿ ಉದ್ಘಾಟಿಸಿದರು. ಪ್ರಸಿದ್ಧ ನಾಟಕಕಾರ ಫ್ರಾನ್ಸಿಸ್‌ ಫೆರ್ನಾಂಡಿಸ್‌ ಕಾಸ್ಸಿಯಾ ಮುಖ್ಯ ಅತಿಥಿಯಾಗಿದ್ದರು. ಶಿಬಿರದ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಿಕೊಡಲಾಯಿತು. ಅಧ್ಯಕ್ಷ ಲುವಿ ಪಿಂಟೊ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅರುಣ್‌ ರಾಜ್‌ ರೊಡ್ರಿಗಸ್‌ ಪ್ರಸ್ತಾವಿಕವಾಗಿ ಮಾತನಾಡಿ, ಶಿಬಿರ ವ್ಯವಸ್ಥಾಪಕ ವಿಕ್ಟರ್‌ ಮತಾಯಸ್‌ ಶಿಬಿರದಲ್ಲಿ ನಡೆಯುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿ, ಕೇರನ್‌ ಮಾಡ್ತಾ…

Read More

ಮಂಗಳೂರು : ಡಾ. ಮಾಲತಿ ಶೆಟ್ಟಿ ಮಾಣೂರು ಸಾರಥ್ಯದ ಅಮೃತ ಪ್ರಕಾಶನ ಪತ್ರಿಕೆ ವತಿಯಿಂದ ನಡೆದ 40ನೆಯ ಸರಣಿ ಕೃತಿ, ವೀಣಾ ರಾವ್ ವಿಟ್ಲ ಇವರ ‘ತಿರುವು’ ಕಥಾ ಸಂಕಲನದ ಲೋಕಾರ್ಪಣಾ ಸಮಾರಂಭವು ದಿನಾಂಕ 29-04-2024 ರಂದು ಮಂಗಳೂರು ಪತ್ರಿಕಾ ಭವನದಲ್ಲಿ ನಡೆಯಿತು. ಕನ್ನಡ ಸಾಹಿತ್ಯ ಪರಿಷತನ ನಿಕಟಪೂರ್ವ ಜಿಲ್ಲಾಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ ಇವರ ಅಧ್ಯಕ್ಷತೆಯಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರು ಹಾಗೂ ಸಾಹಿತಿಗಳಾದ ಕೆ. ರವೀಂದ್ರ ರೈ ಲೋಕಾರ್ಪಣೆಗೊಳಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅಗರಿ ಎಂಟರ್ಪ್ರೈಸಸ್ ಮಾಲಿಕರಾದ ಉದ್ಯಮಿ ಅಗರಿ ರಾಘವೇಂದ್ರ ರಾವ್ ಭಾಗವಹಿಸಿದರು. ಡಾ. ಅರುಣಾ ನಾಗರಾಜ್ ಕೃತಿ ಪರಿಚಯಿಸಿ, ಅಮೃತ ಪ್ರಕಾಶ ಪತ್ರಿಕೆ ವ್ಯವಸ್ಥಾಪಕ ಸಂಪಾದಕಿ ಡಾ ಮಾಲತಿ ಶೆಟ್ಟಿ ಸ್ವಾಗತಿಸಿ, ಕವಿಯತ್ರಿ ಹಾಗೂ ಶಿಕ್ಷಕಿಯಾದ ಸುರೇಖಾ ಯಾಳವಾರ ಕಾರ್ಯಕ್ರಮ ನಿರೂಪಿಸಿದರು.

Read More

ಉಳ್ಳಾಲ : ಖ್ಯಾತ ಕವಿ ವೆಂಕಟೇಶ್ವರ ಗಟ್ಟಿ ಆಯೋಜಿಸಿದ ಮನೆಯಂಗಳದಲ್ಲಿ ಸಾಹಿತ್ಯ ಗೋಷ್ಠಿ ಹಾಗೂ ಕವಿಗೋಷ್ಢಿ ಕಾರ್ಯಕ್ರಮವು ದಿನಾಂಕ 27-04-2024ರಂದು ಮಾಡೂರಿನ ಸತ್ಯನಾರಾಯಣ ನಗರದಲ್ಲಿರುವ ಖ್ಯಾತ ಕವಿ ವೆಂಟೇಶ್ವರ ಗಟ್ಟಿಯವರ ಮನೆಯಂಗಳದಲ್ಲಿ ನಡೆಯಿತು. ರೇಖಾ ಸುದೇಶ್ ರಾವ್ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮವನ್ನು ಜಪ್ಪಿನ ಮೊಗರಿನ ಆದಿಮಾಯೆ ಸನ್ನಿಧಿಯ ಧರ್ಮದರ್ಶಿ ಶ್ರೀ ದಯಾನಂದ ಇವರು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು “ಕವಿರತ್ನ ಕಾಳಿದಾಸ ಇಲ್ಲಿ ನೆಲಸಿದಂತೆ ಭಾಸವಾಗುತ್ತದೆ. ಸಾಹಿತ್ಯ ಸೇವೆಯಿಂದ ಮಾನಸಿಕ‌ಮೌಲ್ಯ ವರ್ಧನೆಯಾಗುತ್ತದೆ.ಅಂತಹ ಭಾಗ್ಯ ಸರ್ವರಿಗೂ ಪ್ರಾಪ್ತವಾಗಲಿ.” ಎಂದು ಹಾರೈಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ನಾಗರಾಜ ಗಟ್ಡಿ, ಗಣೇಶ ಪ್ರಸಾದ್ ಜೀ ಹಾಗೂ ರೇಮಂಡ್ ಡಿ’ಕೂನ್ಹಾ ತಾಕೊಡೆ ಯವರು ಶುಭಹಾರೈಕೆಯ ನುಡಿಗಳನ್ನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸರ್ಪಂಗಳ ಈಶ್ವರ ಭಟ್ ಮಾತನಾಡಿ “ವಾಲ್ಮೀಕಿಗೆ ಪ್ರಾಪ್ತವಾದ ಬೀಜ ಮಂತ್ರವೇ ಬೃಹತ್ ರಾಮಾಯಣವನ್ನು ಬರೆಸಿದಂತೆ ತಂಪಾದ ಮಾವಿನ‌ ನೆರಳೂ ಇಂಪಾದ ಕೋಗಿಲೆ ಗಾಯನವೂ ಪ್ರಾಪ್ತವಾಗುವ ಈ ಮನೆಯಂಗಳವು ಇಂದು ಸಾಹಿತ್ಯ ಪೂರ ಹರಿಸುವುದು…

Read More

ಮೂವತ್ತು ವರ್ಷಗಳ ಹಿಂದಿನ ಮಾತು. ಬೀದಿಯಲ್ಲಿ ಯಾವುದೋ ಮೆರವಣಿಗೆ. ಡುಂ ಟಕ ಡುಂ ಟಕ ಲಯಬದ್ಧ ತಮಟೆಯ ಸದ್ದು… ವಾದ್ಯಗಳ ನಾದಸ್ವರ, ನನ್ನ 3 ವರ್ಷದ ಮಗ ಎದ್ದನೋ ಬಿದ್ದನೋ ಎನ್ನುವಂತೆ ರಸ್ತೆಗೆ ಓಡಿದ. ನಾನೂ ಅವನ ಹಿಂದೆ ಓಟ. ಗುಂಪು ಜನಜಾತ್ರೆ. ಯಾವುದೋ ಉತ್ಸವ ಇರಬೇಕು. ಪಟಾಲಮ್ಮನೋ, ಮಾರಮ್ಮನೋ, ಚೌಡಮ್ಮನೋ… ಅಲಂಕೃತ ಮೂರ್ತಿ ಪಲ್ಲಕ್ಕಿಯ ಮೇಲೆ. ಮೆರವಣಿಗೆಯ ಮುಂದೆ ಕುದುರೆ, ಕೀಲುಗೊಂಬೆಗಳ ಮೇಲೆ ರಾಜಾ- ರಾಣಿಯರ ಸವಾರಿ ಕುಣಿತ. ನನ್ನ ಮಗ ಆವೇಶಿತನಾಗಿ ಆ ಗುಂಪಿನಲ್ಲಿ ತೂರಿ ತಾಳಬದ್ದವಾಗಿ ಹೆಜ್ಜೆ ಹಾಕಿ ಕುಣಿಯುತ್ತಿದ್ದ. ನೃತ್ಯದ ಸೆಳೆತ ಅವನನ್ನು ಆವರಿಸಿತ್ತು. ಎಂಥವರಿಗೂ ಖುಷಿಯಾದಾಗ ಉಲ್ಲಾಸದಿಂದ ‘ಥಕ ಥೈ’ ಎಂದು ಕುಣಿದು ಬಿಡುತ್ತಾರಂತೆ. ಬಹುಶಃ ನೃತ್ಯ ಆವರಿಸುವ ಹೊತ್ತು- ಗೊತ್ತು, ಸಮಯ- ಸಂದರ್ಭ ಯಾವುದೂ ಗೊತ್ತಾಗಲ್ಲ, ಒಟ್ಟಿನಲ್ಲಿ ಖುಷಿಯ ಅಭಿವ್ಯಕ್ತಿ ‘ಕುಣಿತ’ ಅರ್ಥಾತ್ ಈ ‘ನೃತ್ಯ’. ಇದು ಕೆಲವರಿಗೆ ಹುಚ್ಚು ಹಿಡಿಸಿಬಿಡುತ್ತೆ. ಕುಣಿತ ಎನ್ನುವುದಕ್ಕಿಂತ ‘ನಾಟ್ಯ’ ಎನ್ನುವುದು ಹೆಚ್ಚು ಶಿಷ್ಟ ಭರತಮುನಿ ಸಾವಿರಾರು…

Read More

ಉದ್ಯಾವರ : ಶ್ರೀ ಅರಸು ಮಂಜಿಸ್ನಾರ್ ಶ್ರೀ ದೈವಗಳ ಉತ್ಸವ ಸಮಿತಿ – ಉದ್ಯಾವರ ಮಾಡ ಇದರ ವತಿಯಿಂದ ಹರಿಕಥಾ ಪರಿಷತ್ ಮಂಗಳೂರು ಸಹಯೋಗದಲ್ಲಿ ‘ಹರಿಕಥಾ ಸಪ್ತಾಹ’ವು ದಿನಾಂಕ 01-05-2024ರಿಂದ 07-05-2024ರವರೆಗೆ ಪ್ರತಿದಿನ ಸಂಜೆ ಗಂಟೆ 6-00ಕ್ಕೆ ಉದ್ಯಾವರ ಮಾಡದಲ್ಲಿ ನಡೆಯಲಿದೆ. ದಿನಾಂಕ 01-05-2024ರಂದು ತೋನ್ಸೆ ಪುಷ್ಕಳ ಕುಮಾರ್ ಇವರಿಂದ ‘ಭಕ್ತ ಸುಧಾಮ’, ದಿನಾಂಕ 02-05-2024ರಂದು ಮಂಜುಳ ಬಿ. ರಾವ್ ಇರ ಇವರಿಂದ ‘ಭಕ್ತ ಆಂಜನೇಯ’, ದಿನಾಂಕ 03-05-2024ರಂದು ಶಂನಾಡಿಗ ಕುಂಬ್ಳೆಯವರಿಂದ ‘ಕೋಳೂರ ಕೊಡಗೂಸು’, ದಿನಾಂಕ 04-05-2024ರಂದು ಡಾ. ಯಸ್.ಪಿ. ಗುರುದಾಸ್ ಇವರಿಂದ ‘ಭಕ್ತ ದಾಮಾಜಿಪಂಥ’, ದಿನಾಂಕ 05-05-2024ರಂದು ಜಯಾನಂದ ಹೊಸದುರ್ಗ ಇವರಿಂದ ‘ಸಂತ ತುಕಾರಾಮ’, ದಿನಾಂಕ 06-05-2024ರಂದು ಯಜ್ಞೇಶ್ ಹೊಸಬೆಟ್ಟು ಇವರಿಂದ ‘ದುರ್ವಾಸ ಆತಿಥ್ಯ’ ಮತ್ತು ದಿನಾಂಕ 07-05-2024ರಂದು ದೇವಕಿ ತನಯ ಕೂಡ್ಲು ಇವರಿಂದ ‘ಸೀತಾ ಕಲ್ಯಾಣ’ ಹರಿಕಥಾ ಪ್ರವಚನಗಳು ನಡೆಯಲಿದೆ. ಸತ್ಯನಾರಾಯಣ ಐಲ, ರಮೇಶ್ ಹೆಬ್ಬಾರ್, ಶ್ರೀಪತಿ ಭಟ್, ಮಂಗಳ್ ದಾಸ್ ಗುಲ್ವಾಡಿ, ಜಗದೀಶ್ ಉಪ್ಪಳ, ಕೌಶಿಕ್ ಮಂಜನಾಡಿ…

Read More

ಕಾರ್ಕಳ : ಗುಪ್ತಗಾಮಿನಿ ಸಾಹಿತ್ಯ ಶಾಲೆ ಈದು ಕಾರ್ಕಳ ಇದರ ವತಿಯಿಂದ ಅನಂತಶಯನ ವಿಶ್ವೇಶ್ವರ ವೇಣುಗೋಪಾಲ ದೇವಸ್ಥಾನದ ಸಭಾಂಗಣದಲ್ಲಿ ಅಭಿಜಾತ ಕವಯಿತ್ರಿ ಕೊಪ್ಪಲ ಸುಶೀಲಾಬಾಯಿ ಮರಾಠೆ ನೆನಪಿನ ಕಾರ್ಯಕ್ರಮದಲ್ಲಿ ‘ಜೈಮಿನಿ ಭಾರತ ಕಾವ್ಯ ಸೌಂದರ್ಯ’ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮವು ದಿನಾಂಕ 21-04-2024ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ವಿದ್ವಾಂಸ, ಅಷ್ಟಾವಧಾನಿ ಡಾ. ಕಬ್ಬಿನಾಲೆ ವಸಂತ ಭಾರದ್ವಾಜರವರು “ಕಾವ್ಯದಲ್ಲಿ ಇರಬೇಕಾದ ಲಯ, ರಸಸೃಷ್ಟಿ ಮತ್ತು ಗೇಯಗುಣದಿಂದ ಲಕ್ಷ್ಮೀಶನ ಜೈಮಿನಿ ಭಾರತ ಕನ್ನಡ ಕಾವ್ಯ ಪರಂಪರೆಯ ಸಾರ್ವಕಾಲಿಕವಾದ ಶ್ರೇಷ್ಠ ಮಹಾಕಾವ್ಯ. ಕನ್ನಡ ಸಾಹಿತ್ಯ ಲೋಕದಲ್ಲಿ ಕವಿಗಳ ಪಾಲಿಗೆ ಅದೊಂದು ದೊಡ್ಡ ನಿಧಿಯಾಗಿದೆ” ಎಂದು ನುಡಿದರು. ಕಾರ್ಕಳ ತಾಲೂಕು ಚಿತ್ಪಾವನ ಬ್ರಾಹ್ಮಣ ಸಮಾಜದ ಅಧ್ಯಕ್ಷ ರತ್ನಾಕರ ಮರಾಠೆ, ಗಾಯಕ ಅನಂತಪದ್ಮನಾಭ ಭಟ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಶ್ರಾವಣಿ ಶಾಸ್ತ್ರಿ ಸ್ವಾಗತಿಸಿ, ಕೆ. ಶ್ರೀಕರ ಭಟ್ ಪ್ರಾಸ್ತಾವಿಕ ಮಾತನಾಡಿದರು. ವಿಜಯ ನಾರಾಯಣ ಕಾರ್ಯಕ್ರಮ ನಿರ್ವಹಿಸಿ, ಜಗದೀಶ ಗೋಖಲೆ ವಂದಿಸಿದರು.

Read More