Subscribe to Updates
Get the latest creative news from FooBar about art, design and business.
Author: roovari
ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ವತಿಯಿಂದ ಪಾಕ್ಷಿಕ ತಾಳಮದ್ದಳೆ ಹಾಗೂ ಇತ್ತೀಚೆಗೆ ನಿಧನರಾದ ಬಡಗುತಿಟ್ಟಿನ ಖ್ಯಾತ ಭಾಗವತರಾದ ಸುಬ್ರಹ್ಮಣ್ಯ ಧಾರೇಶ್ವರ ಇವರ ಕುರಿತು ನುಡಿನಮನ ಕಾರ್ಯಕ್ರಮವು ಓಂ ಶ್ರೀ ಶಕ್ತಿ ಆಂಜನೇಯ ಮಂತ್ರಾಲಯದಲ್ಲಿ ದಿನಾಂಕ 27-04-2024ರಂದು ನಡೆಯಿತು. ಸಂಘದ ಅಧ್ಯಕ್ಷರಾದ ಶ್ರೀ ಭಾಸ್ಕರ್ ಬಾರ್ಯ, ಕು೦ಬ್ಳೆ ಶ್ರೀಧರರಾವ್ ಗುಡ್ಡಪ್ಪಬಲ್ಯ, ಬಡೆಕ್ಕಿಲ ಚಂದ್ರಶೇಖರ ಭಟ್, ಮಹಿಳಾ ಯಕ್ಷಗಾನ ಸಂಘದ ಅಧ್ಯಕ್ಷ ಪ್ರೇಮಲತಾ ರಾವ್ ನುಡಿನಮನ ಸಲ್ಲಿಸಿದರು. ಬಳಿಕ ‘ಕುಂಭಕರ್ಣ ಕಾಳಗ’ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಯಲ್.ಯನ್. ಭಟ್, ದಂಬೆ ಈಶ್ವರ ಶಾಸ್ತ್ರೀ, ಮುರಳೀಧರ ಕಲ್ಲೂರಾಯ ಮತ್ತು ಮಾ.ಪರೀಕ್ಷಿತ್ ಪುತ್ತೂರು ಸಹಕರಿಸಿದರು. ಮುಮ್ಮೇಳದಲ್ಲಿ ಕು೦ಬ್ಳೆ ಶ್ರೀಧರ್ ರಾವ್, ಭಾಸ್ಕರ್ ಬಾರ್ಯ, ಗುಡ್ಡಪ್ಪ ಬಲ್ಯ, ಬಡೆಕ್ಕಿಲ ಚಂದ್ರಶೇಖರ ಭಟ್, ಸಚ್ಚಿದಾನಂದ ಪ್ರಭು ಅಜೇರು, ಅಚ್ಯುತ ಪಾಂಗಣ್ಣಾಯ ಮತ್ತು ಪ್ರೇಮಲತಾ ರಾವ್ ಸಹಕರಿಸಿದರು.
ಧಾರವಾಡ : ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡ ಇದರ ವತಿಯಿಂದ ನಾಡೋಜ ಚೆನ್ನವೀರ ಕಣವಿ ಮತ್ತು ಶ್ರೀಮತಿ ಶಾಂತಾದೇವಿ ಕಣವಿ ದತ್ತಿ ಕನ್ನಡದ ಯುವ ಲೇಖಕರಿಗಾಗಿ ‘ನಾಡೋಜ ಚೆನ್ನವೀರ ಕಣವಿ ಕಾವ್ಯ ಸ್ಪರ್ಧೆ ಮತ್ತು ಶ್ರೀಮತಿ ಶಾಂತಾದೇವಿ ಕಣವಿ ಕಥಾ ಸ್ಪರ್ಧೆ- 2024’ ಸೂಚನೆಗಳು : * ಸ್ಪರ್ಧೆಯಲ್ಲಿ ಭಾಗವಹಿಸುವವರ ವಯೋಮಿತಿ 18ರಿಂದ 35 ವರ್ಷ * ಬರಹಗಳನ್ನು ಕಳಿಸಲು ಕೊನೆಯ ದಿನಾಂಕ 20-05-2024 * ಕಡ್ಡಾಯವಾಗಿ ಆಧಾರ ಕಾರ್ಡ ಝರಾಕ್ಸ್ ಪ್ರತಿ ಕಳಿಸಬೇಕು. * ಕಥೆ ಮತ್ತು ಕವನಗಳು ಸ್ವತಂತ್ರವಾಗಿರಬೇಕು. * ವಿಷಯದ ಆಯ್ಕೆಯ ಸ್ವಾತಂತ್ರ್ಯವಿರುತ್ತದೆ. * ಈವರೆಗೂ ಎಲ್ಲಿಯೂ ಪ್ರಕಟವಾಗಿರಬಾರದು. * ನುಡಿ ತಂತ್ರಾಂಶದೊಂದಿಗೆ ವರ್ಡ್ ಫೈಲ್ ನಲ್ಲಿ ಟೈಫ್ ಮಾಡಿ ಇ-ಮೇಲ್ ಮೂಲಕ ಕಳಿಸಬೇಕು. * ನಿರ್ಣಾಯಕರ ನಿರ್ಣಯವೇ ಅಂತಿಮ. * ಎರಡೂ ವಿಭಾಗಗಳಲ್ಲಿ ಆಯ್ಕೆಯಾದ ಮೊದಲ ಮೂರು ಕವನಗಳಿಗೆ/ಬರಹಗಳಿಗೆ ಜೂನ್ 25ರಂದು ಡಾ. ಚನ್ನವೀರ ಕಣವಿ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಬಹುಮಾನ ನೀಡಲಾಗುವುದು. * ಕವನ ಮತ್ತು…
ಉಡುಪಿ : ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯನಿಕೇತನ ಕೊಡವೂರು ಜಂಟಿ ಆಶ್ರಯದಲ್ಲಿ ಆರಂಭಗೊಂಡಿದ್ದ ಏಕವ್ಯಕ್ತಿ ನೃತ್ಯ ಪ್ರದರ್ಶನಕ್ಕೊಂದು ವೇದಿಕೆ ‘ನೃತ್ಯ ಶಂಕರ’ ಸರಣಿ ದಿನಾಂಕ 22-04-2024ರ ಸಂಜೆ ಕಾರ್ಯಕ್ರಮದಲ್ಲಿ ಉಡುಪಿಯ ಕುಮಾರಿ ಶ್ರದ್ಧಾ ಕೆ. ಭಟ್ ಇವರು ನೃತ್ಯ ಪ್ರದರ್ಶನ ನೀಡಿದರು. ಸಾಂಪ್ರದಾಯಿಕ ಪುಷ್ಪಾಂಜಲಿ ನೃತ್ಯದೊಂದಿಗೆ ಹೆಜ್ಜೆ ಹಾಕಿದ ಶ್ರದ್ಧಾ ಅವರು ತಿಲ್ಲಾನದೊಂದಿಗೆ ಕೊನೆಗೊಳಿಸಿದರು. ನಡುವೆ ಪ್ರದರ್ಶಿಸಿದ ‘ಆಡಿಸಿದಳೇ ಯಶೋಧ ಜಗದೋದ್ಧಾರನ’ ಮತ್ತು ‘ದುರ್ಗೆ’ ನೃತ್ಯವು ಪ್ರೇಕ್ಷಕರನ್ನು ಕಣ್ಮನಗೊಳಿಸಿತ್ತು. ಕೀಳಂಜೆ ಶ್ರೀ ಕೃಷ್ಣರಾಜ ಭಟ್ ಮತ್ತು ಶ್ರೀಮತಿ ವಸುಧಾ ಭಟ್ ದಂಪತಿಯ ಸುಪುತ್ರಿಯಾದ ಕುಮಾರಿ ಶ್ರದ್ಧಾ ಕೆ. ಭಟ್ ಇವರು ಪ್ರಸ್ತುತ ಉಡುಪಿಯ ಮಹಾತ್ಮ ಗಾಂಧಿ ಮೆಮೋರಿಯಲ್ ಕಾಲೇಜಿನಲ್ಲಿ ತೃತೀಯ ಬಿಸಿಎಯನ್ನು ವ್ಯಾಸಂಗ ಮಾಡುತ್ತಿದ್ದಾರೆ. ಕಳೆದ 10 ವರ್ಷಗಳಿಂದ ಉಡುಪಿಯ ರಾಧಾಕೃಷ್ಣ ನೃತ್ಯನಿಕೇತನದ ಗುರುಗಳಾದ ನೃತ್ಯ ವಿದುಷಿ ಶ್ರೀಮತಿ ವೀಣಾ ಸಾಮಗ ಅವರ ಬಳಿ ನೃತ್ಯಭ್ಯಾಸ ಮಾಡುತ್ತಿದ್ದು, ಭರತನಾಟ್ಯ ಜೂನಿಯರ್ ಹಾಗೂ ಸೀನಿಯರ್ ಪರೀಕ್ಷೆಗಳಲ್ಲಿ ಉತ್ತಮ ಶ್ರೇಣಿಯಲ್ಲಿ…
ಮಂಗಳೂರು : ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಮಂಗಳೂರು ಇವರ ವತಿಯಿಂದ ಶ್ರೀ ಶಾರದಾ ಸೇವಾ ಸಮಿತಿ ಇದರ ಸಹಯೋಗದೊಂದಿಗೆ 16ನೇ ವರ್ಷದ ವಾರ್ಷಿಕೋತ್ಸವವು ದಿನಾಂಕ 03-05-2024ರಂದು ಸಂಜೆ 5.30 ಗಂಟೆಗೆ ಸರಿಯಾಗಿ ಮಂಗಳೂರು ಕೆನರಾ ಪದವಿ ಪೂರ್ವ ಕಾಲೇಜು ಬಯಲು ರಂಗಭೂಮಿಯ ದಿ. ಅಗರಿ ರಘುರಾಮ ಭಾಗವತ ವೇದಿಕೆಯಲ್ಲಿ ನಡೆಯಲಿದೆ. ಇದೇ ಸಂದರ್ಭದಲ್ಲಿ ಕುಸೇಲ್ದರಸೆ ನವೀನ್ ಡಿ. ಪಡೀಲ್ ಇವರಿಗೆ ಶ್ರೀಮತಿ ಪ್ರಭಾವತಿ ಶೆಣೈ ಹಾಗೂ ಉಡುಪಿ ವಿಶ್ವನಾಥ ಶೆಣೈ ಪ್ರಾಯೋಜಿತ ‘ರಂಗಭಾಸ್ಕರ ಪುರಸ್ಕಾರ -2024 ಪ್ರಶಸ್ತಿ’ ಮತ್ತು ದಿವಂಗತ ಪಿ.ಸಿ. ಜನಾರ್ದನ ರಾವ್ ಸ್ಮಾರಕ ‘ರಂಗ ಪ್ರಶಸ್ತಿ’ಯನ್ನು ಶ್ರೀಮತಿ ಸಾವಿತ್ರಿ ಶ್ರೀನಿವಾಸ ರಾವ್ ಇವರಿಗೆ ಪ್ರದಾನ ಮಾಡಲಾಗುವುದು. ಈ ಕಾರ್ಯಕ್ರಮವು ಅಗರಿ ಎಂಟರ್‌ಪ್ರೈಸಸ್ ಇದರ ಮಾಲಕರಾದ ಶ್ರೀ ಅಗರಿ ರಾಘವೇಂದ್ರ ರಾವ್, ಕಲಾ ಪೋಷಕರಾದ ಉಡುಪಿ ವಿಶ್ವನಾಥ ಶೆಣೈ, ಕೆನರ ಹೈಸ್ಕೂಲ್ ಅಸೋಸಿಯೇಷನ್ ಇದರ ಗೌರವ ಕಾರ್ಯದರ್ಶಿಯಾದ ಶ್ರೀ ರಂಗನಾಥ ಭಟ್, ಪ್ರಸಿದ್ಧ ರಂಗ ಮನೆ ನಿರ್ದೇಶಕರಾದ ಡಾ.…
ಮಂಗಳೂರು : ರಾಮಕೃಷ್ಣ ಮಠ ಮಂಗಳಾದೇವಿ ಮಂಗಳೂರು ಇವರ ಸಹಯೋಗದಲ್ಲಿ ದಾಸಸಾಹಿತ್ಯ ಸೇವಾ ಪ್ರತಿಷ್ಠಾನ ಮಂಗಳೂರು ಪ್ರಸ್ತುತ ಪಡಿಸುವ ಶ್ರೀಶಾ ಸೌಹಾರ್ದ ಕೋ-ಅಪರೇಟಿವ್ ಸೊಸೈಟಿ ಪ್ರಾಯೋಜಿತ ‘ಹರಿದಾಸ ನಮನ’ ಕಾರ್ಯಕ್ರಮವು ದಿನಾಂಕ 02-05-2024ರಂದು ಸಂಜೆ ಗಂಟೆ 5-15ಕ್ಕೆ ಮಂಗಳೂರಿನ ಶ್ರೀರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ನಡೆಯಲಿದೆ. ರಾಜ್ಯ ಕಂಡ ಅಪರೂಪದ ಸಂಗೀತದ ಯುವ ಪ್ರತಿಭೆ, ಝೀ ಕನ್ನಡ ವಾಹಿನಿಯ ಜನಪ್ರಿಯ ಸರಿಗಮಪ ಸೀರಿಸ್ – 2019ರ ವಿಜೇತ ಬೆಂಗಳೂರಿನ ಕೀರ್ತನ್ ಹೊಳ್ಳ ಇವರ ಹಾಡುಗಾರಿಕೆಗೆ ತೇಜಸ್ ಕಾಟೋಟಿ ಹಾರ್ಮೋನಿಯಂ ಮತ್ತು ರಾಜೇಶ್ ಭಾಗವತ್ ತಬಲಾ ಸಾಥ್ ನೀಡಲಿದ್ದಾರೆ.
ಕಲಬುರಗಿ : ವಿಶ್ವರಂಗ ನಾಟಕ ಮತ್ತು ನೃತ್ಯ ಸೇವಾ ಸಂಘ (ರಿ) ಕಲಬುರಗಿ ರಂಗಸಂಸ್ಥೆಯು 25 ದಿನಗಳ ಕಾಲ ಮಕ್ಕಳಿಗಾಗಿ ಬೇಸಿಗೆ ಶಿಬಿರವನ್ನು ಕನ್ನಡ ಭವನದಲ್ಲಿ ಆಯೋಜಿಸಲಾಗಿದ್ದು, ದಿನಾಂಕ 14-04-2024ರಂದು ‘ಚಿಣ್ಣರ ಮೇಳ -2024’ರ ಉದ್ಘಾಟನಾ ಸಮಾರಂಭ ನೆರವೇರಿತು. ಪ್ರಾಸ್ತಾವಿಕ ಹಾಗೂ ಸ್ವಾಗತ ನುಡಿಗಳನ್ನಾಡಿದ ಶಿಬಿರದ ನಿರ್ದೇಶಕ ಡಾ. ವಿಶ್ವರಾಜ್ ಪಾಟೀಲ್ “ವಿಶ್ವರಂಗದ 15 ವರ್ಷಗಳ ಪಯಣದಲ್ಲಿ ಏಳುಬೀಳುಗಳನ್ನಾಡುತ್ತಾ, ರಂಗಭೂಮಿಯ ಮೂಲಕ ಶಿಕ್ಷಣ ಇಲ್ಲಿ ಪಡೆದುಕೊಳ್ಳಲು ಅವಕಾಶವಿದೆ. ರಂಗಭೂಮಿ ಬಹಳ ಪ್ರಭಾವಿ ಮಾಧ್ಯಮ. ಇಲ್ಲಿ ಮಕ್ಕಳು ಧೈರ್ಯವಾಗಿ ವೇದಿಕೆ ಮೇಲೆ ಮಾತನಾಡಲು ಕಲಿಯುತ್ತಾರೆ, ಭಾಷೆ, ಉಚ್ಛಾರಣೆ ಸ್ಪಷ್ಟತೆ ಬರುತ್ತದೆ. ರಂಗಭೂಮಿಯ ಮೂಲಕ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ” ಎಂದು ಶಿಬಿರದ ಉದ್ದೇಶವನ್ನು ವಿವರಿಸಿ ಎಲ್ಲಾ ಅಥಿತಿ ಗಣ್ಯರನ್ನು ಸ್ವಾಗತಿಸಿದರು. ಚಲನಚಿತ್ರ ನಟರಾದ ಶ್ರೀ ಶರಣರಾಜ್ ಅವರು ದೀಪ ಬೆಳಗಿಸುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿ, “ಇಂದಿನ ಮಕ್ಕಳ ಸೃಜನಾತ್ಮಕ ಬೆಳವಣಿಗೆಗೆ ರಂಗ ಶಿಬಿರಗಳು ಬಹಳ ಮಹತ್ವದ ಕೆಲಸವಾಗಿದೆ. ಯಾಕೆಂದರೆ ಶಾಲೆಯಲ್ಲಿ ನಾಲ್ಕು ಗೋಡೆಗಳ ಮಧ್ಯೆ,…
ಮಂಗಳೂರು : ಕಲ್ಕೂರ ಪ್ರತಿಷ್ಠಾನವು ಆಯೋಜಿಸಿದ್ದ ಭಾಗವತ ಸುಬ್ರಹ್ಮಣ್ಯ ಧಾರೇಶ್ವರರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮವು ದಿನಾಂಕ 27-04-2024ರಂದು ಮಂಗಳೂರಿನ ಎಂ. ಜಿ. ರಸ್ತೆಯಲ್ಲಿರುವ ಕಲ್ಕೂರ ಪ್ರತಿಷ್ಠಾನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ನುಡಿನಮನ ಸಲ್ಲಿಸಿ ಮಾತನಾಡಿದ ಪ್ರಸಿದ್ದ ಯಕ್ಷಗಾನ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ “ಸದಾ ಉಲ್ಲಾಸದಿಂದಿದ್ದ ಉತ್ಕೃಷ್ಟ ಭಾಗವತರಾಗಿ ಸಜ್ಜನಿಕೆಯಿಂದ ಸುಬ್ರಹ್ಮಣ್ಯ ಧಾರೇಶ್ವರರು ತನ್ನದೇ ಹಾದಿಯಲ್ಲಿ ಪ್ರಸಿದ್ಧರಾದವರು. ಅವರ ಅಕಾಲಿಕ ನಿಧನ ಸಮಗ್ರ ಗಾನ ಲೋಕಕ್ಕೆ ತೀವ್ರ ಆಘಾತವನ್ನುಂಟುಮಾಡಿದೆ. ಅನೇಕ ಹೊಸ ಪ್ರಸಂಗಗಳಿಗೆ ಜೀವ ತುಂಬಿ ಮೆರೆಸಿದ ಪ್ರಯೋಗಶೀಲರೂ ಆಗಿದ್ದ ಧಾರೇಶ್ವರರು ಓರ್ವ ಅಪೂರ್ವ ಭಾಗವತರು.” ಎಂದವರು ಸ್ಮರಿಸಿದರು. ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿ “ದಿವಂಗತ ಕಾಳಿಂಗ ನಾವಡರ ನಿಧನದ ಬಳಿಕ ಅಷ್ಟೇ ಯೋಗ್ಯತೆಯ ಕಲಾವಿದನಾಗಿ ಬಡಗು ತಿಟ್ಟಿನಲ್ಲಿ ಹೆಸರುಗಳಿಸಿದ ಭಾಗವತರ ಸಾಲಿನಲ್ಲಿ ಧಾರೇಶ್ವರರು ಅಗ್ರಗಣ್ಯರೆನಿಸುತ್ತಾರೆ.” ಎಂದು ಗುಣಗಾನಗೈದರು. ಯಕ್ಷಾಂಗಣ ಮಂಗಳೂರು ಕಾರ್ಯಾಧ್ಯಕ್ಷ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಮಾತನಾಡಿ “ಯಕ್ಷಗಾನ ರಂಗದಲ್ಲಿ ಶತಮಾನದ ಧ್ವನಿಯಾಗಿ…
ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತು 2023ನೆಯ ಸಾಲಿನಲ್ಲಿ ಪುಸ್ತಕಗಳಿಗೆ ನೀಡಲಾಗುವ ವಿವಿಧ ದತ್ತಿ ಪುರಸ್ಕಾರಗಳಿಗಾಗಿ ಪುಸ್ತಕಗಳನ್ನು ಆಹ್ವಾನಿಸಿದೆ.2023 ಜನವರಿ 1 ರಿಂದ ಡಿಸೆಂಬರ್ 31ರೊಳಗೆ ಪ್ರಕಟಗೊಂಡ ಪುಸ್ತಕಗಳನ್ನು ಲೇಖಕರು ಅಥವಾ ಪ್ರಕಾಶಕರು ಕಳಿಸಿಕೊಡಬಹುದಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ. 2023ನೆಯ ಸಾಲಿನಲ್ಲಿ ಪ್ರಕಟಗೊಂಡಿರುವ ಒಟ್ಟು 53 ವಿವಿಧ ಪುಸ್ತಕಗಳಿಗೆ ದತ್ತಿ ಪುರಸ್ಕಾರಗಳನ್ನು ಕನ್ನಡ ಸಾಹಿತ್ಯ ಪರಿಷತ್ತು ನೀಡುತ್ತಿದೆ. ಅದಕ್ಕಾಗಿ ಅನೇಕ ದತ್ತಿ ದಾನಿಗಳು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದತ್ತಿ ನಿಧಿಯನ್ನು ಸ್ಥಾಪಿಸಿದ್ದು ಒಟ್ಟಾರೆ 57ವಿವಿಧ ಪ್ರಕಾರಗಳ ಪುಸ್ತಕಗಳನ್ನು ಆಹ್ವಾನಿಸಲಾಗಿದೆ. ಪ್ರತಿ ದತ್ತಿ ಪ್ರಶಸ್ತಿಯ ಪ್ರವೇಶಕ್ಕೆ ತಲಾ ಮೂರು ಪುಸ್ತಕಗಳನ್ನು, ಯಾವ ದತ್ತಿಗಾಗಿ ಎನ್ನುವುದನ್ನು ಪುಸ್ತಕದ ಮೊದಲ ಪುಟದಲ್ಲಿ ಸ್ಪಷ್ಟವಾಗಿ ಬರೆದು ‘ಗೌರವ ಕಾರ್ಯದರ್ಶಿಗಳು, ಕನ್ನಡ ಸಾಹಿತ್ಯ ಪರಿಷತ್ತು, ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ ಬೆಂಗಳೂರು-560 018’ ಅವರಿಗೆ ಕಳುಹಿಸಲು ಪ್ರಕಟಣೆಯಲ್ಲಿ ಕೋರಿದೆ. ಸ್ಪರ್ಧೆಗೆ ಅನ್ವಯಿಸುವ ನಿಯಮಗಳು: 1) ಪ್ರತಿಗಳನ್ನು ದಿನಾಂಕ: 31…
ಕನ್ನಡದಲ್ಲಿ ಕಾದಂಬರಿಯು ಅತ್ಯಂತ ಹುಲುಸಾಗಿ ಬೆಳೆದ ಸಾಹಿತ್ಯ ಪ್ರಕಾರವಾಗಿದೆ. ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ಅದು ತನ್ನ ಜೀವಂತಿಕೆಯನ್ನು ಉಳಿಸಿಕೊಂಡಿದೆ. ಅದರ ಬೆಳವಣಿಗೆಯನ್ನು ಸ್ಥೂಲವಾಗಿ ನವೋದಯ, ಪ್ರಗತಿಶೀಲ, ನವ್ಯ, ಬಂಡಾಯ ಯುಗಗಳೆಂದು ಗುರುತಿಸಲಾಗುತ್ತದೆ. ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯ ಈ ಹಂತಗಳನ್ನು ಕಾಲಕ್ರಮದಲ್ಲಿ ಒಂದು ಮುಗಿದ ನಂತರ ಇನ್ನೊಂದು ಆರಂಭವಾಯಿತು ಎನ್ನುತ್ತಿದ್ದರೂ ಅವುಗಳೆಲ್ಲ ಏಕಕಾಲದಲ್ಲಿ ಅಸ್ತಿತ್ವದಲ್ಲಿರುವುದನ್ನು ಅಲ್ಲಗೆಳೆಯುವಂತಿಲ್ಲ. ಈಗ ಬಂಡಾಯ ಯುಗ ಮುಗಿದರೂ ಅದರ ಸೂಕ್ಷ್ಮ ದನಿಯನ್ನು ಹೊಂದಿದ ಅನೇಕ ಕಾದಂಬರಿಗಳು ಬರುತ್ತಿವೆ. ನವ್ಯ ಮಾರ್ಗದ ಕೃತಿಗಳೂ ಬೆಳಕು ಕಾಣುತ್ತಿವೆ. ಡಾ. ಲಲಿತಾ ಎಸ್.ಎನ್. ಭಟ್ ಅವರ ‘ಅಪರಾಜಿತಾ’ ಎಂಬ ಕಾದಂಬರಿಯು ನವ್ಯ ಮತ್ತು ಬಂಡಾಯದ ಸತ್ವವನ್ನು ಹೀರಿಕೊಂಡು ರೂಪು ತಾಳಿದೆ. ಮಧ್ಯಂತರದಲ್ಲೇ ಆರಂಭಗೊಂಡು ಹಿನ್ನೋಟ ತಂತ್ರದ ಮೂಲಕ ವಿಷಯಗಳನ್ನು ನಿರೂಪಿಸುತ್ತಾ ಉದ್ಯೋಗಸ್ಥ ಮಹಿಳೆಯ ಜೀವನಕ್ರಮವನ್ನು ಹಿಡಿದಿಡುವ ಕೃತಿಯು ಮೀರಾ ಎಂಬ ವೈದ್ಯೆಯ ದೃಷ್ಟಿಕೋನದಿಂದ ಬದುಕನ್ನು ಅವಲೋಕಿಸುತ್ತದೆ. ಆಕೆಯ ಆತ್ಮಶೋಧನೆ, ದ್ವಂದ್ವ, ಸ್ವಗತಗಳಿಂದ ಆರಂಭಗೊಳ್ಳುವ ಕಾದಂಬರಿಯು ಆಪ್ತವಾದ ನಿರೂಪಣೆಯೊಂದಿಗೆ ಬದುಕಿನ ಸಂಕೀರ್ಣ ಸಮಸ್ಯೆಗಳಿಗೆ…
ಮೈಸೂರು : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೈಸೂರು ಮತ್ತು ಕಥಾಬಿಂದು ಪ್ರಕಾಶನ ಮಂಗಳೂರು ಇದರ ಆಶ್ರಯದಲ್ಲಿ ಪಿ.ವಿ. ಪ್ರದೀಪ್ ಕುಮಾರ್ ಸಾರಥ್ಯದಲ್ಲಿ ‘ಸಾಹಿತ್ಯ ಸಂಭ್ರಮ 2024’ವು ದಿನಾಂಕ 01-05-2024ರಂದು ಬೆಳಿಗ್ಗೆ ಗಂಟೆ 10-00ಕ್ಕೆ ಮೈಸೂರು ವಿಧ್ಯಾವರ್ಧಕ ಕಾಲೇಜು ರಸ್ತೆ, ಚಂದ್ರಕಲಾ ಆಸ್ಪತ್ರೆ ಹತ್ತಿರ, ವಿಜಯನಗರ 1ನೇ ಹಂತ, ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಭವನದಲ್ಲಿ ನಡೆಯಲಿದೆ. ಮೈಸೂರಿನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಮಡ್ಡಿಕೆರೆ ಗೋಪಾಲ್ ಇವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಸರ್ಕಾರ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಮಾನಸ ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಡಾ. ಟಿ. ತ್ಯಾಗರಾಜು ಮೈಸೂರು ಇವರ ‘ಮನದ ಮಾತು’, ಪುಷ್ಪಾ ನಾಗತಿಹಳ್ಳಿಯವರ ‘ಅನುಗತ’ ಮತ್ತು ‘ಧರೆಯಂಚಿನ ಮರ’, ಶೋಭಿತಾ ಮೈಸೂರು (ಶೋಭ ಟಿ.ಆರ್.) ಇವರ ‘ಸಂಜೆಯ ಸೂರ್ಯ’, ಲತಾ ಕೆ.ಎಸ್. ಹೆಗಡೆಯವರ ‘ಕನ್ನಡದ ತರುಲತೆ’ ಮತ್ತು ‘ಗುಬ್ಬಿಯ ಗೂಡು’ ಮತ್ತು ಹಾ.ಮ. ಸತೀಶ್ ಬೆಂಗಳೂರು ಇವರ ‘ನುಡಿಹಾರ’…