Subscribe to Updates
Get the latest creative news from FooBar about art, design and business.
Author: roovari
ದೇರಳಕಟ್ಟೆ : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಳ್ಳಾಲ ತಾಲೂಕು ವತಿಯಿಂದ ದೇರಳಕಟ್ಟೆ ಕಂಪರ್ಟ್ಸ್ ಇನ್ ಸಭಾಂಗಣದಲ್ಲಿ ರವೀಂದ್ರ ರೈ ಕಲ್ಲಿಮಾರು ಇವರ ‘ಮೇಲೋಗರ’ ಎಂಬ ಚಿಂತನ ಸಂಕಲನದ ಲೋಕಾರ್ಪಣೆ ಕಾರ್ಯಕ್ರಮವು ದಿನಾಂಕ 27-01-2024ರಂದು ನಡೆಯಿತು. ಕೃತಿ ಬಿಡುಗಡೆಗೊಳಿಸಿದ ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾ ಕುಮಾರಿ ಮಾತನಾಡುತ್ತಾ “ಯುವ ತಲೆಮಾರು ದಾರಿ ತಪ್ಪದಂತೆ ಮಾರ್ಗದರ್ಶನ ಮಾಡುವ ಹಾಗೂ ಯುವಕರನ್ನು ಮರುಳು ಮಾಡುವ ಸಾಮಾಜಿಕ ವ್ಯವಸ್ಥೆಯಲ್ಲಿ ಮೌಲ್ಯಯುತವಾದ ಚಿಂತನೆಗಳು ಬೇಕಾಗಿವೆ. ರವೀಂದ್ರ ರೈಗಳ ‘ಮೇಲೋಗರ’ ಕೃತಿ ಈ ಮಾರ್ಗದರ್ಶನ ನೀಡಬಲ್ಲ ಹೊತ್ತಗೆ” ಎಂದು ಹೇಳಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಜಾನಪದ ವಿದ್ವಾಂಸರು ವಿವಿ ವಿಶ್ರಾಂತ ಕುಲಪತಿ ಪ್ರೊ. ಕೆ. ಚಿನ್ನಪ್ಪಗೌಡ ಮಾತನಾಡಿ “ಅತ್ಯುತ್ತಮ ಶಿಕ್ಷಕರಾದವರಿಗೆ ಮಾರ್ಗದರ್ಶಕ ಚಿಂತನೆಗಳನ್ನು ನೀಡಲು ಸಾಧ್ಯ. ಸಾಂದರ್ಭಿಕವೂ ಸಾಮಾಜಿಕ ಕಾಳಜಿಯನ್ನು ಹೊಂದಿದ ರವೀಂದ್ರ ರೈಗಳ ಚಿಂತನ ಕೃತಿ ಎಲ್ಲರಿಗೂ ಮಾರ್ಗದರ್ಶಿ. ಇತ್ತೀಚಿನ ಕೆಲವು ಘಟನೆಗಳನ್ನು ಗಮನಿಸುವಾಗ ಸಮಾಜದಲ್ಲಿ ನಮಗೆ ಅರಗಿಸಿಕೊಳ್ಳಲಾಗದ, ವಿವರಿಸಲಾಗದ ನೈತಿಕ ಅಧ:ಪತನ…
ಮಣಿಪಾಲ : ಮಂಗಳೂರಿನ ‘ಪಿಂಗಾರ ಸಾಹಿತ್ಯ ಬಳಗ’ದಿಂದ ಮಣಿಪಾಲದ ದಶರಥನಗರದಲ್ಲಿ ಆಂಟನಿ ಲೂವಿಸ್ ಅವರ ಅಂಗಳದಲ್ಲಿ ಇಪ್ಪತ್ತನೆಯ ವರುಷದ ‘ಸಾಹಿತ್ಯ ಸಂಭ್ರಮ ಮತ್ತು ಬಹುಭಾಷಾ ಕವಿಗೋಷ್ಠಿ’ಯು ದಿನಾಂಕ 27-01-2024ರಂದು ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ರೇಮಂಡ್ ಡಿಕುನ್ಹಾ ತಾಕೊಡೆ ಮಾತನಾಡಿ “ಯಾವುದೇ ಸಾಹಿತ್ಯದ ರಚನೆ ಮಾತೃ ಭಾಷೆಯ ಸರಿಯಾದ ಋಣ ಸಂದಾಯದ ಅವಕಾಶವಾಗಿದೆ. ನಮ್ಮ ಸುತ್ತಲಿನ ಸಹೋದರ ಭಾಷೆಯಲ್ಲಿ ಸಾಹಿತ್ಯದ ಓದುವ ಹವ್ಯಾಸ ಬಹಳಷ್ಟು ಲಾಭದಾಯಕ” ಎಂದು ನುಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಡಾ. ಸುರೇಶ ನೆಗಳಗುಳಿ ಮಾತನಾಡಿ “ಸಾಹಿತಿ ಆಗಲು ಆಶಯ, ಆಕ್ರೋಶ, ಆಶಾಭಾವಗಳು ಬೇಕು ಮತ್ತು ಓದುವ ಹವ್ಯಾಸ ಬೆಳೆಸಬೇಕು” ಎಂದು ಹೇಳಿದರು. ಕನ್ನಡ, ಕೊಂಕಣಿ, ತುಳು, ತೆಲುಗು, ಹಿಂದಿ ಪಂಚಭಾಷಾ ಕವಿಗೋಷ್ಟಿಗೆ ಹಿರಿಯ ಕೊಂಕಣಿ ಸಾಹಿತಿ ಡಾ. ನಾಗೇಶ್ ಕುಮಾರ್ ಕವಿತೆ ಹಾಡಿ ಚಾಲನೆ ನೀಡಿದರು. ‘ಪನ್ವಾರ್’ ಕೊಂಕಣಿ ಮಾಸಿಕದ ಸಂಪಾದಕರಾದ ಜ್ಞಾನದೇವ್ ಮಲ್ಯಾ ಕವಿಗಳಿಗೆ ಪುಸ್ತಕ ಗೌರವ ನೀಡಿದರು. ಕವಿಗಳಾದ ವಿನೋದ…
ಉಡುಪಿ : ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ವಿಶ್ರಾಂತ ಪ್ರಾಂಶುಪಾಲರಾದ ಡಾ. ಅನಿಲ್ ಕುಮಾರ್ ಅವರು ರಚಿಸಿದ ‘ಉಡುಪಿ ಜಿಲ್ಲಾ ಬರಹಗಾರರ ಕೋಶ’ ಕಾವ್ಯ ಸಂಪುಟ ಬಿಡುಗಡೆ ಸಮಾರಂಭವು ದಿನಾಂಕ 07-01-2024ರಂದು ನಡೆಯಿತು. ಈ ಕಾರ್ಯಕ್ರಮದ ಗೋಷ್ಠಿಗಳ ಸಮಾರೋಪದಲ್ಲಿ ಭಾಗವಹಿಸಿದ ಗಣಕ ತಜ್ಞ ಡಾ. ಕೆ.ಪಿ. ರಾವ್ ಮಾತನಾಡುತ್ತಾ “ಕನ್ನಡ ಸಾಹಿತ್ಯ ಮತ್ತು ಕಲೆಯ ವಿಚಾರದಲ್ಲಿ ಇಂದಿನ ಪೀಳಿಗೆ ಮತ್ತಷ್ಟು ಸಂಶೋಧನೆ, ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕು. ಕ್ಷೇತ್ರ ಕಾರ್ಯ ಅಧ್ಯಯನದ ಬಗ್ಗೆ ಇಂದಿನ ಯುವ ಪೀಳಿಗೆ ಆಸಕ್ತಿಯಿಂದ ಮುಂದಾಗಬೇಕು. ಎಲ್ಲವನ್ನು ಕಂಪ್ಯೂಟರ್ ಮಾಹಿತಿಯೇ ಆಧರಿಸಿ ಅಧ್ಯಯನ ಮಾಡುವುದು ಸರಿಯಾದ ಪ್ರಕ್ರಿಯೆಯಲ್ಲ. ಮಾಹಿತಿ ಮಾತ್ರವಲ್ಲದೆ ವಿಶ್ಲೇಷಣೆಯ ಅಗತ್ಯವೂ ಇದ್ದು, ಇದಕ್ಕೆ ಕ್ಷೇತ್ರ ಕಾರ್ಯದ ಅಧ್ಯಯನ, ಸಂಶೋಧನೆ ಅಗತ್ಯವಾಗಿದೆ. ಕನ್ನಡದ ಸಾಹಿತ್ಯ, ಕಲೆ ಬಗ್ಗೆ ಹೆಚ್ಚಿನ ಅಧ್ಯಯನ ನಡೆದು ಮುಂದಿನ ಪೀಳಿಗೆಗೂ ಈ ಮೌಲ್ಯ ತಿಳಿಯಬೇಕಿದೆ. ಈ ನಿಟ್ಟಿನಲ್ಲಿ ಡಾ. ಅನಿಲ್ ಕುಮಾರ್ ಅವರ ‘ಜಿಲ್ಲಾ ಬರಹಗಾರರ ಕೋಶ’ ಯುವ ಸಂಶೋಧಕರಿಗೆ ಅಗತ್ಯ ಮಾರ್ಗದರ್ಶಿಯಾಗಿದೆ…
ಉಳ್ಳಾಲ : ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಇವರ ವತಿಯಿಂದ 2024ರ ಫೆಬ್ರವರಿ ತಿಂಗಳ 3ನೇ ವಾರದಲ್ಲಿ ಜರಗುವ ವೀರರಾಣಿ ಅಬ್ಬಕ್ಕ ಉತ್ಸವದಲ್ಲಿ ಓರ್ವ ಮಹಿಳಾ ಸಾಧಕರಿಗೆ ‘ವೀರರಾಣಿ ಅಬ್ಬಕ್ಕ ಪ್ರಶಸ್ತಿ’ ಮತ್ತೋರ್ವ ಮಹಿಳಾ ಸಾಧಕರಿಗೆ ‘ವೀರರಾಣಿ ಅಬ್ಬಕ್ಕ ಪುರಸ್ಕಾರ’ಗಳನ್ನು ನೀಡಲು ನಿರ್ಧರಿಸಲಾಗಿದೆ. ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ವತಿಯಿಂದ ನೀಡಲಾಗುವ ಈ ಪ್ರಶಸ್ತಿಗಳು ನಗದು ಮತ್ತು ಪ್ರಶಸ್ತಿ ಫಲಕಗಳನ್ನು ಒಳಗೊಂಡಿದೆ. ‘ವೀರರಾಣಿ ಅಬ್ಬಕ್ಕ ಪ್ರಶಸ್ತಿ’ಯು ತುಳುನಾಡಿನಲ್ಲಿ ಹುಟ್ಟಿ ಸಾಹಿತ್ಯ, ಸಂಸ್ಕೃತಿ ಮತ್ತು ಸಂಶೋಧನಾ ವಿಭಾಗಗಳಲ್ಲಿ ಗಣನೀಯ ಸಾಧನೆ ಮಾಡಿದ ಓರ್ವ ಮಹಿಳೆಗೆ ಈ ಪ್ರಶಸ್ತಿ ಮೀಸಲಾಗಿದೆ. ನಾಡು, ನುಡಿ ಹಾಗೂ ಪರಂಪರೆಗೆ ನೀಡಿದ ಸೇವೆಯನ್ನು ಇಲ್ಲಿ ಗಮನಿಸಲಾಗುವುದು. ‘ವೀರರಾಣಿ ಅಬ್ಬಕ್ಕ ಪುರಸ್ಕಾರ’ಕ್ಕೆ ತುಳು ಸಂಸ್ಕೃತಿಯ ಹಿನ್ನೆಲೆಯೊಂದಿಗೆ ಕಲೆ, ಕ್ರೀಡೆ, ಸಮಾಜ ಸೇವೆ ಇತ್ಯಾದಿ ಕ್ಷೇತ್ರಗಳಲ್ಲಿ ಮಹತ್ವದ ಸಾಧನೆ ಮಾಡಿದ ಮಹಿಳೆಯೋರ್ವರಿಗೆ ಅಬ್ಬಕ್ಕ ಪುರಸ್ಕಾರ ನೀಡಲು ಉದ್ದೇಶಿಸಲಾಗಿದೆ. ಈ ಪ್ರಶಸ್ತಿಗೆ ಚಲನಚಿತ್ರ, ನಾಟಕ, ಲಲಿತ ಕಲೆಗಳು, ಕ್ರೀಡಾರಂಗ, ನಾಟಿವೈದ್ಯ,…
ಉಡುಪಿ : ಭಾವನಾ ಪೌಂಡೇಶನ್ (ರಿ.) ಹಾವಂಜೆ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಹಿರಿಯಡ್ಕದ ಸಂಸ್ಕೃತಿ ಸಿರಿ ಟ್ರಸ್ಟ್ ಹಾಗೂ ಆಭರಣ್ ಜುವೆಲ್ಲರ್ಸ್ ಸಹಯೋಗದಲ್ಲಿ ಆಯೋಜಿಸಿದ ‘ಜನಪದ’ ದೇಶೀಯ ಕಲೆಯ ಸರಣಿ ಕಲಾ ಕಾರ್ಯಾಗಾರದ ಒಂಭತ್ತು ಮತ್ತು ಹತ್ತನೇ ಆವೃತ್ತಿ ಹಾಗೂ ‘ಗಿಲ್ಡೆಡ್ ಡಿವೈನಿಟಿ’ ಶೀರ್ಷಿಕೆಯ ಮೈಸೂರು ಚಿತ್ರಗಳ ಕಲಾಪ್ರದರ್ಶನವು ದಿನಾಂಕ 27-01-2024ರಂದು ಬಡಗುಪೇಟೆಯ ‘ಹತ್ತು ಮೂರು ಇಪ್ಪಂತ್ತೆಂಟು ಗ್ಯಾಲರಿ’ಯಲ್ಲಿ ಉದ್ಘಾಟನೆಗೊಂಡಿತು. ಈ ಕಾರ್ಯಕ್ರಮವನ್ನು ನವದೆಹಲಿಯ ಕೇಂದ್ರ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯರಾದ ಪ್ರೊ. ಮುರಳೀಧರ ಉಪಾಧ್ಯ ಹಿರಿಯಡಕ ಇವರು ಉದ್ಘಾಟಿಸಿ ಮಾತನಾಡುತ್ತ “ಭಾರತೀಯ ಕಲಾ ಪ್ರಕಾರಗಳೆಲ್ಲ ಬಹಳ ವಿಶಿಷ್ಟತೆಯಿಂದ ಕೂಡಿದುದು. ಉಡುಪಿಯ ಪರಿಸರದಲ್ಲಿ ಈ ದೇಶೀಯ ಪರಂಪರೆಯ ಮೈಸೂರು ಹಾಗೂ ಗಂಜೀಫಾ ಚಿತ್ರಶೈಲಿಗಳನ್ನು ಪರಿಚಯಿಸುತ್ತಿರುವುದು ಜೊತೆಗೆ ಸಮಕಾಲೀನ ಸಾಧ್ಯತೆಗಳನ್ನು ಕೂಡ ಪ್ರಾಯೋಗಿಕವಾಗಿ ಸಾಧ್ಯವಾಗುವಂತೆ ನಡೆಸಿಕೊಡುತ್ತಿರುವ ಭಾವನಾ ಪೌಂಡೇಶನ್ನ ಕಾರ್ಯ ಶ್ಲಾಘನೀಯ. ಜೊತೆಗೆ ಈ ಎಲ್ಲಾ ದೇಶೀಯ ಚಿತ್ರ ಪರಂಪರೆಗಳ ಚಿತ್ರಸಂತೆಯೊಂದನ್ನು ಉಡುಪಿಯಲ್ಲಿ ಆಯೋಜಿಸಿದರೆ ಖಂಡಿತ ಕಲೆ, ಕಲಾವಿದರಿಗೆ ಉತ್ತಮ…
ಕಾಸರಗೋಡು : ಕಲೆ, ಸಾಹಿತ್ಯ, ಸಂಸ್ಕೃತಿಗೆ ಮಹೋನ್ನತ ಕೊಡುಗೆಯಿತ್ತು ಅಮರರಾದ ಪುಂಡೂರು ದಾಮೋದರ ಪುಣಿಂಚಿತ್ತಾಯ ಪ್ರತಿಷ್ಠಾನದ ನೇತೃತ್ವದಲ್ಲಿ ಸಾಹಿತ್ಯ, ಕಲೋಪಾಸಕ ಕೀರ್ತಿಶೇಷ ರಾಮಚಂದ್ರ ಪುಣಿಂಚಿತ್ತಾಯರ ಪ್ರಥಮ ವರ್ಷಾಂತಿಕ ಸಂಸ್ಮರಣೆಯೊಂದಿಗೆ ನಾಡಿನ ಹಿರಿಯ ಕವಿ, ಕಲಾಸಾಹಿತ್ಯ ಚಿಂತಕ, ಅರ್ಥದಾರಿ ಡಾ.ರಮಾನಂದ ಬನಾರಿ ಅವರಿಗೆ ದಂಪತಿ ಸಹಿತ ಪುಂಡೂರು ದಾಮೋದರ ಪುಣಿಂಚಿತ್ತಾಯ ಪ್ರಶಸ್ತಿ ಪ್ರದಾನ ಸಮಾರಂಭ ದಿನಾಂಕ 18-01-2024ರಂದು ನಡೆಯಿತು. ಪುಂಡೂರು ನೀರ್ಮಜೆಯ “ಶ್ರೀ ರಂಜಿನಿ” ಮನೆಯಂಗಳದಲ್ಲಿ ತಂತ್ರಿ ಉಳಿಯ ವಿಷ್ಣು ಆಸ್ರ ಇವರ ಅಧ್ಯಕ್ಷತೆ ಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಉದ್ಘಾಟಿಸಿ, ದಿ.ರಾಮಚಂದ್ರ ಪುಣಿಂಚಿತ್ತಾಯರು ರಚಿಸಿದ “ಭಕ್ತಿ ಭಾವ ಯಾನ” ಎಂಬ ಭಕ್ತಿಗೀತೆಗಳ ಕೃತಿ ಬಿಡುಗಡೆಗೈದು ಆಶೀರ್ವಚನವಿತ್ತರು. ನೂತನ ಕೃತಿಗೆ ಮುನ್ನುಡಿ ಬರೆದ ಡಾ. ಬೇ.ಸೀ. ಗೋಪಾಲಕೃಷ್ಣ ಭಟ್ ಕೃತಿ ಪರಿಚಯ ಮಾಡಿದರು. ವಿದ್ವಾಂಸ ಡಾ. ಎಂ. ಪ್ರಭಾಕರ ಜೋಷಿ ಅತಿಥಿಯಾಗಿ ಶುಭಾಶಂಸನೆಗೈದು “ಪುಂಡೂರು ಮನೆತನದ ಕಲಾ,ಸಾಹಿತ್ಯ, ಸಾಂಸ್ಕೃತಿಕ ಕೊಡುಗೆಯಲ್ಲಿ ಗಡಿನಾಡಿನ ಇತಿಹಾಸವೇ ಹುದುಗಿದೆ.…
ಶಿವಮೊಗ್ಗ : ಕರ್ನಾಟಕ ಸಂಘ 2023ನೇ ಸಾಲಿನಲ್ಲಿ ಮೊದಲ ಮುದ್ರಣ ಕಂಡ ಕನ್ನಡ ಪುಸ್ತಕಗಳಿಗೆ ಬಹುಮಾನ ನೀಡಲು ಲೇಖಕರು, ಪ್ರಕಾಶಕರಿಂದ ಕೃತಿಗಳನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು 20-03-2024 ಕೊನೆಯ ದಿನ. ಕಾದಂಬರಿಗೆ ‘ಕುವೆಂಪು ಪ್ರಶಸ್ತಿ’, ಅನುವಾದಕ್ಕೆ ‘ಪ್ರೊ. ಎಸ್.ವಿ. ಪರಮೇಶ್ವರ ಭಟ್ಟ ಪ್ರಶಸ್ತಿ’, ಮಹಿಳಾ ಸಾಹಿತ್ಯಕ್ಕೆ ‘ಎಂ.ಕೆ. ಇಂದಿರಾ ಪ್ರಶಸ್ತಿ’, ಮುಸ್ಲಿಂ ಬರಹಗಾರರಿಗೆ ‘ಪಿ. ಲಂಕೇಶ್ ಪ್ರಶಸ್ತಿ’, ಕವನ ಸಂಕಲನಕ್ಕೆ ‘ಡಾ. ಜಿ. ಎಸ್. ಶಿವರುದ್ರಪ್ಪ ಪ್ರಶಸ್ತಿ’, ಅಂಕಣ ಬರಹಕ್ಕೆ ‘ಡಾ. ಹಾ. ಮಾ. ನಾಯಕ ಪ್ರಶಸ್ತಿ’, ಸಣ್ಣ ಕಥಾ ಸಂಕಲನಕ್ಕೆ ‘ಡಾ. ಯು. ಆರ್. ಅನಂತಮೂರ್ತಿ ಪ್ರಶಸ್ತಿ’, ನಾಟಕಕ್ಕೆ ‘ಡಾ. ಕೆ.ವಿ. ಸುಬ್ಬಣ್ಣ ಪ್ರಶಸ್ತಿ’, ಪ್ರವಾಸ ಸಾಹಿತ್ಯಕ್ಕೆ ‘ಕುಕ್ಕೆ ಸುಬ್ರಹ್ಮಣ್ಯ ಶಾಸ್ತ್ರಿ ಪ್ರಶಸ್ತಿ’, ವಿಜ್ಞಾನ ಸಾಹಿತ್ಯಕ್ಕೆ ‘ಹಸೂಡಿ ವೆಂಕಟಶಾಸ್ತ್ರಿ ಪ್ರಶಸ್ತಿ’, ಮಕ್ಕಳ ಸಾಹಿತ್ಯಕ್ಕೆ ‘ಡಾ. ನಾ. ಡಿಸೋಜ ಪ್ರಶಸ್ತಿ’ ಹಾಗೂ ವೈದ್ಯ ಸಾಹಿತ್ಯಕ್ಕೆ ‘ಡಾ. ಎಚ್. ಡಿ. ಚಂದ್ರಪ್ಪಗೌಡ ಪ್ರಶಸ್ತಿ’ ನೀಡಲಾಗುವುದು. ಆಯ್ಕೆಯಾದ ಕೃತಿಗಳಿಗೆ 10,000 ರೂ. ನಗದು…
ಅಹರ್ನಿಶಿ ಪ್ರಕಾಶನವು ಪ್ರಕಟಿಸಿದ ಹಂಪಿಯ ಕನ್ನಡ ವಿ.ವಿ.ಯಲ್ಲಿ ಪ್ರೊಫೆಸರ್ ಆಗಿ ನಿವೃತ್ತರಾದ ಉಷಾ ಎಂ. ಅವರ ಕಾದಂಬರಿ ‘ಬಾಳಬಟ್ಟೆ’ ಬಯಲು ಸೀಮೆಯ ಒಂದು ಕುಟುಂಬದ ಮೂರು ತಲೆಮಾರುಗಳ ಬಾಳ ಪಥದಲ್ಲಿ ಉಂಟಾದ ಏಳು-ಬೀಳುಗಳು ಮತ್ತು ಅವರು ಎದುರಿಸಿದ ಕಷ್ಟ-ನಷ್ಟಗಳ ಕಥೆ. ಕಥೆಯ ನಡುವೆ ಹಾಸು-ಹೊಕ್ಕಾಗಿರುವ ಒಂದು ಕಾಲದ ಜೀವನ ಶೈಲಿ, ಜನರು ತಮ್ಮ ಬದುಕಿನಲ್ಲಿ ರೂಢಿಸಿಕೊಂಡು ಬಂದ ಸಾಂಪ್ರದಾಯಿಕ ಆಚರಣೆಗಳು, ಪದ್ಧತಿಗಳು ಮತ್ತು ನಂಬಿಕೆಗಳ ಒಂದು ‘ಪನೋರಮಿಕ್ ವ್ಯೂ’ ಕೂಡಾ ಇಲ್ಲಿ ಕಣ್ಣಿಗೆ ಕಟ್ಟುವಂತೆ ಚಿತ್ರಿತವಾಗಿರುವುದು ಈ ಕಾದಂಬರಿಯ ವೈಶಿಷ್ಟ್ಯ. ಕಥೆ ನಡೆಯುವ ಕಾಲವು ಸ್ವಾತಂತ್ರ್ಯ ಪೂರ್ವದಿಂದ ಹಿಡಿದು ಸ್ವಾತಂತ್ರ್ಯಾನಂತರದ ಕೆಲವು ವರ್ಷಗಳಾಗಿದ್ದು, ಆ ನಿರ್ದಿಷ್ಟ ಕಾಲಘಟ್ಟದಲ್ಲಿ ಗ್ರಾಮೀಣ ಭಾರತದ ಬದುಕನ್ನೂ, ಆಧುನಿಕತೆ ಉಂಟುಮಾಡಿದ ಪಲ್ಲಟಗಳನ್ನೂ ಈ ಕಾದಂಬರಿ ಕಟ್ಟಿಕೊಡುತ್ತದೆ. ಕಥೆಯಲ್ಲಿ ಬರುವ ಮುಖ್ಯ ಪಾತ್ರಗಳು ಶ್ರೀಕಂಠಯ್ಯ, ಅವನ ಹೆಂಡತಿ ತಾಯವ್ವ, ಅವರ ಮಕ್ಕಳು ನಿಜಗುಣ ಮತ್ತು ರಾಜಶೇಖರ, ಅವರ ಹೆಂಡತಿಯರಾದ ಪುಟ್ಟಮ್ಮ, ಸುಶೀಲಾ, ದಾಕ್ಷಾಯಿಣಿ (ರಾಜಶೇಖರನ ಎರಡನೇ ಹೆಂಡತಿ), ತಾಯವ್ವನ…
ಮಂಗಳೂರು : ಮಂಗಳೂರಿನ ಭರತಾಂಜಲಿ (ರಿ.) ಕೊಟ್ಟಾರ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಆಯೋಜಿಸಿದ ‘ನೃತ್ಯಾಮೃತಂ- 2024’ ಕಾರ್ಯಕ್ರಮವು ದಿನಾಂಕ 27-01-2024 ರಂದು ಮಂಗಳೂರಿನ ಪುರಭವನದಲ್ಲಿ ನಡೆಯಿತು. ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ. ಬಿ. ಹರೀಶ್ ರೈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕರ್ನಾಟಕ ಕಲಾಶ್ರೀ ವಿದುಷಿ ಕಮಲ ಭಟ್ ಶುಭ ಹಾರೈಸಿದರು. ಜಿಲ್ಲೆಯ ಐದು ಪ್ರತಿಷ್ಠಿತ ಸಂಸ್ಥೆಗಳಾದ ನಾಟ್ಯನಿಕೇತನ ಕೊಲ್ಯ, ಸನಾತನ ನಾಟ್ಯಾಲಯ ಬಲ್ಲಾಳ್ ಬಾಗ್, ಕಲಾ ನಿಕೇತನ ಡ್ಯಾನ್ಸ್ ಫೌಂಡೇಶನ್ ಕಲ್ಲಡ್ಕ, ನೃತ್ಯ ಸುಧಾ (ರಿ) ಹಾಗೂ ನೃತ್ಯೋಪಸನಾ ಕಲಾ ಅಕಾಡೆಮಿ (ರಿ) ಪುತ್ತೂರು ಸಂಸ್ಥೆಗಳ ಕಲಾವಿದರಿಂದ ಸಮೂಹ ನೃತ್ಯ ಪ್ರದರ್ಶನಗೊಂಡಿತು. ಕಾರ್ಯಕ್ರಮದಲ್ಲಿ ಪೊಳಲಿ ಗಿರೀಶ್ ತಂತ್ರಿ, ಚಂದ್ರಶೇಖರ ಮಯ್ಯ, ಸಂಸ್ಕಾರ ಭಾರತಿ ರಾಜ್ಯ ಉಪಾಧ್ಯಕ್ಷ ಚಂದ್ರಶೇಖರ ಶೆಟ್ಟಿ, ಭರತಾಂಜಲಿಯ ನಿರ್ದೇಶಕರಾದ ವಿದ್ವಾನ್ ಶ್ರೀಧರ ಹೊಳ್ಳ, ಪ್ರತಿಮಾ ಶ್ರೀಧರ್ ದಂಪತಿಗಳು. ವಿದುಷಿ ಚಂದ್ರಿಕಾ, ವಿದುಷಿ ಶ್ರೀಲತಾ ನಾಗರಾಜ್, ವಿದುಷಿ ವಿದ್ಯಾ ಮನೋಜ್, ವಿದುಷಿ ಶಾಲಿನಿ…
ಬೆಳ್ತಂಗಡಿ : ಕರ್ನಾಟಕ ಗಮಕ ಕಲಾ ಪರಿಷತ್ತು, ಗಮಕ ಕಲಾಪರಿಷತ್ತು ದ.ಕ.ಜಿಲ್ಲೆ, ಗಮಕ ಕಲಾ ಪರಿಷತ್ತು ತಾಲೂಕು ಘಟಕದ ವತಿಯಿಂದ ಕ.ಸಾ.ಪ. ಬೆಳ್ತಂಗಡಿ ತಾಲೂಕು ಘಟಕ, ಶ್ರೀ ಧ.ಮಂ. ಪ್ರೌಢಶಾಲೆಯ ಶಿಕ್ಷಕ-ರಕ್ಷಕ ಸಂಘ ಮತ್ತು ಹಳೇ ವಿದ್ಯಾರ್ಥಿ ಸಂಘಗಳ ಆಶ್ರಯದಲ್ಲಿ ಬೆಳ್ತಂಗಡಿ ತಾಲೂಕು 2ನೇ ಗಮಕ ಸಮ್ಮೇಳನವು ದಿನಾಂಕ 20-01-2024 ರಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮದ ಸರ್ವಾಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಹಿರಿಯ ಗಮಕಿ ಜಯರಾಮ ಕುದ್ರೆತ್ತಾಯ ಧರ್ಮಸ್ಥಳ “ಗ್ರಂಥಗಳ ಪ್ರಕಾರ 64 ವಿದ್ಯೆಯಲ್ಲಿ ಗಮಕ ಕಲೆಯು ಒಂದು ವಿದ್ಯೆ. ಇದೆಲ್ಲದರ ಅರಿವಿಗೆ ಪ್ರಮುಖವಾಗಿ ಬೇಕಾದುದು ಆಯಾಯ ಕಲಾ ಪ್ರಕಾರದ ಮೇಲಿನ ಆಸಕ್ತಿ ಮತ್ತು ಅಭಿಮಾನವಾಗಿದೆ.” ಎಂದು ಹೇಳಿದರು. ಸಮ್ಮೇಳನ ಉದ್ಘಾಟಿಸಿದ ಎಸ್. ಡಿ. ಎಂ. ಎಜುಕೇಶನಲ್ ಸೊಸೈಟಿಯ ಕಾರ್ಯದರ್ಶಿಯಾದ ಡಾ. ಎಸ್. ಸತೀಶ್ಚಂದ್ರ ಮಾತನಾಡಿ “ಕಲಾಪ್ರಕಾರಗಳು ವೀಕ್ಷಕ ಶೋತ್ರುಗಳನ್ನು ತನ್ನೆಡೆಗೆ ಸೆಳೆಯುವಂತಾಗಬೇಕು.” ಎಂದರು. ವಿಧಾನ ಪರಿಷತ್ತಿನ ಮಾನ್ಯ ಶಾಸಕರಾದ ಕೆ. ಪ್ರತಾಪಸಿಂಹ ನಾಯಕ್, ಕಸಪಾ ಜಿಲ್ಲಾಧ್ಯಕ್ಷ ಡಾ|…