Author: roovari

ಮಂಗಳೂರು : ಕರ್ನಾಟಕ ಕರಾವಳಿ ನೃತ್ಯಕಲಾ ಪರಿಷತ್ತು ಮಂಗಳೂರು ಮತ್ತು ಶಾರದಾ ವಿದ್ಯಾ ಸಂಸ್ಥೆ ಮಂಗಳೂರು ಇದರ ಸಹಯೋಗದೊಂದಿಗೆ ‘ಬಾಲ ನೃತ್ಯ ಪ್ರತಿಭೋತ್ಸವ -2023’ ಕಾರ್ಯಕ್ರಮವು ದಿನಾಂಕ 13-08-2023 ಆದಿತ್ಯವಾರದಂದು ಸಂಜೆ ಘಂಟೆ 4ಕ್ಕೆ ಮಂಗಳೂರಿನ ಶಾರದಾ ವಿದ್ಯಾಲಯದ ಸಭಾಂಗಣದಲ್ಲಿ ನಡೆಯಲಿದೆ. ಶಾರದಾ ವಿದ್ಯಾ ಸಮೂಹ ಸಂಸ್ಥೆಯ ಅಧ್ಯಕ್ಷರಾದ ಡಾ. ಎಂ.ಬಿ.ಪುರಾಣಿಕ್ ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು. ಕಾರ್ಯಕ್ರಮವು ಪರಿಷತ್ತಿನ ಅಧ್ಯಕ್ಷರಾದ ವಿದ್ವಾನ್ ಶ್ರೀ ಯು.ಕೆ. ಪ್ರವೀಣ್ ಇವರ ಸಭಾಧ್ಯಕ್ಷತೆಯಲ್ಲಿ ನಡೆಯಲಿದ್ದು, ಪರಿಷತ್ತಿನ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿರುವರು. ಮಂಗಳೂರಿನ ಹದಿನೈದು ಬಾಲಪ್ರತಿಭೆಗಳು ನೃತ್ಯಪ್ರದರ್ಶನ ನೀಡಲಿರುವರು. ಈ ಕಾರ್ಯಕ್ರಮಕ್ಕೆ ನೃತ್ಯಕಲಾ ಪರಿಷತ್ತಿನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ತಮ್ಮೆಲ್ಲರಿಗೂ ಆದರದ ಸ್ವಾಗತವನ್ನು ಕೋರಿದ್ದಾರೆ.

Read More

ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು, ಪುತ್ತೂರು ಇದರ ತಿಂಗಳ ಸರಣಿ‌ ತಾಳಮದ್ದಳೆ ಕಾರ್ಯಕ್ರಮವು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಶ್ರಯದಲ್ಲಿ ನಡೆಯಿತು. ಕ್ಷೇತ್ರದ ರಾಜಗೋಪುರದಲ್ಲಿ ‘ಗಂಗಾ ಸಾರಥ್ಯ-ಅಂಬಾ ಶಪಥ’ ಎಂಬ ಪ್ರಸಂಗದ ತಾಳಮದ್ದಳೆ ಕಾರ್ಯಕ್ರಮವು ದಿನಾಂಕ 07-08-2023ರಂದು ಸಂಜೆ ನಡೆಯಿತು. ಹಿಮ್ಮೇಳದಲ್ಲಿ ಸತೀಶ್ ಇರ್ದೆ, ಶ್ರೀಪತಿ ಭಟ್ ಉಪ್ಪಿನಂಗಡಿ, ಅಚ್ಯುತ ಪಾಂಗಣ್ಣಾಯ ಕೋಡಿಬೈಲು, ಆದಿತ್ಯ ನಾರಾಯಣ ಸಹಕರಿಸಿದರು. ಮುಮ್ಮೇಳದಲ್ಲಿ ಪರುಶುರಾಮ (ಪೂಕಳ ಲಕ್ಷ್ಮೀನಾರಾಯಣ ಭಟ್), ಭೀಷ್ಮ (ಪಕಳಕುಂಜ ಶ್ಯಾಮ್ ಭಟ್), ಗಂಗೆ (ಕುಂಬ್ಳೆ ಶ್ರೀಧರ್ ರಾವ್), ಅಕೃತವೃಣ (ಭಾಸ್ಕರ್ ಬಾರ್ಯ) ಮತ್ತು ಅಂಬೆ (ಶುಭಾ ಜೆ.ಸಿ. ಅಡಿಗ) ಸಹಕರಿಸಿದರು.

Read More

ಬೆಂಗಳೂರು : ಬೆಂಗಳೂರಿನ ಕರ್ನಾಟಕ ಗಮಕ ಕಲಾ ಪರಿಷತ್ತು ಮತ್ತು ಶಂಪಾ ಪ್ರತಿಷ್ಠಾನ (ರಿ)ದ ವತಿಯಿಂದ ಬೆಂಗಳೂರಿನ ವಿಠ್ಠಲ್ ನಗರ, ಇಸ್ರೋ ಲೇ ಔಟ್ ಸಮೀಪ, 1ನೇ ಮುಖ್ಯ ರಸ್ತೆ, 88/ಎ, ಶ್ರೀ ಸದನದಲ್ಲಿ ದಿನಾಂಕ 16-08-2023ರಂದು ‘ದಾನ ಶೂರ ಕರ್ಣ’ ಎಂಬ ವಿಷಯದಲ್ಲಿ ‘ಗಮಕ ವಾಚನ ಮತ್ತು ವ್ಯಾಖ್ಯಾನ’ ನಡೆಯಲಿದೆ. ನಿವೃತ್ತ ಪ್ರಾಂಶುಪಾಲರಾದ ಪ್ರೊ.ಪಿ.ಎನ್.ಮೂಡಿತ್ತಾಯ, ಚಿತ್ರ ಕಲಾವಿದರಾದ ಶ್ರೀ ಟಿ.ಎನ್.ಶ್ರೀನಿವಾಸಮೂರ್ತಿ ಮತ್ತು ವೈದ್ಯರಾದ ಡಾ.ಸುರೇಶ್ ಎಚ್.ಎಸ್. ಹಾಗೂ ಡಾ.ಶರತ್ ಬಿ.ಎನ್. ಇವರ ಗೌರವ ಉಪಸ್ಥಿತಿಯಲ್ಲಿ ಸುಪ್ರಸಿದ್ಧ ಗಮಕ ಕಲಾವಿದರಾದ ಶ್ರೀಮತಿ ಸಂಧ್ಯಾ ರಮೇಶ್ ವಾಚನ ಹಾಗೂ ಕರ್ನಾಟಕ ಕಲಾಶ್ರೀ ಶ್ರೀಮತಿ ಗಂಗಮ್ಮ ಕೇಶವಮೂರ್ತಿಯವರ ವ್ಯಾಖ್ಯಾನದಲ್ಲಿ ಈ ಕಾರ್ಯಕ್ರಮವು ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಶಂಪಾ ಪ್ರತಿಷ್ಠಾನದ ಅಧ್ಯಕ್ಷರು ಮತ್ತು ಸದಸ್ಯರು ಎಲ್ಲರಿಗೂ ಆದರದ ಸ್ವಾಗತ ಬಯಸಿದ್ದಾರೆ.

Read More

ಮಂಗಳೂರು : ಕದ್ರಿ ನೃತ್ಯ ವಿದ್ಯಾನಿಲಯ ಚಾರಿಟೇಬಲ್ ಟ್ರಸ್ಟ್ (ರಿ.) ವತಿಯಿಂದ ಕನ್ನಡ ಮತ್ತು ಸಂಸ್ಕತಿ ಇಲಾಖೆ ಬೆಂಗಳೂರು ಸಹಕಾರದೊಂದಿಗೆ 77ನೇ ಸ್ವಾತಂತ್ರ್ಯ ಮಹೋತ್ಸವದ ಸಂಭ್ರಮಾಚರಣೆಯ ಪ್ರಯುಕ್ತ ಸಂಸ್ಥೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಗೂ ಅತಿಥಿ ಕಲಾವಿದರಿಂದ ‘ದೇಶಭಕ್ತಿ ಗೀತೆ ನೃತ್ಯ – ಗಾಯನ’ ಕಾರ್ಯಕ್ರಮವು ದಿನಾಂಕ 15-08-2023ರಂದು ಸಂಜೆ 3-30ರಿಂದ ಕದ್ರಿ ಮಲ್ಲಿಕಟ್ಟೆಯ ಶ್ರೀ ಕೃಷ್ಣ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಸೌತ್‌ ಕೆನರಾ ದ್ರಾವಿಡ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಶ್ರೀ ಸುಧಾಕರ ರಾವ್‌ ಪೇಜಾವರ ಇವರು ನಡೆಸಲಿದ್ದು, ವಿಂಗ್ ಕಮಾಂಡರ್ ಆಗಿದ್ದ ಶ್ರೀ ದೇವ ರಾವ್ ಬೆಳ್ಳೆಯವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ತಮ್ಮ ಆಗಮನವನ್ನು ಬಯಸುವ ನೃತ್ಯ ಗುರುಗಳಾದ ವಿದ್ವಾನ್ ಯು.ಕೆ. ಪ್ರವೀಣ್, ಸಂಗೀತ ಗುರುಗಳಾದ ವಿದುಷಿ ಉಷಾ ಪ್ರವೀಣ್ ಹಾಗೂ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಮತ್ತು ಪೋಷಕರು.

Read More

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ʻನಾಗಡಿಕೆರೆ-ಕಿಟ್ಟಪ್ಪಗೌಡ ರುಕ್ಮಿಣಿ ತೀರ್ಥಹಳ್ಳಿ ದತ್ತಿʼ, ʻಪಂಕಜಶ್ರೀ ಸಾಹಿತ್ಯ ದತ್ತಿʼ, ʻಸತ್ಯವತಿ ವಿಜಯರಾಘವ ಚಾರಿಟೇಬಲ್‌ ಟ್ರಸ್ಟ್‌ ಧರ್ಮದರ್ಶಿಗಳ ದತ್ತಿʼ ಹಾಗೂ ʻಮಾಹಿತಿ ಹಕ್ಕು ತಜ್ಞ ಜೆ.ಎಂ. ರಾಜಶೇಖರ ದತ್ತಿʼ ಪ್ರಶಸ್ತಿಗಳ ಪ್ರದಾನ ಸಮಾರಂಭವು ದಿನಾಂಕ 06-08-2023ರಂದು ಪರಿಷತ್ತಿನ ಶ್ರೀ ಕೃಷ್ಣರಾಜ ಮಂದಿರದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ನಿರಂಜನ ವಾನಳ್ಳಿ ಅವರು “ದೇಶ ಕಟ್ಟುವಲ್ಲಿ ನಾಯಕರ ಪಾತ್ರ ಮುಖ್ಯವಲ್ಲ, ಬದಲಿಗೆ ನೆಲ ಮೂಲ ಸಂಸ್ಕೃತಿಯನ್ನು ಕಾಯುವ ಸಾಮಾನ್ಯ ಜನರ ಪಾತ್ರ ಮುಖ್ಯವಾದದು. ಆದರೆ ಸಾಮಾನ್ಯ ಜನರ ಕೊಡುಗೆಗಳನ್ನು ದಾಖಲಿಸುವವರು ಮರೆತು ಬಿಟ್ಟಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ಸದ್ದಿಲ್ಲದೇ ಕನ್ನಡ ಕಟ್ಟುವ ಕೆಲಸ ಮಾಡುತ್ತಿರುವವರನ್ನು ಗುರುತಿಸುವ ಕೆಲಸ ಮಾಡುತ್ತಿದೆ. ಸಮಾಜದ ವಿವಿಧ ರಂಗಗಳಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕರನ್ನು ಗುರುತಿಸುವ ಕ್ರಾಂತಿಕಾರಕ ಕೆಲಸವನ್ನು ಕನ್ನಡ ಸಾಹಿತ್ಯ ಪರಿಷತ್ತು ಇತ್ತೀಚಿನ ದಿನಗಳಲ್ಲಿ ಪ್ರಾಮಾಣಿಕವಾಗಿ ಮಾಡುತ್ತದೆ.” ಎಂದು ಹೆಮ್ಮೆ ವ್ಯಕ್ತ ಪಡಿಸಿದರು. ಪ್ರಶಸ್ತಿ ಪ್ರದಾನ ಮಾಡಿ…

Read More

ಬೆಂಗಳೂರು: ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಸಂಸ್ಕ್ರತಿ ಪ್ರತಿಷ್ಠಾನ ಬೆಂಗಳೂರು ಆರ್ಟ್ ಪೌಂಡೇಶನ್ ಮತ್ತು ಮಿಂಚುಳ್ಳಿ ಸಾಹಿತ್ಯ ಪತ್ರಿಕೆ ಸಂಯುಕ್ತವಾಗಿ ಆಯೋಜಿಸಿದ್ದ ಕಾಡುವ ಕಿರಂ ಕಾರ್ಯಕ್ರಮವು ದಿನಾಂಕ 07-08-2023ರಂದು ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ಅಗ್ರಹಾರ ಕೃಷ್ಣಮೂರ್ತಿಯವರು “ಕೀ.ರಂ ನಿಜವಾದ ನಾಡೋಜರಾಗಿದ್ದರು. ಅವರು ಸಾಹಿತ್ಯದ ಜೊತೆ ಇತರ ಶಿಸ್ತುಗಳನ್ನು ಮೇಳೈಸಿ ಆನಂದಿಸುವುದನ್ನು ವಿದ್ಯಾರ್ಥಿಗಳಿಗೆ ಹೇಳಿ ಕೊಡುತ್ತಿದ್ದರು” ಎಂದರು. ಹಿರಿಯ ಸಾಹಿತಿ ಪ್ರೋ.ಎಚ್.ಎಸ್.ಶಿವಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. 2023ನೇ ಸಾಲಿನ ಕಿರಂ ನಾಗರಾಜ ಪ್ರಶಸ್ತಿಯನ್ನು ಹಿರಿಯ ವಿಚಾರವಾದಿಗಳಾದ ಪ್ರೊ. ನರೇಂದ್ರ ನಾಯಕ್, ಹಿರಿಯ ಚಿತ್ರಕಲಾವಿದರಾದ ಸಿ.ಎಸ್‌.ನಿರ್ಮಲಕುಮಾರಿ, ಹಿರಿಯ ಸಾಹಿತಿಗಳಾದ ಸುಬ್ಬು ಹೊಲೆಯಾರ್, ಆರ್‍.ಜಿ.ಹಳ್ಳಿ ನಾಗರಾಜ, ನಾಗತಿಹಳ್ಳಿ ರಮೇಶ್ ಮತ್ತು ಸಾಹಿತ್ಯ ಪರಿಚಾರಕರಾದ ಡಾ.ನಾಗೇಶ್ ದಸೂಡಿ ಇವರುಗಳಿಗೆ ಪ್ರದಾನ ಮಾಡಲಾಯಿತು. ಶಂಕರ ಸಿಹಿಮೊಗೆ ಮತ್ತು ಸೂರ್ಯಕೀರ್ತಿ ಸಂಪಾದಕತ್ವದ ‘ಕಿ.ರಂ. ಹೊಸ ಕವಿತೆ-2023’ ಮತ್ತು ಇಂಗ್ಲಿಷ್ ಕೃತಿಯೊಂದನ್ನು ಹಿರಿಯ ಚಿತ್ರ ಕಲಾವಿದರಾದ  ಎಂ.ಎಸ್.ಮೂರ್ತಿ ಬಿಡುಗಡೆಗೊಳಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ಬಲವಂತರಾವ್ ಪಾಟೀಲ್,…

Read More

ಬೆಂಗಳೂರು :  ವಲಸಿಗರ ಸ್ವರ್ಗದಂತಿರುವ  ಬೆಂಗಳೂರು ಮಹಾನಗರಕ್ಕೆ ಕರಾವಳಿ ಹಾಗೂ ಮಲೆನಾಡಿನಿಂದ ಬಂದ ತರುಣ ಜನಾಂಗದವರು ಯಕ್ಷಗಾನ ಕಲೆಯ ಮೇಲೆ ತಮಗಿರುವ ಅತೀವ ಪ್ರೀತಿಯನ್ನು ಬಿಡಲಾರದೆ, ಹವ್ಯಾಸಿ ಸಂಘಗಳನ್ನು ಕಟ್ಟಿಕೊಂಡು, ಯಕ್ಷಗಾನವನ್ನು ಗುರುಮುಖೇನ ಕಲಿತು ಪ್ರದರ್ಶನ ಮಾಡುತ್ತಿರುವುದು ಇತ್ತೀಚಿನ ಆಶಾದಾಯಕ ಬೆಳವಣಿಗೆಯಾಗಿದೆ.  ಹೀಗೆ  ಕೆಲವು ಉತ್ಸಾಹಿ ತರುಣರು  ಹದಿನಾಲ್ಕು ವರ್ಷಗಳ ಹಿಂದೆ ಯಕ್ಷ ಸಿಂಚನ ಟ್ರಸ್ಟ್ ಎಂಬ  ಸಂಸ್ಥೆಯನ್ನು ಕಟ್ಟಿ, ಯಕ್ಷಗಾನಕ್ಕೆ ಸಂಬಂಧಿಸಿದಂತೆ  ಅನೇಕ  ಕಾರ್ಯಕ್ರಮಗಳನ್ನು ಹಾಕಿಕೊಂಡು,  ತಮ್ಮ ವಿಶೇಷತೆಯನ್ನು ಮೆರೆಯುತ್ತಿದ್ದಾರೆ.  ಕೇವಲ ಪ್ರಶಸ್ತಿ ಪ್ರದಾನ , ಯಕ್ಷಗಾನ ಪ್ರದರ್ಶನಗಳಿಗೆ ತಮ್ಮನ್ನು ಸೀಮಿತಗೊಳಿಸಿಕೊಳ್ಳದೆ,  ಪ್ರಸಂಗ ರಚನಾ ಸ್ಪರ್ಧೆ, ಪ್ರಸಂಗ ರಚನಾ ತರಬೇತಿ ಕಮ್ಮಟ, ಯಕ್ಷ ರಸಪ್ರಶ್ನೆ ಕಾರ್ಯಕ್ರಮ, ಸಾರ್ಥಕ ಸಾಧಕ ಪ್ರಶಸ್ತಿ ವಿತರಣೆ ಮುಂತಾದ ವಿನೂತನ ಕಾರ್ಯಕ್ರಮಗಳನ್ನು ನಡೆಸುವ ಮೂಲ ತಮ್ಮ ಅಸ್ತಿತ್ವವನ್ನು ಬೆಂಗಳೂರಿನಲ್ಲಿ ಯಶಸ್ವಿಯಾಗಿ  ಮೂಡಿಸಿದ್ದಾರೆ. ಇತ್ತೀಚೆಗೆ ಅವರ 14ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಹಾಗೂ ಸಾರ್ಥಕ ಸಾಧಕ ಪ್ರಶಸ್ತಿ ಪ್ರದಾನ ಸಮಾರಂಭ ಸಂಪನ್ನವಾಗಿತ್ತು. ದಿನಾಂಕ 6-8-2023ರಂದು ಬೆಂಗಳೂರಿನ ಉದಯಭಾನು…

Read More

ಅಂಗವಿಕಲತೆಯಿದ್ದರೂ ಕೂಡ ಸ್ವಾಭಿಮಾನದ ಬದುಕಿಗಾಗಿ ಕಲೆಯನ್ನೇ ಜೀವನೋಪಾಯವಾಗಿಸಿಕೊಂಡು ನಡೆಯಲು ಅಸಾಧ್ಯವಾದ ಕಾಲುಗಳ ಮೇಲೆ ಮದ್ದಳೆಯನ್ನು ಇಟ್ಟು ಬದುಕು ಕಟ್ಟಿಕೊಂಡ ವಿಜಯ ನಾಯ್ಕರ ಬದುಕಿನ ಹೋರಾಟ ಬಹು ರೋಚಕ. ಉಡುಪಿಯ ಅಮಾಸೆಬೈಲು ಗ್ರಾಮದ ಜಡ್ಡಿನಗದ್ದೆ ಆನಂದ ನಾಯ್ಕ ಹಾಗೂ ಬೇಬಿ ಇವರ ಮಗನಾಗಿ 12.04.1985ರಂದು ಜನನ. ಪ್ರಸ್ತುತ ಹೆಗ್ಗುಂಜೆ ಗ್ರಾಮದ ನೀರ್ಜೆಡ್ಡುನಲ್ಲಿ ವಾಸ. 10ನೇ ತರಗತಿವರೆಗೆ ವಿದ್ಯಾಭ್ಯಾಸ. ಯಕ್ಷಗಾನದಲ್ಲಿ ಇರುವ ಆಸಕ್ತಿಯೇ ಇವರು ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆ. ಎನ್.ಜಿ ಹೆಗಡೆ ಇವರ ಯಕ್ಷಗಾನ ಗುರುಗಳು. ಕೆ.ಪಿ ಹೆಗಡೆ, ಗೋಪಾಲ ಗಾಣಿಗ ಹೆರಂಜಾಲು, ನಾಗೇಶ್ ಕುಲಾಲ್, ರಾಘವೇಂದ್ರ ಮುದ್ದುಮನೆ ನೆಚ್ಚಿನ ಭಾಗವತರು. ರಾಮಕೃಷ್ಣ ಮಂದಾರ್ತಿ, ಶಿವಾನಂದ ಕೋಟ ಇವರ ನೆಚ್ಚಿನ ಚೆಂಡೆ ವಾದಕರು. ಎನ್.ಜಿ ಹೆಗಡೆ, ಪರಮೇಶ್ವರ ಭಂಡಾರಿ, ಸುನೀಲ್ ಭಂಡಾರಿ ನೆಚ್ಚಿನ ಮದ್ದಲೆ ವಾದಕರು. ದೇವಿ ಮಹಾತ್ಮೆ, ಚಂದ್ರಹಾಸ ಚರಿತ್ರೆ, ಶನೀಶ್ವರ ಮಹಾತ್ಮೆ ಹಾಗೂ ಎಲ್ಲಾ ಪೌರಾಣಿಕ ಪ್ರಸಂಗಗಳು ಇವರ ನೆಚ್ಚಿನ ಪ್ರಸಂಗಗಳು. ಯಕ್ಷಗಾನದ ಇಂದಿನ ಸ್ಥಿತಿಗತಿ ಹಾಗೂ ಪ್ರೇಕ್ಷಕರ ಬಗ್ಗೆ…

Read More

ಬೆಂಗಳೂರು : ಗಿರಿನಗರ ಸಂಗೀತಸಭಾ ಪ್ರಸ್ತುತಪಡಿಸುವ ಕರ್ನಾಟಿಕ್ ಶಾಸ್ತ್ರೀಯ ವೀಣಾ ಕಚೇರಿಯು ದಿನಾಂಕ 12-08-2023ರಂದು ಬೆಂಗಳೂರಿನ ಗಿರಿನಗರದ ಶ್ರೀ ಶಾರದ ದೇವಸ್ಥಾನದ ಮೇಲ್ಭಾಗದಲ್ಲಿರುವ ಶಂಕರ ಸೇವಾ ಟ್ರಸ್ಟಿನಲ್ಲಿ ನಡೆಯಲಿದೆ. ಪದ್ಮಭೂಷಣ ಟಿ.ವಿ ಗೋಪಾಲಕೃಷ್ಣ ಇವರ ಶಿಷ್ಯೆ ಹಾಗೂ ‘ಎ ಶ್ರೇಣಿ’ಯ ವೀಣಾವಾದನ ಕಲಾವಿದೆಯಾದ ಮೈಸೂರಿನ ವಿದುಷಿ ಡಾ.ಸಹನಾ ಎಸ್.ವಿ. ಇವರು ವೀಣಾವಾದನ ನಡೆಸಿ ಕೊಡಲಿದ್ದು, ಮೃದಂಗದಲ್ಲಿ ಗಾನ ಕಲಾಶ್ರೀ ವಿದ್ವಾನ್ ಅನೂರ್ ಅನಂತಕೃಷ್ಣ ಶರ್ಮ ಹಾಗೂ ಘಟಂನಲ್ಲಿ ವಿದ್ವಾನ್ ರಂಗನಾಥ್ ಚಕ್ರವರ್ತಿ ಸಹಕರಿಸಲಿದ್ದಾರೆ.

Read More

ಚೆಟ್ಟಂಗಡ ರವಿ ಸುಬ್ಬಯ್ಯ ಇವರು ಶ್ರೀಮಂಗಲ ನಾಡು ವೆಸ್ಟ್ ನೆಮ್ಮಲೆ ಗ್ರಾಮದ ಸಿ.ಎ. ಸುಬ್ಬಯ್ಯ,ಬೊಳ್ಳಮ್ಮ ದಂಪತಿಯ ಪುತ್ರ. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಟಿ.ಶೆಟ್ಟಿಗೇರಿ, ಪ್ರೌಢಶಾಲೆ ಹಾಗೂ ಪದವಿಪೂರ್ವ ಶಿಕ್ಷಣವನ್ನು ಶ್ರೀಮಂಗಲ ಜೂನಿಯರ್ ಕಾಲೇಜಿನಲ್ಲಿ ಮುಗಿಸಿದ್ದಾರೆ. ಗೋಣಿಕೊಪ್ಪಲಿನ ಕಾವೇರಿ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದ ಬಳಿಕ ಉತ್ತರ ಪ್ರದೇಶದ ಬಂದಲ್‌ಕಾಂಡ್ ವಿಶ್ವವಿದ್ಯಾಲಯದ ಮೂಲಕ ಪತ್ರಿಕೋದ್ಯಮ ಪದವಿಯನ್ನು ಪಡೆದವರು. 1994ರಿಂದ ಪೂರ್ಣಾವಧಿ ಪತ್ರಕರ್ತರಾಗಿ ವೃತ್ತಿ ಜೀವನ ಪ್ರಾರಂಭಿಸಿದವರು. ಕಳೆದ 15 ವರ್ಷಗಳಿಂದ ವಿಜಯ ಕರ್ನಾಟಕ ಪತ್ರಿಕೆ ವರದಿಗಾರರಾಗಿ ಶ್ರೀಮಂಗಲ ವಿಭಾಗದಲ್ಲಿ ಪತ್ರಿಕೆಯ ಬೇಡಿಕೆ ಹೆಚ್ಚಾಗುವರೆ ಕಾರಣಕರ್ತರಾಗಿದ್ದಾರೆ. ಇಪ್ಪತ್ತು ವರ್ಷಗಳಿಂದ ಮಡಿಕೇರಿ ಆಕಾಶವಾಣಿ ಕೇಂದ್ರದಲ್ಲಿ ಸಂದರ್ಶಕ,ಸುದ್ದಿ ಸಮಾಚಾರ ವಾಚಕ, ಕಲಾವಿದರಾಗಿದ್ದರು. ಈಗ್ಗೆ 5 ವರ್ಷಗಳಿಂದ ಉದ್ಘೋಷಕರಾಗಿ ದುಡಿಯುತ್ತಿದ್ದಾರೆ. ಕಾರ್ಯಕ್ರಮ ನಿರೂಪಣೆ, ಕ್ರೀಡಾ ವೀಕ್ಷಕ ವಿವರಣೆ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸಾರ್ವಜನಿಕ ಸಂಪರ್ಕ ಕಾರ್ಯಕ್ರಮ ಸಂಯೋಜಕರಾಗಿ ಅಪಾರವಾದ ಅನುಭವವನ್ನು ಹೊಂದಿದ್ದಾರೆ. ಕೊಡವ ತಕ್ಕ್ ಎಳ್ತ್‌ಕಾರಡ ಕೂಟದ ಅಧ್ಯಕ್ಷರಾಗಿರುವ ಇವರು ಆ…

Read More