Subscribe to Updates
Get the latest creative news from FooBar about art, design and business.
Author: roovari
ಬೆಂಗಳೂರು : ಸಂಸ್ಕಾರ ಭಾರತೀ ಕರ್ನಾಟಕ (ನೋಂ) ಕಲೆ ಮತ್ತು ಸಾಹಿತ್ಯಕ್ಕೆ ಸಮರ್ಪಿತವಾದ ರಾಷ್ಟ್ರೀಯ ಸಂಸ್ಥೆ, ಕರ್ನಾಟಕ ದಕ್ಷಿಣ ಪ್ರಾಂತ ಸಾಹಿತ್ಯ ವಿಭಾಗ ಸಹಯೋಗದಲ್ಲಿ ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರ ಬೆಂಗಳೂರು ಅರ್ಪಿಸುವ ಲೋಕಮಾತೆ ಅಹಲ್ಯಾದೇವಿ ಹೋಳ್ಕರ್ ಜೀವನ ಮತ್ತು ಸಾಧನೆ ಕುರಿತು ಉಪನ್ಯಾಸವನ್ನು ದಿನಾಂಕ 22 ಮಾರ್ಚ್ 2025ರಂದು ಮಧ್ಯಾಹ್ನ 3-30 ಗಂಟೆಗೆ ಬೆಂಗಳೂರಿನ ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ. ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ ನಿರ್ದೇಶಕರಾದ ಮಹೇಂದ್ರ ಡಿ. ಇವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಅಖಿಲ ಭಾರತ ಕಾರ್ಯದರ್ಶಿ ಅಶುತೋಷ್ ಆದೋನಿ ಇವರು ಉಪನ್ಯಾಸ ನೀಡಲಿದ್ದಾರೆ.
ಬೆಂಗಳೂರು : ರಂಗಮಂಡಲ ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆ ಕವಿ ಬಳಗ ಆಯೋಜಿಸಿರುವ ‘ಕಾವ್ಯ ಸಂಸ್ಕೃತಿ ಯಾನ’ ಮನುಕುಲದ ನೋವಿಗೆ ಮದ್ದಾಗಲಿ ಕವಿತೆಗಳು ಜನಸಾಮಾನ್ಯರ ದನಿಯಾಗಲಿ ಕಾವ್ಯ ಈ ಕಾರ್ಯಕ್ರಮದ ಒಂಭತ್ತನೇ ಕವಿಗೋಷ್ಠಿಯನ್ನು ದಿನಾಂಕ 23 ಮಾರ್ಚ್ 2025ರಂದು ಬೆಳಿಗ್ಗೆ 10-30 ಗಂಟೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕು, ಒಳ ಆವರಣ ವಿಜಯ ನಗರ ಪ್ರೌಢ ಶಾಲಾ ವಿಭಾಗ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ. ಡಾ. ಎಲ್. ಹನುಮಂತಯ್ಯ ಇವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕಾವ್ಯ ಸಂಸ್ಕೃತಿ ಯಾನದ ಸರ್ವಾಧ್ಯಕ್ಷರಾಗಿದ್ದು, ಹಿರಿಯ ಕವಯತ್ರಿ ಹಾಗೂ ಬರಹಗಾರರಾದ ಸ್ಮಿತಾ ಅಮೃತರಾಜ್ ಇವರು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು. ಬೆಳಿಗ್ಗೆ 12-00 ಗಂಟೆಗೆ ಕವಿಗೋಷ್ಠಿ – 01 ಚಂದ್ರಶೇಖರ ಬಾ ಹಡಪದ ಹಾಗೂ ಮಧ್ಯಾಹ್ನ ಗಂಟೆ 2-30ಕ್ಕೆ ಕವಿಗೋಷ್ಠಿ – 02 ಡಾ. ಬಾಲಗುರುಮೂರ್ತಿ ಇವರುಗಳ ಅಧ್ಯಕ್ಷತೆಯಲ್ಲಿ ಪ್ರಸ್ತುತಗೊಳ್ಳಲಿದೆ. ಮಧ್ಯಾಹ್ನ ಗಂಟೆ 1-45ಕ್ಕೆ ಸರ್ವಾಧ್ಯಕ್ಷರೊಂದಿಗೆ ಸಂವಾದ ನಡೆಯಲಿದ್ದು, ಕುಂಟನಕುಂಟೆ ಅಶ್ವಥ್ ನಾರಾಯಣ,…
ಕಾರ್ಕಳ : ಎರಡುವರೆ ದಶಕ ಕಾಂತಾವರ, ಪುತ್ತೂರು, ಬಪ್ಪನಾಡು, ಸುಂಕದಕಟ್ಟೆ, ಸುರತ್ಕಲ್ ಮೇಳಗಳಲ್ಲಿ ಹಾಗೂ ದೀರ್ಘಕಾಲ ಹಲವು ಸಂಘಗಳಲ್ಲಿ ಕಲಾ ಸೇವೆಗೖದ ತೆಂಕುತಿಟ್ಟಿನ ಹಿರಿಯ ಭಾಗವತ ಕೆ. ಸುರೇಂದ್ರ ಶೆಣೈ ದಂಪತಿಗಳನ್ನು ಪುರಸ್ಕರಿಸುವ ಒಂದು ಆತ್ಮೀಯ ಕಾರ್ಯಕ್ರಮ ಕೆರ್ವಾಶೆ ಮಹಾಲಿಂಗೇಶ್ವರ ದೇವಳದ ಆವರಣದಲ್ಲಿ ದಿನಾಂಕ 19 ಮಾರ್ಚ್ 2025ರಂದು ಜರಗಿತು. ಯು. ವಿಶ್ವನಾಥ ಶೆಣೈ, ಪ್ರಭಾವತಿ ವಿ. ಶೆಣೈ ದಂಪತಿಗಳ ಪ್ರಾಯೋಜಕತ್ವದಲ್ಲಿ ಉಡುಪಿಯ ಯಕ್ಷಗಾನ ಕಲಾರಂಗ ಆಯೋಜಿಸಿದ್ದ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ದೇವಳದ ಮೊಕ್ತೇಸರರಾದ ರಮೇಶ ಕಾರ್ಣಿಕ್ “ತಂತ್ರಜ್ಞಾನದ ರಭಸಕ್ಕೆ ಕೊಚ್ಚಿಕೊಂಡು ಹೋಗುತ್ತಿರುವ ನಮ್ಮ ಕಲೆ, ಸಂಸ್ಕೃತಿಯನ್ನು ರಕ್ಷಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಈ ನಿಟ್ಟಿನಲ್ಲಿ ಉಡುಪಿ ಕಲಾರಂಗದ ಕಾರ್ಯ ಪ್ರಶಂಸಾರ್ಹ” ಎಂದು ಹೇಳಿದರು. ಮಹಾವೀರ ಪಾಂಡಿ ಸಮ್ಮಾನಿತರನ್ನು ಪರಿಚಯಿಸಿದರು. ನಿರಂಜನ ಭಟ್ ಅವರೊಂದಿಗಿನ ಒಡನಾಟವನ್ನು ಸ್ಮರಿಸಿಕೊಂಡರು. ನಾರಾಯಣ ಎಂ. ಹೆಗಡೆ ಪ್ರಶಸ್ತಿ ಪತ್ರ ವಾಚಿಸಿದರು. ಪ್ರಶಸ್ತಿಯು ರೂ.20,000/- ನಗದು ಪುರಸ್ಕಾರ, ಪ್ರಶಸ್ತಿ ಪರಿಕರ ಒಳಗೊಂಡಿತ್ತು. ಈ ಸಂದರ್ಭದಲ್ಲಿ ಸಂಸ್ಥೆಯ ಕೋಶಾಧಿಕಾರಿ…
ಮೂಡುಬಿದಿರೆ: ಇಲ್ಲಿನ ಶಿವರಾಮ ಕಾರಂತ ಪ್ರತಿಷ್ಠಾನ ನೀಡುವ ‘ಶಿವರಾಮ ಕಾರಂತ ಪುರಸ್ಕಾರ’ಕ್ಕೆ ಕೃತಿಗಳನ್ನು ಆಹ್ವಾನಿಸಲಾಗಿದ್ದು, ನಾಲ್ವರು ಲೇಖಕರಿಗೆ ಪುರಸ್ಕಾರ ನೀಡಲಾಗುವುದು. ಪುರಸ್ಕಾರವು ಪ್ರಶಸ್ತಿ ಪತ್ರ ಮತ್ತು ರೂಪಾಯಿ 10 ಸಾವಿರ ನಗದು ಬಹುಮಾನ ಒಳಗೊಂಡಿದೆ. 2020ರಿಂದ 2024ರೊಳಗಿನ ಅವಧಿಯಲ್ಲಿ ಪ್ರಥಮ ಮುದ್ರಿತ ಕೃತಿಗಳನ್ನು ಪರಿಗಣಿಸಲಾಗುವುದು. ಆಸಕ್ತರು ಕೃತಿಯ ಮೂರು ಪ್ರತಿಗಳನ್ನು 20 ಏಪ್ರಿಲ್ 2025ರ ಒಳಗಾಗಿ ಶಿವರಾಮ ಕಾರಂತ ಪ್ರತಿಷ್ಠಾನ, ಕನ್ನಡ ಭವನ, ಮೂಡಬಿದಿರೆ -574227 ಈ ವಿಳಾಸಕ್ಕೆ ತಲುಪುವಂತೆ ಕಳುಹಿಸಬೇಕು. ಹೆಚ್ಚಿನ ವಿವರಗಳಿಗೆ :9743533105 ಸಂಪರ್ಕಿಸಬಹುದು ಎಂದು ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ ಮಾವಿನಕುಳಿ ತಿಳಿಸಿದ್ದಾರೆ.
ಮಣಿಪಾಲ : ಪಿಂಗಾರ ಸಾಹಿತ್ಯ ಬಳಗ ಮಂಗಳೂರು ಇದರ ವತಿಯಿಂದ 24ನೇ ‘ಸಾಹಿತ್ಯ ಸಂಭ್ರಮ ಮತ್ತು ಕವಿಗೋಷ್ಠಿ’ಯು ದಿನಾಂಕ 15 ಮಾರ್ಚ್ 2025ರಂದು ಮಣಿಪಾಲದ ದಶರಥನಗರ ಬಡಾವಣೆಯ ಮೂರನೇ ಅಡ್ಡ ರಸ್ತೆಯಲ್ಲಿರುವ ಆಂಟನಿ ಲೂಯಿಸ್ ಇವರ ಅಂಗಳದಲ್ಲಿ ನಡೆಯಿತು. ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಣಿಪಾಲ ಟಿ.ಎಂ.ಎ. ಪೈ ಫೌಂಡೇಶನ್ ಇದರ ಪನ್ವಾರ್ ಕೊಂಕಣಿ ಮಾಸ ಪತ್ರಿಕೆಯ ಸಂಪಾದಕ ಜ್ಞಾನದೇವ ಮಲ್ಯ “ಯಾರು ಬರೆದರೂ ಅವರ ಕಿಂಚಿತ್ತಾದರೂ ಅನುಭವ ಅದರಲ್ಲಿ ಇದ್ದರೆ ಜನರು ಸುಲಭವಾಗಿ ಮೆಚ್ಚಿಕೊಳ್ಳುವ ಸಾಹಿತ್ಯ ಅದಾಗುತ್ತದೆ” ಎಂದು ನುಡಿದರು. ಗಝಲ್ ಓದಿ ಚಾಲನೆ ನೀಡಿದ ಬಂಟ್ವಾಳ ಕನ್ನಡ ಸಾಹಿತ್ಯ ಸಮ್ಮೇಳನದ ಮಾಜಿ ಅಧ್ಯಕ್ಷ ಸಾಹಿತಿ ವೈದ್ಯ ಸುರೇಶ ನೆಗಳಗುಳಿ ಮಾತನಾಡಿ “ಮನೆಯಲ್ಲಿ ಸಾಹಿತ್ಯ ಅಂದರೆ ಮನದಲ್ಲಿ ಉಳಿಯುವಂತಹದು. ದೊಡ್ಡದಾದ ಸಮ್ಮೇಳನದ ವಹಿವಾಟು ನಿಭಾಯಿಸಲು ಅದಕ್ಕೆ ವ್ಯಾಪಾರೀಕರಣದ ಒಂದಂಶ ಲೇಪಿತವಾಗುತ್ತದೆ. ಇದು ಅನಿವಾರ್ಯ ಕೂಡಾ ಆಗುತ್ತದೆ” ಎಂದರು. ಈ ಸಮಯದಲ್ಲಿ ಸಾಹಿತಿಗಳು ಗೂಗಲ್ ಬ್ಲಾಗ್, ಗೂಗಲ್ ಟೈಪ್, ಸಾಹಿತ್ಯ ಉಳಿಸಿಕೊಳ್ಳಲು…
ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತು ಇದರ ವತಿಯಿಂದ 2023ನೇ ಸಾಲಿನ ವಿವಿಧ ಕೃತಿಗಳಿಗೆ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ದಿನಾಂಕ 21 ಮಾರ್ಚ್ 2025ರಂದು ಸಂಜೆ 5-00 ಗಂಟೆಗೆ ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು ಇದರ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಇವರ ಅಧ್ಯಕ್ಷತೆಯಲ್ಲಿ ಬೆಂಗಳೂರು ಕೆ.ಆರ್.ಐ.ಡಿ.ಎಲ್. ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಬಸವರಾಜು ಇವರು ಈ ಸಮಾರಂಭದ ಉದ್ಘಾಟನೆ ಮಾಡಲಿದ್ದಾರೆ. ಬೆಂಗಳೂರು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಡಾ. ಎಲ್.ಎನ್. ಮುಕುಂದ ರಾಜ್ ಇವರು ಪ್ರಶಸ್ತಿ ಪ್ರದಾನ ಮಾಡಲಿದ್ದು, ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕರಾದ ರವೀಂದ್ರ ಭಟ್ಟ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು 2023ರ ಜನವರಿಯಿಂದ ಡಿಸೆಂಬರ್ ಅಂತ್ಯದವರೆಗೂ ಪ್ರಕಟವಾದ ಕೃತಿಗಳನ್ನು ವಿವಿಧ ಪುಸ್ತಕ ದತ್ತಿ ಪುರಸ್ಕಾರಗಳಿಗೆ ಬರಹಗಾರರಿಂದ ಪುಸ್ತಕಗಳನ್ನು ಆಹ್ವಾನಿಸಿತ್ತು. ಇದಕ್ಕೆ ರಾಜ್ಯ, ದೇಶ ಮತ್ತು ವಿದೇಶಗಳಿಂದಲೂ ನಾಲ್ಕು ಸಾವಿರ ಕೃತಿಗಳು ಬಂದಿದ್ದು, ಅವುಗಳಲ್ಲಿ…
ಮೈಸೂರು : ರೋಟರಿ ಮೈಸೂರು ಮತ್ತು ಇಂಗ್ಲೀಷ್ ಮಾಧ್ಯಮ ಶಾಲೆ ದಟ್ಟಗಳ್ಳಿ ಇವುಗಳ ಸಹಯೋಗದೊಂದಿಗೆ ಧ್ವನಿ ಫೌಂಡೇಷನ್ ಆಯೋಜಿಸುವ ಡಾ. ಶ್ವೇತಾ ಮಡಪ್ಪಾಡಿ ಸಾರಥ್ಯದಲ್ಲಿ ‘ಹಕ್ಕಿ ಹಾಡು’ ಮಕ್ಕಳ ಬೇಸಿಗೆ ಕಲರವ ಶಿಬಿರವನ್ನು ದಿನಾಂಕ 07 ಏಪ್ರಿಲ್ 2025ರಿಂದ 27 ಏಪ್ರಿಲ್ 2025ರವರೆಗೆ ಮೈಸೂರಿನ ದಟ್ಟಗಳ್ಳಿಯ ಮಹಾಮನೆ ಸರ್ಕಲ್ ಹತ್ತಿರ ಜ್ಯೋತಿ ಫರ್ಟಿಲಿಟಿ ಸೆಂಟರ್ ಎದುರು ರೋಟರಿ ಇಂಗ್ಲೀಷ್ ಮಾಧ್ಯಮ ಶಾಲೆಯಲ್ಲಿ ಆಯೋಜಿಸಲಾಗಿದೆ. ಈ ಶಿಬಿರದಲ್ಲಿ ನಾಟಕ, ಅಭಿನಯ, ಮೈಮ್, ಸಂಗೀತ, ನೃತ್ಯ/ಜನಪದ ಕುಣಿತ, ಚಿತ್ರಕಲೆ, ಕರಕುಶಲ, ವಸ್ತುಗಳ ತಯಾರಿ, ಮಣ್ಣಾಟ, ಗ್ರೀಟಿಂಗ್ ಕಾರ್ಡ್ ತಯಾರಿ, ಮುಖವಾಡ ತಯಾರಿ ಇತ್ಯಾದಿ ಕಲಿಸಿಕೊಡಲಾಗುವುದು. ಹೆಚ್ಚಿನ ಮಾಹಿತಿಗಾಗಿ 9483918783 ಮತ್ತು 7019188932 ಸಂಖ್ಯೆಯನ್ನು ಸಂಪರ್ಕಿಸಿರಿ.
ಮೈಸೂರು : ರಂಗಾಯಣ ಮೈಸೂರು ಮತ್ತು ಮೈಸೂರು ಜಿಲ್ಲಾ ಹವ್ಯಾಸಿ ರಂಗಕರ್ಮಿಗಳ ವೇದಿಕೆ (ರಿ.) ಇದರ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೈಸೂರು ಮತ್ತು ಕರ್ನಾಟಕ ನಾಟಕ ಅಕಾಡೆಮಿ ಇವುಗಳ ಸಹಕಾರದಲ್ಲಿ ‘ವಿಶ್ವ ರಂಗಸಂಭ್ರಮ 2025’ ಕಾರ್ಯಕ್ರಮವನ್ನು ದಿನಾಂಕ 22 ಮಾರ್ಚ್ 2025ರಿಂದ 27 ಮಾರ್ಚ್ 2025ರವರೆಗೆ ಮೈಸೂರಿನ ರಂಗಾಯಣದ ಭೂಮಿಗೀತ ಮತ್ತು ಕಾರಂತ ರಂಗ ಚಾವಡಿಯಲ್ಲಿ ಆಯೋಜಿಸಲಾಗಿದೆ. ನಾಟಕೋತ್ಸವ, ವಿಚಾರ ಸಂಕಿರಣ, ಜಾನಪದ, ರಂಗ ಗೀತೆಗಳು, ರಂಗ ಗೌರವ, ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ದಿನಾಂಕ 22 ಮಾರ್ಚ್ 2025ರಂದು ಸಂಜೆ 6-00 ಗಂಟೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೈಸೂರು ವಿಭಾಗದ ಜಂಟಿ ನಿರ್ದೇಶಕರಾದ ವಿ.ಎನ್. ಮಲ್ಲಿಕಾರ್ಜುನ ಸ್ವಾಮಿ ಇವರ ಅಧ್ಯಕ್ಷತೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಾದ ಶ್ರೀಮತಿ ಗಾಯಿತ್ರೀ ಕೆ.ಎಂ. ಇವರು ಈ ಕಾರ್ಯಕ್ರಮದ ಉದ್ಘಾಟನೆ ಮಾಡಲಿರುವರು. ಗಂಟೆ 6-30ಕ್ಕೆ ಮಹಾದೇವ ಹಡಪದ ಇವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ಧಾರವಾಡದ ಆಟ ಮಾಟ…
ಸಾಲಿಗ್ರಾಮ : ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ – ಐರೋಡಿ ಇದರ ವತಿಯಿಂದ ‘ತ್ರಿಕೂಟ ಯಕ್ಷ ಸಂಭ್ರಮ’ವನ್ನು ದಿನಾಂಕ 20ರಿಂದ 22 ಮಾರ್ಚ್ 2025ರಂದು ಸಂಜೆ 6-00 ಗಂಟೆಗೆ ಗುಂಡ್ಮಿ-ಸಾಲಿಗ್ರಾಮದ ಸದಾನಂದ ರಂಗ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 20 ಮಾರ್ಚ್ 2025ರಂದು ಶ್ರೀ ಪೂರ್ಣಚಂದ್ರ ಯಕ್ಷಕಲಾ ಪ್ರತಿಷ್ಠಾನ ಕೊಂಡದಕುಳಿ ಕುಂಭಾಶಿ ಇವರಿಂದ ‘ಧರ್ಮಾಂದ ದಿಗ್ವಿಜಯ’, ದಿನಾಂಕ 21 ಮಾರ್ಚ್ 2025ರಂದು ಮಯ್ಯ ಯಕ್ಷ ಬಳಗ ಹಾಲಾಡಿ ಇವರಿಂದ ‘ಭೀಷ್ಮ ವಿಜಯ’, ದಿನಾಂಕ 22 ಮಾರ್ಚ್ 2025ರಂದು ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ – ಐರೋಡಿ ಇವರಿಂದ ‘ಅನುಸಾಲ್ವ ಗರ್ವಭಂಗ’ ಎಂಬ ಪ್ರಸಂಗದ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
ಬಂಟ್ವಾಳ ತಾಲೂಕಿನ ಮೊಡಂಕಾಪುವಿನ ಬಳಿಯ ಏರ್ಯಬೀಡಿನಲ್ಲಿ ಮಾವಂತೂರು ಸುಬ್ಬಯ್ಯ ಆಳ್ವ ಮತ್ತು ಸೋಮಕ್ಕೆ ದಂಪತಿಯ ಮಗನಾಗಿ ದಿನಾಂಕ 19 ಮಾರ್ಚ್ 1926ರಂದು ಲಕ್ಷ್ಮೀನಾರಾಯಣ ಆಳ್ವರು ಜನಿಸಿದರು. ಅವರ ಪ್ರಾಥಮಿಕ ವಿದ್ಯಾಭ್ಯಾಸ ನಡೆದದ್ದು ಬಂಟ್ವಾಳದಲ್ಲಿಯೇ. ಹೈಸ್ಕೂಲು ವಿದ್ಯಾಭ್ಯಾಸಕ್ಕೆ ಅವರು ಮಂಗಳೂರಿನ ಕೆನರಾ ಹೈಸ್ಕೂಲನ್ನು ಆಶ್ರಯಿಸಿದರು. ಹತ್ತನೆಯ ತರಗತಿಯ ಬಳಿಕ ಅವರ ಔಪಚಾರಿಕ ವಿದ್ಯಾಭ್ಯಾಸ ಮುಂದುವರಿಯಲಿಲ್ಲ. ಆದರೆ ಸ್ವಾಧ್ಯಾಯಿಯಾಗಿ ಅವರು ಗಳಿಸಿದ ಜ್ಞಾನ ಅಪಾರ. ಹಿಂದಿ ಕಲಿಕೆಯಲ್ಲಿ ಆಸಕ್ತಿಯನ್ನು ವಹಿಸಿ ರಾಷ್ಟ್ರಭಾಷಾ ಪ್ರವೀಣರಾದರು. ಹಾಗೆಯೇ ಇಂಗ್ಲೀಷ್‌ನಲ್ಲಿ ಕೂಡ ಪರಿಣತಿಯನ್ನು ಪಡೆಯಲು ಬಲ್ಲವರ ಸಹಾಯವನ್ನು ಪಡೆದು ಶೇಕ್ಸ್ಪಿಯರ್, ಟಾಗೋರ್ ಮುಂತಾದ ವಿಶ್ವಮಾನ್ಯರನ್ನು ಓದಿಕೊಂಡರು. ಸೇಡಿಯಾಪು ಕೃಷ್ಣಭಟ್ಟರ ಶಿಷ್ಯತ್ವವನ್ನು ಅವರು ಸ್ವೀಕರಿಸಿದ್ದು ಅವರ ಜ್ಞಾನದಾಹದ ಮತ್ತೊಂದು ಹೆಗ್ಗುರುತು. ಅವರಿಂದ ಹಳಗನ್ನಡ ಪಾಠಗಳನ್ನು ಹೇಳಿಸಿಕೊಂಡ ಏರ್ಯರು ತಮ್ಮೀ ಗುರುವನ್ನು ಸದಾಕಾಲ ಎದೆಯ ಗುಡಿಯಲ್ಲಿಟ್ಟು ಆರಾಧಿಸಿದವರು. ಸೇಡಿಯಾಪು ಕೃಷ್ಣಭಟ್ಟರ ಶತಮಾನೋತ್ಸವವನ್ನು ಬಂಟ್ವಾಳದಲ್ಲಿ ತಮ್ಮ ನೇತೃತ್ವದಲ್ಲಿ ಅತ್ಯಂತ ಸ್ಮರಣೀಯವಾಗಿ ಆಚರಿಸಿದ್ದ ಅವರು ಗುರುವಿಗೆ ಶ್ರದ್ಧೆಯ ಕಾಣಿಕೆಯನ್ನು ಸಲ್ಲಿಸಿದ್ದರು. ತಂದೆಯವರು ನಡೆಸುತ್ತಿದ್ದ ಪುರಾಣ…