Subscribe to Updates
Get the latest creative news from FooBar about art, design and business.
Author: roovari
ಧಾರವಾಡ : ಭಾರತೀಯ ಸಂಗೀತ ವಿದ್ಯಾಲಯ, ದಾಸ ಟ್ರಸ್ಟ್ ಧಾರವಾಡ ಮತ್ತು ಗಂಗೂಬಾಯಿ ಹಾನಗಲ್ ಸಂಗೀತ್ ವಿದ್ಯಾಲಯ ಇದರ ಸಹಯೋಗದಲ್ಲಿ ‘ಮ್ಯೂಜಿಕ್ ಫೆಸ್ಟಿವಲ್’ ಕಾರ್ಯಕ್ರಮವು ದಿನಾಂಕ 02-06-2024ರಂದು ಸಂಜೆ 5-15ಕ್ಕೆ ಧಾರವಾಡದ ಕೆ.ಸಿ.ಡಿ. ಕ್ಯಾಂಪಸ್, ಸೃಜನ ರಂಗ ಮಂದಿರದಲ್ಲಿ ಪ್ರಸ್ತುತಗೊಳ್ಳಲಿದೆ. ಧ್ರುವ ಅಜಯ್ ಹಾನಗಲ್ ಇವರಿಂದ ಕೊಳಲು ವಾದನ ಮತ್ತು ಉಸ್ತಾದ್ ಫೈಯಾಜ್ ಖಾನ್ ಇವರಿಂದ ಹಾಡುಗಾರಿಕೆ ನಡೆಯಲಿದ್ದು, ಪಂಡಿತ್ ಭರತ್ ಕಾಮತ್ ಮತ್ತು ಡಾ. ಉದಯ್ ಕುಲಕರ್ಣಿ ಇವರು ತಬ್ಲಾದಲ್ಲಿ ಮತ್ತು ಶ್ರೀ ಸರ್ಫರಾಜ್ ಖಾನ್ ಇವರು ಸಾರಂಗಿಯಲ್ಲಿ ಸಾಥ್ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಬಸವರಾಜ ಎಸ್. ಹೊರಟ್ಟಿಯವರು ಉಸ್ತಾದ್ ಫೈಯಾಜ್ ಖಾನ್ ಇವರಿಗೆ ‘ಕೃಷ್ಣ ಹಾನಗಲ್ ರಾಷ್ಟ್ರೀಯ ಪ್ರಶಸ್ತಿ’ ಪ್ರದಾನ ಮಾಡಲಿರುವರು.
ಮೈಸೂರು : ನಟನ ರಂಗಶಾಲೆಯ ವತಿಯಿಂದ ‘ಅಭಿನಯ ಮತ್ತು ರಂಗ ತರಬೇತಿ’ ತರಗತಿಯು 8ರಿಂದ 14 ವರ್ಷದ ಮಕ್ಕಳಿಗೆ ಪ್ರತಿ ಶನಿವಾರ ಮಧ್ಯಾಹ್ನ ಗಂಟೆ 3-00ರಿಂದ 5-00 ಮತ್ತು ಭಾನುವಾರ ಬೆಳಗ್ಗೆ ಗಂಟೆ 10-00ರಿಂದ 12-00ರವರೆಗೆ ಹಮ್ಮಿಕೊಳ್ಳಲಾಗಿದೆ. ಪ್ರವೇಶ ಪ್ರಕ್ರಿಯೆ ಮತ್ತು ಸಂದರ್ಶನ ದಿನಾಂಕ 02-06-2024ರಂದು ಬೆಳಗ್ಗೆ 10ಕ್ಕೆ ನಡೆಯಲಿದೆ. ವೆಬ್ಸೈಟ್ : www.natanamysuru.org ವಿಳಾಸ: ನಟನ ರಂಗಶಾಲೆ, ರಾಮಕೃಷ್ಣ ನಗರ ‘ಕೆ’ ಬ್ಲಾಕ್, ಮೈಸೂರು -570022 ಪ್ರವೇಶ ಶುಲ್ಕ ಮತ್ತು ಇತರ ಮಾಹಿತಿಗಳಿಗಾಗಿ ಸಂಪರ್ಕಿಸಿ : 7259537777, 9480468327
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯ, ಆಕೃತಿ ಆಶಯ ಪಬ್ಲಿಕೇಶನ್ಸ್, ಕಾಸರಗೋಡು ಕನ್ನಡ ಲೇಖಕರ ಸಂಘ (ರಿ.) ಮತ್ತು ಕಾಸರಗೋಡಿನ ಕ.ಸಾ.ಪ. ಕೇರಳ ಗಡಿನಾಡ ಘಟಕ ಇವುಗಳ ಸಹಯೋಗದಲ್ಲಿ ಟಿ.ಎ.ಎನ್. ಖಂಡಿಗೆಯವರ ‘ಬರಿಗಾಲ ನಡಿಗೆ’ ಕೃತಿ ಲೋಕಾರ್ಪಣೆಯು ದಿನಾಂಕ 02-06-2024ರಂದು ಬೆಳಗ್ಗೆ ಗಂಟೆ 10-30ಕ್ಕೆ ಮಂಗಳೂರಿನ ಶ್ರೀ ಧ.ಮಂ. ಕಾನೂನು ಮಹಾವಿದ್ಯಾಲಯದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ.ಪಿ. ಶ್ರೀನಾಥ ಇವರು ವಹಿಸಲಿದ್ದು, ತುಳು, ಕನ್ನಡ ವಿದ್ವಾಂಸರು ಮತ್ತು ವಿಶ್ರಾಂತ ಕುಲಪತಿಗಳಾದ ಡಾ. ಬಿ.ಎ. ವಿವೇಕ ರೈ ಇವರು ಕೃತಿ ಲೋಕಾರ್ಪಣೆ ಮಾಡಲಿರುವರು. ಉಜಿರೆ ಎಸ್.ಡಿ.ಎಂ. ಕಾಲೇಜು ಸಹ ಪ್ರಾಧ್ಯಾಪಕರಾದ ಡಾ. ರಾಜಶೇಖರ್ ಹಳೆಮನೆ ಇವರು ಕೃತಿ ಅವಲೋಕನ ಮಾಡಲಿದ್ದು, ಕಾಸರಗೋಡು ಕನ್ನಡ ಲೇಖಕರ ಸಂಘದ ಅಧ್ಯಕ್ಷ ಡಾ. ರಮಾನಂದ ಬನಾರಿ, ಆಳ್ವಾಸ್ ಪದವಿ ಪೂರ್ವ ಕಾಲೇಜಿನ…
ಮಂಗಳೂರು : ಕರಾವಳಿ ಲೇಖಕಿಯರ-ವಾಚಕೀಯರ ಸಂಘ ಹಾಗೂ ಬೆಂಗಳೂರಿನ ವಸಂತಪುರದ ಸುಶಾಂತ ಪ್ರಕಾಶನ ಇವುಗಳ ಸಂಯುಕ್ತ ಆಶ್ರಯದಲ್ಲಿ ಸಾಹಿತಿ ನಳಿನಾಕ್ಷಿ ಉದಯರಾಜ್ ರಚಿಸಿರುವ ‘ಬದುಕಿನ ಸತ್ಯಗಳು’ ಸಮಕಾಲೀನ ಚಿಂತನೆಗಳ ಸಂಕಲನ ಮತ್ತು ‘ಸ್ವಾತಿಮುತ್ತು’ ಚುಟುಕು ಸಂಕಲನವು ದಿನಾಂಕ 25-05-2024ರಂದು ಮಂಗಳೂರಿನ ಮಹಿಳಾ ಸಭಾದಲ್ಲಿ ನಡೆದ ಸಮಾರಂಭದಲ್ಲಿ ಲೋಕಾರ್ಪಣೆಗೊಂಡಿತು. ಈ ಸಮಾರಂಭವನ್ನು ಉದ್ಘಾಟಿಸಿದ ಹಿರಿಯ ಸಾಹಿತಿ ಮುದ್ದು ಮೂಡುಬೆಳ್ಳೆ ಮಾತನಾಡಿ “ಲೇಖಕಿ ನಳಿನಾಕ್ಷಿ ಉದಯರಾಜ್ ಇವರ ಎರಡೂ ಕೃತಿಗಳು ಬದುಕಿನ ಸತ್ಯಗಳೊಂದಿಗೆ ಸಾರ್ವಕಾಲಿಕ ಸತ್ಯಗಳನ್ನು ಅನಾವರಣಗೊಳಿಸಿವೆ. ಅಂಕಣ ಬರಹಗಳನ್ನು ಈ ರೀತಿಯಾಗಿ ಕೃತಿ ರೂಪದಲ್ಲಿ ಕಟ್ಟಿಕೊಟ್ಟಾಗ ಅದು ಎಲ್ಲರಿಗೂ ಓದುವ ಆಸಕ್ತಿಯನ್ನು ಮೂಡಿಸುವುದರೊಂದಿಗೆ ಜೀವನಾನುಭವಗಳನ್ನು ನೀಡುವ ಸಂದೇಶಗಳಾಗಿ ಜನಸಾಮಾನ್ಯರಿಗೆ ತಲುಪಲು ಸಾಧ್ಯ” ಎಂದು ಹೇಳಿದರು. ಕರಾವಳಿ ಲೇಖಕಿಯರ-ವಾಚಕಿಯರ ಸಂಘದ ಅಧ್ಯಕ್ಷೆ ಡಾ. ಜ್ಯೋತಿ ಚೇಳ್ಯಾರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ನಳಿನಾಕ್ಷಿ ಉದಯರಾಜ್ ಇವರ ‘ಬದುಕಿನ ಸತ್ಯಗಳು’ ಕೃತಿಯನ್ನು ಹಿರಿಯ ಲೇಖಕಿ ಬಿ.ಎಂ. ರೋಹಿಣಿ ಮತ್ತು ‘ಸ್ವಾತಿಮುತ್ತು’ ಚುಟುಕು ಸಂಕಲನವನ್ನು ಹಿರಿಯ ಲೇಖಕ ಸದಾನಂದ…
ಮಂಗಳೂರು : ನಾಟ್ಯಾರಾಧನಾ ಕಲಾ ಕೇಂದ್ರ (ರಿ.), ನಾಟ್ಯಾರಾಧನಾ ತ್ರಿಂಶೋತ್ಸವ ಸಮಿತಿ ಮತ್ತು ನಾಟ್ಯಾರಾಧನಾ ತ್ರಿಂಶೋತ್ಸವ ವಿದ್ಯಾರ್ಥಿ ಸಮಿತಿ ಅರ್ಪಿಸುವ ನಾಟ್ಯಾರಾಧನಾ ತ್ರಿಂಶೋತ್ಸವದ ನೃತ್ಯಾಮೃತ -4ರಲ್ಲಿ ‘ನೃತ್ಯ ಚಿಗುರು’ ಸರಣಿ ನೃತ್ಯ ಕಾರ್ಯಕ್ರಮವು ದಿನಾಂಕ 30-05-2024ರಂದು ಸಂಜೆ ಗಂಟೆ 5-30ರಿಂದ ಮಂಗಳೂರಿನ ಕೆನರಾ ಸಿ.ಬಿ.ಎಸ್.ಸಿ. ಶಾಲೆಯ ಭುವನೇಂದ್ರ ಸಭಾಸದನದಲ್ಲಿ ನಡೆಯಲಿದೆ. ಈ ಸರಣಿಯಲ್ಲಿ 10 ವರುಷದೊಳಗಿನ ಪುಟಾಣಿ ನೃತ್ಯ ಪ್ರತಿಭೆಗಳು ಏಕವ್ಯಕ್ತಿ ನೃತ್ಯ ಪ್ರಸ್ತುತಿ ನೀಡಲಿದ್ದಾರೆ. ಮಂಗಳೂರಿನ ಕಲಾಪೋಷಕಿಯಾದ ಶ್ರೀಮತಿ ವೀಣಾ ಕೃಷ್ಣಮೂರ್ತಿ ರಾವ್ ಇವರು ಈ ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದು, ಸುರತ್ಕಲ್ಲಿನ ಬಂಟ್ಸ್ ಸಂಘ ಅಧ್ಯಕ್ಷರು ಹಾಗೂ ಕಲಾಪೋಷಕರಾದ ಶ್ರೀ ಸುಧಾಕರ ಎಸ್. ಪೂಂಜ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ವಿದುಷಿ ಸುಮಂಗಲಾ ರತ್ನಾಕರ ರಾವ್ ಇವರ ಶಿಷ್ಯೆ ಭಾವಿಕ ಮಯ್ಯ, ವಿದುಷಿ ಸ್ವಾತಿ ಭಟ್ ಇವರ ಶಿಷ್ಯೆ ಮನಸ್ವಿ ಉಪ್ಪಿನೆ, ವಿದುಷಿ ಶ್ರೀವಿದ್ಯಾ ಮುರಳೀಧರ್ ಇವರ ಶಿಷ್ಯೆ ತೃಪ್ತಿ ಸುವರ್ಣ, ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ ಇವರ ಶಿಷ್ಯೆ ಅದ್ವಿಕಾ ಭಟ್,…
‘ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ’ ಎಂಬ ಚೆನ್ನವೀರ ಕಣವಿಯವರ ಕವಿತೆಯ ಸಾಲುಗಳನ್ನು ಆಲಿಸುತ್ತಿದ್ದಂತೆ ಮನಸ್ಸು ವರ್ಷಧಾರೆಗೆ ಹೆಸರಾಗಿರುವ ಕರಾವಳಿ ಮತ್ತು ಮಲೆನಾಡಿನತ್ತ ಚಲಿಸುತ್ತದೆ. ಈ ಗೀತೆಯನ್ನು ರಾಗ ತಾಳ ಲಯ ಬದ್ದವಾಗಿ ಗುನುಗುನಿಸುವ ಬಗೆ ಮನಸ್ಸಿಗೆ ಆಹ್ಲಾದವನ್ನು ಉಂಟು ಮಾಡುತ್ತದೆ. ಸುತ್ತಲೂ ಹಸಿರು ವನಸಿರಿಯ ಸೊಬಗು, ಅಲ್ಲಲ್ಲಿ ನಿನಾದಿಸುವ ಜೀರುಂಡೆಗಳ ಸದ್ದು, ನಮ್ಮ ಹೆಜ್ಜೆಗಳ ಜೊತೆ ಹೆಜ್ಜೆ ಹಾಕುತ್ತಿರುವ ಭಾವವನ್ನು ಮೂಡಿಸುವ ತರಗೆಲೆಗಳ ಸಪ್ಪಳ, ತನುವನ್ನು ತಬ್ಬಿ ಮುಖಕ್ಕೆ ಮುತ್ತಿಡುವ ತಂಗಾಳಿ, ಮಂಜು ಮಳೆಗಳ ಸೇಚನ, ಹಸಿರು ವನಗಳ ಸಾಲನ್ನು ಚಾದರವಾಗಿ ಹೊದ್ದು ನಿಂತ ಪ್ರಕೃತಿಯ ದೃಶ್ಯಗಳನ್ನು ಒಂದಿಷ್ಟೂ ಮರೆಮಾಚದೆ ಅಭಿವ್ಯಕ್ತಗೊಳಿಸುವ ಪ್ರಕೃತಿಯ ಸುಂದರ ತಾಣದಲ್ಲಿ ವಿಹರಿಸುವ ಪಾತ್ರಗಳ ನಡುವೆ ನಾವೂ ಇದ್ದೇವೆಯೋ ಎಂಬ ಅನುಭವವನ್ನು ನೀಡುವ ಗಿರಿಮನೆ ಶ್ಯಾಮರಾವ್ ಅವರ ‘ಮುಂಗಾರಿನ ಕರೆ’ ಎಂಬ ಕಾದಂಬರಿಯು ಮೊದಲ ಓದಿನಲ್ಲೇ ಆಪ್ತವೆನಿಸಿಕೊಳ್ಳುತ್ತದೆ. ‘ಮಲೆನಾಡಿನ ರೋಚಕ ಕಥೆಗಳು’ ಸರಣಿಯ ಏಳನೇ ಕೃತಿ ‘ಮುಂಗಾರಿನ ಕರೆ’ಯ ಮುಖ್ಯ ಪಾತ್ರ ‘ನಿಧಿ’ ಕಾದಂಬರಿಯ ನಾಯಕಿಯಾಗಿ…
ಬೆಂಗಳೂರು : ಬೆಂಗಳೂರಿನ ಯಕ್ಷದೇಗುಲ ಮಕ್ಕಳ ತಂಡ ಆಯೋಜಿಸುವ ‘ಕನ್ನಡ ಪರ್ವ’ ಕಾರ್ಯಕ್ರಮದಲ್ಲಿ ಪ್ರಿಯಾಂಕ ಕೆ. ಮೋಹನ್ ನಿರ್ದೇಶನದಲ್ಲಿ ‘ಅಭಿಮನ್ಯು ಕಾಳಗ’ ಯಕ್ಷಗಾನ ಪ್ರದರ್ಶನವು ದಿನಾಂಕ 25-05-2024ರಂದು ಬೆಂಗಳೂರು ಮೆಡಿಕಲ್ ಕಾಲೇಜಿನ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದ ಹಿಮ್ಮೇಳದಲ್ಲಿ ಭಾಗವತರಾಗಿ ಲಂಬೋದರ ಹೆಗಡೆ, ಮದ್ದಲೆ ವಾದನದಲ್ಲಿ ಸಂಪತ್ ಕುಮಾರ್ ಹಾಗೂ ಚಂಡೆವಾದನದಲ್ಲಿ ಪನ್ನಗ ಮಯ್ಯ, ಮುಮ್ಮೇಳದಲ್ಲಿ ಧರ್ಮರಾಯನಾಗಿ ಸರಸ್ವತಿ, ಅಭಿಮನ್ಯುವಾಗಿ ತೇಜಸ್, ಸುಭದ್ರೆಯಾಗಿ ಅನೀಶ, ಸೈಂಧವನಾಗಿ ಮಹೇಶ್ವರ, ಕೌರವನಾಗಿ ಧನ್ಯ, ದ್ರೋಣನಾಗಿ ಶಾಶ್ವತ್, ಕರ್ಣನಾಗಿ ಸುಹಾಸ್, ಶಲ್ಯನಾಗಿ ಕ್ರಿಶ, ದುಶ್ಯಾಸನನಾಗಿ ಅಹನ ಹಾಗೂ ಎರಡನೇ ಅಭಿಮನ್ಯುವಿನ ಪಾತ್ರದಲ್ಲಿ ಅನಿಕ ಭಾಗವಹಿಸಿದರು. ವರ್ಣಾಲಂಕಾರದಲ್ಲಿ ಬಾಲಕೃಷ್ಣ ಭಟ್, ಸುದರ್ಶನ ಉರಾಳ, ಉದಯ ಬೋವಿ ಮತ್ತು ವಿಶ್ವನಾಥ ಉರಾಳ ಸಹಕಾರ ನೀಡಿದರು. ಇದೇ ಸಂಧರ್ಭದಲ್ಲಿ ಹಿರಿಯ ಯಕ್ಷಗಾನ ಕಲಾವಿದರು ಹಾಗೂ ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹೆರಂಜಾಲು ಸುಬ್ಬಣ್ಣ ಗಾಣಿಗರಿಗೆ ಕನ್ನಡ ಪರ್ವ ಕಾರ್ಯಕ್ರಮದ ನೆನಪಿನ ಕಾಣಿಕೆ ನೀಡಲಾಯಿತು.
ಬೆಳ್ತಂಗಡಿ : ಹಿರಿಯ ಯಕ್ಷಗಾನ ಅರ್ಥಧಾರಿ ಮೂಡಂಬೈಲು ಸಿ.ಗೋಪಾಲಕೃಷ್ಣ ಶಾಸ್ತ್ರಿ ಇವರನ್ನು ಬೆಳ್ತಂಗಡಿ ತಾಲೂಕಿನ ಪಡಂಗಡಿಯ ಶ್ರೀನಿಲಯದಲ್ಲಿ ದಿನಾಂಕ 27-05-2024 ರಂದು ಗೌರವಿಸಲಾಯಿತು. ಪುತ್ತೂರು ಬೊಳುವಾರು ಶ್ರೀ ಆಂಜನೇಯ ಯಕ್ಷಗಾನ ಕಲಾಸಂಘದ ಅಧ್ಯಕ್ಷರಾದ ಭಾಸ್ಕರ ಬಾರ್ಯ, ಶ್ರೀಮತಿ ಸ್ವರ್ಣಲತಾ ಭಾಸ್ಕರ, ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ ಉಪಸ್ಥಿತರಿದ್ದರು. 88 ವರ್ಷದ ಹಿರಿಯ ವಿದ್ವಾಂಸರಾದ ಶಾಸ್ತ್ರಿಯವರು ‘ಮಹಾಭಾರತ ಕೋಶ’, ‘ರಾಮಾಯಣ ಕೋಶ’, ‘ಭಾಗವತ ಕೋಶ’, ‘ಪುರಾಣ ಕಥಾ ಚಿಂತಾ ರತ್ನ’ ಮುಂತಾದ ಅಪೂರ್ವ ಕೃತಿಗಳನ್ನು ರಚಿಸಿದ್ದು, ಯಕ್ಷಗಾನಾಸಕ್ತರಿಗೆ ಬಹಳ ಉಪಯುಕ್ತವಾಗಿದೆ. ಕಳೆದ ಮೂರು ವರ್ಷಗಳಿಂದ ಅರ್ಥಧಾರಿಯಾಗಿ ಭಾಗವಹಿಸದೆ ಇದ್ದರೂ ಆರೋಗ್ಯವಾಗಿದ್ದು ತನ್ನ ಜ್ಞಾನ ಹಾಗೂ ಅನುಭವಗಳನ್ನು ಕಲಾಸಕ್ತರ ಜೊತೆ ಹಂಚಿಕೊಳ್ಳುತ್ತ ಸಕ್ರಿಯವಾಗಿದ್ದಾರೆ.
ಮಂಗಳೂರು : ಅರೆಹೊಳೆ ಪ್ರತಿಷ್ಠಾನವು ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯ, ಕಲಾಭಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಕಾರದಿಂದ ಆಯೋಜಿಸಿದ್ದ ರಂಗಾಯಣ ಮೈಸೂರಿನ ‘ನಾಂದಿ’ ನಾಟಕೋತ್ಸವವು ದಿನಾಂಕ 24-05-2024 ರಿಂದ 26-05-2024ರ ವರೆಗೆ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಸಹೋದಯ ಆಡಿಟೋರಿಯಂನಲ್ಲಿ ನಡೆಯಿತು. ನಾಟಕೋತ್ಸವದ ಎರಡನೇ ದಿನ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮೈಸೂರು ರಂಗಾಯಣದ ಪ್ರಿನ್ಸಿಪಾಲ್ ಎಸ್. ರಾಮನಾಥ “ರಂಗಭೂಮಿಯ ಕೋರ್ಸ್ ಗಳ ಮೂಲಕ ನಾಟಕಗಳನ್ನು ಕಟ್ಟುವುದು ಅಥವಾ ಅಭಿನಯಿಸುವುದಕ್ಕಿಂತಲೂ ಮಿಗಿಲಾಗಿ ಅದು ಬದುಕಲು ಕಲಿಸುತ್ತದೆ. ಈ ಹಿನ್ನೆಲೆಯಲ್ಲಿ ಹೆಚ್ಚೆಚ್ಚು ಯುವ ಜನತೆ ರಂಗಶಿಕ್ಷಣದಲ್ಲಿ ತೊಡಗಿಕೊಳ್ಳಬೇಕು.” ಎಂದು ಕರೆ ನೀಡಿದರು. ದಿನಾಂಕ 31-05-2024ರಂದು ಸೇವಾ ನಿವೃತ್ತಿ ಹೊಂದಲಿರುವ ಹಿನ್ನೆಲೆಯಲ್ಲಿ ಅವರನ್ನು ಮಂಗಳೂರು ರಂಗಾಸಕ್ತರ ಪರವಾಗಿ ಅಭಿನಂದಿಸಲಾಯಿತು. ಅರೆಹೊಳೆ ಪ್ರತಿಷ್ಠಾನದ ಅಧ್ಯಕ್ಷ ಅರೆಹೊಳೆ ಸದಾಶಿವ ರಾವ್, ಜಾದೂಗಾರ ಕುದ್ರೋಳಿ ಗಣೇಶ್, ಸಂತ ಅಲೋಶಿಯಸ್ ಕಾಲೇಜಿನ ಕ್ರಿಸ್ಟೋಫರ್ ನೀನಾಸಂ, ಡಾ. ದಿನೇಶ್ ನಾಯ್ಕ್, ನಂದಗೋಕುಲ ನಿರ್ದೇಶಕಿ ಶ್ವೇತಾ ಅರೆಹೊಳೆ, ಕಲಾಭಿಯ ಉಜ್ವಲ್…
ಉಡುಪಿ : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ತಾಲೂಕು ಘಟಕ, ಉಡುಪಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಸಂಸ್ಕೃತಿ ಸಿರಿ ಟ್ರಸ್ಟ್ ಹಿರಿಯಡ್ಕ, ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ಇವರ ಆಶ್ರಯದಲ್ಲಿ ಸಾಹಿತಿ ದಿ. ಮೇಟಿ ಮುದಿಯಪ್ಪ ನೆನಪಿನ ಯುವ ಕಥಾ ಸ್ಪರ್ಧೆಯ ವಿಜೇತರರಿಗೆ ಬಹುಮಾನ ವಿತರಣೆ ಹಾಗೂ ಅವರ ಬದುಕು ಬರಹದ ಕುರಿತು ಉಪನ್ಯಾಸ ಕಾರ್ಯಕ್ರಮವು ಉಡುಪಿಯ ಯಕ್ಷಗಾನ ಕಲಾರಂಗದ ಐ. ವೈ. ಸಿ. ಸಭಾಂಗಣದಲ್ಲಿ ದಿನಾಂಕ 26-05-2024ರಂದು ನಡೆಯಿತು. ಕಾರ್ಯಕ್ರಮದಲ್ಲಿ ಮೇಟಿ ಅವರೊಂದಿಗಿನ ನಾಲ್ಕು ದಶಕಗಳ ಒಡನಾಟದ ನೆನಪುಗಳನ್ನು ಮೆಲುಕು ಹಾಕಿದ ನಾಡಿನ ಖ್ಯಾತ ವಿಮರ್ಶಕ ಹಾಗೂ ಲೇಖಕರಾದ ಜಿ. ಪಿ. ಪ್ರಭಾಕರ್ ತುಮರಿ “ಸಾಹಿತಿ ದಿ. ಮೇಟಿ ಮುದಿಯಪ್ಪನವರು ಮಾನವೀಯತೆ ಪ್ರಧಾನವಾದ ಬಹುಮುಖ ವ್ಯಕ್ತಿತ್ವ ಹೊಂದಿದವರು. ವಿವಿಧ ಸಂಘ- ಸಂಸ್ಥೆಗಳಲ್ಲಿ ಕ್ರಿಯಾಶೀಲರಾಗಿದ್ದುದು ಮಾತ್ರವಲ್ಲದೆ, ರಂಗ ನಟರಾಗಿ ಪ್ರತಿಭೆ ತೋರಿದ್ದಾರೆ. ಅವರದ್ದು ಸಾಮಾನ್ಯರಲ್ಲಿ ಸಾಮಾನ್ಯನಾಗುವ ಗುಣ. ಯಾವುದೇ ಅಹಂಕಾರ ಇಲ್ಲದ, ಎಲ್ಲರೊಂದಿಗೆ ಬೆರೆಯುವ ಅವರ…