Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ರಂಗ ಸ್ವರೂಪ (ರಿ.) ಕುಂಜತ್ತಬೈಲ್ ಇದರ ವತಿಯಿಂದ ‘ರಂಗೋತ್ಸವ’ ಮಕ್ಕಳ ಬೇಸಿಗೆ ಶಿಬಿರವನ್ನು ಕುಂಜತ್ತಬೈಲ್ ಮರಕಡದ ದ.ಕ.ಜಿ.ಪಂ.ಮಾ.ಹಿ.ಪ್ರಾ. ಶಾಲೆಯಲ್ಲಿ ದಿನಾಂಕ 01-05-2024ರಿಂದ 04-05-2024ರವರೆಗೆ ಹಮ್ಮಿಕೊಳ್ಳಲಾಗಿದೆ. ದಿನಾಂಕ 04-05-2024ರಂದು ಸಂಜೆ ಗಂಟೆ 5-00ರಿಂದ ಪ್ರತಿಭಾ ಪ್ರದರ್ಶನ, ಸಮಾರೋಪ ಸಮಾರಂಭ ಹಾಗೂ ಶಿಬಿರಾರ್ಥಿಗಳಿಂದ ‘ಸಾಂಸ್ಕೃತಿಕ ಸಂಜೆ’ ಕಾರ್ಯಕ್ರಮಗಳು ನಡೆಯಲಿದೆ. ರಂಗಸ್ವರೂಪ ಕುಂಜತ್ತಬೈಲ್ ನಡೆದು ಬಂದ ದಾರಿ : ರಂಗ ಸ್ವರೂಪ ಹೆಸರೇ ಸೂಚಿಸುವಂತೆ ಸ್ವರೂಪ ವಠಾರದಲ್ಲಿ ಹುಟ್ಟಿ ಬೆಳೆದ ಉತ್ಸಾಹಿ ಹಾಗೂ ಕ್ರಿಯಾತ್ಮಕ ವ್ಯಕ್ತಿತ್ವವುಳ್ಳ ಯುವಕ ಯುವತಿಯರ ಬಳಗ ಜಿಲ್ಲೆಯ ಹಿರಿಯ ಕಲಾವಿದರು ಶೈಕ್ಷಣಿಕ ಚಿಂತಕರೂ ಆಗಿರುವ ಗೋಪಾಡ್ಕರ್ ಅವರ ಮಾರ್ಗದರ್ಶನದಲ್ಲಿ ಕಳೆದ 15 ವರ್ಷಗಳಿಂದ ವೈವಿಧ್ಯಮಯ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದೆ. ಕುಂಜತ್ತಬೈಲ್ ಪರಿಸರದ ವಿವಿಧ ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುವ ಉದ್ದೇಶದಿಂದ ರೂಪುಗೊಂಡ ರಂಗಸ್ವರೂಪ ಶೈಕ್ಷಣಿಕ ಚಟುವಟಿಕೆಗಳೊಂದಿಗೆ ರಕ್ತದಾನ ಶಿಬಿರ, ಸ್ವಚ್ಛತಾ ಆಂದೋಲನ, ಭಿತ್ತಿ ಚಿತ್ತಾರ, ಚಿತ್ರಕಲಾ ಪ್ರದರ್ಶನ, ಸಾಮಾಜಿಕ ಜಾಗೃತಿ ಕಾರ್ಯಕ್ರಮ, ಶ್ರಮದಾನ ಹಾಗೂ ಹಲವಾರು ಪುಸ್ತಕ ಪ್ರೀತಿ ಕಾರ್ಯಕ್ರಮಗಳ…
ಮಂಗಳೂರು : ಗಾನ ನೃತ್ಯ ಅಕಾಡೆಮಿಯ ಆಶ್ರಯದಲ್ಲಿ ಮಂಗಳೂರಿನ ಡಾನ್ ಬಾಸ್ಕೋ ಹಾಲ್ ನಲ್ಲಿ ಚೆನ್ನೈಯ ಪ್ರಖ್ಯಾತ ನೃತ್ಯ ಕಲಾವಿದೆ ಕುಮಾರಿ ಹರಿಣಿ ಜೀವಿತಾ ಇವರ ನೃತ್ಯ ಕಾರ್ಯಕ್ರಮವು ದಿನಾಂಕ 14-04-2024ರಂದು ಜರಗಿತು. ಬಹು ಬೇಡಿಕೆಯ ಕಲಾವಿದೆಯಾದ ಕು. ಹರಿಣಿ ಜೀವಿತಾ ಇವರು ಚೆನ್ನೈಯ ಪ್ರಸಿದ್ದ ನೃತ್ಯ ಸಂಸ್ಥೆ ಶ್ರೀದೇವಿ ನೃತ್ಯಾಲಯದ ನಿರ್ದೇಶಕಿ ಡಾ. ಶೀಲಾ ಉನ್ನಿಕೃಷ್ಣನ್ ಇವರ ಶಿಷ್ಯೆಯಾಗಿದ್ದು ದೇಶ ವಿದೇಶಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ನೀಡಿರುತ್ತಾರೆ. ಇವರ ಬಹು ಬೇಡಿಕೆಯ ಏಕವ್ಯಕ್ತಿ ನೃತ್ಯ ಕಾರ್ಯಕ್ರಮವಾದ ವರದರಾಜ ಉಪಾಸ್ಮಹೇ ಎಂಬ ವಿಷಯಾಧಾರಿತ ನೃತ್ಯವನ್ನು ಪ್ರದರ್ಶಿಸಿದ್ದು ಪ್ರೇಕ್ಷಕರ ಮನಸೂರೆಗೊಂಡಿತು.
ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಎರಡು ಪ್ರತಿಷ್ಟಿತ ದತ್ತಿ ಪ್ರಶಸ್ತಿಗಳಾದ ‘ಡಾ. ರಾಜ ಕುಮಾರ್ ಸಂಸ್ಕೃತಿ ದತ್ತಿ’ ಮತ್ತು ‘ಪ್ರೊ. ಸಿ.ಎಚ್. ಮರಿದೇವರು ಪ್ರತಿಷ್ಠಾನ ದತ್ತಿ’ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 20-04-2024ರಂದು ನಡೆಯಿತು. ಈ ಸಮಾರಂಭದಲ್ಲಿ ಪ್ರಸ್ತಾವಿಕ ಭಾಷಣವನ್ನು ಮಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು “ಡಾ. ರಾಜ್ ಕುಮಾರ್ ಅವರು ಕನ್ನಡ ಸಂಸ್ಕೃತಿಯ ಪ್ರತೀಕದಂತಿದ್ದರು. ಕನ್ನಡಕ್ಕೊಬ್ಬನೇ ರಾಜ್ ಕುಮಾರ್ ಎನ್ನಿಸಿದ ಅವರು ತಮ್ಮ ಅಭಿನಯ ಮತ್ತು ಬದುಕಿನ ರೀತಿಯಿಂದ ಮಾದರಿ ಎನ್ನಿಸಿಕೊಂಡಿದ್ದರು. ಐವತ್ತಕ್ಕೂ ಹೆಚ್ಚು ಸಂದರ್ಭಗಳಲ್ಲಿ ರಾಜ್ ಕುಮಾರ್ ಅವರ ಒಡನಾಟ ತಮಗೆ ದೊರಕಿದ್ದನ್ನು ಸ್ಮರಿಸಿಕೊಂಡ ಅವರು ದಾದಾ ಸಾಹೇಬ್ ಫಾಲ್ಕೆ ಪುರಸ್ಕಾರ ಸ್ವೀಕಾರ ಸಂದರ್ಭದಲ್ಲಿ ನಾಲ್ಕು ದಿನ ದೊರಕಿದ ನಿಕಟ ಒಡನಾಟದ ಅನುಭವವನ್ನು ನೆನಪು ಮಾಡಿಕೊಂಡು ರಾಜ್ ಕುಮಾರ್ ಅವರಿಗೆ ಅಧ್ಯಾತ್ಮದಲ್ಲಿ ಆಸಕ್ತಿ ಇತ್ತು. ಹಠ ಯೋಗವನ್ನೂ ಅವರು ಸಾಧಿಸಿದ್ದರು. ಅವರ…
ಉಪ್ಪಿನಂಗಡಿ : ಯಕ್ಷ ಶಾಂತಲಾ ಎಂದೇ ಜನಪ್ರಿಯರಾಗಿದ್ದ ತೆಂಕು, ಬಡಗು ಎರಡೂ ತಿಟ್ಟಿನಲ್ಲಿ ಕಲಾವ್ಯವಸಾಯ ಮಾಡಿದ ಪ್ರಸಿದ್ಧ ಸ್ತ್ರೀವೇಷಧಾರಿ ಪಾತಾಳ ವೆಂಕಟರಮಣ ಭಟ್ ಅವರಿಗೆ ‘ಕುರಿಯ ವಿಠಲ ಶಾಸ್ತ್ರಿ ಪ್ರಶಸ್ತಿ’ ಪ್ರದಾನವು ದಿನಾಂಕ 26-04-2024ರಂದು ಉಪ್ಪಿನಂಗಡಿಯ ಪಾತಾಳದ ದುರ್ಗಾಗಿರಿ ಭಜನ ಮಂದಿರದಲ್ಲಿ ಸುಂಕದಕಟ್ಟೆ ಮೇಳದ ವೇದಿಕೆಯಲ್ಲಿ ನಡೆಯಲಿದೆ ಎಂದು ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ ಉಜಿರೆ ಇದರ ಸಂಚಾಲಕ ಉಜಿರೆ ಅಶೋಕ್ ಭಟ್ ತಿಳಿಸಿದ್ದಾರೆ. 91ರ ಹರಯದ ಪಾತಾಳ ವೆಂಕಟರಮಣ ಭಟ್ಟರು ಕಾಂಚನ ಮೇಳ, ಸೌಕೂರು ಮೇಳ, ಮೂಲ್ಕಿ ಮೇಳ, ದೀರ್ಘಕಾಲದ ತಿರುಗಾಟ ಧರ್ಮಸ್ಥಳ ಮೇಳದಲ್ಲಿ ನಡೆಸಿದ್ದಾರೆ. ಸ್ತ್ರೀವೇಷಕ್ಕೆ ಪುರುಷವೇಷಕ್ಕೆ ಸಮದಂಡಿಯಾಗುವಂತೆ ಬೇಲೂರು ಶಿಲಾಬಾಲಿಕೆಯರ ಅಂಗಭಂಗಿಗಳನ್ನು ಸ್ವತಃ ಪರಿಶೀಲಿಸಿ ಅಧ್ಯಯನ ಮಾಡಿ ಯಕ್ಷಗಾನ ಸ್ತ್ರೀವೇಷದ ಆಹಾರ್ಯವನ್ನು ನೃತ್ಯವಿನ್ಯಾಸಕ್ಕೆ ಬೇಕಾದಂತೆ ಸಿದ್ಧಪಡಿಸಿದ ಅವರು ಸೌಂದರ್ಯ ಪ್ರಧಾನ ಸ್ತ್ರೀವೇಷದ ಬಣ್ಣಗಾರಿಕೆಯಲ್ಲೂ ಹೊಸತನದ ಆವಿಷ್ಕಾರ ತಂದಿದ್ದರು. ಮಾಯಾ ಮೋಹಿನಿ, ಮಾಯಾ ಪೂತನಿ, ಮಾಯಾ ಅಜಮುಖಿ ಮೊದಲಾದ ಮಾಯಾ ಸ್ತ್ರಿವೇಷದ ಪಾತ್ರಗಳಿಗೆ ವಿಶಿಷ್ಟ ಕಲ್ಪನೆ ನೀಡಿ…
ಬೈಂದೂರು : ಲಾವಣ್ಯ (ರಿ.) ಬೈಂದೂರು ಆಶ್ರಯದಲ್ಲಿ ಕುಂದಾಪುರದ ಶ್ರೀ ರಾಮಕೃಷ್ಣ ಶೇರುಗಾರ್ ಬಿಜೂರು ಮತ್ತು ಮುಂಬೈಯ ಶ್ರೀ ವಿ.ಆರ್. ಬಾಲಚಂದ್ರ ಇವರ ಸಹಯೋಗದೊಂದಿಗೆ ದಿನಾಂಕ 01-05-2024ರಂದು ಸಂಜೆ ಗಂಟೆ 6-30ಕ್ಕೆ ಬೈಂದೂರಿನ ಶ್ರೀ ಶಾರದಾ ವೇದಿಕೆಯಲ್ಲಿ ‘ನಿದ್ರಾನಗರಿ’ ಎಂಬ ನಾಟಕ ಪ್ರದರ್ಶನ ನಡೆಯಲಿದೆ. ದಿ. ಕೂರಾಡಿ ಸೀತಾರಾಮ ಶೆಟ್ಟಿ ಸ್ಮರಣಾರ್ಥ ‘ಲಾವಣ್ಯ ಮಕ್ಕಳ ರಂಗ ತರಬೇತಿ ಶಿಬಿರದಲ್ಲಿ ರೂಪುಗೊಂಡ ನಾಟಕ ಇದಾಗಿದ್ದು, ಶ್ರೀಮತಿ ಕಾತ್ಯಾಯಿನಿ ಕುಂಜಿಬೆಟ್ಟು ಇವರು ರಚಿಸಿದ್ದು, ಬಿ. ಗಣೇಶ್ ಕಾರಂತ್ ಮತ್ತು ರೋಷನ್ ಕುಮಾರ್ ನಿರ್ದೇಶನ ಮಾಡಿರುತ್ತಾರೆ.
ಬೆಂಗಳೂರು : ಕರ್ನಾಟಕ ಪ್ರಕಾಶಕರ ಸಂಘ (ರಿ.) ಮತ್ತು ಬಿ.ಎಂ.ಶ್ರೀ. ಪ್ರತಿಷ್ಠಾನ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ‘ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನಾಚರಣೆ’ ಹಾಗೂ ‘ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ’ವು ಬೆಂಗಳೂರಿನ ಎನ್.ಆರ್. ಕಾಲೋನಿಯಲ್ಲಿರುವ ಬಿ.ಎಂ.ಶ್ರೀ. ಪ್ರತಿಷ್ಠಾನದ ಎಂ.ವಿ.ಸೀ. ಸಭಾಂಗಣದಲ್ಲಿ ದಿನಾಂಕ 23-04-2024ರಂದು ಬೆಳಗ್ಗೆ 10-30ಕ್ಕೆ ನಡೆಯಲಿದೆ. ಇದೇ ಸಂದರ್ಭದಲ್ಲಿ ಮೈಸೂರಿನ ಕನ್ನಡ ಪುಸ್ತಕ ಪ್ರಾಧಿಕಾರ ಮಳಿಗೆಯ ಶ್ರೀ ನಿಂಗರಾಜ್ ಚಿತ್ತಣ್ಣನವರ್ ಇವರಿಗೆ ‘ಎಂ. ಗೋಪಾಲಕೃಷ್ಣ ಅಡಿಗ ಪುಸ್ತಕ ಪರಿಚಾರಕ ಪ್ರಶಸ್ತಿ’ ಮತ್ತು ವಿಜಯಪುರ ಪುಸ್ತಕ ಪ್ರೀತಿಯ ಶ್ರೀಮತಿ ರೂಪಾ ಮತ್ತೀಕೆರೆಯವರಿಗೆ ‘ನಂಜನಗೂಡು ತಿರುಮಲಾಂಬ ಪ್ರಕಾಶನ ಪ್ರಶಸ್ತಿ’ ಪ್ರದಾನ ಮಾಡಲಾಗುವುದು.
ಉಡುಪಿ : ಉಡುಪಿಯ ಎಂ.ಜಿ.ಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ (ಮಾಹೆ), ಹಾಗೂ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 20-04-2024ರ ಶನಿವಾರದಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಳಿಯ ಸಮಿತಿ ಅಧ್ಯಕ್ಷರಾದ ಡಾ. ನಾ. ದಾಮೋದರ ಶೆಟ್ಟಿ “ಎಲ್ಲರ ಮನಸ್ಸಿನಲ್ಲಿ ಕನ್ನಡ ಉಳಿಯಬೇಕು ಎಂಬ ಪ್ರಯತ್ನ ನಡೆಯುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕನ್ನಡ ಭಾಷೆಯ ಪ್ರಾಮುಖ್ಯತೆಯನ್ನು ಕಡಿಮೆ ಮಾಡುವ ಪ್ರಯತ್ನ ವಿಶ್ವವಿದ್ಯಾನಿಲಯಗಳಿಂದ ಆಗುತ್ತಿದೆ, ಕನ್ನಡದ ಅವಸಾನದ ಕ್ರಿಯೆ ನಡೆಯುತ್ತಿದೆ. ಎಂದರು. ಪ್ರಶಸ್ತಿ ಪ್ರದಾನ ಮಾಡಿದ ನಾಡೋಜ ಕೆ.ಪಿ. ರಾವ್ ಮಾತನಾಡಿ “ಎಲ್ಲಾ ಕಾಲಗಳು ಒಳ್ಳೆಯ ಕಾಲಗಳು. ಕೇರಳಕ್ಕೆ ಹೋಗಿ ಕಲಿತು ಬರುವುದೇ ದಕ್ಷಿಣ ಕನ್ನಡದವರ ವೈಶಿಷ್ಯ. ಪಂಜೆಯವರು, ಮುಳಿಯ, ಗೋವಿಂದ ಪೈಗಳು ತಮ್ಮಲ್ಲೆ ಒಂದು ಸಮಾಜದ ಸೃಷ್ಟಿ ಮಾಡಿದರು.” ಎಂದರು. ಪ್ರಶಸ್ತಿ ಸ್ವೀಕರಿಸಿದ…
ಸುರತ್ಕಲ್ : ಗೋವಿಂದ ದಾಸ ಕಾಲೇಜಿನ ಗ್ರಂಥಾಲಯ ವಿಭಾಗವು, ಆಂತರಿಕ ಗುಣಮಟ್ಟ ಖಾತರಿ ಕೋಶದ ಸಹಭಾಗಿತ್ವದಲ್ಲಿ ನಡೆಸುತ್ತಿರುವ ‘ಪುಸ್ತಕ ಪ್ರೀತಿ’ ಪರಿಚಯ ಸರಣಿ ಕಾರ್ಯಕ್ರಮದಲ್ಲಿ, ಪ್ರಥಮ ಬಿ. ಕಾಂ. ವಿದ್ಯಾರ್ಥಿನಿ ಧನ್ಯಾ ಎ.ಎಸ್. ಇವರು 1997ರಲ್ಲಿ ಸಾಹಿತ್ಯ ಪ್ರಕಾಶನ ಹುಬ್ಬಳ್ಳಿ ಪ್ರಕಟಿಸಿದ, ಖ್ಯಾತ ಪತ್ರಕರ್ತ ಡಾ. ಪಾಟೀಲ ಪುಟ್ಟಪ್ಪ ವಿರಚಿತ ‘ಬದುಕಲು ಬೇಕು ಬದುಕುವ ಈ ಮಾತು’ ಎಂಬ ಪುಸ್ತಕವನ್ನು ಪರಿಚಯಿಸಿದರು. 75 ಲೇಖನಗಳ ಈ ಪುಸ್ತಕದಲ್ಲಿ ಲೇಖಕರ ಉದಾತ್ತ ಚಿಂತನೆ, ಅನುಭವ, ಆಳವಾದ ಆಲೋಚನೆಗಳು ಅವರ ನೆನಪಿನ ಅಂಕುರಗಳಾಗಿ ಮೂಡಿ ನಿಂತಿವೆ ಎಂದರು. ಬದುಕು ಪೂರ್ಣ ಸಿಹಿಯೂ ಅಲ್ಲ; ಪೂರ್ಣ ಕಹಿಯೂ ಅಲ್ಲ. ಅವುಗಳ ವಿವಿಧ ಪ್ರಮಾಣದ ಪಾಕ. ಕಹಿಯನ್ನು ಸಹಿಸುವ ಶಕ್ತಿ ಗಳಿಸಿದಂತೆ, ಜೀವನ ಮತ್ತಷ್ಟು ಬಲಗೊಳ್ಳುತ್ತದೆ. ಕಹಿಯ ಅನುಭವದಿಂದ ಸಿಹಿಗೆ ಮತ್ತಷ್ಟು ಕಳೆಯಿದೆ. ಕಹಿಯನ್ನು ಸಿಹಿಯನ್ನಾಗಿಸಿ ಸಮನಾಗಿ ಸ್ವೀಕರಿಸುವ ಜಾಣ್ಮೆಯೇ ಈ ಬದುಕು. ಮಿತ್ರರೇ, ಬದುಕು ಎಂದರೇನು? ವಿವರಿಸುವುದು ಕಷ್ಟ. ಪ್ರಶ್ನೆ ಒಂದು, ಉತ್ತರಗಳು ಹಲವು! ಸುತ್ತಲಿನ…
ಮಡಿಕೇರಿ : ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಕಲಾಸಂಘ ಬೊಳುವಾರು ಪುತ್ತೂರು ಇವರು ಶ್ರೀ ರಾಮೋತ್ಸವ ಸಮಿತಿ ಮಡಿಕೇರಿ ಇವರಿಂದ ನಡೆಸಲ್ಪಡುವ 130ನೇ ವರ್ಷದ ರಾಮೋತ್ಸವದ ಅಂಗವಾಗಿ ಹಟ್ಟಿಯಂಗಡಿ ರಾಮಭಟ್ಟ ವಿರಚಿತ (ಶ್ರೀ ರಾಮ ದರ್ಶನ) ಎಂಬ ತಾಳಮದ್ದಳೆ ದಿನಾಂಕ 18-04-2024 ರಂದು ಮಡಿಕೇರಿಯಲ್ಲಿ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಸುಬ್ರಾಯ ಸಂಪಾಜೆ ಹಾಗೂ ಚೆಂಡೆ ಮದ್ದಳೆಗಳಲ್ಲಿ ಪದ್ಯಾಣ ಜಯರಾಮ ಭಟ್ , ಮುರಳೀಧರ ಕಲ್ಲೂರಾಯ ಸಹಕರಿಸಿದರು. ಹಿಮ್ಮೇಳದಲ್ಲಿ ಹನೂಮಂತನಾಗಿ ಶುಭಾ .ಜೆ.ಸಿ.ಅಡಿಗ, ಅರ್ಜುನನಾಗಿ ಕಿಶೋರಿ ದುಗ್ಗಪ್ಪ ನಡುಗಲ್ಲು, ವೃದ್ಧ ಬ್ರಾಹ್ಮಣ ಮತ್ತು ಶ್ರೀರಾಮನಾಗಿ ಗಾಯತ್ರಿ ಹೆಬ್ಬಾರ್ ಸಹಕರಿಸಿದರು. ರಾಮೋತ್ಸವ ಸಮಿತಿಯ ಕಾರ್ಯಾಧ್ಯಕ್ಷೆ ಗೀತಾ ಗಿರೀಶ್ ನಿರೂಪಿಸಿದ ಈ ಕಾರ್ಯಕ್ರಮದಲ್ಲಿ ಆಂಜನೇಯ ಮಹಿಳಾ ಯಕ್ಷಗಾನ ಸಂಘದ ನಿರ್ದೇಶಕ ಭಾಸ್ಕರ ಬಾರ್ಯ ಸ್ವಾಗತಿಸಿ, ಕಾರ್ಯಕ್ರಮದ ಸಂಯೋಜಕ ಸುಬ್ರಾಯ ಸಂಪಾಜೆ ವಂದಿಸಿದರು. ರಾಮೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಅನಂತ ಸುಬ್ಬರಾವ್ ಕಲಾವಿದರಿಗೆ ಶುಭ ಹಾರೈಸಿದರು.
ಸೋಮವಾರಪೇಟೆಯಲ್ಲಿ ಪೂಜಾ ಸಾಮಾಗ್ರಿಗಳ ಮಳಿಗೆಯನ್ನು ಹೊಂದಿರುವ ಗಣೇಶ್ ಪಿ.ಎಲ್. ಇವರ ಸತಿಯಾಗಿ ಕೊಡಗಿಗೆ ಬಂದವರು ಯಶಸ್ವಿ ಗಣೇಶ್ ಸೋಮವಾರಪೇಟೆ. ಈ ಹಿಂದೆ ಕರ್ನಾಟಕ ರಾಜ್ಯವಾಗಿದ್ದ ಕಾಸರಗೋಡು ತಾಲೂಕಿನ ಪೆರ್ಲ ಗ್ರಾಮದ ಭಾಸ್ಕರ ನಾಯಕ್ ಮತ್ತು ರೇಖಾ ದಂಪತಿಯ ಪುತ್ರಿ. ತಮ್ಮ ವಿದ್ಯಾಭ್ಯಾಸವನ್ನು ಕೇರಳ ರಾಜ್ಯದಲ್ಲಿ ಇದ್ದರೂ ಸಹ ಕನ್ನಡದಲ್ಲಿಯೇ ಮಾಡಿರುತ್ತಾರೆ. ಪ್ರಾಥಮಿಕ ಶಿಕ್ಷಣವನ್ನು ಶ್ರೀ ಭಾರತೀ ವಿಧ್ಯಾಪೀಠ ಶಾಲೆ, ಬದಿಯಡ್ಕದಲ್ಲಿ 5ರಿಂದ 10ನೆಯ ತರಗತಿಯವರೆಗೆ ನವಜೀವನ ಪ್ರೌಢಶಾಲೆ ಪೆರಡಾಲದಲ್ಲಿ ಮುಗಿಸಿ ಪುತ್ತೂರಿನ ಸರ್ಕಾರಿ ಕಾಲೇಜಿನಲ್ಲಿ ಬಿ.ಬಿ.ಎಂ ಪದವಿಯನ್ಮು ಪಡೆದಿದ್ದಾರೆ. ಮುಂದೆ ಮೈಸೂರು ಜ್ಞಾನಗಂಗೋತ್ರಿ ಮುಕ್ತ ವಿಶ್ವವಿದ್ಯಾಲಯದಿಂದ ಎಂ.ಕಾಂ. ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಎಳೆಯ ವಯಸ್ಸಿನಿದಲೇ ಸಾಹಿತ್ಯ ಮತ್ತು ಸಂಗೀತದಲ್ಲಿ ಆಸಕ್ತಿ ಹೊಂದಿದ್ದವರು ಮದುವೆಯ ನಂತರವೂ ತಮ್ಮ ಮನೆಯವರ ಪ್ರೋತ್ಸಾಹದಿಂದ ಬರವಣಿಗೆಯನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ. ಇವರು ತಮ್ಮ ‘ಮೌನರಾಗ’ ಕವನ ಸಂಕಲನವನ್ನು ಇತ್ತೀಚೆಗೆ ನೆಲ್ಲಿಹುದಿಕೇರಿಯಲ್ಲಿ ನಡೆದ ರಾಜ್ಯ ಮಹಿಳಾ ಸಂಘದ ಕಾರ್ಯಕ್ರಮದಲ್ಲಿ ಲೋಕಾರ್ಪಣೆ ಮಾಡಿ ಸಾರಸ್ವತ ಲೋಕಕ್ಕೆ ಪದಾರ್ಪಣೆ ಮಾಡಿದ್ದಾರೆ. ಇವರ ಲೇಖನ…