Author: roovari

ಬೆಂಗಳೂರು: ದಿನಾಂಕ 15-04-2023ರಂದು ವಿಶ್ವ ಕಲಾ ದಿನ ಪ್ರಯುಕ್ತ ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ “ದಾಕಹವಿಸ” ಎರ್ಪಡಿಸಿದ ಕಲಾ ಪ್ರಾತ್ಯಕ್ಷಿಕೆ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಶ್ರೀ ವಿ. ಹರಿರಾಮ ಅವರು ಮಾತನಾಡುತ್ತಾ “ನಭದ ನೀಲಿ ಅನಂತವನ್ನು ಸೂಚಿಸಿದರೆ, ಎಲ್ಲವನ್ನೂ ಮೀರಿ ಭಗವಂತ ಅಪ್ರಮೇಯನಾದ. ಹಾಗೆಯೇ ಎಲ್ಲ ಚೌಕಟ್ಟುಗಳನ್ನು ಮೀರಿ ರಚಿಸುವ ಕಲೆಯೇ ಅಮೂರ್ತ ಕಲೆ.” ಎಂದು ತಮ್ಮ ನಿರರ್ಗಳವಾದ ಮಾತಿನಿಂದ ಕಲೆಯ ಬಗ್ಗೆ ತಮಗಿರುವ ಆಳವಾದ ಅಧ್ಯಯನ, ಜ್ಞಾನವನ್ನು ತೆರೆದಿಟ್ಟರು. ಸೃಷ್ಟಿಯ ಜೊತೆ ಸದಾ ಸ್ಪಂದಿಸುತ್ತ ಜ್ಞಾನವನ್ನು ಬೆಳೆಸಿಕೊಂಡು ಸೃಜನಶೀಲತೆಯೊಂದಿಗೆ ಮನೋವಿಕಾಸದ ಹಾದಿಯೇ ಕಲೆ. ಮೊದಲು ಕ್ಯಾನ್ವಾಸಿನ ಮೇಲೆ ವಿವಿಧ ಬಣ್ಣಗಳನ್ನು ಹರಡಿ ನಂತರ, ನಿರಂತರ, ಅಂತ್ಯವಿಲ್ಲದ ಭಾವನೆಗಳನ್ನು ನೀಡುವ ನೀಲಿ Cobalt ಬಣ್ಣವನ್ನು ಹೆಚ್ಚಿನ ಭಾಗದಲ್ಲಿ ಹರಡಿದ್ದು ನಮ್ಮನ್ನು ವಿಶಾಲದೆಡೆಗೆ ಕರೆದೊಯ್ಯುವಂತೆ ಭಾಸವಾಗತ್ತಿತ್ತು. ಇಂತಹ ಚಿತ್ರಗಳೇ ಮನುಕುಲಕ್ಕೆ ಭಗವಂತನು ಕರುಣಿಸಿದ ಸಂಜೀವಿನಿ ಎಂಬಂತೆ ಗೋಚರವಾಗುತ್ತಿತ್ತು. ಲೌಕಿಕದ ಅನುಭವ ಮತ್ತು ಪಾರಮಾರ್ಥಿಕದಲ್ಲಿ ಅವರಿಗಿರುವ ಆಸಕ್ತಿ ಅವರ ಮಾತು ಮತ್ತು ಕಲೆಯಲ್ಲಿ ಪ್ರತಿಧ್ವನಿಸುತ್ತಿತ್ತು. ಕೇಳುಗರ…

Read More

ಬಂಟ್ವಾಳ: ಯಕ್ಷ ಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್, ಸರಪಾಡಿ ಘಟಕ ಸಮಿತಿ ವತಿಯಿಂದ 6ನೇ ವಾರ್ಷಿಕೋತ್ಸವ ಕಾರ್ಯಕ್ರಮ ದಿನಾಂಕ 18-04-2023 ಮಂಗಳವಾರದಂದು ಬಂಟ್ವಾಳ ತಾಲೂಕಿನ ಇಳಿಯೂರು ಶ್ರೀ ಮಹಾವಿಷ್ಣು ದೇವಸ್ಥಾನದ ವಠಾರದಲ್ಲಿ ನಡೆಯಿತು. ಯಕ್ಷ ಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಭಾಗವತ ಸತೀಶ್ ಶೆಟ್ಟಿ ಪಟ್ಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, “ಯಕ್ಷಗಾನ ಕಲಾವಿದರ ಬೆಳವಣಿಗೆಗೆ ಸರಪಾಡಿಯ ಕೊಡುಗೆ ಮಹತ್ತರವಾಗಿದೆ. ಕಲಾಭಿಮಾನಿಗಳ ಪ್ರೀತಿ, ಪ್ರೋತ್ಸಾಹದಿಂದ ಯಕ್ಷಗಾನ ಬೆಳೆಯಲು ಸಾಧ್ಯವಾಗಿದೆ” ಎಂದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ ಶೆಟ್ಟಿ ಮಾತನಾಡಿ, “ಸತೀಶ್ ಶೆಟ್ಟಿ ಪಟ್ಲ ಅವರ ನೇತೃತ್ವದಲ್ಲಿ ಯಕ್ಷಗಾನ ಕಲಾವಿದರಿಗೆ ಭರವಸೆಯ ಬೆಳಕು ನೀಡಿ ಮುನ್ನಡೆಸುವ ಕಾರ್ಯ ಮಾಡುತ್ತಿರುವ ಯಕ್ಷಧ್ರುವ ಪಟ್ಟ ಫೌಂಡೇಶನ್ ಕಾರ್ಯ ಮಾದರಿಯಾಗಿದೆ” ಎಂದರು. ಇದೇ ಸಂದರ್ಭದಲ್ಲಿ ಯಕ್ಷಗಾನ ಸಾಧಕರಾದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಶ್ರೀ ಅಶೋಕ್ ಶೆಟ್ಟಿ ಸರಪಾಡಿ, ಯಕ್ಷಗಾನ ಕಲಾವಿದ ಶ್ರೀ ದಿನೇಶ ಶೆಟ್ಟಿ ಕಾವಳಕಟ್ಟೆ ಮತ್ತು ಯಕ್ಷಾಭಿಮಾನಿ ಶ್ರೀಮತಿ…

Read More

ಬೆಂಗಳೂರು: ಬೆಂಗಳೂರಿನ ಪ್ರತಿಷ್ಠಿತ ಭರತನಾಟ್ಯ ಸಂಸ್ಥೆಗಳಾದ ಪಾರ್ವತಿ ನೃತ್ಯ ವಿಹಂಗಮ (ರಿ.) ಇದರ ನೃತ್ಯ ನಿರ್ದೇಶಕರಾದ ಗುರು ನಿರ್ಮಲಾ ಜಗದೀಶ್ ಹಾಗೂ ನೃತ್ಯ ಕುಟೀರ (ರಿ.) ನೃತ್ಯ ಸಂಸ್ಥೆಯ ನಿರ್ದೇಶಕರಾದ ಗುರು ದೀಪಾ ಭಟ್ ಇವರುಗಳು ಜಂಟಿಯಾಗಿ 2023 ಏಪ್ರಿಲ್ ತಿಂಗಳ 15 ಮತ್ತು 16ರಂದು ಎರಡು ದಿನಗಳ ಕಾಲ ಹಮ್ಮಿಕೊಂಡ ತಾಳ ಕಾರ್ಯಾಗಾರದಲ್ಲಿ ನೃತ್ಯ ಕಲಾವಿದ ವಿದ್ವಾನ್ ಮಂಜುನಾಥ್ ಎನ್. ಪುತ್ತೂರು ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ. ಈ ತಾಳ ಕಾರ್ಯಾಗಾರವನ್ನು ಪಾರ್ವತಿ ನೃತ್ಯ ವಿಹಂಗಮ ಮತ್ತು ನೃತ್ಯ ಕುಟೀರ ಸಂಸ್ಥೆಯ ಜೂನಿಯರ್ ಹಾಗೂ ಸೀನಿಯರ್ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದು, ಸುಮಾರು 56 ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದರು. ವಿದ್ವಾನ್ ಮಂಜುನಾಥ್ ಎನ್. ಪುತ್ತೂರು ಇವರು ತಮ್ಮ 6ನೇ ವಯಸ್ಸಿನಲ್ಲಿಯೇ ಭರತನಾಟ್ಯದ ಅಭ್ಯಾಸವನ್ನು ಆರಂಭಿಸಿದ್ದು, ನೃತ್ಯಕ್ಕಾಗಿಯೇ ತಮ್ಮನ್ನು ತೊಡಗಿಸಿಕೊಂಡವರು. 2013ರಲ್ಲಿ ವಿದ್ವಾನ್ ಸುದರ್ಶನ ಎಂ.ಎಲ್. ಭಟ್ ಅವರ ಮಾರ್ಗದರ್ಶನದಲ್ಲಿ ವಿದ್ವತ್ ಪರೀಕ್ಷೆ ತೇರ್ಗಡೆಗೊಂಡಿದ್ದಾರೆ. ಉಪ್ಪಿನಂಗಡಿ ಮತ್ತು ಕಲಬುರುಗಿಯ ಶ್ರೀ ಮಂಜುನಾಥ ನೃತ್ಯ…

Read More

ಬದಿಯಡ್ಕ : ನಿವೃತ್ತ ಅಧ್ಯಾಪಕ ಭಸ್ಮಾಜೆ ಗೋಪಾಲಕೃಷ್ಣ ಭಟ್ಟರ 3ನೇ ಕೃತಿ ‘ಗುರು ಪಿತಾಮಹರ ಆದರ್ಶ ಸ್ಮರಣೆ’ ಬಿಡುಗಡೆ ಸಮಾರಂಭ ದಿನಾಂಕ 18-04-2023 ಮಂಗಳವಾರದಂದು ಉಪ್ಪಂಗಳ ಭಸ್ಮಾಜೆಯಲ್ಲಿ ಜರಗಿತು. ಜಿ. ರಾಮ ಪ್ರಸನ್ನ ದೀಪ ಪ್ರಜ್ವಲನೆಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹಿರಿಯ ಪತ್ರಕರ್ತ, ಕವಿ ಬಾಲಕೃಷ್ಣ ಕೋಳಾರಿಯವರು ಅಧ್ಯಕ್ಷತೆ ವಹಿಸಿ ಕೃತಿಯನ್ನು ಬಿಡುಗಡೆಗೊಳಿಸಿದರು. ಮುಂಡುಗಾರು ಸುಬ್ರಹ್ಮಣ್ಯ ಭಟ್ ಕೃತಿ ಪರಿಚಯ ನಡೆಸಿದರು. ಈ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಾದ ಅತುಲ್ ಯು. ಮತ್ತು ಐಶಾನಿ ಯು. ಇವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಕೃತಿಕರ್ತೃ ಭಸ್ಮಾಜೆ ಗೋಪಾಲಕೃಷ್ಣ ಭಟ್ ಉಪಸ್ಥಿತರಿದ್ದರು. ನಿವೃತ್ತ ಅದ್ಯಾಪಕ ಉಪ್ಪಂಗಳ ಸುಬ್ರಹ್ಮಣ್ಯ ಭಟ್ ಸ್ವಾಗತಿಸಿ, ರಾಜೇಶ್ ಯು. ಧನ್ಯವಾದವಿತ್ತರು. ವಿಶ್ವಾಸ್ ನೀರ್ಪಜೆ ಕಾರ್ಯಕ್ರಮ ನಿರೂಪಿಸಿದರು.

Read More

ಉಡುಪಿ: ಭಾವನಾ ಫೌಂಡೇಶನ್ ಹಾವಂಜೆ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಆಯೋಜಿಸುವ ಜನಪದ ದೇಶೀಯ ಕಲೆಗಳ ಸರಣಿ ಕಾರ್ಯಾಗಾರದ 4, 5 ಮತ್ತು 6ನೇ ಕಾರ್ಯಾಗಾರವು ಇದೇ ಬರುವ ಏಪ್ರಿಲ್ 27ರಿಂದ 30ರ ತನಕ ಉಡುಪಿಯ ಬಡಗುಪೇಟೆಯಲ್ಲಿ ನಡೆಯಲಿದೆ. ಬಿಹಾರದ ಮಧುಬನಿ, ಪೇಪರ್ ಮೆಶ್ ಮತ್ತು ಗೋಧ್ ನಾ ಕಲಾ ಪ್ರಕಾರಗಳ ಈ ಸರಣಿ ಕಾರ್ಯಾಗಾರವು ಶ್ರವಣ್ ಕುಮಾರ್ ಪಾಸ್ವಾನ್ ಇವರ ನಿರ್ದೇಶನದಲ್ಲಿ ನಡೆಯಲಿದೆ. ಕಾರ್ಯಾಗಾರವು ಬೆಳಿಗ್ಗೆ 9-30ರಿಂದ ಸಂಜೆ 5-00 ಘಂಟೆಯ ತನಕ ನಡೆಯಲಿದ್ದು, ಪ್ರತಿದಿನಕ್ಕೆ ಕಾರ್ಯಾಗಾರದ ನೋಂದಣಿ ಶುಲ್ಕ ರೂ.600/- ಹಾಗೂ ನಾಲ್ಕು ದಿನಗಳಿಗೆ ರೂ.2000/- ಗಳಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ಡಾ. ಜನಾರ್ದನ ಹಾವಂಜೆ -9845650544 ಮಧುಬನಿ: 27ನೇ ಏಪ್ರಿಲ್, ಗುರುವಾರ ಮತ್ತು 30ನೇ ಏಪ್ರಿಲ್, ಆದಿತ್ಯವಾರ ಮಧುಬನಿ ಕಲೆಯು ಬಿಹಾರದ ಮಿಥಿಲಾ ನಗರದ ಜನಪದ ಕಲೆಯಾಗಿದ್ದು, ರಾಮಾಯಣ ಪೌರಾಣಿಕ ಪ್ರಸಂಗದ ಜತೆಗೂ ತಳಕು ಹಾಕಿಕೊಂಡಿದೆ. ಮನೆಯ ಗೋಡೆಯ ಮೇಲೆ ನೈಸರ್ಗಿಕ ವರ್ಣಗಳಲ್ಲಿ ನಿರ್ಮಾಣಗೊಳ್ಳುತ್ತಿದ್ದ ಮಧುಬನಿ…

Read More

ಕಾಸರಗೋಡು: ಜಾಗೃತಿ ಟ್ರಸ್ಟ್ ಬೆಂಗಳೂರು ಆಯೋಜಿಸಿದ 2023ನೇ ಸಾಲಿನ ‘ಗಮಕ ಗಾಯನ ಗಾರುಡಿಗ ಪ್ರಶಸ್ತಿ’ ಪುರಸ್ಕಾರ ಸಮಾರಂಭ ಹಾಗೂ ಅಂತರ್ ರಾಜ್ಯಮಟ್ಟದ ಕವಿಗೋಷ್ಠಿ ಹಾಗೂ ಸಾಂಸ್ಕೃತಿಕ ಸಂಭ್ರಮವು ದಿನಾಂಕ 15-04-2023ರಂದು ಕೇರಳ ರಾಜ್ಯದ ಕಾಸರಗೋಡಿನ ಎಡನೀರು ಮಠದಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಮಹಾಸ್ವಾಮಿಗಳು ಉದ್ಘಾಟಿಸಿ ‘ಕನ್ನಡವನ್ನು ಉಳಿಸಿ ಬೆಳೆಸಬೇಕಾದುದು ನಮ್ಮೆಲ್ಲರ ಕರ್ತವ್ಯ. ಇಂದಿನ ಮಕ್ಕಳಿಗೆ ಕನ್ನಡ ಅಭಿಮಾನ ಭಾಷೆ, ಸಂಸ್ಕೃತಿ, ಸಂಪ್ರದಾಯ, ಆಚಾರ-ವಿಚಾರಗಳ ಬಗ್ಗೆ ತಿಳುವಳಿಕೆ ನೀಡುವ ಇಂತಹ ಕಾರ್ಯಕ್ರಮಗಳು ಆಗಾಗ ನಡೆಯಬೇಕಾಗಿದೆ’ ಎಂದು ಆಶೀರ್ವಚನ ನೀಡಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಡಿನಾಡ ಸಾಂಸ್ಕೃತಿಕ ಸಂಘದ ಅಧ್ಯಕ್ಷರಾದ ಡಾಕ್ಟರ್ ವಾಣಿಶ್ರೀ ವಹಿಸಿ “ಜಾಗೃತಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಕನ್ನಡ ಭಾಷೆಯ ಬಗ್ಗೆ ತಿಳುವಳಿಕೆ ನೀಡಬೇಕಾಗಿದೆ” ಎಂದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕರ್ನಾಟಕ ರಾಜ್ಯ ಸಾಹಿತ್ಯ ಶಿಕ್ಷಕರ ಪರಿಷತ್ತಿನ ರಾಜ್ಯಾಧ್ಯಕ್ಷ ಹಾಗೂ ಸ್ವರ್ಣಭೂಮಿ ಫೌಂಡೇಶನ್ ಕರ್ನಾಟಕದ ಅಧ್ಯಕ್ಷರಾದ ಶ್ರೀ ಬಿ. ಶಿವಕುಮಾರ್ ಮಾತನಾಡಿ “ಕನ್ನಡ ಸಂಘಟನೆಗೆ ಎಲ್ಲರೂ…

Read More

ಪುತ್ತೂರು: ಪುತ್ತೂರು ಮಹಾತೋಭಾರ ಮಹಾಲಿಂಗೇಶ್ವರ ‌ದೇವಳದ ವರ್ಷಾವಧಿ ಜಾತ್ರೋತ್ಸವವು ಎಪ್ರಿಲ್ 10ರಿಂದ ಶುರುವಾಗಿ‌ 18ರ‌ ತನಕ ನಡೆಯಿತು. ಜಾತ್ರೆಯ ಎರಡನೇ ದಿನ ದೇವಳದ ಖಂಡನಾಯಕ ಕಟ್ಟೆಯಲ್ಲಿ ದೇವರನ್ನು ಕುಳ್ಳಿರಿಸಿ‌ ಅಷ್ಟಾವಧಾನ‌ಸೇವೆ ನಡೆಯಿತು. ಈ ಸಂದರ್ಭ ನೃತ್ಯ ಸೇವೆಯಲ್ಲಿ ಭರತನಾಟ್ಯ ಕಲಾವಿದೆ ವಿದುಷಿ ಮಂಜುಳಾ ಸುಬ್ರಹ್ಮಣ್ಯ ಅವರು ಪುತ್ತೂರಿನ‌ ಸ್ಥಳ ಪುರಾಣವನ್ನು ಮನೋಜ್ಞವಾಗಿ ಅಭಿನಯಿಸುವುದರ ಮೂಲಕ ನೃತ್ಯ ಸೇವೆಯನ್ನು ಗೈದರು. ಇವರಿಗೆ ಹಾಡು ಹಾಗೂ ನಟುವಾಂಗದಲ್ಲಿ ವಿದುಷಿ ಶೋಭಿತಾ ಸತೀಶ್, ಮೃದಂಗ ವಾದನದಲ್ಲಿ ಬಾಲಕೃಷ್ಣ ಹೊಸಮನೆ ಹಾಗೂ ಕೊಳಲಿನಲ್ಲಿ ಕೃಷ್ಣಗೋಪಾಲ ಪುಂಜಾಲಕಟ್ಟೆ ಇವರುಗಳು ಸಹಕರಿಸಿದ್ದರು.

Read More

ಬೆಂಗಳೂರು: ಸುಧೀಂದ್ರ ನೃತ್ಯ ಕಲಾನಿಕೇತನ (ರಿ.) ಬೆಂಗಳೂರಿನ ಮಲ್ಲೇಶ್ವರಂನ ಸೇವಾ ಸದನದಲ್ಲಿ 08-04-2023ನೇ ಶನಿವಾರ ಹಮ್ಮಿಕೊಂಡ ‘ನೃತ್ಯ ಸಿರಿ’ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ಒಂದೇ ದಿನದಲ್ಲಿ ಮೂವರು ನೃತ್ಯ ವಿದ್ವಾಂಸರುಗಳು ಕಾರ್ಯಕ್ರಮ ನೀಡಿದ್ದು, ಮೊದಲ ಭಾಗದಲ್ಲಿ ನಾಟ್ಯಗುರು ಡಾ.ಸೌಂದರ್ಯ ಶ್ರೀವತ್ಸ ಇವರ ಶಿಷ್ಯೆಯಾದ ವಿದುಷಿ ಮೈತ್ರಿ ಮಧ್ಯಸ್ಥ ಇವರು ಭರತನಾಟ್ಯವನ್ನು ಅದ್ಭುತವಾಗಿ ಪ್ರದರ್ಶಿಸಿದರು. ಇವರು ನರ್ತನ ಕೀರ್ತನಾ’ ನೃತ್ಯ ಸಂಸ್ಥೆಯ ಕಲಾ ನಿರ್ದೇಶಕರಾಗಿದ್ದಾರೆ. ಇವರು ಭರತನಾಟ್ಯದ ಅದ್ಭುತ ಪ್ರಸ್ತುತಿಯನ್ನು ನೀಡಿದರು. ಭುವನ ಗುರು ಪ್ರಸಾದ್ ಇವರು ಶಾಸ್ತ್ರೀಯ ನೃತ್ಯದ ಒಂದು ಪ್ರಕಾರವಾದ ಕಥಕ್ ನೃತ್ಯ ಕಲಾವಿದೆ. ನಾಟ್ಯಗುರು ಭಾರತಿ ವಿಠಲರ ಶಿಷ್ಯೆಯಾದ ಇವರು ಕಲ್ಪನಾ ಸ್ಕೂಲ್ ಆಫ್ ಡಾನ್ಸ್ ನ ನಿರ್ದೇಶಕಿಯಾಗಿದ್ದಾರೆ. ಎರಡನೇ ಭಾಗದಲ್ಲಿ ಇವರು ಶ್ಲಾಘನೀಯ ಕಥಕ್ ನೃತ್ಯವನ್ನು ಪ್ರಸ್ತುತ ಪಡಿಸಿದರು. ವಿದುಷಿ ಮೈತ್ರಿ ಮಧ್ಯಸ್ಥ ವಿದುಷಿ ಭುವನ ಗುರುಪ್ರಸಾದ್ 3ನೇ ಭಾಗದಲ್ಲಿ ಆಹ್ವಾನಿತ ಕಲಾದಂಪತಿಗಳಾದ ವಿದ್ವಾನ್ ದೀಪಕ್ ಕುಮಾರ್ ಮತ್ತು ವಿದುಷಿ ಪ್ರೀತಿಕಲಾ ದೀಪಕ್ ಇವರಿಂದ ಸಂಪೂರ್ಣ ರಾಮಾಯಣ…

Read More

ಮಂಗಳೂರು: ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ & ಕಲ್ಚರಲ್ ಹೆರಿಟೇಜ್ (ಇಂಟಾಕ್)ನ ಮಂಗಳೂರು ಅಧ್ಯಾಯವು 2023ರ ಏಪ್ರಿಲ್ 18 ಮಂಗಳವಾರದಂದು ವಿಶ್ವ ಪರಂಪರೆ ದಿನವನ್ನು ಆಚರಿಸುವ ಅಂಗವಾಗಿ ನಗರದ ಹಳೆ ಬಂದರು ಪ್ರದೇಶದ ಮೂಲಕ ‘ಹೆರಿಟೇಜ್ ವಾಕ್’ ಅನ್ನು ಆಯೋಜಿಸಿತು. ಕಲಾವಿದರು, ವಾಸ್ತುಶಿಲ್ಪಿಗಳು, ಬ್ಯಾಂಕ್ ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳು ಸೇರಿದಂತೆ ಹಲವಾರು ಆಸಕ್ತರು ಪಾರಂಪರಿಕ ನಡಿಗೆಯಲ್ಲಿ ಭಾಗವಹಿಸಿದರು. ಬೆಳಗ್ಗೆ 7:10ಕ್ಕೆ ಗುರುಪುರ ನದಿ ದಂಡೆಯಲ್ಲಿರುವ ಹಳೆ ಬಂದರಿನಿಂದ ಆರಂಭವಾದ ಪಾದಯಾತ್ರೆಗೆ ಪ್ರಾಸ್ತಾವಿಕವಾಗಿ ಇಂಟಾಕ್ ಮಂಗಳೂರು ಅಧ್ಯಾಯದ ಸಂಚಾಲಕ ಸುಭಾಸ್ ಚಂದ್ರ ಬಸು ಪಾರಂಪರಿಕ ನಡಿಗೆಯ ಮಹತ್ವವನ್ನು ಪರಿಚಯಿಸಿದರು. 1983ರಿಂದ ವಿಶ್ವ ಪರಂಪರೆ ದಿನವನ್ನು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ ಎಂದು ಮಾಹಿತಿ ನೀಡಿದರು. ಸಂರಕ್ಷಣಾ ವಾಸ್ತುಶಿಲ್ಪಿ ಕ್ಯಾರೊಲಿನ್ ಡಿಸೋಜಾ ಅವರು ರೋಮನ್ ಅವಧಿಯ ಆರಂಭಿಕ ಉಲ್ಲೇಖದಿಂದ ನಂತರದ ಬ್ರಿಟಿಷ್ ಆಳ್ವಿಕೆಯ ಹಂತದವರೆಗೆ ಬಂದರಿನ ಐತಿಹಾಸಿಕ ವಿಕಾಸವನ್ನು ವಿವರಿಸಿದರು. ‘ಕಸ್ಟಮ್ ಹೌಸ್’ ಮೊದಲು ಭೇಟಿ ನೀಡಿದ ಸ್ಥಳ. ಕಸ್ಟಮ್ಸ್ ಅಧೀಕ್ಷಕರಾದ ರಾಮ್ ಅವತಾರ್ ಮೀನಾ ಅವರು…

Read More

ಮಂಗಳೂರು: ತುಳು ಕೂಟ ಕುಡ್ಲದ ಬಂಗಾರ ಪರ್ಬದ ಸರಣಿ ವೈಭವೋ – 2 ಅಂಗವಾಗಿ ‘ಬಿಸು ಪರ್ಬ ಸಂಭ್ರಮೊ’ ಮಂಗಳೂರಿನ ಶ್ರೀ ಮಂಗಳಾದೇವಿ ದೇವಸ್ಥಾನದ ಸಭಾಂಗಣದಲ್ಲಿ ದಿನಾಂಕ 15-04-2023 ಶನಿವಾರ ನೆರವೇರಿತು. ಇದೇ ವೇದಿಕೆಯಲ್ಲಿ ರತ್ನವರ್ಮ ಹೆಗ್ಗಡೆ ಪ್ರಶಸ್ತಿ -2023 ಪ್ರದಾನ ಮಾಡಲಾಯಿತು. ತುಳು ಕೂಟ ಕುಡ್ಲದ ಅಧ್ಯಕ್ಷ ಶ್ರೀ ಬಿ.ದಾಮೋದರ ನಿಸರ್ಗ ಇವರ ಅಧ್ಯಕ್ಷತೆಯಲ್ಲಿ ಶ್ರೀಮತಿ ಪ್ರಸೀತಾ ಪ್ರದೀಪ್‌ ಮತ್ತು ಶ್ರೀಮತಿ ಹೇಮ ನಿಸರ್ಗ ಇವರ ನೇತೃತ್ವದಲ್ಲಿ ಬಿಸು ಕಣಿ (ವಿಷು ಕಣಿ) ಇಟ್ಟು ಬಿಸು ಹಬ್ಬ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶ್ರೀಮತಿ ರೂಪಕಲಾ ಆಳ್ವ ಇವರ ಬಿಸು ಆಚರಣೆಯನ್ನು ವಿವರಿಸುವ ‘ಬಿಸು’ ಹಾಡು ಮತ್ತು ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಇವರ ‘ಬಿಸುತ ಮಿನದನ’ ಹಾಡುಗಳನ್ನು ಹಾಡಲಾಯಿತು. ಈ ಕಾರ್ಯಕ್ರಮವನ್ನು ರಾಜ್ಯ ಧಾರ್ಮಿಕ ಪರಿಷತ್‌ ಮಾಜಿ ಸದಸ್ಯರಾದ ಶ್ರೀ ಪದ್ಮನಾಭ ಬಿ. ಕೋಟ್ಯಾನ್ ಉದ್ಘಾಟಿಸಿ, ಮಾತನಾಡುತ್ತಾ “ಹಿಂದಿನ ಆಚರಣೆ-ಕಟ್ಟುಪಾಡುಗಳನ್ನು ಇಂದಿನ ಪೀಳಿಗೆ ತಿಳಿಯಬೇಕು” ಎಂಬ ಸಂದೇಶ ನೀಡಿದರು. ಪ್ರಧಾನ ಕಾರ್ಯದರ್ಶಿ ಶ್ರೀ…

Read More