Author: roovari

ಮಂಗಳೂರು : ರಥಬೀದಿಯ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆಶ್ರಯದಲ್ಲಿ ವಿಶ್ವಕರ್ಮ ಕಲಾ ಪರಿಷತ್ ಮಂಗಳೂರು ಇದರ ವತಿಯಿಂದ ಆಯೋಜಿಸಿದ್ದ ‘ಸಮರ್ಪಣಂ ಕಲೋತ್ಸವ 2024′ ಕಾರ್ಯಕ್ರಮವು ದಿನಾಂಕ 13-04-2024ರಂದು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆವರಣದಲ್ಲಿ ಜರಗಿತು. ಅಯೋಧ್ಯೆಯ ಶ್ರೀರಾಮಲಲ್ಲಾ ವಿಗ್ರಹದ ನಿರ್ಮಾತೃ ಮೈಸೂರಿನ ಶ್ರೀ ಅರುಣ್ ಯೋಗಿರಾಜ್ ಅವರನ್ನು ಶೃಂಗಾರಗೊಂಡ ವಾಹನದಲ್ಲಿ ಪೀಠದಲ್ಲಿ ಕುಳ್ಳಿರಿಸಿ ಟೆಂಪಲ್ ಸ್ಕ್ವೇರ್ ವೃತ್ತದಿಂದ ರಥ ಬೀದಿಯ ತನಕ ಮೂಲಕ ಮೆರವಣಿಗೆ ಮಾಡಲಾಯಿತು. ಭಾವುಕರಾದ ಅರುಣ್ ಯೋಗಿರಾಜ್ ದಾರಿಯುದ್ದಕ್ಕೂ ವಿನಮ್ರವಾಗಿ ನಮಸ್ಕರಿಸುತ್ತಾ ಸಾಗಿದರು. ಇದೇ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅರುಣ್ ಯೋಗಿರಾಜ್ ಇವರಿಗೆ ವಿಶ್ವಕರ್ಮ ಕಲಾ ಪರಿಷತ್ ವತಿಯಿಂದ ‘ವಿಶ್ವಕರ್ಮ ಕುಲ ತಿಲಕ’ ಬಿರುದು ನೀಡಿ ಸನ್ಮಾನಿಸಲಾಯಿತು. ಗೌರವ ಸಮ್ಮಾನ ಸ್ವೀಕರಿಸಿ ಮಾತನಾಡಿದ ಅರುಣ್ ಯೋಗಿರಾಜ್ “ಶ್ರೀರಾಮ ಮೂರ್ತಿ ನಿರ್ಮಾಣಕ್ಕಾಗಿಯೇ ನಾನು ಹುಟ್ಟಿರುವುದೇನೋ ಅನ್ನಿಸುತ್ತಿದೆ. ರಾಮಲಲ್ಲಾನ ವಿಗ್ರಹ ನಿರ್ಮಾಣ ಕೆಲಸ ಸವಾಲಿನದ್ದಾಗಿತ್ತು. ದಕ್ಷಿಣ ಭಾರತ ಮತ್ತು ಉತ್ತರ ಭಾರತದ ಜನರಿಗೆ ಇಷ್ಟ ಆಗುವಂತಿರ ಬೇಕು…

Read More

ಮಂಗಳೂರು : ಮಧುರತರಂಗ (ರಿ.), ದ.ಕ. ಮಂಗಳೂರು ಇದರ 35ನೇ ವರುಷದ ವಾರ್ಷಿಕೋತ್ಸವವು ದಿನಾಂಕ 28-04-2024ರಂದು ಸಂಜೆ 3.30ಕ್ಕೆ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ. ಈ ಸಮಾರಂಭವನ್ನು ಶ್ರೀಮತಿ ಸುಜಾತ ಎಲ್. ಆಚಾರ್ಯ ಇವರು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಲಿದ್ದು, ಅಗರಿ ಎಂಟರ್ ಪ್ರೈಸಸ್ ಇದರ ಮಾಲಕರಾದ ಶ್ರೀ ರಾಘವೇಂದ್ರ ರಾವ್ ಅಗರಿ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷರಾದ ನುಡಿಚತುರ ಮಾಣಿಕ್ಯ ಶ್ರೀ ಪ್ರದೀಪ ಕುಮಾರ್ ಕಲ್ಕೂರ ಇವರು ದಿಕ್ಸೂಚಿ ನುಡಿಗಳನ್ನಾಡಲಿದ್ದಾರೆ. ಹಿರಿಯ ಕಲಾ ಸಾಹಿತಿ ಶ್ರೀ ಹೆಚ್. ಜನಾರ್ದನ ಹಂದೆ ಕೋಟ ಇವರು ಚಂಪು ಕಾವ್ಯ ಪ್ರಸ್ತುತ ಪಡಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಶ್ರೀ ಡಿ. ಭಾಸ್ಕರ ಆಚಾರ್ಯ, ಶ್ರೀಮತಿ ದೀಪಿಕಾ ದಿವಾಕರ್, ಯಜ್ಞೇಶ್ ಮತ್ತು ಜ್ಞಾನೇಶ್ ಇವರುಗಳಿಗೆ ಗೌರವ ಸನ್ಮಾನ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸ್ವರಕಂಠೀರವ, ಸ್ವರತಪಸ್ವಿ ಜಗದೀಶ ಶಿವಪುರ ಇವರಿಂದ ಮನರಂಜನಾ ಗೀತೆಗಳು ಹಾಗೂ ಉಡುಪಿಯ ಕಲಾಶಿಲ್ಪ ತಂಡದವರಿಂದ ‘ಉಂದು ಇನಿ ಕೊಡೆದ ಕತೆ…

Read More

ಮೈಸೂರು : ಅಭಿವ್ಯಕ್ತಿ ಸೆಂಟರ್ ಫಾರ್ ಆರ್ಟ್ ಆಫ್ ಕಲ್ಚರ್ ಮತ್ತು ಭೂಷಣ್ಸ್ ಅಕಾಡೆಮಿ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ಅಂಡ್ ವಿಷುಯಲ್ ಪ್ರೆಸೆಂಟೇಷನ್ ಮೈಸೂರು ನೃತ್ಯ ಸಂಸ್ಥೆಗಳು ವಿಭಿನ್ನವಾದ ಎರಡು ಕಾರ್ಯಾಗಾರಗಳನ್ನು ಹಮ್ಮಿಕೊಂಡಿದ್ದವು. ದಿನಾಂಕ 30-03-2024 ಮತ್ತು 31-03-2024ರಂದು ಅಭಿವ್ಯಕ್ತಿ ಸಂಸ್ಥೆಯು ಎರಡು ದಿನಗಳ ಕಾಲದ ವಿದ್ವತ್ ಕಲಿಕೆಗೆ ಸಂಬಂಧಪಟ್ಟ ಕಾರ್ಯಾಗಾರ ಹಾಗೂ ಒಂದು ದಿನದ ತಾಳ ಕಾರ್ಯಾಗಾರವನ್ನು ಭೂಷಣ್ಸ್ ಅಕಾಡೆಮಿಯು ದಿನಾಂಕ 01-04-2024ರಂದು ಹಮ್ಮಿಕೊಂಡಿತ್ತು. ವಿದ್ವಾನ್ ಮಂಜುನಾಥ ಎನ್. ಪುತ್ತೂರು ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಇದರಲ್ಲಿ ವಿವಿಧ ನೃತ್ಯ ಗುರುಗಳ 15 ಮಂದಿ ನೃತ್ಯ ವಿದ್ಯಾರ್ಥಿಗಳು ಹಾಜರಿದ್ದರು.

Read More

ಕಾರ್ಕಡ : ಗೆಳೆಯರ ಬಳಗ (ರಿ.) ಕಾರ್ಕಡ ಸಾಲಿಗ್ರಾಮ, ಕನ್ನಡ ಸಾಹಿತ್ಯ ಪರಿಷತ್ ಬ್ರಹ್ಮಾವರ ಘಟಕ ಉಡುಪಿ ಜಿಲ್ಲೆ, ಕರ್ನಾಟಕ ಯಕ್ಷಧಾಮ ಹಾಗೂ ಭೂಮಿಕಾ ಕಲಾ ಪ್ರತಿಷ್ಠಾನ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ‘ಮನೆಯಂಗಳದಲ್ಲಿ ಸಾಹಿತ್ಯ, ಸನ್ಮಾನ ಮತ್ತು ಯಕ್ಷಗಾನ ಪ್ರದರ್ಶನ’ವು ದಿನಾಂಕ 22-04-2024ರಂದು ಸಂಜೆ 3.30ಕ್ಕೆ ಕಾರ್ಕಡದ ಭೂಮಿಕಾ ಮನೆಯಂಗಳದಲ್ಲಿ ನಡೆಯಲಿದೆ. ಕ.ಸಾ.ಪ. ಉಡುಪಿ ಜಿಲ್ಲೆ ಇದರ ಅಧ್ಯಕ್ಷರಾದ ಶ್ರೀ ಸುರೇಂದ್ರ ಅಡಿಗ ಇವರ ಅಧ್ಯಕ್ಷತೆಯಲ್ಲಿ ಮಂಗಳೂರಿನ ಕಲಾ ಸಾಹಿತಿ ಶ್ರೀ ಎಚ್. ಜನಾರ್ದನ ಹಂದೆಯವರು ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರಾದ ಶ್ರೀ ದಿನೇಶ ಗಾಣಿಗ, ಡಾ. ಕೆ. ಕೃಷ್ಣಮೂರ್ತಿ ಮಯ್ಯ, ಶ್ರೀಮತಿ ಸುಮನಾ ಆರ್. ಹೇರ್ಳೆ ಮತ್ತು ಶ್ರೀಮತಿ ಸವಿತಾ ಶಾಸ್ತ್ರಿ ಇವರುಗಳಿಗೆ ಸನ್ಮಾನ ಮಾಡಲಾಗುವುದು. ಮಧ್ಯಾಹ್ನ ಗಂಟೆ 3-30ಕ್ಕೆ ಶ್ರೀ ಕೆ. ಚಂದ್ರಕಾಂತ ನಾಯರಿ ಮತ್ತು ಬಳಗ ಇವರಿಂದ ಸಂಗೀತ ಸುಧೆ ಹಾಗೂ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಸಂಜೆ…

Read More

ಮಡಿಕೇರಿ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿನಿಧಿಗಳಲ್ಲಿ ಅತ್ಯಂತ ಪ್ರತಿಷ್ಟಿತವಾದ ದತ್ತಿ ‘ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿ’ ಈ ದತ್ತಿಯನ್ನು ಗೌರಮ್ಮರವರ ಪುತ್ರ ಬಿ.ಜಿ. ವಸಂತರವರು ಕೊಡಗಿನ ಮಹಿಳಾ ಲೇಖಕಿಯರು ಪ್ರಕಟ ಪಡಿಸಿದ ಉತ್ತಮ ‌ಕೃತಿಗೆ ಪ್ರಶಸ್ತಿ ನೀಡಿ ಗೌರವಿಸುವ ಸಲುವಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪಿಸಲಾಗಿದೆ. ಇಲ್ಲಿಯವರೆಗೆ 19 ಲೇಖಕಿಯರಿಗೆ ಈ ಪ್ರಶಸ್ತಿ ನೀಡಲಾಗಿದ್ದು, 2023-24ನೇ ಸಾಲಿನ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಿದ್ದು 9 ಲೇಖಕಿಯರು ತಮ್ಮ ಕೃತಿಗಳನ್ನು ಪ್ರಶಸ್ತಿಗಾಗಿ ಪ್ರಸ್ತುತ ಪಡಿಸಿದ್ದರು. ಜಿಲ್ಲೆಯ ಹಿರಿಯ ಮೂರು ಸಾಹಿತಿಗಳನ್ನು ತೀರ್ಪುಗಾರರನ್ನಾಗಿಸಿ ಅವರು ಎಲ್ಲಾ ಪುಸ್ತಕಗಳನ್ನು ಪರಾಮರ್ಶಿಸಿ‌ ಶ್ರೀಮತಿ ಕೆ.ಜಿ. ರಮ್ಯ ಮೂರ್ನಾಡುರವರು ರಚಿಸಿದ ‘ದಾಹಗಳ ಮೈ ಸವರುತ್ತಾ’ ಕವನ ಸಂಕಲನಕ್ಕೆ ಈ ಪ್ರಶಸ್ತಿ ಲಭ್ಯವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್ ತಿಳಿಸಿದ್ದಾರೆ. ಅಧ್ಯಾಪಕಿಯಾಗಿರುವ ಶ್ರೀಮತಿ ಕೆ.ಜಿ ರಮ್ಯಾ ಜಿಲ್ಲೆಯ ಓರ್ವ ಅತ್ಯುತ್ತಮ ಕವಿಯತ್ರಿಯಾಗಿದ್ದಾರೆ. ಹಲವಾರು ಕವಿತೆಗಳನ್ನು ಕವಿಗೋಷ್ಠಿಗಳಲ್ಲಿ ವಾಚಿಸಿ ಸ್ಪರ್ಧೆಗಳಲ್ಲಿ…

Read More

ಬೆಂಗಳೂರು : ನೃತ್ಯ ಕುಟೀರ ಬೆಂಗಳೂರು ನೃತ್ಯ ಸಂಸ್ಥೆಯು ದಿನಾಂಕ 20-03-2204 ಮತ್ತು 21-03-2024ರಂದು ಎರಡು ದಿನಗಳ ಪೂರ್ಣಾವಧಿಯ ಕಾರ್ಯಾಗಾರವನ್ನು ಹಮ್ಮಿಕೊಂಡಿತ್ತು. ಕರಾವಳಿಯ ಯುವ ವಿದ್ವಾಂಸರಾದ ವಿದ್ವಾನ್ ಮಂಜುನಾಥ ಎನ್. ಪುತ್ತೂರು ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಈ ಕಾರ್ಯಾಗಾರದಲ್ಲಿ ವಿವಿಧ ನೃತ್ಯ ಗುರುಗಳ 20 ಮಂದಿ ನೃತ್ಯ ವಿದ್ಯಾರ್ಥಿಗಳು ಮತ್ತು ಕೆಲವು ಮಂದಿ ಗುರುಗಳು ಹಾಜರಿದ್ದರು ಎಂದು ಸಂಸ್ಥೆಯ ಗುರುಗಳಾದ ವಿದುಷಿ ದೀಪಾ ಭಟ್ ಅವರು ತಿಳಿಸಿದ್ದಾರೆ.

Read More

ಕುಂದಾಪುರ : ಮಣಿಪಾಲ ಅಕಾಡೆಮಿ ಆಡಳಿತಾಧಿಕಾರಿಯಾಗಿದ್ದ ಡಾ. ಎಚ್. ಶಾಂತಾ ರಾಮ್ ಹೆಸರಿನಲ್ಲಿ ಭಂಡಾ‌ರ್ಕಾರ್ಸ್ ಕಾಲೇಜು ದತ್ತಿನಿಧಿ ಸ್ಥಾಪಿಸಿ ಪ್ರತಿ ವರ್ಷ ಕನ್ನಡದ ಅತ್ಯುತ್ತಮ ಸೃಜನಶೀಲ ಕೃತಿಗೆ ಪ್ರಶಸ್ತಿ ನೀಡುತ್ತಾ ಬಂದಿದ್ದು, ಈ ವರ್ಷ ಸಣ್ಣ ಕತೆಗಳನ್ನು ಪರಿಗಣಿಸಿದೆ. 2022 ಮತ್ತು 2023ರಲ್ಲಿ ಮೊದಲ ಆವೃತ್ತಿಯಾಗಿ ಪ್ರಕಟಗೊಂಡ ಸಣ್ಣಕಥಾ ಸಂಕಲನಗಳನ್ನು ಪ್ರಶಸ್ತಿಗೆ ಆಹ್ವಾನಿಸಲಾಗಿದೆ. ಆಸಕ್ತರು ಕಥಾ ಸಂಕಲನಗಳ ನಾಲ್ಕು ಪ್ರತಿಗಳನ್ನು ದಿನಾಂಕ 10-05-2024ರೊಳಗೆ ಡಾ. ಎಚ್. ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಸಮಿತಿ, ಭಂಡಾರ್ಕಾರ್ಸ್ ಕಾಲೇಜು, ಕುಂದಾಪುರ-576201 ಈ ವಿಳಾಸಕ್ಕೆ ಕಳುಹಿಸಿಕೊಡಬಹುದು.

Read More

ಪುತ್ತೂರು : ಚಿಗುರೆಲೆ ಸಾಹಿತ್ಯ ಬಳಗದ ದ್ವಿತೀಯ ವಾರ್ಷಿಕೋತ್ಸವವು ದಿನಾಂಕ 14-4-2024ರ ಭಾನುವಾರ ಪುತ್ತೂರಿನ ಅನುರಾಗ ವಠಾರದಲ್ಲಿ ನಡೆಯಿತು. ಇದೇ ಸಂದರ್ಭದಲ್ಲಿ ಪುತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೇತೃತ್ವದಲ್ಲಿ ಅಂಬೇಡ್ಕರ್ ದಿನಾಚರಣೆ, ದಿವ್ಯಾಂಗ ಚೇತನರಿಗೆ ಕವಿಗೋಷ್ಠಿ ಮತ್ತು ಕೃತಿ ಬಿಡುಗಡೆ ಸಮಾರಂಭವು ಸಂಪನ್ನಗೊಂಡಿತು. ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ, ಗಿಡಕ್ಕೆ ನೀರುಣಿಸಿ ಉದ್ಘಾಟಿಸಿದ ಹಿರಿಯ ಸಾಹಿತಿಗಳು ಮತ್ತು ಕರ್ನಾಟಕ ಸಂಘ ಪುತ್ತೂರು ಇದರ ಅಧ್ಯಕ್ಷರಾದ ಬಿ. ಪುರಂದರ ಭಟ್ ಮಾತನಾಡಿ “ಸಾಧನೆಯ ಹಾದಿಯಲ್ಲಿ ಎಲ್ಲರೂ ಏಕಾಂಗಿಯಾಗಿ ಇರುತ್ತಾರೆ, ಮುಂದಕ್ಕೆ ಹೋದಂತೆ ಸಮಾನ ಮನಸ್ಕರು ಸೇರಿಕೊಳ್ಳುತ್ತಾರೆ “ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿವೇಕಾನಂದ ಕಾಲೇಜು ಪುತ್ತೂರು ಇಲ್ಲಿನ ಪರೀಕ್ಷಾಂಗ ಕುಲಸಚಿವರಾದ ಡಾ. ಹೆಚ್. ಜಿ. ಶ್ರೀಧರ್ ಮಾತನಾಡಿ “ಸಾಹಿತ್ಯದಲ್ಲಿ ಪ್ರಾಸ ಮಾತ್ರವಲ್ಲ ಲಯ, ಛಂದಸ್ಸು, ಮಾತ್ರೆ ಹಾಗೂ ಗಣಗಳನ್ನು ಒಳಗೊಂಡು ಕೃತಿ ರಚಿಸಲು ಪ್ರಬುದ್ಧರಾಗಬೇಕಾದರೆ ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಕ ಕಾವ್ಯ ಕಮ್ಮಟಗಳು ಆಯೋಜನೆಯಾಗಬೇಕಿದೆ.” ಎಂದರು. ರಂಗಕರ್ಮಿ ಮತ್ತು ಪತ್ರಕರ್ತರಾದ ಸಂಶುದ್ದೀನ್ ಸಂಪ್ಯ…

Read More

ಬ್ರಹ್ಮಾವರ : ಸಾಂಸ್ಕೃತಿಕ ಸಂಘಟನೆ ಭೂಮಿಕಾ ಹಾರಾಡಿ ಇದರ ಹತ್ತನೇ ವರ್ಷದ ನಾಟಕೋತ್ಸವ `ಬಣ್ಣ’ದ ಉದ್ಘಾಟನಾ ಕಾರ್ಯಕ್ರಮ ದಿನಾಂಕ 09-04-2024ರ ಮಂಗಳವಾರದಂದು ನಡೆಯಿತು. ಬ್ರಹ್ಮಾವರದ ಎಸ್‌. ಎಂ. ಎಸ್. ಶಿಕ್ಷಣ ಸಂಸ್ಥೆಯ ಮಕ್ಕಳ ಮಂಟಪದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿಗೆ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರಿಗೆ ರಂಗ ಗೌರವ ಸಮರ್ಪಣೆ ನಡೆಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ತಲ್ಲೂರು ಶಿವರಾಮ ಶೆಟ್ಟಿ “ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸುವ ಕಾರ್ಯ ಸಮಾಜದ ಕರ್ತವ್ಯವಾಗಬೇಕು. ಈ ಮಣ್ಣಿನ ಜಾನಪದ ಕಲೆಗಳನ್ನು ಬೆಳೆಸುವ ಉದ್ದೇಶದಿಂದಲೇ ಹಿರಿಯ ವಿದ್ವಾಂಸರಾದ ಏರ್ಯ ಲಕ್ಷ್ಮೀನಾರಾಯಣ ಆಳ್ವ, ಎ. ಜಿ. ಕೊಡ್ಗಿ, ಡಾ. ತಿಮ್ಮೇ ಗೌಡ ಅವರ ಕೋರಿಕೆಯ ಮೇರೆಗೆ ಕರ್ನಾಟಕ ಜಾನಪದ ಪರಿಷತ್ತಿನ ಉಡುಪಿ ಜಿಲ್ಲಾಧ್ಯಕ್ಷನಾಗಲು ಒಪ್ಪಿದೆ. ಕಳೆದ 6 ವರ್ಷಗಳಲ್ಲಿ ನಾಡಿನಾದ್ಯಂತ 27ಕ್ಕೂ ಅಧಿಕ ಜಾನಪದ ವೈಭವ ಕಾರ್ಯಕ್ರಮಗಳನ್ನು ನಡೆಸಿ, ಈ ಮೂಲಕ ಜಾನಪದ ಕಲೆಯ ಬೆಳವಣಿಗೆಯ ಜೊತೆಗೆ ಜಾನಪದ ಕಲಾ…

Read More

ಕನ್ನಡ ನವ್ಯ ಸಾಹಿತ್ಯದ ಸಂದರ್ಭದಲ್ಲಿ ಬರೆಯಲಾರಂಭಿಸಿದ ಕೆ.ವಿ. ತಿರುಮಲೇಶ್ ಇದುವರೆಗೆ ಕವಿತೆ, ಕತೆ, ವಿಮರ್ಶೆ ಮತ್ತು ಅನುವಾದ ಕ್ಷೇತ್ರಗಳಲ್ಲಿ ಗಮನಾರ್ಹವಾದ ಸಾಧನೆಯನ್ನು ಮಾಡಿದ್ದಾರೆ. ಇಂಗ್ಲೀಷ್ ಪ್ರಾಧ್ಯಾಪಕರಾಗಿ, ಭಾಷಾವಿಜ್ಞಾನಿಯಾಗಿ ಬಹುಕಾಲ ಕನ್ನಡ ನಾಡಿನ ಹೊರಗಿದ್ದುಕೊಂಡೇ ಬರೆದ ತಿರುಮಲೇಶರು ಮೂಲತಃ ಕಾಸರಗೋಡಿನ ಕಾರಡ್ಕ ಗ್ರಾಮದವರಾಗಿದ್ದು ಈಗ ಹೈದರಾಬಾದಿನಲ್ಲಿ ನೆಲೆಸಿದ್ದಾರೆ. ಅವರ ‘ಅಕ್ಷಯ ಕಾವ್ಯ’ಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿರುವುದು ಕನ್ನಡಿಗರೆಲ್ಲರಿಗೂ ಹೆಮ್ಮೆ ತರುವ ವಿಷಯ. ಕೆ.ವಿ. ತಿರುಮಲೇಶರ ‘ಅಕ್ಷಯ ಕಾವ್ಯ’ವು ಕನ್ನಡ ಸಾಹಿತ್ಯದಲ್ಲೇ ಹೊಸ ಪ್ರಯೋಗ. ಧುಮ್ಮಿಕ್ಕಿ ಹರಿಯುವ ನದಿಯು ತನ್ನ ಸೆಳೆತಕ್ಕೆ ಸಿಕ್ಕಿದ್ದೆಲ್ಲವನ್ನೂ ಸ್ವೀಕರಿಸುವಂತೆ ಈ ಕಾವ್ಯ ನದಿಯು ಹಿರಿಕಿರಿದೆಂಬ ಭೇದವಿಲ್ಲದೆ ಸಕಲ ಸೂಕ್ಷ್ಮಾತಿಸೂಕ್ಷ್ಮ ವಿಚಾರಗಳನ್ನೂ ತನ್ನ ತೆಕ್ಕೆಗೆ ತೆಗೆದುಕೊಂಡು ರಭಸದಿಂದ ಹರಿದಿದೆ. ಎಲ್ಲೂ ನಿಲ್ಲದ ಈ ಪ್ರವಾಹವು ಒಂದರ್ಥದಲ್ಲಿ ಬತ್ತಲಾರದ ಗಂಗೆ. ಹಾಗಾಗಿ ಇದು ‘ಅಕ್ಷಯ ಕಾವ್ಯ’ ಈ ಕಾವ್ಯಕ್ಕೆ ಕೇಂದ್ರ ವಸ್ತು ಇಲ್ಲ. ಕಾವ್ಯವಿಡೀ ಕೇಂದ್ರವೇ. ಕ್ರಮಬದ್ಧತೆ-ಕಟ್ಟುಪಾಡುಗಳಿಗೆ ಒಗ್ಗದ, ಪ್ರತ್ಯೇಕ ಸೂತ್ರ-ಶೀರ್ಷಿಕೆಗಳಿಲ್ಲದ ಈ ಕಾವ್ಯವನ್ನು ಓದಿ ಆಸ್ವಾದಿಸಲು ಯಾವ…

Read More