Subscribe to Updates
Get the latest creative news from FooBar about art, design and business.
Author: roovari
ನೃತ್ಯ, ಸಂಗೀತ, ಸಂಭಾಷಣೆ, ವೇಷಭೂಷಣ, ಪ್ರಸಾಧನ ಮತ್ತು ರಂಗ ತಂತ್ರಗಳನ್ನು ಒಂದು ವಿಶಿಷ್ಟ ಶೈಲಿ ಮತ್ತು ರೂಪದೊಂದಿಗೆ ಸಂಯೋಜಿಸುವ ಯಕ್ಷಗಾನದ ಕಲಾ ಪ್ರಕಾರವು ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆ ಮತ್ತು ಕಾಸರಗೋಡು ಜಿಲ್ಲೆಯ ಶ್ರೀಮಂತ ಕಲೆ. ಇಂತಹ ಶ್ರೀಮಂತ ಕಲೆಯಲ್ಲಿ ಮಿಂಚುತ್ತಿರುವವರು ರೇವತಿ ನವೀನ್. ಏಪ್ರಿಲ್ 09ರಂದು ಪೂವಪ್ಪ ಪೂಜಾರಿ ಹಾಗೂ ಕಮಲಾ ಪೂಜಾರಿ ಇವರ ಮಗಳಾಗಿ ರೇವತಿ ನವೀನ್ ಅವರ ಜನನ. SSLC ಇವರ ವಿದ್ಯಾಭ್ಯಾಸ. ಶಾಲಾ ದಿನಗಳಲ್ಲಿ ತಾಯಿಯ ಜೊತೆಗೆ ಯಕ್ಷಗಾನ ನೋಡಲು ಹೋಗುತ್ತಿದ್ದ ಕಾರಣ ನಾನು ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆಯಾಯಿತು ಎಂದು ಹೇಳುತ್ತಾರೆ ರೇವತಿ ನವೀನ್. ಯಕ್ಷಗಾನ ಗುರುಗಳು:- ಶಂಕರನಾರಾಯಣ ಮೈರ್ಪಾಡಿ, ಗಿರೀಶ್ ನಾವಡ ಕಾಟಿಪಳ್ಳ, ಪೂರ್ಣಿಮಾ ಯತೀಶ್ ರೈ, ವಾಸುದೇವ ರಾವ್ ತಡಂಬೈಲ್ ತಾಳಮದ್ದಳೆ ಗುರುಗಳು. ಮಾಲಿನಿ ದೂತ, ಪಾತ್ರಿ, ದ್ವಾರಪಾಲಕ, ಚಿತ್ರಗುಪ್ತ, ವನಪಾಲಕ, ದೇವೇಂದ್ರ ದೂತ, ಬ್ರಾಹ್ಮಣ, ಶುಕ್ರಾಚಾರ್ಯ, ಧರ್ಮರಾಯ ಇತ್ಯಾದಿ ಪಾತ್ರವನ್ನು ರಂಗದಲ್ಲಿ ನಿರ್ವಹಿಸಿದ್ದಾರೆ. ಯಕ್ಷಗಾನದ ಇಂದಿನ…
ಉಜಿರೆ : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು ಸಂವಾದ ಕಾರ್ಯಕ್ರಮವನ್ನು ದಿನಾಂಕ 18-05-2024ರಂದು ಎಳನೀರು ಗ್ರಾಮದ ಸಮುದಾಯ ಭವನದಲ್ಲಿ ಆಯೋಜಿಸಲಾಗಿತ್ತು. ಈ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಎಸ್.ಡಿ.ಎಂ. ಸ್ವಾಯತ್ತ ಕಾಲೇಜಿನ ಪ್ರಾಂಶುಪಾಲ ಬಿ.ಎ. ಕುಮಾರ ಹೆಗ್ಡೆ “ಸಾಹಿತ್ಯ, ಸಂಗೀತ ಮತ್ತು ಕಲೆಗಳಲ್ಲಿ ಎಲ್ಲರೂ ಆಸಕ್ತಿ ಬೆಳೆಸಿಕೊಳ್ಳಬೇಕು. ಸಾಹಿತ್ಯವು ನಮ್ಮ ಬದುಕನ್ನು ಶ್ರೀಮಂತಗೊಳಿಸುತ್ತದೆ. ಎಲ್ಲರೂ ಓದುವ ಸಂಸ್ಕೃತಿಯನ್ನು ಬೆಳೆಸಿಕೊಂಡಾಗ ಸಾತ್ವಿಕ ಪರಿಸರ ಉಂಟಾಗುತ್ತದೆ” ಎಂದು ಹೇಳಿದರು. ಮೂಡುಬಿದಿರೆ ಜೈನ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಮುನಿರಾಜ ರೆಂಜಾಳ ಉಪನ್ಯಾಸ ನೀಡಿ “ಸಾಹಿತ್ಯಕ್ಕಾಗಿ ಬದುಕನ್ನು ಸಮರ್ಪಿಸಿಕೊಂಡವರ ನೆನಪು ಸದಾ ಶಾಶ್ವತವಾಗಿರುತ್ತದೆ. ಸಾಹಿತ್ಯಕ್ಕೆ ಬದುಕನ್ನು ಹಗುರಗೊಳಿಸುವ ಸಾಮರ್ಥ್ಯವಿದೆ. ಕನ್ನಡ ಸಾಹಿತ್ಯದ ಜಾನಪದ, ಹಳೆಗನ್ನಡ, ನಡುಗನ್ನಡ, ಹೊಸಗನ್ನಡದ ಸಾಹಿತ್ಯ ಪ್ರಕಾರಗಳು ಕಾಲಕಾಲಕ್ಕೆ ಬದುಕಿನ ಶ್ರೀಮಂತಿಕೆಗೆ ಪ್ರೇರಣೆ ಮತ್ತು ಪ್ರೋತ್ಸಾಹ ನೀಡಿವೆ” ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ…
ಮಂಗಳೂರು: ಹರಿಕಥಾ ಪರಿಷತ್ ಮಂಗಳೂರು ಇದರ 14ನೇ ವಾರ್ಷಿಕೋತ್ಸವ ದಿನಾಂಕ 18-05-2024ರಂದು ಮಂಗಳೂರಿನ ಉರ್ವಸ್ಟೋರಿನಲ್ಲಿರುವ ಶ್ರೀ ಮಹಾಗಣಪತಿ ದೇವಸ್ಥಾನದ ಅಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಶುಭಾಶಂಸನೆಗೈದ ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ರಾಜ್ಯಾಧ್ಯಕ್ಷರಾದ ಹರಿಕೃಷ್ಣ ಪುನರೂರು “ಹರಿಕಥಾ ಕಲೆಯನ್ನು ಉಳಿಸುವ ಮತ್ತು ಬೆಳೆಸುವ ನಿಟ್ಟಿನಲ್ಲಿ ಹರಿಕಥಾ ಪರಿಷತ್ತಿನ ಕಾರ್ಯ ಶ್ಲಾಘನೀಯ. ಹರಿಕಥೆಯಂತಹ ಚಟುವಟಿಕೆಗಳಿಗೆ ಸರಕಾರದ ಪ್ರೋತ್ಸಾಹ ಏನೇನೂ ಸಾಲದು. ಸರಕಾರ ಪ್ರೋತ್ಸಾಹಿಸುವ ಕೆಲಸ ಮಾಡಬೇಕು. ಜನತೆಯ ಸಹಕಾರವೂ ಅತ್ಯಗತ್ಯ.” ಎಂದರು. ಅಧ್ಯಕ್ಷತೆ ವಹಿಸಿದ್ದ ಹರಿಕಥಾ ಪರಿಷತ್ತಿನ ಅಧ್ಯಕ್ಷರಾದ ಕೆ. ಮಹಾಬಲ ಶೆಟ್ಟಿ ಮಾತನಾಡಿ “ಈ ಕಲೆಯ ಮೇಲೆ ಮಕ್ಕಳು ಆಸಕ್ತಿ ವಹಿಸುವ ನಿಟ್ಟಿನಲ್ಲಿ ಹೆತ್ತವರು ಪ್ರೇರೇಪಿಸಬೇಕು.” ಎಂದರು. ಉರ್ವಸ್ಟೋರ್ ಶ್ರೀಮಹಾಗಣಪತಿ ದೇವಸ್ಥಾನದ ಅಧ್ಯಕ್ಷ ಸುರೇಂದ್ರ ರಾವ್ ಕಾರ್ಯಕ್ರಮ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಹಿರಿಯ ಹರಿದಾಸ ಪ್ರವಚನಕಾರರಾದ ಯಜೇಶ್ ಹೊಸಬೆಟ್ಟು, ಕಲಾಪೋಷಕ ರಘುರಾಮ್ ಭಟ್ ಕಣ್ವತೀರ್ಥ, ಹಾರ್ಮೋನಿಯಂ ಹಾಗೂ ಕೀಬೋರ್ಡ್ ವಾದಕರಾದ ಸತೀಶ್ ಸುರತ್ಕಲ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಮುಖರಾದ ಅಧ್ಯಕ್ಷ ಎ. ಸಿ.…
ಪುತ್ತೂರು : ಬೆಂಗಳೂರಿನ ರಾಸಾ ಕನ್ನಡ ಮತ್ತು ಕಲಾ ಸಂಸ್ಕೃತಿ ಚಾರಿಟೇಬಲ್ ಟ್ರಸ್ಟ್ (ರಿ.) ಮತ್ತು ರಾಸಾ ಪಬ್ಲಿಕೇಷನ್ಸ್ ವತಿಯಿಂದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೈಸೂರು ಇದರ ಸಹಯೋಗದಲ್ಲಿ ‘ಕನ್ನಡ ನುಡಿ ಸಂಭ್ರಮ’ ಕಾರ್ಯಕ್ರಮವನ್ನು ದಿನಾಂಕ 25-05-2024ರಂದು ಬೆಳಿಗ್ಗೆ 10-00 ಗಂಟೆಗೆ ಮೈಸೂರಿನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಭವನದಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮ, ಸಾಹಿತ್ಯ ಕವಿಗೋಷ್ಠಿ ಮತ್ತು ರಾಜ್ಯದ ವಿವಿಧ ಕ್ಷೇತ್ರಗಳ ಸೇವಾ ಸಾಧಕರಿಗೆ ‘ಕರ್ನಾಟಕ ಸೇವಾರತ್ನ ಪ್ರಶಸ್ತಿ-2024’ ಪ್ರದಾನ ನಡೆಯಲಿರುವುದು.
ಹೆಬ್ರಿ : ಅಂಬಾತನಯ ಮುದ್ರಾಡಿಯವರ ಪತ್ನಿ, ಮಕ್ಕಳು ಮತ್ತು ಕುಟುಂಬಿಕರು ಇವರ ವತಿಯಿಂದ ಸಂಸ್ಮರಣೆ, ಪ್ರಶಸ್ತಿ ಪ್ರದಾನ ಮತ್ತು ತಾಳಮದ್ದಳೆ ಕಾರ್ಯಕ್ರಮವು ದಿನಾಂಕ 25-05-2024ರಂದು ಅಪರಾಹ್ನ 3-00 ಗಂಟೆಗೆ ಮುದ್ರಾಡಿ ಶಾಲಾ ವಠಾರದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಂಗಳೂರಿನ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿಯವರು ವಹಿಸಲಿದ್ದು, ಉಡುಪಿಯ ಯಕ್ಷಗಾನ ಕಲಾರಂಗ ಇದರ ಕಾರ್ಯದರ್ಶಿಯಾದ ಶ್ರೀ ಮುರಳಿ ಕಡೆಕಾರ್ ಇವರು ಪ್ರಸಿದ್ಧ ಸಾಹಿತಿ, ಹರಿದಾಸ, ಅರ್ಥಧಾರಿ, ಪ್ರವಚನಕಾರ ಮತ್ತು ಚಿಂತಕರಾಗಿದ್ದ ಅಂಬಾತನಯ ಮುದ್ರಾಡಿಯವರ ಸಂಸ್ಮರಣೆ ಮತ್ತು ಅಭಿನಂದನಾ ನುಡಿಗಳನ್ನಾಡಲಿರುವರು. ಹಿರಿಯ ಸ್ತ್ರೀ ವೇಷಧಾರಿ ಡಾ. ಕೋಳ್ಯೂರು ರಾಮಚಂದ್ರ ರಾವ್ ಇವರಿಗೆ ‘ಅಂಬಾತನಯ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಇದೇ ಸಂದರ್ಭದಲ್ಲಿ ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ ‘ರುಕ್ಮಾಂಗದ ಚರಿತ್ರೆ’ ಎಂಬ ಪ್ರಸಂಗದ ತಾಳಮದ್ದಳೆ ಪ್ರಸ್ತುತಗೊಳ್ಳಲಿದೆ.
ಉಡುಪಿ : ತಲ್ಲೂರು ಕನಕಾ-ಅಣ್ಣಯ್ಯ ಶೆಟ್ಟಿ ಸ್ಮರಣಾರ್ಥ ‘ಯಕ್ಷಗಾನ ಕಲಾರಂಗ’ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 19-05-2024ರಂದು ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಗುರುರಾಜ ಮಾರ್ಪಳ್ಳಿ “ನನ್ನ ಮನೆಯ ಪರಿಸ್ಥಿತಿ ಮತ್ತು ಕಲಾಸಕ್ತಿ ನಾನು ಸದಾ ಕಲೆಯಲ್ಲಿ ಕ್ರಿಯಾಶೀಲನಾಗಲು ಕಾರಣವಾಯಿತು. ನಾನು ಒಂದು ಕಡೆ ನೆಲೆ ನಿಲ್ಲದೆ ಕಲೆಗಾಗಿ ಅಲೆದಾಡಿದೆ. ಇದರಿಂದ ಹಲವು ಶ್ರೇಷ್ಠ ಕಲಾ ಸಾಧಕರ ಒಡನಾಟದ ಭಾಗ್ಯ ಲಭಿಸಿತು. ಹೊಸತನ್ನು ಅನ್ವೇಷಿಸುವ ನನ್ನ ಸ್ವಭಾವಕ್ಕೆ ಅವರೆಲ್ಲ ತಮ್ಮ ಅನುಭವ ಧಾರೆ ಎರೆದರು. ಕಲಾ ಕ್ಷೇತ್ರದ ಅನ್ಯಾನ್ಯ ಪ್ರಕಾರಗಳಲ್ಲಿ ಪ್ರಯೋಗ ನಡೆಸುತ್ತಾ ಸಾಗಿದೆ.” ಎಂದರು. ಪ್ರಶಸ್ತಿಯ ಪ್ರಾಯೋಜಕರು ಹಾಗೂ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದಲ್ಲಿ ಪ್ರೊ. ಎಂ. ಎಲ್. ಸಾಮಗರು ಅಭಿನಂದನಾ ಭಾಷಣ ಮಾಡಿದರು. ಪ್ರಧಾನ ಅಭ್ಯಾಗತರಾಗಿದ್ದ ಶ್ರೀ ಶ್ರೀಧರ ಡಿ. ಎಸ್. ಮಾರ್ಪಳ್ಳಿಯವರೊಂದಿಗಿನ ಕಲಾ ಸಂಬಂಧಿ ಒಡನಾಟವನ್ನು…
ಮೂಲ್ಕಿ : ಮೂಲ್ಕಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಮೂಲ್ಕಿ ಕೊಳಚಿಕಂಬಳ ಸಮುದ್ರ ಬದಿಯ ಮಂತ್ರ ಸರ್ಫ್ ಕ್ಲಬ್ ಆವರಣದಲ್ಲಿ ಕೋಟ ಶ್ರೀನಿವಾಸ ಪೂಜಾರಿ ಕಂಡ ಸಾಹಿತ್ಯ ಮತ್ತು ಕನ್ನಡ ನೋಟ ಕಾರ್ಯಕ್ರಮವು ದಿನಾಂಕ 19-05-2024ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ‘ಸಾಹಿತ್ಯ ಉಪನ್ಯಾಸ’ ನೀಡಿದ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ “ಕುವೆಂಪುರವರ ಹೊರತಾಗಿ ಇತರ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡ ಸಾಹಿತಿಗಳ ಊರುಗಳಲ್ಲಿ ಇರುವ ಸ್ಮಾರಕಗಳು ಇನ್ನಷ್ಟು ಅಭಿವೃದ್ಧಿ ಆಗಬೇಕಾಗಿದೆ. ಕೋಟದಲ್ಲಿ ಶಿವರಾಮ ಕಾರಂತರ ನೆನಪಿನಲ್ಲಿ ಸುಮಾರು ಆರು ಕೋಟಿ ರೂಪಾಯಿ ಖರ್ಚು ಮಾಡಿ, ಥೀಮ್ ಪಾರ್ಕ್ ನಿರ್ಮಿಸಿದ್ದು ಇದೇ ಉದ್ದೇಶದಿಂದ. ಇತರ ಸಾಹಿತಿಗಳ ನೆನಪಿನಲ್ಲಿ ಇದೇ ರೀತಿಯ ಸ್ಮಾರಕಗಳು, ಕೃತಿಗಳ ಪ್ರಕಟನೆ, ಸೂಕ್ತ ಗೌರವ ಕೊಡುವ ಕೆಲಸ ಆಗಬೇಕಾಗಿದೆ. ಕನ್ನಡದ ಹೋರಾಟದ ಬಗ್ಗೆ ಸಮಾಜ ಚಿಂತನೆ ಮಾಡಬೇಕಾಗಿದೆ. ಸಿದ್ದಲಿಂಗಯ್ಯ ಸಾಹಿತ್ಯದ ಮೂಲಕ ದಲಿತ ಚಳುವಳಿಯ ಶಕ್ತಿಯ ಬೆಳೆ ತೆಗೆಯುತ್ತಿದ್ದರು. ರೈತ ಚಳುವಳಿ ರುದ್ರಪ್ಪ ಅವರಂತಹವರ…
ಬಂಟ್ವಾಳ : ಲಯನ್ಸ್ ಸೇವಾ ಮಂದಿರ ಬಿ.ಸಿ.ರೋಡಿನಲ್ಲಿ ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು ದ.ಕ. ಜಿಲ್ಲಾ ಬಂಟ್ವಾಳ ತಾಲೂಕು ಘಟಕದಿಂದ ಪತ್ತನಾಜೆ ಜಾನಪದ ಹಬ್ಬ ಆಚರಣೆಯ ಅಂಗವಾಗಿ ಏರ್ಪಡಿಸಲಾದ ಆಹಾರ ಮೇಳ, ವಸ್ತುಪ್ರದರ್ಶನ, ಕ್ರೀಡಾಕೂಟ, ಸಾಂಸ್ಕೃತಿಕ ಮೇಳವು ದಿನಾಂಕ 19-05-2024ರಂದು ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಡಾ. ಜೋಗತಿ ಮಂಜಮ್ಮ ಮಾತನಾಡಿ “ಮಕ್ಕಳನ್ನು ಕಡ್ಡಾಯವಾಗಿ ಕನ್ನಡ ಶಾಲೆಯಲ್ಲಿ ಹತ್ತನೆ ತರಗತಿವರೆಗೆ ಓದಿಸಿದರೆ ನಮ್ಮ ಭಾಷೆ, ಸಂಸ್ಕಾರ, ಸಂಸ್ಕೃತಿ ಉಳಿಯುತ್ತದೆ. ಮಕ್ಕಳಲ್ಲಿ ಓದುವ ಹವ್ಯಾಸವನ್ನು ಬೆಳೆಸಿದರೆ ಅವರಿಗೆ ಬೇರೆ ಕೋಚಿಂಗ್ ಅಗತ್ಯ ವಿಲ್ಲ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸಮಾಜದಲ್ಲಿ ಸಮಾನತೆಯಿಂದ ಬದುಕುವ ಅವಕಾಶ ಮಾಡಿಕೊಡಬೇಕು. ಶಾಲಾ ಕಾಲೇಜುಗಳಲ್ಲಿ ಜಾನಪದ ಸಂಸ್ಕೃತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಮೂಲ ಹಳ್ಳಿಯ ಸಂಸ್ಕೃತಿ ಉಳಿಸುವುದು ಎಲ್ಲರ ಜವಾಬ್ದಾರಿಯಾಗಿದೆ. ಜಾನಪದ ಕಲೆಯ ಮೂಲಕ ಪದ್ಮಶ್ರೀ ಪ್ರಶಸ್ತಿ ಪಡೆದ ಮೇಲೆ ಎಲ್ಲರೂ ಗೌರವಿಸಿದ್ದಾರೆ. ತೃತೀಯ ಲಿಂಗಿಗಳಿಗೆ ಉತ್ತಮ ಶಿಕ್ಷಣ ನೀಡಿ ಸ್ವಾಭಿಮಾನದಿಂದ ಬದುಕಲು ಅವಕಾಶ…
ಮಂಗಳೂರು : ನಾಟ್ಯಾಲಯ ಉರ್ವ (ರಿ.) ಮಂಗಳೂರು ಇದರ ವತಿಯಿಂದ ಕರ್ನಾಟಕ ಸರಕಾರ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾದ ಭರತನಾಟ್ಯ ವಿದ್ವತ್ ಪಠ್ಯ ಪದ್ಧತಿಯಲ್ಲಿ ಪ್ರಧಾನವಾಗಿ ಬರುವ ನಾಯಕಾ – ನಾಯಿಕಾ ಭಾವ ಹಾಗೂ ರಸಭಾವ ವಿಷಯದ ಎರಡು ದಿನಗಳ ಕಾರ್ಯಾಗಾರವು ನಾಟ್ಯಾಲಯ ಸಭಾಂಗಣದಲ್ಲಿ ದಿನಾಂಕ 18-05-2024 ಮತ್ತು 19-05-2024ರಂದು ನಡೆಯಿತು. ಈ ಕಾರ್ಯಾಗಾರವನ್ನು ಸಂಪನ್ಮೂಲ ವ್ಯಕಿಯಾಗಿರುವ ಹುಬ್ಬಳ್ಳಿಯ ಡಾ. ಸಹನಾ ಪ್ರದೀಪ ಭಟ್ ಇವರು ಉದ್ಘಾಟಿಸಿದರು. ಸಂಯೋಜಕಿ ಕಲಾಶ್ರೀ ಗುರು ವಿದುಷಿ ಕಮಲಾ ಭಟ್, ವಿದುಷಿ ಪ್ರತಿಮಾ ಶ್ರೀಧರ್, ವಿದುಷಿ ವಿನಯ ರಾವ್, ಸುನೀತಾ ಉಪಾಧ್ಯಾಯ ಬಪ್ಪನಾಡು, ಕಲಾ ಸಂಘಟಕ ಶ್ರೀಧರ ಹೊಳ್ಳ ಮೊದಲಾದವರು ಉಪಸ್ಥಿತರಿದ್ದರು. ನಗರದ ಸುಮಾರು 35 ವಿದ್ಯಾರ್ಥಿಗಳು ಈ ಕಾರ್ಯಾಗಾರದ ಸದುಪಯೋಗವನ್ನು ಪಡೆದುಕೊಂಡರು.
ಮಂಗಳೂರು : ಸಂಗೀತ ಭಾರತಿ ಪ್ರತಿಷ್ಠಾನ ಮಂಗಳೂರು ಆಶ್ರಯದಲ್ಲಿ ‘ಸ್ವರ ಸಂಧ್ಯಾ’ ಶಾಸ್ತ್ರೀಯ ಹಿಂದೂಸ್ತಾನೀ ಸಂಗೀತ ಜುಗಲ್ ಬಂದಿ ಕಾರ್ಯಕ್ರಮವು ದಿನಾಂಕ 19-05-2024ರ ಭಾನುವಾರದಂದು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಫಾ. ಎಲ್. ಎಫ್. ರಸ್ಕಿನಾ ಸಭಾಂಗಣದಲ್ಲಿ ನಡೆಯಿತು. ಪೂರ್ವಾರ್ಧದಲ್ಲಿ ರಾಷ್ಟ್ರಮಟ್ಟದ ಖ್ಯಾತಿಯ ಕಲಾವಿದರಾದ ಹೊಸದಿಲ್ಲಿಯ ಖ್ಯಾತ ಪಿಟೀಲು ವಾದಕ ಪಂಡಿತ್ ಸಂತೋಷ್ ಕುಮಾರ್ ನಹರ್ ಅವರಿಂದ ವಯೋಲಿನ್ ಕಾರ್ಯಕ್ರಮ ನಡೆದರೆ, ಉತ್ತರಾರ್ಧದಲ್ಲಿ ಶಿವಮೊಗ್ಗದ ನೌಶಾದ್ ಹರ್ಲಾಪುರ್ ಮತ್ತು ನಿಶಾದ್ ಹರ್ಲಾಪುರ್ ಇವರಿಂದ ಹಿಂದೂಸ್ತಾನೀ ಶಾಸ್ತ್ರೀಯ ಸಂಗೀತ ಜುಗಲ್ ಬಂದಿ ಗಾಯನ ಕಾರ್ಯಕ್ರಮ ನಡೆಯಿತು. ಇವರಿಗೆ ಹಿಮ್ಮೇಳದಲ್ಲಿ ರಾಜೇಂದ್ರ ನಾಕೋಡ್, ಶ್ರೀಧರ್ ಭಟ್, ಗುರುರಾಜ್ ಅಡುಕಳ ಸಾಥ್ ನೀಡಿದರು.