Author: roovari

ಮಂಗಳೂರು : ಕಲಾಭಿ (ರಿ) ಮಂಗಳೂರು ಹಾಗೂ ಕೆನರಾ ಕಲ್ಚರಲ್ ಅಕಾಡೆಮಿಯು ಜಂಟಿಯಾಗಿ ಆಯೋಜಿಸಿರುವ ‘ಅರಳು 2024’ರ ಕಾರ್ಯಾಗಾರದ ಉದ್ಘಾಟನಾ ಕಾರ್ಯಕ್ರಮವು ದಿನಾಂಕ 11-04-2024ರಂದು ಮಂಗಳೂರಿನ ಕೆನರಾ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಮಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಶ್ರೀ ರಾಜೇಶ್, ಕಲಾಭಿ ಸಂಸ್ಥೆಯ ಅಧ್ಯಕ್ಷರಾಗಿರುವ ಸುರೇಶ್ ನಾಯ್ಕ್, ಅರೆಹೊಳೆ ಪ್ರತಿಷ್ಠಾನದ ಅಧ್ಯಕ್ಷರಾಗಿರುವ ಅರೆಹೊಳೆ ಸದಾಶಿವ ರಾವ್, ಕೆನರಾ ಹೈಸ್ಕೂಲ್ ಅಸೋಸಿಯೇಷನ್ನಿನ ಪಿ. ಆರ್ . ಒ. ಉಜ್ವಲ್ ಮಲ್ಯ ಹಾಗೂ ಕೆನರಾ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಕವಿತಾ ಮೌರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಲಾಭಿ ಸಂಸ್ಥೆಯ ಸ್ಥಾಪಕ ಹಾಗೂ ಕೆನರಾ ಕಲ್ಚರಲ್ ಅಕಾಡೆಮಿಯ ಸಂಯೋಜಕರಾದ ಉಜ್ವಲ್ ಯು.ವಿ. ಸಂಸ್ಥೆಯ ಪರಿಚಯವನ್ನು ಮಾಡಿದರು. ‘ಅರಳು 2024’ ಕಾರ್ಯಗಾರದ ನಿರ್ದೇಶಕರಾಗಿರುವ ಭುವನ್ ಮಣಿಪಾಲ್ ವಂದಿಸಿದರು. 10 ದಿನಗಳ ಈ ಕಾರ್ಯಾಗಾರದಲ್ಲಿ ನಿರ್ದೇಶಕರುಗಳಾಗಿ ರಾಜು…

Read More

ಉಡುಪಿ : ಭಾವನಾ ಪೌಂಡೇಶನ್ (ರಿ.) ಹಾವಂಜೆ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಇವರ ವತಿಯಿಂದ ಗ್ರಾಮೀಣ ಭಾಗದಲ್ಲಿ ಸಂಯೋಜಿಸುತ್ತಿರುವ ‘ಬಾಲ ಲೀಲಾ’ ಚಿಣ್ಣರ ಬೇಸಿಗೆ ಶಿಬಿರವು ಶ್ರೀ ಮಹಾಲಿಂಗೇಶ್ವರ ದೇವಳದ ವಠಾರದಲ್ಲಿ ದಿನಾಂಕ 11-04-2024ರಂದು ಪ್ರಾರಂಭಗೊಂಡಿತು. ಈ ಶಿಬಿರವನ್ನು ಉದ್ಘಾಟನೆಗೊಳಿಸಿದ ಮಣಿಪಾಲದ ವೈದ್ಯೆ ಡಾ. ಮಾಧುರಿ ಭಟ್‌ ಇವರು “ಸ್ವಚ್ಛಂದದ ಪರಿಸರದಲ್ಲಿ ಭಾವನಾ ಫೌಂಡೇಶನ್ ಸಂಘಟಿಸುತ್ತಿರುವ ಬೇಸಿಗೆ ಶಿಬಿರವು ಬಹು ಮಹತ್ವಪೂರ್ಣವಾದುದು ಮತ್ತು ಇಂದಿನ ಆಧುನಿಕ ಜೀವನದ ನಡುವೆ ಸಾಂಪ್ರದಾಯಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ ಪ್ರಯತ್ನ ನಿಜಕ್ಕೂ ಶ್ಲಾಘನೀಯ” ಎಂಬುದಾಗಿ ಅಭಿಪ್ರಾಯವಿತ್ತರು. ಮುಖ್ಯ ಅತಿಥಿಗಳಾಗಿ ಅಡ್ವೋಕೇಟ್ ಮುಗ್ಗೇರಿ ನಾಗರಾಜ ಭಟ್, ಭಾವನಾ ಫೌಂಡೇಶನ್‌ನ ಸ್ಥಾಪಕಾಧ್ಯಕ್ಷರಾದ ಯಕ್ಷಗುರು ಹಾವಂಜೆ ಮಂಜುನಾಥ ರಾವ್ ಹಾಗೂ ಶಿಬಿರ ಸಂಯೋಜಕರಾದ ಡಾ. ಜನಾರ್ದನ ಹಾವಂಜೆ, ವಿಶುರಾವ್ ಹಾವಂಜೆ ಹಾಗೂ ಉದಯ್‌ ಕೋಟ್ಯಾನ್ ಉಪಸ್ಥಿತರಿದ್ದರು. ಈ ಬೇಸಿಗೆ ಶಿಬಿರವು ನಾಲ್ಕು ದಿನಗಳ ಕಾಲ ನಡೆಯಲಿದ್ದು ಮಕ್ಕಳಲ್ಲಿ ಸೃಜನಶೀಲತೆಯನ್ನು ಬೆಳೆಸುವ ನಿಟ್ಟಿನಲ್ಲಿ ರೂಪಿಸಲಾಗಿದೆ. ಬಿಹಾರದ ಜನಪದ ಕಲೆಗಳ…

Read More

ಉಡುಪಿ : ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಸಹಕಾರದಲ್ಲಿ ಸುನಾಗ್ ಆಸ್ಪತ್ರೆಯ ಆಶ್ರಯದಲ್ಲಿ ‘ಸುನಾಗ್ ನವ್ಯಹಿತ ಬೇಸಿಗೆ ಶಿಬಿರ’ವು ಉಡುಪಿಯ ಕುಂಜಿಬೆಟ್ಟುವಿನಲ್ಲಿರುವ ಐಡನ್ ಸ್ಟೆ ಹೋಂ ನಲ್ಲಿ ದಿನಾಂಕ 11-04-2024ರ ಗುರುವಾರದಂದು ಉದ್ಘಾಟನೆಗೊಂಡಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಅಧ್ಯಕ್ಷರಾದ ರವಿರಾಜ್ ಎಚ್.ಪಿ ಮಾತನಾಡಿ “ಎಳೆವೆಯಲ್ಲಿಯೇ ವಿದ್ಯಾರ್ಥಿಗಳು ಪಾಠದೊಂದಿಗೆ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಿ ಕೊಳ್ಳಬೇಕು. ಕನ್ನಡ ಸಾಹಿತ್ಯ ಪರಿಷತ್ತು ಮಕ್ಕಳ ಶಿಬಿರಗಳಿಗೆ ಸಹಕಾರವನ್ನು ನೀಡುತ್ತಿದ್ದು, ಈ ಶಿಬಿರದ ಮೂಲಕ ಕನ್ನಡ ನಾಡು-ನುಡಿ ಸಂಸ್ಕೃತಿಯ ಅರಿವನ್ನು ಮಕ್ಕಳಿಗೆ ತಿಳಿಸುವ ಸಲುವಾಗಿ ನಾಡಿನ ಹಿರಿಯ ಸಂಪನ್ಮೂಲ ವ್ಯಕ್ತಿಗಳು ಆಗಮಿಸುತ್ತಿದ್ದು ಇದು ಒಂದು ಪರಿಪೂರ್ಣ ಶಿಬಿರವಾಗುತ್ತದೆ. ಆಟದ ಮೂಲಕ ಶಿಕ್ಷಣವನ್ನು ಈ ಶಿಬಿರದಲ್ಲಿ ಕಲಿಸಲಾಗುವುದು.” ಎಂದರು. ಶಿಬಿರವನ್ನು ನಾಡಿನ ಹೆಸರಾಂತ ಜಾದುಗಾರ ಪ್ರೊ. ಶಂಕರ್ ಉದ್ಘಾಟಿಸಿದರು. ಸಭಾ ಕಾರ್ಯಕ್ರಮದಲ್ಲಿ ಪರಿಸರ ಪ್ರೇಮಿ ತೇಜಸ್ವಿ ಆಚಾರ್ಯ, ಪ್ರಸಿದ್ಧ ಜಾದೂಗಾರ ಜೂ. ಶಂಕರ್ ಉಪಸ್ಥಿತರಿದ್ದರು. ಶಿಬಿರದ ನಿರ್ದೇಶಕ ಡಾ.…

Read More

ಕಟೀಲು : ಕಟೀಲು ದೇವಳ ಪ್ರಥಮ ದರ್ಜೆ ಕಾಲೇಜಿನಲ್ಲಿ ಭ್ರಾಮರೀ ಯಕ್ಷ ಝೇಂಕಾರ-2024 ಆಂತರ್ ಕಾಲೇಜು ತೆಂಕುತಿಟ್ಟು ಯಕ್ಷಗಾನ ಸ್ಪರ್ಧೆ ಸಮಾರೋಪ ಸಮಾರಂಭ ದಿನಾಂಕ 5-04-2024 ರಂದು ನಡೆಯಿತು. ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮೂಡಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ “ಭಾರತದಲ್ಲಿನ ಕೆಲವು ಜಾನಪದ ಕಲೆಗಳು ನಶಸಿ ಹೋಗುವತ್ತಿದ್ದು 500 ವರ್ಷಕ್ಕೂ ಮಿಕ್ಕಿ ಇತಿಹಾಸವಿರುವ ಯಕ್ಷಗಾನ ಕಲೆಯು ಹೊಸ ಹೊಸ ಕಲ್ಪನೆಯೊಂದಿಗೆ ಮೂಲ ಚೌಕಟ್ಟಿಗೆ ದಕ್ಕೆಯಾಗದಂತೆ ಬೆಳೆದಿದೆ.” ಎಂದು ಹೇಳಿದರು. ಹರಿನಾರಾಯಣ ದಾಸ ಆಸ್ರಣ್ಣ ಸಮಾರೋಪ ಭಾಷಣಗೈದರು. ದೇವಸ್ಥಾನದ ಆಡಳಿತ ಮಂಡಳಿಯ ಪ್ರತಿನಿಧಿ ಬಿಪಿನ್ ಚಂದ್ರ ಶೆಟ್ಟಿ ಕೊಡೆತ್ತೂರು ಗುತ್ತು, ಉದ್ಯಮಿ ಯಾದವ ಕೋಟ್ಯಾನ್ ಪೆರ್ಮುದೆ, ಪ್ರವೀಣ್ ಭಂಡಾರಿ ಕೊಡೆತ್ತೂರು ಗುತ್ತು, ಕಾಲೇಜಿನ ಹಿರಿಯ ಹಳೆ ವಿದ್ಯಾರ್ಥಿ ಗಂಗಾಧರ ದೇವಾಡಿಗ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಕಿರಣ್ ಕುಮಾರ್ ಶೆಟ್ಟಿ, ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೆ. ದೀಪಕ್, ಕಾರ್ಯದರ್ಶಿ ಬಿ. ನಿಶಾ, ಪುಷ್ಪರಾಜ ಜೆ.…

Read More

ಕುಂದಾಪುರ : ಯಕ್ಷಗಾನ ಕಲಾ ಕೇಂದ್ರ ಹಂಗಾರಕಟ್ಟೆ ಐರೋಡಿ ಇವರ ವತಿಯಿಂದ ‘ನಲಿ ಕುಣಿ -2024’ ಯಕ್ಷಗಾನ ಅಭಿನಯ ಮತ್ತು ನೃತ್ಯ ತರಬೇತಿ ಶಿಬಿರವನ್ನು ದಿನಾಂಕ 13-04-2024ರಿಂದ 28-04-2024ರವರೆಗೆ ಹಂಗಾರಕಟ್ಟೆ ಐರೋಡಿಯ ಯಕ್ಷಗಾನ ಕಲಾ ಕೇಂದ್ರದಲ್ಲಿ ಆಯೋಜಿಸಲಾಗಿದೆ. ಈ ಶಿಬಿರದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲಾ ಕೇಂದ್ರದ ಅಧ್ಯಕ್ಷರಾದ ಆನಂದ ಸಿ. ಕುಂದರ್ ವಹಿಸಲಿದ್ದು, ಶಿಬಿರದ ಉದ್ಘಾಟನೆಯನ್ನು ಕುಂದಾಪುರದ ಉದ್ಯಮಿಗಳಾದ ಕೆ.ಆರ್. ನಾಯಿಕ್  ನೆರವೇರಿಸಲಿದ್ದಾರೆ. ಭಾರತ್ ಸಂಚಾರ್ ನಿಗಮದ ನಿವೃತ್ತ ಸಹಾಯಕ ಮಹಾ ಪ್ರಭಂದಕರಾದ ಸತ್ಯನಾರಾಯಣ ಪುರಾಣಿಕ್, ಪ್ರಾಚಾರ್ಯ ಮತ್ತು ಶಿಬಿರದ ನಿರ್ದೇಶಕರಾದ ಸದಾನಂದ ಐತಾಳ ಉಪಸ್ಥಿತರಿರುತ್ತಾರೆ. ಸುಮಾರು 80 ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದು, ಶಿಬಿರದ ಸಹ ಶಿಕ್ಷಕರಾಗಿ ಗಣೇಶ ಚೇರ್ಕಾಡಿ ಮತ್ತು ಕೇಶವ ಆಚಾರ್ ಭಾಗವಹಿಸಲಿದ್ದಾರೆ.

Read More

ಬೆಂಗಳೂರು : ಶ್ರೀ ಮುರಳೀಧರ ಸಂಗೀತ ನೃತ್ಯ ಮಹಾವಿದ್ಯಾಲಯ ಹಾಗೂ ಮೋಹನ ತರಂಗಿಣಿ ಸಂಗೀತ ಸಭಾ ಇದರ ‘76ನೇ ವಾರ್ಷಿಕ ಸಂಗೀತ ಸಂಭ್ರಮ ಹಾಗೂ ಶರಣ ನುಲಿಯ ಚಂದಯ್ಯ ಡಾ. ಬಿ.ಆರ್. ಅಂಬೇಡ್ಕರ್ ಬಸವ ಜಯಂತಿ ಸಂಗೀತೋತ್ಸವವು ದಿನಾಂಕ 14-04-2024ರಂದು ಮಧ್ಯಾಹ್ನ 3-00 ಗಂಟೆಗೆ ನಾದಬ್ರಹ್ಮ ಶಾರದ ಮಂದಿರದಲ್ಲಿ ನಡೆಯಲಿದೆ. ಇದೇ ಸಂದರ್ಭದಲ್ಲಿ ಕರ್ನಾಟಕ ಕಲಾಶ್ರೀ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೀರ್ತಿಶೇಷ ವಿದ್ವಾನ್ ಗಾಮದ ಶ್ರೀ ಕೆ. ಮಂಜಪ್ಪನವರ ಸ್ಮರಣಾರ್ಥ ಕರ್ನಾಟಕ ಸಂಗೀತ ಮೃದಂಗ ಕ್ಷೇತ್ರದ ಸಾಧನೆಗಾಗಿ ವಿದ್ವಾನ್ ಶ್ರೀ ಹೆಚ್.ಎಲ್. ಗೋಪಾಲಕೃಷ್ಣ, ಪಿಟೀಲು ಕ್ಷೇತ್ರದ ಸಾಧನೆಗಾಗಿ ವಿದ್ವಾನ್ ಶ್ರೀ ಜಿ.ಆರ್. ರಾಮಕೃಷ್ಣಯ್ಯ, ಗಾಯನ ಕ್ಷೇತ್ರದ ಸಾಧನೆಗಾಗಿ ವಿದ್ವಾನ್ ಶ್ರೀ ಚಿಂತಲಪಲ್ಲಿ ವಿ. ಶ್ರೀನಿವಾಸ ಮತ್ತು ವಿದ್ವಾನ್ ಶ್ರೀ ಬಿ.ಇ. ಕಮಲ ಕುಮಾರ, ಪಿಟೀಲು ಕ್ಷೇತ್ರದ ಸಾಧನೆಗಾಗಿ ವಿದ್ವಾನ್ ಶ್ರೀ ಮೈಸೂರು ಬಿ. ಸಂಜೀವ ಕುಮಾರ, ಮೃದಂಗ ಕ್ಷೇತ್ರದ ಸಾಧನೆಗಾಗಿ ವಿದ್ವಾನ್ ಶ್ರೀ ಎಂ.ಜಿ. ನರೇಶ ಕುಮಾರ ಮತ್ತು ಪಿಟೀಲು ಕ್ಷೇತ್ರದ…

Read More

ಸುರತ್ಕಲ್ : ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ.), ನಾಗರಿಕ ಸಲಹಾ ಸಮಿತಿ (ರಿ.) ಸುರತ್ಕಲ್ ಮತ್ತು ಆರ್ಟ್ ಆಫ್ ಲಿವಿಂಗ್ ಸುರತ್ಕಲ್ ಈ ಸಂಸ್ಥೆಗಳು ಜಂಟಿಯಾಗಿ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಪ್ರಸ್ತುತ ಪಡಿಸುವ ‘ರಾಮ ಭಕ್ತಿ ಸಾಮ್ರಾಜ್ಯ’ ರಾಮ ನವಮಿ ಪ್ರಯುಕ್ತ ‘ಸಂಗೀತ ಕಚೇರಿ, ಭರತನಾಟ್ಯ ಮತ್ತು ಉಪನ್ಯಾಸ’ ಕಾರ್ಯಕ್ರಮಗಳು ಸುರತ್ಕಲ್ಲಿನ ಕೆನರಾ ಬ್ಯಾಂಕ್ ಕ್ರಾಸ್ ರೋಡಿನಲ್ಲಿರುವ ‘ಅನುಪಲ್ಲವಿ’ಯಲ್ಲಿ ದಿನಾಂಕ 17-04-2024ರಂದು ಸಂಜೆ 4-00 ಗಂಟೆಗೆ ನಡೆಯಲಿದೆ.

Read More

ಧಾರವಾಡ : ವಿದ್ಯಾಕಾಶಿ – ಸಾಂಸ್ಕೃತಿಕ ನಗರಿ ಧಾರವಾಡದಲ್ಲಿ ನವ ಕರ್ನಾಟಕ ಪ್ರಕಾಶನದ ಪುಸ್ತಕ ಮಳಿಗೆಯ ಶುಭಾರಂಭ ಹಾಗೂ ಐದು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮವು ದಿನಾಂಕ 13-04-2024ರಂದು ಬೆಳಗ್ಗೆ 10-00 ಗಂಟೆಗೆ ಧಾರವಾಡ ಮಹಾನಗರ ಪಾಲಿಕೆಯ ಬಳಿ, ಎಲ್.ಇ.ಎ. ಕ್ಯಾಂಪಸ್ ಲಿಂಗಾಯತ ಟೌನ್ ಹಾಲ್ ಇಲ್ಲಿ ನಡೆಯಲಿರುವುದು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಪ್ರೊ. ಮಾಲತಿ ಪಟ್ಟಣಶೆಟ್ಟಿ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಬೆಂಗಳೂರಿನ ಜನಪರ ಚಿಂತಕರು ಮತ್ತು ಶಿಕ್ಷಣ ತಜ್ಞರಾದ ಡಾ. ಜಿ. ರಾಮಕೃಷ್ಣ ಇವರು ಮಳಿಗೆಯ ಉದ್ಘಾಟನೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ‘ಉಪನಿಷತ್ತುಗಳು’, ಅಂಬೇಡ್ಕರ್ ಮತ್ತು ಮಾರ್ಕ್ಸ್’, ಸಾವಿತ್ರಿಬಾಯಿ’, ‘ಲೀಲಾವತೀ ಮತ್ತು ಇತರ ವಿಜ್ಞಾನ ನಾಟಕಗಳು’ ಮತ್ತು ‘ಭೂಮಿಕಾ’ ಎಂಬ ಕೃತಿಗಳನ್ನು ಸಾಂಸ್ಕೃತಿಕ ಚಿಂತಕರಾದ ಶ್ರೀ ರಂಜಾನ್ ದರ್ಗಾ ಮತ್ತು ಧಾರವಾಡದ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ನಿರ್ದೇಶಕರಾದ ಡಾ. ಎಂ. ಚಂದ್ರ ಪೂಜಾರಿ ಇವರುಗಳು ಲೋಕಾರ್ಪಣೆಗೊಳಿಸಲಿರುವರು.

Read More

ಮಂಗಳೂರು : ಕಲ್ಲಚ್ಚು ಪ್ರಕಾಶನದ 99 ಮತ್ತು 100ನೇ ಕೃತಿ ಆಗಿ ಮಹೇಶ ಆರ್. ನಾಯಕ್ ಅವರ ‘ಕೂದಲಿಗೆ ಡೈ ಮಾಡುವಾಗ’ ಕವನ ಸಂಕಲನ ಹಾಗೂ ‘ರಾವಣ ವೀಣೆ’ ಕಥಾಸಂಕಲನದ ಲೋಕಾರ್ಪಣೆ ಸಮಾರಂಭವು ದಿನಾಂಕ 09-04-2024ರ ಮಂಗಳವಾರದಂದು ಮಂಗಳೂರಿನ ಹೊಟೇಲ್ ವುಡ್ ಲ್ಯಾಂಡ್ಸ್ ನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ವಿಜಯ ಕರ್ನಾಟಕ ಪತ್ರಿಕೆಯ ವಿಶ್ರಾಂತ ಸ್ಥಾನಿಯ ಸಂಪಾದಕ ಯು. ಕೆ. ಕುಮಾರನಾಥ್ “ಪ್ರಸ್ತುತ ದಿನಗಳಲ್ಲಿ ನಾನ ರೂಪಗಳಲ್ಲಿ ಚಂಚಲವಾಗಿರುವ ಸಮಾಜದಲ್ಲಿ ಜನರ ಮಾನಸಿಕ ದೃಢತೆ ಹೆಚ್ಚಿಸುವಲ್ಲಿ ಮಾಧ್ಯಮ ಕ್ಷೇತ್ರ ಸಕಾರಾತ್ಮಕ ಸ್ಪಂದನೆ ನೀಡಿ ಅಂತಹ ಕಾರ್ಯಕ್ರಮಗಳಿಗೆ ಉತ್ತೇಜನ ನೀಡುವ ಅಗತ್ಯ ಇದೆ ಹಾಗೂ ಪತ್ರಿಕೆಗಳು ಸಾಹಿತ್ಯ ಸಂಬಂಧಿ ಬರಹಗಳಿಗೆ ಮತ್ತಷ್ಟು ಪ್ರಾಮುಖ್ಯತೆ ಕೊಡುವ ಅಗತ್ಯವಿದೆ.” ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕವಯಿತ್ರಿಯರಾದ ಅಕ್ಷಯ ಆರ್. ಶೆಟ್ಟಿ ಮತ್ತು ಅಕ್ಷತ ರಾಜ್ ಪೆರ್ಲ ಕೃತಿ ಪರಿಚಯ ನೀಡಿದರು. ಮುಖ್ಯ ಅತಿಥಿಗಳಾಗಿ ಕೊಡಿಯಾಲ್ ಬೈಲ್ ಪ್ರೆಸ್ ಇದರ ಮುಖ್ಯಸ್ಥರಾದ ವಂದನೀಯ ವಿನ್ಸೆಂಟ್ ಸಲ್ಡಾನ್ಹಾ,…

Read More

ಸುರತ್ಕಲ್ : ಪ್ರೊ. ಪಿ.ಕೆ. ಮೊಯಿಲಿಯವರ 94ರ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಪ್ರೊ. ಪಿ.ಕೆ. ಮೊಯಿಲಿ ಅಭಿನಂದನಾ ಸಮಿತಿ ಸುರತ್ಕಲ್, ಗೋವಿಂದದಾಸ ಕಾಲೇಜಿನ ಡಾ. ಸೀ. ಹೊಸಬೆಟ್ಟು ಅಧ್ಯಯನ ಕೇಂದ್ರ ಮತ್ತು ಮಾನವಿಕ ಸಂಘಗಳ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭ ಮತ್ತು ‘ಗುರುಭ್ಯೋ ನಮಃ’ ಅಭಿನಂದನಾ ಕೃತಿ ಬಿಡುಗಡೆ ಸಮಾರಂಭವು ಗೋವಿಂದದಾಸ ಕಾಲೇಜಿನ ಸಭಾಭವನದಲ್ಲಿ ದಿನಾಂಕ 06-04-2024ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಸಮ್ಮಾನ ಸ್ವೀಕರಿಸಿದ ಹಿರಿಯ ಶಿಕ್ಷಣ ತಜ್ಞ ಗೋವಿಂದ ದಾಸ ಕಾಲೇಜಿನ ನಿವೃತ್ತ ಪ್ರಾಂಶುಪಾಲ, ಪತ್ರಕರ್ತ ಪ್ರೊ. ಪಿ.ಕೆ. ಮೊಯಿಲಿ ಮಾತನಾಡಿ “ಬದುಕಿನಲ್ಲಿ ಉನ್ನತ ಗುರಿಯಿದ್ದಾಗ ಎದುರಾಗುವ ಸವಾಲುಗಳನ್ನು ಅವಕಾಶಗಳನ್ನಾಗಿ ಮಾರ್ಪಡಿಸಿ ಯಶಸ್ಸು ಗಳಿಸಲು ಸಾಧ್ಯವಿದೆ. ಆತ್ಮವಿಶ್ವಾಸದಿಂದ ಗುರುಗಳು ಮತ್ತು ವಿದ್ಯಾರ್ಥಿಗಳ ಅಪಾರ ಪ್ರೀತಿ ವಿಶ್ವಾಸಗಳಿಂದ ಬದುಕಿನಲ್ಲಿ ಕಾರ್ಯ ಪ್ರವೃತ್ತನಾಗಿ ಸಂತೃಪ್ತಿಯ ಜೀವನ ಕಂಡಿದ್ದೇನೆ. ಗುರು ಹಿರಿಯರ ಸತತ ಮಾರ್ಗದರ್ಶನದಿಂದ ಪ್ರೌಢಾ ಶಾಲಾ ಶಿಕ್ಷಕ ಹಂತದಿಂದ ಕಾಲೇಜು ಪ್ರಾಂಶುಪಾಲ ಹುದ್ದೆಯ ತನಕ ಕರ್ತವ್ಯ ನಿರ್ವಹಿಸಲು ಸಾಧ್ಯವಾಗಿದೆ. ವಿದ್ಯಾರ್ಥಿಗಳೇ ಗುರುಗಳ ನಿಜವಾದ ಸಂಪತ್ತಾಗಿದ್ದು…

Read More