Subscribe to Updates
Get the latest creative news from FooBar about art, design and business.
Author: roovari
13 ಏಪ್ರಿಲ್ 2023, ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಪ್ರಖ್ಯಾತ ಪ್ರಸಾದ್ ಆರ್ಟ್ ಗ್ಯಾಲರಿಯ ಪ್ರಸಾದ್ ಚಿತ್ರಕಲಾ ಶಾಲೆ, ಬಲ್ಲಾಳ್ ಭಾಗ್, ಎಂ.ಜಿ.ರೋಡ್. ಇದರ ನಿರ್ದೇಶಕರಾದಂತಹ ಶ್ರೀಯುತ ಕೋಟಿ ಪ್ರಸಾದ್ ಆಳ್ವ ಅವರು ಸುಮಾರು 30 ವರ್ಷಗಳ ಕಾಲ ಖಾಸಗಿಯಾಗಿ ತಮ್ಮ ಸ್ವಂತ ಹಣದಲ್ಲಿ ನಡೆಸಿಕೊಂಡು ಬರುತ್ತಿದ್ದಾರೆ. ಯಾವುದೇ ರೀತಿಯ ಸರ್ಕಾರದ ಅನುದಾನವಾಗಲಿ ಇರುವುದಿಲ್ಲ. ಕೇವಲ ಕಲೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಆಧಾರಿತವಾಗಿ ಚಿತ್ರಕಲೆಯ ವಿಷಯವನ್ನು ಒಳಗೊಂಡಿರುವಂತೆ ಪ್ರತಿ ವರ್ಷವೂ ವಾರ್ಷಿಕ ಶಿಬಿರಗಳು ಶಾಲೆಯ ಆವರಣದಲ್ಲಿ ನಡೆಯುತ್ತಿರುತ್ತದೆ. 2023 ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಪರಿಸರದ ಮುಕ್ತ ವಾತಾವರಣದಲ್ಲಿ ಮಕ್ಕಳ ಮಾನಸಿಕ, ಬೌದ್ಧಿಕ, ಕ್ರಿಯಾತ್ಮಕ ಚಟುವಟಿಕೆಗಳ ಬೆಳವಣಿಗೆಗೆ ಪೂರಕವಾಗಿ ಬೇಸಿಕ್, ಪೇಪರ್ ಕ್ರಾಫ್ಟ್, ಕ್ಲೇ ಮಾಡ್ಲಿಂಗ್, ಜಲವರ್ಣ ಚಿತ್ರಕಲೆ, ಕೊಲಾಜ್, ಗ್ಲಾಸ್ ಪೇಂಟಿಂಗ್, ವಸ್ತು ಚಿತ್ರಣ, ಪ್ರಕೃತಿ ಹಾಗೂ ಆರ್ಟ್ ವರ್ಲಿ, ಮಡಿಕೆಗೆ ಬಣ್ಣ ಬಳಿಯುವುದು ಮತ್ತು ಅನ್ವಯಿಕ ಕಲೆಯ ದೃಶ್ಯ ಮಾಧ್ಯಮದ ಕುರಿತು ಜಿಲ್ಲೆಯ ನುರಿತ ಕಲಾವಿದರುಗಳಿಂದ ಶಿಕ್ಷಕರುಗಳಿಂದ…
13 ಎಪ್ರಿಲ್ 2023, ಚಾಮರಾಜಪೇಟೆ: ಬೆಂಗಳೂರಿನ ಪ್ರತಿಷ್ಠಿತ ಭರತನಾಟ್ಯ ಸಂಸ್ಥೆಗಳಾದ ಪಾರ್ವತಿ ನೃತ್ಯವಿಹಂಗಮ(ರಿ), ಇದರ ನೃತ್ಯ ನಿರ್ದೇಶಕರಾದ ಗುರು ನಿರ್ಮಲ ಜಗದೀಶ್ ಹಾಗೂ ನೃತ್ಯಕುಟೀರ (ರಿ) ನೃತ್ಯ ಸಂಸ್ಥೆಯ ನಿರ್ದೇಶಕರಾದ ಗುರು ದೀಪ ಭಟ್ ಇವರುಗಳು ಜಂಟಿಯಾಗಿ ಇದೇ ತಿಂಗಳ 15 ಮತ್ತು 16 ರಂದು ಎರಡು ದಿನಗಳ ಕಾಲ, ನೃತ್ಯ ಕಲಾವಿದ ವಿದ್ವಾನ್ ಮಂಜುನಾಥ್ ಎನ್ ಪುತ್ತೂರು ಇವರ ‘Fun with Tala’ ತಾಳ ಕಾರ್ಯಗಾರವನ್ನು ತಮ್ಮ ಸಂಸ್ಥೆಯ ಜೂನಿಯರ್ ಹಾಗೂ ಸೀನಿಯರ್ ವಿದ್ಯಾರ್ಥಿಗಳಿಗಾಗಿ ನೃತ್ಯ ಕುಠೀರ, ಚಾಮರಾಜಪೇಟೆಯಲ್ಲಿ ಹಮ್ಮಿಕೊಂಡಿರುತ್ತಾರೆ. ಮಂಜುನಾಥ್ ಅವರು ಜೂನಿಯರ್ ಹಾಗೂ ಸೀನಿಯರ್ ವಿಭಾಗದ ಮಕ್ಕಳಿಗಾಗಿಯೇ ಸಿದ್ದಪಡಿಸಿದ ತಾಳದ ವಿಚಾರಗಳಿರುವ ಕಾರ್ಯಗಾರ ಇದಾಗಿದೆ. ವಿದ್ವಾನ್ ಮಂಜುನಾಥ್ ಎನ್ ಪುತ್ತೂರು
13 ಏಪ್ರಿಲ್ 2023, ಮಂಗಳೂರು: ಕುದ್ಮುಲ್ ರಂಗರಾವ್ ಪುರಭವನದಲ್ಲಿ ಸನಾತನ ನಾಟ್ಯಾಲಯದ 40ನೇ ವರ್ಷಾಚರಣೆಯ ಅಂಗವಾಗಿ ದಿನಾಂಕ 09-04-2023 ಭಾನುವಾರದಂದು ನಡೆದ ಕಾರ್ಯಕ್ರಮವನ್ನು ಸನಾತನ ನಾಟ್ಯಾಲಯದ ನಿರ್ದೇಶಕರಾದ ಶ್ರೀ ಚಂದ್ರಶೇಖರ್ ಶೆಟ್ಟಿ, ನೃತ್ಯ ಗುರುಗಳಾದ ಕರ್ನಾಟಕ ಕಲಾಶ್ರೀ ವಿದುಷಿ ಶಾರದಾಮಣಿ ಶೇಖರ್, ಸಂಸ್ಕಾರ ಭಾರತಿಯ ಪ್ರಾಂತ ಕಾರ್ಯದರ್ಶಿಗಳಾದ ನಾಗರಾಜ್ ಶೆಟ್ಟಿ ಮತ್ತು ಶ್ರೀದೇವಿ ಭಜನಾ ಮಂದಿರದ ಸಂತೋಷ್ ಶೆಟ್ಟಿ ಎಲ್ಲರೂ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಸಾಂಕೇತಿಕ ಚಾಲನೆ ನೀಡಿದರು. ಆ ಕೂಡಲೇ ಮೂಡುಶೆಡ್ಡೆಯ ಶ್ರೀದೇವಿ ಭಜನಾಮಂದಿರದ ಸದಸ್ಯರಿಂದ ಭಕ್ತಿ ಭಾವವನ್ನು ಜಾಗೃತಗೊಳಿಸುವ ಕುಣಿತ ಭಜನೆಯು ನೆರವೇರಿತು. ಬಾಲ ವಾಗ್ಮಿ , ಬೆಂಗಳೂರಿನ ಹಾರಿಕಾ ಮಂಜುನಾಥ್ ರವರು ‘ರಾಷ್ಟ್ರಧರ್ಮ ಜಾಗೃತಿ ಸಂದೇಶ’ದ ಬಗ್ಗೆ ಮಾತನಾಡುತ್ತಾ “ಭಾರತವು ವಿಶ್ವಗುರುವಾಗಬೇಕು ಎಂಬುದು ಎಲ್ಲರ ಕನಸು ನಿಜ, ಆದರೆ ತಾಯಿ ಭಾರತಿಯು ಇಡೀ ವಿಶ್ವದ ತಾಯಿಯಾಗಬೇಕು. ಆ ನಿಟ್ಟಿನಲ್ಲಿ ಪ್ರತಿಯೊಬ್ಬ ಭಾರತೀಯ ಪ್ರಜೆಯೂ ತಮ್ಮ ಶ್ರೀಮಂತ ಪರಂಪರೆಯನ್ನು ಅರಿತುಕೊಂಡು ಆತ್ಮವಿಶ್ವಾಸದಿಂದ ಜೀವನ ನಡೆಸಬೇಕು. ಸ್ವಾಮಿ ವಿವೇಕಾನಂದರಂತಹ ಜಿಜ್ಞಾಸುಗಳು…
13 ಏಪ್ರಿಲ್ 2023, ಧಾರವಾಡ: ಧಾರವಾಡ ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆಯು ರಾಘವೇಂದ್ರ ಪಾಟೀಲ – 72 ಮತ್ತು ‘ರಾಘವೇಂದ್ರ ಪಾಟೀಲ ಕಥಾ ಪ್ರಶಸ್ತಿ -2022’ ಪ್ರದಾನ ಸಮಾರಂಭವು ಭಾನುವಾರ ದಿನಾಂಕ 16 ಏಪ್ರಿಲ್ 2023ರಂದು ಧಾರವಾಡದ ಸಂಸ್ಕೃತಿ ಸಮುಚ್ಚಯ ಕಟ್ಟಡ, ರಂಗಾಯಣದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಾರವಾಢದ ಪ್ರಸಿದ್ಧ ಕಾದಂಬರಿಕಾರರಾದ ಪ್ರೊ. ಮಲ್ಲಿಕಾರ್ಜುನ ಹಿರೇಮಠ ವಹಿಸಲಿದ್ದಾರೆ. ಅಂದು ಪೂರ್ವಾಹ್ನ ಗಂಟೆ 10.15ಕ್ಕೆ ಮೊದಲ ಘಟ್ಟದಲ್ಲಿ ಅಭಿನಂದನಾ ಕಾರ್ಯಕ್ರಮ ನಡೆಯಲಿದ್ದು, ಬೆಂಗಳೂರಿನ ಖ್ಯಾತ ಕವಿಗಳಾದ ಡಾ. ಎಚ್. ಎಸ್. ವೆಂಕಟೇಶಮೂರ್ತಿಯವರು ಅಭಿನಂದನಾ ನುಡಿಗಳನ್ನಾಡಲಿದ್ದಾರೆ. ಪಾಟೀಲರ ‘ತೇರು’ ಕಾದಂಬರಿ ರಚನೆಯಾಗಿ ಇಪ್ಪತ್ತು ವರ್ಷಗಳು ಸಂದಿದ್ದು, ಆ ಕೃತಿಯ ಬಗ್ಗೆ ಎಂ.ಆರ್. ದತ್ತಾತ್ರಿ, ಮತ್ತು ಇಪ್ಪತ್ತೈದು ವರ್ಷಗಳ ಹಿಂದೆ ರಚನೆಯಾದ ‘ಮಾಯಿಯ ಮುಖಗಳು’ ಎಂಬ ಕಥಾ ಸಂಕಲನದ ಬಗ್ಗೆ ಧಾರವಾಡದ ಪ್ರಸಿದ್ಧ ಕನ್ನಡ ಕವಿಗಳಾದ ಆನಂದ ಝುಂಜರವಾಡ ಮಾತನಾಡುತ್ತಾರೆ. ಪಾಟೀಲರ ಶಿಷ್ಯರೂ, ಪ್ರಸಿದ್ಧ ಉದ್ಯಮಿಗಳೂ ಆದ ಡಾ.ಪ್ರಭಾಕರ ಬಿ.ಸಿ. ಇವರು ‘ನನ್ನ ಮೇಷ್ಟ್ರು ಆರ್.ಬಿ.ಪಿ.’…
13 ಏಪ್ರಿಲ್ 2023, ಮಂಗಳೂರು: ಅಮೃತೇಶ್ವರ ನಾಟ್ಯಾಲಯ ವಾಮಂಜೂರು ಇದರ ದಶಮಾನೋತ್ಸವ ಕಾರ್ಯಕ್ರಮವು ಏಪ್ರಿಲ್ 10ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಿತು. ವಿದ್ವಾನ್ ಪಿ. ಕಮಲಾಕ್ಷ ಆಚಾರ್ ಕಾರ್ಯಕ್ರಮವನ್ನು ಉದ್ಘಾಟಿಸಿ “ಈ ಸಂಸ್ಥೆ ಇನ್ನೂ ಎತ್ತರಕ್ಕೆ ಬೆಳೆಯುತ್ತದೆ. ‘ಶಕ್ತಿ ಪೀಠ’ ನೃತ್ಯ ರೂಪಕ ನಿಜವಾಗಿಯೂ ಶಿವಶಕ್ತಿಯೇ ವೇದಿಕೆಯಲ್ಲಿ ನೆಲೆಸಿದಂತೆ ಭಾಸವಾಗುತ್ತಿತ್ತು.” ಎಂದು ಅಭಿಮಾನದ ಮಾತುಗಳನ್ನಾಡಿದರು. ಕುಡುಪು ಶ್ರೀ ಕೃಷ್ಣರಾಜ ತಂತ್ರಿಯವರು “ಸಂಸ್ಥೆಯು ಏಳಿಗೆಯನ್ನು ಕಾಣಲಿ” ಎಂದು ಶುಭ ಆಶೀರ್ವಚನ ನೀಡಿದರು. ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಶ್ರೀ ದುರ್ಗಾ ಕನ್ ಸ್ಟ್ರಕ್ಷನ್ ನ ಮಾಲಕರಾದ ಶ್ರೀ ಸತೀಶ್ ಶೆಟ್ಟಿಯವರು “ಅಮೃತೇಶ್ವರ ನಾಟ್ಯಾಲಯ ಬೆಳೆದು ಬಂದ ರೀತಿ, ನೃತ್ಯ ಗುರುಗಳ ಶ್ರಮ ಹಾಗೂ ವಿದ್ಯಾರ್ಥಿಗಳ ಶ್ರದ್ಧೆ ಮತ್ತು ಭಕ್ತಿಯನ್ನು ನಾಟ್ಯಾಲಯದ ನಿರ್ದೇಶಕಿ ಮಾಡುವ ಕೆಲಸದಲ್ಲಿ ಕಾಣಬಹುದು” ಎಂದು ಕಾರ್ಯಕ್ರಮವನ್ನು ಪ್ರಶಂಶಿಸಿ, ‘ಶಕ್ತಿ ಪೀಠ’ ನೃತ್ಯ ರೂಪಕವನ್ನು ಶ್ಲಾಘಿಸಿದರು. ಗುರುಗಳಾದ ಶಾರದಾಮಣಿ ಶೇಖರ್ ಅವರು ನೃತ್ಯ ರೂಪಕವನ್ನು ನಿರ್ದೇಶಿಸಲು ಸಂಸ್ಥೆಯ ಗುರುಗಳಾದ ಚಿತ್ರಾಕ್ಷಿ ಅಜಿತ್ ಕುಮಾರ್…
13 ಏಪ್ರಿಲ್ 2023, ಮಂಗಳೂರು: ಮಂಗಳೂರಿನ ಉರ್ವಸ್ಟೋರಿನ ಕರಾವಳಿ ಲೇಖಕಿಯರ-ವಾಚಕಿಯರ ಸಂಘ (ರಿ.) ಮತ್ತು ತುಳು ಧರ್ಮ ಸಂಶೋಧನಾ ಕೇಂದ್ರ ಪೇರೂರು ಇದರ ಸಹಯೋಗದಲ್ಲಿ ದಿನಾಂಕ 11-04-2023 ಮಂಗಳವಾರ ಸಾಹಿತ್ಯ ಸದನದಲ್ಲಿ ಪೇರೂರು ರುಕ್ಕು ಪೂಜಾರ್ದಿ, ಬಾಗಿ ಪೂಜಾರ್ದಿ, ಲೆಚ್ಚು ಪೂಜಾರ್ದಿ ನೆನಪಿನ “ಬರವುದಪ್ಪೆ ಸಾವಿತ್ರಿ ಬಾಯಿ ಫುಲೆ ಪ್ರಶಸ್ತಿ” ಪ್ರದಾನ ಸಮಾರಂಭ ನಡೆಯಿತು. ಕಾಲವು ಅಳಿಸಲಾಗದ ಹೆಸರು ಶಕ್ತಿಯುತ ಬಂಡಾಯ ಶಿಕ್ಷಕಿ ಸಾವಿತ್ರಿ ಬಾಯಿ ಫುಲೆ ಅವರದು. ಏಪ್ರಿಲ್ 11 ಜ್ಯೋತಿಬಾ ಫುಲೆ ಅವರ ಜನ್ಮ ದಿನ. ಭಾರತದಲ್ಲಿ ನೆಲದ ಮಕ್ಕಳ ಬದುಕಿಗೆ ಮೊದಲು ದನಿ ನೀಡಿದ ಹೆಸರುಗಳು ಇವು ಎಂದು ಅಧ್ಯಕ್ಷತೆ ವಹಿಸಿದ್ದ ಕಲೇವಾಸಂ ಅಧ್ಯಕ್ಷೆ ಡಾ. ಜ್ಯೋತಿ ಚೇಳ್ಯಾರು ಹೇಳಿದರು. ಸಿಸ್ಟರ್ ಫ್ಲೋರಾ ಲೂವಿಸ್ ಮತ್ತು ಶ್ರೀಮತಿ ಸೌಭಾಗ್ಯ ಎನ್. ಅವರಿಗೆ ಸೇರಿದ ಸಭೆಯಲ್ಲಿ ‘ಸಾವಿತ್ರಿ ಬಾಯಿ ಫುಲೆ ಪ್ರಶಸ್ತಿ’ ಪ್ರದಾನ ಮಾಡಿ ಗೌರವಿಸಲಾಯಿತು ಸಭೆಯಲ್ಲಿ ಸೇರಿದ ಸಾಹಿತ್ಯಾಸಕ್ತರು ಇದಕ್ಕೆ ಸಾಕ್ಷಿಯಾದರು. ಇದೇ ಸಂದರ್ಭದಲ್ಲಿ ಶ್ರೀಮತಿ ಬಿ.ಎಂ. ರೋಹಿಣಿ…
13 ಏಪ್ರಿಲ್ 2023, ಮಂಗಳೂರು: ಕರಾವಳಿ ಚಿತ್ರಕಲಾ ಚಾವಡಿ (ರಿ.) ಮಂಗಳೂರು ಆಯೋಜಿಸುವ ‘ವಿಶ್ವ ಕಲಾ ದಿನ’ ಇದರ ಅಂಗವಾಗಿ ಕಲಾವಿದರಿಂದ ಆಶು ಚಿತ್ರಕಲಾ ರಚನಾ ಶಿಬಿರವು ಮಂಗಳೂರಿನ ಸುಲ್ತಾನ್ ಬತ್ತೇರಿ ರಸ್ತೆ, ಬೊಕ್ಕಪಟ್ನದ ಅಯ್ಯಪ್ಪ ದೇವಾಲಯದ ಬಳಿ, ದಿನಾಂಕ 15 ಎಪ್ರಿಲ್ 2023ರ ಶನಿವಾರದಂದು ಬೆಳಿಗ್ಗೆ ಗಂಟೆ 8.30ರಿಂದ – ಸಂಜೆ 4.00ರವರೆಗೆ ನಡೆಯಲಿದೆ. ಈ ಕಾರ್ಯಕ್ರಮವನ್ನು ಮಂಗಳೂರು ವಿಶ್ವವಿದ್ಯಾನಿಲಯ ಮಂಗಳ ಗಂಗೋತ್ರಿ ಪ್ರಾಧ್ಯಾಪಕರು ಹಾಗೂ ನಿಕಟಪೂರ್ವ ಪರೀಕ್ಷಾಂಗ ಕುಲಸಚಿವರಾದ ಡಾ. ಪಿ.ಎಲ್. ಧರ್ಮ ಉದ್ಘಾಟಿಸಲಿದ್ದು, ಶ್ರೀ ದಿವಾಕರ ಕದ್ರಿ, ಮಾಜಿ ಮೇಯರ್, ಜನರಲ್ ಮ್ಯಾನೇಜರ್ ಕಾರ್ಡೋಲೈಟ್ ಸ್ಪೆಷಾಲಿಟಿ ಕೆಮಿಕಲ್ ಇಂಡಿಯ ಎಲ್.ಎಲ್ ಪಿ, ಮಂಗಳೂರು ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಹಿರಿಯ ಕಲಾವಿದರಾದ ಗಣೇಶ್ ಸೋಮಯಾಜಿಯವರು ಜಲವರ್ಣ ಪ್ರಾತ್ಯಕ್ಷಿಕೆ ನೀಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಮನೋರಂಜನಿ ಉಪಾಧ್ಯ, ಜಾನ್ ಚಂದ್ರನ್, ಈರಣ್ಣ ತಿಪ್ಪಣ್ಣನವರ್, ಜಯಶ್ರೀ ಶರ್ಮ, ಡಾ. ಜಯಪ್ರಕಾಶ್, ಅರುಣ್ ಕಾರಂತ್, ನವೀನ್ ಬಂಗೇರ, ಡಾ. ಸಂಜೋತ ಧರ್ಮ,…
12 ಏಪ್ರಿಲ್ 2023, ಉಡುಪಿ: ಭಾವನಾ ಫೌಂಡೇಶನ್ ಹಾವಂಜೆ ಮತ್ತು ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಸಂಯೋಜಿಸುವ ‘ಬಾಲ ಲೀಲ -2023’ ಚಿನ್ನರ ಬೇಸಿಗೆ ಶಿಬಿರವು ದಿನಾಂಕ ಏಪ್ರಿಲ್ 20ರಿಂದ 23ರ ತನಕ ಹಾವಂಜೆ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯಲ್ಲಿ ನಡೆಯಲಿದೆ. 2014ರಿಂದ ತೊಡಗಿ ಆಯೋಜಿಸುತ್ತಿರುವ ಈ ಬೇಸಿಗೆ ಶಿಬಿರದಲ್ಲಿ ಎಂಟನೇ ಆವೃತ್ತಿ ಇದಾಗಿದ್ದು, ಗ್ರಾಮೀಣ ಭಾಗದಲ್ಲಿ ಮಕ್ಕಳಿಗಾಗಿ ಕರಕುಶಲ ಕಲೆ, ವಿವಿಧ ರೀತಿಯ ಆಟೋಟಗಳು, ಚಿತ್ರಕಲೆ, ಸಂಗೀತ, ಭಾರತೀಯ ವಿವಿಧ ಕಲಾ ಪ್ರಕಾರಗಳು, ಪಕ್ಷಿ ವೀಕ್ಷಣೆ, ಮಕ್ಕಳ ಸಿನಿಮಾ, ಕಸದಿಂದ ರಸ, ಸರಿಸೃಪಗಳ ಪರಿಚಯ ಮುಂತಾಗಿ ಹಲವಾರು ಸೃಜನಾತ್ಮಕ ವಿಷಯಗಳ ಕಲಿಕೆಯನ್ನು ಈ ಶಿಬಿರವು ಒಳಗೊಂಡಿರುತ್ತದೆ. ಬೇಸಿಗೆಯ ರಜೆಯನ್ನು ಸಜೆಯಾಗಿಸುವುದನ್ನು ತಪ್ಪಿಸುವುದಕ್ಕಾಗಿ ಈ ಶಿಬಿರದ ಆಯೋಜನೆ ನಡೆಸಲಾಗುತ್ತಿದ್ದು, ಗ್ರಾಮೀಣ ಶಾಂತಪರಿಸರದಲ್ಲಿ ಬೆಳಗ್ಗೆ 9:00ರಿಂದ ಸಂಜೆ 5:00 ತನಕ ಮಕ್ಕಳ ಬೌದ್ಧಿಕ ವಿಕಸನಕ್ಕಾಗಿ ಬಹಳಷ್ಟು ಸೃಜನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಸಲದ ಶಿಬಿರದಲ್ಲಿ ಪ್ರಮುಖ ಆಕರ್ಷಣೆಯಾಗಿ ಬಿಹಾರದ ಮಧುಬನಿ ಕಲೆ, ಗೋದನ ಮತ್ತು…
12 ಏಪ್ರಿಲ್ 2023, ಮೂಡುಬಿದಿರೆ: ಅಖಿಲ ಭಾರತ ತುಳು ಒಕ್ಕೂಟ ಮತ್ತು ತುಳುಕೂಟ ಬೆದ್ರ ಸಹಯೋಗದಲ್ಲಿ ಮೂಡುಬಿದಿರೆ ಸೌಟ್ಸ್ ಮತ್ತು ಗೈಡ್ಸ್ ಕನ್ನಡ ಭವನದಲ್ಲಿ ದಿನಾಂಕ 08-04-2023 ಶನಿವಾರದಂದು ನಡೆದ ‘ತುಳು ಮಹಾಕೂಟ-2023’ವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಇವರು ಉದ್ಘಾಟಿಸಿ ”ಎಲ್ಲ ಜಾತಿ, ಮತ, ಧರ್ಮದವರು ತುಳು ಭಾಷೆಯನ್ನು ಮಾತನಾಡುತ್ತಿದ್ದಾರೆ. ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ತುಳು ಭಾಷೆಯ ಬೆಳವಣಿಗೆಗೆ ತನ್ನದೇ ಆದ ಕೊಡುಗೆ ನೀಡುತ್ತಿದ್ದಾರೆ. ಹೀಗಾಗಿ ತುಳು ಭಾಷೆ ರಾಜ್ಯದಲ್ಲಿ ಎರಡನೇ ಅಧಿಕೃತ ಭಾಷೆಯಾಗಬೇಕು. ಈ ಕುರಿತು ಯಾವುದೇ ಸರಕಾರ ಬಂದರೂ ಇದಕ್ಕೆ ಆದ್ಯತೆ ನೀಡಬೇಕು. ತುಳುವರು ಹಕ್ಕೊತ್ತಾಯ ಮಾಡಬೇಕು. ಯಾವುದೇ ಭಾಷೆಗೆ ತುಳುವರ ವಿರೋಧವಿಲ್ಲ, ಆದರೆ ತುಳು ಭಾಷೆಗೆ ಮಾನ್ಯತೆ ನೀಡಬೇಕು” ಎಂದು ಹೇಳಿದರು. ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಎ.ಸಿ. ಭಂಡಾರಿ ಪ್ರಾಸ್ತಾವಿಕ ಮಾತುಗಳನ್ನಾಡಿ “ಇಂದು ಕೇವಲ 36ರಷ್ಟಿರುವ ತುಳು ಕೂಟಗಳ ಸಂಖ್ಯೆ ನೂರಕ್ಕೆ ಏರ ಬೇಕಾಗಿದೆ, ಆಗ ತುಳುವಿಗೆ ಅಧಿಕೃತ…
12 ಏಪ್ರಿಲ್ 2023, ಕಿನ್ನಿಗೋಳಿ: ಕನ್ನಡ ಸಾಹಿತ್ಯ ಪರಿಷತ್ ಮೂಲ್ಕಿ ಘಟಕ ದಿನಾಂಕ 09-04-2023 ಭಾನುವಾರದಂದು ಏಳಿಂಜೆಯ ಶಾಂಭವಿ ನದಿ ತೀರದಲ್ಲಿ ನವಚೇತನ ಯುವಕ ಮಂಡಲ ಮತ್ತು ಏಳಿಂಜೆ ಶ್ರೀದೇವಿ ಮಹಿಳಾ ಮಂಡಲ ಸಹಯೋಗದಲ್ಲಿ ಆಯೋಜಿಸಿದ ‘ಕವಿ ಚೊಕ್ಕಾಡಿ ಜೊತೆಗಿನ ಮಾತುಕತೆ ಕಾರ್ಯಕ್ರಮ”ದಲ್ಲಿ ಚೊಕ್ಕಾಡಿಯವರು ಕಾವ್ಯಗಳ ಬಗ್ಗೆ ಮತ್ತು ತನ್ನ ಕಾವ್ಯಾನುಭವಗಳ ಬಗ್ಗೆ ಹೇಳಿಕೊಂಡರು. ನಮ್ಮ ಕವನಗಳ ಬಗ್ಗೆ ಮಮತೆ ಇರಬಾರದು. ಕವಿತೆ ಬರೆದಾದ ಮೇಲೆ ನಮ್ಮದ್ದಲ್ಲ. ಮುನಿಸು ತರವೆ ಹಾಡು ಪ್ರೇಮ ಗೀತೆ ಅಲ್ಲ. ದಾಂಪತ್ಯ ಗೀತೆ, ಅದನ್ನು ಯಾರ ಕುರಿತಾಗಿಯೂ ಬರೆದದ್ದಲ್ಲ. ಹೆಂಡತಿಯ ಕುರಿತಾಗಿಯೂ ಅಲ್ಲ. ಆ ಹಾಡಿಗೆ ಹಕ್ಕು ಕಾಯ್ದಿಟ್ಟುಕೊಂಡಿದ್ದರೆ ಒಮ್ಮೆ ಹಾಡಿದರೆ ಒಂದು ರೂಪಾಯಿ ಎಂದು ಲೆಕ್ಕ ಹಾಕಿದರೂ ಒಂದು ಕೋಟಿ ರೂ. ಬರುತ್ತಿತ್ತೇನೋ. ಒಬ್ಬಾಕೆ ಅನಾರೋಗ್ಯದಿಂದ ಹಾಸಿಗೆಯಲ್ಲಿ ಮಲಗಿಯೇ ಇರುತ್ತಿದ್ದರು. ಅವರಿಗೆ ಮುನಿಸು ತರವೆ ಹಾಡನ್ನು ಪ್ರತಿದಿನ ಕೇಳುವ ಆಸೆ. ಕೊನೆಯ ದಿನದವರೆಗೂ ಆ ಹಾಡನ್ನು ಕೇಳುತ್ತ ಕೇಳುತ್ತ ತೀರಿಹೋದರು. ಇಂತಹ ವಿಶಿಷ್ಟ ಅನುಭವಗಳನ್ನು ಈ…